Posts

Showing posts from October, 2025
Image
ಯುವಪೀಳಿಗೆಗೆ ಒಂದು ಕೈದೀವಿಗೆ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’       ಇದು ರಾಷ್ಟ್ರಕವಿ ಕುವೆಂಪು ಅವರ  ವಿಚಾರೋಪನ್ಯಾಸದ ಕೃತಿ. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ಮೂಲಕ ವಿಶ್ವಮಾನವತೆಯ ಸಂದೇಶವನ್ನು ಸಾರಿದ ಕನ್ನಡದ ಮೊದಲ ಜ್ಞಾನಪೀಠ ಪುರಸ್ಕೃತ ಕವಿ ಕುಪ್ಪಳ್ಳಿ ಪುಟ್ಟಪ್ಪನವರು ಯುವಕರನ್ನು ಕುರಿತು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆನೀಡುತ್ತಾರೆ. ಈ ಕರೆಯ ಹಿಂದಿರುವ ಉದ್ದೇಶ ಸ್ಪಷ್ಟ, ಅದೇನೆಂದರೆ ಯುವಕರು ದೇಶದ ಆಸ್ತಿ, ಅವರು ಮನಸು ಮಾಡಿದರೆ ಅಸಾಧ್ಯ ಎಂಬುದೇ ಇಲ್ಲ. ಹಾಗಾಗಿ ಮೊದಲು ಈ ಸಮಾಜದ, ನಾಡಿನ ಯುವಕರು ವೈಜ್ಞಾನಿಕ ಮನೋಧೋರಣೆಯುಳ್ಳವರಾಗಿ ಎಚ್ಚೆತ್ತುಕೊಳ್ಳಬೇಕು ಎಂಬುದು ಕುವೆಂಪು ಅವರ ಸದಾಶಯ, ಆದ್ದರಿಂದಲೇ ಅವರು ಯುವಕರನ್ನು ಕುರಿತು ಅವರ ಮತಿಯನ್ನು ಎಚ್ಚರಿಸುವ ಮಾತುಗಳನ್ನಾಡಿದ್ದಾರೆ. ಈ ಕೃತಿಯಲ್ಲಿ ನಾಲ್ಕು ಲೇಖನಗಳಿವೆ. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ     “ಯುವಕರು ‘ನಿರಂಕುಶಮತಿ’ಗಳಾಗಬೇಕು, ‘ನಿರಂಕುಶಮತಿ’ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೇ ‘ನಿರಂಕುಶ ಮತಿ”’. ಇಲ್ಲಿ ಕುವೆಂಪು ನಿರಂಕುಶಮತಿ ಎಂಬ ಪದವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ.   ಮತಿ ಮಾನವನ ಸರ್ವೋತ್...
Image
 ಸಿಕ್ಕಿಂ ಪ್ರವಾಸದ ಅನುಭವಗಳ ಹೂರಣ ‘ನನ್ನ ಗ್ರಹಿಕೆಯ ಸಿಕ್ಕಿಂ’  ಸಾಹಿತಿ,  ನಿವೃತ್ತ  ಪ್ರಾಧ್ಯಾಪಕ, ಸಿನಿಮಾ ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿಕ್ಕಿಂ ಪ್ರವಾಸದ ಅನುಭವಗಳ ಹೂರಣವೇ ‘ನನ್ನ ಗ್ರಹಿಕೆಯ ಸಿಕ್ಕಿಂ’. ಪ್ರವಾಸ ಕಥನ ಎಂದರೆ ಕೇವಲ ಅಂಕಿ- ಅಂಶಗಳ ಮಾಹಿತಿಗಳಿಗೆ ಸಂಗ್ರಹವಾಗದೆ ಮನುಷ್ಯರ ಮತ್ತು ಸಂಸ್ಕೃತಿಯ ಬೆರಗು ಬವಣೆಗಳನ್ನು ಚಿತ್ರಿಸುವ ಒಳನೋಟದಿಂದ ಕೂಡಿರಬೇಕು. ಅದು ಒಂದು ಧ್ಯಾನಸ್ಥಿತಿ. ಈಗ ಕುಳಿತಲ್ಲೇ ಸಾಕಷ್ಟು ಮಾಹಿತಿಗಳು ಅಂತರ್ಜಾಲದಲ್ಲಿ ಚೆಲ್ಲಾಡುತ್ತವೆ. ಆದರೆ ಅಲ್ಲಿನ ಅಚ್ಚರಿ, ಕುತೂಹಲ, ಅನ್ವೇಷಣೆ ಮತ್ತು ವಿರಾಟದರ್ಶನ ಅಂತಹ ಸ್ಥಳಗಳಿಗೆ ಹೋದಾಗ ಮಾತ್ರ ಲಭ್ಯ.  ಈ ಕೃತಿಯಲ್ಲಿ ೧೩ ಚಿಕ್ಕ ಲೇಖನಗಳಿವೆ. ಸೊಬಗಿನ ಸಿಕ್ಕಿಂ, ಸಿಕ್ಕಿಂ ಹಾದಿಯಲ್ಲಿ ಸಾವಿನ ನೆನಪು, ಕಾಂಚನಗಂಗಾ, ಲಾಚೆನ್ ಹಾದಿಯಲ್ಲಿ,  ಧೀರ ಕನ್ನಡಿಗನಿಗೆ ನಮಿಸಿ, ದುಂಡಪ್ಪ ಅಕ್ಕಿಗೆ ಶ್ರದ್ದಾಂಜಲಿ,  ತಂಪು ಒಡಲು, ಕುದಿಯುವ ಮಡಿಲು, ಸಿಕ್ಕಿಂ ಒಪ್ಪಂದ, ಮೊದಲಾದವು ಸೇರಿವೆ. ಸಿಕ್ಕಿಂನ್ನು ಕಣ್ತುಂಬ ನೋಡಿ ಬರಬೇಕೆಂಬ ತನ್ನ ಹಂಬಲ ಈಡೇರಿದೆ. ಭಾರತದ ಪುಟ್ಟ ಗಿರಿಬಾಲೆ ಸಿಕ್ಕಿಂ. ಭುಜದ ಮೇಲೆ ಹೆಬ್ಬೆರಳಿನ ಗುರುತಿನಂತಿರುವ ಸಿಕ್ಕಿಂನಲ್ಲಿ ಕಾಂಚನ್‌ಗಂಗಾ  ಪರ್ವತವಿದೆ. ಜಗತ್ತಿನ ಮೂರನೇ ಎತ್ತರದ ಪರ್ವತ ಶ್ರೇಣಿ ಕಾಂಚನಗಂಗಾ. ಈ ರಾಜ್ಯದಲ್ಲಿ ೨೮ ಶಿಖರಗಳು, ೧೦೪ ನದಿಗಳು, ೨೫೭ ಸರೋವರಗಳು ಇವೆ. ಒಂ...
Image
ಎಳೆಯ ಮಕ್ಕಳ ಸೃಜನಶೀಲತೆಗೆ ಸಾಣೆ ‘ಮೊದಲ ತೊದಲು’   ಮಕ್ಕಳ ಬರವಣಿಗೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ರಚಿತವಾದ ‘ಮೊದಲ ತೊದಲು’ ಪ್ರಾಥಮಿಕದಿಂದ ಪಿಯುವರೆಗಿನ ವಿದ್ಯಾರ್ಥಿಗಳ ಕವನಗಳ ಸಂಕಲನ. ಇದನ್ನು ಸಾಲಿಗ್ರಾಮದ ಚಿತ್ರಪಾಡಿಯ ಪ್ರೊ. ಉಪೇಂದ್ರ ಸೋಮಯಾಜಿಯವರು ಕೃತಿರೂಪದಲ್ಲಿ ಪ್ರಕಟಿಸಿದ್ದಾರೆ. ಮಕ್ಕಳು ಬರೆದ ಕಥೆ, ಕವನಗಳು ಬಿಡಿಯಾಗಿ ಉಳಿದುಹೋಗಬಾರದೆಂದು ಅವುಗಳನ್ನು ಸಂಗ್ರಹಿಸಿ ಸಂಕಲವನ್ನಾಗಿ ಮಾಡಿದ್ದಾರೆ.  ಇದರಲ್ಲಿ ಮಕ್ಕಳು ಪ್ರಕೃತಿ ವೈಭವವನ್ನು  ಮತ್ತು ದಿನನಿತ್ಯದ ಜೀವನದಲ್ಲಿನ ವಿಷಯ, ವಸ್ತುಗಳನ್ನು  ಕಂಡು ವಿಸ್ಮಿತರಾಗಿ ಹಾಡಿದ, ತಮ್ಮ ಮೇಲೆ ಪ್ರಭಾವ ಬೀರಿದವರನ್ನು ನೆನಪಿಸಿಕೊಳ್ಳುವ  ವಿಷಯವಿದೆ. ಪ್ರಾಣಿ -ಪಕ್ಷಿಗಳ ಮೇಲಣ ಪ್ರೀತಿ, ನಾಡು -ನುಡಿಯ ಅಭಿಮಾ, ಶಾಲೆ- ಶಿಕ್ಷಕ ಮತ್ತು ಇತರ ವಿಚಾರಗಳ ಕುರಿತಾದ ೬೨ ಕವನಗಳಿವೆ. ನಾಲ್ಕನೇ ತರಗತಿಯಿಂದ ಪಿಯುವರೆಗಿನ ವಿವಿಧ ವಯೋಮಾನದ ಮಕ್ಕಳು ತಮ್ಮ ಬುದ್ಧಿಮಟ್ಟಕ್ಕೆ ತಕ್ಕಂತೆ ಬರೆದ ಕವನಗಳು ಇವು. ಅವರ ತಿಳುವಳಿಕೆಯ ಸ್ಥರದಲ್ಲಿ ಇವುಗಳನ್ನು ನಾವು ಸ್ವೀಕರಿಸಬೇಕು. ಅಳತೆ ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಆದರೆ ಎಲ್ಲವೂ ನಮಗೆ ತೃಪ್ತಿ ನೀಡುತ್ತವೆ, ಮೆಚ್ಚುಗೆ ಉಂಟಾಗುತ್ತದೆ. ಅವರ ಅನುಭವಗಳ ವ್ಯಾಪ್ತಿಯಲ್ಲ್ಲಿ ಇವುಗಳನ್ನು ಪ್ರಾಸ ರೂಪದಲ್ಲಿ ಅಥವಾ ಪ್ರಾಸರಹಿತವಾಗಿ ರಚಿಸಿದ್ದಾರೆ. ಮಕ್ಕಳಿಗೆ ಇಂತಹ ಕವನ ಸಂಕಲನಗಳನ್ನು ನಿಜವಾಗಿಯೂ ಕೊಟ್ಟಲ್ಲಿ ಅದು ಅವರಿಗೆ...
Image
ಕೃಷ್ಣನ ಮೌಲಿಕ ವ್ಯಕ್ತಿತ್ವ ಅನಾವರಣದ ‘ಕೃಷ್ಣ ತರಂಗಿಣಿ’ ‘ಕೃಷ್ಣ ತರಂಗಿಣಿ’  ಕಾದಂಬರಿಯಲ್ಲಿ ಲೇಖಕಿ ಪದ್ಮಜಾ ಜೋಯಿಸ್ ತೀರ್ಥಹಳ್ಳಿ ಕೃಷ್ಣನನ್ನು ಸಮಕಾಲೀನ ಮನಃಸ್ಥಿತಿಯಿಂದ ತಮ್ಮದೇ ಆದ ದೃಷ್ಟಿಕೋನದಿಂದ ಚಿತ್ರಿಸಿ ಸಾರ್ವಕಾಲಿಕವಾಗಿ ಸಲ್ಲುವ ವ್ಯಕ್ತಿ. ಏಕಕಾಲದಲ್ಲಿ ಸಾಮಾನ್ಯ, ಅಸಾಮಾನ್ಯ, ಲೌಕಿಕನಾಗಿ ಕಾಣಿಸಿಕೊಳ್ಳಬಲ್ಲವನು ಎನ್ನುವುದನ್ನು  ಸೊಗಸಾಗಿ ನಿರೂಪಿಸಿದ್ದಾರೆ. ಕೃಷ್ಣನ ರಹಸ್ಯಗಳು ಯಾವೊಬ್ಬ ಜ್ಞಾನಿಗೂ ಪೂರ್ಣವಾಗಿ ತೆರೆದುಕೊಳ್ಳುವುದಿಲ್ಲ. ಆದುದರಿಂದಲೇ ಗೊಂದಲಗಳು, ಅನರ್ಥಗಳು ಆದರೂ ಕೃಷ್ಣ ನಮಗೆ ಬೇಕೇ ಬೇಕು. ಜೀವನಕ್ಕೆ ಬೆಳಕಾಗಿ ಒದಗುವ ಶ್ರೀಕೃಷ, ಅರಿವಿನ ಅಲೆಗಳಾಗಿ ಸದಾ ಬಾಳ ಕಡಲಿನಲ್ಲಿ ತೆರೆ ತೆರೆಯಾಗಿ ಸಾಗುತ್ತಿರುವವನು ಎಂದೇ ಈ ಕೃತಿಯಲ್ಲಿ ಬಿಂಬಿಸಲಾಗಿದೆ. ಆಧ್ಯಾತ್ಮಿಕ, ಭಾವನಾತ್ಮಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ವರ್ಗದ ಕೃಷ್ಣನನ್ನು ಸಾಮೂಹಿಕ ಭಾವದಿಂದ ಮೂಡಿಸುವಲ್ಲಿ ಲೇಖಕಿ ಸಫಲರಾಗಿದ್ದಾರೆ. ಕೃಷ್ಣ ಪವಾಡ ಪುರುಷ ಎಂಬ ಜನಮನದ ಭಾವ. ಬದಲಾಗಿ, ಅವನೊಬ್ಬ ಪರಿಪೂರ್ಣ ಮಿತ್ರ, ಸಹೋದರ, ರಾಜಕೀಯ ತಜ್ಞ, ಕುಶಲ ವ್ಯಾಪಾರಿ, ಪ್ರೇಮಿ, ವಿರಹಿ, ಸಾಮಾನ್ಯವಾಗಿಯೂ ನಿಲ್ಲುವಂತಹ ಆಕರ್ಷಕ ವ್ಯಕ್ತಿತ್ವದವನೆನ್ನುವುದು ಮನವರಿಕೆಯಾಗುತ್ತದೆ. ಕೃತಿಯಲ್ಲಿನ ಪ್ರತಿಯೊಂದು ಅಧ್ಯಾಯದಲ್ಲಿ ಬರುವ ಘಟನೆಗಳು ಎಲ್ಲೂ ಎಲ್ಲೆ ಮೀರದಿರುವುದನ್ನು ಇಲ್ಲಿ ಕಾಣಬಹುದು. ಕೆಲವು ವರ್ಣನೆಗಳು ತಣ್ಣಗೆ ಕಚಗುಳಿ ಇಡುತ್ತವೆ. ಆತ ಗೀತಾಚಾ...
Image
   ಜೀವನ ದೃಷ್ಟಿಯನ್ನು ಕಾಣಿಸುವ ‘ಕನಸಿನ ದನಿ’ ‘ಕನಸಿನ ದನಿ’ ಇದು ಡಾ|| ಅಜಿತ್ ಹರೀಶ್ ಅವರ ಕವನ ಸಂಕಲನ. ಆದಷ್ಟು ಕಡಿಮೆ ಪದಗಳಲ್ಲಿ, ಪರಿಣಾಮಕಾರಿ ಕವಿತೆ ಕಟ್ಟುವ ಕಲೆಗಾರಿಕೆಯನ್ನು ‘ಕನಸಿನ ದನಿ’ಯಲ್ಲಿ ನಾವು ಕಾಣಬಹುದು. ಇಲ್ಲಿನ ಕವಿತೆ ಸ್ಫುರಿಸುವ ರಸಾಸ್ವಾದನೆಯ ಅನುಭೂತಿಯನ್ನು ನೀಡುತ್ತವೆ. ಕೆಲವು ಕವಿತೆಗಳು ಕವಿತೆಯಾಚೆಗೂ ವಿಸ್ತರಿಸಿಕೊಂಡಿವೆ. ಮನುಷ್ಯ ಸಂಬಂಧಗಳು, ಮನೋವಿಜ್ಞಾನ, ಪರಿಸರದ ಕಾಳಜಿ, ಹಳ್ಳಿಯ ಕುರಿತ ಪ್ರೀತಿ, ಪ್ರೇಮ -ಕಾಮ -ವಿರಹ- ವಿಷಾದ,  ಸ್ನೇಹ, ಸೌಹಾರ್ದತೆ ಇಲ್ಲಿನ ಕವಿತೆಯ ಪ್ರಮುಖ ವಿಷಯಗಳಾಗಿವೆ. ಕೆಲವು ಅಪರೂಪದ ಸಂಗತಿಗಳಿಂದಲೂ  ಕವನಗಳು ರಚಿಸಲ್ಪಟ್ಟಿವೆ. ವೈವಿಧ್ಯಪೂರ್ಣ ಕವಿತೆಗಳಿಂದ ಕೂಡಿರುವ ಈ ಕವನ ಸಂಕಲನ ಜೀವನ ದೃಷ್ಟಿಯನ್ನು ಕಾಣಿಸುವಂತಿದೆ. ಇಲ್ಲಿ ಅವರ ಭಾಷಾ ಪ್ರಯೋಗ ನಮ್ಮನ್ನು ಸೆಳೆಯುತ್ತದೆ.  ಸ್ಥಾಪಿತ ಸಿದ್ಧಾಂತಗಳಿಗೆ ಶರಣಾಗದೆ  ಸಶಕ್ತವಾದ ಹೊಸ ಜಾಡನ್ನು ಅನ್ವೇಷಿಸುತ್ತಿರುವುದನ್ನು ಇಲ್ಲಿನ ಕವಿತೆಗಳು ತೋರಿಸುತ್ತವೆ. ಯಥಾರ್ಥತೆಯನ್ನು ಗುರುತಿಸುವ ತಾತ್ವಿಕತೆ ಇಲ್ಲಿನ ಕವಿತೆಗಳಲ್ಲಿ ಕಂಡುಬರುತ್ತದೆ. ಇದು ಕಾವ್ಯಶಕ್ತಿಯೂ ಹೌದು, ಕಾವ್ಯ ಸೌಂದರ್ಯವೂ ಹೌದು. ಕೃತಿಯಲ್ಲಿ  ೪೬ ಕವಿತೆಗಳಿವೆ ಮೊದಲ ಕವಿತೆ ‘ತಿಮಿರ’. ಕತ್ತಲಲ್ಲಿ ಇಣುಕುವ ಬೆಳಕು ಬರುವ ಶಬ್ದ/ ಎಂಥವರನ್ನೂ ಮಾಡುವುದು ಸ್ತಬ್ಧ/ ಎಲ್ಲರೊಳಗೊಬ್ಬ ಕವಿ ಆಗ ರವಿ ಇಲ್ಲ/ ಕಲ್ಪನೆಗೆ ಕಾಲು ಬಾಲ/...
Image
      ವಿಸ್ತೃತ ಅನುಭವದ ರಸಪಾಕ ‘ಯಕ್ಷಗಾನ ಮತ್ತು ಹರಿಕಥೆ’ ಕವಿ, ಸಾಹಿತಿ, ಪ್ರಸಂಗಕರ್ತೃ, ಅರ್ಥಧಾರಿ, ಹರಿದಾಸ ಅಂಬಾತನಯ ಮುದ್ರಾಡಿಯವರ ಮಹತ್ವದ ಕೃತಿ ‘ಯಕ್ಷಗಾನ ಮತ್ತು ಹರಿಕಥೆ -ಒಂದು ತೌಲನಿಕ ಅಧ್ಯಯನ’.  ನಿಡುಗಾಲ ಯಕ್ಷಗಾನ ಮತ್ತು ಹರಿಕಥಾ ಕ್ಷೇತ್ರದಲ್ಲಿ ಕಲಾಸಾಧನೆಗೈದ, ಎರಡು ಕಲಾ ಪ್ರಕಾರಗಳ ಹೊರಗನ್ನು ಚೆನ್ನಾಗಿ ಬಲ್ಲ ಅವರ ವಿಸ್ತೃತ ಅನುಭವದಿಂದ ಮೂಡಿ ಬಂದ ಈ ಕೃತಿ ಸಂಶೋಧನಾ ಪ್ರಬಂಧ ರೂಪದಲ್ಲಿ ಮೈದಾಳಿದೆ. ನಾಲ್ಕು ಅಧ್ಯಾಯಗಳಿಂದ ಕೂಡಿದ ಈ ಹೊತ್ತಗೆಯು ಯಕ್ಷಗಾನ ಮತ್ತು ಹರಿಕಥೆಯ ಪ್ರಸ್ತಾವನೆಯೊಂದಿಗೆ ಹರಿಕಥೆಯಲ್ಲಿ ದಾಸ ಸಾಹಿತ್ಯದ ಕೀರ್ತನೆಗಳ ಬಳಕೆಯನ್ನು ವಿವರವಾಗಿ ಪರಿಶೀಲಿಸಿದೆ. ಯಕ್ಷಗಾನ ಮತ್ತು ಕೀರ್ತನೆಗಳಲ್ಲಿ ಬರುವ ಛಂದಸ್ಸು ಮತ್ತು ರಾಗಗಳ ಪೌರಾಣಿಕ ಅವಲೋಕನ ನಡೆಸಿದೆ. ಅಂಶ ಗಣ ಪ್ರಧಾನವಾದ ಛಂದಸ್ಸಿನ ಸುದೀರ್ಘ ವಿವೇಚನೆ ಇದೆ. ಛಂದಸ್ಸಿಗೆ ಸಂಬಂಧಿಸಿ ಪರಿಣಾಮಕಾರಿಯಾಗಿ ಪರಿಚಯವಿದೆ. ಸಂಗೀತದ ರಾಗಗಳನ್ನೇ ಹರಿದಾಸರು ಬಳಸಿದರೆ, ಯಕ್ಷಗಾನದಲ್ಲಿ ಆ ರಾಗಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡುತ್ತಾರೆ ಎಂಬುದನ್ನು ಮನೋಜ್ಞವಾಗಿ ತಿಳಿಸಿದ್ದಾರೆ. ಈ ಎರಡು ಪ್ರಕಾರಗಳಲ್ಲಿ ಬಳಕೆಯಾದ ವಿವಿಧ ರಾಗಗಳ ದೊಡ್ಡಪಟ್ಟಿ ಇದರಲ್ಲಿದೆ.  ಕೀರ್ತನೆಗಳು ಅಧ್ಯಾತ್ಮತತ್ವ ನಿರೂಪಣೆ ಮತ್ತು ರಾಗ ಪ್ರಧಾನವಾದರೆ, ಯಕ್ಷಗಾನ ಪದ್ಯಗಳು ಅರ್ಥ, ಭಾವ, ನೃತ್ಯಾಭಿವ್ಯಕ್ತಿಗೆ ರಚನೆಯಾದುದನ್ನು ಸೋದಾಹರಣವಾಗಿ ವಿವರಿಸಿದ್ದಾರ...
Image
    ಕಟು ಸತ್ಯದ ‘ ಮೌನದ ಚಿಪ್ಪಿನೊಳಗೆ ’ ................................. ಪ್ರತಿನಿತ್ಯ ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆಯನ್ನು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಇವಕ್ಕೆಲ್ಲ ನ್ಯಾಯ ಎಷ್ಟರ ಮಟ್ಟಿಗೆ ಸಿಗಬಹುದೆನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಪ್ರಸ್ತುತ “ಮೌನದ ಚಿಪ್ಪಿನೊಳಗೆ” ಕೃತಿಯನ್ನು ಲೇಖಕಿ ಧರಣಿ ಮಾಯೆ ಅವರು ಇದೇ ವಿಷಯವನ್ನಿಟ್ಟುಕೊಂಡು ರಚಿಸಿದ್ದಾರೆ. ಜೊತೆಗೆ ಸಂತೋಷ ಮತ್ತು ನೆಮ್ಮದಿಯ ಜೀವನಕ್ಕೆ ಸ್ತ್ರೀ-ಪುರುಷರಿಬ್ಬರ ಕಾಣಿಕೆಯೂ ಇದೆ ಎನ್ನುವ ಪರಿಹಾರವನ್ನೂ ಸೂಚಿಸಿದ್ದಾರೆ.  ಕೃತಿಯಲ್ಲಿ ಕೇವಲ ಗೃಹಿಣಿಯ ಪರ ಮಾತ್ರವಲ್ಲ, ಪುರುಷರು ಮತ್ತು ಮಕ್ಕಳ ಬಗ್ಗೆಯೂ ಬರೆಹಗಳಿವೆ. ನಮ್ಮೆಲ್ಲರ ನಡುವೆಯೇ ನಡೆಯುವಂತಹ ದೌರ್ಜನ್ಯ, ಶೋಷಣೆ, ಅತ್ಯಾಚಾರದ ಘಟನೆಗಳನ್ನು ನೆನಪಿಸುತ್ತ ಕುಟುಂಬಗಳು ಅನುಭವಿಸುತ್ತಿರುವ ತವಕ, ತಲ್ಲಣ, ಬೇಗುದಿಯನ್ನು ವಿವರಿಸಿದ್ದಾರೆ.   ಇಲ್ಲಿ ಪುರುಷರ ಬಗ್ಗೆಯೂ ಕಾಳಜಿ ವಹಿಸುತ್ತ ಅವರ ನೋವುಗಳನ್ನು, ಪೂರ್ಣವಾಗಿ ಅರಳದ ಹೂ ಮನಸ್ಸಿನ ಮಕ್ಕಳ  ಮತ್ತು ಯುವಪೀಳಿಗೆಯ ಮನೋಸ್ಥಿತಿಯ ಸೂಕ್ಷ್ಮತೆಗಳನ್ನು ಹೊರತರುವ ಪ್ರಯತ್ನವೂ ಇದೆ ಎಂದು ಲೇಖಕಿ ಹೇಳಿಕೊಂಡಿದ್ದ್ದಾರೆ. ಮೌನದ ಚಿಪ್ಪಿನೊಳಗೆ ಹೊತ್ತಗೆಯಲ್ಲಿ ೧೫ ಲೇಖನಗಳಿವೆ. ಲೇಖನಗಳು ಚಿಕ್ಕದಾದರೂ ಮಹತ್ವದ ಅಂಶಗಳನ್ನು ಒಳಗೊಂಡಿವೆ. ಇದರಲ್ಲಿನ  ಎಲ್ಲಾ ವಿಷಯಗಳು ನಮಗೆ ತಿಳಿದಿರುವಂತಹವೇ.  ಆದ...
Image
  ಕೌಟುಂಬಿಕ ಚೌಕಟ್ಟಿನ ‘ಅನ್ನಪೂರ್ಣ’ ‘ಅನ್ನಪೂರ್ಣ’ ಇದೊಂದು  ಸೊಗಸಾದ ಕೌಟುಂಬಿಕ ಚೌಕಟ್ಟನ್ನು ಹೊಂದಿರುವ, ಕುತೂಹಲಕರ ಕಥಾಹಂದರದ ಕಾದಂಬರಿ. ಇದರ ಲೇಖಕರು ಭಾರತಿ ಪ್ರಸಾದ ಕೊಡ್ವಕೆರೆ. ತುಂಟತನದ ಹುಡುಗಿಯೊಬ್ಬಳು ತನ್ನ ಮನೆಯವರಿಂದಲೇ ಉಪೇಕ್ಷ್ಷೆಗೆ ಒಳಗಾಗುವುದು, ಜವಾಬ್ದಾರಿ ಬರಲೆಂದು ಬೆಂಗಳೂರಿನ ಸಂಬಂಧಿಕರ ಮನೆಗೆ ಕೆಲಸಕ್ಕೆ ಕಳುಹಿಸುವುದು, ಅಲ್ಲಿ ಮನೆಯ ಒಡತಿಯ ಗಯ್ಯಾಳಿತನ, ನಿರ್ಲಕ್ಷ್ಯಕ್ಕೆ ತುತ್ತಾಗುವುದು, ವಿಫಲ ಪ್ರೇಮ ಎದುರಾಗುವುದು, ನಂತರ ಆ ಮನೆ ಬಿಟ್ಟು ಅಕ್ಕನ ಮನೆ ಸೇರುವುದು, ಅಲ್ಲಿಂದ ಗಾರ್ಮೆಂಟ್ ಒಂದರಲ್ಲಿ ಕೆಲಸಕ್ಕ್ಕೆ ಸೇರುವುದು, ಎಸ್ಸೆಸೆಲ್ಸಿ, ಪಿಯು, ಡಿಗ್ರಿ ಪಾಸು ಮಾಡುವುದು, ಈ ವೇಳೆ  ಸಂಜೆ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸಿಕ್ಕವನೇ ಆಕೆಯ ಬಾಳಿನ ಯಜಮಾನನಾಗುವುದು... ಹೀಗೆ  ಜೀವನದಲ್ಲಿ ನತದೃಷ್ಟೆಯಾದ ಒಬ್ಬ ಹುಡುಗಿ ಸತತ ವೈಫಲ್ಯಗಳನ್ನು ಕಂಡು ನಂತರ ಯಶಸ್ಸನ್ನು ಕಾಣುವುದು, ಸುಖ ಜೀವನಕ್ಕೆ ಕಾಲಿಡುವುದು ಕಾದಂಬರಿಯ ಕಥಾ ವಸ್ತು. ಇದು ಸತ್ಯ ಘಟನೆಯಾದರೂ ಸಂಪೂರ್ಣ ನೈಜವಲ್ಲ ಎಂದು ಕಾದಂಬರಿಗಾರ್ತಿಯೇ ಹೇಳಿಕೊಂಡಿದ್ದಾರೆ.  ಪೂರ್ಣ ಅಥವಾ ಅನ್ನಪೂರ್ಣ ಈ ಕಾದಂಬರಿಯ ನಾಯಕಿ.    ತನಗೆ ಇಬ್ಬರೂ ಹೆಣ್ಣು ಮಕ್ಕಳೇ ಹುಟ್ಟಿದರೆಂಬ ಕಾರಣಕ್ಕೆ ಹೆಂಡತಿಯ ಮೇಲಿನ ಕೋಪದಿಂದ ಆಕೆಯನ್ನು ಗಂಡನ ಮನೆಗೆ ಬಿಟ್ಟು ಬರುವುದು, ತಂದೆ, ತಾಯಿ ಮನೆಯಲ್ಲಿ ಮಕ್ಕಳಾದ ಸರ್ವಮಂಗಳ ಮತ್ತು ಅನ್ನಪೂರ್ಣ...
Image
ಅತ್ಯುತ್ತಮ ಚಿಂತನೆ, ಸದ್ಬೋಧನೆಗಳುಳ್ಳ ‘ಮಹಾತ್ಮಾ ಗಾಂಧಿಯವರ ಆಯ್ದ ಬರಹಗಳು’ ಈ ಕೃತಿಯು ಮಹಾತ್ಮಾ ಗಾಂಧಿಯವರ ಅನುಭವ ಮತ್ತು  ಬರಹಗಳದ್ದಾಗಿದೆ. ಇದರಲ್ಲಿ ೨೪ ಬರಹಗಳಿವೆ. ಬೇರೆ ಬೇರೆ ಸಂದಭsಗಳಲ್ಲಿ ಅವರು ನಾಯಕರಿಗೆ, ಅಥವಾ ತಮ್ಮ ಅನುಭವದ ಮೇಲೆ ಬರೆದ ಬರಹಗಳಿವು. ನಿರ್ಭಿಡೆಯ ಮಾತುಗಳು, ಸತ್ಯ, ಅಹಿಂಸೆಗಾಗಿ, ಅವರು ನಡೆದುಕೊಂಡ ರೀತಿ, ಯಾರ ಮುಲಾಜಿಗೂ ಒಳಗಾಗದೆ ನೇರ ನುಡಿಯಾಡಿದ್ದನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು. ಇಂದಿನ ದಿನಮಾನಗಳಲ್ಲಿ ಇಂತಹ ಬರಹಗಳನ್ನು ಕಾಣುವುದು ಕಷ್ಟ. ಇಲ್ಲಿನ ಪ್ರತಿ ಬರಹಕ್ಕೂ ಅವರು ಬರೆದ ದಿನಾಂಕ ನಮೂದಿಸಿದ್ದಾರೆ. ಅಳಿದು ಹೋಗುವ ಮುನ್ನ ಇದನ್ನೆಲ್ಲ ಸಂಗ್ರಹಿಸಿ ಪ್ರಕಟಿಸುವ ಕೆಲಸವಾಗಿದೆ. ಈ ಮೂಲಕ ಗಾಂಧಿ ವಿಚಾರಧಾರೆ, ಬದುಕು- ಬರಹ ಸಾರ್ವಜನಿಕರಿಗೆ ಸುಲಭ ದರದಲ್ಲಿ ಸಿಗುವಂತಾಗಿದೆ. ಇದೊಂದು ಅನನ್ಯ ಕೃತಿ. ಅತ್ಯುತ್ತಮ ಚಿಂತನೆ, ಸದ್ಬೋಧನೆಗಳುಳ್ಳ ಮಹಾನ್ ನಾಯಕ, ರಾಷ್ಟ್ರಪಿತನ ಜೀವನ ಚರಿತ್ರೆಯೂ ಹೌದೆಂಬಂತೆ ಇದೆ. ‘ಗೋಖಲೆ ನನ್ನ ರಾಜಕೀಯ ಗುರು’ ಎಂಬ ಮೊದಲ  ಬರಹದಲ್ಲಿ  ಗೋಪಾಲಕೃಷ್ಣ ಗೋಖಲೆಯವರ ವ್ಯಕ್ತಿತ್ವವನ್ನು ವರ್ಣಿಸಿದ್ದಾರೆ. ತನ್ನ ಹೃದಯದಲ್ಲಿ ಅವರು ವಿರಾಜಮಾನರಾಗಿದ್ದಾರೆ. ಒಬ್ಬ ರಾಜಕೀಯ ಕಾರ್ಯಕರ್ತನಲ್ಲಿ ಏನಿದೆ ಎಂದು ನಾನು ಬಯಸಿದ್ದೇನೋ ಅವೆಲ್ಲವೂ ಅವರಲ್ಲಿ ಇತ್ತು. ಸ್ಫ್ಪಟಿಕದ ತರಹದ ಪರಿಶುದ್ಧತೆ, ಮೃದುತನ, ಸಿಂಹದ ಧೈರ್ಯ ಮತ್ತು ಔದಾರ್ಯ ಅವರಲ್ಲಿತ್ತು. ಸಾಮಾಜಿಕ ನಡವಳಿಗಳ ...
Image
ಗುರುವನ್ನರಿಯುವ ಉತ್ಕಟ ಅಪೇಕ್ಷೆಯ   ‘ಶರಣಾಗತಿ’ ‘ಶರಣಾಗತಿ’ ಇದು ಲಾವಣ್ಯ ಶ್ರೀಕಾಂತ್ ಅವರ ಚೊಚ್ಚಲ ಕವನ ಸಂಕಲನ. ಇದರಲ್ಲಿ ಮಾತೃಪ್ರೇಮ, ಶರಣಾಗತಿ, ಭರವಸೆ ಇದೆ. ವಿರಹ ಭಾವಗಳ ಉತ್ಕರ್ಷದ ಅವಸ್ಥೆ, ಭಗವಂತನ  ಸೇರುವ, ಗುರುವಿನಲ್ಲಿ ಸೇರುವ ಹಸಿವಿದೆ. ವಿರಹದ ನೋವಿದೆ, ಭಗವಂತನೊಂದಿಗೆ ನಾಳೆಯಾದರೂ ಸೇರಬಹುದು ಎಂಬ ಭರವಸೆ ಇದೆ. ಇಲ್ಲಿ  ಲಿಂಗ ಮಿಲನದ ಭಾವಾಪೇಕ್ಷೆ ಅಲ್ಲ, ಇಲ್ಲಿ ಆತ್ಮಾರ್ಪಣೆಯ ಭಾವವಿದೆ. ಎಲ್ಲವನ್ನೂ ಭಗವಂತನಿಗೆ ಸಮರ್ಪಿಸಬೇಕೆಂಬ ಆದಮ್ಯ ಬಯಕೆ ಇದೆ. ಆತ್ಮದರ್ಶನದ ಸಣ್ಣ ಸೆಳಕಿದೆ. ಇಂಥ ಒಂದು ದಿವ್ಯ ಮಿಲನಕ್ಕೆ ಲಾವಣ್ಯ ಈ ಕವನ ಸಂಕಲನವನ್ನು ಬಳಸಿಕೊಂಡಿದ್ದಾರೆ.  ಕಲ್ಮಶಗಳನ್ನು ತೊಳೆದು ಹಾಕಿ ಪರಿಶುದ್ಧನಾಗಿ ಮಾಡುವ ಕೋರಿಕೆಯನ್ನು ಇಲ್ಲಿನ ಕವನಗಳಲ್ಲಿ ಕವಯಿತ್ರಿ ಭಗವಂತನ ಮುಂದೆ ಇಟ್ಟಿದ್ದಾರೆ. ಇದು ಒಂದು ಹೊಸ ಬೆಳಕನ್ನು ನೀಡುವ ಕೃತಿ. ಗುರುವಿನಲ್ಲಿ ಮಾತೃತ್ವವನ್ನು, ಮಾತೃತ್ವದಲ್ಲಿ ಗುರುವನ್ನು ಕಾಣಲು ಲೇಖಕಿ ಇಲ್ಲಿ ಹಂಬಲಿಸಿರುವುದು ಹೆಚ್ಚಿನ ಕವನಗಳಲ್ಲಿ ಕಂಡುಬರುತ್ತದೆ. ಗುರುವಿನ ಮಾರ್ಗದರ್ಶನದಿಂದ ಶ್ರೀಹರಿಯನ್ನು ಅರಿಯುವ ಉತ್ಕಟ ಅಪೇಕ್ಷೆ ಈ ಕವನದ ಸಾರವಾಗಿದೆ.  ನದಿ ಪಾಪ ಅಂದರೆ ಕಶ್ಮಲ ತೊಳೆಯುವ ತಾಯಿ. ಆದರೆ ಅವಳನ್ನು ಯಾರು ತೊಳೆಯುವರು ಎಂಬ ಪ್ರಶ್ನೆಯನ್ನು ‘ಅಪಘನಾಶಿನಿಯ ಅಳಲು’ ಕವನದಲ್ಲಿ ಕೇಳುತ್ತಾರೆ. ನಾವು ಮುಳುಗೆದ್ದ ಮಾತ್ರ್ರಕ್ಕೆ ಪಾಪಗಳು ತೊಳೆದು ಹೋದೀತೇ ಎಂದು ಪ್ರಶ್ನಿಸ...