ಜಗತ್ತಿನ ದ್ವೇಷ-ಪ್ರತಿದ್ವೇಷ ಬಿಂಬಿಸುವ
‘ಹಣತೆ ಹಚ್ಚಿಬಿಡಿ ಹೆಜ್ಜೆ ಹೆಜ್ಜೆಗೂ’
ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಶಿಕ್ಷಕಿ ಮುರ್ತುಜಾ ಬೇಗಂ ಕೊಡಗಲಿ ಅವರ ನಾಲ್ಕನೆಯ ಕವನ ಸಂಕಲನ ಇದು. ಈ ತಿಂಗಳ ಆದಿಭಾಗದಲ್ಲಿ ಇದು ಲೋಕಾರ್ಪಣೆಗೊಂಡಿದೆ. ಇದರಲ್ಲಿ ಹೃದಯ ತಟ್ಟುವ ಕವನಗಳಿವೆ. ಸುಂದರ ರಚನೆಯ ಇಲ್ಲಿನ ಕವನಗಳು ಸ್ಪಷ್ಟ ಸಂದೇಶವನ್ನು ನೀಡುವಂತಹವು. ಕವನಗಳಲ್ಲಿ ಮಾನವೀಯ ಮೌಲ್ಯಗಳು, ಪ್ರಕೃತಿ, ಬದುಕು, ಮಾನವಿಯತೆ, ಮಹಿಳೆ, ಪ್ರೀತಿ- ಪ್ರೇಮ, ದ್ವೇಷ... ಹೀಗೆ ವೈವಿಧ್ಯಮಯ ವಿಷಯ ವಸ್ತುಗಳನ್ನು ತಮ್ಮ ಅನುಭವದ ಆಧಾರದಲ್ಲಿ ಸುಂದರವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಮಾನವೀಯತೆ ಕುರಿತಾಗಿ ವಿಶೇಷವಾಗಿ ಹೆಚ್ಚಿನ ಕವನಗಳು ಇಲ್ಲಿರುವುದನ್ನು ಗಮನಿಸಿದಾಗ ಅವರ ಕಾಳಜಿಯನ್ನು ಗಮನಿಸಬಹುದು.
ಕವನವನ್ನು ಓದಿದಾಗ ನಾವೆಲ್ಲ ಮನುಷ್ಯತ್ವ ತ್ಯಜಿಸಿ ಹೇಗೆ ಬಾಳುತ್ತಿದ್ದೇವೆ. ಜಗತ್ತು ಹೇಗೆ ದ್ವೇಷ-ಪ್ರತಿದ್ವೇಷದಲ್ಲಿ ಬೇಯುತ್ತಿದೆ. ದ್ವೇಷದ ಬೀಜಗಳು ಹೇಗೆ ಚೆಲ್ಲಾಡುತ್ತಿವೆ ಎನ್ನುವುದನ್ನು ಗ್ರಹಿಸಬಹುದು. ಇಲ್ಲಿರುವ ೪೦ ಕವನಗಳೆಲ್ಲ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿವೆ.
ಕವನಗಳ ಕುರಿತು:
ಮೊದಲ ಕವನ, ಕೃತಿಯ ಶೀರ್ಷಿಕೆ ಎರಡೂ ಒಂದೇ ಆಗಿದೆ. ‘ಹಣತೆ ಹಚ್ಚಿಬಿಡಿ ಹೆಜ್ಜೆಹೆಜ್ಜೆಗೂ’ ಇದರಲ್ಲಿ ದ್ವೇಷಪೂರಿತ ಇಂದಿನ ಜಗದಲ್ಲಿ ಒಲವ ಹಬ್ಬವನ್ನು ಆಚರಿಸಬೇಕಿದೆ. ಬೆಳಕು (ಜ್ಞಾನ ಮತ್ತು ಶಾಂತಿ) ಕಾವ್ಯವಾಗಬೇಕಿದೆ. ಆದರೆ ಇಲ್ಲಿ ಬೆಳಕನ್ನೇ ಹತ್ಯೆಗೈದು ನೇಣಿಗೇರಿಸುತ್ತಿದ್ದಾರೆ. ಮಸಿ ಬಳಿದು ಬೇಕೆಂತಲೇ ಕತ್ತಲೆಯನ್ನು ಸೃಷ್ಟಿಸುತ್ತಿದ್ದಾರೆ. ಇದನ್ನು ನಿವಾರಿಸಲು ನಾವು ಹೆಜ್ಜೆ ಹೆಜ್ಜೆಗೂ ಹಣತೆಯನ್ನು ಹಚ್ಚಬೇಕು. ಅದರಲ್ಲಿ ಪ್ರೀತಿ ತುಂಬಬೇಕು ಎನ್ನುತ್ತಾ,
ಹಚ್ಚಿಬಿಡಿ ಹಣತೆಯ
ಹೆಜ್ಜೆಹೆಜ್ಜೆಗೂ, ಪ್ರತಿಹೆಜ್ಜ್ಜೆಗೂ
ಬೆಳಕು ಕಬ್ಬವಾಗಲಿ
ಒಲವ ಹಬ್ಬವಾಗಲಿ
ಎಂದು ಬರೆಯುತ್ತಾರೆ.
ಸಮಾಜದಲ್ಲಿ ಬೆಳಕನ್ನು ಬೇಕೆಂತಲೇ ಆರಿಸಲಾಗುತ್ತಿದೆ. ಆ ಮೂಲಕ ಎಲ್ಲೆಡೆ ಅಶಾಂತಿ, ದ್ವೇಷ ಹರಡಲಾಗುತ್ತಿದೆ. ಇದನ್ನು ನಾವು ನಂದಿಸುವ ಕೆಲಸ ಮಾಡಬೇಕೆನ್ನುವುದು ಕವಯತ್ರಿಯ ಆಶಯ.
‘ಬಾಳ ಹಾಡುಗಳು’ ಇದರಲ್ಲಿ ಮನುಷ್ಯನ ವಿಚಿತ್ರ ಗುಣಗಳನ್ನು ತೆರೆದಿಟ್ಟಿದ್ದಾರೆ. ಮಣ್ಣಿಗಾಗಿ ಅರ್ಥಾತ್ ನೆಲಕ್ಕಾಗಿ ಮರಣವಾಗಿದೆ ಎಂದು ಇಲ್ಲಿ ಮಣ್ಣಿಗೆ ವಿಷ ಬೆರೆಸುತ್ತಿದ್ದಾರೆ. ಗೋಡೆಗಳು ಚಾಡಿಯನ್ನು ಕೇಳುತ್ತವೆ ಎಂದು ನಿಂತ ಗೋಡೆಗಳನ್ನೇ ಕೆಡವುತ್ತಿದ್ದಾರೆ. ಹೀಗೆ ಮನುಷ್ಯರ ಮಧ್ಯೆ ಕಂದಕವನ್ನು ನಿರ್ಮಿಸುತ್ತಿದ್ದಾರೆ. ಇವುಗಳನ್ನೆಲ್ಲ ಕಂದಕವನ್ನು ಮುಚ್ಚುವ ಕೆಲಸವನ್ನು ನಾವು ಮಾಡಬೇಕಿದೆ. ಇಂದು ಮನುಷ್ಯನ ಬದುಕೇ ಯುದ್ಧವಾಗಿದೆ. ಇಂತಹ ಸಂದರ್ಭಗಳಲ್ಲಿ ನಾವು ಇಲ್ಲಸಲ್ಲದ ವಿಚಾರಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು, ಏಕೆ ದ್ವೇಷ ಕಾರಬೇಕು, ನಮ್ಮ ಬಾಳಿನ ಹಾಡು ಸಾಕಾಗಿದೆ ಎಂದು ಬರೆಯುತ್ತಾರೆ.
ಬದುಕೇ ಯುದ್ಧವಾಗಲು
ಅವರಿವರು ಬಿಟ್ಟ
ಯಾಗದ ಕುದುರೆಗಳ
ಕಟ್ಟಿಹಾಕುತ್ತಲೇ ಹೋಗಬೇಕೇನು ಎಂದು ಪ್ರಶ್ನಿಸುತ್ತಾರೆ.
‘ಕೊಂಚ ನಿಲ್ಲಿ ಪ್ರೇಮಿಗಳೇ’ ಕವನದಲ್ಲಿ ಪ್ರೇಮಿಸಿದರೂ ಜಾತಿ- ಧರ್ಮ ಅಡ್ಡಬರುವುದನ್ನು ಚಿತ್ರಿಸಿದ್ದಾರೆ. ಸತ್ತವರನ್ನು ಎದುರಿಟ್ಟುಕೊಂಡು ಜಾತಿ ಮತ ಎಂಬ ಹೆಸರಿನಲ್ಲಿ ಆಟವಾಡುತ್ತಾರೆ. ಹೆಣಗಳ ಮೇಲಿನ ಗುಂಡಿನ ಗಾಯ ಅಥವಾ ಇರಿತವನ್ನು ತಪ್ಪದೇ ಲೆಕ್ಕ ಹಾಕಿ ಹೆಣದಲ್ಲೇ ಮೈಕಾಯಿಸಿಕೊಳ್ಳುತ್ತಾರೆ. ಪ್ರೀತಿ ಮಾಡಿ ಮೋಸವಾದರೆ ಅತ್ತು ಬಿಡಬೇಕು. ಇಲ್ಲವೇ ಜಾತಿ ನೋಡಿ ಪ್ರೀತಿಸಬೇಕು. ಪ್ರೀತಿಯಲ್ಲಿ ವಿಫಲವಾದೆ ಎಂದು ಸಾಯುವವರು ತಮ್ಮ ಸಾವನ್ನು ಇನ್ನೊಬ್ಬರ ಕೈಗೆ ಕೊಡಬಾರದೆಂಬ ಬುದ್ಧಿ ಮಾತನ್ನು ಹೇಳುತ್ತಾರೆ.
‘ವಿಳಾಸ ಬದಲಾಗಿದೆ’ ಎಂಬ ಕವನದಲ್ಲಿ ಶಾಂತಿ, ನೆಮ್ಮದಿಯ ಹುಡುಕಾಟದ ವಿಚಾರವಿದೆ. ಇಂದು ಎಲ್ಲೂ ಶಾಂತಿ, ನೆಮ್ಮದಿ ಇಲ್ಲ. ಏಕೆಂದರೆ ಉಸಿರಿಗೆ ವಿಷ ಬೆರೆಸುತ್ತಾರೆ. ಗಾಯದ ಮೇಲೆ ಉಪ್ಪು ಹಾಕುತ್ತಾರೆ. ಹಸಿದವನ ಅನ್ನದ ತುತ್ತಿನ ಕನಸನ್ನು ಕಿತ್ತುಕೊಳ್ಳುತ್ತಾರೆ. ಎದೆಗೆ ಬೆಂಕಿ ಹಚ್ಚಿ ಮೈ ಕಾಯಿಸುತ್ತಾರೆ. ಬಡವರ ಕಾಲುದಾರಿಯ ತುಂಬಾ ಮುಳ್ಳು ಚೆಲ್ಲುತ್ತಾರೆ. ಎಲ್ಲೆಡೆ ದ್ವೇಷದ ಬೀಜವನ್ನು ಚೆಲ್ಲುತ್ತಿದ್ದಾರೆ. ಇಂತಹರಿಂದ ದೂರವಿರಲು ನಾವು ನಮ್ಮ ವಿಳಾಸ ಬದಲಿಸಬೇಕಿದೆ. ಹತ್ತಿರದಲ್ಲೆಲ್ಲೂ ಇರಬಾರದು. ನಮ್ಮ ನೆರಳೂ ಅಲ್ಲಿ ಕಾಣಬಾರದು. ಅವರ ನೆರಳು ನಮಗೆ ಸೋಕದಂತೆ ನೋಡಿಕೊಳ್ಳಬೇಕು ಎಂದು ಬರೆಯುತ್ತಾರೆ.
‘ಮುಟ್ಟಾಗಿದ್ದಾಳೆ ಭೂಮ್ತಾಯಿ’ ಕವನದಲ್ಲಿ ಭೂಮಿ ಹಚ್ಚಹಸುರಿನಿಂದ ನಳನಳಿಸುತ್ತಿದೆ. ಯೌವ್ವನಭರಿತೆಯಾಗಿ, ಫಲಭರಿತಳಾಗಿದ್ದಾಳೆ. ಕಂಗೊಳಿಸುತ್ತಿದ್ದಾಳೆ. ಇದರಿಂದಾಗಿ ಅವಳ ಮೇಲೆ ಸತತ ಅತ್ಯಾಚಾರ ನಡೆಯುತ್ತಿದೆ. ರಕ್ತಸ್ರಾವ ನಿರಂತರವಾಗಿದೆ. ಸತ್ವವನ್ನೇ ತೆಗೆದು ಮಾರಾಟ ಮಾಡುತ್ತಿದ್ದಾರೆ. ಜನರಲ್ಲಿ ನಿಷ್ಕರುಣೆ ತುಂಬಿದೆ. ಆಕೆಯ ಗರ್ಭವನ್ನೇ ಒಡೆಯುತ್ತಿದ್ದಾರೆ. ನಿತ್ಯ ಮುತ್ತೈದೆಯಾದರೂ ಆಕೆಯ ದುರಂತದ ಜೀವನಕ್ಕೆ ಅಂತ್ಯವಿಲ್ಲ ಎಂದು ವಿಷಾದಿಸುತ್ತಾರೆ.
ಇವಳೋ ಸಂಕೋಚಿ
ಬಾಯಿಬಿಡಳು
ಮೈಹರವಿ ಒರಗಿಹಳು
ನಿರಂತರ ಅತ್ಯಾಚಾರಕೆ
ವಿರಾಮವೇ ಇಲ್ಲ ಇಷ್ಟಾದರೂ
ಎನ್ನುವ ಸಾಲು ಭೂಮ್ತಾಯಿಯ ಮೇಲೆ ನಡೆಯುತ್ತಿರುವ ಕ್ರೌರ್ಯವನ್ನು ತೆರೆದಿಡುತ್ತದೆ.
‘ನಿನ್ನ ನೀ ಹುಡುಕಿಕೊ’ ಕವನದಲ್ಲಿ ಅತ್ಯಾಚಾರಕ್ಕೊಳಗಾದವಳ ನೋವಿನ ಕಥೆಯನ್ನು ಬಿಚ್ಚಿಡುತ್ತದೆ. ತನ್ನನ್ನು ತಿಂದು ತೇಗಿದವನು ಈಗ ಮುಖವನ್ನೇ ಮರೆತಿದ್ದಾನೆ. ದೇಹವೆಲ್ಲಾ ನೋಯುತ್ತಿದ್ದರೂ ಹಿಂಡಿ ಹಿಪ್ಪೆ ಮಾಡಿದ, ಎಷ್ಟು ಕಿರುಚಾಡಿದರೂ ಕೇಳಲಿಲ್ಲ. ಆತನ ರಭಸಕ್ಕೆ ಸಿಲುಕಿಹೋದೆ. ತಿಂದು ತೇಗಿದ. ಈಗ ಆತ ತನ್ನನ್ನೇ ಕಳೆದುಕೊಂಡಿದ್ದಾನೆ.
ಕಳೆದೇ ಹೋಗಿದ್ದೆಯಲ್ಲ
ಈಗ ಹುಡುಕಿಕೋ ಸಾಧ್ಯವಾದರೆ
ನಿನ್ನಲ್ಲಿ ನೀ ಸಿಕ್ಕರೆ ನೀರಾಳವಾಗು
ಎಂದು ಹೇಳುತ್ತಾರೆ.
‘ ನೀವಂದುಕೊಂಡಂತಲ್ಲ ನಾವು’ ಕವನದಲ್ಲಿ ಹರಿದ ಮನವನ್ನು ಹೊಲಿಯುವವವರು ನಾವು, ಎದೆಯ ಪ್ರೀತಿಯ ಕಟ್ಟಿ ಹಾಕುವ, ಹಾದಿ ಬೀದಿಯಲ್ಲಿ ಪ್ರೀತಿ ಚೆಲ್ಲುವ, ಸತ್ಯಕ್ಕಾಗಿ ಬೆಂಕಿಯ ಕೆಂಡ ಹಾಯ್ದು ಬರುವ, ಕಹಿ ತುಂಬಿದ ಎದೆಯನ್ನು ಹಣ್ಣಾಗಿ ಮಾಗಿಸಬಲ್ಲ, ನೆತ್ತಿಗೇರಿಸಿಕೊಂಡ ನಿಶೆಯ ಇಳಿಸುವ, ಎಲ್ಲರೆದುರು ತಲೆ ಎತ್ತಿ ನಡೆಯುವ, ದ್ವೇಷವನ್ನು ಕೊಚ್ಚಿಹಾಕುವ, ಮನುಷ್ಯತ್ವ ಉಳ್ಳವರು ನಾವು. ಎಲ್ಲರೆಂದುಕೊಂಡಂತೆ ನಾವು ಕೊಳೆತು ಹೋಗುವವರಲ್ಲ, ತಲವಾರನ್ನು ಹಾದಿ-ಬೀದಿಯಲ್ಲಿ ಹಂಚುವವರಲ್ಲ, ನಂಜಿನ ಅಂಚಿನ ತುದಿಗೆ ಹುಟ್ಟಿದವರಲ್ಲ, ಹೊತ್ತು ಮೆರೆಸುವವರಲ್ಲ, ದಾನವತೆಯನ್ನು ರಕ್ಷಿಸುವವರಲ್ಲ, ಚಪ್ಪಲಿಯ ತುದಿಯಲ್ಲಿ ಜನಿಸಿದವರಲ್ಲ, ದ್ವೇ ಷ ಹಂಚುವವರಲ್ಲ ಎಂದು ಹೇಳುವ ಮೂಲಕ ಒಳ್ಳೆಯತನದ ಮನುಷ್ಯರು ನಾವು, ಹೃದಯವಂತರು, ಮಾನವೀಯ ಗುಣವುಳ್ಳವರು ಎನ್ನುವುದನ್ನು ವಿವರಿಸಿದ್ದಾರೆ.
‘ಯುದ್ಧ ಮುಗಿದ ಮೇಲೆ’ ಕವನದಲ್ಲಿ ಯುದ್ಧ ಮುಗಿದ ಮೇಲೆ ಯಾವ ಪರಿಸ್ಥಿತಿ ನೆಲೆಸಿರುತ್ತದೆ, ಸಂಬಂಧಿಗಳ ಸ್ಥಿತಿಯೇನು, ಹದ್ದುಗಳು ಹೇಗೆ ಹಾರಾಡುತ್ತವೆ, ರಕ್ಕಸ ನಾಲಿಗೆಗಳು, ರಣ ಬೇಟೆಗಾರ ಹದ್ದುಗಳು ಹೇಗೆ ಸತ್ತವರನ್ನು ತಿನ್ನುತ್ತವೆ. ದ್ವೇಷದ ಹೊಸ ಬೀಜಗಳು ಹೇಗೆ ಚೆಲ್ಲಾಡುತ್ತವೆ, ಕರಕಲು ದೇಹ, ಸ್ಮಶಾನ ಮೌನ ಹೇಗೆ ನೆಲೆಸಿರುತ್ತದೆ ಎನ್ನುವುದನ್ನು ಹೃದಯ ಕರಗುವಂತೆ ಚಿತ್ರಿಸಿದ್ದಾರೆ. ಈ ಕವನ ಓದುವಾಗ ಯುದ್ಧಭೂಮಿಯು ಚಿತ್ರಣ ನಮ್ಮ ಕಣ್ಣೆದುರು ಬರುತ್ತದೆ.
ಅಂಗಳದ ತುಂಬ ರಕ್ತದ ರಂಗೋಲಿ
ಕತ್ತರಿಸಿದ ರುಂಡ ಮುಂಡಗಳ ತೋರಣ
ಇಲ್ಲಿ ಬದುಕು ಬಯಲಾಗಿರುತ್ತದೆ
ಸೋತ ಪ್ರೇತಗಳ ಶಾಪ ಉಸಿರಾಡುತ್ತವೆ
ರಕ್ಕಸತನ ಬಯಲಾಗಿರುತ್ತದೆ.
ನೆಲದ ನೆಮ್ಮದಿಯು ಉಸಿರುಗಟ್ಟಿ ಕುಸಿಯುತ್ತಿದೆ.
ಎಷ್ಟೋ ಜನರ ಕಣ್ಣೀರಿನ ಸಾಗರ ಹರಿಯುತ್ತದೆ
ಚೀರಾಡಿ ಅಳುವವರು ಆತ್ಮಹತ್ಯೆಗೆ ಮುಂದಾಗುವವರು ಕಂಡುಬರುತ್ತಾರೆ.
ಎಂದು ಬಹುಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
‘ಹಲ್ಲಿ ಮತ್ತು ಜಿರಳೆ’ ಎಂಬ ಕೊನೆಯ ಕವನದಲ್ಲಿ ಇವೆರಡರ ಬಾಳನ್ನು ಯಾರೂ ಸ್ಪರ್ಶಿಸುವುದಿಲ್ಲ. ಅವರನ್ನು ಮುಟ್ಟಿ ಮುದ್ದಾಡುವವರಿಲ್ಲ. ಹಲ್ಲಿಗೆ ಲೊಚ ಲೊಚ ರಾಗ ಮಾತ್ರ ಗೊತ್ತು. ಜಿರಳೆ ಮೀಸೆ ಹೊತ್ತು ಗತ್ತು ತೋರಿದರೂ ಪೊರಕೆಗೋ ‘ಹಿಟ್’ ಗೋ ಬಲಿಯಾಗುತ್ತದೆ. ‘ನಿಮ್ಮ ಸಾವಿಗೆ ನಲುಗುವವರಿಲ್ಲ, ಮೌನಾಚರಣೆಯಿಲ್ಲ, ಎಲ್ಲಾದರೂ ಓಡಿ ಬದುಕಿಕೊಳ್ಳಿ’ ಎಂದು ಮನಸೆಳೆಯುವಂತೆ ಚಿತ್ರಿಸಿದ್ದಾರೆ.
ಉಳಿದಂತೆ ಸಾಕ್ಷಿಗಳು, ಮತ್ತೆ ಬರುವುದೇ ಬೆಳಕು, ಮಣ್ಣೆರಚದಿರು ಜಗದ ಕಣ್ಣಿಗೆ, ನಗುವ ಸುಖವಿರಲಿ, ಹೆಣ್ಣಾಗಿ ಬಿಡಿ ಒಮ್ಮೆ, ಮತ್ತೆ ಬರುವುದೇ ಬೆಳಕು, ಹೀಗೊಂದು ಬಿನ್ನಹ, ಕವಿತೆಯಾಗಿ ಉಳಿದುಬಿಡು, ಕವನಗಳು ಸಹ ನೆನಪಿನಲ್ಲಿ ಉಳಿಯುವಂತಹವು.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೧೫.೧೦.೨೦೨೬
........................

Comments
Post a Comment