Posts

Showing posts from March, 2025
Image
ಕಿವಿ ನಿಮಿರಿ ಸು ವ  ಇಲಿಗೆ ಅಂಜಿದ ಹುಲಿ ‘ಇಲಿಗೆ ಅಂಜಿದ ಹುಲಿ’ ಈ ಕೃತಿ ಮಕ್ಕಳ  ಕಥಾ ಸಾಹಿತ್ಯಕ್ಕೆ ಸಂಬಂಧಿಸಿದ್ದು. ‘ರಸಿಕ ಪುತ್ತಿಗೆ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಪುತ್ತೂರಿನ ಪಿ. ಸುಬ್ರಹ್ಮಣ್ಯ ಆಚಾರ್  ಬರೆದ ಕೃತಿ ಇದು. ಬಾಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿರುವ ರಸಿಕ ಪುತ್ತಿಗೆ ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು.  ಮಕ್ಕಳಿಗಾಗಿ ಕಿರು ಕಾದಂಬರಿ, ಅನೇಕ ಕಥೆ ಹಾಗೂ ನೂರಾರು ಶಿಶು ಗೀತೆಗನ್ನು ಅವರು ಬರೆದಿದ್ದಾರೆ.  ಪ್ರಸ್ತುತ ‘ಇಲಿಗೆ ಅಂಜಿದ ಹುಲಿ’ ಎಂಬ ಬಾಲಕರ ಕಥಾನಕದಲ್ಲಿ ೧೭ ಕಥೆಗಳಿವೆ. ಇವೆಲ್ಲ ನೀತಿ ಬೋಧಕವೂ, ಮನೋರಂಜಕವೂ ಆದ ಸಾಹಿತ್ಯ ಭಾಗಗಳಾಗಿವೆ. ಶೈಶವ ವಿದ್ಯಾಭ್ಯಾಸಕ್ಕೆ ಸುಗಮದಾರಿ ಎಂದು ಹೇಳಲಾಗುವ ಈ ಬಾಲಕತೆಗಳು ಬಹಳ ಉಪಯುಕ್ತವಾದವು. ಕಥೆಗಳಲ್ಲಿ ಅಲ್ಲಲ್ಲಿ ವಿನೋದ, ಹಾಸ್ಯ, ಜಗಳ, ಕಾರ್ಯ, ಚಲನೆ,  ಇತ್ಯಾದಿ ಇವೆ. ಈ ಕೃತಿಯನ್ನು ಓದಿದಾಗ ಅಲ್ಲಿನ ಪಾತ್ರಗಳು ಜೀವಕಳೆ ತುಂಬಿಕೊಂಡಿರುವುದು ಕಣ್ಣ ಮುಂದೆ ಕುಣಿಯುವುದು, ಒಂದಿಷ್ಟು ಅದ್ಭುತ ರಸವಿರುವ ಕಲ್ಪನಾಶಕ್ತಿ ಹೆಚ್ಚಿಸುವ ಕತೆಗಳಿರುವುದು ಕಂಡುಬರುತ್ತದೆ. ಪುನರುಕ್ತಿಗಳು ಮಕ್ಕಳ ಕಥಾಲೋಕದ ಒಂದು ವೈಶಿಷ್ಟ್ಯವಾಗಿದೆ. ಮಕ್ಕಳಿಗೆ ಇಷ್ಟವಾಗುತ್ತದೆ ಎಂಬ ಕಾರಣಕ್ಕೆ ಮನೆ ಮಾತಿನ ಶಬ್ದ ಇಲ್ಲಿ ಪ್ರಯೋಗಿಸಲ್ಪಟ್ಟಿದೆ . ವಾಕ್ಯಗಳು ಅತಿ ಚಿಕ್ಕವಾಗಿವೆ.  ಪಕ್ಷಿಗಳು, ಪ್ರಾಣಿಗಳು, ಕೀಟಗಳು ಎಂದರೆ ಮಕ್ಕಳಿಗೆ ಹೆಚ್...
Image
 ಸಂವೇದನೆ ತುಂಬಬಲ್ಲ ’ಪುಟ್ಟಿ ಮತ್ತು ಪಾಪು’ ‘ಪುಟ್ಟಿ ಮತ್ತು ಪಾಪು’ ಇದು ಮಕ್ಕಳ ಕವನ ಸಂಕಲನ.  ನಿಸರ್ಗ, ಬದುಕು, ಮಳೆ, ಬೆಳೆ, ಪ್ರಾಣಿ, ಅಪ್ಪ, ಅಮ್ಮ ಮೊದಲಾದವುಗಳ ಚಿತ್ರಣವನ್ನು ಮಗುವಿನ ದೃಷ್ಟಿಯಿಂದ ಕಂಡು ತೆರೆದಿಡುವ ಕೃತಿ ಇದಾಗಿದೆ. ಈ ಮೂಲಕ ಮಕ್ಕಳಲ್ಲಿ ಆದರ್ಶವನ್ನು ಬಿತ್ತುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಈ ಕೃತಿಯನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಎಂಜಿಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಆರ್ ಪಿ ಹೆಗಡೆ  ಅವರು ರಚಿಸಿದ್ದಾರೆ. ಮನಸ್ಸಿಗೆ ಸಂವೇದನೆಯನ್ನು ತುಂಬಬಲ್ಲ ಈ ಕೃತಿಯಲ್ಲಿ ಮುಂದಿನ ತಲೆಮಾರು (ಮಕ್ಕಳು) ಉದಾತ್ತವಾಗಿ ರೂಪುಗೊಳ್ಳಲು ಅವರಿಗೆ ಪ್ರಿಯವಾದ ಕವನಗಳನ್ನು ರಚಿಸಿದ್ದಾರೆ. ಉಪಯುಕ್ತವಾದ ಆಲೋಚನೆಗಳು ವಿಕಸಿತಗೊಳ್ಳಬೇಕು, ಅವರ ಚಿಂತನಾ ಕ್ರಮಕ್ಕೆ ಭದ್ರಬುನಾದಿ ಬೀಳಬೇಕು, ಪ್ರಕೃತಿ- ವಿಸ್ಮಯಗಳನ್ನು ಕಂಡು ಬೆರಗುಗೊಳ್ಳುವ ಕುತೂಹಲಕಾರಿ ಪ್ರಶ್ನೆಗಳು ಕುಡಿ ಒಡೆಯುವ ಸಂಬಂಧ ಅದಕ್ಕೆ ಆಹಾರ ಒದಗಿಸುವ ನಿಟ್ಟಿನಲ್ಲಿ ಅವರಲ್ಲಿ ವಿಚಾರ ಶಕ್ತಿ ಅರಳಿಸುವ ಜಿಜ್ಞಾಸೆಯನ್ನು ತಣಿಸುವ ಒಂದು ಆದರ್ಶ ಅಥವಾ ಮಾದರಿಯ ಕನಸನ್ನು ಕಟ್ಟಿಕೊಳ್ಳುವುದಕ್ಕೆ ಪ್ರೇರಣಾದಾಯಕವಾಗಿರುವ ಕವನಗಳನ್ನು ಇಲ್ಲಿ ರಚಿಸಿದ್ದಾರೆ. ಜಾಣತನದ ಜೊತೆಗೆ ಸದ್ಗುಣ, ಸಚ್ಚಾರಿತ್ರ್ಯ ಬೆಳೆಯುವ ರೀತಿಯಲ್ಲಿ ಮಕ್ಕಳ ಮನಸ್ಸನ್ನು ವಿಕಸಿತಗೊಳಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಇಲ್ಲಿನ ಕವಿತೆಗಳು ಹುಟ್ಟಿಕೊಂಡಿವೆ. ಈ ಕೃತಿಯಲ್ಲಿನ ...
Image
 ಮೌಲ್ಯಗಳ ದರ್ಶನ ಮಾಡಿಸುವ ‘ಮಕ್ಕಳ ಕಥಾಲೋಕ’  ‘ಮಕ್ಕಳ ಕಥಾಲೋಕ’ ಮತ್ತೂರು ಸುಬ್ಬಣ್ಣ ಅವರು ರಚಿಸಿದ ಕೃತಿಯಿದು.  ಇವರು ಶಿವಮೊಗ್ಗ  ಸಮೀಪದ ಮತ್ತೂರಿನವರು.  ಬಾಲಸುಬ್ರಹ್ಮಣ್ಯ ಎನ್ನುವ ಹೆಸರಿನ ‘ಮತ್ತೂರು ಸುಬ್ಬಣ್ಣ’ ಮಕ್ಕಳ ಕಥೆ ಹೇಳುವುದರಲ್ಲಿ ಮತ್ತು ಬರೆಯುವುದರಲ್ಲಿ ನಿಸ್ಸೀಮರು. ನಾಲ್ಕು ದಶಕಗಳ ಕಾಲ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕ, ಮುಖ್ಯಶಿಕ್ಷಕ  ವೃತ್ತಿಯಲ್ಲಿ ಕೆಲಸ ಮಾಡಿದವರು. ಮಕ್ಕಳಿಗೆ ಸಾವಿರಾರು ಕತೆ, ಕವನ ಬರೆದು ಪ್ರಕಟಿಸಿದ್ದಾರೆ. ಹಲವಾರು ರಾಜ್ಯ ಪ್ರಶಸ್ತಿಗಳು ಇವರ ಕಥಾಸಂಕಲನಕ್ಕೆ ಸಂದಿವೆ.  ‘ಮಕ್ಕಳ ಕಥಾಲೋಕ’ ದಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ, ಆಸಕ್ತಿಯನ್ನು ಕೆರಳಿಸುವ, ಪ್ರತಿಭೆಯ ಸಾಧ್ಯತೆಗಳ ಆಳವಾದ ಅರಿವಿದೆ. ಅರಳಿಸುವ, ಪ್ರೇರೇಪಿಸುವ ಕಲೆ ಲೇಖಕರಿಗೆ ತಿಳಿದಿದೆ. ಈ ಕೃತಿಯಲ್ಲಿ ಮಕ್ಕಳಲ್ಲಿ ಆಧುನಿಕತೆಯನ್ನು ತರುವ ವಿಶೇಷ ಪ್ರಯತ್ನ ಮಾಡಿದ್ದಾರೆ. ಇವು ಇಂದಿನ ಮಕ್ಕಳಿಗೆ ವಿಶೇಷವಾಗಿ ರುಚಿಸುತ್ತವೆ. ಮಕ್ಕಳಲ್ಲಿರುವ ಆದರ್ಶ ಪ್ರೇಮ, ಆದರ್ಶ ವೈಭವ, ಸುಲಭ ಪರಿಹಾರಗಳಲ್ಲಿ ನಂಬಿಕೆ, ಇವು ಅವರ ಎಲ್ಲಾ ಕಥೆಗಳಲ್ಲಿಯೂ ಎದ್ದು ಕಾಣುತ್ತವೆ. ಮಕ್ಕಳಲ್ಲಿ ಈ ಗುಣಗಳನ್ನು ಉದ್ದೀಪಿಸಿ ಪೋಷಿಸಲು ಇಲ್ಲಿ ಕಥಾಕಾರ ಸುಬ್ಬಣ್ಣನವರು ಸರಳ, ಸುಲಭ ಹರವಿನ ಭಾಷೆಯನ್ನು ಬಳಸಿರುವುದನ್ನು ಕಾಣಬಹುದು.  ಮಕ್ಕಳ ಕಥಾಲೋಕದ ಈ ಸಂಕಲನದಲ್ಲಿ ಒಟ್ಟು ೩೦ ಕಥೆಗಳಿವೆ ಪ್ರತೀ ಕತೆಯು ನೀತಿಯು...
Image
 ಬಾಲ್ಯ ಸಹಜ ಮುಗ್ಧ ಭಾಷೆಯ  ‘ಗುಬ್ಬಚ್ಚಿ’   ‘ಗುಬ್ಬಚ್ಚಿ’ ಇದು ಎಳೆಯ ಮಕ್ಕಳ ಮನಸೆಳೆಯುವ ಶಿಶು ಗೀತೆಗಳ ಸಚಿತ್ರ ಸಂಕಲನ. ಇದನ್ನು ರಚಿಸಿದವರು ಎಚ್. ವಿಧಾತ್ರಿ ರವಿಶಂಕರ್. ಇವರು ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದವರು. ಇದು ಅವರ ಚೊಚ್ಚಲ ಕೃತಿ. ಇಲ್ಲಿನ ಪದ್ಯಗಳಲ್ಲಿ ಬಾಲ್ಯ ಸಹಜ ಮುಗ್ಧ ಭಾಷೆ ಕಂಡುಬರುತ್ತದೆ.  ಇದು ಮನಸ್ಸಿಗೆ ಮುದ ಕೊಡುತ್ತದೆ. ಇಲ್ಲಿನ ಗೀತೆಗಳು ನಮ್ಮನ್ನು ಕುಣಿತಕ್ಕೊಳಪಡಿಸುತ್ತವೆ, ತಾಳ ಹಾಕಿಸುತ್ತವೆ, ಕುತೂಹಲಗಳ ಪರಿಸರವಿದೆ, ಮಕ್ಕಳ ಮೆಚ್ಚಿನ ಪ್ರಾಣಿಗಳಿವೆ, ಪರಿಸರವಿದೆ, ದೇಶಭಕ್ತಿ ಇದೆ, ವಸ್ತುಗಳ ಆಯ್ಕೆ ಚೆನ್ನಾಗಿದೆ. ಕವಯತ್ರಿ ಕೃತಕತೆಯ ಸುಳಿವಿಲ್ಲದೆ ಬರೆದಿದ್ದಾರೆ. ಇಲ್ಲಿನ ಪದ್ಯಗಳ ಕಂಪು ಮಕ್ಕಳ ಮನಸ್ಸನ್ನು ತಟ್ಟುವಂತಿದೆ. ಅವರಿಗೆ ಯಾವುದನ್ನು.  ಈ ಸಂಕಲನದಲ್ಲಿ ಸುತ್ತ ಕಾಡಿದೆ, ನವಿಲಿದೆ ಬೆಕ್ಕಿದೆ, ಮನೆ, ಶಾಲೆ, ಗೊಂಬೆ, ಗಾಳಿಪಟ, ಅಕ್ಕ, ಅಪ್ಪ, ಅಮ್ಮ, ಅಣ್ಣ, ಕಾಮನಬಿಲ್ಲು, ಬಗೆಬಗೆಯ ಹೂವುಗಳಿವೆ. ಸುತ್ತಲ ಪ್ರಕೃತಿಯನ್ನು ಕಂಡು ಅವುಗಳ ಕುರಿತು ಹಾಡು ಹೊಸೆದಿದ್ದಾರೆ. ವಿಶೇಷವಾಗಿ, ಅಂತ್ಯ ಪ್ರಾಸಕ್ಕೆ ಇಲ್ಲಿ ಆದ್ಯತೆ ಕೊಡಲಾಗಿದೆ. ಲಘು ವಿನ್ಯಾಸ ಇಲ್ಲಿ ವಿಶೇಷವೂ ಗಮನಾರ್ಹವೂ ಆಗಿದೆ. ಮಕ್ಕಳು ತಮ್ಮ ಸುತ್ತಲಿನ ಜಗತ್ತನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಈ ಕವನ ಸಂಕಲನದಲ್ಲಿ ಸುಲಭವಾಗಿ ವಿವರಿಸಲಾಗಿದೆ.  ಬಾಲ್ಯ ಇಲ್ಲಿ ಕಂಡುಂಡು ಬೆಳೆದು, ವರ್ತಮ...
Image
 ಭಾವಲೋಕಕ್ಕೆ ಸೆಳೆದೊಯ್ಯುವ ‘ಅಂತರಂಗದ ಧ್ಯಾನ’ ಕನ್ನಡ ಸಾಹಿತ್ಯದಲ್ಲಿ ಗಜಲ್‌ಗಳು ಸ್ವಲ್ಪ ಕಡಿಮೆ ಎನ್ನಬಹುದು. ಅಪರೂಪಕ್ಕೆ ಇದು ಕಂಡುಬರುತ್ತಿದೆ. ಇಂತಹ ಗಜಲ್ ಮೂಲಕ ಕೃತಿ ರಚಿಸಿದವರು  ವಿ. ನಾರಾಯಣಸ್ವಾಮಿ (ನಾನಿ). ಅದರ ಸಂಗ್ರಹವೇ ‘ಅಂತರಂಗದ ಧ್ಯಾನ’. ನಾರಾಯಣಸ್ವಾಮಿ  ಕೋಲಾರ ಜಿಲ್ಲೆಯ ಮಾಸ್ತಿಯವರು. ಬೆಂಗಳೂರಿನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾರೆ. ವಕೀಲ ವೃತ್ತಿಗೂ ಸಾಹಿತ್ಯಕ್ಕ್ಕೂ ಅಜಗಜಾಂತರವಿದ್ದರೂ ಇವರ ಗಜಲ್‌ಗಳು ಅರ್ಥಪೂರ್ಣವಾಗಿವೆ, ಸ್ವ್ವಾದಭರಿತವಾಗಿವೆ. ನಮ್ಮನ್ನು ಭಾವಲೋಕಕ್ಕೆ ಸೆಳೆದೊಯ್ಯುವ ಶಕ್ತಿಯನ್ನು ಹೊಂದಿವೆ. ಕೃತಿಯಲ್ಲಿ ಒಟ್ಟು ೬೦ ಗಜಲ್‌ಗಳಿವೆ. ಗಜಲ್ ಸಾಧಾರಣವಾಗಿ ಎಲ್ಲರಿಗೂ ದಕ್ಕುವಂತದ್ದಲ್ಲ. ಮೂಲತಃ ಅರಬ್ ನೆಲದಲ್ಲಿ ಜನಿಸಿ  ಹಲವಾರು ಭಾಷೆಗಳಲ್ಲಿ, ನೂರಾರು ದೇಶಗಳನ್ನು ಸಂಚರಿಸಿ ಉರ್ದು ಮುಖಾಂತರ ಭಾರತದ ನೆಲಕ್ಕೆ ಕಾಲಿಟ್ಟಿರುವ ಸಾಹಿತ್ಯ ಪ್ರಕಾರ. ಪ್ರೇಮದ ಉತ್ಕಟತೆ ಹಾಗೂ ವಿರಹದ ತೀವ್ರತೆಯನ್ನು ತನ್ನ ಆತ್ಮದೊಳಗೆ ಗಜಲ್ ಇಟ್ಟುಕೊಂಡಿರುವುದನ್ನು ನಾವು ಕಾಣಬಹುದು. ಗಜಲ್ ಮೇಲ್ನೋಟಕ್ಕೆ ಎಷ್ಟು ಚಂದದ ರಚನೆಯೋ ಅಂತರಂಗದಲ್ಲಿ ಇದನ್ನು ರಚಿಸಲು ಅಷ್ಟೇ ಕಷ್ಟ. ಇದಕ್ಕೆ ಅದರದೇ ಆದ ನಿಯಮಗಳಿವೆ. ಇದರ ಸೂಕ್ಷ್ಮಗಳನ್ನು ಅರಿತು ನಾರಾಯಣಸ್ವಾಮಿ ರಚನೆ  ಮಾಡಿದ್ದಾರೆ.  ನಾನಿಯವರ ಘಜಲ್‌ಗಳು ಪ್ರೀತಿ, ಪ್ರೇಮ, ಬಡತನ, ಅದರೊಳಗಿನ ಕಷ್ಟ, ನೋವು, ಯಾತನೆ, ಅಪ್ಪ- ಅಮ್ಮನ ಬವಣೆ, ಸಾಮ...
Image
ಶುದ್ಧ ಪ್ರೀತಿ- ಪ್ರೇಮದ ಹುಡುಕಾಟದ  “ಕಿಲಿಗ್” ಪ್ರಕಾರ- ಮಿನಿಕಾದಂಬರಿ ಲೇಖಕರು- ಜಯರಾಮಾಚಾರಿ ಪ್ರಕಾಶಕರು- ಸಸಿ ಪ್ರಕಾಶನ, ನಾಗರಬಾವಿ ಬೆಂಗಳೂರು. ಪುಟಗಳು-೧೨೦. ಬೆಲೆ- ೧೪೫/- ........................... “ಕಿಲಿಗ್” ಇದು ಇಂಗ್ಲಿಷ್ ಹೆಸರಿನ ಕನ್ನಡ ಕಾದಂಬರಿ. ಈ ಶಬ್ದಕ್ಕೆ ಉಲ್ಲಾಸದ ಕ್ಷಣ, ರೊಮ್ಯಾಂಟಿಕ್ ಮೂಡ್, ಸಡಗರ ಎಂಬರ್ಥವಿದೆ. ಗಂಡ-ಹೆಂಡತಿ  ಮಧ್ಯೆಯ ಜೀವನದಲ್ಲಿ ಪ್ರೀತಿಯ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಸಾರುವ ಕಾದಂಬರಿ. ಬೆಂಗಳೂರಿನ ಮೆಟ್ರೋದಲ್ಲಿ ಸ್ಟೇಶನ್ ಸೂಪರಿಂಡೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ಜಯರಾಮಾಚಾರಿ ಅವರ ಚೊಚ್ಚಲ ಕೃತಿಯೂ ಹೌದು.   ೧೨ ಅಧ್ಯಾಯಗಳನ್ನು ಹೊಂದಿರುವ ಕಿರು ಕಾದಂಬರಿ ‘ಕಿಲಿಗ್’ನಲ್ಲಿ ನಾಯಕ ಪತ್ನಿ ಇದ್ದರೂ, ಶುದ್ಧ ಪ್ರೀತಿ, ಶುದ್ಧ ಪ್ರೇಮ ಇದ್ಯಾವುದಕ್ಕೂ ಬೆಲೆ ಕೊಡದೆ, ಇನ್ನೊಂದು ಹೆಣ್ಣಿನಲ್ಲಿ ಅನುರಕ್ತನಾಗಿ ಅವಳಲ್ಲಿ ಪ್ರೀತಿ, ಪ್ರೇಮ ಹುಡುಕುತ್ತಾನೆ. ನಂತರ ಅವಳೊಂದಿಗೆ ಅನುಭವಿಸುವ ಪ್ರೇಮ, ಕಾಮಗಳ ಕುರಿತಾಗಿದೆ.  ಸರಳ ಭಾಷೆಯ ಈ ಕೃತಿ  ಒಮ್ಮೆಲೆ ಓದಿಸಿಕೊಂಡು ಹೋಗುವಂತಿದೆ. ಕಾದಂಬರಿಯ ನಾಯಕನಿಗೆ ಮಕ್ಕಳಾಗಿಲ್ಲವೆಂಬ ಚಿಂತೆಯಿಂದ ಆರಂಭವಾಗುವ ಕಥೆ ಮಗು ಹುಟ್ಟುವವರೆಗೆ ಸಾಗಿ ಅಲ್ಲಿಗೆ ಅಂತ್ಯಗೊಳ್ಳುತ್ತದೆ. ಈ ಮಧ್ಯದಲ್ಲಿ  ಬಾಲ್ಯದ ಸ್ನೇಹಿತೆಯ ಜೊತೆ  ಪ್ರೀತಿ, ಪ್ರೇಮ, ಕಾಮ, ಹೃದಯದಾಟ ವಿಷಯಗಳು ಈ ಕಾದಂಬರಿಯಲ್ಲಿ ಬರುತ್ತವೆ. ನಾಯ...
Image
      ಸಂಕಟಕ್ಕೊಳಗಾದ ಹೆಣ್ಣಿನ  ನೋವಿನ ಕಥೆ ‘ಕುಣಿಯೇ ಘುಮಾ’ ಕುಣಿಯೇ ಘುಮಾ   ಪ್ರಕಾರ: ಆತ್ಮಕಥನ ಮರಾಠಿ ಮೂಲ : ಮಾಧವಿ ದೇಸಾಯಿ ಕನ್ನಡಕ್ಕೆ : ಚಂದ್ರಕಾಂತ ಪೋಕಳೆ ಪ್ರಕಾಶಕರು- : ನವಕರ್ನಾಟಕ ಪಬ್ಲಿಕೇಶನ್ಸ್ ಬೆಂಗಳೂರು ಪುಟಗಳು- ೧೯೨ ಬೆಲೆ-೧೯೦/- ‘ಕುಣಿಯೇ ಘುಮಾ’  ಇದೊಂದು ಮಹಾರಾಷ್ಟ್ರದ  ಪಾರಂಪರಿಕ  ನೃತ್ಯದ ಹೆಸರು. ಗೋಲಾಕಾರವಾಗಿ ನಿಂತ ಸುಮಂಗಲೆಯರು  ಓರ್ವ ಸುಮಂಗಲೆ (ಘುಮಾ)ಯನ್ನು  ಗೋಲಾಕಾರದ ಮಧ್ಯೆ ನಿಲ್ಲಿಸಿ ಕುಣಿಯುವಂತೆ ಪ್ರೇರೇಪಿಸುತ್ತಾರೆ. ಆದರೆ ಆಕೆ ಕುಣಿಯಲು ಒಪ್ಪುವುದಿಲ್ಲ. ಆಗ ಬಲವಂತದಿಂದ ಕುಣಿಸುತ್ತಾರೆ. ರೂಢಿ, ಪರಂಪರೆ, ಸಂಸ್ಕೃತಿ, ರೀತಿ-ನೀತಿ,  ಶೀಲ, ಮನೆಯ ಹೊಸ್ತಿಲು, ಮರ್ಯಾದೆಯ  ನಡುವೆ ಸಿಲುಕುವ ‘ಘುಮಾ’ ಈ ಸಂಕೋಲೆ ಮುರಿದು ಹೊರಬರುವುದು ಸಾಧ್ಯವಿಲ್ಲ. ಒಂದು ಹೆಣ್ಣನ್ನು ಸಮಾಜ ಎಷ್ಟು ಬಿಗಿಯಾಗಿ ಬಂಧಿಸಿದೆ ಎಂದರೆ  ಆಕೆ  ಆ ವೃತ್ತದಿಂದ ಹೊರಬರುವುದು ಕಷ್ಟ.  ಪ್ರಸ್ತುತ ‘ಕುಣಿಯೇ ಘುಮಾ’  (ನಾಚ್  ಗ ಘುಮಾ) ಒಂದು ಆತ್ಮಕಥೆ.  ಮರಾಠಿಯ ಖ್ಯಾತ ಲೇಖಕಿ ಮಾಧವಿ ದೇಸಾಯಿ ಇದರ ಲೇಖಕರು. ಆತ್ಮಕಥೆಯೂ ಅವರದ್ದೇ ಆಗಿದೆ. ಸಂಕಟಕ್ಕೊಳಗಾದ ಓರ್ವ ಹೆಣ್ಣಿನ  ನೋವಿನ ಕಥೆಯಿದು. ಲೇಖಕಿ ತಾನು ಸಂಸಾರಾರ್ಥಿಯಾಗಿ  ಬೆಳಗಾವಿ, ಮಹಾರಾಷ್ಟ್ರದ  ಕೊಲ್ಲಾಪುರದ  ಕಲ್ಯಾಣ್, ಕೋವಡ್, ಮುಂಬ...
Image
  ಬಹುರಾಷ್ಟ್ರೀಯ ಉದ್ಯಮ ಕಟ್ಟಿ ಬೆಳೆಸಿದವರ ಯಶೋಗಾಥೆ ‘ಬ್ರ್ಯಾಂಡ್ ಬಿಲ್ಡರ್ಸ್’ ಕೃತಿಯ ಹೆಸರು- ಬ್ರ್ಯಾಂಡ್  ಬಿಲ್ಡರ್ಸ್ ಪ್ರಕಾರ- ಲೇಖನ ಲೇಖಕಿ- ದೀಪಾ ಹಿರೇಗುತ್ತಿ ಪುಟಗಳು-೧೬೪ ಬೆಲೆ- ೧೬೦ ಪ್ರಕಾಶಕರು- ಸಾವಣ್ಣ ಎಂಟರ್ ಪ್ರೈಸಸ್.  ಜಯನಗರ ಮೊದಲ ಬ್ಲಾಕ್, ಪೂರ್ವ, ಬೆಂಗಳೂರು-೧೧ ಬೆವರ ಹನಿಹನಿಗಳಿಂದ ಮೇಲೆದ್ದು ಬಂದು ದೇಶ -ವಿದೇಶಗಳಲ್ಲಷ್ಟೆ ಅಲ್ಲದೆ  ಜಗತ್ತಿನಲ್ಲಿಯೇ ಪ್ರಖ್ಯಾತವಾದ ಕಂಪನಿಗಳನ್ನು ಕಟ್ಟಿ ಬೆಳೆಸಿದವರ ಯಶೋಗಾಥೆಯ ಕಥಾಗುಚ್ಛವಿದು. ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಸರ್ಕಾರಿ ಪಿಯು ಕಾಲೇಜ್ ನ ಉಪನ್ಯಾಸಕಿ ಆಗಿರುವ ದೀಪಾ ಹಿರೇಗುತ್ತಿ ಮಾಹಿತಿಗಳನ್ನು ಕಲೆಹಾಕಿ,  ಸಾಧಕರ ಯಶೋಗಾಥೆಯನ್ನು ಹೆಣೆದಿದ್ದಾರೆ. ಅದೇ ‘ಬ್ರ್ಯಾಂಡ್ ಬಿಲ್ಡರ್ಸ್’ ಕೃತಿ ವಿಷಯ.  ಬಹುರಾಷ್ಟ್ರೀಯ ಕಂಪನಿಗಳು ಶೂನ್ಯದಿಂದ ಶುರು ಮಾಡಿ ಯಶಸ್ಸಿನ ತುತ್ತತುದಿಯನ್ನು ಏರಿದ ಅಪೂರ್ವ  ಕಥೆಗಳನ್ನು ನಾವಿಲ್ಲಿ ಕಾಣಬಹುದು.  ಇದು ನಿಜಕ್ಕೂ ಉದ್ಯಮವನ್ನು ನಡೆಸುವವರಿಗೆ ಅಥವಾ ಆರಂಭಿಸುವವರಿಗೆ ಸ್ಫೂರ್ತಿ ಮತ್ತು ಭರವಸೆ ನೀಡುವ, ಹೊಸ ಪ್ರಯತ್ನದಿಂದ ಅಭೂತಪೂರ್ವ ಯಶಸ್ಸನ್ನು  ಸಾಧಿಸುವ, ಎಷ್ಟೇ ಕಷ್ಟ ಬಂದರೂ ಎದೆಗುಂದದೆ,  ತಲೆಯೆತ್ತಿ ನಿಲ್ಲಲು ಹುರಿದುಂಬಿಸುವ ಕೃತಿಯಾಗಿದೆ.    ಮಹಾನ್ ಉದ್ಯಮಿಗಳ ಕುರಿತ ಕೃತಿ ‘ಬ್ರ್ಯಾಂಡ್ ಬಿಲ್ಡರ್ಸ್’ನಲ್ಲಿ  ೩೦ ಅಪೂರ್ವ ಸಾಧಕರ ಮಾಹಿತಿಗಳ ಸ...
Image
 ಬದುಕಿನ ಗಾಣದಿಂದ ಇಳಿದ ಮಾತುಗಳ ‘ಮಧ್ಯಮಾವತಿ’ ಪುಸ್ತಕದ ಹೆಸರು- ಮಧ್ಯಮಾವತಿ ಲೇಖಕರು- ಪೂರ್ಣಿಮಾ ಸುರೇಶ್ ಪ್ರಕಾರ- ಕವನ ಸಂಕಲನ ಪ್ರಕಾಶಕರು-  ವಿಕಾಸ ಪ್ರಕಾಶನ, ಎಂ ಸಿ ಲೇಔಟ್,  ವಿಜಯನಗರ, ಬೆಂಗಳೂರು- ೪೦ ಮೊಬೈಲ್- ೯೯೦೦೦೯೫೨೦೪ ಪುಟಗಳು-೧೩೪ ಬೆಲೆ- ೧೨೦/-   ಪ್ರೀತಿ, ಪ್ರೇಮ ಮತ್ತು ಯುಗಾಂತರದಿಂದಲೂ ಕೇಳಿ ಬರುತ್ತಿರುವ ಹೆಣ್ಣಿನ ಯಾತನೆಗಳನ್ನು ವಿಶೇಷವಾಗಿ ತೆರೆದಿಡುವ  ಕವನ ಸಂಕಲನ ‘ಮಧ್ಯಮಾವತಿ’. ಪ್ರೌಢವಾಗಿ ಮತ್ತು ಕಾವ್ಯಾತ್ಮಕವಾಗಿರುವ ಇಲ್ಲಿನ ಕವನಗಳೆಲ್ಲ  ಓದುಗರನ್ನು ಸೂಜಿಗಲ್ಲಿನಂತೆ  ಸೆಳೆಯುತ್ತವೆ. ೪೬ ಕವನಗಳ ಈ ಗುಚ್ಛದಲ್ಲಿ ನವಿರಾದ, ಹಿತವಾದ ಸಾಲುಗಳಿವೆ. ಇದರ ಕರ್ತೃ ಪೂರ್ಣಿಮಾ ಸುರೇಶ್. ಈ ಸಂಕಲನ ಕವಯತ್ರಿಯ  ಅಂತರಂಗದ ತರಂಗಗಳ ತುಮುಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕವಯತ್ರಿಯ ಸಫಲತೆಗೆ ಸಾಕ್ಷಿಯಾಗಿವೆ. ಕೆಲವು ಕವನಗಳಲ್ಲಿ  ನಿಗೂಢತೆಯಿದೆ. ಇನ್ನು ಕೆಲವು ಕವನಗಳಲ್ಲಿ ಸಮರ್ಪಣಾ ಭಾವವಿದೆ. ಮತ್ತೆ  ಕೆಲವು ಕವನಗಳಲ್ಲಿ ಮುಚ್ಚುವಿಕೆ ಬಿಚ್ಚುವಿಕೆಗಳೆರಡೂ ಇವೆ.  ಜೊತೆಗೆ ದೇವರಿದ್ದಾನೆ, ಪ್ರೇಮವಿದೆ, ಅವನಿದ್ದಾನೆ, ಅವಳಿದ್ದಾಳೆ, ಇವೆಲ್ಲವನ್ನೂ ವಿಶಿಷ್ಟವಾಗಿ ಅನಾವರಣ ಗೊಳಿಸಿರುವ ಕವಿಪ್ರತಿಭೆ ಪೂರ್ಣಿಮಾ ಅವರದ್ದು.  ಒಟ್ಟಿನಲ್ಲಿ ಅನನ್ಯ ರೀತಿಯಲ್ಲಿ  ಕವನ ಸಂಕಲನದ ಬಹುತೇಕ ಕವನಗಳು ತೆರೆದುಕೊಳ್ಳುತ್ತವೆ.  ಹೊಸಹೊಸ...
Image
 ಬದುಕಿನ ಸವಾಲುಗಳನ್ನು ಬಿಂಬಿಸುವ  ‘ಇಲ್ಲಗಳ ನಡುವೆ’ ಕೃತಿಯ ಹೆಸರು- ಇಲ್ಲಗಳ ನಡುವೆ ಲೇಖಕರು- ಶ್ರೀ ಮುದ್ರಾಡಿ ಪ್ರಕಾರ- ಕವನ ಸಂಕಲನ ಪ್ರಕಾಶಕರು- ಹೊಸಸಂಜೆ ಪ್ರಕಾಶನ, ಕಾರ್ಕಳ ಪುಟಗಳು- ೧೧೬ ಬೆಲೆ-೧೫೦/- ಜೀವನಾನುಭವಗಳ ಜೊತೆಗೆ ಬದುಕಿನ ಸವಾಲು, ಸಂಕಟಗಳನ್ನು ಪರಿಚಯ ಮಾಡಿಕೊಡುತ್ತ- ಶೋಷಣೆ, ಅಸಮಾನತೆ, ಪ್ರೀತಿಯ ಸಂಬಂಧಗಳ ಧ್ವನಿಯನ್ನು ಗಟ್ಟಿಯಾಗಿ ಪ್ರತಿಧ್ವನಿಸುವ ಕವನ ಸಂಕಲನ ‘ಇಲ್ಲಗಳ ನಡುವೆ’. ಇಲ್ಲಿ ಸಮಾಜದ ನಿರ್ಲಕ್ಷಿತರ, ಪರಿತ್ಯಕ್ತರ ಮತ್ತು ಅನಾಥರ ಕುರಿತ ಕಾಳಜಿ ಹೆಚ್ಚಿನದಾಗಿ ಕಂಡುಬರುತ್ತದೆ. ವಿಶೇಷವಾಗಿ ಪ್ರಕೃತಿ, ತಾಯಿ, ಗುರು, ಕುಟುಂಬ ಮೊದಲಾದವುಗಳಿಗೆ ಪ್ರಾಧಾನ್ಯ ನೀಡಿರುವುದು ಗಮನಾರ್ಹವಾದುದು. ಭಾಷೆಯೊಂದಿಗೆ ಆಕರ್ಷಕ ಪದ ಪ್ರಯೋಗದ ಮೂಲಕ ತನ್ನ ಕವಿತಾ ಸಾಮರ್ಥ್ಯವನ್ನು ಕವಯತ್ರಿ ಇಲ್ಲಿ ತೋರ್ಪಡಿಸಿದ್ದಾರೆ. ನಿಟ್ಟೆಯ ಎನ್. ಎಸ್. ಎ. ಎಂ. ಪಿ.ಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ  ಶ್ರೀ ಮುದ್ರಾಡಿ ಈ ಕೃತಿಯ ಕರ್ತೃ.  ವಿದ್ವಾಂಸರಾಗಿದ್ದ ದಿ. ಅಂಬಾತನಯ  ಮುದ್ರಾಡಿಯವರ ಪುತ್ರಿ. ಪ್ರಸ್ತುತ ಸಂಕಲನ ಅವರ ಚೊಚ್ಚಲ ಕೃತಿಯಾಗಿದೆ. ತಮ್ಮ ತಂದೆಯವರ ಸಾಹಿತ್ಯ ಸಂಸರ್ಗದಲ್ಲಿ  ಬೆಳೆದುಬಂದ ಹಿನ್ನೆಲೆಯಲ್ಲಿ ಇವರಲ್ಲೂ ಸಹ ಕಾವ್ಯಸುಧೆ ಹರಿದು ಬಂದಿರುವುದನ್ನು, ಅಧ್ಯಾಪನದ ಜೊತೆಗೆ ತಾನೂ ವಿದ್ಯಾರ್ಥಿಯಾಗಿ ಕಂಡುಂಡ ಅನುಭವಗಳನ್ನು  ಸೊಗಸಾಗಿ, ಮನಸೆಳೆಯುವ ರೀತಿಯಲ್ಲಿ ಸೃಜನಶೀಲವಾಗಿ ಕ...
Image
 ಲವಲವಿಕೆಯ ಕಥೆಯ  ‘ಎತ್ತಿನಗಾಡಿ ಎಕ್ಸ್‌ಪ್ರೆಸ್’ ಕೃತಿಯ ಹೆಸರು -‘ಎತ್ತಿನಗಾಡಿ ಎಕ್ಸ್‌ಪ್ರೆಸ್’ ಪ್ರಕಾರ- ಹಾಸ್ಯಕಥಾ ಸಂಕಲನ ಲೇಖಕಿ- ವಿನಿಶಾ ರಿನಿ ಪುಟಗಳು- ೧೬೮ ಬೆಲೆ- ೧೨೦-/- ಪ್ರಕಾಶಕರು- ಗೀತಾಂಜಲಿ ಪುಸ್ತಕ ಪ್ರಕಾಶನ,  ರಾಜೇಂದ್ರನಗರ, ಶಿವಮೊಗ್ಗ -೦೧   ಪ್ರೀತಿ ಹಾಗೂ ತುಂಟತನಗಳಿಂದ ಕೂಡಿದ, ಕುತೂಹಲ ಮತ್ತು ಎಡವಟ್ಟುಗಳ  ಜೊತೆ ಬದುಕನ್ನು ಸಂಭ್ರಮಿಸುವ, ಮನುಷ್ಯನ ಅಂಕುಡೊಂಕುಗಳ ಕುರಿತು  ಮತ್ತು  ಫಜೀತಿಯ ಪ್ರಸಂಗಗಳನ್ನು ವಿವರಿಸುವ ಹಾಸ್ಯಮಯ ಕೃತಿಯೇ ‘ಎತ್ತಿನಗಾಡಿ ಎಕ್ಸ್‌ಪ್ರೆಸ್’.  ಕೃತಿಯ ಹೆಸರೇ ಹೇಳುವಂತೆ ಇದು ಹಾಸ್ಯದ ಕುರಿತಾದದ್ದು. ತಿಳಿನಗೆಯನ್ನು,  ಜೀವನ ಉಲ್ಲಾಸವನ್ನು, ಖುಷಿ ಕೊಡುವ  ಸಂದರ್ಭಗಳನ್ನು ಇಲ್ಲಿ ಲೇಖಕಿ ಇಲ್ಲಿ ಸೆರೆಹಿಡಿದಿದ್ದಾರೆ. ಓದುಗರನ್ನು ಸೆಳೆಯುವ  ಜೊತೆಗೆ ಎಡೆಬಿಡದೆ ಓದಿಸಿಕೊಂಡು ಹೋಗುವ ಗುಣದ ಕಿರುಕಥೆಗಳು ಇಲ್ಲಿವೆ. ಇದರಿಂದಾಗಿ ಪುಸ್ತಕವನ್ನು ಕೈಗೆತ್ತಿಕೊಂಡರೆ ಏಕಕಂತಿನಲ್ಲಿ ಓದಿ ಮುಗಿಸುವ ಆಸಕ್ತಿ ಮೂಡುತ್ತದೆ.   ಈ ಕೃತಿಯ ಲೇಖಕಿ  ವಿನಿಶಾ ರಿನಿ. ಇವರು ತೀರ್ಥಹಳ್ಳಿಯವರು. ಇದು ಅವರ ಚೊಚ್ಚಲ ಕೃತಿಯೂ ಹೌದು. ಕೃತಿಯ ವಿಶೇಷತೆ ಎಂದರೆ, ಇಲ್ಲಿನ ಬರಹಗಳು ಪ್ರಾದೇಶಿಕ ಭಾಷೆ ಮತ್ತು ಆಡುಮಾತಿನಲ್ಲಿವೆ. ಇದು ನಮ್ಮ ಮನೆ, ಹಿತ್ತಲಿನ ಭಾಷೆ ಎನ್ನಬಹುದು. ಮಲೆನಾಡು ಭಾಗದವರಿಗೆ ಇದು ಅಷ್ಟೇನು ಕಷ್ಟವಾಗಲಾರದು. ಆ...
Image
 ಮಕ್ಕಳ ಹೃದಯಕ್ಕೆ ನಾಟುವ ‘ಮುತ್ತಳ್ಳಿಯ ಅಜ್ಜಿ ಕಥೆಗಳು’ ಪುಸ್ತಕದ ಹೆಸರು-  ಮುತ್ತಳ್ಳಿಯ ಅಜ್ಜಿ ಕಥೆಗಳು ಲೇಖಕರು- ಮತ್ತ್ತೂರು ಸುಬ್ಬಣ್ಣ ಪ್ರಕಾರ- ಮಕ್ಕಳ ಕಥೆ ಪ್ರಕಾಶಕರು- ಅನು ಪ್ರಕಾಶನ, ಸಹಕಾರನಗರ, ಬೆಂಗಳೂರು- ೯೨ ಪುಟಗಳು- ೧೧೩ ಬೆಲೆ- ೧೦೦/- ಅನೇಕ ಮುತ್ತುಗಳನ್ನು ಸೇರಿಸಿ ಹೆಣೆದ ಸುಂದರವಾದ ಮಕ್ಕಳ ಕಥಾ ಸಂಕಲನ ‘ಮುತ್ತಳ್ಳಿಯ ಅಜ್ಜಿ ಕಥೆಗಳು’.  ಮತ್ತೂರು ಸುಬ್ಬಣ್ಣ ಎಂದೇ ಖ್ಯಾತರಾದ ಮತ್ತೂರು ಬಾಲಸುಬ್ರಹ್ಮಣ್ಯ ಇದರ ಕರ್ತೃ. ಬೆಂಗಳೂರಿನಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದ ಮತ್ತೂರು ಸುಬ್ಬಣ್ಣ ಮಕ್ಕಳ ಕಥೆಗಾರರು ಎಂದೇ ಪ್ರಸಿದ್ಧಿ.  ಮಕ್ಕಳ ಅನೇಕ ಕಥಾ ಸಂಕಲನವನ್ನು ಇವರು ಪ್ರಕಟಿಸಿದ್ದಾರೆ. ಮಕ್ಕಳ  ಜ್ಞಾನ, ಕಲ್ಪನಾ ಶಕ್ತಿ, ಮನರಂಜನೆ,  ನೀತಿ ಬೋಧನೆ ಹೀಗೆ ಹತ್ತಾರು ಆಯಾಮದಿಂದ ಮಕ್ಕಳ ಕಥೆ ರಚಿಸಬೇಕಾಗುತ್ತದೆ. ಇದರಲ್ಲಿ ಸಿದ್ಧಹಸ್ತರಾಗಿರುವ ಲೇಖಕರು, ಸ್ವಸ್ಥ ಸಮಾಜದ ಅಡಿಪಾಯವಾಗುವ ವ್ಯಕ್ತಿತ್ವ ನಿರ್ಮಾಣ ಮತ್ತು  ಅನೇಕ ಮೌಲ್ಯಗಳನ್ನು ಕಾಪಾಡುವ ಬಗೆಯನ್ನು ಗಮನಿಸಿ  ಗ್ರಾಮೀಣ ಭಾಗದ ವಿಷಯಗಳನ್ನು ಮಕ್ಕಳು ಅರಿಯಲು ಅನುಕೂಲವಾಗುವಂತೆ ನವಿರಾದ ಹಾಸ್ಯ ಲೇಪನೊಂದಿಗೆ ಇಲ್ಲಿ ಕಥೆ ನೇಯ್ದಿದ್ದಾರೆ.       ‘ಮುತ್ತಳ್ಳಿಯ ಅಜ್ಜಿ ಕಥೆಗಳು’ ಕೃತಿಯು ಮಕ್ಕಳಿಗೆ ಸಹಜವಾಗಿ ಇಷ್ಟವಾಗುವ ಸಾಹಸ, ಸ್ನೇಹ, ರಂಜನೆ, ಬಾಂಧವ್ಯ ಎಲ್ಲವನ್ನೂ ಸ...