ದುಕಿಗೆ ಬೇಕಾದ ಬೆಳಕಿನ ಬೀಜ ‘ಅಪರೂಪದ ಪುರಾಣ ಕಥೆಗಳು’ ಮಹಾಭಾರತ, ರಾಮಾಯಣ, ಭಾಗವತ, ಕಥಾಸರಿತ್ಸಾಗರಗಳ ಕಥಾಕೋಶಗಳಿಂದ ಆಯ್ದ, ಬದುಕಿಗೆ ಅವಶ್ಯವಾದ ಕಥೆಗಳನ್ನು ಹಿರಿಯರು ಹೇಳಿದ್ದನ್ನು ನೆನಪಿಟ್ಟುಕೊಂಡು ಸಂಗ್ರಹಿಸಿದ ಕಥೆಗಳ ಸಂಕಲನವೇ ಅಪರೂಪದ ಪುರಾಣ ಕಥೆಗಳು. ಲೇಖಕಿ ಆಶಾ ರಘು ಈ ಕಥೆಗಳನ್ನು ಸರಳ, ಸುಂದರವಾಗಿ, ಜೊತೆಗೆ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ವಿಶೇಷವಾಗಿ ನಮ್ಮ ಮಕ್ಕಳಿಗೆ ಇಂತಹ ಪುರಾಣದ ಕಥೆಗಳ ಅವಶ್ಯಕತೆ ಇಂದು ಅವಶ್ಯವಿದೆ. ಶಾಲಾ ಪಠ್ಯಗಳನ್ನು ಹೊರತುಪಡಿಸಿದರೆ ಮಳೆ, ಬೆಳೆ, ಕಾಡು, ಕೃಷಿ, ಪುರಾಣ -ಇತಿಹಾಸಗಳ ಬಗ್ಗೆ ನಮ್ಮ ಮಕ್ಕಳಿಗೆ ಮಾಹಿತಿ ಇಲ್ಲ. ಗ್ಯಾಜೆಟ್ ಲೋಕದಲ್ಲಿ ಕಳೆದುಹೋಗುತ್ತಿರುವ ಮಕ್ಕಳ ಮನಸ್ಸನ್ನು ತಂದೆ- ತಾಯಿ ಇಂತಹ ಪುರಾಣದ ಕಥೆಗಳ ಮೂಲಕ ಮರು ಕಟ್ಟುವ ಕೆಲಸವನ್ನು ಮಾಡಬೇಕಿದೆ. ಇಲ್ಲಿನ ಕಥೆಗಳು ಕೇವಲ ಮಕ್ಕಳಿಗೆ ಮಾತ್ರವಲ, ಹಿರಿಯರು ಕೂಡ ಓದಿ ತಿಳಿಯಬೇಕಾದವೇ ಆಗಿವೆ. ಸತ್ಯಕಾಮನಂತಹ ಹುಡುಗನನ್ನು ಶಿಷ್ಯನಾಗಿ ಸ್ವೀಕರಿಸಿದ ಗುರುಗಳ ಗುರುತ್ವ, ದಧೀಚಿ-ಶಿಬಿಯರ ಲೋಕಕಲ್ಯಾಣ ಗುಣ, ಚೂಡಾಮಣಿಯನ್ನು ಕಳುಹಿಸಿಕೊಟ್ಟ ಸೀತೆಯ ಸಂದೇಶದ ಹಿಂದಿನ ಅರ್ಥ, ಅರ್ಧನಾರೀಶ್ವರ ಕಲ್ಪನೆಯೊಳಗಿನ ಸಾಂಕೇತಿಕತೆ..... ಹೀಗೆ ಸುಮಾರು ೪೮ ವಿವಿಧ ಕಥೆಗಳು ಇಲ್ಲಿ ನಿರೂಪಣೆಯಾಗಿದೆ. ಈ ಕಥೆಗಳು ಓದುವ ಮೂಲಕ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕಿದೆ. ಆದ್ದರಿಂದ ಮಕ್ಕಳು ಇಂತಹವುಗಳನ್ನು ಪ...