Posts

Showing posts from December, 2025
  ಬದುಕಿನ ವಿಭಿನ್ನ ಅನುಭವದ ‘ಸನ್ಯಾಸಿ ಮತ್ತು ಇತರ ಕಥೆಗಳು’ ರಾಷ್ಟ್ರಕವಿ ಕುವೆಂಪು ಅವರ ಕಥ ಸಂಕಲನವಿದು. ಇದರಲ್ಲಿ ಹಳ್ಳಿಯ ಜೀವನ ಬಗ್ಗೆ ಮತ್ತು ಮಲೆನಾಡಿನ ಸುಂದರ ಚಿತ್ರಣಗಳ ವರ್ಣನೆ ಅತ್ಯದ್ಭುತವಾಗಿದೆ. ಕವಿಯ ವರ್ಣನೆಯ ಸಾಲುಗಳು ಎಂತಹವರನ್ನೂ ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಗ್ರಾಮಾಂತರ ಪ್ರದೇಶದವರಾದ ಕುವೆಂಪು ತಮ್ಮ ಬಾಲ್ಯದಲ್ಲಿ ಕಂಡ, ಅನುಭವಿಸಿದ, ಕೇಳಿದ ವಿಚಾರಗಳನ್ನು ಕಥೆಯ ರೂಪದಲ್ಲಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಮೂಢನಂಬಿಕೆ, ಆಸ್ಪತ್ರೆಗಳೇ ಇಲ್ಲದ ಕಾಲದಲ್ಲಿ ಬಡಜನರನ್ನು ಸುಲಿಯುತ್ತಿದ್ದ ವೈದ್ಯರು, ಊರ ಪ್ರಮುಖರ ಏಕಚಕ್ರಾಧಿಪತ್ಯ, ಮಳೆಗಾಲದ ರುದ್ರನರ್ತನದಲ್ಲಿ ಹಳ್ಳಿಯವರು ಕೈಲಿ ಜೀವ ಹಿಡಿದು ಬದುಕುವ ಬಗೆ, ಮಾನವನ ಬದುಕಿನ ಸಂಕೀರ್ಣತೆ,  ಬದುಕಿನ ವಿಭಿನ್ನ ಅನುಭವ ಮೊದಲಾದವು ಈ ಕಥೆಯಲ್ಲಿದೆ.  ಒಟ್ಟು ೯ ಚಿಕ್ಕ ಕಥೆಗಳು ಇದರಲ್ಲಿವೆ.  ಸನ್ಯಾಸಿ ಸನ್ಯಾಸ್ವತ್ವ ಹೇಗಿರಬೇಕು, ತಪಸ್ಸು ಮಾಡಿದವರೆಲ್ಲ ಸನ್ಯಾಸಿಯಾಗಲು ಸಾಧ್ಯವಿಲ್ಲ.  ಮದುವೆಯಾದರೂ ಜೀವನದಲ್ಲಿ ಶಾಂತಿ ಪಡೆಯಲು ಬಯಸಿ, ನಂತರ ಸನ್ಯಾಸಿಯಾದರೂ ಅದು  ಸಾಧ್ಯವಾಗುವುದಿಲ್ಲ ಎನ್ನುವುದಿಲ. ಇಲ್ಲಿ ಚೈತನ್ಯ ಮತ್ತು ಮುಕುಂದ್ ಎನ್ನುವವರ ಪಾತ್ರದ ಮೂಲಕ ಇದನ್ನು ಚಿತ್ರಿಸಿದ್ದಾರೆ. ಚೈತನ್ಯ ಪ್ರಯಾಗ ಕ್ಷೇತ್ರಕ್ಕೆ ಬಂದು ಸ್ವಾಮಿ ಪ್ರೇಮಾನಂದರ ಶಿಷ್ಯನಾಗಿ ಸನ್ಯಾಸ ಸ್ವೀಕಾರ ಮಾಡಿದಾಗ ಒಂದು ದಿನ  ಜನರ ಭಕ್ತರ ಗುಂಪಿನಲ್ಲಿ ಮು...
Image
ವೈವಿಧದ, ಸ್ವಾರಸ್ಯಕರ ಪ್ರಬಂಧ ‘ಸಂತೆಯಲ್ಲಿ ಸುಬ್ರಹ್ಮಣ್ಯ’   ಸಂತೆಯಲ್ಲಿ ಸುಬ್ರಹ್ಮಣ್ಯ ಇದೊಂದು ಹಾಸ್ಯ ಸಂಕಲನ. ಎನ್ಕೆ ಸುಬ್ರಹ್ಮಣ್ಯ ಇದರ ಲೇಖಕರು. ತಮ್ಮ ಪ್ರಬಂಧಗಳ ಮೂಲಕವೇ ಚಿರಪರಿತರಾದವರು ಇವರು. ವಿವಿಧ ಪತ್ರಿಕೆಗಳಲ್ಲಿ ಆಗಾಗ ಬರೆದ ಪ್ರಬಂಧಗಳನ್ನೆಲ್ಲ ಸಂಗ್ರಹಿಸಿ ಇದನ್ನು ಕೃತಿಯನ್ನಾಗಿಸಿದ್ದಾರೆ. ಆಕಾಶವಾಣಿಯಲ್ಲೂ ಈ ಹಾಸ್ಯ ಬರಹಗಳು ಪ್ರಸಾರವಾಗಿವೆ. ಸಂತೆ ಇದರ ಪರಿಕಲ್ಪನೆ ಅದ್ಭುತವಾದದ್ದು. ಈ ಕೃತಿಯಲ್ಲಿ ಜಗತ್ತೇ ಒಂದು ಸಂತೆ ಎನ್ನುವುದನ್ನು ಬಿಂಬಿಸಿದ್ದಾರೆ. ಸೂಪರ್ ಮಾರ್ಕೆಟ್‌ಗಳಲ್ಲಿ, ಅತ್ಯಾಧುನಿಕ ಮಾಲ್‌ಗಳಲ್ಲಿ ಖರೀದಿಸುವ ನಗರವಾಸಿಗಳಿಗೆ ಸಂತೆಯ ಸಂಭ್ರಮ ಸಿಗುವುದಿಲ್ಲ. ಆದರೆ ಹತ್ತಾರು ಹಳ್ಳಿಗಳ ರೈತರು ತಾವು ಬೆಳೆದ ದವಸ -ಧಾನ್ಯಗಳನ್ನು, ಸಾಕಿದ ಜಾನುವಾರುಗಳನ್ನು, ತಯಾರಿಸಿದ ಉತ್ಪನ್ನಗಳನು, ಮಾರಾಟ ಮಾಡಿ ತಮಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಒಯ್ಯುವುದರಲ್ಲಿ ಸಂತೆಯ ಸುಖವಿದೆ. ಸಂತೆ ಹೊಸ ಹೊಸ ವಸ್ತು, ವಿಷಯ ಪರಿಚಯ ಮಾಡಿಕೊಡುತ್ತದೆ. ಹೊಸ ಸುದ್ದಿಯ ವಿನಿಮಯವಾಗುತ್ತದೆ. ಮಾನಸಿಕ ಒತ್ತಡ ನಿವಾರಿಸುವ,  ಹೊಸ ನಂಟು ಕುದುರಿಸುವ ಸಂತೆಯಲ್ಲಿ ಏನುಂಟು ಏನಿಲ್ಲ? ಈ ಕಿರು ಲೇಖನಗಳ ಮೂಲಕ ಲೇಖಕರು ಜಗತ್ತೇ ಒಂದು ಸಂತೆಯಾಗಿದೆ. ಇದರಲ್ಲಿ ಆಧುನಿಕ ಕಂಪ್ಯೂಟರ್ನಿಂದ ಹಿಡಿದು ಸ್ಥಳೀಯ ವಿಷಯದವರೆಗೆ  ರೋಚಕವಾದ ಮತ್ತು ಸ್ವಾರಸ್ಯಕರವಾದ, ಹಾಸ್ಯಮಯ ಪ್ರಬಂಧಗಳನ್ನು ತೆರೆದಿಟ್ಟು ಮುಖಗಳು ಅರಳುವಂತೆ ಮಾಡಿದ್ದಾರೆ...
Image
 ಮಕ್ಕಳ ಮನಸ್ಸನ್ನು ವಿಶ್ಲೇಷಿಸುವ ‘ಮಕ್ಕಳ ಮೇಲಿರಲಿ ಕಾಳಜಿ’ ಇಂದು ಸಾಹಿತ್ಯದಲ್ಲಿ ಮಕ್ಕಳ ಸಮಸ್ಯೆಗಳನ್ನು ವಿಶ್ಲೇಷಿಸುವ ಕೃತಿಗಳ ಕೊರತೆ ಇದೆ. ಈ ಬಗ್ಗೆ ಹೆಚ್ಚು ಪುಸ್ತಕಗಳು ಬರುತ್ತಿಲ್ಲ. ಇಂತಹ ಕೊರತೆಯನ್ನು ನೀಗಿಸಲು ಮಾರ್ಪಳ್ಳಿ ಆರ್ ಮಂಜುನಾಥ್ ಅವರು ಒಂದು ಪ್ರಯತ್ನವನ್ನು ತಮ್ಮ ‘ಮಕ್ಕಳ ಮೇಲಿರಲಿ ಕಾಳಜಿ’ ಎನ್ನುವ ಪುಸ್ತಕದ ಮೂಲಕ ಮಾಡಿದ್ದಾರೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಆ ಮನಸ್ಸಿನ ವಿಕಾಸಕ್ಕೆ ಅನುಗುಣವಾಗಿ ಸಾಹಿತ್ಯವನ್ನು ರಚಿಸಿರುವ ಮಂಜುನಾಥ್, ಸುಮಾರು ಇಪ್ಪತ್ತಕ್ಕೂ ಮಿಕ್ಕ ಲೇಖನಗಳ ಮೂಲಕ ಇಲ್ಲಿ ಮಕ್ಕಳ ಕುರಿತ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ. ನಮ್ಮ ನಡುವೆ ಇರುವ ಮಕ್ಕಳ ಮನೋಭಾವವನ್ನು ಅರಿತಿರುವ ಪೋಷಕರು ಯಾವ ರೀತಿಯಲ್ಲಿ ಮಕ್ಕಳನ್ನು ನೋಡಿಕೊಳ್ಳಬೇಕು ಎನ್ನುವುದನ್ನು ವಿವರವಾಗಿ ಇಲ್ಲಿ ಚರ್ಚೆಗೆ ಎತ್ತಿಕೊಂಡಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವುದರಿಂದ ಹಿಡಿದು ಮಕ್ಕಳನ್ನು ನಿಸರ್ಗದ ಜೊತೆಯಲ್ಲಿ ಹೇಗೆ ಬೆಳೆಸಬೇಕು ಎನ್ನುವುದರವರೆಗೆ ಅವರು ಹೇಳುತ್ತಾರೆ. ಮಗುವಿನ ದೈಹಿಕ ಆರೋಗ್ಯ ಸರಿ ಇಲ್ಲದಿದ್ದರೆ ಆ ಮಗುವಿನ ವಿಕಾಸ ಹೇಗೆ ಸಮರ್ಪಕವಾಗಿ ಆಗುವುದಿಲ್ಲವೋ ಹಾಗೆಯೇ ನಿಸರ್ಗದ ಜೊತೆ ಬೆಳೆಯದಿದ್ದರೂ ಅದರ ಪರಿಪೂರ್ಣ ಬೆಳವಣಿಗೆ ಆಗುವುದಿಲ್ಲ ಎಂಬ ಅಂಶವನ್ನು ಲೇಖಕರು ಇಲ್ಲಿ ನಮ್ಮ ಮುಂದಿಡುತ್ತಾರೆ. ಕೃತಿಯಲ್ಲಿರುವ ‘ಜೀನ್ಸ್ ಮತ್ತು ಎನ್ವಿರಾನ್ಮೆಂಟ್’ ಎನ್ನುವ ಲೇಖನದಲ್ಲಿ ಅವರು ಮಕ್ಕಳ ಮಾನಸಿಕ ...
Image
ಸಾಮಾಜಿಕ, ಕೌಟುಂಬಿಕ ಸಂಗತಿಗಳ ‘ಜೀವನ ರಾಗ’  ಆದರ್ಶ, ಮಾನವೀಯತೆ, ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಜೀವ ದ್ರವ್ಯವಾಗಿಸಿಕೊಂಡು ಬರೆದಿರುವ ಕಥೆಗಳ ಸಂಕಲನವೇ ‘ಜೀವನ ರಾಗ’. ನಂಜನಗೂಡಿನ ಬರಹಗಾರ್ತಿ ಎಸ್. ಎಲ್. ವರಲಕ್ಷ್ಮಿ ಮಂಜುನಾಥ್ ಈ ಕೃತಿಯಲ್ಲಿ ಸೊಗಸಾದ ನವಿರು ನಿರೂಪಣೆಯೊಂದಿಗೆ ಕಥೆಗಳನ್ನು ರಚಿಸಿದ್ದಾರೆ. ತಮ್ಮ ಆಲೋಚನೆಗಳಿಗೆ ತಕ್ಕಂತೆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಥಾ ನಿರೂಪಣೆಯ ಶೈಲಿ  ಓದುಗರಿಗೆ ಇಷ್ಟವಾಗುತ್ತದೆ. ಇಲ್ಲಿ  ಪಾತ್ರಗಳೇ ತಮ್ಮ ಲೋಕವನ್ನು ನಮ್ಮೆದುರು ಅನಾವರಣಗೊಳಿಸುತ್ತಾ ಹೋಗುತ್ತವೆ. ಕಥೆಗಳು ಮುಖ್ಯವಾಗಿ ಸಾಮಾಜಿಕ ಮತ್ತು ಕೌಟುಂಬಿಕ ಸಂಗತಿಗಳನ್ನು ಆಧರಿಸಿ ರಚಿಸಲ್ಪಟ್ಟಿವೆ. ತಮ್ಮ ಮನಸ್ಸಿನಲ್ಲಿ ಗಾಢವಾಗಿ ಪ್ರಭಾವಿಸಿದ ವಿಚಾರಗಳನ್ನು ಮಂಥನವಾಗಿಸಿದ ಲೇಖಕಿ, ಆದರ್ಶಗಳನ್ನು, ಮೌಲ್ಯಗಳನ್ನು ಕಥೆಗಳ ಸವಿ ಹೂರಣವಾಗಿಸುವ ಪ್ರಯತ್ನ ಮಾಡಿದ್ದಾರೆ. ಜಗತ್ತಿನ ತಲ್ಲಣ, ಹತಾಶೆ, ಭಾವ, ಉದ್ವೇಗ, ರಸಾಸ್ವಾದನೆಗೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಕಥೆಗಳು ವಿಭಿನ್ನ ಜಾಡಿನಲ್ಲಿ ಸಾಗುವುದನ್ನು ಇಲ್ಲಿ ಕಾಣಬಹುದು. ಕೃತಿಯಲ್ಲಿನ ಕಥೆಗಳಿಗೆ ಬಂಧನದ ಹಂಗಿಲ್ಲ. ಕಥೆ ಬೆಳೆಯುತ್ತಾ   ಹೋದಂತೆ ನಾಟಕವಾಗಿ ಮುಂದುವರೆಯುವುದನ್ನು, ತಿರುವು ತೆಗೆದುಕೊಳ್ಳುವುದು ಇಲ್ಲಿನ ವಿಶಿಷ್ಟತೆ. ಸಾಮಾಜಿಕ ಸ್ಥಿತಿಗತಿಗಳಿಗೆ ಅದು ಹಿಡಿದ ಕನ್ನಡಿ ಎನ್ನುವುದನ್ನು ನಾವು ಮರೆಯಬಾರದು. ಈ ಕೃತಿ ಒಟ್ಟಾ...
Image
ಆತ್ಮದ ಸ್ವರೂಪದಲ್ಲಿರುವ ವಿದ್ವಾಂಸರೊಬ್ಬರ ಚರಿತೆಯ   ‘ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ’  ಇದು ಮೇಧಾವಿ ವಿದ್ವಾಂಸರೊಬ್ಬರ ಜೀವನ ದರ್ಶನ ಮಾಡಿಸುತ್ತಾ, ಅವರು ದೇಹಾತೀತವಾಗಿ ಆತ್ಮದ ಸ್ವರೂಪದಲ್ಲಿ ಇದ್ದಾರೆ ಎನ್ನುವುದನ್ನು ಬಿಂಬಿಸುವ ಕಥೆಯನ್ನು ಹೊಂದಿರುವ ಕಾದಂಬರಿ. ಸಾಧಕನೊಬ್ಬನ ಜೀವನ ಚರಿತ್ರೆ , ಬದುಕಿನ ನಡೆ, ಸಾಧನೆ, ಜೊತೆಗೆ ಐತಿಹಾಸಿಕ, ಸಾಂಸ್ಕೃತಿಕ ಘಟನೆಗಳು, ಪಾರಂಪರಿಕ ನಂಬಿಕೆ, ಆಧ್ಯಾತ್ಮಿಕ ಸಾಧನೆಗಳ ಉಲ್ಲೇಖ ಇದರಲ್ಲಿದೆ. ಉಡುಪಿ ಸಮೀಪದ ಬೆಳಂಜಾಲು ಗ್ರಾಮದ ಡಾ. ಅನಂತರಾಮ್ ಉಡುಪ ಅವರ ಕುರಿತಾದ ನೈಜ ಘಟನೆಗಳ ಕಾದಂಬರಿ ಇದು. ಇದರ ರಚನೆಕಾರರು ನಿವೃತ್ತ ಪ್ರಾಚಾರ್ಯ ಬಿ. ಜನಾರ್ಧನ್ ಭಟ್ಟರು.  ಸ್ವಾತಂತ್ರ್ಯಪೂರ್ವ ಭಾರತದಲ್ಲಿದ್ದ ಶಿಕ್ಷಣ ವ್ಯವಸ್ಥೆ, ಮತಾಂತರ, ಪ್ರತಿಭಾ ಪಲಾಯನ, ಅನಾಥ ಪ್ರಜ್ಞೆ,  ಮಹಾಯುದ್ಧ, ಸ್ವಾತಂತ್ರ್ಯ ಹೋರಾಟದ ಘಟ್ಟಗಳು, ಸಾಧಕನೊಬ್ಬನ ಬದುಕಿನ ಕ್ರಮ, ಅವರ ಉದಾತ್ತ ದೌರ್ಬಲ್ಯ, ನಡೆವಳಿಕೆ ಮೊದಲಾದವನ್ನು ಇಲ್ಲಿ ಗಮನಿಸಬಹುದು. ಉಡುಪರು ಬೆಳಂಜಾಲು ಗ್ರಾಮದಲ್ಲಿ ಹುಟ್ಟಿ ಎಲಿಮೆಂಟರಿ ಶಿಕ್ಷಣವನ್ನು ಮುಗಿಸಿ, ಸಂಸ್ಕೃತ ಶಾಲೆಗೆ ಸೇರಿ ಅಲ್ಲಿಂದ ಕ್ರಿಶ್ಚಿಯನ್ ಸ್ಕೂಲ್‌ನಲ್ಲಿ ಮೆಟ್ರಿಕ್ಯುಲೇಶನ್ ಪಾಸಾಗುತ್ತಾರೆ. ನಂತರ ಇಂಗ್ಲಿಷ್ ಕಲಿಕೆಯ ಜೊತೆಗೆ ಮೈಸೂರಿನ ಸಂಸ್ಕೃತ ವಿದ್ಯಾಲಯಕ್ಕೆ ಸೇರಿ ಅಲ್ಲಿಂದ ತಿರುಪತಿ ಸಂಸ್ಕೃತ ವಿದ್ಯಾಲಯಕ್ಕೆ ಹೋಗಿ  ಶಿಕ್ಷಣವನ್ನು ಪಡೆಯುತ್ತಾರೆ...
Image
  ಸಾಕುನಾಯಿ ಜೊತೆಗಿನ ನೋವು- ನಲಿವಿನ ಗಳಿಗೆಯ ‘ಕಾಳ ನಾಮ ಚರಿತೆ’ ಸಾಕುಪ್ರಾಣಿಗಳೊಂದಿಗೆ ಮನೆಯವರು ಆತ್ಮೀಯವಾಗಿ, ಮನೆಯ ಸದಸ್ಯನಂತೆ  ಒಡನಾಟ ಇಟ್ಟುಕೊಂಡಿರುವುದು ಪ್ರಸ್ತುತ ಕೃತಿ ‘ಕಾಳನಾಮ ಚರಿತೆಯ  ವಿಷಯ. ಇದನ್ನು ಹಗುರ ಹರಟೆಯ ರೂಪದಲ್ಲಿ ಲೇಖಕಿ ಎಮ್. ಆರ್. ಕಮಲಾ ಚಿತ್ರಿಸಿದ್ದಾರೆ. ಲ್ಯಾಬ್ರಡಾರ್ ಜಾತಿಯ ಕಪ್ಪು, ದೈತ್ಯ ನಾಯಿ ‘ಕಾಳ’ನನ್ನು ಲೇಖಕಿ ಮನೆಯಲ್ಲಿ ಸಾಕಿದ್ದರು.  ಸಾಕುಪ್ರಾಣಿಗಳನ್ನು ಮನುಷ್ಯರ ತರವೇ ಕಂಡರೆ ಅದು ನಮ್ಮ ಬದುಕಿನ ಭಾಗವಾಗಿ ಜೀವಿಸುತ್ತದೆ ಎನ್ನುವುದನ್ನು ಹೇಳುತ್ತಾರೆ. ಮನುಷ್ಯ ಸಮಸ್ಯೆಯಲ್ಲಿ ಸಿಲುಕಿದಾಗ ಅಥವಾ ಮನಸ್ಸು ಬೇಸರಗೊಂಡಾಗ ಸಾಕು ಪ್ರಾಣಿ,  ಒಂದು ಪುಸ್ತಕ, ಸಾಂತ್ವನದ ನುಡಿ ಮತ್ತೆ ಜೀವವನ್ನು ಅರಳಿಸುತ್ತದೆ. ಇದಕ್ಕೆ ಕಾಳ ಎಂಬ ನಾಯಿಯೇ ಉದಾಹರಣೆ. ವಿನೋದ ಪ್ರಜ್ಞೆಯ ಮೂಲಕ, ನೇರವಾಗಿ ಸಲ್ಲಾಪ ಇದರಲ್ಲಿದೆ. ಕಾಳನ ವಿಷಯದೊಟ್ಟಿಗೆ ತಮ್ಮ  ಕುಟುಂಬದ, ಕಾಲೇಜಿನ, ಕೆಲಸದ ಒತ್ತಡದ ಬಗ್ಗೆಯೂ ಇದೆ. ಇದೆಲ್ಲವನ್ನು ಕಾಳನಿಗೆ ಅನ್ವಯಿಸಿಯೇ ಬರೆದಿದ್ದಾರೆ. ಕೃತಿಯಲ್ಲಿ ಸಾಂದರ್ಭಿಕವಾಗಿ ಹಲವು ಸಾಹಿತಿಗಳ ಕವನಗಳು, ಹಳೆಯ ಜನಪ್ರಿಯ ಸಿನಿಮಾ ಹಾಡು, ಲೇಖಕರ ಮಾತುಗಳನ್ನು ಉದಾಹರಿಸಿದ್ದಾರೆ.   ಕಾಳನ ಚರಿತ್ರೆಯಲ್ಲಿ ಅದರೊಂದಿಗಿನ ನೋವು- ನಲಿವಿನ ಗಳಿಗೆಗಳನ್ನು ಹಂಚಿಕೊಂಡಿದ್ದಾರೆ, ಬೀದಿಯಲ್ಲಿರುವ ಇತರ ಮನೆಯವರ ನಾಯಿಗಳೊಂದಿಗೆ ಅದರ ಮಿತ್ರತ್ವ,  ವಾಕಿಂಗ್‌ಗೆ ಹೋದಾಗ...
Image
  ಬಾಲ್ಯದ ಅನುಭವಗಳ ಕಥನಗುಚ್ಛ ‘ಸವಿ ಸವಿನೆನಪು ಸವಿನೆನಪೂ’ ...................................... ಬಾಲ್ಯದ ನೆನೆಪುಗಳು ಕೇವಲ ನೆನೆಪು ಮಾತ್ರವಲ್ಲ, ನಮ್ಮ ಮುಂದಿನ ಜೀವನದ ಕನ್ನಡಿ  ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ನಾವು ಜಗತ್ತನ್ನು ಹೇಗೆ ನೋಡುತ್ತೇವೆ ಎನ್ನುವುದನ್ನು ಬಾಲ್ಯ  ರೂಪಿಸುತ್ತದೆಯಂತೆ. ಈ ಬಾಲ್ಯವೇ ನಮ್ಮ ಮುಂದಿನ  ವ್ಯಕ್ತಿತ್ವವನ್ನೂ ರೂಪಿಸುತ್ತದೆ ಎನ್ನುವುದು ವಿಜ್ಞಾನಿಗಳ ಹೇಳಿಕೆ. ಪ್ರಸ್ತುತ ಕೃತಿ ‘ಸವಿ ಸವಿನೆನೆಪು ಸವಿನೆನಪೂ’ ಲೇಖಕಿ  ಮಾಲತಿ ಮುದಕವಿ ಅವರ  ಜೀವನಾನುಭವದ  ಕಥನದ ಸೀಮಿತ ಘಟನೆಗಳನ್ನು ಹೊಂದಿದೆ. ಇದರಲ್ಲಿ ೬೩ ವಿಭಿನ್ನ ನೆನೆಪನ್ನು ಕಟ್ಟಿಕೊಟ್ಟಿದ್ದಾರೆ. ಇವೆಲ್ಲ ಅವರ ಹೃದಯಾಳವನ್ನು ತಟ್ಟಿ  ನೆಲೆಯೂರಿದಂತಹವು. ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು ಎಂದೂ ಮರೆಯಲಾಗದೆ ಹಾಗೆಯೇ ಉಳಿದುಕೊಂಡಿರುತ್ತವೆ. ಇಲ್ಲಿಯೂ ಸಹ ಲೇಖಕಿ  ನೆನಪುಗಳನ್ನು, ಘಟನೆಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ.   ಅವರ ಅನುಭವ ಕಥನದ ಮೂಲಕ  ಓದುಗರ ಮುಂದಿಟ್ಟಿದ್ದಾರೆ. ಈ ಅನುಭವಗಳ ಕಥನ ಗುಚ್ಛ  ಸರಾಗವಾಗಿ ಓದಿಕೊಂಡು ಹೋಗುವಂತದ್ದು. ಈ ಎಲ್ಲ ಎನೆನಪುಗಳು  ಸಮಾಜದ ಕಾಲಘಟ್ಟವನ್ನು ವಿವರಿಸುವ ಇತಿಹಾಸದ ಪುಟಗಳಾಗುತ್ತವೆ. ಕೌಟುಂಬಿಕ ಸಂಬಂಧವೇ ಇಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.   ಲೇಖಕಿಯ ಬಾಲ್ಯ, ತನ್ನ ಅಪ್ಪ, ಅಮ್ಮ, ಅಜ್ಜಿ...
Image
ಬುದ್ಧ ಉಪದೇಶಿಸಿದ ಸತ್ಯದರ್ಶನಗಳ ಸಾರಸಂಗ್ರಹದ ಬುದ್ಧನ ಧಮ್ಮಪದಗಳು   ಧಮ್ಮಪದ  ಎಂದರೆ ಬುದ್ಧ ತೋರಿಸಿದ ಧರ್ಮದ ಮಾರ್ಗ, ೪೨೩ ಪದ್ಯಗಳಲ್ಲಿ ಸುವ್ಯಕ್ತಗೊಂಡಿದೆ. ಧಮ್ಮಪದ ಬೌದ್ಧ ಸಾಹಿತ್ಯದಲ್ಲಿ   ಪ್ರಸಿದ್ಧವಾದುದು. ಇದರಲ್ಲಿ ೨೬ ಅಧ್ಯಾಯಗಳಿವೆ. ಪ್ರತಿಯೊಂದು ಧಮ್ಮಪದವು ಒಂದೊಂದು ಉತ್ತಮ ವಿಷಯವನ್ನು ನಮಗೆ ತಿಳಿಸುತ್ತದೆ. ಈ ಧರ್ಮಪದವು ಆರೆಂಟು, ಹತ್ತು ಸಾಲುಗಳಲ್ಲಿ ಚಿಕ್ಕ ಕವನದಂತೆ ಇದೆ.   ‘ಬುದ್ಧನ ಧಮ್ಮಪದಗಳು’ ಈ ಕೃತಿಯನ್ನು ಕನ್ನಡಕ್ಕೆ ತಂದಿರುವವರು ಡಾ|| ಪ್ರದೀಪ್‌ಕುಮಾರ್ ಹೆಬ್ರಿ. ವಿದ್ವತ್‌ಪೂರ್ಣ ಪ್ರತಿಭೆಯ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಅಚ್ಚರಿ ಮತ್ತು ಮೆಚ್ಚುಗೆಗೆ ಪಾತ್ರರಾದವರು. ಪಾಲಿ ಭಾಷೆಯಿಂದ ಇದನ್ನು ಕನ್ನಡಕ್ಕೆ ಹೆಬ್ರಿ ಅವರು ತಂದಿದ್ದು ಒಂದು ಸಾಹಸವೇ ಸರಿ.  ಭಗವಾನ್ ಬುದ್ಧ ಸುಮಾರು ೨ ಸಾವಿರ ವರ್ಷಗಳ ಹಿಂದೆ ಉಪದೇಶಿಸಿದ ಸತ್ಯದರ್ಶನಗಳ ಸಾರಸಂಗ್ರಹವೇ ಧಮ್ಮಪದ, ಬುದ್ಧದೇವರ ಹೃದಯಕ್ಕೆ ಗೋಚರಿಸಿದ ಪರಿಶುದ್ಧ ಜ್ಞಾನದ ಹೊಳಪು. ಈ ಧಮ್ಮಪದಗಳ ಬಂಧದಲ್ಲಿ ಬೆಳಕಿನ ಕುಡಿಗಳಾಗಿವೆ. ಸತ್ಯದರ್ಶನದಿಂದ ಸುಟಗೊಂಡಿವೆ. ಅನುಭವಪಾಕದಿಂದೊಡಗೂಡಿವೆ. ಇವು ಪರಿಪೂರ್ಣ ಜೀವನ ನಡೆಸಲು ಸಾಧಕನಿಗೆ ದಾರಿದೀಪವಾಗಿವೆ. ಸರಳ ಜೀವನ ನಡೆಸುವವರಿಗೆ ಮಾನಸಿಕ ಶಾಂತಿಗಳಿಸಲು ಮಾರ್ಗದರ್ಶಿ, ಬುದ್ಧಿವಾದಿ ಮತ್ತು ತರ್ಕವಾದಿಗಳಿಗೆ ನಿಖರತೆಯ ನಿಚ್ಚಳತೆಯ ಸತ್ಯದರ್ಶಿ, ಯತ್ನಶೀಲ ಸಾಧ...
Image
ಗ್ರಾಮಜೀವನದ ಚಿತ್ರಣದ ಉಕ್ಕಿದ ನೊರೆ ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಕಾದಂಬರಿ. ತಮ್ಮ ಊರಾದ ಉಡುಪಿ ಜಿಲ್ಲೆಯ ಕೋಟ ಮತ್ತು ಅಕ್ಕಪಕ್ಕದ ಬ್ರಹ್ಮಾವರ, ಕುಂದಾಪುರ, ಬಾರ್ಕೂರು, ಭದ್ರಗಿರಿ  ಮೊದಲಾದ ಗ್ರಾಮಗಳಲ್ಲಿ  ಆವರಿಸಿದ್ದ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ನೈತಿಕ ಆವರಣವನ್ನು ಇದರಲ್ಲಿ ಚಿತ್ರಿಸಿದ್ದಾರೆ. ೧೯೩೦ ರಿಂದ ೧೯೫೫ ರವರೆಗೆ ಅವಧಿಯಲ್ಲಿ ಆ ಭಾಗದಲ್ಲಿ ನಡೆದ ಚಳವಳಿಗಳು, ಸಾಮಾಜಿಕ ಬೆಳವಣಿಗೆಗಳು, ಚುನಾವಣೆ, ಆರ್ಥಿಕ ಏರಿಳಿತ ಮುಂತಾದವುಗಳು ತಮ್ಮನ್ನು ಕಲಕಿ ನಿತ್ಯ ಜೀವನ ಯಾವೆಲ್ಲ ಬಗೆಗಳಿಂದ ರೂಪುಗೊಂಡಿತು ಎನ್ನುವುದನ್ನು ಇಲ್ಲಿ ತೋರಿಸಿದ್ದಾರೆ.  ಸಾಮಾನ್ಯ ಜನರಿಂದ ತುಂಬಿದ ಹಳ್ಳಿಗಳು ಮತ್ತು ಜನರು ಯುದ್ಧ, ಆರ್ಥಿಕ ಮತ್ತು ನೈತಿಕ ಸಮಸ್ಯೆಯಿಂದ ಹೇಗೆ ಬಳಲಿದರು, ಅವರು ಕಂಡಿದ್ದ ಗ್ರಾಮೀಣ ಉನ್ನತಿ ಹೇಗೆ ಮೇಲು-ಕೆಳಗೆ ಆಯಿತು, ಜನಜೀವನದ ಒಳಿತು -ಕೆಡಕುಗಳ ಚಿತ್ರಣ ಈ ಕಾದಂಬರಿಯಲ್ಲಿ ಕಂಡುಬರುತ್ತದೆ. ಜೀವನದಲ್ಲಿ ತೋರಿಕೆಯ ಯಶಸ್ಸಿಗೆ ಮತ್ತು ಹಣಗಳಿಕೆಗೆ, ಅಧಿಕಾರಕ್ಕೆ ಜನಸಾಮಾನ್ಯರ ಮನಸ್ಸು ಯಾವ ರೀತಿ ಚಡಪಡಿಸುತ್ತದೆ, ಅದಕ್ಕಾಗಿ ಆತ ಏನೆಲ್ಲ ಮಾಡುತ್ತಾನೆ. ಅದರಲ್ಲಿ ಅವರಿಗೆ ಯಶಸ್ಸು ಸಿಕ್ಕಿತೆ? ಸಿಕ್ಕಿದರೂ ಅದರ ಪರಿಣಾಮವೇನು, ಸಾಮಾನ್ಯ ಜನರು ಇದನ್ನೆಲ್ಲ ಹೇಗೆ ಅನುಭವಿಸಿದರು, ನೀರ ಮೇಲಿನ ಗುಳ್ಳೆಯಂತೆ ಬಂದು ಹೋದ ಈ ಶ್ರೀಮಂತಿಕೆಯ ಬಗ್ಗೆ ಉಳಿದವರು ಯಾವ ರೀತಿ ಮಾತನಾಡಿಕೊಂಡರು, ಇದರ...
Image
ಅಮ್ಮನ ಮಹತ್ವ ಸಾರುವ ‘ಅಮ್ಮ ನಿನ್ನ ಎದೆಯಾಳದಿಂದ’ ಮನುಷ್ಯ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಸಾಧನೆ ಮಾಡಿದರೂ ಮನುಷ್ಯ ಸಂಬಂಧಗಳ ಬೆಲೆಯನ್ನು ಕಟ್ಟಲು ಸಾಧ್ಯವಾಗಿಲ್ಲ. ಕುಟುಂಬ ಸಂಬಂಧಗಳಿಗೆ ಅಂತಹ ದೊಡ್ಡ ಶಕ್ತಿ ಇದೆ. ಅಣ್ಣ, ತಮ್ಮ, ಅಜ್ಜ, ಅಜ್ಜಿ, ಅಮ್ಮ, ಅಪ್ಪ ಮೊದಲಾದವರ ವಾತ್ಸಲ್ಯಗಳನ್ನು ಯಾವುದಕ್ಕೂ ಸರಿಸಮವಲ್ಲ. ಇಂತಹ ಸಂಬಂಧಗಳಲ್ಲಿ ‘ತಾಯಿಯೇ ದೇವರು’ ಎನ್ನುವ ಮಾತು ಮಹತ್ವದ್ದು. ಯಾವಾಗ ನಾವು ಅಮ್ಮನಿಂದ ದೂರದಲ್ಲಿರುತ್ತೇವೆಯೋ ಆಗ ಅವಳ ನೆನಪು ಅತಿಯಾಗಿ ಕಾಡುತ್ತದೆ. ಪ್ರಸ್ತುತ ಕೃತಿ ‘ಅಮ್ಮ ನಿನ್ನ ಎದೆಯಾಳದಿಂದ’ ಇದರಲ್ಲಿ ಲೇಖಕ ಕಿರಣ್ ಪಿ. ಕೌಶಿಕ್ ಅಮ್ಮ ಎಂದರೆ ಮೊಗೆದಷ್ಟು ಪ್ರೀತಿ ಎನ್ನುವುದನ್ನು ವಿವರಿಸಿದ್ದಲ್ಲದೆ, ಕೃತಿಗೆ ಇದೇ ಅಡಿಬರಹ ಹಾಕಿದ್ದಾರೆ. ಮೈಸೂರು ಸಮೀಪದ ಕೃಷ್ಣರಾಜಸಾಗರ (ಕೆಎಆರೆಸ್)ನವರಾದ ಕೌಶಿಕ್ ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೇರಳಕ್ಕೆ ಹೋದಾಗ ಅಮ್ಮನನ್ನು ಮಿಸ್ ಮಾಡಿಕೊಂಡಿದ್ದನ್ನು ಬರೆದಿದ್ದಾರೆ.  ಜಗತ್ತಿನ ಎಲ್ಲ ನೋವುಗಳನ್ನು, ತಿರಸ್ಕಾರಗಳನ್ನು, ಅವಮಾನಗಳನ್ನು ಮೀರಿ ಬದುಕುವ ಜೀವ ಇದ್ದರೆ ಅದು ಹೆತ್ತ ಕರುಳು ಮಾತ್ರ. ಪ್ರೀತಿ, ವಿಶ್ವಾಸ, ತ್ಯಾಗ, ಕಾಳಜಿ, ಕಲಿಸಿದ ಪಾಠವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿ ತಾಯಿಯೇ ದೇವರು ಎಂದು ಲೇಖಕರು ಕೃತಿಯಲ್ಲಿ ಹೇಳುತ್ತಾರೆ. ಎರಡು ವರ್ಷ ಅಮ್ಮನನ್ನು ಮಿಸ್ ಮಾಡಿಕೊಂಡ ಕ್ಷಣ, ಅಮ್ಮನ ಭಾವನೆಗಳು, ತನಗೆ ಅಮ್ಮನ ಬಗ್ಗೆ ಇರುವ ಕಾಳ...
Image
ಬೆಸುಗೆ ಇದ್ದರೆ ವಸುಧೆ   ‘ಬೆಸುಗೆ ಇದ್ದರೆ ವಸುಧೆ’ ಇದು ಉಪನ್ಯಾಸಕಿ ಶುಭಲಕ್ಷ್ಮಿ ಆರ್. ನಾಯಕ್ ಅವರ ಚೊಚ್ಚಲ ಕವನ ಸಂಕಲನ. ಇದರಲ್ಲಿ ೯೦ಕ್ಕೂ ಅಧಿಕ ಕಾವ್ಯ ಕುಸುಮಗಳನ್ನು  ಪೋಣಿಸಿರುವ ಕಬಯತ್ರಿ, ತಮ್ಮ ಪ್ರಕೃತಿ ಪ್ರೀತಿ, ಋತುಗಳು, ನಾಡು- ನುಡಿಯ ಬಗ್ಗೆ ಇರುವ ಅಭಿಮಾನ, ದೇಶಭಕ್ತಿ, ಗುರು- ಹಿರಿಯರ ಕುರಿತಾದ ಗೌರವಾದರದ ಕವಿತೆ,  ಗಜಲ್, ಸುನೀತಾ, ವ್ಯಕ್ತಿ ಚಿತ್ರಣಗಳನ್ನು ಕವಿತೆಯ ರೂಪದಲ್ಲಿ ಆಕಾರಗೊಳಿಸಿದ್ದಾರೆ.  ಇಲ್ಲಿನ ಬಹುತೇಕ ಕವನಗಳಲ್ಲಿ ವಿಶಿಷ್ಟ ಛಂದಸ್ಸು ಸ್ವರೂಪವನ್ನು ಕಾಣಬಹುದು. ಕೆಲವು ಕವನಗಳು ಚೌಪದಿ ರೂಪದಲ್ಲೂ ಇವೆ. ಮುಕ್ತ ಛಂದಸ್ಸಿನ ನವ್ಯ ಕವಿತೆಗಳು ಮತ್ತು ಚಿಂತನ ಪ್ರಧಾನ ಕವಿತೆಗಳು ಇಲ್ಲಿನ ವಿಶಿಷ್ಟತೆಯಾಗಿವೆ. ಪ್ರಕೃತಿ ಚಿತ್ರಣ ಕವಿತೆ ಬರೆಯುವುದರಲ್ಲಿ ಸಿದ್ಧಹಸ್ತರು. ಕರಾವಳಿಯವರಾದರೂ ಮಲೆನಾಡಿನ ಸನಿಹದವರೇ ಆಗಿರುವುದರಿಂದ ಅಲ್ಲಿನ ಸೊಬಗು, ದಟ್ಟ ಕಾನನದ ಸೊಬಗು, ಮೌನ ಪರಿಸರ, ಈಗ ನಶಿಸುತ್ತಿರುವ ಅರಣ್ಯ, ಮನುಷ್ಯನನ ದುರಾಸೆ, ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ ಇವೆಲ್ಲ ಅವರ ಮೇಲೆ ಗಾಢವಾದ ಪರಿಣಾಮ ಬೀರಿವೆ. ಇದರಿಂದಾಗಿಯೇ ಪರಿಸರ ಕವನಗಳಲ್ಲಿ ಸಹಜವಾಗಿ ತುಂಬಾ ಅರ್ಥಗಳನ್ನು ಧ್ವನಿಸಿದ್ದಾರೆ. ಎಲ್ಲಾ ಆಯಾಮಗಳನ್ನು ಒಳಗೊಳ್ಳಲು ಪ್ರಯತ್ನಿಸಿದ್ದಾರೆ. ಲಯ ಮತ್ತು ಶಬ್ದಗಳ ಸೂಕ್ಷ್ಮ ಕುಸುರಿಯನ್ನು ಚೆನ್ನಾಗಿ ಬಳಸಿಕೊಂಡಿರುವುದನ್ನು ಅವರ ಕವನಗಳಲ್ಲಿ  ಕಾಣಬಹುದು. ‘ನಿಸರ್ಗ’ಎನ್ನುವ ಕವ...
Image
ಗ್ರಾಮ ಜೀವನದ ಚಿತ್ರಣದ ‘ಹಳ್ಳಿಯ ಹತ್ತು ಸಮಸ್ತರು’     ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರ  ಪ್ರಮುಖ ಕೃತಿಗಳಲ್ಲೊಂದು ‘ಹಳ್ಳಿಯ ಹತ್ತು ಸಮಸ್ತರು’.  ೧೧ ನೆಯ ಮುದ್ರಣವನ್ನು ಇದು ಕಂಡಿದೆ. ಇದು ಗ್ರಾಮ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಸಮಾಜದಲ್ಲಿ, ಜೀವನದಲ್ಲಿ ಕಾಣುವ ವಿವಿಧ ಜಾತಿಗಳ ಸಂಬಂಧ, ಸಂಘರ್ಷಣೆ, ಪರಂಪರೆ, ವಿವಿಧ ಧರ್ಮೀಯರ ವ್ಯಕ್ತಿತ್ವ, ವೃತ್ತಿಗಳನ್ನು ಇದರಲ್ಲಿ ಚಿತ್ರಿಸಲಾಗಿದೆ. ಇಲ್ಲಿನ ಬರಹಗಳು ಸಮಾಜದ ಎಲ್ಲರಲ್ಲೂ ಹಾಸುಹೊಕ್ಕಾದ ಗುಣಗಳು ಎನ್ನುವುದನ್ನು ತಿಳಿಯಬಹುದು. ಸಮಾಜ ಸುಧಾರಕರು, ಗ್ರಾಮೋದ್ಧಾರಕರು ಇದನ್ನು ತಿಳಿಯಬೇಕು. ಪರಸ್ಪರರಲ್ಲಿನ ಆತ್ಮವಿಶ್ವಾಸ, ಅವಿಶ್ವಾಸ, ಜೀವನದ ಸ್ಪರ್ಧೆಗಳು ಯಾವ್ಯಾವ ರೀತಿಯಲ್ಲಿ ಸಮಾಜದಲ್ಲಿ ತಾಂಡವ ವಾಡುತ್ತಿದೆ ಎನ್ನುವುದನ್ನು ಇಲ್ಲಿ ಲೇಖಕರು ಎತ್ತಿ ತೋರಿಸಿದ್ದಾರೆ.  ಗ್ರಾಮದಲ್ಲಿನ ವಿವಿಧ ಪಂಗಡಗಳನ್ನು ರಾಜಕೀಯದವರು ಹೇಗೆ ಒಡೆಯುತ್ತಾರೆ, ಬೆಸೆಯುತ್ತಾರೆ. ಈ ಮೂಲಕ ಜನರಲ್ಲಿ ಜಾತೀಯತೆಯ ಮತ್ತು ಬಡತನದಿಂದ ಬರುವ ಯುಕ್ತಿ, ಬಂಡವಾಳಗಾರಿಕೆ, ಮಾನವ ಸಹಜವಾದ ಸ್ಪರ್ಧೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಇವೆಲ್ಲವೂ ಸಮಾಜ ಮತ್ತು ಜೀವನವನ್ನು ಹೇಗೆ ಕಲಕಿಸುತ್ತವೆ ಎನ್ನುವುದನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಇಲ್ಲಿ ಕೊನೆಗೆ ಉಳಿಯುವುದು ಮಾನವೀಯತೆ. ಇದು ಇರುವವರೆಗೆ ನಾವು ಸಮಾಜವನ್ನು ಸರಿಪಡಿಸಬಹುದು. ಇದನ್ನು ಕಲಿಸದೆ ಯಾವ ...
Image
ಗ್ರಾಮೀಣ ಬದುಕಿನ ಕಥಾಹಂದರದ ‘ತೊಂಡೆ ಚಪ್ಪರ’  ಇದು ಅಪ್ಪಟ ಹಳ್ಳಿಯಲ್ಲಿನ  ಜೀವನ, ಅಲ್ಲಿನ ಬಡಕುಟುಂಬಗಳ  ಕಥೆ,  ಅಕ್ಕಪಕ್ಕದ ಮನೆಗಳಲ್ಲಿನ  ಹರಕುಬಾಯಿಯವರಿಂದ ನಡೆಯುವ ಅಪಪ್ರಚಾರ, ಇದರಿಂದ ನಿರಪರಾಧಿಗಳು ತಲೆತಗ್ಗಿಸುವಂತೆ, ಊರಿನಲ್ಲಿ ಓಡಾಡದಂತೆ  ಆಗುವುದು,  ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುವುದು, ಯಾರೋ ಮಾಡಿದ ಕೃತ್ಯವನ್ನು ಇನ್ನೊ ಬ್ಬರ ತಲೆಗೆ ಕಟ್ಟುವುದು, ಒಟ್ಟಿನಲ್ಲಿ ಸುಭಗರಾಗಿ ಬಾಳುವುದಕ್ಕೆ ಒಬ್ಬರೋ, ಇಬ್ಬರಿಂದ ತೊಂದರೆಯಾಗುವುದು, ಊರಿನ ವಾತಾವರಣ ಕಾಪಾಡಲು ಪಂಚಾಯ್ತಿ ನಡೆಯುವುದು,ಸತ್ಯ ನಿರೂಪಿಸಲಾಗದ ಸ್ಥಿತಿ,  ಮತ್ತೊಂದೆಡೆ ವಿಜೃಂಭಣೆಯ ಗಣೇಶೋತ್ಸವ,  ಎಂದೂ ನಡೆಯದಂತಹ ಅದ್ದೂರಿಯ ನಾಟಕ, ಗಣೇಶೋತ್ಸವ ಸಮಿತಿಯವರ ಯಶಸ್ವಿ ಕೆಲಸಕ್ಕೆ ಸನ್ಮಾನ .... ಹೀಗೆ ಕಥೆಯ ಹಂದರ ಹೊಂದಿರುವ ಸುಂದರ ಕಾದಂಬರಿ. ಇದರ ಲೇಖಕರು  ಪ್ರಮೋದ್ ಮರವಂತೆ. ಮೂಲತಃ ಕುಂದಾಪುರದ ಮರವಂತೆಯವರಾದ ಇವರು ಈಗ ಶಿಕಾರಿಪುರದ ಗುಡ್ಡದಹೊಸಳ್ಳಿಯಲ್ಲಿ ವಾಸಿಯಾಗಿದ್ದಾರೆ. ಕಾಂತಾರ ಸಹಿತ  ವಿವಿಧ ಚಿತ್ರಗಳಿಗೆ ಈವರೆಗೆ ೪೦೦ಕ್ಕೂ ಹೆಚ್ಚು ಗೀತೆ ರಚಿಸಿ ಚಂದನವನದಲ್ಲೂ ಹೆಸರು ಮಾಡಿದವರು. ಟ್ಯೂನುಗಳಿಗೆ  ಪದ ಜೋಡಿಸಿ ಹಾಡು ಹೊಸೆದಂತೆಯೇ ಮನದಲ್ಲಿದ್ದ  ಟ್ಯೂನಿಗೂ  ಪದ, ವಾಕ್ಯ ಜೋಡಿಸಿ ಸುಂದರ ಕಥೆಯ ಈ ಕಾದಂಬರಿಯನ್ನು ನೇಯ್ದಿದ್ದಾರೆ. ಇದರಲ್ಲಿ ೧೧ ಕಥೆಗಳಿವೆ. ಎಲ್ಲವೂ ನಮ್ಮನ್ನ...
Image
 ಸತ್ಯ ದರ್ಶನ ಮಾಡಿಸುವ ‘ಮಾತ್ರೆಗಳು’ ಇದು ಹಾಸ್ಯ ಸಾಹಿತಿ ಬೀಚಿಯವರ ನಗೆ ಬರಹಗಳ ಕೃತಿ. ಇದರಲ್ಲಿ ಸುಮಾರು ೩೭ರಷ್ಟು ಸಣ್ಣ ಹಾಸ್ಯ ಚಟಾಕಿ ಬರಹ (ಮಾತ್ರೆ)ಗಳಿವೆ. ಸತ್ಯದ ವಿರಾಟ್ ರೂಪವು ಭಯಾನಕವೂ, ಕ್ರೂರವಾಗಿಯೂ ಕೆಲವೊಮ್ಮೆ  ತೀಕ್ಷ್ಣವಾಗಿಯೂ, ಸಿಡಿಲಾಗಿಯೂ,   ಬಂದೆರಗುವುದನ್ನೂ ಇಲ್ಲಿನ ಬರೆಹಗಳಲ್ಲಿ ಕಾಣಬಹುದು. ಆಗ ನಗೆಯುಕ್ಕಿ ಬರುವುದು ಸಾಮಾನ್ಯ.  ಮನುಷ್ಯನ ಆಸೆಗಳ ಬಗ್ಗೆಯೂ ನಗೆಬುಗ್ಗೆ ಇದೆ.  ಇವೆಲ್ಲ ಅವರವರ ದೃಷ್ಟಿಕೋನವನ್ನು ಅವಲಂಬಿಸಿದೆ. ಇಲ್ಲಿನ ನಗುವಿನ ಮಾತ್ರೆಗಳನ್ನು ನಾವು ಪ್ರತಿ ಬರಹದಲ್ಲೂ ನುಂಗುತ್ತೇವೆ.  ಮಾತುಗಳು ಕಹಿಯೂ ಎನಿಸಬಹುದು, ಸಿಹಿಯೂ ಎನಿಸಬಹುದು, ಸಪ್ಪೆಯೂ ಇರಬಹುದು. ಆದರೆ ಒಟ್ಟಿನಲ್ಲಿ  ವ್ಯಕ್ತಿಗಳಿಂದಲೇ ರಚಿಸಲ್ಪಟ್ಟ ಸಮಾಜದ ಲೋಪದೋಷಗಳನ್ನು ಭೂತಗನ್ನಡಿಯಲ್ಲಿ ಒಡ್ಡಿದಾಗ ವ್ಯಕ್ತಿಯು ಮಾತ್ರ ಉಳಿಯುವುದಿಲ್ಲ. ಗುಣಗಳಿಗೆ ವ್ಯಕ್ತಿಯು ನಿಮಿತ್ತ ಮಾತ್ರ. ವ್ಯಕ್ತಿಯ ಮೇಲೆ ದೋಷ ಹೊರಿಸಬೇಕೆಂದಾಗಲಿ, ತಿಡಿಗೇಡಿತನದಿಂದ ಕೆಣಕಬೇಕೆಂಬ ಉದ್ದೇಶವೂ ಇದರಲ್ಲಿಲ್ಲ. ಲೋಪ ದೋಷಗಳನ್ನು ಸ್ವತ:ಹಚ್ಚಿಕೊಳ್ಳುವ ದಡ್ಡತನಕ್ಕೆ ಯಾರೂ ಇಳಿಯುವುದಿಲ್ಲ. ತಪ್ಪುತನ ತಿದ್ದಿಕೊಳ್ಳುವ ಜಾಣತನ ಒದಗಿಸಿಕೊಳ್ಳಬೇಕು. ಇದು ಈ ಕೃತಿಯ ಒಟ್ಟೂ ಸಾರಾಂಶ. ಇದನ್ನು ನಗೆಬರಹಗಳ ಮೂಲಕ ಬೀಚಿ ನಮಗೆ ಕಟ್ಟಿಕೊಟ್ಟಿದ್ದಾರೆ. ಕೆಲವು ಪ್ರಮುಖ ಸ್ವಾರಸ್ಯಕರ ಬರಹ (ಮಾತ್ರೆ)ಗಳನ್ನು ಗಮನಿಸುವುದಾದರೆ, ಕಾನ...