ಜೀವಾತ್ಮಕತೆಯ ರೂಪದ, ತಿಳಿಹಾಸ್ಯದ ‘ನೆನಪು ಗರಿ ಬಿಚ್ಚಿದಾಗ ’ ‘ನೆನಪು ಗರಿ ಬಿಚ್ಚಿದಾಗ’ ಇದರಲ್ಲಿ ಹತ್ತಾರು ವಸ್ತು ವೈವಿಧ್ಯತೆಯುಳ್ಳ, ಜೀವಾತ್ಮಕತೆಯ ರೂಪದ ನೆನಪುಗಳು ಗರಿ ಬಿಚ್ಚಿಕೊಂಡಿವೆ. ಬರಹಗಾರ್ತಿ ವಿದ್ಯಾ ಶಿರಹಟ್ಟಿಯವರ ಚೊಚ್ಚಲ ಕೃತಿ ಇದು. ಜೀವನದ ವಿವಿಧ ಮುಖಗಳನ್ನು ಹತ್ತಾರು ದೃಷ್ಟಿಕೋನದ ಮೂಲಕ ಇಲ್ಲಿ ಚಿತ್ರಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಕನ್ನಡದಲ್ಲಿ ಇರುವ ಈ ಲೇಖನಗಳನ್ನು ಓದುತ್ತ ಹೋದಂತೆ ನಮ್ಮ ಜೀವನದಲ್ಲಿ ನಡೆದ ಹಾಗೂ ಇತರರಿಂದ ಕೇಳಿದ ಅನೇಕ ಘಟನೆಗಳ ನೆನಪಾಗುತ್ತವೆ. ಪ್ರತಿ ಲೇಖನಕ್ಕೂ ತಿಳಿಹಾಸ್ಯದ ನಂಟಿದೆ. ಫೇಸ್ಬುಕ್‌ನಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿ ಮಿತ್ರರ ಒತ್ತಾಸೆಯ ಮೇರೆಗೆ ವಿದ್ಯಾ ಅವರು ಕೃತಿಯನ್ನು ರೂಪಿಸಿದ್ದಾರೆ. ೨೫ ಲೇಖನಗಳ ಗುಚ್ಛ ಇದು. ಅತಿ ಸರಳ ಭಾಷೆಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುವ, ಸುಲಭದಲ್ಲಿ ಅರ್ಥವಾಗುವಂತಿದೆ. ಈ ಲೇಖನಗಳು ನೈಜ ವಿಷಯವನ್ನು ಹೊಂದಿದ್ದರೂ ಲೇಖಕಿ ಅದನ್ನು ಓದುಗರಿಗೆ ಇಷ್ಟವಾಗುವಂತೆ ನಿರೂಪಿಸಿದ್ದಾರೆ. ಬರಹ ಮನಮುಟ್ಟುವಂತೆ ಕೆಲವಡೆ ಹಿಗ್ಗಿಸಿದ್ದಾರೆ. ಬರಹಗಳನ್ನು ಗಮನಿಸುವುದಾದರೆ. ಬಾಲ್ಯದಲ್ಲಿ, ಯೌವ್ವನದಲ್ಲಿ ಮತ್ತು ಮದುವೆಯಾದ ನಂತರ ವಿವಿಧ ಬಗೆಯಲ್ಲಿ ಗಣಪತಿಯನ್ನು ಚವತಿಯಲ್ಲಿ ಕೂಡಿಸುವ ಪದ್ಧತಿಯನ್ನು ಒಂದೊಂದು ಊರಲ್ಲಿ ಒಂದೊಂದು ರೀತಿಯಲ್ಲಿ ಇರುವುದನ್ನು ವಿಶ್ಲೇಷಿಸಿದ್ದಾರೆ. ಅನುಭವ ಬೇರೆ ಆದರೂ ಎಲ್ಲವೂ ಸುಂದ...