Posts

Showing posts from July, 2026
Image
 ಮದಕರಿ ನಾಯಕನ ದುರಂತ ಕಥೆಯ   ದುರ್ಗಾಸ್ತಮಾನ  ‘ದುರ್ಗಸ್ತಮಾನ’  ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ತ. ರಾ. ಸು. ಎಂದೇ ಹೆಸರಾದ ತಳುಕಿನ ಸುಬ್ಬರಾವ್ ಅವರ ಐತಿಹಾಸಿಕ ಕಾದಂಬರಿಗಲ್ಲಿ ಇದು ಒಂದು.  ಈ ಕಾದಂಬರಿ ಚಿತ್ರದುರ್ಗ ಕೋಟೆಯನ್ನು ಆಳಿದ ವೀರ ಅರಸು ಮದಕರಿ ನಾಯಕನ ಕುರಿತಾಗಿ ಇದೆ. ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ ಅದಾಗಿತ್ತು. ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ್ದರು ಪಾಳೆಯಗಾರರು. ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಂದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣೆಸಿದ ಏಕೈಕ ಗಂಡು ಪಾಳೆಯಗಾರ ಚಿತ್ರದುರ್ಗದ ಮದಕರಿನಾಯಕ. ಮದಕರಿನಾಯಕನ ದುರಂತ ಒಂದು ನಾಡಿನ ದುರಂತ. ಆ ಕಥೆಯನ್ನೇ ಹೇಳುವ ಈ ’ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲವನ್ನು ತ. ರಾ. ಸು. ಇದರಲ್ಲಿ ತೋರಿಸಿದ್ದಾರೆ. ಮುನ್ನುಡಿಯಲ್ಲಿ  ಸ್ವತಃ ತರಾಸು ಅವರೇ ...
Image
 ಸ್ತ್ರೀ- ಪುರುಷ ಸಮಾನತೆಯ ಸಾಕ್ಷಾತ್ಕಾರದ  ‘ಚಿತ್ರಾಂಗದಾ’  ವಿಶ್ವಕವಿ ರವೀಂದ್ರನಾಥ ಠಾಕೂರರ ಏಕಾಂಕ ನಾಟಕ ’ಚಿತ್ರ’ ದ ಕಥೆಯನ್ನು  ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅತ್ಯಂತ ಸೊಗಸಾಗಿ  ಖಂಡಕಾವ್ಯದ ರೂಪದಲ್ಲಿ ಕನ್ನಡೀಕರಿಸಿದವರು ದಿ.  ಜಿ ಎಸ್.  ಶಾಮಣ್ಣ ಅವರು.  ಮಣಿಪುರದ ರಾಜಕುಮಾರಿ ಚಿತ್ರಾಂಗದೆ ಮತ್ತು ಅರ್ಜುನನ ಪ್ರೇಮಕಥೆಯೇ ಈ  ಕೃತಿಯ ಹೂರಣ. ಪ್ರಕೃತಿಪ್ರೇಮ ಮತ್ತು ಮಾನವೀಯ ಮೌಲ್ಯಗಳ ಸಮ್ಮಿಲನದ ಅನಾವರಣವಾಗಿ ತೆರೆದುಕೊಳ್ಳುವ ಈ ಖಂಡಕಾವ್ಯ ತನ್ನ ಓಘ ಮತ್ತು ಲಯಬದ್ಧತೆಯಿಂದಾಗಿ ಸಹೃದಯ ಓದುಗರನ್ನು ಮಂತ್ರಮುಗ್ಧಗೊಳಿಸುತ್ತದೆ.     ಯಕ್ಷಗಾನ,  ಪೌರಾಣಿಕ ನಾಟಕ ಮತ್ತಿತರ ಕಲಾ ಪ್ರಕಾರಗಳಲ್ಲಿ ಚಿತ್ರಾಂಗದೆ ಮಣಿಪುರದ ರಾಜ  ಚಿತ್ರವಾಹನನ ಮಗಳು.  ಅರ್ಜುನನ ಹೆಂಡತಿಯರಲ್ಲಿ ಒಬ್ಬಳು. ಅತ್ಯಂತ ಧೈರ್ಯಶಾಲಿ,  ಸಮರಕಲಾ ನಿಪುಣೆ, ಯೋಧ ರಾಜಕುಮಾರಿ. ಅರ್ಜುನ ವನವಾಸದ ಸಮಯದಲ್ಲಿ ಮಣಿಪುರಕ್ಕೆ ಆಗಮಿಸುವುದು, ಅವಳ ಸೌಂದರ್ಯಕ್ಕೆ ಮಾರುಹೋಗಿ ವಿವಾಹವಾಗುವುದು, ಅವರೀರ್ವರ ಪ್ರೇಮದ ಕುರುಹಾಗಿ ಬಬ್ರುವಾಹನ ಜನಿಸುವುದು ಇತ್ಯಾದಿ.  ಆದರೆ ಇಲ್ಲಿಯ ‘ಚಿತ್ರಾಂಗದೆ’ಯ ಸನ್ನಿವೇಶವೇ ಬೇರೆ. ಮಣಿಪುರದ ರಾಜನಿಗೆ ಗಂಡು ಮಕ್ಕಳಿಲ್ಲದ ಕಾರಣ ಮಗಳನ್ನೇ ಮಗನಂತೆ ಬೆಳೆಸುವುದು, ಯುದ್ಧ ಕಲೆಯಲ್ಲಿ ನಿಪುಣೆಯಾದ ಆಕೆ ರಾಜ್ಯ ರಕ್ಷಣೆಯ  ಹೊಣೆ ಹೊತ್ತುನಿಲ್ಲು...
Image
   ಸ್ವಾನುಭವ ಸಂಕಟದ ಕಥನದ ‘ಸುಚೇಷ್ಟೆ’  ‘ಸುಚೇಷ್ಟೆ’ ಇದು ಪ್ರಾಧ್ಯಾಪಕಿ ಸುಚೇತನಾ ಪೈ ಅವರ ಸ್ವಾನುಭವ ಸಂಕಟಗಳ ಸಂಕಥನ. ಪ್ರಸ್ತುತ ಕೃತಿಯಲ್ಲಿ ಲೇಖಕಿ ತನ್ನ ಜೀವನದಲ್ಲಿ ನಡೆದ ಹಲವು ಅನುಭವಗಳನ್ನು ದಾಖಲಿಸಿದ್ದಾರೆ. ಈ ಜೀವನಾನುಭವಗಳನ್ನು ಸ್ವಲ್ಪ ವಾರೆ ನೋಟದಿಂದ ನೋಡಿದಾಗ ಅದೇ ಆಸಕ್ತಿದಾಯಕ ವಸ್ತುವಾಗಿ ಕಂಡುಬಂದಿದ್ದರಿಂದ ಮತ್ತು ಎಲ್ಲರಿಗೂ ಸಂಭವಿಸುವಂತಹುದಾದ್ದರಿಂದ ಸಾಮಾಜಿಕ ಮನೋಭಾವಕ್ಕೆ ತಕ್ಕಂತೆ ಇಲ್ಲಿ ಚಿತ್ರಿಸಿದ್ದಾರೆ.  ಒಂದು ಕಾಲಿಗೆ ಆರು ಬೆರಳಿನವರಾಗಿರುವ ಲೇಖಕಿ ಇದನ್ನೇ ಇಟ್ಟುಕೊಂಡು ಅದರಿಂದಾದ ಕಷ್ಟ, ನಷ್ಟ, ಸಂಕಟವನ್ನು ವಿನೋದವಾಗಿ, ತನ್ನ ಬಾಲ್ಯದ, ಓದಿನ ಕಾಲದ ನೆನಪಿನ ಬುತ್ತಿ ಬಿಚ್ಚಿ ಬರೆದಿದ್ದಾರೆ. ಇದಕ್ಕೆ  ತೆಳು ಹಾಸ್ಯವನ್ನು ಲೇಪಿಸಿರುವುದು ಓದನ್ನು ಮುಂದುವರೆಸಿಕೊಂಡು ಹೋಗುವಂತೆ ಮಾಡುತ್ತದೆ ಜೊತೆಗೆ ಒಂದಕ್ಕಿಂತ ಒಂದು ಬರಹಗಳು ಕುತೂಹಲವನ್ನು ಕೆರಳಿಸಿ, ಬರುವ ನಗು ತಡೆದುಕೊಂಡು ಓದಬೇಕಾಗುತ್ತದೆ. ಹಾಸ್ಯಮಯವಾಗಿ ತನ್ನ ಸ್ವಾನುಭವ ಸಂಕಟ ಕಥನವನ್ನು ಲೇಖಕಿ ಎಲ್ಲಾ ಮನಸ್ಸುಗಳಿಗೆ ಹಿತವಾಗುವಂತೆ ನೀಡಿದ್ದಾರೆ. ಎಲ್ಲರಿಗೂ ಸ್ಫೂರ್ತಿ ನೀಡುವಂತಹ ಕೃತಿ ಇದು.  ತಮ್ಮ ಅನೇಕ ಬೆರಗುಗಳ ಖಜಾನೆಯನ್ನೇ ನಮ್ಮೆದುರು ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ತಮ್ಮನ್ನು ತಾವೇ ಹಾಸ್ಯ ಮಾಡಿಕೊಂಡು ಬರೆದಿರುವುದರಿಂದ ವಿಶಿಷ್ಟವಾಗಿದೆ. ಇಲ್ಲಿರುವ ಅನುಭವಗಳಲ್ಲಿ ಕೆಲವು ಬಹುತೇಕ ಎಲ್ಲರಿಗೂ ಆಗಿರುವ...
Image
  ಶತಮಾನಗಳ ಹಿಂದಿನ ವಿದೇಶಿ  ಜನಜೀವನ ಕಟ್ಟಿಕೊಡುವ ‘ಸಿಲ್ಕ್ ರೂಟ್’   ‘ಸಿಲ್ಕ್ ರೂಟ್’ ಈ ಕೃತಿಯು ಒಂದು ಪ್ರವಾಸ ಕಥನವೂ ಹೌದು, ಚರಿತ್ರೆಯ ಪುಸ್ತಕವೂ ಹೌದು, ಚಿಂತನೆಗಳ ಗುಚ್ಛವೂ ಹೌದು. ಶತಮಾನಗಳ ಹಿಂದೆ ರೇಷ್ಮೆ ರಸ್ತೆಯ ನಗರಗಳಲ್ಲಿ ಜೀವನ ಹೇಗಿತ್ತು ಮತ್ತು ಈಗ ಹೇಗಿದೆ ಎನ್ನುವುದರ ತುಲನಾತ್ಮಕ ನೋಟ ಇದರಲ್ಲಿದೆ. ರೇಷ್ಮೆ ರಸ್ತೆಯ ಬಗ್ಗೆ ವಿವರವಾದ ಯಾವುದೇ ಆಕರ ಗ್ರಂಥಗಳು ಇಲ್ಲಿಯವರೆಗೆ ದೊರೆತಿಲ್ಲ. ಆದರೆ ಆ ಕೊರತೆಯನ್ನು ಈ ಪುಸ್ತಕ ನೀಗಿಸಲು ಪ್ರಯತ್ನಿಸಿದೆ.  ನಿವೃತ್ತ ಪೊಲೀಸ್ ಅಧಿಕಾರಿ ಡಾ. ಡಿ ವಿ ಗುರುಪ್ರಸಾದ್ ಇದರ ಲೇಖಕರು. ಇದು ಅವರ ೧೦೦ನೆಯ ಕೃತಿಯೂ ಹೌದು. ಪುರಾತನ ರಮ್ಯ, ರಮಣೀಯ ಹಾಗೂ ಕೌತುಕಮಯವಾದ ರೇಷ್ಮೆ ರಸ್ತೆಯನ್ನು ನೋಡಬೇಕೆಂದು ಆಸೆ ಹಲವು ದಶಕಗಳಿಂದಲೂ ಇತ್ತು. ಬಾಲ್ಯದಿಂದಲೇ ಇದ್ದ ಈ ಕುತೂಹಲವನ್ನು ತಮ್ಮ ಸೇವಾ ನಿವೃತ್ತಿಯ ನಂತರ ನೀಗಿಸಿಕೊಂಡಿದ್ದಾಗಿ ಕೃತಿಯಲ್ಲಿ ಅವರು ಹೇಳಿಕೊಂಡಿದ್ದಾರೆ.  ರೇಷ್ಮೆ ರಸ್ತೆ ಅಥವಾ ಸಿಲ್ಕ್ ರೂಟ್ ಎಂಬ ಹೆಸರು ಈ ರಸ್ತೆಗೆ ಬಂದಿದ್ದೇ  ಚೀನಾ ದೇಶದಿಂದ ರೇಷ್ಮೆ ಬಟ್ಟೆಯು ರವಾನೆಯಾಗುತ್ತಿದ್ದ ಕಾರಣದಿಂದ. ಚೀನಿ ಅರಸರು ಮಧ್ಯ ಏಷ್ಯಾ ಕಡೆಯಿಂದ ರಸ್ತೆ ನಿರ್ಮಿಸಿ ಅವುಗಳನ್ನು ವ್ಯಾಪಾರಕ್ಕೆ ಬಳಸಲು ತೀರ್ಮಾನಿಸಿದರು. ತಮ್ಮ ದೇಶದ ರಾಜಧಾನಿಯಾಗಿದ್ದ ಕ್ಸಿಯಾನ್ ನಗರದಿಂದ ಪಶ್ಚಿಮದಲ್ಲಿ ಸುಮಾರು ಒಂದು ಸಾವಿರ ಕಿಲೋಮೀಟರ್ ರಸ್ತೆ ಮಾಡಿದರು. ಈ ರಸ್ತೆಯೇ ಅ...
Image
  ಬದುಕಿನ ತಲ್ಲಣದಿಂದ ಬೆಂದ ಮಹಿಳೆಯ   ‘ಸಾಕು ಈ ಜನಮ’   ತಾಂಡಾದ ಹೆಣ್ಣಿನ ಜೀವನದಲ್ಲಿ ನಡೆದ ಈ ನೈಜ ಘಟನೆಯನ್ನು ಸ್ತ್ರೀವಾದಿ, ಕಾದಂಬರಿಗಾರ್ತಿ ಡಾ. ಶ್ರೀದೇವಿ ರಾಥೋಡ್ ‘ಸಾಕು ಈ ಜನಮ’ದಲ್ಲಿ ನಿರೂಪಿಸಿದ್ದಾರೆ. ಶಾರೀಬಾಯಿ ಎಂಬ ಯುವತಿಯ ಬದುಕಿನ ಚಿತ್ರಣ ಇಲ್ಲಿದೆ. ಎಲ್ಲರಂತೆ ತನ್ನ ಬದುಕನ್ನು ರೂಪಿಸಿಕೊಳ್ಳಲು ಹೋದ ಈಕೆ ಕೆಲವು ಅನಿರೀಕ್ಷಿತ ಘಟನೆಗಳಿಂದ ಜೀವನದಲ್ಲಿ ನೊಂದುಕೊಳ್ಳುವಂತಾಗುತ್ತದೆ.  ಬದುಕು ಬೇಡ ಎನಿಸಿಬಿಡುತ್ತದೆ. ಆದರೂ ತನ್ನ ಬದುಕನ್ನು ಮುನ್ನಡೆಸಲು ಪ್ರಯತ್ನಿಸಿದಾಗ ಅವಳಿಗೆ ಸಮಾಜದಲ್ಲಿ ಅವಮಾನ, ಅಪಮಾನ ಅಲ್ಲದೆ ಬೇರೇನೂ ಸಿಗುವುದಿಲ್ಲ. ಹೆಣ್ಣಿನ ಮನದಾಳದ ದುಃಖವನ್ನು ಯಾರೂ ಅರಿಯುವುದಿಲ್ಲ ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗಿದೆ.  ತನ್ನ ಜೀವನದಲ್ಲಿ ನಡೆದ ಬದುಕಿನ ತಲ್ಲಣದಿಂದಾಗಿ ಬದುಕನ್ನೇ ಅಂತ್ಯಗೊಳಿಸಲು ಹೋದ ಶಾರಿಗೆ ಈ ಸಮಾಜ ಬದುಕಲು ಬಿಡುವುದಿಲ್ಲ. ಮೊದಲು ಅವಳ ನಡತೆಯ ಬಗ್ಗೆ, ನಂತರ ಆಕೆ ಬೆಂಕಿಯಿಂದ ವಿಕಾರವಾದಾಗ ತಾಂಡಾದ ವಾಸಿಗಳು ಕುಹಕವಾಡುತ್ತಾರೆ. ಸಾಮಾಜಿಕ ವ್ಯವಸ್ಥೆಯನ್ನು ನೋಡಿ ಆಕೆ ತುಂಬಾ ಬೇಸರಗೊಂಡು  ಈ ಜನಮ ಸಾಕು ಎಂದು ಹೇಳುತ್ತಾಳೆ. ತನಗಿರುವ ಮೂರು ಚಿಕ್ಕ ಮಕ್ಕಳ ಮುಖವನ್ನು ನೋಡಿ ಅವರಿಗಾಗಿಯಾದರೂ ತಾನು ಜೀವಂತವಾಗಿ ಇರಬೇಕು ಎಂದು ಎಲ್ಲಾ ದುಃಖ-ದುಮ್ಮಾನ, ಕಷ್ಟ -ಕಾರ್ಪಣ್ಯಗಳನ್ನು ಸಹಿಸಿಕೊಂಡು, ಬಂದ ಅವಮಾನವನ್ನು ನುಂಗಿಕೊಳ್ಳುತ್ತಾಳೆ.  ಸ...
Image
  ಸಂಕಷ್ಟ, ತಳಮಳಕ್ಕೆ ಸಿಲುಕಿದ ಹೆಣ್ಣಿನ ಕಥೆಯ   ‘ಆಕ್ಸಿಡೆಂಟ್’  ‘ಆಕ್ಸಿಡೆಂಟ್’ ಈ ಕಿರು ಕಾದಂಬರಿ ಬರೆದವರು ಅನು ಬೆಳ್ಳೆ. ಇದರಲ್ಲಿ ಪತ್ನಿಯಿಂದ ದೂರವಾಗಿ ಮುಂಬೈನಲ್ಲಿ ನೆಲೆಸಿದ ಸ್ಮಗ್ಲರ್ ಮತ್ತೆ ಪತ್ನಿಯನ್ನು ತನ್ನವಳನ್ನಾಗಿ ಮಾಡಿಕೊಳ್ಳಲು ಹೆಣೆದ ಸಂಚಿನ ಕಥನವಿದೆ.    ತನ್ನಿಂದ ದೂರವಾದ ಮೊದಲ ಪತ್ನಿಯನ್ನು ಮತ್ತೆ ತನ್ನೊಟ್ಟಿಗೆ ಸೇರಿಸಿಕೊಳ್ಳಲು ಹಣವಂತನಾದ, ಕಳ್ಳ ಸಾಗಾಣಿಕೆದಾರ ಮಕಾನ್‌ಲಾಲ್  ಎಂಬ ಪತಿ ಏನೆಲ್ಲ ಪ್ರಯತ್ನ ಮಾಡಿದ, ಅದಕ್ಕಾಗಿ ಆತ ಮಾಡಿದ ಸಂಚುಗಳೇನು, ಮೆಡಿಕಲ್ ಕಾಲೇಜು ಡೀನ್ ಆಗಿದ್ದ ತನ್ನ ಪತ್ನಿಯನ್ನು ಯಾವ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಿದ, ನಂತರ ಆತನ ಕೃತ್ಯ ಬೆಳಕಿಗೆ ಹೇಗೆ, ಯಾರಿಂದ ಬಂದಿತು, ಮಕಾನ್‌ಲಾಲ್‌ಗೆ ಪತ್ನಿ ದಕ್ಕಿದಳೇ, ಮೆಡಿಕಲ್ ಕಾಲೇಜು ಡೀನ್ ಮಗಳಿಗೆ ಅಪಘಾತ ಸಂಭವಿಸಿದ್ದು ಹೇಗೆ  ಎನ್ನುವುದನ್ನು ವಿವರಿಸುವ  ಪತ್ತೆದಾರಿ ಕಾದಂಬರಿ ಇದು. ಕಥೆಯ ಸಾರಾಂಶ:    ಮೆಡಿಕಲ್ ಕಾಲೇಜಿನ ಡೀನ್ ಆಗಿದ್ದ ಡಾ|| ಸುಹಾಸಿನಿಗೆ ತಾನು ಇದೇ ಕಾಲೇಜಿನ ಕ್ಲರ್ಕ್ ಎಂದುಕೊಂಡ ಬಂದ ಸಂಹಿತಾ ಎನ್ನುವ ಹುಡುಗಿ ದೂರೊಂದನ್ನು ನೀಡಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ತನ್ನನ್ನು ಊರಹೊರಗೆ ಕರೆದುಕೊಂಡು ಹೋಗಿ ಹಾಳುಮಾಡಿದ ಬಗ್ಗೆ ದೂರುತ್ತಾಳೆ. ದೂರು ಕೊಟ್ಟವಳಿಂದ ಹೆಚ್ಚಿನ ವಿವರವನ್ನೂ ಅವರು ಪಡೆದಿರುವುದಿಲ್ಲ.  ದೂರಿನ ಮೇರೆಗೆ ಇಬ್ಬರು ವಿದ್ಯ...
Image
  ಬದುಕಿಗೆ ದಾರಿದೀಪವಾಗುವ  ‘ಇಪ್ಪತ್ತೇಳು ಹಣತೆಗಳು’   ನಿತ್ಯ ಜೀವನದಲ್ಲಿ ಬೆಳಕಾಗುವ ವೈಚಾರಿಕ ಲೇಖನಗಳ ಈ ಕೃತಿಯನ್ನು ಬರೆದವರು ತೀರ್ಥರಾಮ ವಳಲಂಬೆಯವರು. ಇದರಲ್ಲಿ ವಿಜ್ಞಾನ, ಆಧ್ಯಾತ್ಮ, ಸಾಂಸಾರಿಕ ವಿಷಯಗಳ ಜೊತೆ ವೈಚಾರಿಕತೆಗೂ ಒತ್ತುಕೊಟ್ಟು ಬದುಕಿನ ವಿಸ್ಮಯಗಳನ್ನು ಬಿಡಿಸಿಟ್ಟಿದ್ದಾರೆ. ಅತ್ಯಂತ ಕ್ಲಿಷ್ಟಕರ, ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ಬದುಕಿಗೆ ಹತ್ತಿರವಾಗುವಂತೆ ಹಾಗೂ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬಹುದಾದ ರೀತಿಯಲ್ಲಿ ಸರಳಗೊಳಿಸಿ ಬರೆದಿದ್ದಾರೆ. ಇದರಲ್ಲಿ ಒಟ್ಟು ಕೃತಿ ಹೆಸರಿಗೆ ತಕ್ಕಂತೆ ೨೭ ಲೇಖನಗಳಿವೆ ಇವು ನಮ್ಮ ಬಾಳ ಹಣತೆಗಳಂತೆ ದಾರಿ ದೀವಿಗೆಗಳಾಗಿವೆ. ನಮ್ಮ ಬದುಕಿನಲ್ಲಿ ಯಾವುದೆಲ್ಲ ಅವಶ್ಯವೂ ಅವೇ ಈ ೨೭ ಹಣತೆಗಳಾಗಿವೆ.  ದಿನನಿತ್ಯದ ಬದುಕಿನಲ್ಲಿ ಇತರರ ಬಗ್ಗೆ ಕಳಕಳಿ, ಪ್ರಕೃತಿಯೊಂದಿಗೆ ಪ್ರೇಮ, ಮಾತಿನಲ್ಲೊಂದಿಷ್ಟು ಹಿತನುಡಿ ಖರ್ಚಿಲ್ಲದೆ ದೊರೆಯುತ್ತವೆ. ಇಂತಹವುಗಳನ್ನು ನಾವು ನಡೆಸಿಕೊಂಡು ಹೋದಲ್ಲಿ ಹಣದಿಂದ ಪಡೆಯಲಾಗದ ಆನಂದವನ್ನು ಪಡೆಯಬಹುದೆನ್ನುವುದನ್ನು ‘ಮಾತೆಂಬ ಅದ್ಬುತ ಬಂಡವಾ’ದಲ್ಲಿ ವಿವರಿಸುತ್ತಾರೆ ‘ಕಾಲವೆಂಬ ವಿಸ್ಮಯ’ದಲ್ಲಿ ಬದುಕಿನಲ್ಲಿ ಒಮ್ಮೆ ಬಂದ ಕಾಲ ಮತ್ತೆ ಸಿಗಲಾರದು. ಸುಂದರ ನಾಳೆಯ ಕನಸನ್ನು ಕಾಣುವುದರಲ್ಲಿ ಅರ್ಥ ಇರುವುದಿಲ್ಲ. ಸಮಯವನ್ನು ಅಮೂಲ್ಯ ಎಂದು ಪರಿಗಣಿಸಿದಾಗ ಬದುಕು ಸುಂದರವಾಗುತ್ತದೆ ಎನ್ನುತ್ತಾರೆ. ‘ಬದುಕು ಭಾವನೆ ಮತ್ತು ಸರಿತಪ್ಪುಗಳು’ ...
Image
  ಕೌಟುಂಬಿಕ ಮೌಲ್ಯ ಸಾರುವ  ‘ಮನೆಯೇ ಮಂತ್ರಾಲಯ’ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ಅವಕಾಶವಂಚಿತ ಪ್ರತಿಭೆಗಳಿಗೆ ಏರ್ಪಡಿಸಿದ್ದ ‘ವಾಣಿ ಕೌಟುಂಬಿಕ ಕಥಾ ಸ್ಪರ್ಧೆ- ೨೦೨೪’ರಲ್ಲಿ ಸ್ಪರ್ಧೆಗೆ ಬಂದ ಆಯ್ದ ಕಥೆಗಳ ಸಂಕಲನ  ‘ಮನೆಯೇ ಮಂತ್ರಾಲಯ’. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತು ಕಥೆಗಳಿವೆ. ಶೈಲಜಾ ಸುರೇಶ ಈ ಕೃತಿಯನ್ನು ಸಂಪಾದಿಸಿದವರು. ಈ ಕಥಾ ಸ್ಪರ್ಧೆಗೆ ‘ಮನೆಯೇ ಮಂತ್ರಾಲಯ’ ಎನ್ನುವ ಶೀರ್ಷಿಕೆಯನ್ನು ಕೊಡುವ ಮೂಲಕ ಕೌಟುಂಬಿಕ  ಕಥೆಗಳನ್ನು ಆಹ್ವಾನಿಸಲಾಗಿತ್ತು.  ದಾಂಪತ್ಯದ ಮೌಲ್ಯ, ಕೌಟುಂಬಿಕ ಮೌಲ್ಯ, ತಂದೆ-ತಾಯಿಯ ಮೇಲಿನ ಗೌರವ, ಮಕ್ಕಳನ್ನು ಸಲುಹುವ ರೀತಿ, ಮಕ್ಕಳಿಗೆ ಶಿಕ್ಷಣ, ಮಕ್ಕಳ ಮದುವೆ....  ಮುಂತಾದವುಗ ಬಗ್ಗೆ ಸದಭಿರುಚಿಯ ಕಥೆಗಳು ಇದರಲ್ಲಿವೆ. ಇಲ್ಲಿನ ಕಥೆಗಳು ಕೌಟುಂಬಿಕದ ಸುಗಂಧವನ್ನು ಪಸರಿಸುವಂತಿವೆ. ನಿಜವಾದ ರಸಾನಂದವನ್ನು ಕೊಡುವಂತಿವೆ. ಓದುಗರು ಮೆಚ್ಚುವಂತಹ ಅಪೂರ್ವ ಮೌಲ್ಯವನ್ನು ಹೊಂದಿರುವಂತಹ ಕಥೆಗಳು ಇವು.   ಉದ್ಧರಣ  ರಾಧಿಕಾ ವಿ. ಗುಜ್ಜರ್, ಬೆಂಗಳೂರು ಅವರು ಬರೆದ, ಮೊದಲ ಬಹುಮಾನ ಪಡೆದ ಕಥೆ ಇದು. ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಮಂಕಾಗಿದ್ದ ಗೆಳತಿ ಲತಾಳನ್ನು ಆಕೆಯ ತಂದೆ- ತಾಯಿ ಮನೆಯಲ್ಲಿ ನಾಯಿ ತರ ಕೂಡಿಹಾಕಿರುತ್ತಾರೆ. ಇವರ ಮನೆಯ ಹತ್ತಿರವೇ ನಾಗು ಎನ್ನುವವರು ಇಸ್ತ್ರಿ ಅಂಗಡಿಯನ್ನು ಇಟ್ಟಿರುತ್ತಾರೆ. ನಾಗು ಮತ್ತು ಲತಾ ಶಾಲೆಯಲ್ಲಿ ಒಟ್ಟಿಗೆ ...
Image
 ಎಲ್ಲಾ ಕಾಲಕ್ಕೂ ಪ್ರಸ್ತುತವಾದ  ‘ಸರ್ವಜ್ಞ ವಚನ  ಸಂಪದ’  ‘ಸರ್ವಜ್ಞ  ವಚನ ಸಂಪದ’ ಈ ಕೃತಿಯನ್ನು ಸಂಗ್ರಹಿಸಿದವರು  ಮಾಗಡಿ ರಂಗನರಸಿಂಹಯ್ಯ ಅವರು. ಇದರಲ್ಲಿ ಸುಮಾರು ೮೦೦ ವಚನಗಳನ್ನು ಅರ್ಥ ಸಹಿತ ವಿವರಿಸಲಾಗಿದೆ. ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎನ್ನಲಾಗಿದೆ. ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರು ೧೬ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.  ಈತನ ವಚನಗಳಲ್ಲಿ ಬಾರದ ವಿಷಯಗಳೇ ಇಲ್ಲ.  ಇದರಲ್ಲಿ ಯಾರನ್ನೂ, ಯಾವುದನ್ನೂ ಬಿಟ್ಟಿಲ್ಲ. ತನ್ನ ಹುಟ್ಟಿನಿಂದ ಹಿಡಿದು  ವಿವರಣೆ ಕೊಟ್ಟಿದ್ದಾನೆ. ಜಾತಿ ಪದ್ಧತಿ, ದೌರ್ಜನ್ಯ, ಶೋಷಣೆ ಹಾಗೂ ಮೌಢ್ಯಗಳೆಂಬ ಅನಿಷ್ಠ ಪದ್ಧತಿಗಳು, ಸಂಪ್ರದಾಯವಾದಿಗಳ ನಡೆ ಸಹಿತ ಎಲ್ಲವನ್ನೂ  ಸರ್ವಜ್ಞ ಕವಿ ಕಟುವಾಗಿ ಟೀಕಿಸಿ ತನ್ನ ತ್ರಿಪದಿಗಳಿಂದ ಝಾಡಿಸುತ್ತಾನೆ. ಆತನೇ ಹೇಳುವಂತೆ ‘ಈ ಲೋಕದಲ್ಲಿ ಕಂಡುದನ್ನು ಖಂಡಿತವಾಗಿ ಹೇಳುತ್ತೇನೆ’ ಎನ್ನುವುದನ್ನು ಈಡೇರಿಸಿದ್ದಾನೆ. ಈ ವಚನ ಅಥವಾ ತ್ರಿಪದಿಗಳು ಸರ್ವರಿಗೂ ಮಾರ್ಗದರ್ಶಕ. ಹಾಗೂ ನೆನೆಪಿಡಲು ತುಂಬಾ ಸುಲಭವಾಗಿವೆ.   ಪ್ರಸ್ತುತ ಕೃತಿಯಲ್ಲಿ  ಸುಮಾರು ೨೧ ವಿಷಯಗಳ ಬಗ್ಗೆ ಸರ್ವಜ್ಞ ಹೇಳಿರುವ ವಚನಗಳನ್ನು ...
Image
 ಗೆಳತಿಯ ಕೊಲೆಗಾರರ ವಿರುದ್ಧದ ಸೇಡಿನ  ‘ಸ್ವಪ್ನದ ಬೆನ್ನೇರಿ’ ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ತನ್ನನ್ನು ತೊಡಗಿಸಿಕೊಂಡಿರುವ ಸಕಲೇಶಪುರ ಮೂಲದ ಕೌಶಿಕ್ ಕೂಡುರಸ್ತೆ ಪ್ರಸ್ತುತ ಪತ್ತೆದಾರಿ ಕಾದಂಬರಿ ‘ಸ್ವಪ್ನದ ಬೆನ್ನೇರಿ’ ಇದರ ಲೇಖಕರು. ಇದರಲ್ಲಿನ ಕಥೆಗಳು ಸರಳವಾಗಿ, ಸುಲಲಿತವಾಗಿವೆ. ನಮ್ಮನ್ನು ಒಮ್ಮೆಲೆ ಓದಿಸಿಕೊಂಡು ಹೋಗುವಂತದ್ದು. ಕಾದಂಬರಿ ಓದಿದ್ದೇ ಗೊತ್ತಾಗುವುದಿಲ್ಲ. ಅಷ್ಟೊಂದು ಕುತೂಹಲವನ್ನು ಹುಟ್ಟುಹಾಕುತ್ತದೆ. ಇಲ್ಲಿನ ಪಾತ್ರಗಳೂ ಸಹ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಥೆಯ ನೇಯ್ಗೆ ಸುಂದರವಾಗಿದೆ. ಕಾಲೇಜು ಮತ್ತು ಅಲ್ಲಿನ ವಿದ್ಯಾರ್ಥಿಗಳು, ಉಪನ್ಯಾಸಕಿ, ಆಕೆಯ ಗೆಳತಿ ಮತ್ತು ಗೆಳತಿಯ ತಂದೆ ಇವರ ಸುತ್ತವೇ ತಿರುಗುವ ನಿಗೂಢತೆ. ಇಷ್ಟೆಲ್ಲ ವಿಶೇಷ ಈ ಕೃತಿಯದ್ದಾಗಿದೆ. ಸ್ವಪ್ನದ ಬೆನ್ನೇರಿ ಹೋದಾಗ ಏನೆಲ್ಲ ನಡೆಯಿತು, ಬೆನ್ನೇರುವ ಸಂದರ್ಭ ಏಕೆ ಎದುರಾಯಿತು, ಎಷ್ಟೆಲ್ಲ ಕೊಲೆ ನಡೆಯಿತು, ಅದನ್ನು ಮಾಡಿದವರಾರು, ಮಾಡಿಸಿದವರಾರು, ಏಕೆ ಮಾಡಿದರು? ಇದಕ್ಕೆಲ್ಲ ಉತ್ತರವೇ ಈ ಕಾದಂಬರಿ. ಕಥಾ ಸಾರಾಂಶ:      ಅಮೆರಿಕದಲ್ಲಿ ಹಿಪ್ನೊಥೆರಪಿಸ್ಟ್ ಆಗಿ ಟ್ರೈನಿಂಗ್ ಅಕಾಡೆಮಿಯಲ್ಲಿ ಲಕ್ಷಗಟ್ಟಲೆ ಸಂಬಳ ಎಣಿಸುತ್ತಿದ್ದ ಜೆಸ್ಸಿಕಾ ತನ್ನ ಗೆಳತಿಯ ಕೊಲೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಡಿದ್ದ ಪ್ಲಾನಿಂಗ್‌ನ  ಕಥೆ ಇದು.  ಜೆಸ್ಸಿಕಾಳಿಗೆ ನೇಹಾ ಪರಿಚಯ ಲೆಸ್ಬಿಯನ...
Image
 ಮರಳಿ ಬಾಲ್ಯಕ್ಕೆ ಹೋದ ಅನುಭವದ ‘ಸವಿನೆನಪುಗಳ ಹಂದರ’  ಜೀವನದಲ್ಲಿ ನಡೆಯುವ ಎಷ್ಟೋ ಅನುಭವಗಳನ್ನು ಸರಳವಾದ ಶಬ್ದಗಳಲ್ಲಿ ಸ್ವಾರಸ್ಯಕರ ವರ್ಣನೆಯ ಮೂಲಕ ಲೇಖಕಿ ವಾಣಿ ರಾಜ್ ‘ಸವಿನೆನಪುಗಳ ಹಂದರ’ದಲ್ಲಿ ಕಟ್ಟಿಕೊಟ್ಟಿದ್ದಾರೆ.  ಹೆಸರಿಗೆ ತಕ್ಕಂತೆ ಕೃತಿಯು ಹಲವಾರು ಸವಿನೆನಪುಗಳನ್ನು ಹೊತ್ತಿರುವ ಒಂದು ಕಥಾ ಸಂಕಲನ. ದೊಡ್ಡವರಾಗುತ್ತಿದ್ದಂತೆ ಜವಾಬ್ದಾರಿಗಳ ನಡುವೆ ಬದುಕು ಸಾಗುವಾಗ ನಮ್ಮ ಬಾಲ್ಯ ಎಷ್ಟು ಚೆನ್ನಾಗಿತ್ತು, ಬಾಲ್ಯ ಮರಳಿ ಬಂದರೆ ಎಷ್ಟು ಚೆನ್ನಾಗಿರುತ್ತದೆ ಎಂಬ ಆಸೆ ಪ್ರತಿಯೊಬ್ಬರಿಗೂ ಕಾಡುತ್ತದೆ. ಆದರೆ ಅದು ಅಸಾಧ್ಯವಾಗಿರುತ್ತದೆ. ಆಗ ಸವಿ ನೆನಪುಗಳ ಮರುಕಳಿಸುತ್ತವೆ. ಮರಳಿ ಬಾಲ್ಯಕ್ಕೆ ಹೋದ ಅನುಭವವನ್ನು ಅವು ಕಟ್ಟಿ ಕೊಡುತ್ತವೆ. ಇಂತಹ ಸುಮಾರು ೩೨ ಕಿರುಬರಹಗಳನ್ನು ಲೇಖಕಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಇಲ್ಲಿನ ಬರೆಹಗಳಲ್ಲಿ ಕೆಲವು ಲಘು ಹಾಸ್ಯದ ದಾಟಿಯಲ್ಲಿ ಸಾಗುತ್ತವೆ. ಮತ್ತೆ ಕೆಲವು  ಜೊತೆ ನವಿರಾದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಈಗಿನ ಮತ್ತು ಅಂದಿನ ಜೀವನದಲ್ಲಿ ಆದ ಬದಲಾವಣೆಗಳನ್ನು ಕಣ್ಮುಂದೆ ಕಾಣುವಂತೆ ಚಿತ್ರಿಸಿದ್ದಾರೆ. ಇವೆಲ್ಲ ನಮ್ಮ ನಿಮ್ಮ ಜೀವನದಲ್ಲಿ ನಡೆದಂತಹ ಬಹುತೇಕ ಘಟನೆಗಳೇ ಆಗಿರುವುದರಿಂದ ಕೃತಿಯನ್ನು ಓದುವಾಗ ಮತ್ತೊಮ್ಮೆ ನಮ್ಮ ಕಣ್ಮುಂದೆ ಇವು ಹಾದು ಹೋಗುತ್ತವೆ. ಬದಲಾವಣೆ ಪರ್ವದಲ್ಲಿ ಅಂದಿನ ಮುಗ್ಧiನಗಳ ಆನಂದ ಈಗಿನ ಜನಾಂಗಕ್ಕೆ ಮರೀಚಿಕೆಯಂತೆ ಕಾಣಬಹುದು...
Image
 ಅಭಿವೃದ್ಧಿಯ ಹೆಸರಿನಲ್ಲಿ ಹಳ್ಳಿಗಳ ವಿನಾಶದ ಕಥೆಯ ‘ಶಿವನ ಡಂಗುರ’    “ಶಿವನ ಡಂಗುರ’ ಜ್ಞಾನಪೀಠ ಪುರಸ್ಕೃತ ಪ್ರೊ.  ಚಂದ್ರಶೇಖರ ಕಂಬಾರರ ಕಾದಂಬರಿ. ಸಮಕಾಲೀನ ಬದುಕಿನ ಪಲ್ಲಟಗಳನ್ನು ಮುಖಾಮುಖಿಯಾಗಿಸಿದ ಇದು ವಿಶಿಷ್ಟ ಕೃತಿ ಮಾತ್ರವಲ್ಲ, ಹೊಸ ದರ್ಶನ ನೀಡುವ ಮಹತ್ವದ ಕಾದಂಬರಿಯೂ ಹೌದು.  ಹಳ್ಳಿಯೊಂದರ ಬದುಕನ್ನು ಚಿಂತಿಸುತ್ತ, ಜಾಗತೀಕರಣದ ಅಪಾಯ, ನಗರ ಕೇಂದ್ರಿತ ಪ್ರಗತಿಯ ಪರಿಕಲ್ಪನೆ, ಜನಪದರ ಅತ್ಮನಾಶ, ನಮ್ಮ ಸೃಜನಶೀಲತೆಯನ್ನು ಕೊಲ್ಲುತ್ತಿರುವ ಅನ್ಯಾಕ್ರಮಣದ ದುರಂತ, ಅಭಿವೃದ್ಧಿ ಹೆಸರಿನಲ್ಲಿ ಈ ನೆಲದ ಅಂತ:ಸತವ್ವನ್ನು ಹೀರುತ್ತಿರುವ ವಿವಿಧ ಯೋಜನೆಗಳ ದುಷ್ಪರಿಣಾಮ -ಹೀಗೆ ಅನೇಕ ಸಂಗತಿಗಳನ್ನು ಕೃತಿ ಚಿತ್ರಿಸುತ್ತದೆ.  ಒಂದು ಕಾಲದ ಶಿವಾಪುರ ಎಂಬ ಗ್ರಾಮದ ಬದುಕಿನಲ್ಲಿ ಭೂಮಿ ಜನರ ತಾಯಿಯಾಗಿತ್ತು. ಎಂಥ ಅಪಾಯದ ಸ್ಥಿತಿಯಲ್ಲೂ ಕಾಪಾಡುವ ಜೀವನ ಮೌಲ್ಯಗಳಿದ್ದವು. ಅವನ್ನು ಉಳಿಸಿಕೊಳ್ಳಬಲ್ಲ ಜನರಿದ್ದರು. ಇಂತಹ ಶಿವಾಪುರದ ಬದುಕಿನಲ್ಲಿ ಯಾಕೆ ಹೀಗಾಯಿತು ಎನ್ನುವುದರ ಹುಡುಕಾಟವೇ ಈ ಕಾದಂಬರಿಯ ವಸ್ತು. ಶಿವಪುರದ ಕೇಂದ್ರ ವ್ಯಕ್ತಿ ಬರಮೇಗೌಡ. ಈತನದು ಗೌಡಾಳಿಕೆಯ ಮನೆತನ. ಯಾವುದೇ ಸಂದರ್ಭದಲ್ಲೂ ಜನರು ಆತನನ್ನು ಬಿಟ್ಟು ಯೋಚಿಸಿದವರಲ್ಲ. ಆದರೆ ಹೆಂಗಸರ ವಿಚಾರದಲ್ಲಿ ಬಹಳ ಕೆಟ್ಟವನಾಗಿದ್ದ. ಜೋಗತಿ ತುಂಗವ್ವನನ್ನು ಮದುವೆಯಾಗಿದ್ದ. ಶಿವಾಪುರದಲ್ಲಿ ಇಂಗ್ಲೀಷ್ ಶಾಲೆ, ಆಸ್ಪತ್ರೆಗಳನ್ನು ಆರಂಭಿಸಬೇಕೆಂದು ಬರಮ...
Image
 ಜನಸಾಮಾನ್ಯರ ಕಥೆಯ ‘ಬೆಸ್ತರ ಕರಿಯ ’  ‘ಬೆಸ್ತರ ಕರಿಯ’ ಪ್ರಸ್ತುತ ಕೃತಿ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅವರ ಕಥಾ ಸಂಕಲನ. ಇದರಲ್ಲಿ  ಸಾಮಾನ್ಯ ಜನರನ್ನು ತಮ್ಮ ಕಥೆಯ ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಅವರಲ್ಲಿಯೂ ಉತ್ತಮ ಗುಣವಿರುವುದನ್ನು ಎತ್ತಿ ತೋರಿಸಿದ್ದಾರೆ. ಅಧಿಕಾರಿಗಳ ಕೆಟ್ಟ ಬುದ್ಧಿ, ಜನರನ್ನು ಸುಲಿಯುವುದು, ಕೂಲಿಕಾರ್ಮಿಕರ ಪರದಾಟ, ಅಧಿಕಾರಿಗಳಿಂದ ಅವರಿಗೆ ಕಿರುಕುಳ, ಊರಿನ ಯಜಮಾನ ಕಾಳಸಂತೆಯಲ್ಲ್ಲಿ ಹಣ ಮಾಡುವುದು, ಲೇವಾದೇವಿ ಮೂಲಕ ಗ್ರಾಮಸ್ಥರನ್ನು ದೋಚುವುದು, ಅಧಿಕಾರಿಗಳನ್ನು ಓಲೈಸಿಕೊಳ್ಳುವುದು, ಹಳ್ಳಿಯ ಮುಗ್ಧರಿಗೆ ಅನ್ಯಾಯ, ಮೋಸ ಮಾಡುವುದು, ಜಪ, ತಪ, ಮಡಿ, ಮೈಲಿಗೆ  ಎನ್ನುತ್ತಾ ಅಸ್ಪೃಶ್ಯತೆ ಆಚರಿಸುತ್ತಿರುವುದು ಮುಂತಾದವು ಇಲ್ಲಿನ ಕಥೆಗಲ್ಲಿ ಕಂಡುಬರುತ್ತದೆ. ತುಂಬಾ ಸರಳ ಶೈಲಿಯ ಬರೆಹದಲ್ಲಿ ನಮ್ಮ ಸುತ್ತಮುತ್ತಲೇ ನಡೆಯುವ ಘಟನೆಗಳನ್ನು ತೆಳು ಹಾಸ್ಯದ ಮೂಲಕ ಚಿತ್ರಿಸಿದ್ದಾರೆ. ತಮ್ಮ ಗ್ರಾಮದ ಸುತ್ತಮುತ್ತಲು ನಡೆದ ಘಟನೆಗಳಿಗೂ ಇಲ್ಲಿ ಸ್ಥಾನ ಕಲ್ಪಿಸಿದ್ದಾರೆ. ಅತಿ ಸುಲಭದಲ್ಲಿ ಓದುಗರನ್ನು ಆಕರ್ಷಿಸುವ, ಓದಿಸಿಕೊಂಡು ಹೋಗುವ ಗುಣ ಈ ಕಥಾ ಸಂಕಲನದಲ್ಲಿದೆ. ಒಟ್ಟೂ ೧ ಕಥೆಗಳು ಇದರಲ್ಲಿವೆ.         ಕಥೆಗಳ ಕುರಿತು:   ಬೆಸ್ತರ ಕರಿಯ   ಇದರಲ್ಲಿ ಕರಿಯ ಎನ್ನುವ ಕೂಲಿಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಬೆಸ್ತರ ಕರಿಯನನ್ನು ನಿಜಕ್ಕೂ ...