Posts

Showing posts from April, 2026
Image
 ಪ್ರೀತಿಯಿಂದ ಓದುಗನನ್ನು ಕರಗಿಸುವ  ‘ಪ್ರೀತಿಯ ಚಿಟ್ಟೆಯ ಬೆನ್ನೇರಿ’  ‘ಪ್ರೀತಿಯ ಕಿಟ್ಟೆಯ ಬೆನ್ನೇರಿ’ ಇದು ಕವಯತ್ರಿ ಮಂಗಳಾ ಎಂ. ನಾಡಿಗ್ ರಚಿಸಿರುವ  ಭಾವ ಕವಿತೆಗಳ ಸಂಕಲನ. ಇದರಲ್ಲಿ ಮೃದು ಮತ್ತು ಮಧುರವಾದ ಭಾವನೆಗಳ ಕವನಗಳಿವೆ. ಹೂವು, ಕಾಡು, ಪ್ರಕೃತಿ, ನದಿ, ಚಂದ್ರ, ಸೂರ್ಯ, ನೀಲಾಕಾಶ, ಮಗು, ಬೆಳದಿಂಗಳುಗಳಿಂದ ತುಂಬಿದ ರಮ್ಯಲೋಕವನ್ನು ತಮ್ಮದೇ ಭಾವನಾ ಲಹರಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.  ಇಲ್ಲಿ ಮಗುವಿದೆ, ಮೊಮ್ಮಗು ಇದೆ, ಅವರ ನಗುವಿದೆ, ಕೌಟುಂಬಿಕ ಮೌಲ್ಯವನ್ನು ನಿಷ್ಕಲ್ಮಶ ಪ್ರೀತಿಯಿಂದ ಉಳಿಸುವ, ಉಳಿಸುತ್ತಿರುವ ಹೆಣ್ಣುಮಕ್ಕಳ ಹೃದಯವಂತಿಕೆ ಇದೆ. ಸರಳ ಹೃದಯದ ತಾಯಂದಿರ ಪ್ರೇಮ, ಮಮತೆ, ಲಾಲನೆ -ಪಾಲನೆಗಳಿಂದ ಕೂಡಿದ ಕುಟುಂಬ ವ್ಯವಸ್ಥೆ ಇದೆ.  ಯಾವುದೇ ಕಾವ್ಯ ಸಿದ್ಧಾಂತಗಳು ಇಲ್ಲಿ ಕಂಡುಬರುವುದಿಲ್ಲ. ತನ್ನ ಪ್ರೀತಿಯಿಂದ ಓದುಗನನ್ನು ಕರಗಿಸುವ ಕವನಗಳು ಇಲ್ಲಿವೆ. ಸಹಜವಾದ ನಿಸರ್ಗದ ಕವನಗಳಿವೆ. ಈ ಕೃತಿಯಲ್ಲಿ ಒಟ್ಟು ೫೦ ಕವನಗಳಿವೆ.  ತನ್ನ ನಲ್ಲನಿಗೆ ಒಲವಧಾರೆಯನ್ನು ತೆರೆಯುತ್ತ, ಸುತ್ತಮುತ್ತಲಿನ ಕತ್ತಲನ್ನು ಕಳೆದು ಬೆಳಕನ್ನು ನೀಡುವ ಹಣತೆಯ ಬೆಳಗನ್ನು, ಅದರ ಹೊಳಪನ್ನು ತನ್ನ ಇನಿಯನ ಕಣ್ಣಲ್ಲೇ ಕಾಣುವ ನಲ್ಲೆಯ ಕವನ ‘ಒಲವ ದಾರಿ’. ಇದರಲ್ಲಿ ಕವಯತ್ರಿ, ನಲ್ಲನ ಕಣ್ಣಿನ ಹೊಳಪು ಹಣತೆಯ ಬೆಳಕಿನಷ್ಟೇ ಪ್ರಖರವಾಗಿ ಆಕೆಗೆ ಕಾಣುತ್ತಿದೆ . ಅದಕ್ಕಾಗಿ ಆಕೆ ಹೇಳುತ್ತಾಳೆ ‘ನಿನ್ನ ಕಣ...
Image
 ವ್ಯಕ್ತಿಗೆ ಶಾಂತಿ, ಆನಂದಗಳನ್ನು ಕಲ್ಪಿಸುವ ‘ಕಲಾ ಸಿದ್ಧಾಂತ’  ವಿ. ಕೃ. ಗೋಕಾಕ್ ಅವರ ಮಹತ್ವದ ಕೃತಿಗಳಲ್ಲಿ ‘ಕಲಾ ಸಿದ್ಧಾಂತ’ ವೂ ಒಂದು. ಈ ಕೃತಿಯು ಕಲೆಗೆ ಮತ್ತು ಅದರ ರಸಾಸ್ವಾದನೆ, ಕಲೆಯಿಂದಾಗವ ಉಪಯೋಗ, ಅದು ಸಾಮಾನ್ಯ ಮನುಷ್ಯನ ಮೇಲೆ ಬೀರುವ ಪ್ರಭಾವಗಳ ಕುರಿತಾದದ್ದು. ಸಾಹಿತ್ಯಾಭ್ಯಾಸಿಗಳಿಗೆ ಮಾರ್ಗದರ್ಶಿ ಕೃತಿ. ಕಲಾ ಸಿದ್ಧಾಂತದಲ್ಲಿ ಜೀವನ ಅನುಭವದಿಂದ ಪ್ರಜ್ಞೆಯು ಪರಿಶುದ್ಧವಾಗಿ, ಸ್ವಾರ್ಥವನ್ನೆಲ್ಲ ಅಳಿದು, ವ್ಯಕ್ತಿಯು ಶಾಂತಿ, ಆನಂದಗಳನ್ನು ಅನುಭವಿಸುವುದರ ಕುರಿತಾಗಿ ಇದೆ.  ಜನರ ಅಂತಃಪ್ರಜ್ಞೆಗೆ ಉಚಿತ ಸಂಸ್ಕಾರಗಳನ್ನು ಕೊಡುವುದೇ ಕಲಾಕಾರನ ಕಾರ್ಯವಾಗಿದೆ. ವಿವಿಧ ಪ್ರಕಾರಗಳ ಕಲೆ ಮತ್ತು ಸಾಹಿತ್ಯವನ್ನು ಓದಿದಾಗ ಅವನ ಪ್ರಜ್ಞೆಗೆ ವಿವಿಧ ಸಂಸ್ಕಾರಗಳು ಒದಗಿ ಬರುತ್ತವೆ. ಈ ಪ್ರಜ್ಞೆಯು ಅದ್ಭುತವಾಗಿ ವಿಕಾಸಗೊಳ್ಳಲು ಅನುಕೂಲವಾಗಲು ಬೇರೆ ದೇಶ, ಜನಾಂಗಗಳನ್ನಾಗಲಿ, ಆ  ಕುರಿತು ಬರೆದ ನಾಟಕ, ಕಾದಂಬರಿಗಳನ್ನು ಜನರು ಓದುತ್ತಾರೆ. ಭಾರತೀಯ ಮತ್ತು ವಿದೇಶೀಯ ಕಾವ್ಯಗಳನ್ನು ಓದಿದರೂ ಈ ಚಿತ್ತವಿಕಾಸ ಸಾಮಾಜಿಕನಿಗೆ ಸಾಧ್ಯವಾಗುತ್ತದೆ. ಒಟ್ಟಿನಲ್ಲಿ, ಕಲಾಕಾರ ಬೆಳಗುವ ಹೊಸ ಪ್ರಕಾಶವನ್ನು ಅನುಭವಿಸಿ ವ್ಯಕ್ತಿಯು ಉದ್ದೀಪ್ತನಾಗುತ್ತಾನೆ. ಇದನ್ನು ಈ ಕೃತಿಯಲ್ಲಿ ಮನೋಹರವಾಗಿ ಲೇಖಕರು ಚಿತ್ರಿಸಿದ್ದಾg.  ಪ್ರಪಂಚದ ಇಲ್ಲವೇ ಒಂದು ವಸ್ತುವಿನ ಅನಂತತೆಯನ್ನು ಕಲಾಕಾರ ತೋರಿಸಿದಾಗ ವ್ಯಕ್ತಿಯ ಪ್ರಜ್ಞೆಯು ಪ್ರಕಾಶ...
Image
  ದೂರ ಸರಿದರು  ಇದು   ಕಾದಂಬರಿಕಾರ ದಿವಂಗತ ಎಸ್. ಎಲ್.  ಭೈರಪ್ಪ ಅವರ ಮನೋವೈಜ್ಞಾನಿಕ ಕಾದಂಬರಿ. ಇದರಲ್ಲಿ ಕಾಲೇಜು ಕಲಿಕೆಯ ಅವಧಿಯಲ್ಲಿ ಸಾಹಿತ್ಯ, ತತ್ವಶಾಸ್ತ್ರ, ಮನೋವಿಜ್ಞಾನದ ವಿದ್ಯಾರ್ಥಿಗಳು ಆತ್ಮೀಯರಾಗಿ ಕಲಿಯುವುದು, ಚರ್ಚಾಕೂಟ, ಉಪನ್ಯಾಸ, ಸಂವಾದಗಳಲ್ಲಿ ಒಂದಾಗುವುದು, ಇಂಥ ಸಂದರ್ಭದಲ್ಲಿ ಪರಸ್ಪರರಲ್ಲಿ ಆಕರ್ಷಣೆಯ ಸೆಳೆತದಿಂದ ಪ್ರೀತಿ, ಪ್ರೇಮ ಮೊಳೆತು ಅದು ಮದುವೆಯ ಹಂತದವರಗೆ ಹೋಗುವುದು, ಇಂಥ ಸಂದರ್ಭದಲ್ಲಿ ಜಾತಿ, ವೈಯಕ್ತಿಕ ಮೊಂಡುತನ, ಬೌದ್ಧಿಕತೆ ಹೇಗೆ ಅವರನ್ನು ದೂರಸರಿಸುತ್ತದೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ.  ಜೀವನದ ಪ್ರೀತಿಯಲ್ಲಿ ಸಮಾಜಕ್ಕೆ ಅಂಜುವುದು, ಕುಟುಂಬದವರಿಗೆ ಗೊತ್ತಾಗದಂತೆ ಒಬ್ಬರ ಮನೆಗೆ ಒಬ್ಬರು ತೆರಳುವುದು, ಪ್ರವಾಸಕ್ಕೆ ಹೋಗುವುದು, ಪ್ರೀತಿಯ ವಿಷಯವನ್ನು ಮುಚ್ಚಿಡುವುದು, ಅಂತ್ಯದಲ್ಲಿ ಅದು ಬೆಳಕಿಗೆ ಬಂದಾಗ ಸಮಸ್ಯೆ ಎದುರಾಗುವುದು ಇದರಲ್ಲಿ ಪ್ರಧಾನವಾಗಿ ಕಂಡುಬರುತ್ತದೆ. ಎರಡು ಜೋಡಿ ಪ್ರೇಮಿಗಳು, ಅವರ ತಾಕಲಾಟ, ಒಂದು ಜೋಡಿಗೆ ಮನೆಯಲ್ಲೊಪ್ಪದ ಪ್ರೀತಿ, ಮತ್ತೊಂದು ಜೋಡಿ ಗೆ ಒಪ್ಪಿಗೆ ಸಿಕ್ಕರೂ ಮದುವೆ ನಿಶ್ಚಯ ಮುಂದೂಡುವುದು. ಕೊನೆಯಲ್ಲಿ ಎಲ್ಲರೂ ಮದುವೆಯಾದರೆ? ಯಾರು ಯಾರನ್ನು ಮದುವೆಯಾದರು, ಒಂಟಿಯಾದವರ ಕಥೆ ಏನಾಯಿತು, ಇವರೆಲ್ಲ ಕೆಲಸಕ್ಕೆ ಸೇರಿದರೇ? ಯಾವ ಊರಿನಲ್ಲಿ ನೆಲೆಗೊಂಡರು ಎನ್ನುವುದನ್ನು ಈ ಕಾದಂಬರಿಯ ಅಂತ್ಯದಲ್ಲಿ ಗಮನಿಸಬಹುದು. ಹೀಗೆ ಊಹಿಸಲಾ...
Image
 ತುಂಟ ಕಿರುನಗೆ ಮೂಡಿಸುವ  ‘ಸೆಲ್ಫೀ’  ಸಹಜ ಹಾಸ್ಯದ,  ವಿನೋದ ಶೈಲಿಯ, ವಿಶಿಷ್ಟ ಜೀವಂತಿಕೆಯ ಲೇಖನಗಳ ಗುಚ್ಛ ಸೆಲ್ಫೀ. ಬರಹಗಾರ್ತಿ ನಳಿನಿ ಭೀಮಪ್ಪ  ಸ್ಫಟಿಕ ಶುದ್ಧ ಹಾಸ್ಯದ  ಮೂಲಕ  ಜೀವನದಲ್ಲಿನ ದಿನನಿತ್ಯದ ಆಗುಹೋಗುಗಳನ್ನು, ಅನುಭವಿಸಿದ ಸಂಗತಿಗಳನ್ನು ವಕ್ರನೋಟದ ಮೂಲಕ ನಿರೂಪಿಸಿದ್ದಾರೆ. ಅವರ ಸರಳ ಶಬ್ದದ, ಬರವಣಿಗೆಯ ಕೌಶಲ್ಯ ಅಚ್ಚರಿ ಮತ್ತು ಸಂತಸವನ್ನುಂಟು ಮಾಡುತ್ತದೆ.  ‘ನಮ್ದೇ ಪ್ರಪಂಚ’ ಎಂಬ ಅಡಿಬರಹವನ್ನು ಕೃತಿಗೆ ಕೊಟ್ಟಿದ್ದಾರೆ. ನಿಜಕ್ಕೂ ಇದು ಹೌದು.  ನಮ್ಮ ಸುತ್ತಮುತ್ತಲಿನ ಪ್ರಪಂಚಲ್ಲಿ ನಡೆಯುವ ವಿವಿಧ ಘಟನೆಗಳನ್ನು ಸಹಜ ಹಾಸ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಬಹುತೇಕ ಎಲ್ಲರೂ ಇಂತಹ ಘಟನೆಗಳನ್ನು ಅನುಭವಿಸಿರುತ್ತಾರೆ. ಅದನ್ನೇ   ಹಾಸ್ಯದ ಮೂಲಕ, ಕಿರುನಗೆ, ತುಂಟನಗೆ ಮೂಡುವಂತೆ ಬರೆದಿದ್ದಾರೆ.      ಕೃತಿಯಲ್ಲಿ ೩೨ ಕಿರು ನಗೆಬರಹಗಳಿವೆ. ಇವು ಒಂದಕ್ಕಿಂತ ಛೊಲೊ ಇವೆ. ಪುಸ್ತಕವನ್ನು ಓದಲು ಆರಂಭಿಸಿದರೆ ಒಂದೇ ಸಲಕ್ಕೆ ಎಲ್ಲವನ್ನೂ ಓದಿಸಿಕೊಂಡು ಹೋಗುತ್ತವೆ. ಧಾರವಾಡ ಶೈಲಿಯ ಕನ್ನಡದಲ್ಲಿ ಲೇಖನಗಳು ಇವೆ.  ಪಟ ತೆಗೆಯೋಣ ಬಾರಾ, ಮಾತಾಡ್ ಮಾತಾಡ್ ಮಲ್ಲಿಗೆ, ನೀ... ರಿರಲು ಮನೆಯಲ್ಲಿ..., ಟ್ರಯಲ್ ರೂಂ, ಮುಖವಾಡಗಳ ಕಳಚುವ ಮುಖಪುಸ್ತಕ,  ತೆಲಿ ಇರೋ ಮಟ, ಅಂತೂ ಇಂತೂ... ಮೊದಲಾದ ಬರಹಗಳು  ವಿಶಿಷ್ಟವಾಗಿವೆ. ನಾವು ಅನುಭವಿ...
Image
  ಶಾಲೆಯ ಗಂಟೆಯ ಮಹತ್ವ ಸಾರುವ  ‘ಹೆಡ್ಡಪ್ಪ  ಮತ್ತು ಸರ್ಕಾರಿ ಶಾಲೆ’ ‘ ಹೆಡ್ಡಪ್ಪ  ಮತ್ತು ಸರ್ಕಾರಿ ಶಾಲೆ’ ಇದು ಹಾಲಪ್ಪ ಬೆಳಗುತ್ತಿ ವಿರಚಿತ ಕಿರು ಕಾದಂಬರಿ. ಒಂದು ಕುಗ್ರಾಮದ ಮತ್ತು ನಾಗರಿಕ ಸಮಾಜದಿಂದ ದೂರವಿರುವ ಸರ್ಕಾರಿ  ಶಾಲೆಗೆ ಮುಖ್ಯಾಧ್ಯಾಪಕನಾಗಿ ಬಂದ ಹೆಡ್ಡಪ್ಪ ಎಂಬಾತ ‘ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಜೋರಾಗಿ ಕೇಳಬೇಕು’ ಎಂಬ ಉದ್ದೇಶ ಹೊಂದಿರುತ್ತಾನೆ. ಆದರೆ ಊರವರ ಮೌಢ್ಯ ಮತ್ತು ಅಜ್ಞಾನದಿಂದಾಗಿ ತನ್ನ ಸಮಸಮಾಜದ ಕನಸನ್ನು ನನಸು ಮಾಡಲು ಪ್ರಯತ್ನಿಸಿ ವಿಫಲತೆಯನ್ನು ಕಾಣುವುದು ಪ್ರಸ್ತುತ ಕೃತಿಯ ಸಾರಾಂಶ.    ಗ್ರಾಮೀಣ ಭಾರತದ, ವಿಶೇಷವಾಗಿ ಅಕ್ಷರ ಮತ್ತು ಅಜ್ಞಾನದ ನಡುವೆ ನಡೆಯುತ್ತಿರುವ ನಿರಂತರ ಸಂಘರ್ಷದ ಜೀವಂತ ಸಾಕ್ಷ್ಯಚಿತ್ರದಂತೆ ಈ ಕಾದಂಬರಿ ಕಂಡುಬರುತ್ತದೆ. ಜಾತಿಯ ಜಟಿಲತೆ ಹಳ್ಳಿಯಲ್ಲಿ ಮನೆಮಾಡಿಕೊಂಡಿರುವ, ವಿವಿಧ ಮೂಢನಂಬಿಕೆಗಳ ವಿವರ ಇದರಲ್ಲಿದೆ. ಮೌಢ್ಯದ ಕಪಿಮುಷ್ಠಿಯಲ್ಲಿರುವ ಮಂಗಾಪುರ ಎಂಬ ಒಂದು ಶಾಲೆಗೆ ಹೆಡ್ ಮಾಸ್ಟರ್ ಆಗಿ ಹಾಲಪ್ಪ ಎನ್ನುವವನು ವರ್ಗವಾಗಿ ಹೋಗುತ್ತಾನೆ. ಈತನಿಗೆ  ತನ್ನ ಮೂಲವೇ ಗೊತ್ತಿರುವುದಿಲ್ಲ. ಏಕೆಂದರೆ, ಈತ ಅನಾಥ.  ರಸ್ತೆಯಲ್ಲಿ ಸಿಕ್ಕ ಶಿಶುವಾಗಿರುತ್ತ್ತಾನೆ. ನಂತರ ಅನಾಥಾಶ್ರಮದಲ್ಲಿ ಬೆಳೆಯುತ್ತಾನೆ. ೪೦ರ ಆಸುಪಾಸಿನ ಯುವಕ ಹಾಲಪ್ಪ ಸಿಟಿಯಲ್ಲಿ ಸಿಕ್ಕಿದ್ದ ಶಿಕ್ಷಕ ಹುದ್ದೆಯನ್ನು ಬಿಟ್ಟು ಸಮಾಜದ ಕಟ್ಟಕಡೆಯ ಮಕ್ಕಳಿಗೆ ಶಿ...
Image
 ಬಣ್ಣದ ಬದುಕಿನ ಬಾನಾಡಿಗಳ  ‘ರಂಗ ಕರ್ಪೂರ’ ‘ರಂಗಕರ್ಪೂರ’ ಇದು ಪತ್ರಕರ್ತ, ಬರಹಗಾರ ಗಣೇಶ ಅಮೀನಗಡ ಅವರ ಕೃತಿ. ಕರ್ಪೂರ ತನ್ನನ್ನು ತಾನು ಸುಟ್ಟುಕೊಂಡು ಬೆಳಕಿನೊಂದಿಗೆ ಸುವಾಸನೆಯನ್ನು ಕೊಡುತ್ತದೆ. ರಂಗಭೂಮಿ ಕಲಾವಿದರು ತಮ್ಮ ಕಷ್ಟಗಳ ಜೊತೆಗೆ ನೋವುಗಳನ್ನು ನುಂಗಿ, ನಲಿವನ್ನು ಹಂಚುವ ಕರ್ಪೂರದಂತೆ. ಕರ್ಪೂರದಂತಹ ಕಲಾವಿದರ ಬದುಕಿನ ಅನಾವರಣವನ್ನು ಈ ಕೃತಿಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.   ರಂಗಭೂಮಿ ಎನ್ನುವುದು ಹಚ್ಚಿಟ್ಟ ಕರ್ಪೂರದಂತೆ. ಅದರಲ್ಲಿ ಇದ್ದಿಲು ಹುಡುಕಬಾರದು ಎಂದು ರಂಗಕರ್ಮಿ ಎಚ್ ಕೆ ಯೋಗಾನರಸಿಂಹ ಹೇಳಿದ ಮಾತಿದೆ.  ಇದ್ದಿಲು ಎಂದರೆ ಕಪ್ಪು. ರಂಗಭೂಮಿಯಲ್ಲಿ ಸುವಾಸನೆ ಆಸ್ವಾದಿಸಬೇಕು ಎನ್ನುವುದು ಈ ಮಾತಿನ ತಾತ್ಪರ್ಯ. ‘ರಂಗಕರ್ಪೂರ’   ಸುಮಾರು ೨೮ ಕಿರು ಲೇಖನಗಳ ಸಂಕಲನ. ಇದರಲ್ಲಿ ಬರುವ ಬಹುತೇಕ ಕಲಾವಿದರು ನಮಗೆಲ್ಲ ಚಿರಪರಿಚಿತರು. ಜೊತೆಗೆ  ಕೆಲವು ನಾಟಕಗಳ ಬಗ್ಗೆಯೂ ಇದರಲ್ಲಿ ಲೇಖಕರು ವಿವರಿಸಿದ್ದಾರೆ. ಹಲವು ರಂಗಕರ್ಮಿಗಳ ಬದುಕನ್ನು, ಕಲಾವಿದೆಯರು ನಾಟಕವಾಡುವಾಗ ಅನುಭವಿಸುವ ಸಮಸ್ಯೆಯನ್ನು ಇಲ್ಲಿ ತೆರೆದಿಟ್ಟಿದ್ದಾರೆ.  ಸುಭದ್ರಮ್ಮ ಮನ್ಸೂರ್ ರಂಗಗೀತೆಗಳ ಗಾಯಕಿಯಾಗಿ, ನಟಿಯಾಗಿ ಹೆಸರಾದವರು. ಉಸಿರು ಇರುವವರೆಗೂ ರಂಗಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತಾ ಸಂಚರಿಸುತ್ತಿದ್ದರು. ೧೧ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದವರು. ಮುಖ್ಯವಾಗಿ ಪೌರಾಣಿ...
Image
      ಮಕ್ಕಳನ್ನು ಮನರಂಜಿಸುವ  ಹನುಮಂತಣ್ಣ  ಕಥೆ ಹೇಳು  ಮಕ್ಕಳಿಗೆ ಮಾನವ, ಪ್ರಾಣಿ -ಪಕ್ಷಿಗಳ ಮೈತ್ರಿ ಬಗ್ಗೆ ರಂಜನೀಯವಾಗಿ ಕಥೆ ಹೇಳುವುದು ಶಿವಮೊಗ್ಗದ ಮಕ್ಕಳ ಕಥೆಗಾರ ಮತ್ತೂರು ಸುಬ್ಬಣ್ಣ ಅವರ ವಿಶೇಷತೆ. ‘ಹನುಮಂತಣ್ಣ ಕಥೆ ಹೇಳು’ ಇದು ಅವರ ಮಕ್ಕಳ ಕೃತಿಗಳಲ್ಲಿ ಒಂದು. ರಾಮಾಯಣದ ಸುಂದರಕಾಂಡದಲ್ಲಿ ಬರುವ ಕಥೆಯನ್ನು ಇಲ್ಲಿ ಮಕ್ಕಳ ಕಥೆಯನ್ನಾಗಿ ಅವರು ಬರೆದಿದ್ದಾರೆ.  ರಾವಣ ಸೀತೆಯನ್ನು ಲಂಕೆಗೆ ಕದ್ದೊಯ್ದ ನಂತರ ಅವಳನ್ನು ಹುಡುಕುತ್ತಾ ಹನುಮಂತ ಲಂಕೆಗೆ ತೆರಳುತ್ತಾನೆ. ಹಲವು ಪ್ರಯತ್ನಗಳ ನಂತರ ಅಲ್ಲಿ ಸೀತೆಯನ್ನು ಕಾಣುತ್ತಾನೆ. ಲಂಕೆಯಿಂದ ವಾಪಸ್ ಆಗಿ ತನ್ನ ಶೌರ್ಯದ ಬಗ್ಗೆ ಇತರ ವಾನರರಿಗೆ ಕಥೆಯನ್ನು ಹೇಳುತ್ತಾನೆ. ಈ ಕಥೆಯನ್ನೇ ಇಲ್ಲಿ ಮಕ್ಕಳ ಕಥೆಯನ್ನಾಗಿ ಪರಿವರ್ತಿಸಲಾಗಿದೆ. ಹನುಮಂತ ತನ್ನ ಸಾಹಸದ ಕಥೆಗಳನ್ನು ಹೇಳುವುದು, ಕಣ್ಣಾರೆ ಕಂಡು ಹಿಂತಿರುಗುವವರೆಗೂ ತಾನು ಅನುಭವಿಸಿದ ಕಷ್ಟ್- ನಷ್ಟಗಳನ್ನು ವಿವರಿಸುವುದು, ಹನುಮಂತನೇ ಕಥಾನಾಯಕನಾಗಿ ಆತನೇ ತನ್ನ ಬಾಯಿಂದಲೇ ವಿಷಯವನ್ನು ತಿಳಿಸುವುದು ಇಲ್ಲಿ ಬಹಳ ಪ್ರಾಮುಖ್ಯವಾಗಿ ಕಂಡುಬರುತ್ತದೆ. ಇಲ್ಲಿನ ಕತೆ ಮಕ್ಕಳದ್ದಾದ್ದರಿಂದ, ಕೇಳುವರು ಚಿಕ್ಕ ಮಕ್ಕಳಾಗುವುದರಿಂದ ಎಷ್ಟು ಬೇಕೋ ಅಷ್ಟೇ ಕಥೆಯನ್ನು ಇಲ್ಲಿ ಲೇಖಕರು ವಿವರಿಸಿದ್ದಾರೆ. ಒಬ್ಬನೇ ಕಥೆ  ಹೇಳುತ್ತಾ ಹೋಗುವುದರಿಂದ ಬೇಸರ ಬರುವುದನ್ನು ತಪ್ಪಿಸಲು ಮಧ್ಯೆ ಇತರ ವಾನರರು ಪ್ರಶ್ನೆಗಳ...