Posts

 ಮನುಷ್ಯ ಪ್ರೇಮ, ಕರುಣೆ ಸಾರುವ “ಮಹಾಮಾಯಿ”        ‘ಮಹಾಮಾಯಿ’ ಇದು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಅವರ ಹೆಸರಾಂತ ನಾಟಕ. ಸುಮಾರು ೫ಕ್ಕೂ ಹೆಚ್ಚು ಬಾರಿ ಮುದ್ರಣ ಕಂಡಿದೆ. ಕಂಬಾರರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯವರು. ಬೆಂಗಳೂರು ವಿಶ್ವ್ವವಿದ್ಯಾಲಯದಲ್ಲಿ ಎರಡು ದಶಕಗಳ ಕಾಲ ಕನ್ನಡ ಪ್ರಾಧ್ಯಾಕರಾದವರು. ಇದಕ್ಕೂ ಮೊದಲು ಕರ್ನಾಟಕ ವಿಶ್ವವ್ವಿದ್ಯಾಲಯ ಧಾರವಾಡದಲ್ಲಿ ಮತ್ತು ಅಮೆರಿಕದ ಚಿಕಾಗೋ ವಿಶ್ವವ್ವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಬಳಿಕ ಹಂಪಿ ಕನ್ನಡ ವಿವಿಯ ಪ್ರಪ್ರಥಮ ಕುಲಪತಿಯಾದ ಕೀರ್ತಿ ಇವರದ್ದು. ಜಾನದ ವಿಶ್ವಕೋಶ ಎಂಬ ಬಿರುದಾಂಕಿತರು. ಮನುಷ್ಯ ಪ್ರೇಮದ ಜಯಕ್ಕೆ ಸಾಕ್ಷಿಯಾಗುವ ಈ ಪ್ರೀತಿ, ಕೊನೆಗೆ ಸಾವಿನ ದೇವತೆಯ ಅಹಂಕಾರವನ್ನು ಸೋಲಿಸುತ್ತದೆ. ಸಾವು ಮತ್ತು ವಿಧಿ ಎಂಬುದು ಪ್ರಕೃತಿಯ ಅನಿವಾರ್ಯ ನಿಯಮ. ಆದರೆ ಮನುಷ್ಯನ ಕರುಣೆ ಮತ್ತು ವೈದ್ಯಕೀಯ ಜ್ಞಾನವು ವಿಧಿಯನ್ನೇ ಎದುರಿಸಿ ನಿಲ್ಲಬಲ್ಲದು ಎಂಬುದನ್ನು ನಾಟಕ ತೋರಿಸುತ್ತದೆ.  ದ್ವೇಷ, ಸಾವು ಮತ್ತು ಅಹಂಕಾರಕ್ಕಿಂತ "ಮನುಷ್ಯ ಪ್ರೇಮ" ಮತ್ತು "ಕರುಣೆ" ಶ್ರೇಷ್ಠವಾದದ್ದು ಎಂಬುದೇ ಕಂಬಾರರ ಈ ನಾಟಕದ ಮುಖ್ಯ ಆಶಯವಾಗಿದೆ. ಮೃತ್ಯುದೇವತೆಯ ಮೇಲೆ ಮನುಷ್ಯ ವಿಜಯ ಸಾಧಿಸುವ ಕತೆ ಇದು. ಪೂರ್ವನಿಗದಿತವಾದ ಸಾವು ಮುಟ್ಟದ ಹಾಗೆ ರಾಜಕುಮಾರಿಯನ್ನು ಕಾಪಾಡುವುದು, ವೈದ್ಯನಾದ ಸಂಜೀವನ ಪ್ರೇಮವನ್ನು ಇದು ಚಿತ್...
 ಮಕ್ಕಳ ಮನಸ್ಸನ್ನು ಆಕರ್ಷಿಸುವ  ‘ಚಿನ್ನಿ ದಾಂಡು ಬುಗುರಿ’  ಪತ್ರಕರ್ತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಯುವ ಪ್ರತಿಭೆ  ಟಿ ಹೆಚ್ ಸಂತೋಷ್‌ಕುಮಾರ್ ಭದ್ರಾವತಿ  ವಿಶೇಷವಾಗಿ ಪುಟಾಣಿ ಮಕ್ಕಳ ಮನಸನ್ನರಿತು ಬರೆದ ಕವನ ಸಂಕಲನ ಇದಾಗಿದೆ. ಮಕ್ಕಳ ಸ್ಮರಣಶಕ್ತಿ ಮತ್ತು ಗ್ರಹಣ ಶಕ್ತಿಗೆ ಪೂರಕವಾಗುವಂತಹ ತಮ್ಮ ಸುತ್ತಮುತ್ತಲಿನ ಅನೇಕ ವಿಚಾರಗಳಿಗೆ ಕವನದ ರೂಪ ಕೊಟ್ಟು ಮಕ್ಕಳ ಮನಸ್ಸನ್ನು ಆಕರ್ಷಿಸುವ ‘ಚಿನ್ನಿದಾಂಡು ಬುಗುರಿ’  ಎಂಬ ಹೆಸರನ್ನು ಇಟ್ಟಿದ್ದಾರೆ.  ಇಲ್ಲಿನ ಕವನಗಳು ಒಂದಲ್ಲ ಒಂದು ಕಾರಣದಿಂದಾಗಿ ಮಕ್ಕಳ ಮನಸ್ಸಿಗೆ ಮುದ ನೀಡುವ ಗುಣಗಳನ್ನು ಹೊಂದಿವೆ, ಅಷ್ಟೇ ಚೇತೋಹಾರಿಯಾಗಿವೆ. ಮಕ್ಕಳ ಮನರಂಜಿಸುವುದರ ಜೊತೆಗೆ ಆಧುನಿಕ ಜಗತ್ತಿನಲ್ಲಿ ಎಳೆವಯಸ್ಸಿನಲ್ಲೂ ಒತ್ತಡದ ಬದುಕನ್ನು ನಿರ್ವಹಿಸುತ್ತಿರುವ ಅದೇ ಮಕ್ಕಳು ಭವಿಷ್ಯದಲ್ಲಿ ವ್ಯಕ್ತಿತ್ವ ಮತ್ತು ಗುರಿಯನ್ನು ರೂಪಿಸಿಕೊಳ್ಳಲು ಇರಬೇಕಾದ ಗುಣಗಳ ಬಗ್ಗೆಯೂ ಇಲ್ಲಿನ ಕವನಗಳು ಮಾಹಿತಿ ನೀಡುತ್ತವೆ. ಇಲ್ಲಿ ಕವಿ ಒಂದು ಕಾಲದ ಸಂಸ್ಕೃತಿ, ಪರಂಪರೆಯಲ್ಲಿ ನಂಬಿಕೆ ಹೊಂದಿದವರು. ಆ ನಂಬಿಕೆಯಿಂದಾಗಿ ಕಳೆದುಹೋಗುತ್ತಿರುವ ಸಾಂಪ್ರದಾಯಿಕ ಕಲೆ, ಕ್ರೀಡೆಗಳ ಬಗ್ಗೆ ಸೆಳೆತ ಹೊಂದಿದವರು. ಅದಕ್ಕೆ ಈ ಸಂಕಲನಕ್ಕೆ ಮಕ್ಕಳ ಪ್ರೀತಿಯ ಆಟದ ಹೆಸರಿಟಿದ್ದಾರೆ. ಇದು ಒಂದು ಮಕ್ಕಳ ಕ್ರೀಡೆಯ ಹೆಸರು.  ಆಧುನಿಕ ಜಗತ್ತಿನಲ್ಲಿ ನ...
  ನಿಜಾಮರ ವಂಶದ ನೂರಾರು ರೋಚಕ ವಿವರದ ‘ಏಳು  ರೊಟ್ಟಿಗಳು ’ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಕೆ. ಎನ್. ಗಣೇಶಯ್ಯ ಅವರ ಕಿರು ಕಾದಂಬರಿ ಏಳು ರೊಟ್ಟಿಗಳು. ಇದರಲ್ಲಿ ಹೈದರಾಬಾದ್ ನಿಜಾಮರ ವಂಶದ ನೂರಾರು ರೋಚಕ ವಿವರಗಳು, ವಂಶ ರಹಸ್ಯಗಳು, ರಾಜಕೀಯ ಸಿದ್ಧಾಂತಗಳು ಅಡಕವಾಗಿವೆ. ಏಳು ರೊಟ್ಟಿಗಳು ಎಂದರೇನು ಎಂಬ ಮಾಹಿತಿ ಇದೆ.  ಹೈದರಾಬಾದನ್ನು ಆಳಿದ ನಿಜಾಮ ಸ್ವಾತಂತ್ರ್ಯಾನಂತರ ಭಾರತದಿಂದ ಲೋಡುಗಟ್ಟಲೆ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ವಸ್ತುಗಳೊಂದಿಗೆ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಆದರೆ ಭಾರತ ಸರ್ಕಾರದ ಬಿಗಿ ನಿಯಂತ್ರಣದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಆಗ ಆಭರಣಗಳನ್ನು ಮತ್ತು ಸಂಪತ್ತುಗಳನ್ನು ಗುಹೆ ಒಂದರಲ್ಲಿ ಅಡಗಿಸಿಟ್ಟಿದ್ದು ನಂತರ ಅದು ಯಾರಿಗೂ ಸಿಗದೆ ಭೂಗತವಾದ ಕಥೆ ಇದರಲ್ಲಿದೆ.  ಇಲ್ಲಿನ ಕಥೆಗಳಿಗೆ ಸಾಕ್ಷಾಧಾರವಾಗಿ ಚಿತ್ರ, ನಕ್ಷೆ ಇದೆ. ಕುತೂಹಲಕಾರಿ ನಿರೂಪಣೆಯೊಂದಿಗೆ ಸಾಗುವ ಕಾದಂಬರಿಯಲ್ಲಿ ದೀನ್‌ದಾರ್ ಅಂಜುಮನ್ ಎನ್ನುವ ಸಂಘಟನೆಯ ಟೆರರಿಸ್ಟ್‌ಗಳು (ಗಡ್ಡ ಬಿಟ್ಟು, ಮೀಸೆ ಇಲ್ಲದೆ, ಟರ್ಬನ್ ಒಳಗೆ ಕೂದಲು ಸುತ್ತಿದ ಸನ್ಯಾಸಿಗಳು ಮತ್ತು ತ್ರಿಶೂಲ ಉಪಯೋಗಿಸುವವರು) ಬರುತ್ತಾರೆ. ಇವರನ್ನು ಸೆರೆ ಹಿಡಿಯುವುದು ಮತ್ತು ನಿಜಾಮರ ಸಂಪತ್ತನ್ನು ಪತ್ತೆ ಮಾಡಲು ಒಬ್ಬ ಸಂಶೋಧಕಿಯ ಜೊತೆ ಪೊಲೀಸರು ತೆರಳುವುದು ಕಾದಂಬರಿಯಲ್ಲಿ ಅನಾವರಣಗೊಂಡಿದೆ.  ಕಾದಂಬರಿಗೆ ಮ...
Image
 ‘ಹದ್ದುಗಳು’ ‘ಹದ್ದುಗಳು’  ಕಥಾ ಸಂಕಲನ ಇಂದಿನ ದಕ್ಷಿಣ ಕನ್ನಡದ ಗ್ರಾಮೀಣ ಬದುಕಿನ ಸೊಗಸನ್ನು ಚೆಂದವಾಗಿ ನಮಗೆ ನೀಡುತ್ತದೆ. ಗ್ರಾಮೀಣ ಬದುಕಿನ ನಂಬಿಕೆ, ಕೌಟುಂಬಿಕ ಜೀವನ, ನಡೆವಳಿಕೆಗಳು, ಜೀವಪರ ಚಿಂತನೆಗಳು, ಕಾರಣಿಕ ಸ್ಥಳದ ಶ್ರದ್ಧೆ, ಹಿರಿಯರ ಅತಂತ್ರ ಮನಃಸ್ಥಿತಿ, ಹೆಣ್ಣಿನ ನೋವು- ನಲಿವು, ಆತ್ಮಹತ್ಯೆ, ಕೊಲೆ ಮುಂತಾದ ಆಗುಹೋಗುಗಳನ್ನು ಇಲ್ಲಿನ ಕಥೆಗಳು ಮೈತುಂಬಿಕೊಂಡಿವೆ  ಎದುರ್ಕಳ ಸುಬ್ಬಣ್ಣ ಭಟ್ ಇದರ ಲೇಖಕರು. ಕುಶಾಲಿನ ಮಾತು, ಪ್ರೀತಿ -ಪ್ರೇಮದ ನಲ್ನುಡಿ, ವ್ಯಂಗ್ಯದ ಚಾಟಿ ಕತೆಯಲ್ಲಿ ಕಂಡುಬರುತ್ತದೆ. ಮುಖ ತಿರುಗಿಸಿದವರು ಗೆದ್ದು ಬರುವ ಸನ್ನಿವೇಶ, ನಂಬಿಕೆಗೆ ದ್ರೋಹ ಬಗೆದು ಮನದಲ್ಲಿ ಕೊರಗುವವರು, ಪಾಪಪ್ರಜ್ಞೆಯಲ್ಲಿ ನರಳುವವರು, ಬಲಿಪಶುವಾಗುವುದು, ಸಾವಿನಲ್ಲಿ ಅಂತ್ಯ ಕಾಣುವುದು... ಈ ಕೃತಿಯಲ್ಲಿ ಕಂಡುಬರುತ್ತದೆ. ಕಾಡುವ ದುಃಖ ವಿಷಾದವೂ ಇದೆ.  ಬದುಕಿನಲ್ಲಿ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು ಎಂಬ ಮಾತಿದೆ. ಅದನ್ನು ತೋರಿಸುವ ಪ್ರಯತ್ನವನ್ನು ಇಲ್ಲಿನ ಕೆಲವು ಕಥೆಗಳು ಮಾಡಿವೆ. ಈ ಕಥೆಗಳಲ್ಲಿ ಈಗಿನ ಯಾಂತ್ರಿಕ ಜೀವನ, ಮೊಬೈಲ್, ಕಂಪ್ಯೂಟರ್ ಸಂಸ್ಕೃತಿ, ಆಧುನಿಕ ಯುವ ಜನಾಂಗದ ಮನೋಭಾವ, ಮುಗ್ಧ ಜನರ ಜೀವನ, ಸಮಾಜದ ಸಣ್ಣ ಸಣ್ಣ ಸಂಗತಿಗಳನ್ನು ನಿರೂಪಿಸಿದ್ದಾರೆ. ಕಥೆಗಳು ಸರಳವಾಗಿದ್ದು, ಕಷ್ಟವಿಲ್ಲದೆ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಶೈಲಿ ತಂತ್ರಕ್ಕೆ ಮಹತ್ವ ಕೊಡದೆ ಸರಳವಾಗಿ ಕಥೆ ಹ...
Image
 ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬೀಜ ಬಿತ್ತುವ  ‘ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’   ಮಕ್ಕಳು, ಕಥೆ ಮತ್ತು ಅಜ್ಜಿ ಈ ಮೂರರ ನಡುವೆ ಸದಾ ಒಂದು ತ್ರಿಕೋನ ಸಂಬಂಧವಿದೆ. ಮಕ್ಕಳಿಗೆ ಕಥೆ ಕೇಳಬೇಕು ಎಂದೆನಿಸಿದಾಗ ಅವರು ಓಡುವುದು ಅಜ್ಜಿಯ ಬಳಿಗೆ. ಈ ಅಜ್ಜಿ ಬದುಕಿನಲ್ಲಿ ಅನುಭವ ಗಳಿಸಿದವಳು, ದುಡಿದವಳು, ಬದುಕನ್ನು ಸವೆಸಿದವಳು, ಎದುರಿಸಿದಳು. ಇಂತಹ ಒಂದು  ಊರಿನಲ್ಲಿ ಪುಟ್ಟಜ್ಜಿ ಮಕ್ಕಳಿಗೆ ಹುರುಪನ್ನು ತುಂಬುತ್ತಾ ಮಕ್ಕಳಿಗೆ ಪರಿಸರ, ಪ್ರಾಣಿಗಳ ಪರಿಚಯ ಮಾಡಿಕೊಡುತ್ತಾ, ಮಕ್ಕಳನ್ನು ಆ ಕಥೆಗಳ ಮೂಲಕ ರಂಜಿಸುತ್ತಾಳೆ. ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ಇಂತಹ ೧೫ ಕಥೆಗಳ ಒಂದು ಸುಂದರ ಸಂಗ್ರಹ. ಮಕ್ಕಳಿಗಾಗಿ ಬಹಳಷ್ಟು ಬರೆದಿರುವ ಲೇಖಕ ನಾ. ಡಿಸೋಜಾ ಅವರ ಕೃತಿ ಇದು ಕೃತಿ. ಪುಟ್ಟಜ್ಜಿ ಮನೆಗೆ ಮಕ್ಕಳೆಲ್ಲ ಸಂಜೆ ವೇಳೆ ಪ್ರತಿದಿನ ತಪ್ಪದೆ ಬರುತ್ತಾರೆ. ಅವಳೆದುರು ಭಕ್ತಿಯಿಂದ ಕೈಕಟ್ಟಿ ಕೂರುತ್ತಾರೆ. ಅಜ್ಜಿ ದಿನಾಲೂ ಒಂದೊಂದು ಕಥೆಯನ್ನು ಹೇಳಲು ಆರಂಭಿಸುತ್ತಾಳೆ. ಹೀಗೆ ಕಥೆ ಹೇಳುವ ಹವ್ಯಾಸ. ಅವಳೆಂದೂ ಕಥೆಯೊಂದನ್ನೇ ಹೇಳುವುದಿಲ್ಲ. ಅದರ ಜೊತೆ ಹಾಡನ್ನು ರಚಿಸಿ ಸೇರಿಸಿ ಹಾಡುತ್ತಾಳೆ. ಇದರಿಂದ ಮಕ್ಕಳಿಗೆ ಮೋಜು, ಮಜಾ. ಕಥೆ ಕೇಳುತ್ತ, ಅಜ್ಜಿಯ ಮುಖ ನೋಡುತ್ತಾ ಕುಳಿತಿರುತ್ತಾರೆ. ತಮ್ಮ ಸುತ್ತಮುತ್ತಲಿನ ಆಗು-ಹೋಗುಗಳನ್ನೇ ಮರೆತುಬಿಡುತ್ತಾರೆ. ನಾವು ಕಲಿತದ್ದನ್ನು ಪರರಿಗೆ ಹಂಚಬೇಕು, ಪ್ರಕೃತಿ ನಮಗೆ ಕೊಟ್ಟಿದ್ದನ್ನು ನ...
Image
 ನಮ್ಮ ಇಂದಿನ ಸ್ಥಿತಿಗೆ ರೂಪಕವಾಗುವ  ‘ವಿರಹದ ಸಂಕ್ಷಿಪ್ತ ಪದಕೋಶ’  ವಿರಹ ಗಾಢವಾಗಿದೆ. ವಿರಹದ ಅತ್ಯುನ್ನತ ಸ್ಥಿತಿ ಜೊತೆಗಿದ್ದರೂ ಜೊತೆಗಿರಲಾರದ, ಸಮೀಪದಲ್ಲಿದ್ದರೂ ದೂರವಿದ್ದಂತೆ ಭಾಸವಾಗುವ ಕಾಲದಲ್ಲಿ ಸಾಂಗತ್ಯವೇ ವಿರಹ. ಇಂದಿನ ದಿನಗಳಲ್ಲಿ ಜೊತೆಗಿದ್ದವನು ಜೊತೆಗಿಲ್ಲ ಎನಿಸುವುದು, ಹತ್ತಿರವಿದ್ದವರು ದೂರದಲ್ಲಿದ್ದಾರೆ ಎಂದು ಭಾಸವಾಗುವುದು, ನಮ್ಮವರು ನಮ್ಮವರಲ್ಲ ಎಂದು ತೋರುವುದು ಇವೆಲ್ಲ ವಿರಹದ ಲಕ್ಷಣ. ಅಂತಹ ವಿರಹವೇ “ವಿರಹದ ಸಂಕ್ಷಿಪ್ತ ಪದಕೋಶ ” ಎಂಬ ಈ ಕಾದಂಬರಿಯ ಕಥಾವಸ್ತು. ಲೇಖಕ ಜೋಗಿ ಇದರ ಕರ್ತೃ.    ಇದರಲ್ಲಿ ಕೇವಲ ಮೂರು ಪಾತ್ರಗಳು ಮಾತ್ರ ಇವೆ. ವಿಶ್ವಾಸ್ ಕಾರಂತ್, ವಂದನಾ ಮತ್ತು ರಾಜೀವ್. ವಂದನಾಳನ್ನು ವಿಶ್ವಾಸ್ ಮದುವೆಯಾಗಿರುತ್ತಾನೆ. ರಾಜೀವ್ ಇವರಿಬ್ಬರ ಗೆಳೆಯ.  ವಂದನಾ ಈ ಕಾದಂಬರಿಯ ಶಾಪಗ್ರಸ್ತ ನಾಯಕಿ, ಸದಾ ವಿರಹತಪ್ತ ವಿಶ್ವಾಸ್ ಕಾರಂತ್ ಈ ಕಾದಂಬರಿಯ ನಾಯಕ. ಈತ ವಂದನಾಳ ವಿರಹಕ್ಕೆ ಕಾರಣ ಮತ್ತು ಆಕೆ ವೈರಾಗಿಯಾಗಲು ಕಾರಣ ಪುರುಷ. ರಾಜೀವ್ ಇವರಿಬ್ಬರ ಮಧ್ಯೆ ಬಂದು ಹೋಗುವ ಮಿತ್ರ. ಈ ಮೂರು ಪಾತ್ರಗಳಿಗೆ ಕೊನೆಯೂ ಇಲ್ಲ, ನೆಲೆಯೂ ಇಲ್ಲ. ಮನುಷ್ಯನ ಇಂದಿನ ಸ್ಥಿತಿಗೆ ಈ ಕಾದಂಬರಿ ಒಂದು ಅತ್ಯುತ್ತಮ ನಿದರ್ಶನ ಎಂದು ಹೇಳಬಹುದು.  ವಿಶ್ವಾಸ ಎಂಬ ಅರ್ಥಶಾಸ್ತ್ರಜ್ಞ, ರಾಜೀವ್ ಎಂಬ ಉದ್ಯಮಿ, ನೃತ್ಯ ಹಾಗೂ ಸಂಗೀತ ಪ್ರವೀಣೆಯಾದ ವಂದನಾ. ವಿಶ್ವಾಸ ವಿಲಕ್ಷಣ ಮನೋಭಾವನೆಯವನು, ರಾಜೀ...
Image
  ಸಮೃದ್ಧ ಬಾಲ್ಯದ ಅನುಭವಗಳ ‘ಬದುಕಿನ ಕನ್ನಡಿಯಲ್ಲಿ’   ಬದುಕಿನಲ್ಲಿ ಸಮೃದ್ಧವಾದ ಬಾಲ್ಯದ ಅನುಭವಗಳ ಜೊತೆಗೆ ಮಾನವೀಯ ಸಂಬಂಧಗಳ ಸೂಕ್ಷ್ಮಗಳು ಇರುವುದನ್ನು ಲೇಖಕಿ, ಸಹಾಯಕ ಪ್ರಾಧ್ಯಾಪಕಿ,  ಮೇದಿನಿ ಕೆಸವಿನಮನೆ ‘ಬದುಕಿನ ಕನ್ನಡಿಯ’ ಮೂಲಕ ಆಪ್ತವಾಗಿ ಚಿತ್ರಿಸಿದ್ದಾರೆ. ಅವರ ಅಪ್ಪನ ಪ್ರತಿಬಿಂಬ, ಮಲೆನಾಡಿನ ಪ್ರತಿಬಿಂಬ ಮತ್ತು ಬಾಲ್ಯದ ಪ್ರತಿಬಿಂಬ ಇವು ಮೂರು ಈ ಬದುಕಿನ ಕನ್ನಡಿಯಲ್ಲಿ ನಮಗೆ ಕಂಡುಬರುತ್ತವೆ. ಅವು ಮನಸ್ಸಿಗೆ ಮುಟ್ಟಿ, ಹೃದಯಕ್ಕೆ ತಲುಪುತ್ತವೆ.  ಬದುಕಿನ ಪ್ರತಿಕ್ಷಣದಲ್ಲೂ ಅಪ್ಪನ ಬಿಂಬವನ್ನು ಕಾಣುತ್ತಾ, ತಮ್ಮ ಜೀವನ ಅನುಭವದ ಸುಖ, ದುಃಖ, ನೋವು, ನಲಿವುಗಳ ಜೊತೆಗೆ ವ್ಯಕ್ತಿಯ ಬದುಕು, ಸಮಾಜದ ಬದಲಾವಣೆ, ಮೌಲ್ಯಗಳ ಮಹತ್ವ, ಸಂಬಂಧಗಳ ತಂತುವನ್ನು ನವಿರಾಗಿ ಬೆಸೆಯುತ್ತ ಸಾಗುವ ಈ ಕೃತಿ ಮನುಷ್ಯನ ಒಳಜಗತ್ತನ್ನು ಶ್ರೀಮಂತಗೊಳಿಸುವ ನಿಜವಾದ ಬದುಕಿನ ಕನ್ನಡಿ ಆಗಿದೆ. ಈ ಕೃತಿಯಲ್ಲಿ ೩೫ ಬರೆಹಗಳಿವೆ. ಇವು ಒಂದಕ್ಕೊಂದು ಪೂರಕವಾಗಿಲ್ಲ. ಪ್ರತಿ ಲೇಖನದಲ್ಲೂ ಖುಷಿ, ನೋವು, ಬೇಸರ, ಸಮಸ್ಯೆ, ಜಗಳ ಮುಂತಾದ ವಿವಿಧ ಮುಖಗಳಿವೆ. ಈ ಮುಖಗಳನ್ನು ಕನ್ನಡಿಯಲ್ಲಿ ನೋಡಿದಾಗ ಕಾಣುವ ಪ್ರತಿಬಿಂಬ ತನ್ನ ಅಪ್ಪನದು ಎಂದು ಲೇಖಕಿ ಹೇಳುತ್ತಾರೆ.  ಬದುಕಿನ ಪ್ರತಿ ಸನ್ನಿವೇಶದಲ್ಲೂ ಅಪ್ಪನೇ ಎದುರಾಗುವುದು, ನನ್ನ ಬದುಕಿನ ಕನ್ನಡಿಯಲ್ಲಿ ಕಾಣುವುದು ಅಪ್ಪನದೇ ಬಿಂಬ, ಅಪ್ಪನೇ ಹೀರೋ, ಗೆಳೆಯನಾಗಿ ಮಾರ್ಗದರ್ಶಿಯಾಗಿ, ತಾಳ್ಮೆಯ...