ನೆನಪುUಳನ್ನೇ ಹೊದ್ದು ಮಲಗಿದ
‘ಕರಿಮುಗಿಲ ಕಾಡಿನಲ್ಲಿ’
‘ಕರಿಮುಗಿಲ ಕಾಡಿನಲ್ಲಿ’ ಇದು ಕಥೆಗಾರ ಜಯರಾಮಾಚಾರಿ ಅವರ ಮೊಟ್ಟಮೊದಲ ಕೃತಿ. ಇದರಲ್ಲಿ ಅವರ ಅನುಭವಗಳೇ ಕಥೆಗಳಾಗಿವೆ. ಅವರ ನೆನಪುಗಳೇ ಹೊದ್ದು ಮಲಗಿವೆ. ಅತ್ಯುತ್ತಮ ಕಥೆಗಳು ಇದರಲ್ಲಿವೆ.
ನಿರ್ಧಾರ
ಪ್ರೀತಿಸಿ ಮದುವೆಯಾದವಳು ತನ್ನ ಕುಟುಂಬವನ್ನು ಸುಖದಲ್ಲಿಡದೆ, ತನ್ನ ಗಂಡನನ್ನೂ ಪ್ರೀತಿಸದೆ, ತಾನೂ ಸುಖವಾಗಿರದೆ, ಪರರಿಗೂ ಸುಖವಾಗಿರಲು ಬಿಡದೆ ಕುಟುಂಬವನ್ನು ಹಿಂಸಿಸುವಂತಹ ಕಥೆ ಇದು. ಆದರೆ ಆಕೆಯ ಮೇಲಿರುವ ಪ್ರೀತಿ ಗಂಡನಿಗೆ ಮಂಜುಗಡ್ಡೆಯಾಗಿ ಹೊಸ ಜೀವನಕ್ಕೆ ಬುದ್ಧಿ ಮಾತು ಹೇಳುತ್ತದೆ. ಆಕೆಯ ಗಂಡ ಮನೆ ಬಿಟ್ಟು ಹೋಗುತ್ತಾನೆ. ಇದಾದ ಆರು ತಿಂಗಳಿಗೆ ಆತನ ತಂಗಿ ಆಕೆಯ ಗಂಡ ಎಲ್ಲರನ್ನೂ ಬಿಟ್ಟು ಹೋದ. ಅತ್ತಿಗೆ ಅಶ್ವಿನಿ ಜೊತೆ ಇದ್ದಾನೆಯೋ, ಏನಾದರೂ ಆಗಲಿ, ನಳೆ ಇಲ್ಲಿಯೇ ಇರಲಿ ಎಂದು ಯೋಚಿಸುತ್ತಾಳೆ. ಆತ ಖಿನ್ನತೆಯಿಂದ ಬಳಲಿದ ವ್ಯಕ್ತಿ. ಯಾವ ರೀತಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ, ಅದು ಸರಿಯೋ ತಪ್ಪೋ ಎನ್ನುವುದು ಈ ಕಥೆಯಲ್ಲಿದೆ.
ಅವಳು
ಮೈನೆರೆದ ಹುಡುಗಿ ಪ್ರೀತಿಯ ಬಲೆಗೆ ಬಿದ್ದು ಐ ಲವ್ ಯೂ ಎನ್ನುವಷ್ಟರ ಮಟ್ಟಿಗೆ ತನ್ನ ಕಾಮವನ್ನು ಯುವಕನ ಜೊತೆ ಹುಚ್ಚಾಗಿಸಿಕೊಳ್ಳುತ್ತಾಳೆ. ಆತನ ಜೊತೆ ಸರಿಯಾಗಿ ವರ್ತಿಸದೆ ಸಿಟ್ಟಾಗುತ್ತ ಎರಡೇ ತಿಂಗಳಲ್ಲಿ ಇನ್ನೊಬ್ಬ ಯುವಕನನ್ನು ಸೇರಿಕೊಂಡು ಅವನಿಗೂ ನಿಷ್ಠೆ ತೋರದೆ ಬೇರೊಬ್ಬನ ಜೊತೆ ಓಡಿ ಹೋದ ಕಥೆ ಇದು.
ಓಡಿ ಹೋದವಳು
ಓಡಿಹೋದವಳು ವಾಪಸ್ ಬಂದಾಗ ಅವಳಲ್ಲಿ ಸಾಕಷ್ಟು ದೈಹಿಕ ಬದಲಾವಣೆಗಳಾಗಿದ್ದವು. ನಿರೂಪಕರು ಒಂದು ದಿನ ಊರ ಹೊರಗಿನ ಗಣೇಶನ ಗುಡಿ ಹಿಂಭಾಗಕ್ಕೆ ಹೋದಾಗ ಆಕೆ ಬಂದಿರುತ್ತಾಳೆ. ಇಬ್ಬರೂ ಮಾತನಾಡುತ್ತಾರೆ. ನಂತರ ಪರಸ್ಪರ ಕೈಗಳು ಹಿಡಿಯುತ್ತವೆ, ಆದರಿಸುತ್ತವೆ, ಆರಾಧಿಸುತ್ತವೆ, ಆಕ್ರಮಿಸುತ್ತವೆ, ಕೊನೆಗೆ ಆಕ್ರಮಣವಾಗುತ್ತದೆ. ಜೀವನ ಹಾಳಾಯಿತು. ಯೌವ್ವನದಿಂದ ಓಡಿ ಹೋದೆ. ಈಗ ಜೀವನಕ್ಕಾಗಿ ಮತ್ತೆ ಬಂದೆ ಎಂದು ಆಕೆ ಹೇಳುತ್ತಾಳೆ. ಮುಂಚೆ ಕಥೆಯಾಗಿ ಓಡಿದ ಮೇಲೂ ಕಥೆಯಾಗಿ ಮತ್ತೆ ಕಥೆಯಾಗುತ್ತಿದ್ದಾಳೆ ಎಂದು ವಿವರಿಸುತ್ತಾರೆ.
ಹುಚ್ಚ
ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡುತ್ತಿರುವಾಗ ಬಾಲಕ ಏನೋ ಬರೆಯುತ್ತಾ ಕುಳಿತಿರುತ್ತಾನೆ. ಇದನ್ನು ಗಮನಿಸಿದ ಶಿಕ್ಷಕಿ ರಂಗಮ್ಮ ಎದ್ದು ಬಂದು ಅದನ್ನು ನೋಡಿ ಕಿತ್ತುಕೊಂಡಾಗ ಕ್ಷಣಕಾಲ ದಿಗಿಲಾಗುತ್ತಾಳೆ. ಅದರಲ್ಲಿ ಆತ ಬರೆದಿದ್ದು-
ನಾನಿರುವೆ ಇಲ್ಲಿ, ನೀನಲ್ಲೇ ಇರು/ ನಮ್ಮಿಬ್ಬರಲ್ಲಿ ಬೆಚ್ಚಗಿರಲಿ ಪ್ರೇಮ/
ಎಂದು. ಇದು ಅವರಿಗೆ ಅರ್ಥವಾಗುವುದಿಲ್ಲ ಈತ ಮಾಲಿನಿ ಎನ್ನುವ ತನ್ನ ಗೆಳತಿಗೆ ಬಗ್ಗೆ ಈ ರೀತಿ ಕವನ ಬರೆದಿರುತ್ತಾನೆ. ಕಾಲೇಜಿನಲ್ಲಿ ಈತ ಓದುವಾಗ ತನ್ನ ಗೆಳತಿ ಮಾಲಿನಿಯ ಮನೆ ಹತ್ತಿರ ಹಾದು ಹೋಗುತ್ತಾನೆ. ಆಕೆ ನಾಯಿ ಮರಿಯೊಂದಿಗೆ ಆಟವಾಡುತ್ತಿದ್ದಳು. ಅದನ್ನು ನೋಡಿದವನೇ ಅಲ್ಲಿಂದ ಊರಿಗೆ ಹೋಗಿ
‘ನೀ ನನಗೆ ಎಂದೆಂದಿಗೂ ಸಿಗದ ಬಹುಮೂಲ್ಯ ರತ್ನ/ ನಾನೆಂದಿಗೂ ನಿನ್ನವನಾಗದ ಕಸಪೊರಕೆ/ ನೀನಲ್ಲೇ ಇರು. ನಾನು ಇಲ್ಲಿರುವೆ/ ನಮ್ಮಿಬ್ಬರಲ್ಲಿ ಬೆಚ್ಚಗಿರಲಿ ಪ್ರೇಮ/
ಎಂದು ಬರೆಯುತ್ತಾನೆ. ರಾತ್ರಿ ಶಿಕ್ಷಕಿ ರಂಗಮ್ಮನಿಗೆ ಅವನೆಲ್ಲಿ ಹೋದ ಎಂಬ ಕನಸು ಬೀಳುತ್ತದೆ. ಅದರ ಯೋಚನೆಯಲ್ಲೇ ಬೀಳುತ್ತಾರೆ.
ಆಕೆ ನನ್ನ ತಿರಸ್ಕರಿಸಿದ ದಿನ
ನಿರೂಪಕರನ್ನು ಆಕೆ ಪ್ರೀತಿಸಿದ ಮತ್ತು ತಿರಸ್ಕರಿಸಿದ ದಿನ ಅಂದಾಗಿರುತ್ತದೆ. ಅದರ ನಿಮಿತ್ತ ಮಿತ್ರರಿಗೆ ಪಾರ್ಟಿ ಏರ್ಪಡಿಸಿರುತ್ತಾರೆ. ಅತಿಯಾಗಿ ಕುಡಿದು ಅವಳನ್ನು ಮರೆಯಲು ಯತ್ನಿಸುತ್ತಾರೆ. ಮನೆಗೆ ಹೋಗಿ ಮಲಗುತ್ತರೆ. ನಂತರ ಕಾರಿಕೊಳ್ಳುತ್ತಾರೆ. ಆದರೆ ಅವಳ ನಗುಮುಖ ಮತ್ತೆ ಮತ್ತೆ ನೆನಪಾಗುತ್ತದೆ.
ಅನೂಹ್ಯ
ಜೀವನದಲ್ಲಿ ಪ್ರಭಾವ ಬೀರಿದ ಹುಡುಗಿಯ ಮುಂಗುರುಳು ಕುರಿತ ಕಥೆ ಇದು. ಆ ಒಂದು ಮುಂಗುರುಳು ನಿರ್ವಾಹಕರಲ್ಲಿ ವಿದ್ಯುತ್ ಪ್ರವಾಹದಂತೆ ಅಡ್ಡಾದಿಡ್ಡಿ ಹರಿದಾಡಿತ್ತು. ಅವರ ಪ್ರಜ್ಞೆಯನ್ನು ತಪ್ಪಿಸಿತ್ತು. ಹಸಿರು ಬಣ್ಣದ ಸೀರೆಯುಟ್ಟ ಶಾಲೆಯ ಗೆಳತಿ ಶಾರದಾ ಪೂಜೆ ದಿನ ಅದ್ಭುತ ಸೌಂದರ್ಯದ ಮೂಲಕ ಮೈತಳೆದು ನಿಂತಿರುತ್ತಾಳೆ. ಮುಂಗುರುಳು ನೋಡಿ ಮೂರ್ಛೆ ಹೋಗುತ್ತಾರೆ. ಮತ್ತೆ ಆ ಹುಡುಗಿಯ ಮುಂಗುರುಳು ನೆನಪಾಗುತ್ತದೆ. ಮಗದೊಮ್ಮೆ ಮದುವೆಯೊಂದರಲ್ಲಿ ಭೇಟಿಯಾಗುತ್ತಾಳೆ. ಮುಂಗುರುಳು ನೆನೆಪಾಗುತ್ತದೆ. ಇಂದಿಗೂ ಅವಳು ಪ್ರಶ್ನೆಯಾಗಿಯೇ ಉಳಿದಿದ್ದಾಳೆ.
ಕರಿಮುಗಿಲುಗಳ ನಡುವೆ
ಈ ಕಥೆಯಲ್ಲಿ ಬೆಂಗಳೂರಿನಿಂದ ನಾಗರಿಕತೆಯ ತುದಿಯಲ್ಲಿರುವ ದಟ್ಟ ಕಾಡಿನ ಪುಟ್ಟ ಮನೆಗೆ ಲೇಖಕರು ಬಂದು ವಾಸವಾಗುತ್ತಾರೆ. ಹಳ್ಳಿಯ ವಿಚಿತ್ರ ಜೀವನ, ಹರಿಯುವ ನದಿ, ಅವುಗಳ ಕಲರವ, ನರಿಗಳ ಊಳಿಡುವಿಕೆ, ಹೆದರುವ ಅಮ್ಮ ಇವೆಲ್ಲ ವಿಶೇಷ ಅನುಭವ ಕೊಡುತ್ತದೆ. ಜೀವನದ ದೈನಂದಿನ ಜಂಜಡದಿಂದ, ಭಾರವಾದ ಥಿಯರಿಗಳಿಂದ, ಅರ್ಥವಿಲ್ಲದೆ ಅಲೆದಾಡುತ್ತಿರುವ ಸೋಗಿನಿಂದ, ನಮಗೆ ಸಣ್ಣನೆಯ ವಿಶ್ರಾಂತಿ ಬೇಕಿದ್ದರೆ ಇಂತಹ ಕರಿಮುಗಿಲ ಕಾಡಿಗೆ ಬರಬೇಕು. ನದಿಯ ಸದ್ದು ಇದೆ. ಪಕ್ಕದಲ್ಲಿ ಬಂಡೆ ಇದೆ. ನೀರಿಗಿಳಿದರೆ, ಕಾಡಿಗಿಳಿದರೆ ಅದನ್ನು ಸವಿಯಬಹುದು. ಅಂತಹ ದಟ್ಟ ಕಾಡಿನಲ್ಲಿರುವ ಊರಿನ ವರ್ಣನೆ ಇದರಲ್ಲಿದೆ.
ನನ್ನದಲ್ಲ
ಕಥೆಯಲ್ಲಿ ಸ್ವಾರ್ಥ ಅವಮಾನ, ಗೊಂದಲ ಎಲ್ಲವನ್ನೂ ಗಿರಗಿರನೆ ತಿರುಗಿಸಿ ಹೊರಗೆಸೆಯುವ ಒಂದು ಫ್ಯಾನು ಮನುಷ್ಯನೊಳಗೆ ಇರಬೇಕು ಎನ್ನುವುದನ್ನು ಕತೆಗಾರ ಹೇಳುತ್ತಾನೆ. ದ್ರೋಹ, ಮೋಸ ಸ್ವಾರ್ಥದಿಂದ ಘಾಸಿಯಾದ ಲೇಖಕ ಹೊತ್ತಲ್ಲದ ಹೊತ್ತಲ್ಲಿ ಮನೆಬಿಟ್ಟು ಹೋಗುತ್ತಾನೆ. ಮತ್ತೆ ಮನೆ ಬಿಟ್ಟು ಹೊರಡಲು ತಯಾರಾಗಿದ್ದಾನೆ. ಅವನ ಮನದಲ್ಲಿ ಅವಳ ಬಗ್ಗೆ ಪ್ರೀತಿ ನಿಜವಿರಲಿ, ಆರೋಪ ಸುಳ್ಳಿರಲಿ, ಸಾಯುವವರೆಗೂ ಗೆಳೆಯರು ನನ್ನೊಂದಿಗೆ ಇರಲಿ ಎಂದು ಬಯಸುತ್ತಾ ಕಥೆಯೊಂದನ್ನು ಬರೆದು ಅದಕ್ಕೆ ‘ನನ್ನದಲ’ ಎಂಬ ಶೀರ್ಷಿಕೆ ಇಟ್ಟು ತೆರಳುತ್ತಾನೆ.
ಜಯಂತ
ಮಾನವ ಸಂಬಂಧಗಳ ಬಗ್ಗೆ ಪಿಎಚ್‌ಡಿ ಮಾಡುವ ಲೇಖಕರಿಗೆ ಇದರಲ್ಲಿ ಗಂಡು- ಹೆಣ್ಣಿನ ಸಂಬಂಧ ವಿಚಾರ ತಲೆಕೆಡಿಸುತ್ತದೆ. ಸಂಬಂಧಗಳು ನಶಿಸುತ್ತಿರುವ ಇಂದಿನ ಕಾಲದಲ್ಲಿ ಮರುಮದುವೆಯಾದವರು ನಿಜವಾಗಿಯು ಒಂದಾಗಿರುತ್ತಾರಾ? ಮೈ-ಮನ ಹಂಚಿಕೊಂಡಿರುತ್ತಾರಾ ಎಂಬ ಪ್ರಶ್ನೆ ಲೇಖಕರಲ್ಲಿ ಉದ್ಭವಿಸುತ್ತದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಹಲವು ಮರುವಿವಾಹ ಮಾಡಿಸಿದ್ದರು. ಆ ವಿವಾಹವಾದ ನಾಗೇಂದ್ರರಾಯರನ್ನು ಲೇಖಕರು ಅವರ ಹಳ್ಳಿಗೆ ಹೋಗಿ ಭೇಟಿಯಾಗಿ ಅವರ ಅನುಭವ ಕೇಳುತ್ತಾರೆ. ರಾಯರು ಹೇಳುವ ಕಥೆ ಹೀಗಿದೆ- ತನ್ನ ಮಗ ಜಯಂತ ಮತ್ತು ಆತನ ಗೆಳೆಯ ರಾಜು ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸಿದ್ದರು. ಜಯಂತ ಆಕೆಯನ್ನು ಮದುವೆಯಾಗುವುದಾಗಿ ರಾಜುಗೆ ಹೇಳಿದ್ದ. ರಾಜು ಆಕೆಗೆ ಮುತ್ತು, ಅಪ್ಪುಗೆ ಕೊಟ್ಟಿದ್ದ, ಫೇಸ್‌ಬುಕ್‌ನಲ್ಲಿ ಇಡೀ ದಿನ ಚಾಟ್ ಮಾಡಿದ್ದ. ಈಗ ಜಯಂತ್‌ಗೆ ಅನುಮಾನವೆಂದರೆ ರಾಜು ಆಕೆಗೆ ಕೊಟ್ಟ ಮುತ್ತ್ತು ಮತ್ತು ಅಪ್ಪುಗೆ, ಸುತ್ತಾಟ.
ಜಯಂತನನ್ನು ಕರೆದು ಲೇಖಕರು ಹೇಳುತ್ತ್ತಾರೆ- ಮೂವತ್ತು ವರ್ಷದ ಹಿಂದೆ ನಿಮ್ಮಪ್ಪ ನಿಮ್ಮಮ್ಮನ ಬಳಿ ನೀನು ಇನ್ನೊಬ್ಬನೊಂದಿಗೆ ಮೈ, ಮನ ಎರಡೂ ಹಂಚಿಕೊಂಡಿದ್ದೀಯೆ ಎಂದು ಹೇಳಿ ತಿರಸ್ಕರಿಸಿದ್ದರೆ ನಿಮ್ಮಮ್ಮ ಸುಂದರ ಬದುಕು ಕಟ್ಟಿಕೊಳ್ಳಲಾಗುತ್ತಿತ್ತೇ ಎನ್ನುವುದನ್ನು ಯೋಚಿಸು ಎಂದು ಹೇಳಿ ಹೊರಡುತ್ತಾರೆ.
ಮನವಿ
‘ಮನವಿ’ ಎನ್ನುವ ಗೆಳತಿಗಾಗಿ ಕಾದ ಅಶೋಕ ಕೊನೆಗೂ ಆಕೆ ಸಿಗದೇ ಇದ್ದಾಗ ಆದ ನಿರಾಶೆ, ಹತಾಶೆ, ನೋವು, ಅಳು ಶೂನಭಾವ, ನೆನಪು ಅನುಭವಿಸಿದ ಕಥೆ ಇದು. ಆಕೆ ರಾತ್ರಿ ಕನಸಲ್ಲಿ ಬರುತ್ತಾಳೆ. ಪಾರ್ಕಿನಲ್ಲಿ ಈತನತ್ತ ಬರುತ್ತಾಳೆ. ಕೆಲಸಕ್ಕೆ ಹೋಗುವಾಗ ಆಕೆಯನ್ನು ಫಾಲೊ ಮಾಡುತ್ತಾನೆ. ನೀವ್ಯಾಕೆ ಫಾಲೋ ಮಾಡುತ್ತೀರಿ ಎಂದು ಕೇಳುತ್ತಾಳೆ. ನಂತರ ಆಕೆಗೊಂದು ಮೊಬೈಲ್ ಕೊಡಿಸುತ್ತಾನೆ. ಇದರಿಂದ ಮೊಬೈಲೇ ಇಬ್ಬರ ಹೃದಯವಾಗುತ್ತದೆ. ಆಕೆಗೆ ಮದುವೆಯಾಗುತ್ತದೆ. ಕಾಲ್ ಮಾಡಿದರೂ ಸ್ವಿಚ್ ಆಫ್ ಎಂದು ಬರುತ್ತಿತ್ತು. ೫ ವರ್ಷದ ನಂತರ ಕಾಲ್ ಮಾಡಿದಾಗ ಕಾಲ್ ರಿಸೀವ್ ಆಗುತ್ತದೆ. ಆ ಕಡೆಯಿಂದ ಪುಟ್ಟಿಯೊಂದು ‘ಹಲೊ’ ಎನ್ನುತ್ತಾಳೆ. ಖುಷಿಯಾಗುತ್ತದೆ. ‘ಮನವಿ ಇದ್ದಾರಾ’ ಎಂದಾಗ ಅವರು ಆಫೀಸಿಗೆ ಹೋಗಿದ್ದಾರೆಂದೆನ್ನುತ್ತದೆ ಮಗು. ನಂತರ ಯಾವಾಗ ಕರೆ ಮಾಡಿದರೂ ಸ್ವಿಚ್ ಆಫ್. ಇದರಿಂದ ಬಾರ್‌ನಲ್ಲಿ ಕುಡಿಯುತ್ತ ಕುಳಿತಾಗ ಆತನ ಹೃದಯದಂತೆ ಮೊಬೈಲ್ ಕೂಡಾ ಬಿದ್ದು ಚೂರಾಗುತ್ತದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
..................

Comments
Post a Comment