ಗ್ರಾಮ ಜೀವನದ ಚೆಲುವು ಕಟ್ಟಿಕೊಡುವ ‘ಕಥೆ ಜಾರಿಯಲ್ಲಿರಲಿ’ ‘ಕಥೆ ಜಾರಿಯಲ್ಲಿರಲಿ’ ಈ ಕಥಾ ಸಂಕಲನವು ೨೦೨೫ರ ‘ಈ ಹೊತ್ತಿಗೆ’ ಕಥಾಪ್ರಶಸ್ತಿ ಪಡೆದದ್ದಾಗಿದೆ. ಇದರ ಲೇಖಕಿ ಶಿರಸಿಯ ಪೂರ್ಣಿಮಾ ಭಟ್ ಸಣ್ಣಕೇರಿ. ಇಲ್ಲಿನ ಕಥೆಗಳ ರಚನೆ ಗಟ್ಟಿತನದಿಂದ ಕೂಡಿದ್ದು, ಹಳ್ಳಿ ಜೀವನದ ಸೊಗಡು ಹೆಚ್ಚಾಗಿ ಕಾಣಿಸುತ್ತಿದೆ. ಇಲ್ಲಿರುವ ಎಂಟು ಕಥೆಗಳಲ್ಲಿ ಹೊಸತನವಿದೆ, ವಿಶಿಷ್ಟತೆಯಿದೆ. ಕಥಾ ವಸ್ತುವು ನಿರ್ವಹಣೆ ಮತ್ತು ಭಾಷೆಯ ಪ್ರಯೋಗಶೀಲತೆಯನ್ನು ಒಳಗೊಂಡಿವೆ. ಕೃತಿಯನ್ನು ಓದಿದ ಬಳಿಕೆ ಅಲ್ಲಿನ ಕಥೆಗಳೇ ನಮ್ಮನ್ನು ಆವರಿಸಿಬಿಡುತ್ತವೆ. ವಿಶೇಷವಾಗಿ ಉತ್ತರ ಕನ್ನಡದ ಅದರಲ್ಲೂ ಶಿರಸಿ ತಾಲೂಕಿನ ಸುತ್ತಮುತ್ತದ ಗ್ರಾಮಗಳ ಹೆಸರು ಇದರಲ್ಲಿದೆ. ಇಲ್ಲಿನ ಕಥೆಗಳೆಲ್ಲ ಲೇಖಕಿಯ ಸುತ್ತಮುತ್ತಲ ಬದುಕುಗಳನ್ನು ತೆರೆದಿಡುತ್ತವೆ. ಸರಳ ವಿಷಯಗಳಾದರೂ ಅಲ್ಲಿನ ಸಂಪ್ರದಾಯ, ಅವುಗಳ ವಿರುದ್ಧ್ದ ಮಾತನಾಡುವುದು, ಅದನ್ನು ಕಥಾನಾಯಕಿ ಸಮರ್ಥಿಸಿಕೊಳ್ಳುವುದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕಥನ ರೂಪುಗೊಳ್ಳುವ ಮಾಂತ್ರಿಕ ಪ್ರಕ್ರಿಯೆಯನ್ನು ಲೇಖಕಿ ತೋರಿಸಿದ್ದಾರೆ. ಬರವಣಿಗೆ ಹಾಗೂ ಬದುಕಿನ ಸೌಂದರ್ಯ ಇಲ್ಲಿದೆ. ಕಥೆ ಕಟ್ಟುವಲ್ಲಿನ ಎಚ್ಚರ ಗಮನ ಸೆಳೆಯುತ್ತದೆ. ಮೊದಲನೆಯ ಕಥೆ ‘ಕತೆ ...