Posts

Showing posts from June, 2026
Image
      ಬೆರಗುಗೊಳಿಸುವ ಕವನಗಳ   ‘ಇಂದ್ರ ಚಾಪ’  ತೀರ್ಥಹಳ್ಳಿಯ ಶಿಕ್ಷಕಿ ಸಾಹಿರಾಬಾನು ಅವರ  ‘ಇಂದ್ರ ಚಾಪ’ ಕವನ ಸಂಕಲನದಲ್ಲಿ  ಬೆರಗುಗೊಳಿಸುವ ಕವನಗಳಿವೆ. ಆರ್ತ ಮೊರೆಯೂ ಇದೆ. ಆಧ್ಯಾತ್ಮದ ಅಂಚಿನತ್ತ ಕೈ ಚಾಚುವ ಕವನಗಳು ಇವೆ. ನಮ್ಮಲ್ಲಿ ಆಸೆ ಮತ್ತು ನಿರೀಕ್ಷೆ ಹುಟ್ಟಿಸುವ ಕವಿತೆಗಳು ಇದರಲ್ಲಿವೆ. ಆತ್ಮ ಮತ್ತು ಬಹಿರ್ಲೋಕಗಳನ್ನು ಅತ್ಯಂತ ಸೂಕ್ಷ್ಮವಾಗಿ ಕವಯಿತ್ರಿ ಶೋಧಿಸುತ್ತಾ ಹೊಸ ಪಲುಕುಗಳನ್ನು ಹುಟ್ಟಿಸಿದ್ದಾರೆ. ಅವರ ಆದವಾದ ಕವಿತೆಗಳನ್ನು ಓದುವಾಗ ಎಂತವರು ಕೂಡ ತನ್ಮಯರಾಗುತ್ತಾರೆ.  ಧ್ವನಿ ಪೂರ್ಣವಾದ ಚಿತ್ರವತ್ತಾದ ಕಲ್ಪನೆಗಳನ್ನು ಕಡೆದಿದ್ದಾರೆ. ಕಲ್ಪಕತೆ ಮತ್ತು ಭಾಷೆಯ ಆರ್ದ್ರ ಗುಣಗಳನ್ನು ಬಳಸಿಕೊಂಡು ಅಖಂಡವಾದ ಇಡೀ ಕವಿತೆಯನ್ನು ಹೇಗೆ ಕಟ್ಟುವಲ್ಲಿ ಸಾರ್ಥಕ ಪಡೆಯಬಹುದು ಎನ್ನುವುದಕ್ಕೆ ಇಲ್ಲಿನ ಕವಿತೆಗಳು ಸಾಕ್ಷಿಯಾಗಿವೆ. ಒಟ್ಟು ೬೬ ಕವಿತೆಗಳ ಸಂಕಲನ ಇದು. ಇಲ್ಲಿ  ಅಮ್ಮ, ಮುಂಜಾವು, ದೇವರು, ಪ್ರಕೃತಿ, ಬೆಳಕು, ರಾತ್ರಿ, ಕನಸು, ರೋಮಾಂಚನ, ಹೂವು, ನಂಬಿಕೆ, ಬದುಕು, ಭ್ರಮೆ, ಏಕಾಂತ, ತವಕ... ಹೀಗೆ ವಿವಿಧ ವಿಷಯಗಳ ಕುರಿತಾದ ಕವಿತೆಗಳಿವೆ. ಕೆಲವು ಕವಿತೆಗಳ ಕುರಿತು ಗಮನಿಸುವುದಾರೆ-   ಮೊದಲ ಕವನ ‘ನೆಲ ಜಲ ವಾಯು’ ಇದರಲ್ಲಿ, ಶತಮಾನಗಳಿಂದ ಪ್ರಕೃತಿಯ ಅಂಗಗಳಾಗಿ ಭೂಮಿ, ನೀರು, ವಾಯುಗಳಿವೆ. ಯುದ್ಧ, ಕ್ರಾಂತಿಯಂತಹ ಘಟನೆಗಳನ್ನು ಈ ಭೂಮಿ ಕಂಡಿದೆ. ಆದರೂ ನಾವ...
Image
    ಜೀವರಶ್ಮಿ ತಾಗಿದಂತಹ ಅನುಭವದ  ‘ಸಾಸಿವೆ ತಂದವಳು’    ‘ಸಾಸಿವೆ ತಂದವಳು’ ಇದರ ಅಡಿಬರಹವೇ ಹೇಳುವಂತೆ ಇದೊಂದು ಸ್ಫೂರ್ತಿದಾಯಕ ಹೋರಾಟದ  ಕೃತಿ. ಇದರ ಲೇಖಕಿ ಬಿ ವಿ ಭಾರತಿ. ನಾವು ಕಂಡಿರದ ಕ್ಯಾನ್ಸರ್ ಜಗತ್ತನ್ನು ನಮ್ಮೆದುರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಎಲ್ಲೋ ದೂರದಿಂದ ನಾವು ದುರ್ಬೀನಿನಿಂದ  ನೋಡಿದ. ಕೇಳಿದ  ಜಗತ್ತು ಇದಲ್ಲ. ಇದು ನಮ್ಮೊಳಗಿನ ಕತೆ ಎಂಬಂತೆ ತಮ್ಮ ಅಂತರಂಗದ ನೋವು, ನಲಿವು, ಭೀತಿ ಎಲ್ಲಕ್ಕೂ ಆಹ್ವಾನವಿತ್ತು ಹೊರ ಜಗತ್ತನ್ನು ತೆರೆದಿಟ್ಟಿದ್ದಾರೆ.  ಈ ಕೃತಿಯಲ್ಲಿ ಲೇಖಕಿ ತನ್ನಲ್ಲಿ ಕ್ಯಾನ್ಸರ್ ಇದೆ ಎಂದು ಗುರುತಿಸಿದ ಕ್ಷಣದಿಂದ ತನ್ನ ದೇಹಕ್ಕೆ ಕ್ಯಾನ್ಸರ್ ಆಗಿಲ್ಲ ಎಂಬ ಕ್ಷಣದವರೆಗಿನ ದೀರ್ಘ ಪಯಣದ ಅನುಭವಗಾಥೆಯನ್ನು ತೆರೆದಿಟ್ಟಿದ್ದಾರೆ. ಕ್ಯಾನ್ಸರಿನ ನೆಪದಲ್ಲಿ ಲೇಖಕಿಯ ಒಳಗಿದ್ದ ಅಪೂರ್ವ ಪ್ರತಿಭೆ ಹೊರಬಂದಿರುವುದನ್ನು ಕಾಣಬಹುದು. ತಮ್ಮ ಅಂತರಂಗದ ಅಸಹನೀಯವಾದ ಯಾತನೆಯ ಕಥೆಯನ್ನೂ, ಅದರ ಕೊಂಬು ಹಿಡಿದು ಸೆಣೆಸಿ ಗೆದ್ದ್ದು ನಿಲ್ಲುವ ಜೀವನೋತ್ಸಾಹದ ದಿವ್ಯ ಕ್ಷಣಗಳನ್ನೂ ಸೆರೆಹಿಡಿದಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ  ಓದಬೇಕಾದ ಕೃತಿ ಇದು. ವೈದ್ಯರ ಭರವಸೆಯಲ್ಲಿ ರೋಗಕ್ಕೆ ಅರ್ಧ ಪರಿಹಾರವಿದೆ. ದೇಹದಲ್ಲಿ ಕಾಣುವ ವ್ಯತಾಸಗಳನ್ನು, ರೋಗದ ಪ್ರಾರಂಭಿಕ ಲಕ್ಷಣಗಳನ್ನು ಉದಾಸೀನ ಮಾಡಬಾರದು ಎಂಬ ಕಿವಿಮಾತು ಸಹ ಇದರಲ್ಲಿದೆ. ಇಲ್ಲಿ ಲೇಖಕಿ ತಮ್ಮ...
Image
 ಜೀವನದ ಏಳುಬೀಳುಗಳ    “ಬದುಕಿನ ಅಲೆ’ ‘ಬದುಕಿನ ಅಲೆ’ ಈ ಕಥಾ  ಸಂಕಲನವನ್ನು ಬರೆದವರು ಕಲಬುರ್ಗಿಯ ಡಾ. ಶ್ರೀದೇವಿ ಎಲ್. ರಾಠೋಡ್.  ಕೃತಿಯಲ್ಲಿ ಒಟ್ಟು ಏಳು ಕಥೆಗಳಿವೆ. ಇವೆಲ್ಲವೂ ನಮ್ಮ ಬದುಕಿಗೆ ಸಂಬಂಧಿಸಿದವು.  ಜೀವನ ಹೇಗೆಲ್ಲ ಸಾಗುತ್ತದೆ, ಮನುಷ್ಯ ಏನೇನು ಅನುಭವಿಸಬೇಕಾಗುತ್ತದೆ. ಮನುಷ್ಯನ ಸ್ವಾರ್ಥಕ್ಕೆ ಸಂಬಂಧಿಸಿದ ಕಥೆಗಳಿವೆ. ನಮ್ಮ ಜೀವನದಲ್ಲಿ ನಡೆಯುತ್ತಿರುವ, ನಡೆದ  ಅಥವಾ ಸುತ್ತಮುತ್ತಲು ನಾವು ಕಾಣುತ್ತಿರುವ ವಿಷಯಗಳಾದರೂ ಅದನ್ನು ಕೆಲವು ನಿದರ್ಶನಗಳ ಮೂಲಕ ನಿರೂಪಿಸಿ, ಓದುಗರನ್ನು ಸೆಳೆಯುವಂತೆ ಮಾಡಿದ್ದಾರೆ. ಹಾಗಾಗಿ ಇವು ನಮ್ಮ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತವೆ.    ಶ್ರೀದೇವಿಯವರ ಚೊಚ್ಚಲ ಕಥಾ ಸಂಕಲನ ಇದಾಗಿದೆ. ಕಥೆಗಳ ಭಾಷೆ ಸರಳವಾಗಿದ್ದು, ಬಯಲುಸೀಮೆಯ ಭಾಷೆ ಹೆಚ್ಚು ಬಳಕೆಯಾಗಿದೆ. ಕಥಾತಂತ್ರ ಬಹಳ ಚಂದವಾಗಿದೆ. ಪ್ರತಿ ಕಥೆಗಳೂ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿವೆ.    ‘ಆತ್ಮ’  ಇದು ಜನ್ಮ ಜನ್ಮಾಂತರದ ಕಥೆ ಇದೆ. ಸೃಷ್ಟಿಯಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಸಾವು ತಪ್ಪಿದ್ದಲ್ಲ. ಪ್ರಕೃತಿ ತನ್ನ ಒಡಲಿನಲ್ಲಿ ಅನೇಕ ಜೀವಗಳನ್ನು ಸೃಷ್ಟಿಸಿದರೂ ಅವುಗಳ ಆಹಾರ ಸರಪಳಿ, ರಚನೆ ವಿಶಿಷ್ಟವಾದದ್ದು. ತಮ್ಮ ಬದುಕಿಗಾಗಿ ಹೋರಾಟ ಮಾಡುತ್ತಾ, ತಮ್ಮ ಸಂತತಿ ಮುಂದುವರಿಸುತ್ತವೆ. ಒಂದನ್ನು ಮತ್ತೊಂದು ತಿಂದು ಬದುಕುತ್ತವೆ. ಎಲ್ಲ ಜೀವಿಗಳಿಗೂ...
Image
  ಸಂವೇದನಾಶೀಲರನ್ನು ಕಾಡುವ  ‘ಕಾಳ ಮಾವನ ಕಡೆ ದಿನಗಳು ’ ಇದು ಮೊನ್ನೆಯಷ್ಟೇ ಬಿಡುಗಡೆಯಾದ ಕೃತಿ. ‘ಕಾಳ ಮಾವನ ಕಡೆ ದಿನಗಳು’ ಇದು ಲಂಕೇಶ ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದ ಬಿ. ಚಂದ್ರೇಗೌಡ ಅವರ ಕೃತಿ. ‘ಕಟ್ಟೆ ಪುರಾಣ’ ಅಂಕಣದ ಮೂಲಕ ಹೆಸರಾಗಿದ್ದ ಚಂದ್ರೇಗೌಡರು ವಿವಿಧ ಪಾತ್ರಗಳ ಮೂಲಕ ಪ್ರಜಾಪ್ರಭುತ್ವದ ಆತ್ಮವೇ ಆಗಿರುವ ಸಂವಾದದ ಸುಂದರ ಜೀವಂತಿಕೆಯು ಇದರಲ್ಲಿದೆ. ಕಾಳಮಾವನ ಸುದೀರ್ಘ ಬದುಕು ಒಂದು ನೈತಿಕ ರಾಜಕಾರಣದ ಪ್ರತಿಮೆಯಾಗಿದೆ. ಉಳಿದವರ ಮಾತು, ಒಳನೋಟ, ಸತ್ಯ ರಾಜಕಾರಣದ ಸಾಂಸ್ಕೃತಿಕ ಮುಖದಂತೆ ಕಾಣುತ್ತದೆ. ನಮ್ಮ ನೆಲದ ನಾಲಿಗೆಯ ನಿಷ್ಠೆ ಬದಲಾಗಿ ಕೀಳು ರಾಜಕೀಯ ಮುನ್ನೆಲೆಗೆ ಬಂದಿರುವ ಆತಂಕದಲ್ಲಿ ಕಾಳಮಾಮನ ಅಂತ್ಯ ಕಂಡುಬರುತ್ತದೆ.  ಕಟ್ಟೆ ಪುರಾಣದ ಸದಸ್ಯರು ರಾಜಕೀಯ ಚರ್ಚೆಯಲ್ಲಿ ಮುಳುಗಿರುತ್ತಾರೆ. ನಮ್ಮ ಕ್ಷುದ್ರ ರಾಜಕಾರಣದ ಒಂದು ನೋಟ ಇದರಲ್ಲಿದೆ. ಧರ್ಮರಾಜಕಾರಣದ ನಿಜವಾದ ಮುಖವಿದೆ. ಸಾಂಸ್ಕೃತಿಕ ಕಾಳಜಿ ಇದೆ. ಅದರ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಹಲವಾರು ಘಟನೆಗಳು ಬಂದು ಹೋಗುತ್ತವೆ.    ನಾಶವಾಗುತ್ತಿರುವ ಹಳ್ಳಿಗಳ ಬದುಕು, ಸಂಸ್ಕೃತಿ, ಹಳ್ಳಿಯನ್ನು ಬಿಟ್ಟು ಪೇಟೆಯತ್ತ ಸಾಗಿರುವ ಮಹಿಳೆಯರು, ಯುವ ಜನಾಂಗ,  ಪೇಟೆಯಲ್ಲಿ ಮನೆ ಕೆಲಸ ಮಾಡಿಕೊಂಡು ಹಳ್ಳಿಯ ಹೊಲ,ಗದ್ದೆ, ಕುಂಟೆಗಳನ್ನು ಮರೆತಿರುವವರು, ಡಿಜಿಟಲ್ ಯುಗದಲ್ಲಿ ಮನುಷ್ಯನ ನಡುವೆ ಸಂವಾದವು ಸತ್ತು ಹೋಗಿ ಗಾಢವಾದ ವಿಷಾದವನ್ನು ಹುಟ...
Image
    ಪ್ರೀತಿ, ಸರಸವೇ ಸ್ಥಾಯಿಯಾದ ‘ನನ್ನ ಪೆದ್ದಿ’  ಕೆನರಾ  ಬ್ಯಾಂಕ್‌ನ ನಿವೃತ್ತ  ಅಧಿಕಾರಿ ಎನ್ ಟಿ ಎರಿಸ್ವಾಮಿ ಅವರ ‘ನನ್ನ ಪೆದ್ದಿ’ ಈ ಕೃತಿಯಲ್ಲಿ ಪ್ರೀತಿಯದೇ ಪಾರುಪತ್ಯ. ಪ್ರೀತಿಯೆಂದ ಕ್ಷಣ ಗಂಡು -ಹೆಣ್ಣಿನ ಸಹಜ ಆಕರ್ಷಣೆಯ ಅಭಿವ್ಯಕ್ತಿ ಮಾತ್ರವಾಗಿರದೆ, ಮಗು, ಮಡದಿ, ಮನೆ ಮೊದಲಾದ ಸಾಂಸಾರಿಕ ಭಾವನೆಗಳ ಅಭಿವ್ಯಕ್ತಿಯನ್ನು ಇಲ್ಲಿ ಕವಿ ಚಿತ್ರಿಸಿದ್ದಾರೆ. ಹಾಗಾಗಿ ಇಲ್ಲಿನ ಕವನಗಳು ಎಲ್ಲಾ ಸ್ಥರದವರಿಗೂ ರುಚಿಸುತ್ತವೆ. ವಿಶೇಷವೆಂದರೆ, ಇಲ್ಲಿನ ಕವನಗಳು ಮುಕ್ತ ಛಂದಸ್ಸಿನಲ್ಲಿವೆ.     ಸಂಕಲನದಲ್ಲಿ ಒಟ್ಟು ೩೪ ಕವನಗಳು ಇವೆ.  ನವೋದಯ ಕಾವ್ಯದ ಕವಿಗಳು ಪ್ರಣಯ ಗೀತೆ, ದಾಂಪತ್ಯ ಗೀತೆಗಳನ್ನು ರಚಿಸಿದ್ದಾರೆ. ಈ ಕವನ ಸಂಕಲನದಲ್ಲಿಯೂ ಸಹ ಕವಿ ಎರಿಸ್ವಾಮಿಯವರು ಪ್ರೀತಿ ಸರಸವೇ ಸ್ಥಾಯಿಯಾಗಿದೆ. ಗಂಡ- ಹೆಂಡತಿಯ ಅತಿಯಾದ ಪ್ರೀತಿಯೇ ಒಬ್ಬರನ್ನೊಬ್ಬರು ಪೆದ್ದ-ಪೆದ್ದಿ ಎಂದು ಕರೆಯುವ ಸಲಿಗೆಯನ್ನು ತಂದಿದೆ. ಆದ್ದರಿಂದಲೇ  ಇಂದ್ರಲೋಕವನೊಲ್ಲೆ ಚಂದ್ರಲೋಕವನೊಲ್ಲೆ ಇಂದಿರೆಯು ನೀನಿರಲು ನಾಕವಿಲ್ಲೆ ಎಂದು ಅವನು ಹೇಳಿದರೆ ಅದಕ್ಕೆ ಉತ್ತರವಾಗಿ ಆಕೆ  ಅನ್ಯ ದೇವರಿಗೆಲ್ಲ ಕೈಯ ಮುಗಿವುದು ಬಿಟ್ಟೆ  ಎದೆಯೊಳಗೆ ನಿನ್ನದೇ  ಜಪವನಿಟ್ಟೆ (ಜೊತೆಗಿರುವೆ ಪೆದ್ದ ಕವನ)  ಎಂದು ಉತ್ತರಿಸುತ್ತಾಳೆ. ಪ್ರೀತಿಯಿಂದಲೇ ಬದುಕನ್ನು ನಾಕವಾಗಿಸುವ ಹೆಣ್ಣು ಕವಿಯ ಮನಸ್ಸನ್ನು ಆವರಿಸಿ...
Image
 ಬೇಹುಗಾರರ ಬದುಕು- ಬವಣೆ ಚಿತ್ರಿಸುವ ‘ಪಾಕ್‌ನಲ್ಲಿ ನಮ್ಮ ಧುರಂಧರರು’   ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ. ವಿ. ಗುರುಪ್ರಸಾದ್ ಅವರ ಹೊಚ್ಚ ಹೊಸ ಕೃತಿ ಇದು. ‘ಪಾಕ್‌ನಲ್ಲಿ ನಮ್ಮ ಧುರಂಧರರು’ ಇದರಲ್ಲಿ  ಬೇಹುಗಾರರ ಬದುಕು- ಬವಣೆಯನ್ನು ಚಿತ್ರಿಸಿದ್ದಾರೆ.   ಬೇಹುಗಾರಿಕೆ ಎಂದರೇನು, ಇದಕ್ಕೆ ಯಾರು ಸೇರಬಹುದು, ಸೇರಿದವರು, ಸೇರುವವರು ಹೇಗಿರಬೇಕು, ವಿವಿಧ ದೇಶಗಳು ಬೇಹುಗಾರಿಕೆ ನಡೆಸುವುದೇತಕ್ಕೆ, ಪಾಕಿಸ್ಥಾನದಲ್ಲಿ ಭಾರತೀಯರ ಗೂಢಚಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಕಥೆ ಏನಾಗಿದೆ, ಎಷ್ಟು ಜನ ವಾಪಸ್ ಮರಳಿದ್ದ್ದಾರೆ. ಇನ್ನೆಷ್ಟು ಜನ ಅಲ್ಲಿಯ ಜೈಲಿನಲ್ಲಿ ಕೊಳೆಯುತ್ತಿದ್ದ್ದಾರೆ, ಅಲ್ಲಿ ಸಿಗುವ ಶಿಕ್ಷೆ,  ಹಿಂಸೆ ಎಂತಹುದು, ಭಾರತಕ್ಕೆ ಮರಳಿ ಬಂದರೂ ಇಲ್ಲಿ ಅವರಿಗೆ ಯಾವ ರೀತಿಯ ಜೀವನ ಎದುರಾಗುತ್ತದೆ ಎನ್ನುವುದನ್ನು ಮನಸೆಳೆಯುವಂತೆ ಇಲ್ಲಿ ಚಿತ್ರಿಸಿದ್ದಾರೆ. ಇದೊಂದು  ಅಪಾಯಕಾರಿ ವೃತ್ತಿ. ಇಲ್ಲಿ ಎಲ್ಲರೂ ಸಲ್ಲುವುದಿಲ್ಲ. ಧೈರ್ಯ, ಸ್ಥೈರ್ಯ, ಗಟ್ಟಿ ಗುಂಡಿಗೆ, ಹುಮ್ಮಸ್ಸು, ತಾಳ್ಮೆ ಮತ್ತು ಅಪಾಯವನ್ನೆದುರಿಸುವ ಶಕ್ತಿ, ಮಾತಿನಲ್ಲೇ ಇತರರನ್ನು ಮರುಳು ಮಾಡುವ ಕಲೆ, ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಉಪಾಯ, ಹಿಂಸೆಯ ಸಹಿಷ್ಣುತೆ, ಜೊತೆಗೆ ಸಾವಿನ ಚಿಂತೆಯನ್ನೂ ಬಿಟ್ಟು ಅದನ್ನೆದುರಿಸಲು ತಯಾರಾಗಿರಬೇಕು ಎನ್ನುವ ಮಾಹಿತಿಯನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬೇಹುಗಾರಿಕೆ ಬಗ್...
Image
  ದ್ರೌಪದಿಯ ವ್ಯಕ್ತಿತ್ವದ ಹೊಸ ರೂಪ ಪರಿಚಯಿಸುವ ‘ದ್ರೌಪದೀ ಸಮೀಕ್ಷೆ’   ‘ದ್ರೌಪದೀ ಸಮೀಕ್ಷೆ’ ಕೃತಿಯು ದ್ರೌಪದಿಯ ಪಾತ್ರದ ಸಂಕೀರ್ಣ ಪ್ರಪಂಚದ  ಕುರಿತಾಗಿದೆ. ಅವಳು ಅತಿ ಸೂಕ್ಷ್ಮ ನೆಲೆಯಲ್ಲಿ ದಮನಕ್ಕೆ ಒಳಗಾದ  ರೀತಿ, ಪಂಚಪಾಂಡವರ ಪತ್ನಿಯಾಗಿ ನಲುಗುತ್ತಲೇ ಇದ್ದ ಅವಳ ಭಾವನೆಗಳು, ಬದುಕಿನುದ್ದಕ್ಕೂ ಒಂಟಿಯಾಗಿಯೇ ಉಳಿದ ಅವಳ ರಿಕ್ತತೆಗಳು, ಅವಳ ವ್ಯಕ್ತಿತ್ವದ ಹೊಸ ರೂಪವನ್ನು ಪರಿಚಯಿಸುವಂಥದ್ದು. ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಮಣಿಮಾಲಿನಿ ವಿ. ಕೆ. ಈ ಕೃತಿಯನ್ನು ರಚಿಸಿದ್ದಾರೆ. ಪ್ರಸ್ತುತ ಕೃತಿಯು ಒಂದು ಆಸಕ್ತಿಕರ ವಿಷಯವನ್ನು,  ಭಾವನಾತ್ಮಕ ನೆಲೆಯಲ್ಲಿ ಕಟ್ಟಿಕೊಡುತ್ತದೆ. ದ್ರೌಪದಿಯ ಬಗ್ಗೆ ಹಲವು ಕೃತಿಗಳು ಬಂದಿವೆ. ಆದರೆ ಇಲ್ಲಿ ವ್ಯಾಸ ಭಾರತದ ಹಿನ್ನೆಲೆಯೊಂದಿಗೆ ಕನ್ನಡದ ‘ಪರ್ವ’, ಮರಾಠಿಯ ‘ಮೃತ್ಯುಂಜಯ’ ಮತ್ತು ಒರಿಯಾ ಭಾಷೆಯ ‘ಯಾಜ್ಞ ಸೇನಿ’  ಎಂಬ ಕಾದಂಬರಿಗಳಲ್ಲಿ ಮೂಡಿದ ದ್ರೌಪದಿಯ ತೌಲನಿಕ ವಿವೇಚನೆಯನ್ನು ಲೇಖಕಿ ಮಾಡಿದ್ದಾರೆ. ದ್ರೌಪದಿಯ ವ್ಯಕ್ತಿತ್ವವು ಅವಳ ಸಂಕೀರ್ಣವಾದ ಸ್ವರೂಪದಿಂದಾಗಿ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. ಅವಳ ಲೋಕೋತ್ತರವಾದ ಸೌಂದರ್ಯ ಮತ್ತು ಗುಣ ಸಂಪನ್ನತೆಗಳು, ಹೆಣ್ತನದ ಆದರ್ಶದ ಕಲ್ಪನೆಗಳು ವಿಶಿಷ್ಟವಾದವು ಮತ್ತು  ಪಾಂಡವರ ಒಗ್ಗಟ್ಟಿನ ಮೂಲವಾಗಿದ್ದವು. ತನ್ನ ಮಿತಿಗಳನ್ನು ಒಪ್ಪಿಕೊಂಡು ...
Image
 ಹಾಸ್ಯಕಥಾರೂಪದ  ‘ಪಾರಿವಾಳಗಳು’ ‘ಪಾರಿವಾಳಗಳು’ ಇದೊಂದು ಲಲಿತ ಪ್ರಬಂಧದ ಕೃತಿ. ವಿಠಲ್ ಶೆಣೈ ಅವರು ಇದರ ಲೇಖಕರು. ಹಾಸ್ಯಪ್ರಜ್ಞೆ ಇಟ್ಟುಕೊಂಡು ಗಂಭೀರವಾಗಿ ಬರೆದ ಪುಸ್ತಕವಿದು. ಇದನ್ನು ಓದಿ ನಕ್ಕುಬಿಡುವುದಷ್ಟೇ  ಅಲ್ಲ, ಕೆಲವು ಸಂದರ್ಭಕ್ಕನುಗುಣವಾಗಿ ನೆನೆಪಾದಾಗಲೂ ಮತ್ತೆ ನಮ್ಮನ್ನು ನಗಿಸುತ್ತವೆ. ವಿಷಯಗಳೂ ಸಹ ನಮ್ಮ ಸುತ್ತಮುತ್ತ ನಡೆಯುವಂಥವೇ ಆಗಿದ್ದರೂ,  ಅದನ್ನು ಪ್ರಬಂಧ ರೂಪದಲ್ಲಿ ಬಹುಸುಂದರವಾಗಿ ಇಳಿಸಿದ್ದಾರೆ. ಅದರಲ್ಲಿ ಹಾಸ್ಯ ಎಲ್ಲೆಲ್ಲಿ ಅವಶ್ಯವಿದೆಯೋ ಅಲ್ಲೆಲ್ಲ ತುಂಬಿದ್ದಾರೆ. ಏನೇ ಇದ್ದರೂ ನಕ್ಕು ಹಗುರವಾಗಿಸುವ ಕೃತಿ.  ಇಲ್ಲಿರುವ ಅನುಭವಗಳೆಲ್ಲ ತನ್ನ ಜೀವನದಲ್ಲಿ ಕಂಡುಂಡಂಥವು ಎಂದು ಹೇಳಿದ್ದಾರೆ. ಉತ್ತಮ ವಿಷಯದ ಪ್ರಬಂಧದೊಂದಿಗೆ  ಹಾಸ್ಯವೂ ಸಾಕಷ್ಟು ಮೇಳೈಸಿದೆ. ಎರಡನ್ನೂ ಸ ಬೆರೆಸಿದ ಜಾಣ್ಮೆ ಮೆಚ್ಚತಕ್ಕದ್ದು. ಈ ಕೃತಿಯಲ್ಲಿ  ೧೨ ಕಿರು ಪ್ರಬಂಧಗಳಿವೆ. ಅವು ಒಂದಕ್ಕಿಂತ ಒಂದು ಚೆಂದವಾಗಿವೆ. ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತಹ ಕೃತಿ ಇದು.     ಪ್ರಬಂಧದ ಸಾರಾಂಶ:   ಪಾರಿವಾಳಗಳು  ಅಕ್ಕಪಕ್ಕದ ಮನೆ, ಕಟ್ಟಡದಿಂದ ಹಾರಿ ಬರುವ ಪಾರಿವಾಳಗಳು ಲೇಖಕರ ಮನೆಯ ಬಾಲ್ಕನಿಯಲ್ಲಿ ಕೂತು ಸರಸ -ವಿರಸ ಮಾಡಿ, ಕೊನೆಯಲ್ಲಿ ಗಲೀಜು ಮಾಡಿ ಹೋಗುವುದು, ಇದನ್ನು ಕ್ಲೀನ್ ಮಾಡಲು ಕೆಲಸದಾಕೆ ಹೆಚ್ಚುವರಿ ಹಣ ಕೇಳುವುದು, ಪಾರಿವಾಳಗಳ ಹೊಲಸು ಕೆಳಗಿನ ...
Image
 ಸುಂದರ ಕೌಟುಂಬಿಕ ಜೀವನ ಬಿಂಬಿಸುವ    ‘ಬದುಕಿನ ಆಟ’  ‘ಬದುಕಿನ ಆಟ’ ಇದು ಕಿರುನಾಟಕದ ಕೃತಿ. ಮೂರು ನಾಟಕಗಳು ಇದರಲ್ಲಿವೆ.  ಗೀತಾ ಶೇಷಾದ್ರಿ ಇದರ ಲೇಖಕಿ. ಅಂಚೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಗೀತಾ ಅಲ್ಲಿನ ಅನುಭವ, ಕೆಲಸ, ಕಂಡ ಕಟು ಸತ್ಯವನ್ನು ಯಾವುದೇ ಅತಿರೇಕ- ಅಬ್ಬರವಿಲ್ಲದೆ ಚಿಕ್ಕ-ಚೊಕ್ಕದಾಗಿ ನಾಟಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.  ಇದರಲ್ಲಿ ಅಂಚಾಯಣ, ಋಣಾನುಬಂಧ ಮತ್ತು ನಿವೃತ್ತ್ತಿ ಯಾವಾಗ ಎಂಬ ಮೂರು ನಾಟಕಗಳಿವೆ.    ಅಂಚೆ ಇಲಾಖೆಯಲ್ಲಿ ಉಳಿತಾಯ ಮಾಡಿದರೆ ಲಾಭವೇನು, ಖಾಸಗಿಯವರಲ್ಲಿ ಚೀಟಿ ಕಟ್ಟಿ ನಷ್ಟಕ್ಕೊಳಗಾಗುವುದು, ಇಲಾಖೆಯ ವಿವಿಧ ಸೇವೆ, ಉಳಿತಾಯ, ವಿಮೆ ಕುರಿತಾದ ನಾಟಕ ‘ಅಂಚಾಯಣ’, ಜಾಗತೀಕರಣ ಸಂದರ್ಭದಲ್ಲಿ ಸಂಬಂಧಗಳನ್ನು ಪುನಃ ವ್ಯಾಖ್ಯಾನಿಸುವ ಮತ್ತು ಸವಾಲನ್ನು, ಅಗತ್ಯವನ್ನು ಚರ್ಚಿಸುವ ನಾಟಕ ‘ಋಣಾನುಬಂಧ’, ಮುಪ್ಪಿನ ಕಾಲದಲ್ಲಿ ತಂದೆ-ತಾಯಿಯನ್ನು ನಿರ್ಲಕ್ಷ್ಯಿಸುವ ಮಕ್ಕಳು ಎಚ್ಚೆತ್ತುಕೊಂಡರೆ ನಿವೃತ್ತ ತಂದೆ ತಾಯಿ ನೆಮ್ಮದಿಯ ಬದುಕನ್ನು ಸಾಗಿಸಬಹುದು ಎನ್ನುವುದನ್ನು ‘ನಿವೃತ್ತ್ತಿ ಯಾವಾಗ’ ವಿವರಿಸುತ್ತದೆ. ಮೂರು ನಾಟಕಗಳು ಬದುಕನ್ನು ಸಂತಸದಿಂದ ಕಳೆಯುವುದು ಹೇಗೆ?  ಕೌಟುಂಬಿಕ ಜೀವನ ಸುಂದರವಾಗಿರಬೇಕೆಂದರೆ ಏನು ಮಾಡಬೇಕು, ಒಟ್ಟು ಕುಟುಂಬದಿಂದಾಗುವ ಲಾಭವೇನು? ಮೊಮ್ಮಕ್ಕಳಿಗೆ, ಮಕ್ಕಳಿಗೆ ಪಾಲಕರ, ಅಜ್ಜ-ಅಜ್ಜಿಯರ...
Image
       ವೈವಿಧ್ಯಮಯ ಹಾಸ್ಯದ ‘ಟಿ. ಸುನಂದಮ್ಮ ಸಾಹಿತ್ಯ ವಾಚಿಕೆ’  ಟಿ. ಸುನಂದಮ್ಮ ನಾಡಿನ ಹಾಸ್ಯ ಸಾಹಿತಿಗಳಲ್ಲಿ ಅಗ್ರಮಾನ್ಯ ಲೇಖಕಿ.  ಸುನಂದಮ್ಮ ಕನ್ನಡದ ಮೊಟ್ಟಮೊದಲ ಮಹಿಳಾ ಹಾಸ್ಯ ಸಾಹಿತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.  ಇವರು ಆರು ದಶಕಗಳಿಗೂ ಮಿಕ್ಕಿ ಕನ್ನಡ ಹಾಸ್ಯ ಸಾಹಿತ್ಯ ಲೋಕದ ಸಿರಿ ಹೆಚ್ಚಿಸಿದವರು. ‘ನಾನು ಕುಡಿಯುವುದು ಕಾಫಿ. ಆದರೂ ಎಲ್ಲರೂ ಟಿ. ಸುನಂದಮ್ಮ ಎನ್ನುತ್ತಾರೆ’ ಎಂದು ಹಾಸ್ಯ ಮಾಡುತ್ತಿದ್ದರು. ಮೊನಚಾದ ಹಾಸ್ಯದ ಮೂಲಕವೇ ಸಮಾಜಕ್ಕೆ ಚಿಕಿತ್ಸೆ ನೀಡುವ ವೈದ್ಯರಾಗಿದ್ದರು.  ಪ್ರಸ್ತುತ ‘ಟಿ. ಸುನಂದಮ್ಮ ಸಾಹಿತ್ಯ ವಾಚಿಕೆ’ ಕೃತಿಯನ್ನು  ಅವರ ಉತ್ತರಾಧಿಕಾರಿ ಎಂದೇ ಹೆಸರಾದ ಪ್ರೊ. ಭುವನೇಶ್ವರಿ ಹೆಗಡೆ ಅವರ ಹಾಸ್ಯಗಳನ್ನು ಇಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ ಪ್ರಸ್ತುತ ಕೃತಿಯಲ್ಲಿ ಹಾಸ್ಯ ಲೇಖನಗಳು ಸುಮಾರು ೪೮ ರಷ್ಟಿವೆ. ನಂತರ ಹಾಸ್ಯ ಕವನಗಳು, ಲೇಖನಗಳು, ನಾಟಕಗಳು ಇವೆ.ಈ  ಕೃತಿಯಲ್ಲಿ ಅವರ ಹಾಸ್ಯವನ್ನು ಸಮಗ್ರ ಕೃತಿಯ ಮೂಲಕ ಸ್ಮರಿಸಲಾಗಿದೆ.  ಮೊಗೆದಷ್ಟು ಸಂತೋಷ ನೀಡುವ ಸಾಗರವೆಂದರೆ ನಗೆ ಸಾಗರ ಒಂದೇ, ‘ಕೊರವಂಜಿ’ಯ ಖಾಯಂ ಲೇಖಕರಾಗಿ ಮೆರೆದ ಸುನಂದಮ್ಮ ಅವರ ಹಾಸ್ಯ ಪ್ರಜ್ಞೆ, ನೋಟದ ಹರವು ವಿಶಾಲವಾದವು. ಸರಸು ಮತ್ತು ಮೈಲಾರಯ್ಯ ದಂಪತಿಗಳ ಮೂಲಕ ಸಮಾಜದ ಅನೇಕ ಸಂಗತಿಗಳಿಗೆ ಹಾಸ್ಯದ ನೀರೆರೆದು ಪೋಷಿಸಿ ಜನತೆಗೆ ನಗೆ ಫಲಗಳನ್ನು ಉಣಬಡಿಸುವುದರಲ್ಲಿ ಸುನ...
Image
 ಭಾವನಾತ್ಮಕ ಸಂಗತಿಗಳ  ‘ಕಾರ್ಮೋಡ ಸರಿದಾಗ’ ‘ಕಾರ್ಮೋಡ ಸರಿದಾಗ’ ಈ ಕಾದಂಬರಿಯನ್ನು  ನೀವು ಕೌಟುಂಬಿಕ ಎಂದಾದರೂ ಹೇಳಬಹುದು, ಪ್ರೀತಿ- ಪ್ರೇಮಕ್ಕೆ ಸಂಬಂಧಿಸಿದ್ದು ಎಂದಾದರೂ ಹೇಳಬಹುದು. ಏಕೆಂದರೆ ಇವೆರಡೂ ಹಂದರಗಳನ್ನು ಒಳಗೊಂಡಿದೆ. ಇಲ್ಲಿ ಕುಟುಂಬಗಳ ಕಥೆಯಲ್ಲೇ ಪ್ರೀತಿ- ಪ್ರೇಮವೂ ಸೇರಿದೆ. ಹೆಚ್ಚಾಗಿ ಮಹಿಳಾ ಶೋಷಣೆಯ ಕಥೆಗಳೇ ಕಾದಂಬರಿಗಳಲ್ಲಿ ಕಂಡುಬರುತ್ತವೆಯಾದರೂ ಇಲ್ಲಿ ಪುರುಷನ ಶೋಷಣೆಯ ಬಗ್ಗೆ ಇದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ರೂಪಕಲಾ ಕೆ ಎಂ ಇದರ ಲೇಖಕಿ.  ಇದರಲ್ಲಿ ಮೂರು ಕುಟುಂಬಗಳ ಕಥೆ ಇದೆ. ನಾಯಕನ ಮಾನಸಿಕ ತುಮುಲ, ಸಹನಶೀಲತೆಯ ಮಿತಿಯನ್ನು ಚೆನ್ನಾಗಿ ಬಿಂಬಿಸಿದ್ದಾರೆ. ಮಲೆನಾಡಿನ ಕೆಲವು ನೆನೆಪುಗಳನ್ನೂ ಕಟ್ಟಿಕೊಟ್ಟಿದ್ದಾರೆ. ಮುಂಬೈ ಜೀವನದ ಚಿತ್ರಣವೂ ಇದೆ. ಒಟ್ಟಿನಲ್ಲಿ ಭಾವನಾತ್ಮಕ ಸಂಗತಿಗಳಿವೆ. ತೆಳುವಾದ ಹಾಸ್ಯವಿದೆ, ಗಂಭೀರತೆ ಇದೆ. ಮಾನವೀಯತೆ ಇದೆ. ಇದಕ್ಕಿಂತ ಮಿಗಿಲಾಗಿ ಹೆಂಡತಿಯಾದವಳು ಗಂಡನನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ಳಬಹುದು ಎನ್ನುವುದೂ ಸುಂದರವಾಗಿ ಚಿತ್ರಿತವಾಗಿದೆ.    ಜೀವನದಲ್ಲಿ ನೋವು ಅನುಭವಿಸಿದವನ ಪ್ರೇಮ ವೈಫಲ್ಯ ಒಂದೆಡೆಯಾದರೆ, ಇನ್ನೊಂದೆಡೆ ಮದುವೆಯಾದವಳಿಂದ ದಬ್ಬಾಳಿಕೆ, ಶೋಷಣೆ, ಚಿತ್ರಹಿಂಸೆ. ಬಹು ವರ್ಷಗಳ ನಂತರ ತನ್ನ ಹಳೆಯ ಪ್ರೇಮಿಯ ಕಥೆ ಕೇಳಿ ನೊಂದು ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುವುದು, ನಂತರ ಅವಳಿಗೇ ಉಂಗುರ ತೊಡಿಸುವುದು.. ಹೀ...
Image
    ‘ದೇವರು’ ‘ದೇವರು’ ಇದೊಂದು ಅತ್ಯಂತ ಪ್ರಸಿದ್ಧ ಮತ್ತು ಚಿಂತನಾರ್ಹ ಕೃತಿ. ಎ. ಎನ್ ಮೂರ್ತಿರಾವ್ ಇದರ ಲೇಖಕರು. ೧೫ಕ್ಕೂ ಹೆಚ್ಚು ಬಾರಿ ಮರುಮುದ್ರಣ ಕಂಡ ವೈಚಾರಿಕ ಕೃತಿ. ಈ  ಕೃತಿಯ ಬಗ್ಗೆ ಎಷ್ಟೋ ಚರ್ಚೆ ಆಗಿದೆ. ಆದರೂ ಕೃತಿ ಮಾತ್ರ ತನ್ನ ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಮತ್ತೆ ಓದುಗರನ್ನು  ಸೆಳೆಯುತ್ತಿರುವುದು ಇದರ ವೈಚಾರಿಕತೆಗೆ ಸಾಕ್ಷಿ. ದೇವರು ಇದ್ದಾನೆಯೇ, ಇಲ್ಲವೇ? ಇದ್ದರೆ ಹೇಗಿದ್ದಾನೆ. ದೇವರು ಹೇಗಿರಬೇಕು. ಕಲ್ಲಿನಲ್ಲಿರುವುದೆಲ್ಲ ದೇವರೇ? ದೇವರು ಕೇಡಿತನವನ್ನು ಏಕೆ ಸೃಷ್ಟಿಸಿದ, ಭ್ರಷ್ಟರನ್ನು ಏಕೆ ಕಾಪಾಡುತ್ತಾನೆ? ನಂಬಿಕೆ, ಕಲ್ಪನೆ ದೇವರೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ಮನಮುಟ್ಟುವಂತೆ ಇಲ್ಲಿ ಬರೆದಿದ್ದಾರೆ.   ಕೆಲವು ವಿಷಯಗಳನ್ನು ಸತ್ಯ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ, ಅವು ಸುಳ್ಳು ಎಂದೂ ಸಹ ಸಾಬೀತುಪಡಿಸಲು ಸಾಧ್ಯವಿಲ್ಲ. ದೇವರ ವಿಷಯದಲ್ಲೂ ಹೀಗೆಯೇ ಆಗಿದೆ. ಸರ್ವಜ್ಞನೂ, ಸರ್ವಶಕ್ತನೂ ಆದ ದೇವರು ಇರುವುದು ಸಾಧ್ಯವಿಲ್ಲ ಎಂದು ವಾದಿಸುವುದಾರೆ ಹಾಗಾದರೆ ದೇವರು ಹೇಗಿದ್ದಾನೆ, ಹೀಗೆಯೇ ಇರಬೇಕೆಂಬ ನಿಯಮವಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಅವರವರ ಕಲ್ಪನೆಯಷ್ಟೆ. ಯಾವತ್ತೂ ನಂಬಿಕೆಗಳು ನಂಬಿಕೆಗಳೇ. ನಮ್ಮ ನಂಬಿಕೆ ನಮಗೆ, ನಿಮ್ಮ ನಂಬಿಕೆ ನಿಮಗೆ. ಇದರಿಂದ ಸಮಾಜದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗದಂತೆ ನೋಡಿಕೊಳ್ಳಬೇಕು. ಇದು ಎಲ್ಲ ಮತಧರ್ಮಕ್ಕ್ಕೂ ಅನ್ವಯವಾಗುತ್...