ಮಾಡಿದ್ದುಣೋ ಮಹಾರಾಯ ಇದು ಪ್ರಸಿದ್ಧs ಲೇಖಕ ಮೈಸೂರಿನ ಎಂ ಎಸ್ ಪುಟ್ಟಣ್ಣ (ಮೈಸೂರು ಸೂರ್ಯನಾರಾಯಣ ಭsಟ್ಟ ಪುಟ್ಟಣ್ಣ) ಅವರ ಜನಪ್ರಿಯ ಸಾಮಾಜಿಕ ಕಾದಂಬರಿ. ೧೮೫೪-೧೯೩೦ ಇವರ ಜೀವಿತಾವಧಿ. ಹೊಸಗನ್ನಡ ಸಾಹಿತ್ಯದ ರೂವಾರಿಗಳಲ್ಲೊಬ್ಬರು. ಮೈಸೂರಿನವರಾದ ಇವರು, ಮೈಸೂರಿನಲ್ಲಿ ಮತ್ತು ಮದ್ರಾಸ್‌ನಲ್ಲಿ ಓದಿದರು. ಬೆಂಗಳೂರಿನ ಕೋರ್ಟ್‌ನಲ್ಲಿ (ಈಗಿನ ಹೈಕೋರ್ಟ್) ಭಾಷಾಂತರಕಾರರಾಗಿ ಕೆಲಸ ಮಾಡಿ ನಂತರ ಅಮಲ್ದಾರರಾಗಿ ಚಿತ್ರದುರ್ಗ, ಚಾಮರಾಜನಗರ, ಹೊಸದುರ್ಗ ಮೊದಲಾದೆಡೆ ಕೆಲಸ ಮಾಡಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅವರು ಕೃತಿ ಬರೆದಿದ್ದರೂ ಅವರಿಗೆ ಹೆಸರು ತಂದಿದ್ದು ಎರಡು ಕೃತಿಗಳು ಮಾತ್ರ. ಅವೆಂದರೆ- ಮಕ್ಕಳಿಗಾಗಿ ಬರೆದ ‘ನೀತಿಚಿಂತಾಮಣಿ ಮತ್ತೊಂದು ಕಾದಂಬರಿ ‘ಮಾಡಿದ್ದುಣ್ಣೋ ಮಹಾರಾಯ’. ಇವರ ಇತರ ಕೃತಿಗಳೆಂದರೆ- ಮುಸುಗು ತೆಗೆಯೆ ಮಾಯಾಂಗನೆ, ಕುಣಿಗಲ್ ರಾಮಶಾಸ್ತ್ರ್ತಿಗಳ ಚರಿತ್ರೆ, ಹೇಮಚಂದ್ರರಾಜ ವಿಲಾಸ, ಪೇಟೆ ಮಾತೇನಜ್ಜಿ, ಕಾಂಪೂಷನ ಚರಿತ್ರೆ, ಮಹಮದ್ ಗವಾನನ ಚರಿತ್ರೆ, ಮೊದಲಾದವು. ಇವರು ೧೯೧೫ರಲ್ಲಿ ಮಾಡಿದ್ದುಣ್ನೋ ಮಹಾರಾಯ ಕೃತಿ ರಚಿಸಿದ್ದಾರೆ. ಕೃತಿಯ ಸಾರಾಂಶ: ‘ಮಾಡಿದ್ದುಣೋ ಮಹಾರಾಯ’ ಕೃತಿಯಲ್ಲಿ ಪಾಪ, ಅನ್ಯಾಯ ಅಥವಾ ತಪ್ಪು ಮಾಡಿದವರು ಅದರ ಫಲ ಉಣ್ಣಲೇಬೇಕು, ಉಣ್ಣುತ್ತಾರೆ ಎನ್ನುವುದನ್ನು ವಿವಿಧ ದೃಷ್ಟಾಂತಗಳ ಮೂಲಕ ಚಿತ್ರಿಸಿದ್ದಾರೆ. ಮನುಷ್ಯ ನೀತಿ, ಸದ್ಧರ್ಮ...