Posts

Showing posts from February, 2026
Image
   ಖಗೋಳ ಸಾಹಸಯಾತ್ರೆ ಹಿನ್ನೆಲೆಯ  ‘ಆಕಾಶಕಾಯ’  ‘ಆಕಾಶಕಾಯ’ ಇದು ಒಂದು ಕಾಲ್ಪನಿಕ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಕಾದಂಬರಿ. ಕಲಬುರ್ಗಿಯ ಸಾಹಿತಿ, ಸಂಶೋಧಕಿ ಶ್ರೀದೇವಿ ರಾಠೋಡ್  ಇದರ ರಚನಾಕಾರರು. ಅಂತರಿಕ್ಷಕ್ಕೆ ಹೋಗಿ ಬಂದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಸಾಹಸಯಾತ್ರೆ ಹಿನ್ನೆಲೆಯ ಕಥೆಯನ್ನೇ ಇಟ್ಟುಕೊಂಡು ಕೆಲವು ವೈಜ್ಞಾನಿಕ ಅಂಶಗಳ ಮಾಹಿತಿ ಆಧಾರದ ಮೇಲೆ ಈ ಕಥೆ ನಿರೂಪಿತವಾಗಿದೆ. ಬಾಹ್ಯಾಕಾಶದಲ್ಲಿ ಒಂದು ವಾರದ ಬದಲು  ೯ ತಿಂಗಳು ಸಂಕಷ್ಟದಲ್ಲಿ ಕಳೆದ ಸುನಿತಾ- ವಿಲ್ಮೋರವರ ವಿವರವನ್ನೇ ಇಟ್ಟುಕೊಂಡು ಸಾಹಸ ಮತ್ತು ರೋಚಕದ ಕಥೆಯನ್ನು ಹೆಣೆದಿದ್ದಾರೆ. ಅವರು ಭೂಮಿಗಿಳಿದ ನಂತರ ಈ ಕಥೆ ರಚನೆಯಾಗಿದೆ.  ಈ ಕಾದಂಬರಿ ಬರೆಯುವಾಗ ಲೇಖಕಿ ಖಗೋಳಶಾಸ್ತ್ರದ ಗಹನ ಅಧ್ಯಯನ ಮಾಡಿರುವುದನ್ನು ಅವರ ಕಥೆಯಲ್ಲಿ ಕಾಣಬಹುದು. ಕಾಲ್ಪನಿಕವಾದರೂ ಇದರಲ್ಲಿ ನೈಜತೆಯ ಮೆರುಗಿದೆ. ಭೂಮಿಯಲ್ಲಿ ವಾಸ್ತವಿಕ ಎನ್ನಬಹುದಾದ ಬೀಜಗಳನ್ನು ಬಿತ್ತಿ  ಒಂದು ಕುತೂಹಲಕರವಾದ ಸೃಜನತೆಯ ಫಸಲನ್ನು ಬೆಳೆದಿದ್ದಾರೆ. ಆದ್ದರಿಂದ ಓದುಗ ಕಲ್ಪನೆಯ ಸಾಗರದಲ್ಲಿ ಮುಳುಗುವಂತೆ ಮಾಡುತ್ತದೆ.   ಪ್ರಸ್ತುತ ಕಾದಂಬರಿಯಲ್ಲಿ ಲೇಖಕಿ ಆಯ್ದುಕೊಂಡಿರುವ ಕಾಲ ೨೦೩೫. ಖಗೋಳ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುವ ರಾಮದಾಸ್ ಎಂಬ ವಿಜ್ಞಾನಿ  ತನ್ನ ಮಗಳು ವಿನಿತಾ ಮತ್ತು ತನ್ನ ಮನೆಕೆಲಸದ ಹೆಂಗಸಿನ ಮಗ...
 ಅಜ್ಞಾತದ ಆಕರ್ಷಣೆಯ  ‘ಇಮ್ಮಡಿ ಮಡಿಲು’    ‘ಇಮ್ಮಡಿ ಮಡಿಲು’ ಇದರಲ್ಲಿ ಮೂರು ನೀಳ್ಗ್ಗತೆಗಳಿವೆ. ಮೊದಲನೆಯದು, ೭ನೇ ಶತಮಾನದಲ್ಲಿ ಬಾದಾಮಿಯನ್ನು ಆಳಿದ ಚಾಲುಕ್ಯರ ಮತ್ತು ಅವರ ವಿರುದ್ಧ ಕಾದಾಡಿದ ಪಲ್ಲವರ ಕುರಿತಾದದ್ದು, ಇನ್ನೊಂದು ಅಕ್ಕಮಹಾದೇವಿ ರೀತಿಯಲ್ಲಿ ಬದುಕಿದ ಕಾಶ್ಮೀರದ ಶಿವಭಕ್ತೆ ಲಲ್ಲೇಶ್ವರ ಬಗ್ಗೆ, ಮೂರನೆಯದು ಇಸ್ರೇಲ್‌ನ  ಮಸಾದ ಬೆಟ್ಟದ ಇತಿಹಾಸ. ಈ ಮೂರು ಘಟನೆಗಳ ಬಗ್ಗೆ ಚಾರಿತ್ರಿಕವಾಗಿ ಇದರಲ್ಲಿ ಕಟ್ಟಿಕೊಡಲಾಗಿದೆ. ಈ ಕೃತಿಯ ಲೇಖಕರು ವಿಜ್ಞಾನಿ, ಇತಿಹಾಸಕಾರ ಮತ್ತು ಸಾಹಿತಿ ಆಗಿರುವ ಡಾ| ಕೆ ಎನ್. ಗಣೇಶಯ್ಯ. ಅಜ್ಞಾತದ ಆಕರ್ಷಣೆ ಮತ್ತು ಚರಿತ್ರೆಯಲ್ಲಿನ ಬಿರುಕುಗಳ ಹಿನ್ನೆಲೆಯಲ್ಲಿ ಈ ಕೃತಿ ಬರೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಬಾದಾಮಿ ಚಾಲುಕ್ಯರ ಇತಿಹಾಸದಲ್ಲಿ ನಡೆದ ಯುದ್ಧದಲ್ಲಿ ಅಜ್ಞಾತ ವ್ಯಕ್ತಿಯಾಗಿ ಕಾಡಿದ ಪರಂಜ್ಯೋತಿಯ ಕುರಿತಾಗಿ ಇನ್ನೊಬ್ಬ ಇತಿಹಾಸ ಸಂಶೋಧಕರು ಹಂಪಿಯಲ್ಲಿ ಭೇಟಿಯಾದಾಗ ಹೇಳಿದ ಕುತೂಹಲದ ವಿಷಯದ ಆಧಾರದಲ್ಲಿ  ಮೊದಲ ಕಥೆ ಮೈದಳೆದಿದೆ. ರಾಜರು ತಮ್ಮ ಅರಮನೆಯಲ್ಲಿ ದಂಡನಾಯಕರ ಮತ್ತು ಇತರ ಆಡಳಿತಗಾರರ ಪತ್ನಿಯರನ್ನು ಹೇಗೆ ಬಳಸಿಕೊಳ್ಳುತ್ತಿದ್ದರೆನ್ನುವುದನ್ನು ಇಲ್ಲಿ ಸೂಚ್ಯವಾಗಿ ತೋರಿಸಿದ್ದಾರೆ. ಅಕ್ಕಮಹಾದೇವಿಯಂತೆ ಇದ್ದ ಇನ್ನೊಬ್ಬ ಶಿವಯೋಗಿನಿಯ ಬಗ್ಗೆಯೂ ಶ್ರೀಶೈಲದಲ್ಲಿ ಭೇಟಿಯಾದ ಸಂಶೋಧನಾರ್ಥಿಯೊಬ್ಬರು ನೀಡಿದ ಮಾಹಿತಿಯನ್ನು ಆಧಾರದವಾಗಿಟ್ಟುಕೊಂಡು ‘ಪರ್ಯ...
Image
    ‘ಭೂತಾರಾಧನೆ’  ‘ಭೂತಾರಾಧನೆ’ ಇದು ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಚಿನ್ನಪ್ಪ ಗೌಡರ ಸಂಶೋಧನಾ ಕೃತಿ. ಇದರಲ್ಲಿ ಭೂತಾರಾಧನೆಯ ಜಾನಪದೀಯ ಅಧ್ಯಯನದ ವಿವರವಿದೆ.  ಭೂತಗಳ ಪರಿಕಲ್ಪನೆಯನ್ನು ಕುರಿತು ಕಾವ್ಯ, ಶಾಸನ, ಪ್ರಾದೇಶಿಕ ಇತಿಹಾಸ ಇವುಗಳ ಮೂಲಕ ಪ್ರಸ್ತುತ ಕೃತಿ ‘ಭೂತಾರಾಧನೆ’ಯಲ್ಲಿ ವಿವರಣೆಯನ್ನು ಕೊಡುವುದರ ಜೊತೆಗೆ ಭೂತಾರಾಧನೆಯ ಎಲ್ಲಾ ಹಂತಗಳನ್ನು, ಬಗೆಗಳನ್ನು, ವಿವರಗಳನ್ನು ಮತ್ತು ಕಾರ್ಯಗಳನ್ನು ಸಂಗ್ರಹಿಸಿ ಅವನ್ನು ವ್ಯವಸ್ಥಿತವಾಗಿ ನಿರೂಪಿಸಿದ್ದಾರೆ. ಸಮಗ್ರ ಚಿತ್ರಣವನ್ನು ಕಟ್ಟಿ ಕೊಟ್ಟಿದ್ದಾರೆ.  ಇಲ್ಲಿ  ಬೇರೆ ಬೇರೆ ಸಾಮಾಜಿಕ ಹಿನ್ನೆಲೆಗಳಿಂದ ಭೂತವನ್ನು ಶೋಧಿಸಿ ಅನಾವರಣ ಮಾಡಲಾಗಿದೆ.  ಸಮಾಜದ ವ್ಯವಸ್ಥೆ, ಶ್ರೇಣಿಕೃತ ರಾಜಕೀಯ ಅಧಿಕಾರ ವ್ಯವಸ್ಥೆ, ವಂಶಪಾರಂಪರ್‍ಯವಾಗಿ ಮುಂದುವರೆಯುವ ಭೂಮಿಯ ಒಡೆತನದ ವ್ಯವಸ್ಥೆ ಹೇಗೆ ಸಂಬಂಧ ಹೊಂದಿದೆ ಎಂಬುದನ್ನು ಪ್ರಸ್ತುತ ಕೃತಿಯಲ್ಲಿ ಲೇಖಕರು ಬಹುಸುಂದರವಾಗಿ ಚಿತ್ರಿಸಿದ್ದಾರೆ. ಆಕರ್ಷಕವೂ, ಬಹುವರ್ಣಗಳ, ಬಹುವಿನ್ಯಾಸಗಳ ಛಾಯಾಚಿತ್ರಗಳನ್ನೂ ಸಹ ಆಯಾಯ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ. ಆಭರಣ ವಸ್ತುಗಳ ವಸ್ತುಗಳಿಗೆ ಸಂಬಂಧಿಸಿದ ಆಕರ್ಷಕ ರೇಖಾ ಚಿತ್ರಗಳಿವೆ. ಭೂತಾರಾಧನೆಯ ಪಾರಿಭಾಷಿಕ ಪದಗಳ ವಿವರಣಾತ್ಮಕ ಟಿಪ್ಪಣಿಗಳನ್ನು ಸಹ ಇಲ್ಲಿ ಕೊಡಲಾಗಿದೆ. ಭೂತ ಕಟ್ಟುವ ಕಲಾವಿದರ ಜೀವನ, ಪೂಜಾರಿಗಳ ವೃತ್ತಿ- ಬದುಕು, ಭೂತ ಕಟ್ಟುವ ಜನಾಂಗಗಳ ಸಾಮಾಜಿ...
Image
  ಸವಾಲೊಡ್ಡುವ, ಸೂಕ್ಷ್ಮತೆಯ  ‘ಸಿಗದವರು’  ‘ಸಿಗದವರು’ ಇದು ರಾಘವೇಂದ್ರ ರಾವ್ ಅವರ ಕಥಾ ಸಂಕಕಲನ. ಅನು ಬೆಳ್ಳೆ ಎಂಬ ಕಾವ್ಯನಾಮದಿಂದ ಹೆಸರಾಗಿರುವ ಲೇಖಕರು, ಈ ಕೃತಿಯಲ್ಲಿ ಮನುಷ್ಯ ಸಂಬಂಧದ ಸಂಕೀರ್ಣ ಮಜಲುಗಳನ್ನು, ಭಾವನಾತ್ಮಕ ತಾಕಲಾಟಗಳನ್ನು, ಬದುಕಿನ ಹೋರಾಟದ ಮತ್ತು ಸಂಘರ್ಷವನ್ನು ಚಿತ್ರಿಸಿದ್ದಾರೆ. ಕೃತಿಯಲ್ಲಿ ಒಟ್ಟೂ ೯ ಕಥೆಗಳಿವೆ. ಇಲ್ಲಿನ ಬಹುತೇಕ ಕಥೆಗಳಲ್ಲಿ  ಅಪೂರ್ಣತೆ ಇರುವುದನ್ನು ಕಾಣಬಹುದು. ಕಥೆಯ ಎಳೆಯನ್ನು ಇಟ್ಟುಕೊಂಡು ನಾವೇ ಅದರ ಅಂತ್ಯ ಗಮನಿಸಬೇಕಿದೆ.   ಇಲ್ಲಿನ ಕಥೆಗಳಲ್ಲಿ ನೊಂದ ಪಾತ್ರಗಳಿವೆ. ಒಳಗೊಂದು, ಹೊರಗೊಂದು ನಡೆವಳಿಕೆಯವರಿದ್ದಾರೆ. ವೈವಾಹಿಕ ಬದುಕಿನಾಚೆಯ ಸಂಬಂಧವಿದೆ. ಸ್ವೇಚ್ಛೆಯ ಜೀವನವಿದೆ. ಮನುಷ್ಯ ಸಂಬಂಧದ ತವಕ-ತಲ್ಲಣಗಳಿವೆ.  ಎಲ್ಲ ಕಥೆಗಳು ಕೌತುಕವಾಗಿದ್ದರೂ ಅಂತ್ಯಗಳೇಕೋ ಅಸ್ಪಷ್ಟತೆಯನ್ನು ನೀಡುವ ಮೂಲಕ ನಮಗೆ ಒಂದು ಬಗೆಯ ಸವಾಲನ್ನು ಒಡ್ಡುತ್ತವೆ. ಪ್ರಯೋಗಶೀಲತೆಯ ಇಲ್ಲಿನ ಕಥೆಗಳು ಆಪ್ತವಾಗುತ್ತವೆ,  ನಮ್ಮನ್ನು ಓದಿಸಿಕೊಂಡು ಹೋಗುತ್ತವೆ.  ಅಬಾಧಿತ  ಶಾಮಣ್ಣ ಮತ್ತು ಸತ್ಯನಾರಾಯಣ ಒಂದೇ ರೀತಿಯ ವ್ಯಕ್ತಿಗಳು. ಇಬ್ಬರೂ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೀರಾ ಆಸಕ್ತಿಯುಳ್ಳವರು. ಇದ್ದಕ್ಕಿದ್ದಂತೆ ಶಾಮಣ್ಣ ಸಾವಿಗೀಡಾಗುತ್ತಾನೆ. ಪತ್ನಿ ಕಾವೇರಿ ತಾನೇ ಅಂತ್ಯಕ್ರಿಯೆ ಮಾಡುವುದಾಗಿ ಹಠ ಹಿಡಿದಾಗ ಪುರೋಹಿತರು ಇದನ್ನು ಒಪ್ಪುವುದಿಲ್ಲ. ಜೊತೆಗ...
Image
  ಗಾಲಿಬ್‌ನ ತವಕ, ತಲ್ಲಣ, ದುರಂತದ   ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’  ‘ಮಿರ್ಜಾ ಗಾಲಿಬ್’  ಉರ್ದು ಮತ್ತು ಪರ್ಶಿಯನ್ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರು. ಕನ್ನಡ ಸಾಹಿತ್ಯದ ಓದುಗರಿಗೆಲ್ಲ ಆತನ  ಗಜಲ್ ಕವನಗಳೆಂದರೆ  ಇಷ್ಟ. ಗಾಲಿಬ್  ಕೇವಲ ವ್ಯಕ್ತಿಯೊಬ್ಬನ ಹೆಸರು ಮಾತ್ರವಲ್ಲ, ಅದು ಒಂದು ಅಚ್ಚಳಿಯದ ಹೆಸರು. ಆತ ನಮ್ಮನ್ನು ಅಗಲಿ ಒಂದೂವರೆ ಶತಮಾನ ಕಳೆದರೂ ಅವನ ಗಜಲ್‌ಗಳು ಮತ್ತು ಕಸಿದಾ ಎಂಬ ಉರ್ದು ಕಾವ್ಯ ಪ್ರಕಾರಗಳು ಇಂದಿಗೂ ಸಾಹಿತ್ಯಪ್ರಿಯರ, ವಿದ್ವಾಂಸರ ನಾಲಿಗೆ ಮೇಲೆ ನಲಿದಾಡುತ್ತಿವೆ. ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಈ ಕೃತಿಯನ್ನು  ಬರೆದವರು ಎನ್. ಜಗದೀಶ್ ಕೊಪ್ಪ. ತಾನು ಗಾಢವಾಗಿ ಪ್ರೀತಿಸಿದ, ತನ್ನನ್ನು ತೀವ್ರವಾಗಿ ಪ್ರಭಾವಿಸಿದ ಕವಿ ಗಾಲಿಬ್ ಎಂದು ಅವರು ಹೇಳಿಕೊಂಡಿದ್ದಾರೆ.  ಕಾವ್ಯದ ರಸಾನುಭವದ ಸೊಗಡನ್ನು ತನ್ನ ಕವಿತೆಯ ಮೂಲಕ ಕಟ್ಟಿಕೊಟ್ಟ ಅಪ್ರತಿಮ ಕವಿ ಮಿರ್ಜಾ ಗಾಲಿಬ್ ಬಣ್ಣನೆಗೆ ನಿಲುಕದ ವ್ಯಕ್ತಿತ್ವದ ಗಾಲಿಬ್ ಒಬ್ಬ ತುಂಬು ರಸಜ್ಞ ಗಾಲಿಬ್ ಉರ್ದು, ಪರ್ಶಿಯನ್ ಭಾಷೆಯ ಪಂಡಿತ. ಬದುಕಿನ ರಂಜನೆಯೊಡನೆ  ಅಸಹಾಯಕತನ, ತಲ್ಲಣ ಅನುಭವಿಸಿದವನು. ತನ್ನ ಕಾವ್ಯದಲ್ಲಿ ಇವೆರಡನ್ನೂ ಹದವಾಗಿ ಬೆರೆಸಿ ಕಟ್ಟಿದ ಕಾವ್ಯದ ಗಂಭೀರತೆ ಮತ್ತು ಸಾಹಿತ್ಯಕ್ಕೆ ಧಕ್ಕೆ ಬರದಂತೆ ಸಹಜವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.  ಈ ಕಥನ  ಓದಿದಾಗ  ಇತ...
Image
 ವರ್ತಮಾನಕ್ಕೆ ಮುಖಾಮುಖಿಯಾಗುವ ‘ಕತ್ತಲೆಯ ಪಿಸುಮಾತು’ ‘ಕತ್ತಲೆಯ ಪಿಸುಮಾತು’ ಇದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ನಿವೃತ್ತ ಪ್ರಾಧ್ಯಾಪಕ  ಸಣ್ಣರಾಮ ಅವರ ಕಿರುಕಥೆಗಳ ಸಂಕಲನ.   ಸಮಾಜದ ವಿವಿಧ ಸ್ತರಗಳನ್ನು ಲೇಖಕ ಇಲ್ಲಿ ನೋಡಿ ಅವರ ಮನಸ್ಸಿನ ಮಿಡಿತವನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಸರಳ ಮತ್ತು ನಿರಾಡಂಬರ ಮಾತುಗಳು ಇದರಲ್ಲಿವೆ. ಸಹಜ ನಿರೂಪಣೆಯೊಂದಿಗೆ ಕಥೆಗಳು ಮನಸೆಳೆಯುತ್ತವೆ. ನಮ್ಮ ಕಣ್ಣೆದುರೇ ಈ ದಿನಗಳಲ್ಲಿ ನಡೆಯುವ ಘಟನೆಗಳೇ ಪುನಃ ಸೃಷ್ಟಿಯಾಗಿ ಇಲ್ಲಿ ದಾಖಲಾದಂತೆ ಕಂಡುಬರುತ್ತದೆ. ಮಹಿಳಾ ಬದುಕು,  ನಿವೃತ್ತರ, ವಯಸ್ಕರ ಸಮಸ್ಯೆಗಳು, ಯುವಮನಸುಗಳ ಆದರ್ಶ, ಆತಂಕಗಳು,  ಯೋಧರ ಅರ್ಪಣೆಯಲ್ಲಿ  ಸಂಬಂಧಿಕರ ಶೋಕ- ಆತಂಕ, ಮಂಗನಾಟದಂತಾದ ರಾಜಕಾರಣ, ಭ್ರಷ್ಟತೆ, ಕುಡಿತದ ದುಷ್ಪರಿಣಾಮ, ಗುಳೆ ಹೋದವರ ಕರುಳು ಕಿವುಚುವ  ಕಥೆಗಳು  ಇಲ್ಲಿವೆ.  ಇವೆಲ್ಲ ಸಮಕಾಲೀನ ತೀವ್ರ ಸ್ಪಂದನೆಗಳಿಂದ ಹುಟ್ಟಿದವಾಗಿವೆ. ವರ್ತಮಾನಕ್ಕೆ ಮುಖಾಮುಖಿಯಾಗುವಂತಹವೂ ಹೌದು. ಯುವ ಮನಸ್ಸುಗಳಿಗೆ ಇವು ತಲುಪಬೇಕಿದೆ.      ಇದರಲ್ಲಿ ೧೬ ಸಣ್ಣ ಕಥೆಗಳಿವೆ. ವೈವಿಧ್ಯಮಯ ಕಥಾ ವಸ್ತುಗಳ ವಿಶಾಲವಾದ ತಳಹದಿಯ ಮೇಲೆ ಇದು ರೂಪಿತವಾಗಿದೆ. ಶೋಷಣೆಯ ವಿವಿಧ ಮುಖಗಳನ್ನು ತೋರಿಸುವುದರ ಜೊತೆಗೆ  ಕೊರೊನಾದ ಸಂಕಟದವರೆಗಿನ ಘಟನೆಗಳನ್ನು ಕಥೆಗಳ ಮೂಲಕ ಚಿತ್ರಿಸಿದ್ದಾರೆ.  ಕತ್ತಲೆಯ ಪಿಸುಮ...
Image
 ಇಂದಿನ ತಲೆಮಾರಿಗೆ ಅತ್ಯಗತ್ಯ ಕೃತಿ  ‘ಮನುಷ್ಯ ಜಾತಿ ತಾನೊಂದೆ ವಲಂ’    ಕನ್ನಡ ಸಾಂಸ್ಕೃತಿಕ ಲೋಕದ ಸೋಜಿಗದ, ತಾವು ನಂಬಿದ್ದನ್ನು ಬರೆಯುತ್ತ, ಬದುಕುತ್ತ ಬಂದ  ವ್ಯಕ್ತಿ ಬರಗೂರು ರಾಮಚಂದ್ರಪ್ಪ ಅವರ ಕೃತಿ  ‘ಮನುಷ್ಯ ಜಾತಿ ತಾನೊಂದೆ ವಲಂ’.  ಇದು ಸಾಮಾಜಿಕ ಪ್ರಜ್ಞೆಗೆ  ಪೂರಕ ಚಿಂತನೆಯನ್ನೊದಗಿಸುವ ಪುಸ್ತಕ. ಪಂಪ ಮಹಾಕವಿ ಹೇಳಿದಂತೆ ‘ಮನುಷ್ಯ ಜಾತಿ ತಾನೊಂದೆ ವಲಂ’ ಸಾರ್ವಕಾಲಿಕ ಆದರ್ಶದ ಮೌಲ್ಯದ ಮಾತು. ಇದನ್ನೇ ಇಟ್ಟುಕೊಂಡು ಮಾನವೀಯ ಮೌಲ್ಯಾಧಾರಿತ  ಲೇಖನಗಳನ್ನು ಬರೆದಿದ್ದಾರೆ.    ಜಾತಿ ಮತ್ತು ಧರ್ಮಗಳ ಮುನ್ನೆಲೆಯಲ್ಲಿ ಸಮಾಜವನ್ನು ಒಡೆದು ಆಳುವ ಮೂಲಭೂತವಾದಿ ಮನೋಧರ್ಮವು ಮುನ್ನೆಲೆಗೆ ಬಂದಿರುವ ಇವತ್ತಿನ ಸಂದsದಲ್ಲಿ  ಪಂಪನ ಈ ಮಾತು ಪ್ರಸ್ತುವಾಗಿದೆ. ಎಲ್ಲಾ ಜಾತಿ-ಧರ್ಮದವರು ನಾವೆಲ್ಲರೂ ಮನುಷ್ಯರೆಂಬ ಆದರ್ಶವನ್ನು ಅಂತರ್ಗತ ಮಾಡಿಕೊಳ್ಳಬೇಕಿದೆ.  ಈ ಕೃತಿಯಲ್ಲಿ  ಒಟ್ಟೂ ೧೫ ಲೇಖನಗಳಿವೆ. ಇದರಲ್ಲಿ ಮನುಷ್ಯತ್ವ ಬೆಳೆಸಿಕೊಳ್ಳುವುದು, ಮಾನವೀಯತೆ ಮರೀಚಿಕೆಯಾಗುತ್ತಿರುವುದು, ಮಹಿಳೆ ದೇಹ ರಾಜಕಾರಣಕ್ಕೆ ಬಳಕೆಯಾಗುತ್ತಿರುವುದು, ದೇಶ ಬೆಸೆಯುವ ಬಗೆ, ಧರ್ಮ, ಸಮಾಜ, ದ್ವೇಷರಹಿತ ದೇಶ ಕಟ್ಟುವುದು, ರಾಷ್ಟ್ರೀಯತೆ, ಜಾತ್ಯತೀತತೆ,  ಮತೀಯತ್ವ ಮೊದಲಾದ ವಿಷಯಗಳ ಕುರಿತ ಪ್ರಾಜ್ಞ ಲೇಖನಗಳಿವೆ. ಇವೆಲ್ಲವೂ ಇಂದಿನ ತಲೆಮಾರಿಗೆ ಅತ್ಯಗತ್ಯ ಬರೆಹಗಳಾಗಿವೆ....
Image
  ಖ್ಯಾತನಾಮರ ಪ್ರೀತಿಯೇ ಹರಿದಿರುವ ‘ನಾಡ ವರ್ಗಳ್’  ಇದು ಕನ್ನಡದ ಸಂವೇದನಾಶೀಲ ಬರಹಗಾರ ಅಗ್ರಹಾರ ಕೃಷ್ಣಮೂರ್ತಿಯವರ ಕೃತಿ. ಈ ಕೃತಿಯಲ್ಲಿ ಲೇಖಕರು ತಮ್ಮ ಸಮಕಾಲಿನ ಸಂದರ್ಭದ, ವಾರಗೆಯಲ್ಲಿ ಹಿರಿಯರಾದ ಮತ್ತು ಪ್ರಭಾವಿಸಿದ, ಮಾರ್ಗದರ್ಶಿಸಿದ, ನೆರವು ನೀಡಿದ ಹಲವಾರು ಖ್ಯಾತನಾಮರ ಜೊತೆಗಿನ ಒಡನಾಟದ ನೆನಪುಗಳನ್ನು ಬರೆದಿದ್ದಾರೆ. ಇದರಲ್ಲಿ ಯಾವುದೇ ಉತ್ಪೇಕ್ಷೆಗಳು, ಹೊಗಳಿಕೆಗಳು, ತೆಗಳಿಕೆಗಳು, ಯಾರನ್ನಾದರೂ ಹಂಗಿಸುವ ಅಥವಾ ಟೀಕಿಸುವ ಕೆಲಸವನ್ನು ಮಾಡಿಲ್ಲ. ಯಾವುದೇ ಪೂರ್ವಗ್ರಹಗಳಿಲ್ಲದ ಬರೆಹಗಳಿವೆ. ಇವುಗಳ ತುಂಬಾ ಪ್ರೀತಿಯೇ ಹರಿದಿದೆ. ಸಮಕಾಲೀನರ ಬಗ್ಗೆ ಬರೆಯುವಾಗ ಇರಬೇಕಾದ ವಿಮರ್ಶಾತ್ಮಕ ಅಂತರವನ್ನು ಉಳಿಸಿಕೊಂಡು ಮೆಚ್ಚುಗೆಯನ್ನು ದಾಖಲಿಸಿದ್ದಾರೆ.  ಪ್ರಸ್ತುತ ಕೃತಿಯಲ್ಲಿ ೨೭ ಹಿರಿಯರ ಕುರಿತಾದ ಬರಹಗಳಿವೆ. ಈ ಕೃತಿಗೆ ‘ಸಂಪನ್ನರ ನಡೆನುಡಿ’ ಎಂಬ ಅಡಿಬರಹವನ್ನು ಲೇಖಕರು ನೀಡಿದ್ದಾರೆ. ಇದರಲ್ಲಿ ಬರಗೂರು ರಾಮಚಂದ್ರಪ್ಪ, ಡಿ.ಎಸ್. ನಾಗಭೂಷಣ, ಜಿ. ಎಸ್. ಶಿವರುದ್ರಪ, ಕೆ. ವಿ. ತಿರುಮಲೇಶ್, ಸಿದ್ದಲಿಂಗಯ್ಯ, ಕೆ. ಮರುಳಸಿದ್ದಪ್ಪ, ಸಚ್ಚಿದಾನಂದನ್, ಪ್ರಭುಶಂಕರ್, ಪೂರ್ಣಚಂದ್ರ ತೇಜಸ್ವಿ,  ಜಿ.ಕೆ. ಗೋವಿಂದರಾವ್, ಎಂ. ಡಿ. ನಂಜುಂಡಸ್ವಾಮಿ, ಲಂಕೇಶ್, ವೈಕಂ ಮಹಮ್ಮದ್ ಬಶೀರ್,  ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಎಸ್ ಬಂಗಾರಪ್ಪ ಅವರ ಕುರಿತಾದ ಬರಹಗಳಿವೆ. ಕೃತಿಯಲ್ಲಿನ ಕೆಲವು ಬರೆಗಹಗಳ ಬಗ್ಗೆ ಗಮನಿಸ...
Image
    ದುರಂತ ಕಾವ್ಯದಂತೆ ಆವರಿಸುವ  ‘ಹಾಣಾದಿ’ ‘ಹಾಣಾದಿ’ ಎಂದರೆ ಹೊಲಕ್ಕೆ ಎತ್ತಿನ ಗಾಡಿ ಹೋಗುವ ಹಾದಿ ಎಂದರ್ಥ. ಈ ಕಾದಂಬರಿಯ ಶೀರ್ಷಿಕೆ ದ್ವನಿಸುವಂತೆ ಎತ್ತಿನಗಾಡಿ ಹೋಗುವ ಹಾದಿಯಂತೆ ಕಲ್ಲು, ಮುಳ್ಳು, ಕಂಟಿ, ಹೊಂಡದ ರಸ್ತೆಯಲ್ಲಿ ಜೀವನ ಸಾಗಿದಾಗ ನಾವು ಅದನ್ನು ಹಿಂತಿರುಗಿ ನೋಡಿ ಹಿಂದಿನ ಘಟನೆಗಳನ್ನು ಮೆಲುಕು ಹಾಕುವುದುಸ.  ಬರಹಗಾರ  ಕಪಿಲ ಪಿ ಹುಮ್ನಾಬಾದೆ ಅವರ ಈ ಕಾದಂಬರಿ, ವಾಸ್ತವ, ಕಲ್ಪನೆ, ಮಾಂತ್ರಿಕತೆಯನ್ನೆಲ್ಲ ಬೆರೆಸಿದ ಅಪರೂಪದ ನಿರೂಪಣೆಯೊಂದಿಗೆ ಮೂಡಿಬಂದಿದೆ. ಹೊಸ ಕ್ರಮದಲ್ಲಿ ಕಾದಂಬರಿಯಲ್ಲಿ ರೂಪಿಸಬಹುದೆನ್ನುವುದನ್ನು ಇಲ್ಲಿ ಕಪಿಲ್ ಸಾಬೀತುಮಾಡಿದ್ದಾರೆ. ಇಲ್ಲಿನ  ಕಥೆಯೇ ವೈಶಿಷ್ಟ್ಯವಾದುದು. ಇದಕ್ಕೆ ಉಪಕಥೆಗಳು ಇಲ್ಲ. ಅಜ್ಜಿಯೊಬ್ಬಳು ಹೇಳುವ ಕಥೆಯೇ ಈ ಕಾದಂಬರಿಯ ವಸ್ತು. ಕಥೆಯ ವಸ್ತುವನ್ನು ಹಿಗ್ಗಿಸಿದ ರೀತಿ, ಗ್ರಾಮದ ಚಿತ್ರಣ, ಅಪರಿಚಿತರು ಮತ್ತು ಅವರ ಅನುಭವಗಳು, ಅವು ನಮಗೆ ನೀಡುವ ವಿಷಯಗಳು,  ಅವು ರೂಪುಗೊಳ್ಳುವ ಬಗೆ ಮುಂತಾದವುಗಳನ್ನು ಲೇಖಕರು ಚೆನ್ನಾಗಿ ಬಿಂಬಿಸಿದ್ದಾರೆ.  ಹಳ್ಳಿಯಲ್ಲಿ ಇಂದಿಗೂ ನೆಲೆಸಿರುವ ಮೂಢನಂಬಿಕೆ ಹೇಗೆ ಅಪಾಯಕಾರಿ ಮತ್ತು ಜನರು ಮನೆಯನ್ನು, ಹಳ್ಳಿಯನ್ನಾದರೂ ಬಿಡಬಹುದು, ಆದರೆ  ಮೂಢನಂಬಿಕೆಯನ್ನು ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ಈ ಕಾದಂಬರಿಯ ಮೂಲಕ ಲೇಖಕರು ಸಾಬೀತು ಮಾಡಿದ್ದಾರೆ. ಕಥೆ ಸಾಗುವುದು ಒಂದು ಬಾದಾಮ ಗಿಡದ ಸುತ್ತ....