ಅಮೆರಿಕದ ವಿವಿಧತೆ, ವಿಶಿಷ್ಟತೆ ತೋರಿಸುವ ‘ಕುತೂಹಲದ ಕಣ್ಣಲ್ಲಿ ಅಮೇರಿಕಾ’ ಜಗತ್ತನ್ನು ಸುತ್ತಬೇಕು ಎನ್ನುವ ಹಂಬಲ ಬಹಳ ಜನರಲ್ಲಿ ಇರುತ್ತದೆ. ಆದರೆ ಅಂತಹ ಅವಕಾಶ ಎಲ್ಲರಿಗೂ ಸಿಗಲಾರದು. ಹೀಗೆ ಸುತ್ತಿದವರು ಅದರ ಅನುಭವವನ್ನು ಹಂಚಿಕೊಳ್ಳುತ್ತಿರಬೇಕು. ಇದರಿಂದ ವಿದೇಶಯಾನ ಸಾಧ್ಯವಾಗದಿದ್ದವರೂ ಸಹ ಅಲ್ಲಿನ ವಿವಿಧತೆ, ವಿಶಿಷ್ಟತೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ‘ಕುತೂಹಲದ ಕಣ್ಣಲ್ಲಿ ಅಮೇರಿಕಾ’ ಪ್ರಸ್ತುತ ಕೃತಿಯನ್ನು ಉಡುಪಿಯ ಮೋಹನ್‌ದಾಸ್ ಕಿಣಿ ಬರೆದಿದ್ದಾರೆ. ತಮ್ಮ ಅಮೇರಿಕಾ ಮತ್ತು ಕೆನಡಾ ಪ್ರವಾಸದ ಹಿನ್ನೆಲೆಯಲ್ಲಿ ರಚಿತವಾದ ಈ ಕೃತಿಯಲ್ಲಿ ಅವರು ಅಮೆರಿಕದಲ್ಲಿ ತಾವು ವರ್ಷಗಳ ಕಾಲ ಇದ್ದು ಕಂಡುಂಡ, ಅನುಭವಿಸಿದ ಎಲ್ಲಾ ವಿಷಯಗಳನ್ನು ದಾಖಲಿಸಿದ್ದಾರೆ. ಇದು ನಾವು ಸ್ವತಃ ಆ ದೇಶವನ್ನು ನೋಡಿಬಂದ ಅನುಭವವನ್ನು ಕಟ್ಟಿಕೊಡುತ್ತದೆ. ಅಲ್ಲಿನ ನೀತಿ- ನಿಯಮ, ಉದ್ಯೋಗ ಪದ್ದತಿ, ಸಾರಿಗೆ ವ್ಯವಸ್ಥೆ, ಡ್ರೈವಿಂಗ್ ಕಲಿಕೆ, ವಾಸದ ನಿಯಮ... ಹೀಗೆ ಹತ್ತಾರು ವಿಷಯಗಳು ಈ ಕೃತಿಯ ಜೀವಾಳವಾಗಿವೆ. ಆದ್ದರಿಂದ ಈ ಪುಸ್ತಕ ಎಲ್ಲರಿಗೂ ಇಷ್ಟವಾಗುವಂತದ್ದು. ವಿದೇಶಕ್ಕೆ ಹೋಗಬೇಕು ಎಂದು ಯೋಚಿಸುವುದರಿಂದ ಹಿಡಿದು ಪಾಸ್‌ಪೋರ್ಟ್ ಮಾಡಿಸುವುದು, ವೀಸಾ ಲಭ್ಯತೆ, ವಿಮಾನ ಪ್ರಯಾಣಕ್ಕೆ ಸಿದ್ಧತೆ, ವಿಮಾನಯಾನ, ವಿಮಾನ ಏರುವ ಮುನ್ನ ನಡೆಯುವ ತಪಾಸಣೆಗಳು, ಅಲ್ಲಿಗೆ ಹೋಗಿ ಇಳಿದ ಮೇಲಿನ ಪ್ರಕ್ರಿಯೆಗಳು, ಇಲ...