Posts

Showing posts from June, 2025
Image
  ಸ್ಥಾಪಿತ ಸಂಪ್ರದಾಯದ ಸವಾಲು ಎತ್ತಿ ತೋರಿಸುವ ‘ತಲೆದಂಡ’  ‘ತಲೆದಂಡ’ ಇದು ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಹೆಸರಾಂತ ನಾಟಕ ಕೃತಿ.  ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ, ಆ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿಯೇ ಇದರ ಕಥಾ ವಸ್ತು.  ೧೨ ನೇ ಶತಮಾನದಲ್ಲಿನ ಒಂದು ಕ್ರಾಂತಿಕಾರಿ ಚಳುವಳಿಯು ಕಠಿಣ ಜಾತಿ ವ್ಯವಸ್ಥೆಯನ್ನು ನಾಟಕ ಪ್ರಶ್ನಿಸುತ್ತದೆ. ಇದು ನಂಬಿಕೆ, ಸಾಮಾಜಿಕ ನ್ಯಾಯ ಮತ್ತು ಉತ್ತಮ ಪ್ರಪಂಚಕ್ಕಾಗಿ ಹೋರಾಟದ ಬಗ್ಗೆ ಒಂದು ಪ್ರಬಲ ಕಥೆಯಾಗಿದೆ. ಜೊತೆಗೆ ಇಂದಿಗೂ ಪ್ರತಿಧ್ವನಿಸುತ್ತ್ತಿದೆ. ಬಸವಣ್ಣ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ಕ್ರಾಂತಿಕಾರಿ ನಾಯಕ. ಆತ ವರ್ಚಸ್ವಿ ಮತ್ತು ಆಧ್ಯಾತ್ಮಿಕ ವ್ಯಕ್ತಿ. ಅವನ ಕಥೆ ಇಂದಿಗೂ ಬದಲಾವಣೆ ಮತ್ತು ಭರವಸೆಯನ್ನು ಪ್ರೇರೇಪಿಸುತ್ತದೆ. ನಾಟಕದ ವಿಷಯ: ೧೨ ನೇ ಶತಮಾನದ ಕರ್ನಾಟಕದ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಘಟನೆಗಳೇ ಇಲ್ಲಿನ ವಿಷಯ. ಜಾತಿ ಮತ್ತು ಪೂರ್ವಾಗ್ರಹದ ಸಂಕೋಲೆಗಳಿಂದ ಮುಕ್ತವಾದ ಸಮಾಜವನ್ನು ಸೃಷ್ಟಿಸುವ ಕನಸು ಕಾಣುವ ದಾರ್ಶನಿಕ ನಾಯಕ ಭಕ್ತಿ ಭಂಡಾರ ಬಸವಣ್ಣ ಇಲ್ಲಿ ದೊರೆ ಕಳಚೂರ್‍ಯ ವಂಶದ ಅಂದರೆ ಕ್ಷೌರಿಕ ವಂಶದ ಬಿಜ್ಜಳನಿಗಿಂತ ಉನ್ನತ ಸ್ಥಾನದಲ್ಲಿ ಕಾಣುತ್ತಾನೆ. ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಭಂಡಾರದ ಪ್ರಧಾನಿ. ಬಿಜ್ಜಳನ ಮಗ ಯುವರಾಜ ಸೋವಿದೇವ ಬಸವಣ್ಣನಿಲ್ಲದ ಸಂದರ್ಭದಲ್ಲಿ ಭಂಡಾರದ ಬಾಗಿಲು ತೆರೆಸಲೆತ್ನಿಸುವಲ್ಲ...
Image
 ಅಪೂರ್ವ ಲೋಕ ತೆರೆದಿಡುವ   ‘ಧ್ವನಿಗಳು ಎದೆಯಾಳದಿಂದ’ ‘ಧ್ವನಿಗಳು ಎದೆಯಾಳದಿಂದ’  ಈ ಕವನ ಸಂಕಲನದ ಮೂಲ ಲೇಖಕರು ದಿವಂಗತ ಎಸ್ ಬಿ ಶಿವಸ್ವಾಮಿ ಸೋಮಲಾಪುರ. ಇದನ್ನು ಸಂಪಾದಿಸಿದವರು ಕೆ ಎಂ ರೂಪಕಲಾ. ಮೂಲತಃ ಕೊಪ್ಪ ತಾಲೂಕಿನವರಾದ ಎಸ್ ಬಿ ಶಿವಸ್ವಾಮಿ ತಾವು ಕಂಡುಂಡ ವಿದ್ಯಮಾನಗಳನ್ನು ಸೂಕ್ತವಾಗಿ ಅವಲೋಕಿಸಿ ವಸ್ತು ವಿಷಯಕ್ಕೆ ಸೂಕ್ತ ಶಬ್ದಗಳನ್ನು ಆಯ್ದು ಕವನ ಕಟ್ಟಿದ್ದಾರೆ. ಅವರ ಸಹೃದಯತೆಯ ಇಲ್ಲಿನ ಕವನಗಳು ಸಶಕ್ತವಾಗಿವೆ.  ಇಲ್ಲಿನ ಕವನಗಳೆಲ್ಲ ಸರಸ-ವಿರಸ, ಪ್ರೀತಿ -ಪ್ರೇಮ, ಸಂಬಂಧ, ಸಂಸಾರ, ಪ್ರಕೃತಿ, ಸಮಾಜ, ಅನುಸಂಧಾನ, ಬೆಳಕು, ಹಳ್ಳಿ- ಪಟ್ಟಣ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಇವೆ. ಕವಿಯ ಬದುಕಿನ ಏಳು- ಬೀಳುಗಳು, ಸುಖ -ದುಃಖ, ಬಯಕೆ, ಭಯ, ನೋವು- ನಲಿವುಗಳ ನವಿರಾದ ಭಾವನೆಗಳನ್ನು ಈ ಕವನ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದಾರೆ.  ಕೆಲವು ಕವನಗಳು ಪ್ರಬುದ್ಧವಾಗಿವೆ, ಇನ್ನೂ ಕೆಲವು ಕವನಗಳಲ್ಲಿ ಪ್ರಾಸಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದಾರೆ. ಈ ಎಲ್ಲ ಕವನಗಳು ವಿಭಿನ್ನ ಭಾವಗಳನ್ನು ಕಟ್ಟಿಕೊಡುತ್ತವೆ. ಕವಿಯ ಬತ್ತದ ಸಾಹಿತ್ಯದ ಒರತೆಯಲ್ಲಿ ಮುಗಿದಷ್ಟೂ ಕವನಗಳು ಮತ್ತೆ ಹುಟ್ಟಿ ಬರುವ ಅಥವಾ ಹೊಮ್ಮಿ ಬಂದಿದ್ದನ್ನು ಇಲ್ಲಿ ಕಾಣಬಹುದು.  ಮೊದಲ ಕವನ ‘ಮಧ್ಯರಾತ್ರಿಯಲ್ಲಿ’  ನಿನ್ನ ನೆನಪು ನನ್ನ ಬಾಗಿಲು ತಟ್ಟುತಿದೆ ಎನ್ನುತ್ತಾ ಜೀವಸ್ಪಂದನವನ್ನು ವಿವರಿಸಿದ್ದಾರೆ. ಪ್ರೇಮದ ಬೆವರ ಹನಿಯು, ಉಸಿರ ಕ...
Image
  ಬದುಕನ್ನು ಆಳವಾಗಿ ತಟ್ಟಿದ ‘ಕಡಲು ನೋಡಲು ಹೋದವಳು’   ಇದು ಫಾತಿಮಾ ರಲಿಯಾ ಅವರ ಲಲಿತ ಪ್ರಬಂಧದ ಕೃತಿ. ಇಲ್ಲಿನ ಬರಹಗಳೆಲ್ಲಾ ಲೇಖಕಿಗೆ  ಆಳವಾಗಿ ತಟ್ಟಿದವು,  ಹಲವು ಪಾಠ ಕಲಿಸಿದವು, ಅಂತರಂಗದ ಕಣ್ಣು ತೆರೆಸಲು ನೆರವಾದವು, ಸಹಜ ಸೌಹಾರ್ದವನ್ನು ಯಾವ ಆಡಂಬರವಿಲ್ಲದ ಮೈಗೂಡಿಸಿಕೊಳ್ಳಲು ನೆರವಾದ ಘಟನೆಗಳೇ ಆಗಿವೆ.  ಹೀಗಾಗಿ ಈ ಪುಸ್ತಕ ಓದುಗರಿಗೆ ಆಪ್ತವಾಗುತ್ತದೆ. ಕೃತಿಯಲ್ಲಿರುವ ಘಟನೆಗಳೆಲ್ಲಾ  ನಮ್ಮ ಜೀವನದಲ್ಲಿ ಹಾದುಹೋದವೇ ಆಗಿವೆ. ಗ್ರಾಮೀಣ ಪರಿಸರದವರಿಗೆ ಬಾಲ್ಯದಿಂದ ಹಿಡಿದು, ನೌಕರಿ ಹಿಡಿಯುವವರೆಗೆ ಅಲ್ಲಿ ಕಂಡುಂಡ, ಅನುಭವಿಸಿದ ವಿವಿಧ ಘಟನೆಗಳನ್ನು  ಇಲ್ಲಿ ಸವಿಯಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಪ್ರಬಂಧಗಳಲ್ಲಿ  ರುಚಿಗೆ ತಕ್ಕಷ್ಟು ಹಾಸ್ಯವಿದೆ. ಸಾಲುಗಳೆಲ್ಲ ಆಪ್ತವಾಗುತ್ತವೆ, ಮಲೆನಾಡಿನ, ಕರಾವಳಿಯ ಪ್ರಕೃತಿ ಸೌಂದರ್ಯ, ಇಲ್ಲಿ ಒಂದೇ ಸಮನೆ ಬೀಳುವ ಮಳೆ, ಯ ವರ್ಣನೆ, ತಿಂಡಿಗಳು, ಜನಜೀವನ ತುಂಬಾ ಇಷ್ಟವಾಗುತ್ತದೆ.  ಈ ಕೃತಿಯ  ಬರಹಗಳೆಲ್ಲಾ ವಿವಿಧ ಪತ್ರಿಕೆಗಳಲ್ಲಿ  ಪ್ರಕಟವಾದವು. ಪ್ರಬಂಧಗಳನ್ನು ಓದುತ್ತ ಹೋದಂತೆ  ಇಡಿ ಪುಸ್ತಕವನ್ನೇ ಓದಿಸಿಬಿಡುತ್ತವೆ. ಸರಳ ಶೈಲಿಯ ಅದರಲ್ಲೂ ವಿಶೇಷವಾಗಿ ತುಳುನಾಡಿನ ಅನುಭವಗಳನ್ನು ಹೊತ್ತ ಕೃತಿ ಇದಾಗಿದೆ. ಪ್ರಬಂಧಗಳ ಶೀರ್ಷಿಕೆಯೂ ಸಹ  ನಮ್ಮನ್ನು ಸೆಳೆಯುತ್ತವೆ.   ಒಂದು ಇಡಿ ತಲೆಮಾರನ್ನು ಬೆಸೆದ...
Image
 ಅನುಭವದ ಪಾಠಕ್ಕೆ ನಗೆಯ ಒಗ್ಗರಣೆ ‘ನನ್ನ ಪೇಶಂಟ್ ಹಾಗೂ ಇತರ ಪ್ರಸಂಗಗಳು’ ನೋವಿನ ದುಗುಡವನ್ನು ಹೊತ್ತುಕೊಂಡು ಬರುವ ರೋಗಿಗಳ ಮಾತಿನಲ್ಲಿ, ಜೀವನದ ಮಜಲುಗಳಲ್ಲಿ, ಭೇಟಿಯಾದ ಜನರ ಜೊತೆಗಿನ ಘಟನೆಗಳನ್ನು ಚಂದದ ನಗುವಿನ ಪಸೆಯೊಂದಿಗೆ, ಹಾಸ್ಯದ ಹಸೆಯನ್ನು ಬಿಡಿಸಿ ಅದಕ್ಕೆ ಬಣ್ಣ ತುಂಬಿ ಆ ಕ್ಷಣಗಳನ್ನು ನಮ್ಮ ಕಣ್ಣೆದುರು ತಂದಿರುವ ಪುಸ್ತಕವೇ “ನನ್ನ ಪೇಶಂಟ್ ಮತ್ತು ಇತರ ಪ್ರಸಂಗಗಳು”. ಇದರಲ್ಲಿ ಲೇಖಕಿ ಡಾ|| ನಾಗರತ್ನಾ ಜಿ. ರಾವ್ ವೈದ್ಯಲೋಕದಲ್ಲಿನ ಸಂಗತಿಗಳನ್ನು ತಮ್ಮ ಅನುಭವಗಳ ಪಾಠಕ್ಕೆ ನಗೆಯ ಒಗ್ಗರಣೆ ಕೊಟ್ಟು  ನಮಗೆಲ್ಲ ಉಣಬಡಿಸಿದ್ದಾರೆ.  ಒಂದು ಆಪಲ್ ತಿಂದರೂ ರೋಗವನ್ನು ದೂರವಿಡಬಹುದು ಎಂಬ ಆಂಗ್ಲ ಗಾದೆ ಇದೆ. ಆದರೆ ಈ ಕೃತಿಯ ಪುಟಪುಟದಲ್ಲೂ ನಗೆಯ ಗುಳಿಗೆ ತುಂಬಿಸಿ ರೋಗಿಗಳು ಓದಿದರೂ ಸಹ ಗುಣಮುಖರಾಗಬಹುದಾದಷ್ಟು ಚಿಕಿತ್ಸೆಯನ್ನು ನಗುವಿನ ಮೂಲಕ ಲೇಖಕಿ ನೀಡಿದ್ದಾರೆ. ವೈದ್ಯ ಮತ್ತು ರೋಗಿಗಳ ರಸಮಯ ಪ್ರಸಂಗಗಳನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮನ್ನೇ ತಾವು ಹಾಸ್ಯಕ್ಕೆ ಗುರಿ ಮಾಡಿಕೊಂಡಿದ್ದಾರೆ. ಪೇಶಂಟ್‌ಗಳನ್ನು ವಿಧವಿಧವಾಗಿ ಪರಿಚಯಿಸಿ ಅವರ ಮುಗ್ಧತೆ, ಮುದ್ದುತನ, ಭಂಡತನ, ಜಗಳಗಂಟತನ ಇವೆಲ್ಲವನ್ನೂ ನಮ್ಮೆದುರು  ಬಹಳ ಪ್ರಾಮಾಣಿಕವಾಗಿ ರಸಮಯವಾಗಿ ಬಿಚ್ಚಿಟ್ಟಿದ್ದಾರೆ.  ಇವುಗಳನ್ನು ಓದುತ್ತಾ ಹೋದಂತೆ ಇವರ ಪೇಶಂಟ್‌ಗಳು ಸಹ ನಮಗೆ ಆಪ್ತರಾಗಿಬಿಡುತ್ತಾರೆ. ವೈದ್ಯರು ಬರೆಯುವುದೇ ಅಪರೂಪ. ಅಂತಹುದರಲ್ಲಿ ತಮ್ಮ...
Image
 ಸಮಾಜದ ಸ್ಥಿತಿ ಬಿಚ್ಚಿಡುವ   ‘ಹೊಳೆ ದಂಡೆ’ ‘ಹೊಳೆ ದಂಡೆ- ಅಂಕಣ ಮಾಲೆ ನೋಟ-೧’  ಪ್ರಸ್ತುತ ಕೃತಿಯು ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಹಾಯ್ ಬೆಂಗಳೂರು’ ವಾರಪತ್ರಿಕೆಗೆ ಬರೆದ ೩೦ ಅಂಕಣಗಳನ್ನು ಈ ಕೃತಿಯಲ್ಲಿ ಪ್ರಕಟ ಮಾಡಿದ್ದಾರೆ. ಇದರಲ್ಲಿ ರಾಜಕೀಯವಿದೆ,  ಕೃಷಿ ಇದೆ, ಸಾಂಸ್ಕೃತಿಕ ಚಟುವಟಿಕೆ ಇದೆ, ನೆಲ ಸಂಸ್ಕೃತಿಯ ಬಗ್ಗೆ ಇದೆ, ವ್ಯಕ್ತಿ ದರ್ಶನವಿದೆ. ಸಾಧಕರಿದ್ದಾರೆ. ಯುವಜನತೆ ಬಗ್ಗೆ ಇದೆ. ಪ್ರಸ್ತುತ ಕೃತಿಯಲ್ಲಿ ನಾಗತಿಹಳ್ಳಿಯವರ ಬಹುಮುಖ್ಯ ಚಿಂತನೆಗಳನ್ನು ಇಲ್ಲಿನ ಅಂಕಣಗಳು ಹರಿಸಿವೆ. ಸ್ಪಂದನ ಮತ್ತು ಪ್ರತಿಸ್ಪ್ಪಂದನ, ಖಾಸಗಿ ಮತ್ತು ಸಾರ್ವಜನಿಕ ಚಿಂತನೆಗಳು ಪ್ರಸ್ತುತ ಮತ್ತು ಹಳೆಯ ವಿಶ್ಲೇಷಣೆಗಳು ಆವಿಯಾಗದೆ ಒಂದೆಡೆ ದಾಖಲಾಗುವಂತೆ ಈ ಕೃತಿಯ ಮೂಲಕ ಲೇಖಕರು ಮಾಡಿದ್ದಾರೆ. ಸಮಸ್ತ ವಿಷಯವು ಓದುಗರಿಗೆ ಇಲ್ಲಿ ಸಿಕ್ಕಂತಾಗಿದೆ.  ಕೃತಿಯ ಮೊದಲ ಅಂಕಣ ‘ಜೀವವೈವಿಧ್ಯದ ಅನಂತ ವಿಸ್ತಾರಗಳ ಕಡೆಗೆ’ ಇದರಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡದೆ ಕವಡೆ ಕಟ್ಟಿಕೊಂಡು ದುಡಿಯುವ ಜೀತದಾಳಗಳು ಐಟಿಯಲ್ಲಿ  ಅಸಂಖ್ಯ. ಪ್ರಾಜೆಕ್ಟ್ ಮೇಲೆ ವಿದೇಶಕ್ಕೆ ಹೋಗಬಹುದು ಎನ್ನುವುದು ಕೆಲವರ ಆಸೆ. ಐಟಿ ಉದ್ಯಮ ಪ್ರತಿಭಾ ಪಲಾಯನಕ್ಕೆ ಸೋಪಾನ ಎನ್ನುವ ಲೇಖಕರು, ಭಾರತದಲ್ಲಿ ಕಸುಬಿನ ಜೊತೆ ಗುರುತಿಸಿಕೊಳ್ಳಲು ಹಿಂಜರಿಕೆ ಇದೆ. ಭಾರತೀಯ ಮತ್ತು ಕನ್ನಡದ ತರುಣ ಮನಸ್ಸುಗಳು ಐಟಿಯಿಂದ ಹೊರಗೆ ಬಂದು ವೈವಿಧ್ಯಮಯವ...
Image
ಮಕ್ಕಳಿಗೆ ವಸಂತಸ್ಪರ್ಶ ಕೊಡುವ   ಬಾರೋ ಬಾರೋ ಮಳೆರಾಯ’ ‘ಬಾರೋ ಬಾರೋ ಮಳೆರಾಯ’ ಇದು ದಿವಂಗತ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರ ಮಕ್ಕಳ ಕವನ ಸಂಕಲನ. ಮಕ್ಕಳ ಮನಸ್ಸಿನ ಹಸಿ ಮಣ್ಣನ್ನು ಹೊಕ್ಕ ಬೀಜಗಳು ಮುಂದೆ ಫಲ ಕೊಡುತ್ತವೆ. ನಮ್ಮ ಬಾಲ್ಯದಲ್ಲಿನ ಅನೇಕ ಘಟನೆಗಳು ಈಗ ನಮ್ಮನ್ನು ಕಾಡುವಂತೆ ಮಕ್ಕಳಿಗೂ ಸಹ ಮಕ್ಕಳ ಕವನಗಳು ಮುಂದೆ ಕಾಡುತ್ತವೆ. ಕಾಲ ಯಂತ್ರದಂತೆ ಯಾವುದೇ ಪದ್ಯವೂ ನಮ್ಮನ್ನು ಬಾಲ್ಯಕ್ಕೆ ಒಮ್ಮೆಗೆ ದಾಟಿಸಬಲ್ಲದು. ನಾವು ಆಡಿದ, ಬೆಳೆದ ಮನೆಯಂಗಳ, ಶಾಲೆಯ ಬಯಲು, ತೋಪು, ಕೆರೆ, ಮೈದಾನಗಳು, ಬಾಲ್ಯದ ಗೆಳೆಯ - ಗೆಳತಿಯರು, ನಾವು ಪಡೆದ ಅನುಭವಗಳು, ನೋಟ, ಸ್ಪರ್ಶ ಮೊದಲಾದವುಗಳು ಇನ್ನೂ ಹಸಿರಾಗಿರುತ್ತದೆ ಈ ಅದ್ಭುತವಾದ ಮತ್ತು ಮರೆತು ಹೋದ ಸಾಮ್ರಾಜ್ಯವನ್ನು ಕವಿ ಎಚ್ ಎಸ್ ವೆಂ ವೆಂಕಟೇಶಮೂರ್ತಿ ಈ ಕೃತಿಯ ಮೂಲಕ ಮತ್ತೆ ಕಟ್ಟಿಕೊಟ್ಟಿದ್ದಾರೆ.  ಈ ಪದ್ಯಗಳು ನಮ್ಮ ಪರಂಪರೆಗೆ ಹಾಕಿದ ಪಾತಾಳ ಗರಡಿಗಳಂತೆ ಇವೆ. ಓಯಸಿಸ್‌ನಂತಿವೆ. ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಇವು ಮಹತ್ವದ ಪಾತ್ರವನ್ನು ಒದಗಿಸಲಿವೆ. ಮಕ್ಕಳ ಕವಿತೆಗೊಂದು ವಸಂತ ಸ್ಪರ್ಶವನ್ನು ಈ ಕೃತಿಯ ಮೂಲಕ ನೀಡಿದ್ದಾರೆ ಎಂದರೆ ತಪ್ಪೇನಿಲ್ಲ. ಇಲ್ಲಿನ ಪದ್ಯಗಳು ಮನಸ್ಸಿಗೆ ಮುದ ಕೊಡುತ್ತದೆ. ಗೀತೆಗಳು ನಮ್ಮನ್ನು ಕುಣಿತಕ್ಕೊಪಡಿಸುತ್ತವೆ, ತಾಳ ಹಾಕಿಸುತ್ತವೆ, ಕುತೂಹಲಗಳ ಪರಿಸರವಿದೆ, ಮಕ್ಕಳ ಮೆಚ್ಚಿನ  ಚಿಟ್ಟೆ, ಕಾಗೆ, ಕೋಗಿಲೆ, ಬೆಕ್ಕು, ಗುಬ್ಬಿ, ಚಂದಮಾಮ, ನವಿ...
Image
 ಸಾಹಸಮಯ ವ್ಯಕ್ತಿತ್ವ ಬೆಳೆಸುವ ‘ಅಂಶು ಮತ್ತು ರೋಬೋ ಸಾಹಸ’ ಇದು ರೋಬೋ ಅಥವಾ ರೋಬೋಟ್ ಯಂತ್ರಮಾನವನ ಜೊತೆ ಕನಸಿನ ಮೂಲಕ ತನ್ನೆಲ್ಲ ಮನಸ್ಸಿನ ಇಚ್ಛೆಯನ್ನು ಪೂರ್ಣಗೊಳಿಸಿಕೊಂಡ ಅಂಶು ಎಂಬ ಬಾಲಕನ ಸುತ್ತ ಹೆಣೆದಿರುವ ಕಥಾ ಸಂಕಲನ.  ಇದರ ಲೇಖಕರು ಮತ್ತೂರು ಸುಬ್ಬಣ್ಣ. ಮೂಲತಃ ಶಿವಮೊಗ್ಗದವರಾದ ಇವರು, ಬೆಂಗಳೂರಿನ ಹಿಲ್ ರಾಕ್ ನ್ಯಾಶನಲ್ ಪಬ್ಲಿಕ್ ಶಾಲೆಯ ನಿವೃತ್ತ ಪ್ರಾಂಶುಪಾಲರು. ಮಕ್ಕಳ ಕಥೆ ಬರೆಯುವುದರಲ್ಲಿ ಸಿದ್ಧಹಸ್ತರು.  ಕನ್ನಡದಲ್ಲಿ ಮಕ್ಕಳ ಕಥೆಗಳು ಹೇಗಿರಬೇಕು ಎನ್ನುವುದನ್ನು ಇವರ ಕಥೆಗಳ ಮೂಲಕ ಊಹಿಸಬಹುದು. ಕೇವಲ ನೀತಿಬೋಧಕ ಕಥೆ ಬರೆಯುವವರೇ ಹೆಚ್ಚಿರುವ ಈ ಸಂದರ್ಭದಲ್ಲಿ ವೈಜ್ಞಾನಿಕ ವಿಚಾರಗಳ ಮೇಲೂ ನಕ್ಕಳ ಕಥೆ ಬರೆಯಬಹುದು. ಇದು ಇವತ್ತಿನ ಮಕ್ಕಳಿಗೆ ಅವಶ್ಯಕ. ಮಕ್ಕಳ ಮನದ ಮೇಲೆ  ವಿಮಾನ, ರಾಕೆಟ್, ಉಪಗ್ರಹ, ರೊಬೋಟ್ ಮೊದಲಾದವು ತುಂಬಾ ಪರಿಣಾಮ ಬೀರಬಲ್ಲವು ಎನ್ನುವದನ್ನರಿತು ಅವರ ಭವಿಷ್ಯಕ್ಕೆ  ಸಹಾಯವಾಗುವ ನಿಟ್ಟಿನಲ್ಲಿ ‘ಅಂಶು ಮತ್ತು ರೋಬೊ ಸಾಹಸ’ ಎಂಬ ಕೃತಿಯನ್ನು ರಚಿಸಿದ್ದಾರೆ. ಮಕ್ಕಳ ಮುಗ್ಧತೆಯನ್ನು ಅರ್ಥ ಮಾಡಿಕೊಂಡು ಹೆಣೆದಿರುವ ಸುಂದರ ಕಥೆಗಳ ಗುಚ್ಛ ಪ್ರಸ್ತುತ ಕೃತಿಯಾಗಿದೆ. ಈ ಕಥಾ ಸಂಕಲನ ಮಕ್ಕಳಿಗೆ ಹೊಸ ಹುರುಪು, ಆಸೆ, ಕನಸು, ಸಾಹಸ, ವೈವಿಧ್ಯಮಯ, ವೈಜ್ಞಾನಿಕ ಆವಿಷ್ಕಾರಗಳ ಪರಿಚಯ ಮಾಡಿಸುತ್ತದೆ. ಮುಂದಿನ ಪೀಳಿಗೆಗೆ ಸಿಗಬಹುದಾದಂತಹ ಯಂತ್ರೋಪಕರಣಗಳು, ಕಂಪ್ಯೂಟರ್ ತಂತ್ರಜ್ಞಾನಗಳನ್ನು...
Image
 ರಕ್ತಿ, ವಿರಕ್ತಿ ತುಂಬಿರುವ  ‘ಅಕ್ಕನಂತೊಬ್ಬಳು ಅನುರಕ್ತೆ ’ ಅಕ್ಕಮಹಾದೇವಿಯು  ಚೆನ್ನಮಲ್ಲಿಕಾರ್ಜುನನಲ್ಲಿ  ಅನುರಕ್ತಿಯಾದುದು ಆಧ್ಯಾತ್ಮಿಕ ಸ್ಥರದ್ದು. ಆದರೆ ಇಲ್ಲಿ  ‘ನೀಲ’ ಕವಯತ್ರಿಯ  ಆರಾಧ್ಯದವನಾಗಿದ್ದು ಅವನಲ್ಲಿ ಲೇಖಕಿಯ ಅನುರಕ್ತಿಯು ಲೌಕಿಕ ಮತ್ತು  ಸಾಂಸಾರಿಕ ಸ್ಥರದ್ದು. ಪ್ರೇಮಿಯಾಗಿಯೂ, ಗೃಹಿಣಿಯಾಗಿಯೂ ಏಕಕಾಲದಲ್ಲಿ ತಮ್ಮೆಲ್ಲ  ಉತ್ಕಟತೆ, ಸಂದಿಗ್ಧತೆ,  ಸಂಕಟ ಮತ್ತು ತಲ್ಲಣಗಳೊಂದಿಗೆ ಸಮಕಾಲೀನ ಸಮಾಜ ಮತ್ತು  ಸಂದರ್ಭವನ್ನು ಮನೋಹರವಾಗಿ ‘ಅಕ್ಕನಂತೊಬ್ಬಳು ಅನುರಕ್ತೆ’  ಕವನ ಸಂಕಲನದಲ್ಲಿ  ಚಿತ್ರಿಸಲಾಗಿದೆ.  ಈ ಕೃತಿಯ ಲೇಖಕರು ಪೂರ್ಣಿಮಾ ಸುರೇಶ್. ಇವರು  ಉಡುಪಿ ಸಮೀಪದ  ಹಿರಿಯಡ್ಕದವರು.  ಪ್ರತಿಭಾನ್ವಿತೆ. ತಮ್ಮ ಸೃಜನಶೀಲ, ಸಂಶೋಧನಾ ಹಾಗೂ ಸಾಂಸ್ಕೃತಿಕ  ಚಟುವಟಿಕೆಗಳ ಮೂಲಕ  ಕನ್ನಡ ನಾಡು-ನುಡಿಯ ಸೇವೆಯಲ್ಲಿ ತೊಡಗಿದ್ದಾರೆ.      ಕವನ  ಸಂಕಲನದಲ್ಲಿ ತಮ್ಮ ಅಂತರಂಗದ ಎಲ್ಲ ಭಾವಗಳನ್ನು ಹರವುತ್ತ ಹೋಗಿದ್ದಾರೆ. ಒಳದನಿಯನ್ನು  ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಮನಸ್ಸನ್ನು ಪ್ರವರ್ತಿಸಿಕೊಂಡಿದ್ದಾರೆ.  ಒಳಬಾಳಿನ ಸೂಕ್ಷ್ಮ ಇಲ್ಲಿ ಅಭಿವ್ಯಕ್ತಿಗೊಂಡಿದೆ. ಕವಯತ್ರಿಯ ಭಾಷಾ  ವೈವಿಧ್ಯ ಮತ್ತು  ಭಾಷಾ ಸಂಪತ್ತನ್ನು ಇಲ್ಲಿ ಕಾಣಬಹುದು. ಇಲ್ಲಿನ ಕವಿತೆಗಳು...
Image
   ಹೃದಯದಲ್ಲಿ ನೆಲೆ ನಿಲ್ಲುವ ‘ಮೌನ ಧ್ವನಿಸಿತು’  ಪ್ರಸ್ತುತ ಕಾದಂಬರಿ ‘ಮೌನ ಧ್ವನಿಸಿತು’ ವೇಶ್ಯೆಯೊಬ್ಬಳ ದುರಂತ ಕಥೆ.  ಆಕೆಯ ಮಗಳು ತಾಯಿಯ ಒತ್ತಡಕ್ಕೆ ಸಿಲುಕಿದರೂ ವೇಶ್ಯೆಯಾಗದೆ ಸುಂದರ ಬಾಳನ್ನು ಕಟ್ಟಿಕೊಂಡ ಮತ್ತು ಮುಖವಾಡ ಹಾಕಿಕೊಂಡು ಬದುಕುವ ಕೆಲವು ಗಂಡಸರ ಕಥೆ ಇಲ್ಲಿದೆ. ಇದರ ಲೇಖಕರು ದಿವ್ಯಾ ಶ್ರೀಧರರಾವ್. ಮೂಲತಃ ಕುಂದಾಪುರ ತಾಲೂಕು ಸಿದ್ದಾಪುರದವರಾದ ಇವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ದಿವ್ಯಾ ಅವರ ಎರಡನೆಯ ಹೆರಿಗೆಯೇ ‘ಮೌನ ಧ್ವನಿಸಿತು’ ಇಲ್ಲಿನ ಕಥೆ  ಹೆಣ್ಣಿನ ಕಣ್ಣೀರಿನ ಕಥೆ. ಸಮಾಜಕ್ಕೆ ಹಿಡಿದ ಕನ್ನಡಿ. ಇಲ್ಲಿ ಮೌನವೇ ಕಣ್ಣೀರು. ಮೌನ ಮಾತಿಗೆ ಮೀರಿದ್ದನ್ನು ಹೇಳುತ್ತದೆ. ಇಲ್ಲಿ ಮೌನ ಧ್ವನಿಸುವುದು ದುಖವನ್ನು ಮತ್ತು ಉಸಿರುಗಟ್ಟುವ ವಾತಾವರಣವನ್ನು. ಹೆಂಗಸನ್ನು  ಆಮಿಷ ಒಡ್ಡಿ ಮುಂಬೈನ ಕೆಂಪುದ್ವೀಪಕ್ಕೆ ಕಳುಹಿಸುವ ಚಿತ್ರಣವಿದೆ. ಅಂತಹ ಕಥೆಯೊಂದಕ್ಕೆ ಬಲಿಯಾದವಳು ಸುಂದರಿ ಎನ್ನುವ ಹೆಂಗಸು. ಆಕೆಯ ಮಗಳೇ ಸೌಮ್ಯಾ. ಈ ಇಬ್ಬರು ಕಥೆಯ ಕೇಂದ್ರಬಿಂದು. ಇಲ್ಲಿ ಸೌಮ್ಯಾ ಕಥಾನಾಯಕಿ. ಆಕೆಗೆ ತಾಯಿ ಸುಂದರಿ ದೂರದಲ್ಲಿದ್ದು ದುಡಿದು ತನ್ನನ್ನು ಸಾಕುತ್ತಿದ್ದಾಳೆ ಎಂದಷ್ಟೇ ಗೊತ್ತಿತ್ತು. ಆದರೆ ಅವಳು ಮಾಡುವ ಕೆಲಸವೇನು ಎಂದು ಸಾಕಷ್ಟು ಸಲ ಅಜ್ಜಿ ರುಕ್ಮಿಣಿಯಲ್ಲಿ ಕೇಳಿದ್ದರೂ ಉತ್ತರ ಸಿಕ್ಕಿರಲಿಲ್ಲ. ಅಜ್ಜಿಯ ಗಾಢಪ್ರೀತಿಯಲ್ಲಿ ಬೆಳೆದರೂ ಶಾಲೆಯಲ್ಲಿ ನಿನ್ನ ಅಪ್ಪನಾರು. ಅಮ್ಮ ಎಲ್ಲ...
Image
 ಭಿನ್ನಸಾಧ್ಯತೆಗಳ ಮೂಲಕ ಕಥೆ ಹೇಳುವ ‘ಮದನಿಕೆ’ ಇದೊಂದು ಐತಿಹಾಸಿಕ ಕಾದಂಬರಿ. ಚರಿತ್ರೆಯನ್ನು ವರ್ತಮಾನದೊಂದಿಗೆ ಬೆರೆಸಿ  ಸುಂದರ ಕಥಾಹಂದರವನ್ನು  ಕಟ್ಟಿಕೊಟ್ಟಿದೆ. ಇದರ ಲೇಖಕರು ಪ್ರಸ್ತುತ ಬೆಂಗಳೂರಿನಲ್ಲಿ ಎಂಎನ್‌ಸಿಯಲ್ಲಿ ವೃತ್ತಿಯಲ್ಲಿರುವ ರಮೇಶ್ ಶೆಟ್ಟಿಗಾರ್ ಮಂಜೇಶ್ವರ್.  ಕಾದಂಬರಿಯ ಕಥೆಯಲ್ಲಿ ಚರಿತ್ರೆ ಕೇವಲ ಒಂದು ತುಣುಕಷ್ಟೆ. ಅದಕ್ಕೆ  ಉತ್ತಮ ಸನ್ನಿವೇಶಗಳನ್ನು ಹೆಣೆದು ಸುಂದರ ಸಿನಿಮಾ ಮಾಡುವ ಕತೆಯನ್ನು ತಯಾರಿಸಿದ್ದಾರೆ. ಇದು ಅವರ ಚೊಚ್ಚಲ ಕಾದಂಬರಿಯೂ ಹೌದು. ‘ಮದನಿಕೆ’ ಕಾದಂಬರಿಗೆ ದಿ ಲಾಸ್ಟ್ ಸೀನ್ ಎಂಬ ಅಡಿಬರಹ ಹಾಕಲಾಗಿದೆ. ಈ ಅಡಿಬರಹವೇ ಕಾದಂಬರಿಯ ಜೀವಾಳ ಮತ್ತು ಕಥಾ ವಸ್ತು. ಅತ್ಯಂತ ಸುಂದರ ಮತ್ತು ಸರಳ  ನಿರೂಪಣೆ, ಮಧ್ಯೆ ಕೆಲವೆಡೆ ಲಘುಹಾಸ್ಯ ರಸಾಯನ, ಗ್ರಾಮಾಂತರದ ಜೀವನವೂ ಇಲ್ಲಿ ಇಣುಕಿದೆ. ಇವು ಓದುಗ ಒಂದೇ ಕಥೆಯನ್ನು ಓದಿ ಬೇಸರಗೊಳ್ಳದಂತೆ ಮಾಡಲು ಅನುಕೂಲವೂ ಹೌದು. ಹಾಗಂತ ಇಲ್ಲಿನ ಕಥೆ ಬೇಸರ ತರುವಂತದಲ್ಲ. ನಮ್ಮೆಲ್ಲರಿಗೂ ಗೊತ್ತಿರುವ ಬೇಲೂರಿನ ನಾಟ್ಯರಾಣಿ ಶಾಂತಲೆಯ ಕುರಿತಾದದ್ದು. ಇದನ್ನು ಇನ್ನಷ್ಟು ಹಿಗ್ಗಿಸಿದ್ದಾರೆ, ಇತಿಹಾಸಕ್ಕೆ ಕುಂದುಂಟಾಗದಂತೆ ರಂಜನೀಯವಾಗಿಯೂ ನೇಯ್ದಿದ್ದಾರೆ.   ವಿದೇಶಿ ನಿರ್ಮಾಪಕ ಸ್ಯಾಮ್ಸ್‌ನ್ ಪ್ರಸಿದ್ಧ ಬೇಲೂರು ನೋಡಲು ಬಂದು ಅಲ್ಲಿನ ಗೈಡ್ ಕಮ್ ಭರತನಾಟ್ಯ ಕಲಾವಿದೆ ಶಾಂತಲಕ್ಷ್ಮೀ  ನಾಟ್ಯಕ್ಕೆ ಮನಸೋತು, ಬೇಲೂರು ಕುರಿತಾ...
Image
   ಸ್ಫೂರ್ತಿ, ಆತ್ಮವಿಶ್ವ್ವಾಸ ತುಂಬುವ ‘ಬುತ್ತಿ’ ‘ಬುತ್ತಿ’ ಈ ಕೃತಿಯಲ್ಲಿ ಇರುವುದು ಬುದ್ಧಿಯ ಊಟಕ್ಕೆ ಸಿದ್ಧಪಡಿಸಿದ ಬುತ್ತಿ. ಬುದ್ಧಿಯ ಹಸಿವನು ನೀಗಿಸಲು ಕಟ್ಟಿಟ್ಟ ಅರಿವಿನ ಬುತ್ತಿ. ಇದರಲ್ಲಿ ತುಂಬಿರುವುದು ಅಮೃತಸದೃಶ ಜ್ಞಾನಫಲಗಳು, ಜೀವಸತ್ವವಾಗಿ ಪರಿವರ್ತಿತವಾದ ರಸಾಯನ. ಅರಿವಿನ ಉಣಿಸುಗಳು, ವಿಷಯ ವೈವಿಧ್ಯದ ಚಿಂತನೆ,  ಬೆಳಗುವ ಹೊಸ ಸಾಲು ದೀಪಗಳು ಇಲ್ಲಿವೆ. ಹಣತೆಗಳಾದರೂ ಹಳತಾಗಿರಬಹುದು, ಆದರೆ ದೀಪಗಳ ಬೆಳಕಂತೂ ಹೊಸತಾಗಿದೆ. ಕತ್ತಲೆಯ ಮಸ್ತ್ತಕಕ್ಕನುಸಾರವಾಗಿ ಬೆಳಕಿನ ಪ್ರಭಾವ, ಅಜ್ಞಾನದ ಮಟ್ಟಕ್ಕನುಸಾರವಾಗಿ ಜ್ಞಾನದೀಪದ ಪ್ರಭಾವ ಇಲ್ಲಿ ಬೆಳಗಿರುವುದನ್ನು ಕಾಣಬಹುದು. ಈ ಕೃತಿಯ ಕರ್ತೃ ದಿ. ಅಂಬಾತನಯ ಮುದ್ರಾಡಿ. ಉಡುಪಿ ಜಿಲ್ಲೆ ಹೆಬ್ರಿ ಸಮೀಪದ ಮುದ್ರಾಡಿಯವರಾದ ಇವರು, ವೃತ್ತಿಯಿಂದ ಮುಖ್ಯ ಶಿಕ್ಷಕರಾಗಿ ನಿವೃತ್ತರು. ಬಹುಮುಖ ಪ್ರತಿಭೆ, ಹರಿಕೀರ್ತನೆಕಾರರು, ಯಕ್ಷಗಾನ ಕಲಾವಿದರು, ವಿದ್ವಾಂಸರು, ಹತ್ತುಹಲವು ಕ್ಷೇತ್ರಗಳಲ್ಲಿ ಪ್ರತಿಭೆಯ ಹರಹನ್ನು ಹೊಂದಿದವರಾಗಿದ್ದರು. ಈ ಕೃತಿಯಲ್ಲಿ ಒಟ್ಟು ೫೪ ಚಿಂತನಗಳಿವೆ. ಇವೆಲ್ಲ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಚಿಂತನ ಬರಹಗಳಾಗಿವೆ.  ಇಲ್ಲಿನ ವಿಷಯಗಳು ಬಹುಹಿರಿದಾದವಾಗಿವೆ. ಈ ಚಿಂತನ ಧಾರೆಗಳು ಓದುಗರ ಮನಮುಟ್ಟುವುದರಲ್ಲಿ, ಹೃದಯದ ಕದ ತಟ್ಟುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಅನೇಕ ವಿಶಿಷ್ಟ ಅಂಶಗಳ ಹೊಳಹಿದೆ. ಗೆಳೆಯರಿಗೆ ಪಾಠವಿದೆ, ಹರಯದವರಿಗೆ ಆಪ್ತ ಸಲಹ...
Image
    ಅಲೆಮಾರಿಗಳ ಭಯಾನಕ ಬದುಕು ಬಿಚ್ಚಿಡುವ ‘ಅರಣ್ಯ ಕಾಂಡ’ ‘ಅರಣ್ಯ ಕಾಂಡ’ ಈ ಕಾದಂಬರಿಯ ಲೇಖಕರು ಕಾರವಾರದ ಮಹಾಬಲೇಶ್ವರ ಸೈಲ್.  ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ, ನಂತರ ಪೊಲೀಸ್, ಅರಣ್ಯ, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸದ್ಯ ಮಡಗಾಂವ್‌ನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಬದುಕು ಮತ್ತು ಪ್ರಕೃತಿ ಪರಿಸರವನ್ನು ಅನುಭವಿಸಿ, ಅದನ್ನೇ ತಮ್ಮ ಕೃತಿಗಳಲ್ಲಿ ಬಿಂಬಿಸುವುದು ಅವರ ಕೃತಿಗಳ ವೈಶಿಷ್ಟ್ಯ. ಈ ಕೃತಿಯ ಮೂಲ ಕೊಂಕಣಿ. ಕನ್ನಡಕ್ಕೆ ಬೆಂಗಳೂರಿನ ಸಾಹಿತಿ, ಅನುವಾದಕಿ ಗೀತಾ ಶೆಣೈ ಭಾಷಾಂತರಿಸಿದ್ದಾರೆ.   ‘ಬೆಂಕಿಯಿಂದ ಬಾಣಲೆಗೆ ಬಿದ್ದರು’ ಎನ್ನುವುದೊಂದು ಗಾದೆ ಮಾತು. ಇದೇ ಈ ಅರಣ್ಯ ಕಾಂಡ ಕಾದಂಬರಿಯ ಕಥೆ.  ಬಡತನ, ನಿರುದ್ಯೋಗದಲ್ಲಿರುವ ಕಷ್ಟಜೀವಿಗಳನ್ನು ದಲ್ಲಾಳಿಗಳು  ದುರುಪಯೋಗಪಡಿಸಿಕೊಂಡು ಕಲ್ಲುಕ್ವಾರಿಯಲ್ಲಿ ಜೀತದಾಳುಗಳನ್ನಾಗಿ ಮಾಡಿ ಶೋಷಿಸುವುದು, ಅವರ ಕಪಿಮುಷ್ಠಿಯಿಂದ    ಪಾರಾಗುವುದು, ಊರಿಗೆ ಮರಳಲು ಕಾಡಿನಲ್ಲಿ ದಾರಿ ತಪ್ಪಿ ಪಡುವ ಪಾಡನ್ನು ಈ ಕಾದಂಬರಿಯಲ್ಲಿ ಲೇಖಕರು ಸುಂದರವಾಗಿ ನೇಯ್ದಿದ್ದಾರೆ. ಇಲ್ಲಿನ  ಕಥೆ ಓದುವಾಗ ಈ ಅಲೆಮಾರಿಗಳು ಎದುರಿಸಿದ ಸಂಕಟ, ನೋವು ನಮ್ಮ ಹೃದಯವನ್ನು ಕರಗಿಸುತ್ತದೆ.  ಅಲ್ಲಿ ಅವರು ಪಡುವ ಯಮಯಾತನೆಯ ಜೀವನ, ಮಾಲೀಕ ಮತ್ತು ಮೇಲ್ವಿಚಾರಕನ ದರ್ಪ, ಅಹಂಕಾರ, ಕಾರ್ಮಿರನ್ನು ಕತ್ತೆಯಂತೆ ದುಡಿಸಿಕೊಳ್ಳುವುದು,  ...
Image
  ವಸ್ತುವೈವಿಧ್ಯದ ಸುಂದರಿ ‘ವಸುಂಧರೆ’ .................. ಕಲ್ಪನೆಯ ಮುಗಿಲಿನಿಂದ ಎದೆಗೆ ಬಿದ್ದ ಭಾವದ ಹನಿಗಳನ್ನು ಸರಮಾಲೆಯಾಗಿ ನೆನೆದ ಸಂಭ್ರಮದಲ್ಲಿ ಹುಟ್ಟಿ ಬಂದ ಕವಿತೆಗಳು ‘ವಸುಂಧರೆ’ ಕವನಸಂಕಲನದ ಗರ್ಭದಲ್ಲಿವೆ. ಈ ಕೃತಿಯ ಲೇಖಕರು ಟಿ ಎಸ್ ಭವ್ಯಾ. ಇವರು ಹೊಸನಗರ ತಾಲೂಕು ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳಷ್ಟೇ ಮಾರುಕಟ್ಟೆಗೆ ಬಂದ ‘ವಸುಂಧರೆ’ ಭವ್ಯಾ ಅವರ ಚೊಚ್ಚಲ ಹೆರಿಗೆ.  ಮಲೆನಾಡಿನವರೇ ಆದ ಇವರು, ತಾನು ಇಲ್ಲಿ ಕಂಡುಂಡ ಅನುಭವ, ಪ್ರಕೃತಿ ಸೌಂದರ್‍ಯ, ಮೋಹಕತೆ, ಐಸಿರಿ, ಮಳೆಗಳನ್ನು  ಶ್ರೀಮಂತ ಪದಪುಂಜಗಳಲ್ಲಿ ಬಣ್ಣಿಸಿ ಕಾವ್ಯಪ್ರಿಯರಿಗೆ ರಸದೌತಣ ನೀಡುವ ಪ್ರಯತ್ನವನ್ನು ಮಾಡಿದ್ದಾರೆ.   ಮಲೆನಾಡಿನವರು ಹೆಚ್ಚಾಗಿ ಇಲ್ಲಿನ ಸೊಬಗನ್ನು ವರ್ಣಿಸುವುದು ಸಾಮಾನ್ಯ. ಆದರೆ ಈ ವರ್ಣನೆಯಲ್ಲಿ  ವೈವಿಧ್ಯತೆ ಇರುತ್ತದೆ. ಒಬ್ಬೊಬ್ಬರ ಅನುಭವ ಒಂದೊಂದು ರೀತಿಯಲ್ಲಿಇರುತ್ತದೆ. ಅದರಂತೆ ಮಲೆನಾಡಿನ ಸಹಜತೆ, ಸೌಂದರ್ಯ, ಹಸಿರುಟ್ಟ ಭೂರಮೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ.  ಇಂದಿನ ಬಹುತೇಕ ಯುವ ಕವಿಗಳು ತಮ್ಮ ಚೊಚ್ಚಲ ಸಂಕಲನದಲ್ಲಿ ಪ್ರೇಮಗೀತೆಗಳನ್ನು ತುಂಬುವುದೇ ಹೆಚ್ಚು. ಹೆಣ್ಣಿನ ಶೋಷಣೆಯ ಬಗ್ಗೆ ಬರೆಯುವುದೇ ಅಧಿಕ. ಆದರೆ ‘ವಸುಂಧರೆ’ ಇವೆಲ್ಲವುಗಳಿಗಿಂತ  ಭಿನ್ನವಾಗಿದೆ. ಇಲ್ಲಿ ಸಾಂಸಾರಿಕ, ಆಧ್ಯಾತ್ಮಿಕ, ಸ್ತ್ರೀ ಸಂವ...