Posts

Showing posts from April, 2025
Image
ಸಮಾಜವಾದಿಯ ನಿಸ್ಪೃಹ ಜೀವಿಗಳ ಕಥನ ‘ಗಾಳಿ ಬೆಳಕಿನ ಪಯಣಿಗರು’ ‘ಗಾಳಿ ಬೆಳಕಿನ ಪಯಣಿಗರು’ ಎಂಬ ಕೃತಿಯು ತನ್ನ ಒಳಿತು ಎಲ್ಲರ ಒಳಿತಿನಲ್ಲಿದೆ ಎಂಬ ಸಮಾಜವಾದಿ ತತ್ವವನ್ನು ಹೃದಯಪೂರ್ವಕವಾಗಿ ಒಪ್ಪಿಕೊಂಡು ತಮ್ಮ ಜೀವನವನ್ನೇ ಅದಕ್ಕಾಗಿ ಮುಡಿಪಿಟ್ಟ ನಿಸ್ಕೃಹ ಜೀವಿಗಳ ಪರಿಚಯದ್ದು. ತೀರ್ಥಹಳ್ಳಿಯ ಜೊತೆಗೆ ರಾಜ್ಯದಲ್ಲಿ ಸಮಾಜವಾದಿಗಳ ದೃಢವಾದ ಹೆಜ್ಜೆಗಳ ಚರಿತ್ರೆಯನ್ನು ಇಲ್ಲಿ ಮೂಡಿಸಿದವರು ಅದೇ ಊರಿನ  ನಿವೃತ್ತ ಪ್ರಾಧ್ಯಾಪಕ ಜೆ. ಕೆ. ರಮೇಶ್. ಪತ್ರಿಕೆಯೊಂದಕ್ಕೆ  ಬರೆದ ಸುಮಾರು ೨೦ ಸಮಾಜವಾದಿಗಳ ಕುರಿತಾದ ಲೇಖನಗಳ ಗುಚ್ಚವಿದು.   ನಾವು ನಿಂತ ನೆಲದ ಇತಿಹಾಸವನ್ನು ತಿಳಿಯುವುದು ಬಹು ಮುಖ್ಯ. ಪ್ರಸ್ತುತ ಸಂದರ್ಭದಲ್ಲಿ ಮತ್ತೆ ಸಮಾಜವಾದದ ಮತ್ತು ಸಮಾಜವಾದಿಗಳನ್ನು ನೆನೆಯುವುದು ಅವಶ್ಯಕವಾಗಿದೆ. ಸಮಾಜವಾದದ ಮೂಲಕ ಕೆಳಸ್ಥರದ ಮತ್ತು ಜನಸಾಮಾನ್ಯರ ಧ್ವನಿಯಾಗಿ ಅವರ ಮೂಲಭೂತ ಹಕ್ಕುಗಳಿಗಾಗಿ ವಿಶ್ವಾಸವಾಗಿ ಹೋರಾಡಿದ ಹೋರಾಟಗಾರರು ನಿಜವಾಗಿಯೂ ಆ ಸಮುದಾಯಕ್ಕೆ ಗಾಳಿ ಬೆಳಕಿನ ಪಯಣಿಗರಾಗಿದ್ದಾರೆ  ಎನ್ನುವುದನ್ನು ಈ ಕೃತಿ ಬಿಂಬಿಸುತ್ತದೆ.  ಕೃತಿಯಲ್ಲಿ ಉನ್ನತ ಮೌಲ್ಯಗಳಿಗಾಗಿ ಹಂಬಲಿಸಿದ ಹಲವಾರು ಆದರ್ಶ ಜೀವಿಗಳನ್ನು ಸೂಕ್ಷ್ಮವಾಗಿ ಪರಿಚಯಿಸಲಾಗಿದೆ. ಇವರೆಲ್ಲ ಶ್ರಮಜೀವಿಗಳು.  ಡೆದ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ  ಮತ್ತು  ಸ್ವಾತಂತ್ರ್ಯ ಚಳವಳಿಯ ನಂತರ ನಡೆದ ಸಾಮಾಜಿಕ ಕ್ರಾಂತಿಯಾದ ಕಾಗೋಡು ಚಳವಳಿಯ...
Image
ಊರಿಗೆ ಬೆಳಕು, ಉಸಿರಾಗುವ ಲಾಂದ್ರ  ನಿಗೂಢ ಕಥೆ ಮತ್ತು ಪ್ರೀತಿ-ಪ್ರೇಮದ ಕಥಾ ವಸ್ತುವುಳ್ಳ ಕಾದಂಬರಿ ಲಾಂದ್ರ.  ಇದರ ಲೇಖಕರು  ಅಪರ್ಣಾ ಲಹರಿ. ಲಾಂದ್ರ ಎಂದರೆ ದೀಪವನ್ನು ಬೆಳಗುವ ಒಂದು ಬಗೆಯ ಸಾಧನ. ಗ್ರ್ರಾಮೀಣ ಭಾಷೆಯಲ್ಲಿ ಇದಕ್ಕೆ ಲಾಟೀನು ಎಂದು ಹೇಳುತ್ತಾರೆ. ಪ್ರಸ್ತುತ ಕಾದಂಬರಿಯಲ್ಲಿ ಲಾಂದ್ರದ ಪಾತ್ರವೇ ಪ್ರಮುಖವಾಗಿದೆ. ಲಾಂದ್ರ  ಇಲ್ಲಿ ಗ್ರಾಮದ ಜನರಿಗೆ ರಕ್ಷಣೆ ಕೊಡುವ ಬೆಳಕಾಗಿದೆ. ಜನರ ಉಸಿರಾಗಿದೆ. ರಾತ್ರಿಯಿಡಿ ಲಾಂದ್ರ ಹಿಡಿದು ಓಡಾಡಿ ನರಭಕ್ಷಕರಿಂದ ಜನರನ್ನು ಕಾಪಾಡುವುದೇ ಈ ಕಾದಂಬರಿಯ ಒಬ್ಬ ನಾಯಕಿಯ ಕೆಲಸವಾಗಿದೆ. ಲಾಂದ್ರಕ್ಕೂ ಈ ನಾಯಕಿಗೂ ಎಡೆಬಿಡದ ನಂಟಿದೆ. ಆದ್ದರಿಂದ ಲಾಂದ್ರ ಹೆಸರು ಕಾದಂಬರಿಗೆ ಸೂಕ್ತವಾದುದು ಎನ್ನುವುದು ಓದಿದ ನಂತರ ನಮ್ಮ ಅರಿವಿಗೆ ಬರುತ್ತದೆ.    ನಿಗೂಢತೆಯನ್ನು ಸಂಶೋಧಿಸುವುದು, ಇದಕ್ಕೆ  ಪಾತ್ರಗಳ ಜೋಡಣೆ, ಭಯಾನಕ ಮತ್ತು ಪ್ರೇಮದ ಎರಡೂ ಕಥೆಗಳನ್ನು ಸಂದರ್ಭಾನುಸಾರ ಹೆಣೆದಿರುವುದು ಕಾದಂಬರಿಕಾರರ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ. ಬೆಟ್ಟದ ಮೇಲಿನ ಅಮಾನುಷ ವ್ಯಕ್ತಿಗಳ ಚಿತ್ರಣ ಓದುವರನ್ನು ಭಯಭೀತಿ ಮತ್ತು ದಿಗ್ಭ್ರಮೆಗೊಳಿಸುತ್ತದೆ. ರಾತ್ರಿಯಿಡಿ ಲಾಂದ್ರ ಹಿಡಿದು ತನ್ನನ್ನೇ ತಾನು ಸುಟ್ಟುಕೊಳ್ಳುತ್ತಾಳೆ ನಾಯಕಿ. ಊರಿಗೆ ಬೆಳಕನ್ನು ಕೊಡುವ ಉಸಿರೇ ಈ ಸುಂದರ ಯುವತಿ ಪಾರಿಜಾತ ಇಲ್ಲಿನ ಕಥೆಯಾಗುತ್ತಾಳೆ. ಇಲ್ಲಿನ ಬರವಣಿಗೆಯ ಶೈಲಿ, ಕಥೆಯ ನಿರೂಪಣೆ ತುಂಬ...
Image
ಮನಸ್ಸಿನ ದಿಗಂತ ವಿಸ್ತರಿಸುವ ‘ಅಜ್ಜಿ ಕರೆದ ಹಾಗಾಯಿತು’ ‘ಅಜ್ಜಿ ಕರೆದ ಹಾಗಾಯಿತು’ ಇದು  ಕವಯತ್ರಿ, ಕಥೆಗಾರ್ತಿ ಸವಿತಾ ನಾಗಭೂಷಣ ಅವರ ಕೃತಿ. ಇಲ್ಲಿ ಒಟ್ಟು ೩೦ ಚಿಕ್ಕ ಕಥೆಗಳಿವೆ. ಪ್ರತೀ ಕತೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ವಸ್ತು, ವಿಚಾರ, ವಿನ್ಯಾಸಗಳು ಬೇರೆ ಬೇರೆಯಾಗಿವೆ. ಕೆಲವು ಕಥೆಗಳು ಅರ್ಧಪುಟದಷ್ಟಿದ್ದರೆ, ಇನ್ನೂ ಕೆಲವು ಒಂದು- ಎರಡು  ಪುಟದಷ್ಟಿವೆ.  ಒಂದು ಸಂದೇಶವನ್ನು ಸಮಾಜಕ್ಕೆ ನೀಡುವ ಕಥೆಗಳು ಇವಾಗಿವೆ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. ಓದಿದ ನಂತರ ಕಥೆ ಎನಿಸುವುದೇ ಇಲ್ಲ. ಅಷ್ಟೊಂದು ಚಿರಪರಿಚಿತ ವಿಷಯವನ್ನು ನಾಜೂಕಾಗಿ, ತೀರಾ ಸರಳ ರೀತಿಯಲ್ಲಿ ಹೆಣೆದಿದ್ದಾರೆ.  ಈ ಕಥೆಗಳ ನಿರೂಪಣೆ ಸಹ ಮನಸೆಳೆಯುವಂತಿದೆ. ಕಥೆಗಳು ಹಳ್ಳಿಯ ಸಂಸ್ಕೃತಿ, ಪೇಟೆಯ ಸಂಸ್ಕೃತಿ, ಕೋಮುವಾದ,  ಮಹಿಳಾ ದಿನಾಚರಣೆ, ಮಳೆ ಇಲ್ಲದೆ ತಲ್ಲಣಿಸುವುದು, ಸಂಬಂಧಗಳು, ಅಹಿಂಸೆ, ಶಾಂತಿ ಮೊದಲಾದ ವಸ್ತು ವಿಷಯಗಳನ್ನು ಹೊಂದಿವೆ. ಆದ್ದರಿಂದ ಇವು ಎಲ್ಲರನ್ನೂ ಆಕರ್ಷಿಸುತ್ತವೆ.  ‘ಬರವಣಿಗೆ’ ಎಂಬ ಮೊದಲ ಕಥೆ ಗ್ರಾಮೀಣ ಪ್ರದೇಶದ ಜನರಲ್ಲಿ ಶಿಕ್ಷಣ, ಆಧುನಿಕ ಜ್ಞಾನದ ಕೊರತೆ ಇರುವ ಬಗ್ಗೆ ಇದೆ.  ವಿದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದವನಿಗೆ ಊರಲ್ಲಿ ಮಾಡುವ ಸನ್ಮಾನ ಮಾಡುವ ಬಗ್ಗೆ ಹಿರಿಯರೊಬ್ಬರು  ‘ರಾಮಾಯಣ ಮಹಾಭಾರತಕ್ಕಿಂತ ದೊಡ್ಡದು ಬರೆದಿದ್ದಾನಾ’ ಎಂದು ಪ್ರಶ್ನಿಸುತ್ತಾರೆ. ‘ದರ...
Image
  ಅಂತರಂಗದ ದೀಪಗಳಂತಿರುವ ‘ಪೂರ್ಣ ಕುಂಭ’ ಸಮಾಜದಲ್ಲಿ ಪರಂಪರಾನುಗತವಾಗಿ ಬೇರೂರಿರುವ ಅರ್ಥವಿಲ್ಲದ ಆಚರಣೆಗಳನ್ನು ಕಾಂತಿಯಿಂದ ಪಡಿಮೂಡಿಸುತ್ತಾ ಕ್ರಾಂತಿಯ ಕಡೆಗೂ ಅಡಿ ಇಡುವ ಚೌಪದಿಗಳ ಸಂಗ್ರಹವೇ ‘ಪೂರ್ಣ ಕುಂಭ’. ಹಿರಿಯ ಲೇಖಕಿ ಪ್ರೇಮಾ ಭಟ್ ಅವರ ೫೦೧ ಚೌಪದಿಗಳುಳ್ಳ ಈ ಕೃತಿ ಓದುಗರನ್ನು ಪೂರ್ಣತ್ವದ ಕಡೆಗೆ ಕೊಂಡೊಯ್ಯುವಂತದ್ದು. ನಿಜವಾದ ಮನುಷ್ಯತ್ವದ ಕಡೆ ಮುಖ ಮಾಡಿ ನಮ್ಮನ್ನು ನಿಲ್ಲಿಸಿ ಬಿಡುವ, ಚುರುಕು ಮುಟ್ಟಿಸುವ ಹನಿಗಳಿಂದ ಲೇಖಕಿ ಶಾಕ್ ಟ್ರೀಟ್ಮೆಂಟ್ ಕೊಡುತ್ತಾರೆ. ಪ್ರತಿ ಚೌಪದಿಗಳ ಕೊನೆಗೆ ‘ಪ್ರೇಮಿ’ ಎಂಬ ಕಾವ್ಯನಾಮವನ್ನು ಇಲ್ಲಿ ಕಾಣಬಹುದು.  ಇಲ್ಲಿನ ಎಲ್ಲಾ ರಚನೆಗಳು ಸರಳವಾದ, ಎಂತಹವರಿಗೂ ಅರ್ಥವಾಗುವ, ಸಾಮಾಜಿಕ ವಿಷಯಗಳ ಮುಕ್ತವಾದ ಬಿಡಿ ಚೌಪದಿಗಳಾಗಿವೆ. ಎಲ್ಲಿದ್ದರೂ ಬೇಕು ಎಲ್ಲಾ ಕಾಲಕ್ಕೂ ಬೇಕು ಇಲ್ಲಿನ ಸುವಿಚಾರಗಳು. ಮಾನವನ ಬದುಕಿಗೆ ಆಧಾರ ಸ್ತಂಭಗಳು. ಇಲ್ಲಿನ ಒಂದೊಂದು ಚೌಪದಿಯನ್ನೂ ಸಾವಕಾಶವಾಗಿ ಕುಳಿತು ಬಿಡಿಬಿಡಿಯಾಗಿ ಓದಿ ಚಪ್ಪರಿಸಿದಾಗ ಮಾತ್ರ ಅದರ ಸ್ವಾದವನ್ನು ಪಡೆಯಲು ಸಾಧ್ಯ. ಕೃತಿಯನ್ನು ಪೂರ್ಣವಾಗಿ ಓದಿದಾಗ ರುಚಿಕರ ಚೌಪದಿಯ ಕಾಳು ಲಭ್ಯವಾಗುವುದರಲ್ಲಿ ಅನುಮಾನವಿಲ್ಲ.  ನಾವು ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಏನನ್ನು ಕಂಡರೂ ಬಾಹ್ಯಕಣ್ಣಿನಿಂದ ವೀಕ್ಷಿಸಿದರೆ ಸಾಲದು. ಅಂತರಂಗದ ಕಣ್ಣನ್ನು ತೆರೆದು ನೋಡಿದರೆ ಮಾತ್ರ ಸತ್ಯ ದರ್ಶನವಾಗಲು ಸಾಧ್ಯ. ಆದ್ದರಿಂದ ಈ ಕೃತಿಯನ್ನು ಬಾಹ್ಯರೂಪದಿಂದ...
  ಸಾಮಾನ್ಯ ಘಟನೆಗಳೇ ಕಥೆಯಾಗಿ ಮೈದಳೆದ ‘ಅಮ್ಮಚ್ಚಿಯೆಂಬ ನೆನಪು’       ಬಹಳ ಅಪರೂಪದ ಅನುಭವಗಳನ್ನು ವಿಭಿನ್ನ ಶೈಲಿಯಲ್ಲಿ ಸಾಹಿತ್ಯ ಮಾಧ್ಯಮದ ಮೂಲಕ ತೆರೆದಿಡುವ ವೈದೇಹಿ, ಮಹಿಳೆಯರ ವಿಶಿಷ್ಟ ಒಳತೋಟಿಯನ್ನು ಅಂತಃಕರಣ ತುಂಬಿದ ವಿಚಾರಗಳನ್ನು , ಸ್ತ್ರೀವಾದಿ ನಿಲುವುಗಳನ್ನು ಯಾವುದೇ ಅಬ್ಬರವಿಲ್ಲದೆ ಅನಾವರಣಗೊಳಿಸುತ್ತ್ತಾರೆ. ಇವರ ಕಥೆಗಳಲ್ಲಿ ಅಂತಃಕರಣ ತುಂಬಿದ ಮಿಡಿಯುವ ಭಾವನೆಗಳಿವೆ. ಪ್ರಸ್ತುತ ‘ಮ್ಮಚ್ಚಿಯೆಂಬ ನೆನಪು’ ಕಥಾ ಸಂಕಲನದಲ್ಲೂ ಇವರ ಸಾಹಿತ್ಯದ ಹರವನ್ನು ನಾವು ಕಾಣಬಹುದು.   ಇಲ್ಲಿನ ಎಲ್ಲಾ  ಕಥಗಳಲ್ಲಿ ಅವುಗಳ ಎಳೆಗಳು  ಹಾರುತ್ತಾ ಬಂದು ಮನಸ್ಸಿನಾಳಕ್ಕೆ ಇಳಿಯುತ್ತವೆ. ಕಥೆಗಳನ್ನು ಓದಿ ಮುಗಿಸಿದ ನಂತರ ಗುಂಯ್ ಗುಡುತ್ತಲೇ ಇರುತ್ತವೆ. ಅಷ್ಟೊಂದು ಆಪ್ತವಾಗಿ ಅವು ನಮ್ಮನ್ನಾವರಿಸಿ ಬಿಡುತ್ತವೆ. ಸಾಮಾನ್ಯವಾಗಿ ನಾವು ಕಂಡುಂಡ ಗ್ರಾಮೀಣ ಅನುಭವಗಳು ಇಲ್ಲಿವೆ. ಎಲ್ಲ ಕಥೆಗಳು ಒಂದಕ್ಕಿಂತ ಒಂದು ಹೆಚ್ಚೆನಿಸುತ್ತವೆ. ಕೆಲವು ಕಥೆಗಳ  ಆಕರ್ಷಣೆ ಎಂದರೆ ಲೇಖಕಿ ಬಳಸಿದ ಭಾಷೆ. ಕೆಲವು ಕುಂದಾಪುರ ಕನ್ನಡವಾದರೆ ಇನ್ನೂ ಕೆಲವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಕನ್ನಡ ಭಾಷೆ. ಓದುತ್ತಾ ಹೋದಂತೆ ಇವು ಇಷ್ಟವಾಗುತ್ತವೆ. ಇಲ್ಲಿನ ೬ ಕಥೆಗಳ ಬಗ್ಗೆಯೂ ಪುಟಗಟ್ಟಲೆ ಬರೆಯಬಹುದಾದರೂ ನನ್ನ ಕಾಡಿದ ಕಥೆ  ‘ಅಮ್ಮಚ್ಚಿಯೆಂಬ ನೆನಪು’ ಕಥೆ. ಇದೇ ಕಥೆಯ ತಲೆಬರಹವನ್ನೇ ಕೃತಿಗೆ ನೀಡಿದ್ದಾರೆ...
Image
 ವಿಸ್ಮಯ ಹುಟ್ಟಿಸುವ  ‘ಪ್ರೇಮ ಪತ್ರದ ಆಫೀಸು ಮತ್ತು ಅವಳು’   ‘ಪ್ರೇಮ ಪತ್ರದ ಆಫೀಸು ಮತ್ತು ಅವಳು’ ಇದು ಶಿವಕುಮಾರ್ ಮಾವಲಿ ಅವರ ಕಥಾ ಸಂಕಲನ. ಶಿವಕುಮಾರ್ ಪ್ರಸ್ತುತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚೆನ್ನೈನಲ್ಲಿ ಲ್ಯಾಂಗ್ವೇಜ್ ಎಕ್ಸ್ಪರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.  ಈ ಕೃತಿಯಲ್ಲಿ ಪ್ರೇಮದ ವಿರಹದ ಸಂಬಂಧದ ತಾಕಲಾಟಗಳ ಸಂದಿಗ್ಧದ ಕಥೆ ಇದೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಪ್ರತಿ ಕಥೆಗಳು ಓದುಗರಲ್ಲಿ ವಿಸ್ಮಯ ಹುಟ್ಟಿಸುತ್ತವೆ ಮತ್ತು ನಮ್ಮ ಹಳೆಯ ಕೆಲವು ನೆನಪುಗಳನ್ನು ಮರಳಿಸುತ್ತವೆ. ಕಥೆಗಳು ನಮ್ಮ ಅಂತರಾಳಕ್ಕಿಳಿದು ಹೊಸ ಆಲೋಚನೆಗಳಿಗೆ ಕಾರಣವಾಗುತ್ತವೆ.   ಇದರಲ್ಲಿ ಸುಮಾರು ೨೫ ಚಿಕ್ಕ ಕಥೆಗಳಿವೆ. ಇವೆಲ್ಲ  ಸರಳ ಭಾಷೆಯ ಮೂಲಕ ಸುಲಭದಲ್ಲಿ ಅರ್ಥವಾಗುವಂತಹ ಸರಳ ಕತೆಗಳು. ಜೊತೆಗೆ ನಮ್ಮ ಒಳವನ್ನು  ಪ್ರಶ್ನಿಸುತ್ತವೆ. ವಿಶೇಷ ಅನುಭವವನ್ನು ಕಟ್ಟಿಕೊಡುತ್ತವೆ. ಈ ಓದಿಸಿಕೊಂಡು ಹೋಗುವ ಗುಣದ ಹಿಂದೆ ಕತೆಗಾರನ ಕತೆ ಕಟ್ಟುವ ತಂತ್ರವೂ ಯಶಸ್ವಿಯಾಗಿ ಕೆಲಸ ಮಾಡಿದೆ. ಇಲ್ಲಿನ ಕತೆಗಳನ್ನು ಓದಿದ ನಂತರ ಮರೆಯದೆ ನಮ್ಮಲ್ಲಿ ಉಳಿಯುತ್ತವೆ. ಬಹುತೇಕ ಕತೆಗಳ ಪಾತ್ರಕ್ಕೆ ಹೆಸರಿಲ್ಲ. ನಾನು, ನೀನು, ಅವಳು ಎಂಬ ಮೂಲಕವೇ ಸಾಗುತ್ತವೆ. ಒಟ್ಟಿನಲ್ಲಿ ಸಂವೇದನೆಗೆ ಒಳಪಡಿಸುವ  ಕತೆಗಳು ಇವಾಗಿವೆ.       ‘ಪ್ರೇಮ ಪತ್ರದ ಆಫೀಸು ಮತ್ತು ಅವಳು’ ಎನ್ನುವ ಕಥ...
Image
  ಅಂದದ ನೇಕಾರಿಕೆಯ ‘ಗಾಂಧಿ ನೇಯ್ದಿಟ್ಟ ಬಟ್ಟೆ’   ಬಾಲ್ಯದ ಬದುಕಿನಲ್ಲಿ  ಪುಸ್ತಕ ಮತ್ತು ಬದುಕಿನ ಅನುಭವಗಳು ಅನುರಣಿಸಿದರೆ ಅದೊಂದು ಕಾವ್ಯವಾಗಿ ಹೇಗೆ ಪ್ರಕಟವಾಗುತ್ತದೆ ಎನ್ನುವುದಕ್ಕೆ ‘ಗಾಂಧಿ ನೇಯ್ದಿಟ್ಟ ಬಟ್ಟೆ’  ಕವಿತೆಗಳ ಸಂಕಲನ ಉದಾಹರಣೆಯಾಗಿದೆ. ಇದು ಹುಬ್ಬಳ್ಳಿಯ ರಾಯಸಾಬ್ ಎನ್. ದರ್ಗಾದವರ ಅವರ ಚೊಚ್ಚಲ ಕೃತಿ. ಕರ್ನಾಟಕ ಸರ್ಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಧನಸಹಾಯದಿಂದ ಪ್ರಕಟವಾಗಿದೆ.  ರಾಯಸಾಬ್ ಅವರು ಹುಬ್ಬಳ್ಳಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ ಹುಟ್ಟಿಕೊಂಡ ಸಾಹಿತ್ಯದ ಒಲವನ್ನು ಅಲ್ಪಸಮಯದಲ್ಲಿಯೇ ಕವಿತೆಗಳ ಮೂಲಕ ಪ್ರಕಟಪಡಿಸಿದ್ದಾರೆ.  ಕವಿಯು ತನ್ನ ಕಾವಾತ್ಮಕತೆಯನ್ನು ಜನರು ಮೆಚ್ಚುವ ರೀತಿಯಲ್ಲಿ ತೆರೆದಿಟ್ಟಿದ್ದಾರೆ. ಭರವಸೆಯ ಕವಿತೆಗಳಿರುವ ಈ ಸಂಕಲನದಲ್ಲಿ ಬಹುತೇಕ ಕವಿತೆಗಳು ಸಮಾಜಕ್ಕೆ ಹಿಡಿದ ಕನ್ನಡಿಗಳಾಗಿವೆ. ನಂತರ ಪ್ರೀತಿ ಪ್ರೇಮದ ತುಡಿತವಿದೆ, ನಶಿಸುತ್ತಿರುವ ಹಳೆಯ ಲೋಕ, ಹೆಚ್ಚುತ್ತಿರುವ ಕ್ರೌರ್ಯ, ಧರ್ಮದ ಹೆಸರಿನಲ್ಲಿನ ಜಗಳ, ಜಾತಿಗಳ ಕಲಹ, ಬಡತನ ಮೊದಲಾದ ವಿಷಯಗಳಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಒಂದು ಭಿನ್ನ ಸಂದೇಶವಿದೆ.  ಇಲ್ಲಿನ ಕವಿತೆಗಳು ಗಟ್ಟಿಯಾಗಿ ನಿಲ್ಲುವ ಸೂಚನೆ ಕೊಡುತ್ತವೆ. ಜೊತೆಗೆ ಬಳಸಿದ ಉಪಮೆ ಮತ್ತು ನುಡಿಗಟ್ಟುಗಳು ಗಮನ ಸೆಳೆಯುತ್ತವೆ. ಯುವಕವಿಯು ಭರವಸೆಯ...
Image
 ಭರವಸೆಯ ಬೆಳಕು ಚೆಲ್ಲುವ  "‘ಗೆಲುವು ಸಾಧಿಸುವ ಮುನ್ನ’* ಇಂದಿನ  ಒತ್ತಡದ ಯುಗದಲ್ಲಿ ಮನುಷ್ಯ ಗೊಂದಲದ ಗೂಡಲ್ಲಿ ಹತಾಶನಾಗಿ  ಕುಳಿತಿದ್ದಾನೆ. ಜೀವನೋತ್ಸಾಹ ಕಳೆದುಕೊಂಡಿದ್ದಾನೆ. ಇಂತಹ ಸಂದರ್ಭದಲ್ಲಿ ಧನಾತ್ಮಕ ಚಿಂತನೆಯನ್ನು ಹೇಗೆ ಬೆಳೆಸಿಕೊಳ್ಳಬೇಕು, ಬದುಕಿನಲ್ಲಿ ಹೇಗೆ ಆನಂದವನ್ನು ಸೃಷ್ಟಿಸಿಕೊಳ್ಳಬೇಕು ಎನ್ನುವ ಉಪಾಯವನ್ನು ಸೂಚಿಸುತ್ತಾ, ನೊಂದ ಮನಗಳಿಗೆ ಗೆದ್ದೇ ಗೆಲ್ಲಬೇಕೆನ್ನುವ ಛಲದ ಕಿಡಿ ಹೊತ್ತಿಸುವ ಭರವಸೆಯ ಲೇಖನಗಳ ಸಂಕಲನ ಇದಾಗಿದೆ.  ‘ಗೆಲುವು ಸಾಧಿಸುವ ಮುನ್ನ’  ಇದರ ಲೇಖಕಿ ಪ್ರಜ್ವಲಾ ಶೆಣೈ. ಮಂಗಳೂರು ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಇವರು, ಬರವಣಿಗೆಯಲ್ಲೂ  ಹೆಜ್ಜೆ ಗುರುತು ಮೂಡಿಸಿ ಸಾಧನೆ ಮಾಡಿದವರು. ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶಕರೂ ಹೌದು. ಇದು ಅವರ ಮೂರನೆಯ ಕೃತಿ. ಇಲ್ಲಿ ಅತ್ಯಂತ ಸಣ್ಣ ಬರಹಗಳು ಸುಲಭ ಹಾಗೂ  ಸರಳ ಭಾಷೆಯಲ್ಲಿ ನಮ್ಮನ್ನು ಸೆರೆಹಿಡಿಯುತ್ತವೆ. ಇಲ್ಲಿನ ಲೇಖನಗಳೆಲ್ಲ ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟಿತವಾದವು. ಸುಮಾರು ೪೨ ಕಿರು ಲೇಖನಗಳು ಇಲ್ಲಿವೆ. ಕೃತಿಯನ್ನು ಓದುವಾಗ ಲೇಖನಗಳು ಮನೋವಿಜ್ಞಾನಿಕ ಲೇಖನಗಳಂತೆ ಕಂಡುಬರುತ್ತವೆ. ಹತಾಶ ಬದುಕು ಆಸೆ ಹುಟ್ಟಿಸುವುದು, ಜೀವನ ಉತ್ಸಾಹ ಪುಟಿಯುವಂತೆ ಮಾಡುವುದು, ಬದುಕಿನ ಸೂಕ್ಷ್ಮತೆಯನ್ನು ತಿಳಿಸಿ ಕೊಡುವುದು, ನಮ್ಮ ಬದುಕಿಗೆ ನಾವೇ ಹೇಗೆ ...
Image
 ಕನ್ನಡ ಚಿತ್ರಗೀತೆಗಳ ಶ್ರೀಮಂತ ಸಂಸ್ಕೃತಿ ತೆರೆದಿಡುವ  ‘ಚಿತ್ರ ಚಿಂತನ’   ‘ಚಿತ್ರ ಚಿಂತನ’ ಇದು ಚಲನಚಿತ್ರ ಗೀತೆಗಳ ವಿಮರ್ಶಾ ಸಂಕಲನ. ಕನ್ನಡದಲ್ಲಿ ಪ್ರಖ್ಯಾತ ಚಲನಚಿತ್ರ ಗೀತೆಗಳನ್ನು ವಿಮರ್ಶಿಸಿ ಬರೆದ ಸಂಕಲನಗಳು ವಿರಳಾತಿರವಿರಳ. ಇಂತಹ ಒಂದು ಸಾಹಸವನ್ನು ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶ್ರೀಪತಿ ಹಳಗುಂದ ಮಾಡಿದ್ದಾರೆ. ಕೃತಿಯಲ್ಲಿ  ಲೇಖಕರು ಪ್ರಮುಖವಾದ ೧೮ ಚಿತ್ರಗೀತೆಗಳನ್ನು ವಿಮರ್ಶಿಸಿದ್ದಾರೆ. ೫೦ರ ದಶಕದಿಂದ ೯೦ ರ ದಶಕದವರೆಗೆ ಬಂದ, ನಾವು- ನೀವೆಲ್ಲ  ಸದಾ ಗುನುಗುನಿಸುವ ಮತ್ತು ಅತ್ಯಂತ ಸ್ಮರಣೀಯವಾದ ಚಿತ್ರಗೀತೆಗಳನ್ನು ಈ ವಿಮರ್ಶೆಗೆ ಅವರು ಆಯ್ದುಕೊಂಡಿದ್ದಾರೆ. ರಾಜಕುಮಾರ್, ಶಂಕರನಾಗ್, ವಿಷ್ಣುವರ್ಧನ್, ಅಂಬರೀಶ್, ಕಲ್ಪನಾ, ಮಂಜುಳಾ, ಅನಂತನಾಗ್, ಭಾರತಿ, ಜಯಂತಿ ಮೊದಲಾದವರ ನಟನೆಯ ಚಿತ್ರಗಳ ಸಿನಿಮಾ ಹಾಡುಗಳಲ್ಲಿ ಇರುವ ಭಾವ, ಬದುಕನ್ನು ತಾತ್ವಿಕವಾದ ಮತ್ತು ತಾರ್ಕಿಕವಾದ ಹಿನ್ನೆಲೆಯಲ್ಲಿ ಹಲವು ಉದಾಹರಣೆಗಳೊಂದಿಗೆ ಒರೆಗೆ ಹಚ್ಚಿದ್ದಾರೆ. ಆ ಕಾಲದ ಸಿನಿಮಾ ಗೀತೆಗಳಿಗೆ ಎಂಥವನನ್ನೂ ಸೆಳೆಯುವ ಸೂಜಿಗಲ್ಲಿನ ಗುಣವಿತ್ತು. ಜನಮನದಲ್ಲಿ ಅಚ್ಚಳಿಯದೆ ಉಳಿಯುವ ಮೂಲಕ ಭಾವ, ಅನುಭಾವ ಮತ್ತು ಅನುಭವವನ್ನು ಭಾವಗೀತೆಗಳಿಗಿಂತ ಹೆಚ್ಚಾಗಿ ಅಳವಡಿಸಿಕೊಂಡಿದ್ದನ್ನು ನಾವು ಗಮನಿಸಬಹುದು. ಈ ವಿಮರ್ಶಾ ಕೃತಿಯಲ್ಲಿ ಮೊದಲ ಗೀತೆಯನ್ನಾಗಿ ‘ಬಾಳುವಂತ ಹೂವೇ ಬಾಡುವಾಸ...
Image
  ಅನುಭವದ ಬುತ್ತಿಯ  ‘ಹಲೋ ಟೀಚರ್’* ‘ಹಲೋ ಟೀಚರ್’ ಇದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕ ವರ್ಗದಲ್ಲಿ ಚೈತನ್ಯದ ಚಿಲುಮೆಯನ್ನು ತುಂಬುವ ಕೃತಿಯಾಗಿದೆ. ಇದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ  ಸರಕಾರಿ ಶಾಲೆಯೊಂದರ  ಶಿಕ್ಷಕಿ ಅನುಸೂಯ ಯತೀಶ್ ಅವರ ಕೃತಿ. ಇದರಲ್ಲಿ ೨೦ ಬರಹಗಳಿವೆ. ಸರಳ ನಿರೂಪಣೆಯೊಂದಿಗೆ ಮಕ್ಕಳ ಜೊತೆಗಿನ ಒಡನಾಟವನ್ನು ವಿವಿಧ ಘಟನೆಗಳ ಮೂಲಕ ಇಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಸೃಜನಶೀಲ ಶಿಕ್ಷಕಿ ತಮ್ಮ ಅನುಭವಗಳನ್ನು ಇಷ್ಟೊಂದು ಚೆನ್ನಾಗಿ, ಬಹುಕಾಲ ಭಾವಕೋಶವನ್ನು ಆವರಿಸಿಕೊಳ್ಳುವಷ್ಟು ಶಕ್ತಿಶಾಲಿಯಾಗಿ, ಅಷ್ಟೇ ಕಾಳಜಿಯುತವಾಗಿ ಬರೆದಿದ್ದಾರೆ.  ಇಂತಹ ಲೋಕೋಪಯೋಗಿ ಬರಹಗಳು ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಈ ಕೃತಿಯಲ್ಲಿ ಶಿಕ್ಷಕಿ ಅಂತಃಕರಣ, ಸಹನೆ, ತಾಳ್ಮೆ, ಆಲೋಚನಾಲಹರಿ, ಮಕ್ಕಳ ಮನೋಲೋಕ, ಸತ್ಯ- ಮಿಥ್ಯಗಳ ಪರಾಮರ್ಶೆ, ತಪ್ಪುಗಳನ್ನು ತಾನು ತಿದ್ದಿ ಅವರಿಗೆ ಶೈಕ್ಷಣಿಕ ಮಾರ್ಗವನ್ನು ಸುಗಮಗೊಳಿಸಿದ್ದನ್ನು ಸೂಕ್ಷ್ಮಮತಿಯಾಗಿ ವಿವರಿಸಿದ್ದಾರೆ. ಈ ಕೃತಿ ಶಿಕ್ಷಕಿಯ ಭಾವಲೋಕದ ಅನಾವರಣ ಮಾಡುವುದರ ಜೊತೆಗೆ ಸ್ವಂತಿಕೆಯನ್ನು ಪ್ರದರ್ಶನ ಮಾಡಿದೆ.  ತಮ್ಮ ಸ್ವಂತ ಅನುಭವವನ್ನು ಶಿಕ್ಷಕಿ ಇಲ್ಲಿ ಕಟ್ಟಿಕೊಟ್ಟಿರುವುದರಿಂದ ಇಲ್ಲಿನ ಎಲ್ಲಾ ಲೇಖನಗಳು ಹೊಳಪು ಪಡೆದು ಹೊರಬಂದಿವೆ. ಶಾಲಾ ಪರಿಸರ, ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಪೋಷಕರು, ಕುಟುಂಬ, ಶಿಕ್ಷಣ ಇಲಾಖೆ, ಸಾ...
Image
 ಜೀವಭಾವಗಳ  ಸಂಗಮದ   ‘ಅರ್ಥವಾಗದವರು’  ‘ಅರ್ಥವಾಗದವರು’ ಇದು ಬೆಳ್ತಂಗಡಿಯಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತರಾದ ಲಲಿತಾ ಮುದ್ರಾಡಿಯವರ ಚೊಚ್ಚಲ ಕೃತಿ.  ತಂದೆ ದಿವಂಗತ ಅಂಬಾತನಯ ಮುದ್ರಾಡಿ (ಸಾಹಿತಿ, ಯಕ್ಷಗಾನ ವಿದ್ವಾಂಸ, ಹರಿದಾಸ) ಅವರ ನೆರಳಲ್ಲಿ ಬೆಳೆದು ಸಾಹಿತ್ಯ, ಕಲೆ, ಭಾಷೆ ಮುಂತಾದವುಗಳಲ್ಲಿ ಆಸಕ್ತರಾಗಿ ಈಗ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕವನ ಸಂಕಲನದಲ್ಲಿ ೪೫ ಸುಂದರವಾದ ಕವನಗಳ ಗೊನೆಯನ್ನು ನಮ್ಮ ಮುಂದಿರಿಸಿದ್ದಾರೆ. ಇಲ್ಲಿನ ಕವನಗಳು ವೈವಿಧ್ಯಮಯವಾಗಿದ್ದರೂ ಬದುಕು ಕಟ್ಟಿಕೊಳ್ಳುವ ಕೌಶಲಗಳತ್ತ ಹೆಚ್ಚಿನ ಬೆಳಕನ್ನು ಇವು ಚೆಲ್ಲುತ್ತಿವೆ.  ಕವಯತ್ರಿಯ ಭಾಷಾ ಕೌಶಲ ಮೆಚ್ಚುವಂತದ್ದು. ಸಾಹಿತ್ಯಿಕವಾಗಿರುವ ಎಲ್ಲಾ ಕವನಗಳನ್ನೂ ಆಡಂಬರವಿಲ್ಲದೆ  ಸರಳ ಶಬ್ದಗಳ ಮೂಲಕ ಪೋಣಿಸಿದ್ದಾರೆ. ಕವಿತೆಗೆ ವಿಷಯವನ್ನು ಕೂಡ ನಮ್ಮ ಸುತ್ತಮುತ್ತಲಿನವನ್ನೇ ಆಯ್ಕೆಮಾಡಿಕೊಂಡಿದ್ದಾರೆ. ಇದರಿಂದ ಕವನದ ಒಳಹೂರಣ ನಮಗೆ ಆಪ್ತವಾಗುತ್ತದೆ. ಅವರ ವೃತ್ತಿ ಅನುಭವದ ಆಂತರ್ಯಭಾವ ಕವನಗಳಲ್ಲಿ ವ್ಯಕ್ತವಾಗಿದೆ. ಶೈಕ್ಷಣಿಕ ಸೇವಾಬದುಕು ಮತ್ತು ಜೀವನಾನುಭವ ಒಂದಕ್ಕೊಂದು ಬೆರೆತು  ಪಕ್ವವಾದ ಬಳಿಕ  ಹೊರಹೊಮ್ಮುವ ಅಭಿವ್ಯಕ್ತಿ ಹೆಚ್ಚು ಸುಗಂಧಮಯವಾಗಿರುತ್ತದೆ, ಸಮೃದ್ಧವಾಗಿರುತ್ತದೆ. ಇದರ ಪರಿಣಾಮ ಅತ್ಯಂತ ನವಿರು ಭಾಷೆಯ ಶ್ರೀಮಂತ ಬರವಣಿಗೆಯ ಕವನ ಸಂಕಲನವನ್ನು ಅವರು ಕಟ್ಟ...
Image
   ಹೊಸ ಹೊಳಹಿನ  "ಒಂದು ಹನಿ ಮೌನ" ಇದೊಂದು ಹನಿಗವನದ ಸಂಕಲನ. ಕಣ್ಣೆದರು ಕಂಡದ್ದನ್ನು ಮತ್ತು ಪರಿಭಾವಿಸಿದ ಬಾಳನ್ನು ಕವಯಿತ್ರಿ ಅಮೃತಾ ಮೆಹಂದಳೆ  ಅವರ ಎರಡನೆಯ ಹನಿಗವನ ಕೃತಿ ಒಂದು ಹನಿ ಮೌನದ ಮೂಲಕ ನಿರೂಪಿಸಿದ್ದಾರೆ. ಈ ಕೃತಿಯಲ್ಲಿ ಯಾವ ಹನಿಗೂ ಪ್ರತ್ಯೇಕ ತಲೆಬರಹವಿಲ್ಲ. ಬದುಕೇ, ಈ ಪ್ರೇಮ, ಹಾ! ವಿಷಾದ ಎಂಬ ಮೂರು ವಿಭಾಗಗಳಲ್ಲಿ ಹನಿಗವನ ತೆರೆದಿಟ್ಟಿದ್ದಾರೆ. ಜೀವನದ ಅಪೇಕ್ಷೆ, ನಿರಾಸೆ, ಅನಿವಾರ್‍ಯತೆ,ವಿನೋದ, ವಿಡಂಬನೆ, ಮುಗ್ಧ, ಪ್ರಬುದ್ಧ, ಪ್ರೀತಿ, ಪ್ರೇಮ, ಬಯಕೆ, ವಿರಹ, ನೋವು, ಸಾವಿನ ಅರಿವು,  ಸುಖ, ದುಃಖ, ನೋವು- ನಲಿವು, ವಿಷಾದ, ನಿರುದ್ವಿಗ್ನತೆ, ನಿರ್ಲಿಪ್ತತೆ ಮೊದಲಾದವುಗಳಿಂದ ಈ ಮೂರು ಭಾಗದಲ್ಲಿನ ಹನಿಗಳು  ಕೂಡಿವೆ. ಅತಿ ಚಿಕ್ಕ ಕೃತಿಯಾದರೂ ಇಲ್ಲಿನ ಹನಿಗಳು  ಹೊಸ ಅರ್ಥ ಹೊಳೆಯಿಸುವಂತಹವು. ಎಂದೂ ಮುಗಿಯದ ಭಾವಗಳಿವೆ.  ಹಲವು ಹತ್ತು ಸಂವೇದನೆಗಳನ್ನು ಮತ್ತದರ ಪರಿಣಾಮವನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದ ಓದುಗನ ಚಿತ್ತ ಚಿಂತನೆಯಾಚೆಗೆ ಹೋಗುತ್ತದೆ.   ಈ ಕೃತಿಯಲ್ಲಿ ಓದುಗನನ್ನು ಸೆಳೆಯಬಲ್ಲ ಕೆಲವು ಸಾಲುಗಳು ಇಲ್ಲಿವೆ: ಈರುಳ್ಳಿ ಕೊಚ್ಚುವುದು ಹೂಹೃದಯದ ಗಟ್ಟಿಗಿತ್ತಿಯರ ಸುಂದರ ಹವ್ಯಾಸ.. *** ಅಗತ್ಯಗಳ ಭಾರ ಇಳಿದಷ್ಟೂ ಮನಸು ಹಗುರ **** ಕಿವಿಗಡಚಿಕ್ಕುವುದು ಶಬ್ದ ಮಾತ್ರವಲ್ಲ ಮೌನವೂ... *** ಮಳಲ ಮೇಲೆ ಬರೆದ ಚಿತ್ರದಂತೆ ಕ್ಷಣಿಕವಲ್ಲ ಒಲುಮೆ ನಿಜದೊಲವು...
Image
 ದರ್ಶ ನಾರಿಯರ ಪ್ರತೀಕ ‘ಪಂಚ ಕನ್ಯೆಯರು -ಪರಮ ಪಂಚ ಮಿಥ್ಯೆಯರು’  ಅಹಲ್ಯಾ ದ್ರೌಪದಿ ಸೀತಾ  ತಾರಾ ಮಂಡೋದರಿ ತಥಾ  ಪಂಚಕನ್ಯಾ ಸ್ಮರೆ ನಿತ್ಯಂ ಮಹಾಪಾತಕ ನಾಶನಂ.  ಎಂಬ ಶ್ಲೋಕದಲ್ಲಿ ಎಷ್ಟೊಂದು ಅರ್ಥ ರಾಶಿ ಇದೆ. ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ ಈ ಐವರು ಮಹಿಳೆಯರ ಹೆಸರನ್ನು ಮುಂಜಾನೆ ಎದ್ದು ಪಠಿಸಿದರೆ ನಮ್ಮ ಪಾಪವೆಲ್ಲವೂ ನಾಶವಾಗುತ್ತದೆ ಎಂದು.  ಪಂಚ ಕನ್ಯೆಯರ ಕುರಿತಾದ ಕೃತಿಯೇ ‘ಪಂಚ ಕನ್ಯೆಯರು ಪರಮ ಪಂಚ ಮಿಥ್ಯೆಯರು’. ಈ ಕೃತಿ ಪಶ್ಚಿಮ ಬಂಗಾಳ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ಪ್ರದೀಪ ಭಟ್ಟಾಚಾರ್ಯ ಅವರ ಕೃತಿ ‘ಫೈವ್ ಹೋಲಿ ವರ್ಜಿನ್ಸ್ ಫೈವ್ ಸೀಕ್ರೆಟ್ ಮಿಥ್ಸ್’ ಎಂಬುದ ಕನ್ನಡಾನುವಾದ. ಉಡುಪಿಯ  ಟಿ ಎಂ ಎ ಪೈ  ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಮಹಾಬಲೇಶ್ವರ ರಾವ್ ಇದನ್ನು  ಅನುವಾದಿಸಿದ್ದಾರೆ.   ಪಂಚಕನ್ಯೆಯರು ಭಾರತೀಯ ನಾರಿಯರಿಗೆ ಜ್ವಲಂತ ವ್ಯಕ್ತಿತ್ವದ ಮಾದರಿಗಳೆಂದು ಇಲ್ಲಿ ಪ್ರತಿಪಾದಿಸಲಾಗಿದೆ. ಪ್ರತಿಯೊಬ್ಬರ ಜೀವನ ರೇಖೆಯು ಭಾರತದ ಲಕ್ಷಾಂತರ ಮಹಿಳೆಯರ ಬಾಳಿನಲ್ಲಿ ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ  ಪ್ರತಿಬಿಂಬಿತವಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯು ಪಂಚಕನ್ಯೆಯರ ವ್ಯಕ್ತಿತ್ವ ಹಾಗೂ ಜೀವನ ರೇಖೆಯನ್ನು ಅಭ್ಯಾಸ ಮಾಡಬೇಕು. ಅಲ್ಪಚೇತನವು ಉದಾತ್ತ ಚೇತನವಾಗಲು ನೆರವು ನೀಡುವ ಸಲಕರಣೆಗಳಾಗುವುದೇ ಸದಾ ಸ್ಮರಣೀಯರಾದ...
Image
 ಸಂಸ್ಕೃತಿ, ಚರಿತ್ರೆಗಳ ಪಲ್ಲಟದ  ಯಮುನಾ ನದಿಯ ತೀರಗಳಲ್ಲಿ... ‘ಯಮುನಾ ನದಿಯ ತೀರಗಳಲ್ಲಿ...’ ಇದು ಮಲಯಾಳಿ ಪ್ರಸಿದ್ಧ ಸಾಹಿತಿ  ಎಂ. ಮುಕುಂದನ್ ಅವರ ಕೃತಿ. ಮಲಯಾಳಿ ಕೃತಿ ‘ಯಮುನಾ ನದಿಯುಡೇ ತೀರಂಗಳಿಲ್...’ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಶಿವಮೊಗ್ಗದ ನಿವೃತ್ತ ಇಂಜಿನಿಯರ್ ಕೆ. ಪ್ರಭಾಕರನ್. ಮುಕುಂದನ್ ಜೊತೆಗೆ  ದೆಹಲಿ ಮತ್ತು ಹರಿದ್ವಾರಗಳಲ್ಲಿ  ಕೇರಳದ ಪತ್ರಕರ್ತ, ಬರಹಗಾರ ಇ. ಎಂ. ಅಶ್ರಫ್  ನಡೆಸಿದ ಒಂದು ಸಾಹಿತ್ಯ ಸಂಚಾರವಿದು. ಅವರ ಕೃತಿಗಳ ವಿಮರ್ಶಾತ್ಮಕ ವಿಶ್ಲೇಷಣೆಯ ಜೊತೆಗೆ  ವ್ಯಕ್ತಿತ್ವ ಮತ್ತು ಕೃತಿಗಳನ್ನು ಓದಿಸುವ, ಪರಿಚಯಿಸುವ ಪ್ರಯತ್ನ ಮಾಡಿದೆ.  ಕಾದಂಬರಿಗಳ ಸತ್ವವನ್ನು ನಮಗೆ ಇಲ್ಲಿ ನೀಡಿದೆ.    ಈ ಕೃತಿಯು ದೆಹಲಿ ಹಾಗೂ ಹರಿದ್ವಾರ  ಕುರಿತು ಮುಕುಂದನ್  ಬರೆದ ‘ದೆಹಲಿ’ ಕುರಿತಾಗಿದೆ. ಮುಕುಂದನ್ ಸಾಮಾನ್ಯ ವಸ್ತುವನ್ನು ಅಸಾಮಾನ್ಯ ಎನ್ನುವಂತೆ ಚಿಂತಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿದ್ದರು. ಅರ್ಧಸತ್ಯವನ್ನು ಪೂರ್ಣಸತ್ಯವನ್ನಾಗಿಸುವ ಬರವಣಿಗೆ ಅವರಲ್ಲಿತ್ತು. ಅವರ ಕಾದಂಬರಿಯನ್ನು ಓದುವಾಗ ಬರವಣಿಗೆ ಅದ್ಭುತವಾಗಿ ಮೂಡಿ ಬಂದಿರುವುದನ್ನು ಕಾಣಬಹುದು. ಸಾಹಿತ್ಯ ಅಕ್ಷರಗಳನ್ನು ಮೀರಿದ ಅನುಭವಕ್ಕೆ ಓದುಗನನ್ನು ಕೊಂಡೊಯ್ಯಬೇಕು ಎನ್ನುವ ಮಾತಿದೆ. ಇದಕ್ಕೆ ಪ್ರಸ್ತುತ ಕಾದಂಬರಿ ಉತ್ತಮ ಉದಾಹರಣೆ. ಈ ಕೃತಿಯಲ್ಲಿ ಒಟ್ಟು ಐದು ಅಧ್ಯಾಯಗಳಲ್ಲಿ ...
Image
 ವಿವಿಧ ಕಾಲಘಟ್ಟಕ್ಕೆ  ಸ್ಪಂದಿಸುವ ‘ವಿಲೋಚನ’   ‘ವಿಲೋಚನ’ ಇದು  ಶಿವಮೊಗ್ಗ ಜಿಲ್ಲೆ ಹೊಸನಗರದ ಪ್ರಾಧ್ಯಾಪಕ ಶ್ರೀಪತಿ ಹಳಗುಂದ  ವಿಮರ್ಶಾ ಸಂಕಲನ. ಇದರಲ್ಲಿ  ೧೯ ಲೇಖನಗಳ ಗುಚ್ಛವಿದೆ. ವಿವಿಧೆಡೆ ಲೇಖಕರು ಮಂಡಿಸಿದ ವಿಚಾರ ಸಂಕಿರಣಗಳ ಪ್ರಬಂಧವೂ ಇದಾಗಿದೆ. ಜೊತೆಗೆ ವಿಮರ್ಶಕ ಅಥವಾ ಲೇಖಕನೊಬ್ಬ ಒಂದು ಕೃತಿಯ ಕಾಲವನ್ನು ಆ ಕಾಲಘಟ್ಟಕ್ಕೆ ಸ್ಪಂದಿಸಿ ಮನಮುಟ್ಟುವಂತೆ ವಿಮರ್ಶಿಸಿದ್ದಾರೆ. ಇಲ್ಲಿ ಲೇಖಕರು ಕೆಲವು ಕೃತಿಗಳ ಬಗ್ಗೆ ವಿಶೇಷವಾದ ಒಳನೋಟವನ್ನು ಬೀರಿದ್ದಾರೆ. ವಿಷಯ ಮಂಡನೆ, ಭಾಷಾ ಶೈಲಿ, ತಂತ್ರಗಾರಿಕೆ, ನಯವಾದ ವಿಮರ್ಶೆ ಮೂಲಕ ಈ ಕೃತಿಯ ಮೌಲ್ಯ ಹೆಚ್ಚಾಗಿದೆ. ಅವರ ಮೇಧಾಶಕ್ತಿ, ವೈಚಾರಿಕ ಚಿಂತನೆ ಎಲ್ಲವೂ ಇದರಲ್ಲಿ ಬಿತ್ತರಗೊಂಡಿದೆ. ವಿಶೇಷವಾಗಿ ಮಲೆನಾಡಿನ ಬಗ್ಗೆಯೂ ಇದರಲ್ಲಿ ಬರಹವಿದೆ. ಇಲ್ಲಿನ ಮುಳುಗಡೆ ಸಮಸ್ಯೆಯಿಂದಾದ ತಲ್ಲಣವನ್ನು ಎಳೆಎಳೆಯಾಗಿ, ಗಂಭೀರವಾಗಿ, ಅಲ್ಲಲ್ಲಿ ಹಾಸ್ಯಮಿಶ್ರ್ರಿತವಾಗಿ ಓದುಗರೆದುರು ಬಿಚ್ಚಿಟ್ಟಿದ್ದಾರೆ.  ಮೊದಲ ಲೇಖನ ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನ; ಅಭಿವ್ಯಕ್ತಿಗೆ ಎಲ್ಲೆ ಇದೆ ಎನ್ನುವುದನ್ನು ಒಪ್ಪುವ ಲೇಖಕರು, ಬರಹಗಾರನ ಮೇಲೆ ಸರ್ಕಾರ ಹಿಡಿತವಿದೆ. ಅಭಿವ್ಯಕ್ತಿ ಕ್ರಮವನ್ನು ಸಾಹಿತ್ಯದ ಮೂಲಕ ಪ್ರತಿಭಟಿಸಿದರೆ ಸರ್ಕಾರದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಕ್ರಮ ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಎದುರಾಗಿದ್ದನ್ನು ವಿವರಿಸ...
Image
 ಸಮೃದ್ಧ ವಿಷಯಗಳ ಜೀವಾಳ  ‘ಕತೆ ಡಬ್ಬಿ’ ರಂಜನಿ ರಾಘವನ್  ಹೆಸರು ಕೇಳದವರು ವಿರಾಳಾತಿವಿರಳ.  ’ಪುಟ್ಟಗೌರಿ ಮದುವೆ’ ಧಾರಾವಾಹಿ ಮೂಲಕ  ಜನಮನದಲ್ಲಿ ನೆಲೆ ನಿಂತ   ರಂಜನಿ  ‘ಕನ್ನಡತಿ’ ಧಾರಾವಾಹಿ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿದವರು.  ‘ಕತೆ ಡಬ್ಬಿ’ ರಂಜನಿ ಅವರ ಚೊಚ್ಚಲ ಕೃತಿ. ಹೆಸರೇ ಹೇಳುವಂತೆ ಮನ ಸೂರೆಗೊಳ್ಳುವ  ಕತೆಗಳಿಂದಲೇ ಡಬ್ಬಿ ತುಂಬಿದೆ. ಇದರಲ್ಲಿ  ೧೪ ಅತ್ಯದ್ಭುತ ಕತೆಗಳಿವೆ. ಈ ಕೃತಿಯ ಮೂಲಕ ಪುಸ್ತಕ ಪ್ರಪಂಚಕ್ಕೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಅಷ್ಟೇ ಅಲ್ಲ,  ತಿಂಡಿ ಡಬ್ಬದ ಮೇಲೆ ಮನೆಯಲ್ಲಿ ಸದಾ ಕಣ್ಣು ನೆಟ್ಟಿರುವಂತೆ,  ಕತೆ ಡಬ್ಬಿಯ ಮೇಲೆಯೂ ಈಗ ಓದುಗರ ಕಣ್ಣಿ ನೆಟ್ಟಿದೆ. ಈ ಡಬ್ಬಿಯಲ್ಲಿ  ವಿಶೇಷ ಎನ್ನಿಸುವ, ನಮ್ಮೆದುರೇ ದಿನನಿತ್ಯ ನಡೆಯುವ ಸಣ್ಣ ಘಟನೆಗಳನ್ನೇ ಸುಂದರವಾದ ಕತೆಗಳನ್ನಾಗಿ ನಾಜೂಕಾಗಿ ಹೆಣೆದಿದ್ದಾರೆ.  ಅವರು  ಕತೆ ಹೇಳುವ ಬಗೆ ಸಹೃದಯ ಓದುಗರನ್ನು ಅತ್ಯಾಪ್ತವಾಗಿ ಆಕರ್ಷಿಸುತ್ತದೆ.  ೨೦೨೧ರಲ್ಲಿ ಪ್ರಕಟವಾದ ಈ ಕಥಾ ಸಂಕಲನ ಕೇವಲ ಮೂರೇ ಮೂರು  ವರ್ಷದಲ್ಲಿ ೨೩ ಬಾರಿ ಪ್ರಕಟಣೆ ಕಂಡಿದೆ ಎಂದರೆ ಇದರ ಆಕರ್ಷಣೆ, ಕತೆಯ ವೈಶಿಷ್ಟ್ಯ,  ಅದರ ಚುಂಬಕ ಶಕ್ತಿ, ಅವರ ಬರವಣಿಗೆಯ ಕೌಶಲ ಹೇಗಿದೆ ಎನ್ನುವುದನ್ನು ಊಹಿಸಬಹುದು.  ಕೃತಿಯಲ್ಲಿ ಒಳ್ಳೊಳ್ಳೆಯ ಕಥೆಗಳ ಮೂಲಕ  ಓದುಗರಿಗೆ ರಸದ...
Image
 ಕಟುಸತ್ಯಗಳನ್ನು ತುಂಬಿಕೊಂಡಿರುವ  ‘ಮಂಕ್ರಿ’   ಮೌಢ್ಯದ ಜಾಡ್ಯದಿಂದ ಹೊರಬಂದು ಹೊಸತನದ ಕನಸು ಕಟ್ಟಿಕೊಳ್ಳಲು ಹಂಬಲಿಸುವ, ಮನುಷ್ಯ ನೆಲೆಯ ಚಿಂತನೆಗಳಿಂದ ಕೂಡಿದ, ಐಕ್ಯತೆಯ ಆಶಯ ಚಿತ್ರಿಸುವ, ಸಾರ್ವಕಾಲಿಕ ಕಾಳಜಿ ಹೊಂದಿರುವ, ಅಮರ ಅನುಭವಗಳ  ಕವನ ಸಂಕಲನ  ‘ಮಂಕ್ರಿ’. ಇದು ನೆಲಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿರುವ ಫರ್ಹಾನಾಜ್ ಮಸ್ಕಿಯವರ ಎರಡನೆಯ ಕೃತಿ.  ಈ ಕವನ ಸಂಕಲನ ಜನವರಿಯಲ್ಲಿ ಬಿಡುಗಡೆಯಾಗಿದೆ. ಇವರ ಕವಿತೆಗಳಲ್ಲಿ ಆಧ್ಯಾತ್ಮಿಕತೆಯ ಸ್ಪರ್ಶವನ್ನು, ಯುದ್ಧದ ನಿರಾಕರಣೆಯನ್ನು, ಪ್ರೀತಿ- ಪ್ರೇಮದ ವಿರಹ ಭಾವಗಳನ್ನು, ಬದುಕಿನ ಸಂಘರ್ಷಗಳನ್ನು, ಶೋಷಿತ ಸಮುದಾಯದ ಸಂಕಟಗಳನ್ನು ಕಾಣಬಹುದು. ಮೂಲಭೂತವಾದದ ವಿಡಂಬನೆ, ವ್ಯವಸ್ಥೆಯ  ಮತ್ತು ಅವಕಾಶವಾದಿಗಳ ಹುನ್ನಾರ, ಕುಚೋದ್ಯ ರಾಜಕೀಯ ದೊಂಬರಾಟವನ್ನು ಕವಿತೆಯಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ.  ಪ್ರತೀ ಕವನಗಳು ವಿಭಿನ್ನವಾದ ಆಲೋಚನಾ ಕ್ರಮದಿಂದ ಕೂಡಿವೆ. ಸಮಾಜಕ್ಕೆ ಅಂಟಿರುವ ಜಾತಿ, ಮತ, ಪಂಥ, ವರ್ಣ, ವರ್ಗಗಳನ್ನು ಒಡೆದಾಳುವ ನೀತಿಯ ಒಳಗಿನ ಹೂರಣವನ್ನು ಮನಸೆಳೆಯುವಂತೆ ತೆರೆದಿಟ್ಟಿದ್ದಾರೆ. ಸಮಸಮಾಜದ ಆಶಯ ಹೇಗಿರಬೇಕೆನ್ನುವುದನ್ನು ಬಹಳ ಮನೋಜ್ಞವಾಗಿ ಈ ಕವನ ಸಂಕಲನ ಕಟ್ಟಿಕೊಡುತ್ತದೆ. ದಾರಿ ತಪ್ಪುತ್ತಿರುವ ಇಂದಿನ ಪ್ರಜಾಪ್ರಭುತ್ವವನ್ನು ಪ್ರಶ್ನಿಸಿದ್ದಾರೆ, ತವಕ- ತಲ್ಲಣಗಳನ್ನು ಕಾವ...