ಹೊಸತನದ ಮೆರುಗಿನ ‘ಪಾನಿಪುರಿ ಮತ್ತು ಇತರ ಕಥೆಗಳು’ ‘ಪಾನಿಪುರಿ ಮತ್ತು ಇತರ ಕಥೆಗಳು’ ಇದರ ಕರ್ತೃ ಭಾಗ್ಯರೇಖಾ ದೇಶಪಾಂಡೆ. ಈ ಸಂಕಲನದಲ್ಲಿ ವಿಶೇಷವಾಗಿ ಮಹಿಳೆಯ ಸಂಕಟವನ್ನು ಬಿಂಬಿಸುವ ಕಥೆಗಳಿವೆ. ಸಮಾಜದಲ್ಲಿ ಹೆಣ್ಣು ಯಾವ್ಯಾವ ರೀತಿಯಲ್ಲಿ ನೋವನ್ನು ಅನುಭವಿಸುತ್ತಾಳೆ, ಹೆಣ್ಣುನ ಶೋಷಣೆ ಯಾವ ರೀತಿಯಲ್ಲಿ ಆಗುತ್ತಿದೆ ಎನ್ನುವುದಕ್ಕೆ ಇಲ್ಲಿನ ಕಥೆಗಳು ಸಾಕ್ಷಿಯಾಗಿವೆ. ಇಲ್ಲಿನ ಕಥೆಗಳ ನಿರೂಪಣಾ ಶೈಲಿ, ತಂತ್ರಗಾರಿಕೆ ವಿಶಿಷ್ಟವಾಗಿದೆ. ಸಂಬಂಧಗಳ ಸಂಕೀರ್ಣತೆಯ ಸ್ಪಷ್ಟ ಅವಲೊಕನವಿದೆ. ಒಟ್ಟು ೧೧ ಕಥೆಗಳು ಇದರಲ್ಲಿದ್ದು ಒಂದು ಮತ್ತೊಂದಕ್ಕಿಂತ ವಿಭಿನ್ನವಾಗಿವೆ. ವ್ಯಕ್ತಿಯಿಂದ ವ್ಯಕ್ತಿಗೆ ಬದುಕಿನ ದೃಷ್ಟಿಕೋನ ಬದಲಾಗುವುದು, ಯಾಂತ್ರಿಕತೆಯ ನಡುವೆ ಅನುಭವಿಸುವ ಜೀವಂತಿಕೆ, ಮೂಢನಂಬಿಕೆಯಲ್ಲಿ ಮುಳುಗಿರುವವರ ಮಾನಸಿಕತೆ, ವಿಧವೆಯ ಅಂತರಾಳದ ಇಂಗಿತ... ಹೀಗೆ ಎಲ್ಲ ಕಥೆಗಳು ಕೊನೆಯವರೆಗೂ ಕುತೂಹಲ ಉಳಿಸುತ್ತವೆ. ಕಥೆಗಳತ್ತ ಗಮನಿಸುವುದಾರೆ ಸ್ವಾಮಿಗಳ ದರ್ಶನ: . ಸಮಾಜದಲ್ಲಿ ಮೌಢ್ಯ ಹೇಗೆಲ್ಲ ನೆಲೆಸಿದೆ ಎನ್ನುವುದಕ್ಕೆ ಈ ಕಥೆ. ಊರಿನ ರಾಮನ ದೇವಸ್ಥಾನಕ್ಕೆ ಮಠದ ಸ್ವಾಮಿಗಳು ಚಾತುರ್ಮಾಸಕ್ಕೆ ಬಂದಾಗ ಅಲ್ಲಿ ವಿಧವೆ ಮತ್ತು ರಾಮನ ಭಕ್ತಳಾದ ತುಳಸಕ್ಕನಿಗೆ ಸ್ವಾಮಿಗಳ ದರ್ಶನಕ್ಕೆ ಅವಕಾಶ ಸಿಗದೆ, ಆಕೆಯನ್ನು ಇತರೇ ಭಕ್ತರು ತಳ್ಳಿ, ಬೀಳಿಸಿ ಮಠಾಧೀಶರ ಭೇಟಿಗೆ ಅವಕಾಶ...