Posts

Showing posts from August, 2026
Image
 ‘ಹದ್ದುಗಳು’ ‘ಹದ್ದುಗಳು’  ಕಥಾ ಸಂಕಲನ ಇಂದಿನ ದಕ್ಷಿಣ ಕನ್ನಡದ ಗ್ರಾಮೀಣ ಬದುಕಿನ ಸೊಗಸನ್ನು ಚೆಂದವಾಗಿ ನಮಗೆ ನೀಡುತ್ತದೆ. ಗ್ರಾಮೀಣ ಬದುಕಿನ ನಂಬಿಕೆ, ಕೌಟುಂಬಿಕ ಜೀವನ, ನಡೆವಳಿಕೆಗಳು, ಜೀವಪರ ಚಿಂತನೆಗಳು, ಕಾರಣಿಕ ಸ್ಥಳದ ಶ್ರದ್ಧೆ, ಹಿರಿಯರ ಅತಂತ್ರ ಮನಃಸ್ಥಿತಿ, ಹೆಣ್ಣಿನ ನೋವು- ನಲಿವು, ಆತ್ಮಹತ್ಯೆ, ಕೊಲೆ ಮುಂತಾದ ಆಗುಹೋಗುಗಳನ್ನು ಇಲ್ಲಿನ ಕಥೆಗಳು ಮೈತುಂಬಿಕೊಂಡಿವೆ  ಎದುರ್ಕಳ ಸುಬ್ಬಣ್ಣ ಭಟ್ ಇದರ ಲೇಖಕರು. ಕುಶಾಲಿನ ಮಾತು, ಪ್ರೀತಿ -ಪ್ರೇಮದ ನಲ್ನುಡಿ, ವ್ಯಂಗ್ಯದ ಚಾಟಿ ಕತೆಯಲ್ಲಿ ಕಂಡುಬರುತ್ತದೆ. ಮುಖ ತಿರುಗಿಸಿದವರು ಗೆದ್ದು ಬರುವ ಸನ್ನಿವೇಶ, ನಂಬಿಕೆಗೆ ದ್ರೋಹ ಬಗೆದು ಮನದಲ್ಲಿ ಕೊರಗುವವರು, ಪಾಪಪ್ರಜ್ಞೆಯಲ್ಲಿ ನರಳುವವರು, ಬಲಿಪಶುವಾಗುವುದು, ಸಾವಿನಲ್ಲಿ ಅಂತ್ಯ ಕಾಣುವುದು... ಈ ಕೃತಿಯಲ್ಲಿ ಕಂಡುಬರುತ್ತದೆ. ಕಾಡುವ ದುಃಖ ವಿಷಾದವೂ ಇದೆ.  ಬದುಕಿನಲ್ಲಿ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು ಎಂಬ ಮಾತಿದೆ. ಅದನ್ನು ತೋರಿಸುವ ಪ್ರಯತ್ನವನ್ನು ಇಲ್ಲಿನ ಕೆಲವು ಕಥೆಗಳು ಮಾಡಿವೆ. ಈ ಕಥೆಗಳಲ್ಲಿ ಈಗಿನ ಯಾಂತ್ರಿಕ ಜೀವನ, ಮೊಬೈಲ್, ಕಂಪ್ಯೂಟರ್ ಸಂಸ್ಕೃತಿ, ಆಧುನಿಕ ಯುವ ಜನಾಂಗದ ಮನೋಭಾವ, ಮುಗ್ಧ ಜನರ ಜೀವನ, ಸಮಾಜದ ಸಣ್ಣ ಸಣ್ಣ ಸಂಗತಿಗಳನ್ನು ನಿರೂಪಿಸಿದ್ದಾರೆ. ಕಥೆಗಳು ಸರಳವಾಗಿದ್ದು, ಕಷ್ಟವಿಲ್ಲದೆ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಶೈಲಿ ತಂತ್ರಕ್ಕೆ ಮಹತ್ವ ಕೊಡದೆ ಸರಳವಾಗಿ ಕಥೆ ಹ...
Image
 ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬೀಜ ಬಿತ್ತುವ  ‘ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’   ಮಕ್ಕಳು, ಕಥೆ ಮತ್ತು ಅಜ್ಜಿ ಈ ಮೂರರ ನಡುವೆ ಸದಾ ಒಂದು ತ್ರಿಕೋನ ಸಂಬಂಧವಿದೆ. ಮಕ್ಕಳಿಗೆ ಕಥೆ ಕೇಳಬೇಕು ಎಂದೆನಿಸಿದಾಗ ಅವರು ಓಡುವುದು ಅಜ್ಜಿಯ ಬಳಿಗೆ. ಈ ಅಜ್ಜಿ ಬದುಕಿನಲ್ಲಿ ಅನುಭವ ಗಳಿಸಿದವಳು, ದುಡಿದವಳು, ಬದುಕನ್ನು ಸವೆಸಿದವಳು, ಎದುರಿಸಿದಳು. ಇಂತಹ ಒಂದು  ಊರಿನಲ್ಲಿ ಪುಟ್ಟಜ್ಜಿ ಮಕ್ಕಳಿಗೆ ಹುರುಪನ್ನು ತುಂಬುತ್ತಾ ಮಕ್ಕಳಿಗೆ ಪರಿಸರ, ಪ್ರಾಣಿಗಳ ಪರಿಚಯ ಮಾಡಿಕೊಡುತ್ತಾ, ಮಕ್ಕಳನ್ನು ಆ ಕಥೆಗಳ ಮೂಲಕ ರಂಜಿಸುತ್ತಾಳೆ. ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ಇಂತಹ ೧೫ ಕಥೆಗಳ ಒಂದು ಸುಂದರ ಸಂಗ್ರಹ. ಮಕ್ಕಳಿಗಾಗಿ ಬಹಳಷ್ಟು ಬರೆದಿರುವ ಲೇಖಕ ನಾ. ಡಿಸೋಜಾ ಅವರ ಕೃತಿ ಇದು ಕೃತಿ. ಪುಟ್ಟಜ್ಜಿ ಮನೆಗೆ ಮಕ್ಕಳೆಲ್ಲ ಸಂಜೆ ವೇಳೆ ಪ್ರತಿದಿನ ತಪ್ಪದೆ ಬರುತ್ತಾರೆ. ಅವಳೆದುರು ಭಕ್ತಿಯಿಂದ ಕೈಕಟ್ಟಿ ಕೂರುತ್ತಾರೆ. ಅಜ್ಜಿ ದಿನಾಲೂ ಒಂದೊಂದು ಕಥೆಯನ್ನು ಹೇಳಲು ಆರಂಭಿಸುತ್ತಾಳೆ. ಹೀಗೆ ಕಥೆ ಹೇಳುವ ಹವ್ಯಾಸ. ಅವಳೆಂದೂ ಕಥೆಯೊಂದನ್ನೇ ಹೇಳುವುದಿಲ್ಲ. ಅದರ ಜೊತೆ ಹಾಡನ್ನು ರಚಿಸಿ ಸೇರಿಸಿ ಹಾಡುತ್ತಾಳೆ. ಇದರಿಂದ ಮಕ್ಕಳಿಗೆ ಮೋಜು, ಮಜಾ. ಕಥೆ ಕೇಳುತ್ತ, ಅಜ್ಜಿಯ ಮುಖ ನೋಡುತ್ತಾ ಕುಳಿತಿರುತ್ತಾರೆ. ತಮ್ಮ ಸುತ್ತಮುತ್ತಲಿನ ಆಗು-ಹೋಗುಗಳನ್ನೇ ಮರೆತುಬಿಡುತ್ತಾರೆ. ನಾವು ಕಲಿತದ್ದನ್ನು ಪರರಿಗೆ ಹಂಚಬೇಕು, ಪ್ರಕೃತಿ ನಮಗೆ ಕೊಟ್ಟಿದ್ದನ್ನು ನ...
Image
 ನಮ್ಮ ಇಂದಿನ ಸ್ಥಿತಿಗೆ ರೂಪಕವಾಗುವ  ‘ವಿರಹದ ಸಂಕ್ಷಿಪ್ತ ಪದಕೋಶ’  ವಿರಹ ಗಾಢವಾಗಿದೆ. ವಿರಹದ ಅತ್ಯುನ್ನತ ಸ್ಥಿತಿ ಜೊತೆಗಿದ್ದರೂ ಜೊತೆಗಿರಲಾರದ, ಸಮೀಪದಲ್ಲಿದ್ದರೂ ದೂರವಿದ್ದಂತೆ ಭಾಸವಾಗುವ ಕಾಲದಲ್ಲಿ ಸಾಂಗತ್ಯವೇ ವಿರಹ. ಇಂದಿನ ದಿನಗಳಲ್ಲಿ ಜೊತೆಗಿದ್ದವನು ಜೊತೆಗಿಲ್ಲ ಎನಿಸುವುದು, ಹತ್ತಿರವಿದ್ದವರು ದೂರದಲ್ಲಿದ್ದಾರೆ ಎಂದು ಭಾಸವಾಗುವುದು, ನಮ್ಮವರು ನಮ್ಮವರಲ್ಲ ಎಂದು ತೋರುವುದು ಇವೆಲ್ಲ ವಿರಹದ ಲಕ್ಷಣ. ಅಂತಹ ವಿರಹವೇ “ವಿರಹದ ಸಂಕ್ಷಿಪ್ತ ಪದಕೋಶ ” ಎಂಬ ಈ ಕಾದಂಬರಿಯ ಕಥಾವಸ್ತು. ಲೇಖಕ ಜೋಗಿ ಇದರ ಕರ್ತೃ.    ಇದರಲ್ಲಿ ಕೇವಲ ಮೂರು ಪಾತ್ರಗಳು ಮಾತ್ರ ಇವೆ. ವಿಶ್ವಾಸ್ ಕಾರಂತ್, ವಂದನಾ ಮತ್ತು ರಾಜೀವ್. ವಂದನಾಳನ್ನು ವಿಶ್ವಾಸ್ ಮದುವೆಯಾಗಿರುತ್ತಾನೆ. ರಾಜೀವ್ ಇವರಿಬ್ಬರ ಗೆಳೆಯ.  ವಂದನಾ ಈ ಕಾದಂಬರಿಯ ಶಾಪಗ್ರಸ್ತ ನಾಯಕಿ, ಸದಾ ವಿರಹತಪ್ತ ವಿಶ್ವಾಸ್ ಕಾರಂತ್ ಈ ಕಾದಂಬರಿಯ ನಾಯಕ. ಈತ ವಂದನಾಳ ವಿರಹಕ್ಕೆ ಕಾರಣ ಮತ್ತು ಆಕೆ ವೈರಾಗಿಯಾಗಲು ಕಾರಣ ಪುರುಷ. ರಾಜೀವ್ ಇವರಿಬ್ಬರ ಮಧ್ಯೆ ಬಂದು ಹೋಗುವ ಮಿತ್ರ. ಈ ಮೂರು ಪಾತ್ರಗಳಿಗೆ ಕೊನೆಯೂ ಇಲ್ಲ, ನೆಲೆಯೂ ಇಲ್ಲ. ಮನುಷ್ಯನ ಇಂದಿನ ಸ್ಥಿತಿಗೆ ಈ ಕಾದಂಬರಿ ಒಂದು ಅತ್ಯುತ್ತಮ ನಿದರ್ಶನ ಎಂದು ಹೇಳಬಹುದು.  ವಿಶ್ವಾಸ ಎಂಬ ಅರ್ಥಶಾಸ್ತ್ರಜ್ಞ, ರಾಜೀವ್ ಎಂಬ ಉದ್ಯಮಿ, ನೃತ್ಯ ಹಾಗೂ ಸಂಗೀತ ಪ್ರವೀಣೆಯಾದ ವಂದನಾ. ವಿಶ್ವಾಸ ವಿಲಕ್ಷಣ ಮನೋಭಾವನೆಯವನು, ರಾಜೀ...
Image
  ಸಮೃದ್ಧ ಬಾಲ್ಯದ ಅನುಭವಗಳ ‘ಬದುಕಿನ ಕನ್ನಡಿಯಲ್ಲಿ’   ಬದುಕಿನಲ್ಲಿ ಸಮೃದ್ಧವಾದ ಬಾಲ್ಯದ ಅನುಭವಗಳ ಜೊತೆಗೆ ಮಾನವೀಯ ಸಂಬಂಧಗಳ ಸೂಕ್ಷ್ಮಗಳು ಇರುವುದನ್ನು ಲೇಖಕಿ, ಸಹಾಯಕ ಪ್ರಾಧ್ಯಾಪಕಿ,  ಮೇದಿನಿ ಕೆಸವಿನಮನೆ ‘ಬದುಕಿನ ಕನ್ನಡಿಯ’ ಮೂಲಕ ಆಪ್ತವಾಗಿ ಚಿತ್ರಿಸಿದ್ದಾರೆ. ಅವರ ಅಪ್ಪನ ಪ್ರತಿಬಿಂಬ, ಮಲೆನಾಡಿನ ಪ್ರತಿಬಿಂಬ ಮತ್ತು ಬಾಲ್ಯದ ಪ್ರತಿಬಿಂಬ ಇವು ಮೂರು ಈ ಬದುಕಿನ ಕನ್ನಡಿಯಲ್ಲಿ ನಮಗೆ ಕಂಡುಬರುತ್ತವೆ. ಅವು ಮನಸ್ಸಿಗೆ ಮುಟ್ಟಿ, ಹೃದಯಕ್ಕೆ ತಲುಪುತ್ತವೆ.  ಬದುಕಿನ ಪ್ರತಿಕ್ಷಣದಲ್ಲೂ ಅಪ್ಪನ ಬಿಂಬವನ್ನು ಕಾಣುತ್ತಾ, ತಮ್ಮ ಜೀವನ ಅನುಭವದ ಸುಖ, ದುಃಖ, ನೋವು, ನಲಿವುಗಳ ಜೊತೆಗೆ ವ್ಯಕ್ತಿಯ ಬದುಕು, ಸಮಾಜದ ಬದಲಾವಣೆ, ಮೌಲ್ಯಗಳ ಮಹತ್ವ, ಸಂಬಂಧಗಳ ತಂತುವನ್ನು ನವಿರಾಗಿ ಬೆಸೆಯುತ್ತ ಸಾಗುವ ಈ ಕೃತಿ ಮನುಷ್ಯನ ಒಳಜಗತ್ತನ್ನು ಶ್ರೀಮಂತಗೊಳಿಸುವ ನಿಜವಾದ ಬದುಕಿನ ಕನ್ನಡಿ ಆಗಿದೆ. ಈ ಕೃತಿಯಲ್ಲಿ ೩೫ ಬರೆಹಗಳಿವೆ. ಇವು ಒಂದಕ್ಕೊಂದು ಪೂರಕವಾಗಿಲ್ಲ. ಪ್ರತಿ ಲೇಖನದಲ್ಲೂ ಖುಷಿ, ನೋವು, ಬೇಸರ, ಸಮಸ್ಯೆ, ಜಗಳ ಮುಂತಾದ ವಿವಿಧ ಮುಖಗಳಿವೆ. ಈ ಮುಖಗಳನ್ನು ಕನ್ನಡಿಯಲ್ಲಿ ನೋಡಿದಾಗ ಕಾಣುವ ಪ್ರತಿಬಿಂಬ ತನ್ನ ಅಪ್ಪನದು ಎಂದು ಲೇಖಕಿ ಹೇಳುತ್ತಾರೆ.  ಬದುಕಿನ ಪ್ರತಿ ಸನ್ನಿವೇಶದಲ್ಲೂ ಅಪ್ಪನೇ ಎದುರಾಗುವುದು, ನನ್ನ ಬದುಕಿನ ಕನ್ನಡಿಯಲ್ಲಿ ಕಾಣುವುದು ಅಪ್ಪನದೇ ಬಿಂಬ, ಅಪ್ಪನೇ ಹೀರೋ, ಗೆಳೆಯನಾಗಿ ಮಾರ್ಗದರ್ಶಿಯಾಗಿ, ತಾಳ್ಮೆಯ...
Image
     ಕಥಾ ಲೋಕಕ್ಕೆ ಹೊಸ ಬೆಳಕು ಚೆಲ್ಲುವ  ‘ಫಾಸ್ಟ್ ಆಂಡ್ ಫ್ಯೂರಿಯಸ್’ ಇದು ಇಂದಿನ ಪೀಳಿಗೆಯ ೫೦ ಆಸಕ್ತ ಕಥೆಗಾರರಿಂದ ಬರೆಸಿ, ತಿದ್ದಿ, ವಿಸ್ತರಿಸಿದ ಕಥಾ ಸಂಕಲನ ‘ಫಾಸ್ಟ್ ಆಂಡ್ ಫ್ಯೂರಿಯಸ್’. ಅವ್ವ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಕೌಟುಂಬಿಕ, ಪ್ರೀತಿ-ಪ್ರೇಮ, ಸಾಮಾಜಿಕ, ಭಯಾನಕ, ಪ್ರೇರಣಾದಾಯಕ, ಮಕ್ಕಳ, ವೈಜ್ಞಾನಿಕ, ಭಯಾನಕದ ಕಥೆಗಳಿವೆ. ಹತ್ತಾರು ಭಾವನೆಗಳನ್ನು ಹೊತ್ತ ನವಪೀಳಿಗೆಯವರಲ್ಲಿ ಇರುವ ಸೃಜನಶೀಲ ಬರೆವಣಿಗೆ ಇಲ್ಲಿ ಪ್ರಕಟಗೊಂಡಿದೆ. ಬರೆವಣಿಗೆಯನ್ನು ಜಾಗೃತಗೊಳಿಸುವ ಮೂಲಕ ಅವ್ವ ಪ್ರಕಾಶನ ಕಥಾ ಲೋಕದಲ್ಲೊಂದು ಹೊಸ ಬೆಳಕು, ಸಾಧ್ಯತೆ ಮೂಡುವಂತೆ ಮಾಡಿದೆ. ಇಲ್ಲಿರುವ ಕಥೆಗಳೆಲ್ಲ ನಮ್ಮನ್ನು ಓದಿಸಿಕೊಂಡು ಹೋಗುವ ಸರಳ ಭಾಷೆಯಲ್ಲಿವೆ. ಇದು ಈ ಬರಹಗಾರರಿಗೆ ಹೊಸ ಕಿಟಕಿ ತೆರೆದಿದೆ. ಇದು ಬಾಗಿಲಾಗಲಿ ಎಂದು ಪ್ರಕಾಶಕರು ಬೆನ್ನುಡಿಯಲ್ಲಿ ಹೇಳಿದ್ದಾರೆ. ಆ ಬಾಗಿಲಿನಿಂದ ಬರುವ ಹೊಸ ಬೆಳಕು, ಗಾಳಿಯನ್ನು ಯುವ ಕಥಾಕಾರರು  ಸ್ವೀಕರಿಸಿ ಇನ್ನಷ್ಟು ಚಿಗಿತುಕೊಳ್ಳಲು, ಭರವಸೆಯ ಲೇಖಕರಾಗಲು  ಇದು ಸಹಾಯಕವಾಗಬಹುದು.   ಕಥೆಗಳ ಕುರಿತು:  ಇಲ್ಲಿನ ಪ್ರತಿ ಕಥೆಯಲ್ಲೂ ಒಂದು ಸಂದೇಶವಿದೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ಬಾಲ್ಯದ ಸವಿನೆನೆಪುಗಳು, ಪ್ರೀತಿ- ಪ್ರೇಮ, ವಿರಹ, ಸಂಶೋಧನೆ, ಕಾಲೇಜು ದಿನಗಳ ಸ್ಮರಣೆ...ಮೊದಲಾದ ವಿಷಯಗಳ ಬಗ್ಗೆ ಕಥೆಗಳಿವೆ.  ಪ್ರೀತಿ-ಪ್ರೇಮದ ಕಥೆಗ...
Image
 ಬದುಕಿಗೆ ಹತ್ತಿರವಾಗುವ ‘ಮುಷ್ಟಿ ಗ್ರಾಹ್ಯ’   ‘ಮುಷ್ಟಿ ಗ್ರಾಹ್ಯ’ ಪ್ರತಿಯೊಂದು ಮನದ ಭಾವನೆ, ಕಲ್ಪನೆಗಳ ಜೊತೆಗೆ ಸಮಷ್ಟಿ ಬದುಕಿನ ಹಲವಾರು ಮಜಲುಗಳನ್ನು ಕೆಲವೇ ಪಾತ್ರಗಳ ಮೂಲಕ ಮತ್ತು ಸನ್ನಿವೇಶಗಳ ಮೂಲಕ ಓದುಗರೆದುರು ತೆರೆದಿಡುವ ಕಥಾಹಂದರವಾಗಿದೆ. ಅತ್ಯಂತ ಸಲೀಸಾಗಿ ಕಥೆಗಳನ್ನು ಸುಂದರವಾಗಿ ಲೇಖಕ ವಿದ್ಯಾಧರ ಮುತಾಲಿಕ್ ದೇಸಾಯಿ ಇಲ್ಲಿ ನೇಯ್ದಿದ್ದನ್ನು ಕಾಣಬಹುದು.  ಇಲ್ಲಿನ ಕಥೆಗಳೆಲ್ಲವೂ ನಮ್ಮ ಸುತ್ತಮುತ್ತ ನಡೆಯುವ ವಿಚಾರಕ್ಕೆ ಸಂಬಂಧಪಟ್ಟವು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನಜೀವನದ ಮೇಲೆ ಬೆಳಕು ಚೆಲ್ಲುವಂತಹ ವಿಷಯವನ್ನು ಹೊಂದಿವೆ. ಇದರಿಂದ ಇದು ನಮ್ಮನ್ನು ಆಕರ್ಷಿಸುತ್ತದೆ. ಒಟ್ಟು ೧೨ ಕತೆಗಳ ಗುಚ್ಛ ಇದಾಗಿದ್ದು,  ಸೃಜನಶೀಲವಾಗಿ ಕಥೆಗಳು ತೆರೆದುಕೊಂಡಿವೆ. ಬದುಕಿಗೆ ಹತ್ತಿರವಾಗುವಂತಹ ಇಲ್ಲಿನ ಕಥೆಗಳು ಓದುಗರಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ  ಕಥೆ ಹೇಳುವೆ    ಮದುವೆಯ ವಯಸ್ಸು ಹೆಚ್ಚುತ್ತಿದ್ದರೂ ಅವಿವಾಹಿತೆಯಾಗಿದ್ದ ವಸು ಹೊಸ ಕನಸು ಕಾಣುವ ಕಥೆ ಇದು. ಕಿಟ್ಟಿ ಎನ್ನುವವ ವಸುಗಿಂತ ಮೂರು ವರ್ಷ ದೊಡ್ಡವ. ತಮ್ಮ ಮಗನಂತೆ ವಸು ಪಾಲಕರು ಬೆಳೆಸಿದ್ದರು. ಬಾಲ್ಯ ಸಹಜ ಸಲುಗೆ ಇಬ್ಬರಲ್ಲಿಯೂ ಇತ್ತು. ವಸುನನ್ನು ಸೋದರ ಮಾವನ ಮಗ ರಾಮನ ಜೊತೆ ಮದುವೆ ನಡೆಸುವ ಪ್ರಸ್ತಾಪ ನಡೆದಿತ್ತು. ಕಿಟ್ಟಿ ಈ ಮಧ್ಯೆ ಹೈಸ್ಕೂಲ್ ಶಿಕ್ಷಕನಾಗುವುದು, ಆತನಿಗೆ ವಸು ಆಗಾಗ ಪತ್ರ ಬರೆಯುತ್ತಾ...
Image
 ಮಜ ಕೊಡುವ  ಸಾಲದ ಜೋಕುಗಳು   ಹಿರಯ ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರು  ತಮ್ಮ ಪತ್ರಿಕೆಗಳಲ್ಲಿ ಜನರಿಂದ ಪಡೆದು ಪ್ರಕಟಿಸಿದ ಜೋಕುಗಳು ಇದರಲ್ಲಿವೆ.  ಈ ಜೋಕ್‌ಗಳೆಲ್ಲ ‘ಸಾಲದ ಜೋಕುಗಳು’ ಎಂಬ ತಲೆ ಬರಹದಲ್ಲಿ ಪ್ರಕಟವಾಗಿದೆ.  ಬಹಳ ಖರ್ಚಿಲ್ಲದೆ ನಮ್ಮನ್ನು ನಗಿಸುವ ಏಕೈಕ ಅಸ್ತ್ರವೆಂದರೆ ಜೋಕುಗಳು ಅಥವಾ ನಗೆ ಬರಹಗಳು. ಈ ಜೋಕುಗಳು ಸಮಯೋಚಿತವಾಗಿದ್ದು ಬದುಕಿಗೆ ಅಳವಡಿಕೆಯಾಗುವಂತಿದ್ದರಂತೂ ಅದರಿಂದ ಸಿಗುವ ಮಜವೇ ಬೇರೆ. ಇಂತಹವು ಎಷ್ಟಿದ್ದರೂ ಇನ್ನೂ ಬೇಕು ಎನ್ನುವಂತಿರುತ್ತವೆ.  ಈ ಕೃತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಓದುಗರು ಕಳಿಸುತ್ತಿದ್ದ, ಕಿರುನಗೆ ಮೂಡಿಸುವ ಜೋಕುಗಳನ್ನು ವಿಶ್ವೇಶ್ವರ ಭಟ್ ಕಟ್ಟಿಕೊಟ್ಟಿದ್ದಾರೆ. ಈ ಜೋಕುಗಳಲ್ಲಿಯೇ ಹೊಸ ಜೋಕು ಹುಟ್ಟಿಕೊಳ್ಳುತ್ತವೆ. ಜೋಕುಗಳನ್ನು ಹಾರಾಡಲು ಬಿಟ್ಟರೆ ಅದು ಚಂದ. ಇಲ್ಲಿ ಮುಖ್ಯವಾಗಿ ನಗುವಿದೆ, ಕಚಗುಳಿ ಇದೆ. ಸುಲಭದ ಭಾಷೆ, ಅರ್ಥವಾಗುವ ಸರಳ ಶೈಲಿ ಇದೆ. ನವಿರಾದ ಮನಸ್ಸಿಗೆ ನಗಿಸುವ ಶ್ರಮವಿಲ್ಲ.  ಇಲ್ಲಿನ ಜೋಕುಗಳು ಸುಖಪ್ರಸವವಾದ ಸಲೀಸು ಪ್ರಹಸನಗಳು ಎಂದು ಲೇಖಕ ಹೇಳುತ್ತಾರೆ. ಗಂಭೀರವಾದ ಸಭೆಯಲ್ಲಿ ಉಪನ್ಯಾಸಕನೊಬ್ಬ ಭಾಷಣ ಮುಂದುವರೆಸಿದಾಗ ಸಭೆ ಗಂಭೀರವಾಗಿಯೇ ಕೇಳುತ್ತಿರುತ್ತದೆ. ಭಾಷಣಕಾರ ತನ್ನ ಭಾಷಾ ಪ್ರಯೋಗದೊಳಗೆ ಏನೋ ತಪ್ಪು ಮಾಡಿದಾಗ ಇಡೀ ಸಭೆಯೇ ಗೊಳ್ ಎಂದು ನಗುತ್ತದೆ. ಇದು ಎಲ್ಲರನ್ನೂ ರಿಲೀಫ್‌ಗೆ ತರುತ್ತದೆ. ಆ ರಿಲೀಫ್...
Image
 ಸುಳ್ಳನ್ನು ಯಶಸ್ವಿಯಾಗಿಸುತ್ತಲೇ ಹೋಗುವ   ‘ನನ್ ಮದ್ವೆ ಫಿಕ್ಸಾಯ್ತು’   ‘ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು’ ಎನ್ನುವ ಗಾದೆ ಮಾತು ಇದೆ. ಈ ಗಾದೆ ಮಾತನ್ನು ನೆನಪಿಗೆ ತರುವ ಕೃತಿಯೇ ‘ನನ್ ಮದ್ವೆ ಫಿಕ್ಸಾಯ್ತು’  ಇಂಜಿನೀಯರ್ ಆಗಿರುವ ಚಿಕ್ಕಮಗಳೂರಿನ  ರಾಘವ್ ವಿಶ್ವಾಸಿ ಅವರ ಎರಡನೆಯ ಕೃತಿ ಇದು. ಹಾಸ್ಯಮಯ ನೀಳ್ಗತೆಯಾದ  ಇದರಲ್ಲಿ ಸುಳ್ಳಿನಿಂದಲೇ ಹೇಗೆ ಜೀವನವನ್ನು ಕಟ್ಟಿಕೊಳ್ಳಬಹುದು, ಎಷ್ಟು ಜನರನ್ನು ಯಾವ್ಯಾವ ರೀತಿಯಲ್ಲಿ ಯಾಮಾರಿಸಹುದು, ಈ ಮೂಲಕ ಮದುವೆಯನ್ನು ಹೇಗೆ ಮಾಡಿಕೊಳ್ಳಬಹುದು, ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಹೇಗೆ ಯಶಸ್ವಿಯಾಗಿ ಜೋಡಿಸುತ್ತಾ ನಮ್ಮ ಕಾರ್ಯವನ್ನು ಸಾಧಿಸಬಹುದು ಎನ್ನುವುದನ್ನು ಬಹುಸುಂದರವಾಗಿ ಚಿತ್ರಿಸಿದ್ದಾರೆ. ಕೃತಿ ಓದುವಾಗ ನಗು ತಡೆಯಲು ಸಾಧ್ಯವೇ ಇಲ್ಲ. ಎಂತೆಂತಹ ಮಾತುಗಳು, ಕಿಲಾಡಿತನದ ಜೋಕುಗಳು, ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಳ್ಳುವುದು, ಒಂದೇ ಸ್ವಭಾವದ ಮಿತ್ರರಿಬ್ಬರ ಮಧ್ಯೆ ಇರುವ ಅನುಬಂಧ, ಸಾಲ ಕೊಟ್ಟವರನ್ನು ಹೇಗೆ ಖೆಡ್ಡಾಕ್ಕೆ ಕೆಡವಬಹುದು... ಮುಂತಾದದ ರೋಚಕ, ಅಷ್ಟೇ ಕುತೂಹಕರ ಕಥೆ ಇದು. ಇದರಲ್ಲಿ ಪ್ರಮುಖವಾಗಿ ನಾಲ್ಕು ಪಾತ್ರ ಮಾತ್ರ ಇದೆ. ಕಥಾ ನಾಯಕ ಗೋಪಿ, ಆತನ ಮಿತ್ರ ಕುಬೇರ, ಆತನ ತಂದೆ-ತಾಯಿ ಆಗಿ ನಟಿಸುವ ಲಾಯರ್ ಲಂಕಾಪತಿ ಮತ್ತು ರೋಹಿಣಿ. ಇವರೊಟ್ಟಿಗೆ ಸಣ್ಣಪುಟ್ಟ ಪಾತ್ರದಲಿ  ಇನ್ನೂ ನಾಲ್ಕಾರು ಜನರು ಬರುತ್ತಾರೆ. ಕೃತ...
Image
  ಕನ್ನಡದ ಕಿನ್ನರ ಮನವರಳಿಸಿದ ‘ಪಳಕಳ ಸೀತಾರಾಮ ಭಟ್ಟ’ ಇಂದು ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರ ಜನ್ಮದಿನ    ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯವೂ ಇದೆ ಎನ್ನುವುದನ್ನು ತೋರಿಸಿಕೊಟ್ಟು, ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸಿದವರು ಪಳಕಳ ಸೀತಾರಾಮ ಭಟ್ಟರು. ಕನ್ನಡದ ಕಿನ್ನರ ಮನವನ್ನು ಅರಳಿಸಿದವರು. ಅಪ್ಪಟ ಕನ್ನಡಿಗರಾಗಿ, ಕನ್ನಡ ಸಾಹಿತ್ಯ ಶಾರದೆಯ ಮುಕುಟಮಣಿಯಾಗಿ ಬೆಳೆದವರು. ಮಕ್ಕಳ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕಾಣಿಕೆ ಅಭೂತಪೂರ್ವವಾದುದು. ಮಕ್ಕಳ ಸಾಹಿತ್ಯ ಎಂದರೆ ಬರಿ ಅಕ್ಷರವಲ್ಲ. ಸಣ್ಣ ಮಕ್ಕಳ ಮುಗ್ಧ ಮನಸ್ಸು, ಬುದ್ಧಿಗಳಿಗೆ ಚೇತನ ಕೊಡುವ ಸೃಷ್ಟಿ. ಮಕ್ಕಳ ಕಲ್ಪನಾ ಶಕ್ತಿಗೆ, ಪ್ರತಿಭೆಗೆ ಚೇತನ ಕೊಡುವ ಚಿತ್ರಶಿಲ್ಪ, ವಾಸ್ತುಶಿಲ್ಪ.  ಮಗು ಸಹಜವಾದ ಮುಗ್ಧತೆ ಮನೋರಂಜನೆ ಸಂಸ್ಕೃತಿ ಕಲೆ, ಮನೋವಿಜ್ಞಾನ ಬೆರೆತು ಮಕ್ಕಳ ಸಾಹಿತ್ಯ ಎನ್ನುವುದು ಮಕ್ಕಳಿಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಇಂದು ಪ್ರತ್ಯೇಕವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದರೆ ಅದಕ್ಕೆ ಇಂತಹ  ಹಿರಿಯರ ಕೊಡುಗೆ ಅಪಾರವಾದುದು.     ಇವರ ಕವನ ಸಂಕಲನಗಳಲ್ಲಿ ಮಕ್ಕಳ ತುಂಟಾಟಗಳು, ವರ್ತನೆಗಳು, ಪ್ರಾಣಿ -ಪಕ್ಷಿ ರೂಪಕಗಳು ಹೆಚ್ಚಿನದಾಗಿ ಕಂಡುಬರುತ್ತವೆ. ಕಾಲದಿಂದ ಕಾಲಕ್ಕೆ, ಸಾಹಿತಿಯಿಂದ ಸಾಹಿತಿಗೆ, ಕಲ್ಪನೆಯಿಂದ ಕಲ್ಪನೆಗೆ, ಭಾಷೆಯಿಂದ ಭಾಷೆಗೆ, ಭಾವದಿಂದ ಭಾವಕ್ಕೆ, ಅರ್ಥದಿಂದ ಅರ್ಥಕ್ಕೆ ಬದಲಾಗುತ್ತ...
Image
   ಮಹಿಳಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ  ‘ಮಹಿಳೆಯರ ಬದುಕು ಮತ್ತು ಬವಣೆ’ ಕಲಬುರ್ಗಿಯ ಡಾ. ಶ್ರೀದೇವಿ ರಾಥೋಡ್ ಅವರ ಈ ಕೃತಿ ‘ಮಹಿಳೆಯರ ಬದುಕು ಮತ್ತು ಬವಣೆ’ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮೌಢ್ಯದಿಂದ ಆಕೆಯನ್ನು ಹಿಂಸಿಸುವುದು, ಅತ್ಯಾಚಾರ, ಮಹಿಳಾ ಕಾರ್ಮಿಕರ ಮೇಲಾಗುತ್ತಿರುವ ಶೋಷಣೆ, ಮಾನವ ಕಳ್ಳಸಾಗಣೆ, ಹೆಣ್ಣು ಮಕ್ಕಳನ್ನು ಒಂದು ಚೌಕಟ್ಟಿನಲ್ಲಿ ಬಂಧಿಸುವಂತಹ ವ್ಯವಸ್ಥೆ...  ಮೊದಲಾದ ಅನೇಕ ಕ್ರೌರ್ಯಗಳ ಕುರಿತಾಗಿ ಹಾಗೂ ಅದಕ್ಕೆ ಪ್ರಜ್ಞಾವಂತ ಸಮಾಜ ಸ್ಪಂದಿಸದಿರುವುದು, ಇದರಿಂದ ಇಂತಹ  ಘಟನೆಗಳು ದಿನೇ ದಿನೇ ಹೆಚ್ಚುತ್ತಿರುವುದನ್ನು ಅಂಕೆ- ಅಂಶಗಳ ಸಹಿತ  ನಮ್ಮೆದುರು ತೆರೆದಿಟ್ಟಿದೆ.   ಇಂತಹ ಮಹಿಳಾ ಸಮಸ್ಯೆಗಳ ವಿಷಯವನ್ನು ಇಟ್ಟುಕೊಂಡು ೧೦ ಅತ್ಯುತ್ತಮ ಲೇಖನಗಳನ್ನು ಲೇಖಕಿ  ಈ ಕೃತಿಯಲ್ಲಿ ಬರೆದಿದ್ದಾರೆ. ಸಾಮಾಜಿಕ ಸುಧಾರಣೆಗಾಗಿ ಹೋರಾಟಗಾರರು, ಚಿಂತಕರು, ಸಾಹಿತಿಗಳು ಮತ್ತು ಬರಹಗಾರರು, ಕಲಾವಿದರು ಎಷ್ಟೊಂದು ಶ್ರಮಿಸಿದರೂ ಅದು ಇನ್ನೂ ಯಶಸ್ವಿಯಾಗಿಲ್ಲ. ತಾಂತ್ರಿಕವಾಗಿ  ಜಗತ್ತು ಮುಂದುವರೆದಿದ್ದರೂ ಭಾರತದಲ್ಲಿ ಹೆಣ್ಣಿನ ಕುರಿತ ಕೀಳರಿಮೆ ನಾಶವಾಗದಿರುವುದು ನಿಜಕ್ಕೂ ಶೋಚನೀಯ. ಮಹಿಳೆಯ ಗರ್ಭ ಧರಿಸುತ್ತಲೇ ಗರ್ಭದಲ್ಲಿರುವ ಹೆಣ್ಣೋ, ಗಂಡೋ ಎಂದು ತಿಳಿಯುವಂತಹ ಅನಾಗರಿಕತೆ ಇನ್ನೂ ಮುಂದುವರೆದಿರುವುದನ್ನು ವಿಷಾದದಿಂದ ಬರೆಯುತ್ತಾರೆ.   ಈ ನೆಲದಲ್ಲ...
Image
 ಎರಡು ತಲೆಮಾರುಗಳ ಸ್ಥಿತ್ಯಂತರದ  ‘ಹರಿವ ನಿಲ್ಲಿಸದಿರು ತಾಯಿ’   ಸರಸ್ವತಿ ನದಿ ಮೂಲದ ಗೌಡ ಸಾರಸ್ವತ ಸಮಾಜವು ೧೨ ವರ್ಷಗಳ ಭೀಕರ ಬರಗಾಲದ ಬಳಿಕ ಸರಸ್ವತಿಯ ಒಡಲು ಖಾಲಿಯಾದಾಗ ದಕ್ಷಿಣದತ್ತ  ವಲಸೆ ಬರುವುದು, ಆಗ ಪೋರ್ತುಗೀಸರ ಆಡಳಿತವಿದ್ದುದರಿಂದ ಅವರಿಂದ ದಾಳಿ ತಪ್ಪಿಸಿಕೊಳ್ಳಲು, ಧರ್ಮ ಭ್ರಷ್ಟರಾಗದಿರಲು, ಸಮಾಜದ ಇತಿಹಾಸ ಕಾಪಾಡಲು, ಅವರು ನಡೆಸಿದ ಹೋರಾಟ, ವಲಸೆ ಹೊರಟ ಸಹಸ್ರಾರು ಕುಟುಂಬಗಳು ಪಶ್ಚಿಮ ಕರಾವಳಿಯ ಉದ್ದಕ್ಕೂ ನೆಲೆಸುವುದು, ಹೊಸ ಜೀವನಕ್ಕಾಗಿ ಸಂಘರ್ಷ ಆರಂಭಿಸುವುದು, ಪ್ರಸ್ತುತ ಈ ಸಮಾಜವು ಮರೆಯಾಗುತ್ತಿರುವ ಸಂಪ್ರದಾಯ, ಸಂಸ್ಕೃತಿ ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು   ‘ಹರಿವ ನಿಲ್ಲಿಸದಿರು ತಾಯಿ’   ಕಾದಂಬರಿಯ ಸಾರಾಂಶ.    ಲೇಖಕ ಮನೋಹರ್ ಪೈ ಅವರ ಈ ಕೃತಿ ಗೌಡ ಸಾರಸ್ವತ ಸಮಾಜದ ಮೇಲೆ ಕ್ಷಕಿರಣ ಬೀರುವುದಲ್ಲದೆ, ಅವರ ಹಬ್ಬ- ಹರಿದಿನಗಳ ಆಚರಣೆ, ಆಹಾರ ಪದ್ದತಿ, ಸಂಪ್ರದಾಯವನ್ನು ಕಟ್ಟಿಕೊಡುವ ಮೂಲಕ ಒಂದು ರೀತಿಯಲ್ಲಿ ಐತಿಹಾಸಿಕ, ಸಾಂಸ್ಕೃತಿಕ ವಿಷಯವನ್ನೂ ಈ ಕಾದಂಬರಿ ತೆರೆದಿಟ್ಟಿದೆ.  ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ  ಕೆಲವು ಬೆಳವಣಿಗೆಗಳನ್ನು ಮತ್ತು ಯುವಜನರ ಮನಃಸ್ಥಿತಿಯನ್ನು ಮನೋಜ್ಞವಾಗಿ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ಇದು ಇಂದು ಬಹುತೇಕ ಎಲ್ಲ ಸಮಾಜಗಳ ಸಮಸ್ಯೆಯೂ ಹೌದು.  ವಿವಾಹ ಬಂಧನದ ಬಗ್ಗೆ ನಿ...
Image
 ಕಾವ್ಯಪ್ರೇಮಿಗಳ ಮನತುಂಬುವ ‘ಆಂತರ್ಯ’  ‘ಆಂತರ್ಯ’ ಇದು ಯುವ ಕವಿ ಅಜಿತ್ ಪೂಜಾರಿ ಮುದ್ರಾಡಿ ಇವರ ಪ್ರಥಮ ಕವನ ಸಂಕಲನ. ನಾಳೆಗಳ ಭರವಸೆ ಹೊತ್ತ, ಮನದ ಭಾವಗಳನ್ನು ಅನುವಾದ ಕ್ಷಣವಿದೆ. ಆಂತರ್ಯದ ರಸಧಾರೆಯ, ಮನವನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಬಿತ್ತರಿಸುವ ಕಾವ್ಯಧಾರೆ ಇದೆ. ಸರಳ, ಸುಂದರ, ಚಿಂತನೆಯ ಹೊನಲು, ಅನುಭವದ ಜಲ, ಜೀವನ, ಅನುಭವ ಈ ಕಾವ್ಯದಲ್ಲಿ ಮಿಡಿತವಾಗಿದೆ. ಆದ್ದರಿಂದ ಇಲ್ಲಿನ ಬಹುತೇಕ ಕವನಗಳು ಕಾವ್ಯಪ್ರೇಮಿಗಳ ಮನತುಂಬುವಲ್ಲಿ ಯಶಸ್ವಿಯಾಗುತ್ತವೆ.  ಸಂಕಲನದಲ್ಲಿ ರಾಷ್ಟ್ರಪ್ರೇಮವಿದೆ. ರಾಜಕೀಯ ಪ್ರಜ್ಞೆ ಇದೆ. ಪರಿಸರ ಪ್ರೀತಿ ಇದೆ. ಭಾಷೆಯು ಸರಳತೆಯಿಂದ ಕೂಡಿದೆ. ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆ ಇಲ್ಲಿ ಕಂಡುಬರುತ್ತದೆ. ಇವೆಲ್ಲವುಗಳನ್ನು ಸೇರಿಸಿ ತುಡಿತ- ಮಿಡಿತಗಳನ್ನು ಕವನದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.  ಒಟ್ಟು ೫೨ ಕವನಗಳಿವೆ. ಮಳೆಯ ಕುರಿತು ಮೂರು ಕವನಗಳು ಇವೆ. ಪರಿಸರ, ಪ್ರಕೃತಿ, ನದಿ, ಹೊಳೆ, ಮಳೆ ಮುಂತಾದವು ಕವಿಗೆ ಹೆಚ್ಚು ಆಪ್ತವಾದಂತೆ ಕಂಡುಬರುತ್ತದೆ. ಕವನಗಳ ಕುರಿತು:   ಮೊದಲ ಕವನ ‘ತೊಟ್ಟಿಲ ಮಗು’ ಇದರಲ್ಲಿ ತಾ ಕಾವ್ಯಲೋಕದಲ್ಲಿ ತೊಟ್ಟಿಲ ಮಗು ಎನ್ನುವುದನ್ನು ಬರೆದುಕೊಂಡಿದ್ದಾರೆ.  ನಿಮ್ಮೊಡಲ ಅಕ್ಕರೆಗೆ ಬೆಸೆದಿಹುದು ನನ್ನಿ ಜೀವಸೆಲೆ  ಕೈ ಹಿಡಿದು ನಡೆಸಬಲ್ಲಿರಾ, ನಾನಿನ್ನೂ ತೊಟ್ಟಿಲ ಮಗು  ಮನದ ಭಾವನೆಗಳನ್ನು ಹೊರದಬ್ಬಲನುವಾಗಿರುವ ತೊಟ್ಟಿಲ ...
Image
 ಬದುಕಿನ ವಿವಿಧ ಮುಖಗಳ ದರ್ಶನದ  ‘ತಾವರೆದೇಟು’  ‘ತಾವರೆದೇಟು’ ವಿಷಯ ವೈವಿಧ್ಯಗಳಿಂದ ಕೂಡಿದ, ಪ್ರಸ್ತುತ ಸಮಾಜದ ವಿವಿಧ ಮುಖಗಳನ್ನು ಚಿತ್ರಿಸುವ ಕಥಾ ಸಂಕಲನ. ಬರಹಗಾರ್ತಿ ಉಷಾ ನರಸಿಂಹನ್ ಅವರ ಕೃತಿ ಇದು. ಸಮೃದ್ಧ ಭಾಷಾ ಬಳಕೆ ಮೂಲಕ ಮನುಷ್ಯನ ಬದುಕಿನ ಅದರಲ್ಲೂ ಕೌಟುಂಬಿಕ ಹಾಗೂ ದಾಂಪತ್ಯದಲ್ಲಿ ಎದುರಾಗುವ ಬವಣೆಗಳನ್ನೇ ವಿಷಯವನ್ನಾಗಿಸಿಕೊಂಡು ಅದರ ಮೇಲೆ ಕಥೆಯ ಚಿತ್ರಣವನ್ನು ಸರಾಗವಾಗಿ ಕೆತ್ತಿದ್ದಾರೆ.  ಲೇಖಕಿಯ ಕಲಾತ್ಮಕ ಮನಸ್ಸು ಕಥೆಯನ್ನು ಒಂದು ಸುಂದರವಾದ ಚೌಕಟ್ಟಿನಲ್ಲಿ ತಂದು ನಿಲ್ಲಿಸಿರುವುದನ್ನು ಇಲ್ಲಿ ಕಾಣಬಹುದು. ಕಥೆಯ ವಸ್ತು ಮಾತ್ರವಲ್ಲ, ಅದನ್ನು ನಿರ್ವಹಿಸಿದ, ನಿಭಾಯಿಸಿದ ರೀತಿ ಬೆರಗುಗೊಳಿಸುವಂತದ್ದು. ಕಥೆಯು ಕೇವಲ ಕಾವ್ಯಮಯವಾಗಿ ಇರದೆ ಇಲ್ಲಿನ ಪಾತ್ರಗಳು ಸಕಾರಾತ್ಮಕತೆಯ ಕಡೆಗೆ ಚಲಿಸುವಂತೆ ಮಾಡಿದ್ದಾರೆ. ಸನ್ನಿವೇಶಗಳನ್ನು ವಿಶ್ಲೇಷಿಸುತ್ತಾ ಕಥೆಗೆ ಒಂದಷ್ಟು ಸೊಗಸನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ ವಿಭಿನ್ನ ರೀತಿಯ ನಿರೂಪಣೆ ಹಾಗೂ ನಾಟಕೀಯ ಸಂಭಾಷಣೆಗಳ ಪ್ರಯೋಗವನ್ನು ಇಲ್ಲಿ ಕಾಣಬಹುದು.  ಸಂಕಲನದಲ್ಲಿ ಒಟ್ಟೂ ೧೪ ಕಥೆಗಳಿವೆ.  ಕಥಾ ಸಾರಾಂಶ: ‘ಸೀರೆ’  ಅನಾಥನಾಗಿದ್ದ ಬಾಲಕ ಸುಬ್ಬ ಅಗಸನಾದ ತನ್ನ ಮಾವನ ಮನೆಗೆ ಬಂದುಳಿದಾಗ ಮಾವನ ವೃತ್ತಿಯಲ್ಲಿಯೇ ಮುಂದುವರೆಯುತ್ತಾನೆ. ಆಸ್ಪತ್ರೆಯ ಬಟ್ಟೆ ಬರೆಗಳನ್ನು ಒಗೆದು ಮಾರನೇ ದಿನ ತೆಗೆದುಕೊಂಡು ಹೋಗಿ ಕೊಡುತ್ತಾನೆ. ಹೆಣದ ಮೇಲ...
Image
 ಮಜ ಕೊಡುವ  ಸಾಲದ ಜೋಕುಗಳು   ಹಿರಯ ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರು  ತಮ್ಮ ಪತ್ರಿಕೆಗಳಲ್ಲಿ ಜನರಿಂದ ಪಡೆದು ಪ್ರಕಟಿಸಿದ ಜೋಕುಗಳು ಇದರಲ್ಲಿವೆ.  ಈ ಜೋಕ್‌ಗಳೆಲ್ಲ ‘ಸಾಲದ ಜೋಕುಗಳು’ ಎಂಬ ತಲೆ ಬರಹದಲ್ಲಿ ಪ್ರಕಟವಾಗಿದೆ.  ಬಹಳ ಖರ್ಚಿಲ್ಲದೆ ನಮ್ಮನ್ನು ನಗಿಸುವ ಏಕೈಕ ಅಸ್ತ್ರವೆಂದರೆ ಜೋಕುಗಳು ಅಥವಾ ನಗೆ ಬರಹಗಳು. ಈ ಜೋಕುಗಳು ಸಮಯೋಚಿತವಾಗಿದ್ದು ಬದುಕಿಗೆ ಅಳವಡಿಕೆಯಾಗುವಂತಿದ್ದರಂತೂ ಅದರಿಂದ ಸಿಗುವ ಮಜವೇ ಬೇರೆ. ಇಂತಹವು ಎಷ್ಟಿದ್ದರೂ ಇನ್ನೂ ಬೇಕು ಎನ್ನುವಂತಿರುತ್ತವೆ.  ಈ ಕೃತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಓದುಗರು ಕಳಿಸುತ್ತಿದ್ದ, ಕಿರುನಗೆ ಮೂಡಿಸುವ ಜೋಕುಗಳನ್ನು ವಿಶ್ವೇಶ್ವರ ಭಟ್ ಕಟ್ಟಿಕೊಟ್ಟಿದ್ದಾರೆ. ಈ ಜೋಕುಗಳಲ್ಲಿಯೇ ಹೊಸ ಜೋಕು ಹುಟ್ಟಿಕೊಳ್ಳುತ್ತವೆ. ಜೋಕುಗಳನ್ನು ಹಾರಾಡಲು ಬಿಟ್ಟರೆ ಅದು ಚಂದ. ಇಲ್ಲಿ ಮುಖ್ಯವಾಗಿ ನಗುವಿದೆ, ಕಚಗುಳಿ ಇದೆ. ಸುಲಭದ ಭಾಷೆ, ಅರ್ಥವಾಗುವ ಸರಳ ಶೈಲಿ ಇದೆ. ನವಿರಾದ ಮನಸ್ಸಿಗೆ ನಗಿಸುವ ಶ್ರಮವಿಲ್ಲ.  ಇಲ್ಲಿನ ಜೋಕುಗಳು ಸುಖಪ್ರಸವವಾದ ಸಲೀಸು ಪ್ರಹಸನಗಳು ಎಂದು ಲೇಖಕ ಹೇಳುತ್ತಾರೆ. ಗಂಭೀರವಾದ ಸಭೆಯಲ್ಲಿ ಉಪನ್ಯಾಸಕನೊಬ್ಬ ಭಾಷಣ ಮುಂದುವರೆಸಿದಾಗ ಸಭೆ ಗಂಭೀರವಾಗಿಯೇ ಕೇಳುತ್ತಿರುತ್ತದೆ. ಭಾಷಣಕಾರ ತನ್ನ ಭಾಷಾ ಪ್ರಯೋಗದೊಳಗೆ ಏನೋ ತಪ್ಪು ಮಾಡಿದಾಗ ಇಡೀ ಸಭೆಯೇ ಗೊಳ್ ಎಂದು ನಗುತ್ತದೆ. ಇದು ಎಲ್ಲರನ್ನೂ ರಿಲೀಫ್‌ಗೆ ತರುತ್ತದೆ. ಆ ರಿಲೀಫ್...
Image
  ಬದುಕಿಗೆ ಹತ್ತಿರವಾಗುವ ‘ಮುಷ್ಟಿ ಗ್ರಾಹ್ಯ’   ‘ಮುಷ್ಟಿ ಗ್ರಾಹ್ಯ’ ಪ್ರತಿಯೊಂದು ಮನದ ಭಾವನೆ, ಕಲ್ಪನೆಗಳ ಜೊತೆಗೆ ಸಮಷ್ಟಿ ಬದುಕಿನ ಹಲವಾರು ಮಜಲುಗಳನ್ನು ಕೆಲವೇ ಪಾತ್ರಗಳ ಮೂಲಕ ಮತ್ತು ಸನ್ನಿವೇಶಗಳ ಮೂಲಕ ಓದುಗರೆದುರು ತೆರೆದಿಡುವ ಕಥಾಹಂದರವಾಗಿದೆ. ಅತ್ಯಂತ ಸಲೀಸಾಗಿ ಕಥೆಗಳನ್ನು ಸುಂದರವಾಗಿ ಲೇಖಕ ವಿದ್ಯಾಧರ ಮುತಾಲಿಕ್ ದೇಸಾಯಿ ಇಲ್ಲಿ ನೇಯ್ದಿದ್ದನ್ನು ಕಾಣಬಹುದು.  ಇಲ್ಲಿನ ಕಥೆಗಳೆಲ್ಲವೂ ನಮ್ಮ ಸುತ್ತಮುತ್ತ ನಡೆಯುವ ವಿಚಾರಕ್ಕೆ ಸಂಬಂಧಪಟ್ಟವು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನಜೀವನದ ಮೇಲೆ ಬೆಳಕು ಚೆಲ್ಲುವಂತಹ ವಿಷಯವನ್ನು ಹೊಂದಿವೆ. ಇದರಿಂದ ಇದು ನಮ್ಮನ್ನು ಆಕರ್ಷಿಸುತ್ತದೆ. ಒಟ್ಟು ೧೨ ಕತೆಗಳ ಗುಚ್ಛ ಇದಾಗಿದ್ದು,  ಸೃಜನಶೀಲವಾಗಿ ಕಥೆಗಳು ತೆರೆದುಕೊಂಡಿವೆ. ಬದುಕಿಗೆ ಹತ್ತಿರವಾಗುವಂತಹ ಇಲ್ಲಿನ ಕಥೆಗಳು ಓದುಗರಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ  ಕಥೆ ಹೇಳುವೆ    ಮದುವೆಯ ವಯಸ್ಸು ಹೆಚ್ಚುತ್ತಿದ್ದರೂ ಅವಿವಾಹಿತೆಯಾಗಿದ್ದ ವಸು ಹೊಸ ಕನಸು ಕಾಣುವ ಕಥೆ ಇದು. ಕಿಟ್ಟಿ ಎನ್ನುವವ ವಸುಗಿಂತ ಮೂರು ವರ್ಷ ದೊಡ್ಡವ. ತಮ್ಮ ಮಗನಂತೆ ವಸು ಪಾಲಕರು ಬೆಳೆಸಿದ್ದರು. ಬಾಲ್ಯ ಸಹಜ ಸಲುಗೆ ಇಬ್ಬರಲ್ಲಿಯೂ ಇತ್ತು. ವಸುನನ್ನು ಸೋದರ ಮಾವನ ಮಗ ರಾಮನ ಜೊತೆ ಮದುವೆ ನಡೆಸುವ ಪ್ರಸ್ತಾಪ ನಡೆದಿತ್ತು. ಕಿಟ್ಟಿ ಈ ಮಧ್ಯೆ ಹೈಸ್ಕೂಲ್ ಶಿಕ್ಷಕನಾಗುವುದು, ಆತನಿಗೆ ವಸು ಆಗಾಗ ಪತ್ರ ಬರೆಯುತ್ತಾ...