ಮಜ ಕೊಡುವ
ಸಾಲದ ಜೋಕುಗಳು
ಹಿರಯ ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರು ತಮ್ಮ ಪತ್ರಿಕೆಗಳಲ್ಲಿ ಜನರಿಂದ ಪಡೆದು ಪ್ರಕಟಿಸಿದ ಜೋಕುಗಳು ಇದರಲ್ಲಿವೆ. ಈ ಜೋಕ್‌ಗಳೆಲ್ಲ ‘ಸಾಲದ ಜೋಕುಗಳು’ ಎಂಬ ತಲೆ ಬರಹದಲ್ಲಿ ಪ್ರಕಟವಾಗಿದೆ. ಬಹಳ ಖರ್ಚಿಲ್ಲದೆ ನಮ್ಮನ್ನು ನಗಿಸುವ ಏಕೈಕ ಅಸ್ತ್ರವೆಂದರೆ ಜೋಕುಗಳು ಅಥವಾ ನಗೆ ಬರಹಗಳು. ಈ ಜೋಕುಗಳು ಸಮಯೋಚಿತವಾಗಿದ್ದು ಬದುಕಿಗೆ ಅಳವಡಿಕೆಯಾಗುವಂತಿದ್ದರಂತೂ ಅದರಿಂದ ಸಿಗುವ ಮಜವೇ ಬೇರೆ. ಇಂತಹವು ಎಷ್ಟಿದ್ದರೂ ಇನ್ನೂ ಬೇಕು ಎನ್ನುವಂತಿರುತ್ತವೆ.
ಈ ಕೃತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಓದುಗರು ಕಳಿಸುತ್ತಿದ್ದ, ಕಿರುನಗೆ ಮೂಡಿಸುವ ಜೋಕುಗಳನ್ನು ವಿಶ್ವೇಶ್ವರ ಭಟ್ ಕಟ್ಟಿಕೊಟ್ಟಿದ್ದಾರೆ. ಈ ಜೋಕುಗಳಲ್ಲಿಯೇ ಹೊಸ ಜೋಕು ಹುಟ್ಟಿಕೊಳ್ಳುತ್ತವೆ. ಜೋಕುಗಳನ್ನು ಹಾರಾಡಲು ಬಿಟ್ಟರೆ ಅದು ಚಂದ. ಇಲ್ಲಿ ಮುಖ್ಯವಾಗಿ ನಗುವಿದೆ, ಕಚಗುಳಿ ಇದೆ. ಸುಲಭದ ಭಾಷೆ, ಅರ್ಥವಾಗುವ ಸರಳ ಶೈಲಿ ಇದೆ. ನವಿರಾದ ಮನಸ್ಸಿಗೆ ನಗಿಸುವ ಶ್ರಮವಿಲ್ಲ. ಇಲ್ಲಿನ ಜೋಕುಗಳು ಸುಖಪ್ರಸವವಾದ ಸಲೀಸು ಪ್ರಹಸನಗಳು ಎಂದು ಲೇಖಕ ಹೇಳುತ್ತಾರೆ.
ಗಂಭೀರವಾದ ಸಭೆಯಲ್ಲಿ ಉಪನ್ಯಾಸಕನೊಬ್ಬ ಭಾಷಣ ಮುಂದುವರೆಸಿದಾಗ ಸಭೆ ಗಂಭೀರವಾಗಿಯೇ ಕೇಳುತ್ತಿರುತ್ತದೆ. ಭಾಷಣಕಾರ ತನ್ನ ಭಾಷಾ ಪ್ರಯೋಗದೊಳಗೆ ಏನೋ ತಪ್ಪು ಮಾಡಿದಾಗ ಇಡೀ ಸಭೆಯೇ ಗೊಳ್ ಎಂದು ನಗುತ್ತದೆ. ಇದು ಎಲ್ಲರನ್ನೂ ರಿಲೀಫ್‌ಗೆ ತರುತ್ತದೆ. ಆ ರಿಲೀಫ್‌ನಿಂದಲೇ ಇನ್ನೊಂದು ಜೋಕು ಹುಟ್ಟಿಕೊಳ್ಳುತ್ತದೆ. ಸೀರಿಯಸ್ ಆಗಿ ಹುಟ್ಟುಹಾಕಿದ ಪ್ರಶ್ನೆಗಳಿಗೆ ಎಷ್ಟೋ ವೇಳೆ ನಗುವಿನಲ್ಲೇ ಉತ್ತರ ಸಿಗುತ್ತದೆ. ಸೀರಿಯಸ್ ವಿಷಯಗಳೊಳಗೆ ನಗು ಇರಬೇಕು.ಅದು ಎಷ್ಟಿದ್ದರೂ ಸಾಲುವುದಿಲ್ಲ. ಈ ರೀತಿ ಸಾಲವಾಗಿಯೇ ಇಲ್ಲಿ ವಿಶ್ವೇಶ್ವರ sಟ್ಟರು ಜನರಿಂದ ಜೋಕು ಪಡೆದು ಸೀರಿಯಸ್ ಆಗಿ ಪೇರಿಸಿಟ್ಟಿದ್ದಾರೆ.
ಸರ್ದಾರ್ಜಿಯ ಜೋಕುಗಳೆಂದರೆ ಎಲ್ಲೆಡೆ ಪ್ರಸಿದ್ಧಿ. ಅಂತೆಯೇ ಇಲ್ಲಿಯೂ ಸರ್ದಾರ್ಜಿಯ ಜೋಕುಗಳು ಇವೆ. ಅದರ ಹೊರತಾಗಿ ಜನಸಾಮಾನ್ಯರ ಜೋಕುಗಳಿವೆ. ನಾವು ಕೇಳಿದ, ಹೇಳಿದ ಜೋಕುಗಳೂ ಇವೆ. ಕೆಲವು ಸಂದರ್ಭಗಳಲ್ಲಿ ನಡೆದ ಘಟನೆಗಳೇ ಜೋಕುಗಳಾಗಿವೆ.
ಕೃತಿಯಲ್ಲಿರುವ ಕೆಲವು ಜೋಕುಗಳನ್ನು ಗಮನಿಸಬಹುದು.
ಪ್ರಶ್ನೆ: ದಾರಿ ಮಧ್ಯದಲ್ಲಿ ಸರ್ದಾರ್ಜಿ ಲಂಚ್ ಬಾಕ್ಸ್ ಅನ್ನು ಏಕೆ ತೆರೆದು ನೋಡುತ್ತಾನೆ.
ಉತ್ತರ :ಆಫೀಸಿಗೆ ಹೋಗುತ್ತಿದ್ದೇನೋ ಅಥವಾ ಆಫೀಸಿನಿಂದ ಮರಳುತ್ತಿದ್ದೇನೋ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು.
ಕೀಲು ತನ್ನ ಮದುವೆ ಆಮಂತ್ರಣ ಕಳಿಸಿ ಅದರಲ್ಲೊಂದು ಪತ್ರವನ್ನು ಇಟಿದ್ದ. ಅದರಲ್ಲಿ ನನ್ನ ಮದುವೆ ಜೂನ್ ೧ಕ್ಕೆ ನಿಗದಿಯಾಗಿದೆ. ನೀವೆಲ್ಲ ಫಸ್ಟ್ ನೈಟ್ ಗೆ ಬರಬೇಕು ಎಂದಿತ್ತು.
ಪ್ರಶ್ನೆ: ಮೊಬೈಲ್ ಫೋನಿಗೂ, ಮದುವೆಗೂ ಏನು ವ್ಯತ್ಯಾಸ?
ಉತ್ತರ: ಸ್ವಲ್ಪ ಕಾದರೆ ಆದರೆ ಹೊಸ ಮಾಡೆಲ್ ಸಿಗುತ್ತದೆ.
ಸರ್ದಾರ್‌ಜೀ: ವೈದ್ಯರ ಬಳಿ ಹೋಗಿ ತೂಕ ಕಡಿಮೆ ಮಾಡುವುದು ಹೇಗೆ ಎಂದು ಕೇಳುತ್ತಾನೆ. ಡಾಕ್ಟರ್ ಹೇಳುತ್ತಾರೆ- ದಿನಕ್ಕೆ ಹತ್ತು ಕಿಲೋಮೀಟರ್‌ನಂತೆ ೩೦ ದಿನ ಓಡಬೇಕು ಎಂದು. ನಂತರ ಮಾರನೆಯ ದಿನ ಡಾಕ್ಟರ್‌ಗೆ ಕರೆ ಮಾಡಿದ. ೩೦ ದಿನ ಓಡಿದ್ದೇನೆ, ಆದರೆ ಮನೆಯಿಂದ ೩೦೦೦ ಕಿಲೋಮೀಟರ್ ದೂರದಲ್ಲಿ ಇದ್ದೇನೆ, ಏನು ಮಾಡಲಿ ಎಂದು.
ಶಿಕ್ಷಕ: ಹುಡುಗಿಯರ ಹಾಸ್ಟೆಲ್‌ಗೆ ಮೊದಲ ಬಾರಿಗೆ ಹೋದರೆ ನೂರು ದಂಡ. ಎರಡನೇ ಸಲಕ್ಕೆ ೨೦೦ ರೂ ದಂಡ. ಮೂರನೇ ಸಲಕ್ಕೆ ಎಷ್ಟು ದಂಡ??
ಒಬ್ಬ ವಿದ್ಯಾರ್ಥಿ ಎದ್ದು ನಿಂತು ಕೇಳಿದ :- ತಿಂಗಳ ಪಾಸಿಗೆ ಎಷ್ಟು ದರ ಎಂದು ಹೇಳಿಬಿಡಿ.
ಮೇಷ್ಟ್ರು : -ನೀನು ತಂದೆಗೆ ಹೆದರುತ್ತಿಯೋ, ತಾಯಿಗೋ?
ವಿದ್ಯಾರ್ಥಿ -ತಾಯಿಗೆ. ಏಕೆಂದರೆ ನನ್ನ ತಂದೆಯು ತಾಯಿಗೆ ಹೆದರುತ್ತಾರೆ.
ಎಟಿಎಂ ಮಷೀನು ಏಕಾಏಕಿ ಕೆಟ್ಟು ಹೋಗಿತ್ತು. ಕೀಲು ಹೋಗಿ ದೂರು ಕೊಟ್ಟ. ಇಂಜಿನಿಯರ್ ಬಂದು ಕಾರಣ ಹುಡುಕಿದಾಗ ‘ಎಂಟರ್ ಯುವರ್ ಪಿನ್’ ಎಂದು ಎಟಿಎಂ ಮಷೀನ್ ನಲ್ಲಿ ಕಂಡಾಗ ಕೀಲು ಗುಂಡು ಪಿನ್ನನ್ನು ಅದರೊಳಗೆ ತೂರಿಸಿದ್ದ.
ಕೀಲು ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿದ್ದ. ಸಂದರ್ಶನಕ್ಕೆ ಕರೆ ಬಂತು. ಸಂದರ್ಶನದಲ್ಲಿ ಪ್ರಶ್ನೆ ಕೇಳಿದರು- ನಿಮಗೆ ಸೇಲ್ಸ್ ನಲ್ಲಿ ಅನುಭವವಿದೆಯೇ? ಅದಕ್ಕೆ ಆತ ಉತ್ತರಿಸಿದ- ನಾನು ನನ್ನ ಮನೆ, ಕಾರು, ಒಡವೆ ಎಲ್ಲವನ್ನೂ ಸೇಲ್ ಮಾಡಿದ್ದೇನೆ.
ಹುಡುಗಿ ಬೇಕಾಗಿದ್ದಾಳೆ : ಕುಡುಕನೊಬ್ಬ ವಧುವರರ ಆಂಕಣಕ್ಕೆ ಜಾಹೀರಾತು ಕೊಟ್ಟಿದ್ದ. ಅದು ಹೀಗಿತ್ತು . ಹುಡುಗಿ ಬೇಕಾಗಿದ್ದಾಳೆ ಏಜ್ ನೋ ಬಾರ್, ಕಲರ್ ನೋ ಬಾರ್, ಹೈಟ್ ನೋ ಬಾರ್, ಕಾಸ್ಟ್ ನೋ ಬಾರ್. ಆದರೆ ಆಕೆಯ ತಂದೆ ಹೊಂದಿರಬೇಕು ಬಾರ್.
ಕೀಲುಗೆ ಸ್ನೇಹಿತ ಕೇಳಿದ:- ಇಂದು ನೀನು ಡಾಕ್ಟರ್ ಹತ್ತಿರ ಹೋಗಬೇಕಿತ್ತು, ಯಾಕೆ ಹೋಗಿಲ್ಲ. ಅದಕ್ಕೆ ಕೀಲು ಉತ್ತರಿಸಿದ- ಇಂದು ನನ್ನ ಆರೋಗ್ಯ ಸರಿ ಇರಲಿಲ್ಲ.
ನರ್ಸ್- ಕೀಲು, ನಿಮಗೆ ಅಭಿನಂದನೆಗಳು ನೀವು ತಂದೆ ಆಗಿದ್ದೀರಿ. ಕೀಲು :-ನನ್ನ ಹೆಂಡ್ತಿಗೆ ಹೇಳಬೇಡಿ. ಆಕೆಗೆ ಸರ್ಪ್ರೈಸ್ ಕೊಡೋಣ.
ಹೀಗೆ ಓದುಗರನ್ನು ಒಮ್ಮೆ ನಗಿಸುವ, ತುಟಿಯಂಚನ್ನು ಅರಳಿಸುವ ಜೋಕುಗಳು ಇಲ್ಲಿವೆ. ಒಮ್ಮೆ ಓದಿ ಎಲ್ಲರೂ ಸಂತಸಪಡಬಹುದು.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
...........................

Comments
Post a Comment