ಬ್ಯಾಂಕಿನ ರಸವತ್ತಾದ ಘಟನೆಗಳ ‘ಅಸಲು ಫಸಲು’ ಎಸ್‌ಬಿಐ ಮತ್ತು ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ರಾಷ್ಟ್ರೀಕೃತ ಬ್ಯಾಂಕೊಂದರ ಹಿರಿಯ ಅಧಿಕಾರಿಗಳಾಗಿ ನಿವೃತ್ತರಾದ ಎಸ್. ಸೀತಾರಾಮು, ತಮ್ಮ ವೃತ್ತಿ ಜೀವನದ ಅನುಭವಗಳಲ್ಲಿ ನಡೆದ ನೈಜ ಕೆಲವು ಆಯ್ದ ರಸವತ್ತಾದ ಘಟನೆಗಳ ಬಣ್ಣನೆಯನ್ನು ‘ಅಸಲು ಫಸಲು’ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಬ್ಯಾಂಕ್ ಒಡನಾಟದಲ್ಲಿ ಗ್ರಾಹಕರ ಜೊತೆಗಿನ ಸಂಬಂಧ ಕೇವಲ ಹಣಕಾಸಿನ ವ್ಯವಹಾರದ ಶುಷ್ಕ ಪರೀಧಿಯನ್ನು ದಾಟಿ ವೈಯಕ್ತಿಕ ಸ್ನೇಹದ ಹಂತವನ್ನು ತಲುಪಿ, ಪರಸ್ಪರ ದುಃಖ-ಸುಖ ಹಂಚಿಕೆಯ ಮೆಟ್ಟಿಲನ್ನು ಮುಟ್ಟಿರುವುದನ್ನು ಇದರಲ್ಲಿ ಕಾಣಬಹುದು. ಸಾಲ ವಸೂಲಾತಿಯಲ್ಲಿ ಬರುವ ಪ್ರಾಣಭಯದ ಅನುಭವ, ಟ್ರಾವೆಲ್ಸ್ ಚೆಕ್ಕುಗಳಲ್ಲಿ ವಿದೇಶಿ ಮಹಿಳೆಯರ ಮೋಸ, ಹೆಣ್ಣುಮಾಯೆಗೆ ಸಿಕ್ಕು ಮಣ್ಣುಮುಕ್ಕಿದ ಸಹೋದ್ಯೋಗಿ, ಬ್ಯಾಂಕ್ ಸಿಬ್ಬಂದಿಯ ಮೋಸ, ವಯಸ್ಸಾದ ತಂದೆ -ತಾಯಿಗಳ ಹಣವನ್ನೇ ಲಪಟಾಯಿಸುವ ಮಕ್ಕಳು, ಇಂತಹ ಸುಂದರವಾದ ಮಾನವ ಸ್ವಭಾವದ ವಿವಿಧ ಮಜಲುಗಳನ್ನು ಇಲ್ಲಿ ಕಾಣಬಹುದು. ಸೀತಾರಾಮು ಅವರ ಕಥೆಗಳು ಮನುಷ್ಯರಂತೆ ಸಹಜವಾಗಿ ಬದುಕುವಾಗ ಮನುಷ್ಯರು ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ಬಿಂಬಿಸುತ್ತದೆ. ಒಬ್ಬ ಬ್ಯಾಂಕರ್ ಆಗಿ ಇಂತಹ ಘಟನೆಗಳನ್ನು ಕಾಣುವುದು ವಿಶಿಷ್ಟವಾಗಿದೆ. ಬ್ಯಾಂಕಿನ ಒಳಗಿನ ಮತ್ತು ಹೊರಗಿನ ಹಾಗೂ ಸಂಬಂಧಿಸಿದ ಸಂಗತಿಗಳನ್ನು ಸಾಮಾನ್ಯ ಸಂಗತಿಗಳೆಂದು ಕೈಬಿಡದೆ ಒಬ್ಬ ಮ...
Posts
Showing posts from November, 2025
- Get link
- X
- Other Apps
ಸಮಷ್ಟಿ ಪ್ರಜ್ಞೆಯನ್ನು ಸಾರುವ ‘ಯುದ್ಧ ವಿರೋಧಿ ಶಾಂತಿಗೀತೆಗಳು’ ‘ಯುದ್ಧ ವಿರೋಧಿ ಶಾಂತಿ ಗೀತೆಗಳು’ ಈ ಕವನ ಸಂಕಲನವನ್ನು ಬರೆದವರು ಕವಯತ್ರಿ ಸವಿತಾ ನಾಗಭೂಷಣ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರು ಕೃತಿ. ಯುದ್ಧ, ಯುದ್ಧದಿಂದ ಆಗುವ ಅನಾಹುತಗಳು, ಸಂಕಷ್ಟಕ್ಕೆ ಒಳಗಾಗುವ ಜನರು, ಯುದ್ಧಕ್ಕಾಗಿ ಹಪಹಪಿಸುವ ದೇಶಗಳು, ಮನುಷ್ಯತ್ವ ಇಲ್ಲದಂತೆ ವರ್ತಿಸುವ ರಾಜಕಾರಣಿಗಳು, ಯುದ್ಧದ ನಂತರ ಉಂಟಾಗುವ ದುಃಖ, ಸಂತೈಸುವಿಕೆ ಮೊದಲಾದ ವಿಷಯಗಳನ್ನು ಕುರಿತು ಈ ಕೃತಿಯಲ್ಲಿ ೩೦ ಕವನಗಳನ್ನು ಬರೆದಿದ್ದಾರೆ. ಕವನ ಸಂಕಲನದ ಮುಖಪುಟದ ಚಿತ್ರವೇ ಅರ್ಥಗರ್ಭಿತವಾಗಿದೆ. ಯುದ್ಧಕ್ಕೆ ಕಾರಣ ಏನೇ ಇದ್ದರೂ ಅದು ಮಾಡುವುದು ಹಾನಿಯನ್ನೇ. ನಮಗೆ ಯುದ್ಧ ಬೇಡ, ಶಾಂತಿ ಬೇಕು. ಘಾಸಿಗೊಂಡ ಮನಸಿಗೆ ಮರುಚೈತನ್ಯ ಬೇಕು, ಗಾಯಾಳುಗಳಿಗೆ ಸಾಂತ್ವನ ಬೇಕು. ಸೇತುವೆ ಕಟ್ಟುವ ಮೂಲಕ ಒಂದಾಗಿಸಬೇಕು. ಇರುವವರೆಲ್ಲ ನೆಮ್ಮದಿಯಿಂದ ನಿದ್ದೆ ಮಾಡುವವರಾಗಬೇಕು. ಎಲ್ಲರೂ ಕೂಡಿ, ಹಾಡುತ್ತ, ಆಡುತ್ತಾ, ಮನ ಗೆಲ್ಲುವ ಬಗೆಯನ್ನು ಅವಲೋಕಿಸಬೇಕೆಂದು ಕವಯಿತ್ರಿ ಆಶಿಸುತ್ತಾರೆ. ಕೃತಿಯನ್ನು ಓದುವಾಗ ಅಂತ:ಕರಣ, ಆರ್ದ್ರತೆ ಉಕ್ಕಿಬರುತ್ತದೆ. ಮುನ್ನುಡಿಯನ್ನು ಸಹ ‘ಶಾಂತಿ ನೆಲೆಸಿತ್ತು’ ಎನ್ನುವ ಕವನದಿಂದಲೇ ಆರಂಭಿಸಿ, ರಣರಂಗದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಎಲ್ಲೆಡೆ ಕತ್ತಲೆಯೇ ತುಂಬಿತ್ತು. ಚಂದ್ರನ ಬೆಳಕು ಎಲ್ಲವ ವಿವರಿಸುತ್ತಿತ...
- Get link
- X
- Other Apps
ಮೌಲ್ಯಯುತ ಸಂದೇಶ ನೀಡುವ ‘ಭಾವ ಶರಧಿ’ ಜನಸಾಮಾನ್ಯರನ್ನು ಆಕರ್ಷಿಸುವ ಗುಣವನ್ನು ಕವಿತೆ ಹೊಂದಿದೆ. ಇದರಿಂದಲೇ ಕವಿತೆಗೆ ಜನ ಹೆಚ್ಚು ಮಾರುಹೋಗುತ್ತಿದ್ದಾರೆ. ಕವಿಗಳ ಅಥವಾ ಕವನದ ಹೆಸರು ನೆನಪಿರದಿದ್ದರೂ ಜನರ ಬಾಯಲ್ಲಿ ಕವಿತೆಗಳು ಹರಿದಾಡುತ್ತವೆ. ಜನಮನ ಸೂರೆಗೊಂಡು ತಮ್ಮದೇ ಛಾಪು ಮೂಡಿಸುತ್ತವೆ. ಇಂಥಹವುಗಳಲ್ಲಿ ವರಲಕ್ಷ್ಮೀ ಮಂಜುನಾಥ ಅವರ ಕವನಗಳೂ ಸೇರುತ್ತವೆ. ‘ಭಾವ ಶರಧಿ’ ಇದು ನಂಜನಗೂಡಿನ ಕವಯತ್ರಿ ಎಸ್. ಎಲ್. ವರಲಕ್ಷ್ಮಿ ಮಂಜುನಾಥ್ ಅವರ ಕವನ ಸಂಕಲನ. ವೈವಿಧ್ಯಮಯ ವಿಷಯಗಳ ಮೇಲೆ ಬೆಳಕನ್ನು ಚೆಲ್ಲಿದ ಕೃತಿ ಇದು. ಇಲ್ಲಿನ ಕವನಗಳು ಗೇಯಗುಣ ಸಂಪನ್ನವಾಗಿದ್ದು, ಸಾಹಿತ್ಯ ಉತ್ಕೃಷ್ಟವಾಗಿದೆ. ಉಪಮಾ ಮತ್ತು ರೂಪಕಾಲಂಕಾರಗಳನ್ನು ಸಮರ್ಥವಾಗಿ ಬಳಸಿರುವ ಲೇಖಕಿ, ಶಬ್ದ ಲಾಲಿತ್ಯ ಮತ್ತು ಪದಗಳ ಅರ್ಥ ಗೌರವದಿಂದ ಗಮನಸೆಳೆಯುತ್ತಾರೆ. ಕವನ ಸಂಕಲನದಲ್ಲಿ ಸುಮಾರು ಒಂದು ನೂರರಷ್ಟು ಕವನಗಳಿವೆ. ಇಲ್ಲಿ ಅವರು ಬಳಸಿರುವ ಶಬ್ದಗಳ ಪುಂಜ ನಮ್ಮ ಗಮನ ಸೆಳೆಯುತ್ತದೆ. ಈ ಮೂಲಕ ಅತ್ಯುತ್ತಮ ಕವನಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಇದರಲ್ಲಿ ಕನ್ನಡ ನಾಡಿನ ಹಿರಿಮೆ, ಕನ್ನಡದ ಶಬ್ದ ಸಂಪತ್ತು, ಹಬ್ಬಗಳು, ಸಾಧಕರು, ಪ್ರೀತಿ -ಪ್ರೇಮದ ಕವನಗಳು, ಕೃಷ್ಣ, ಸೀತೆ, ಬುದ್ಧ , ಬೇಂದ್ರೆ, ವಿವೇಕಾನಂದ, ಅಂಬೇಡ್ಕರ್, ವಿದ್ಯಾಗುರುಗಳು, ಮಲೆನಾಡು, ಮುಂಗಾರು ಮಳೆ.... ಹೀಗೆ ಸಾಲು ಸಾಲು ವಿಷಯಗಳ...
- Get link
- X
- Other Apps
ತಾರುಣ್ಯದ ಅನುಭವಗಳನ್ನು ಕಟ್ಟಿಕೊಡುವ ‘ಇಂತಿ ಪೂರ್ವಿ’ ............................ ‘ಇಂತಿ ಪೂರ್ವಿ’ ಇದು ಮಧು ವೈ ಎನ್ ಅವರ ಕಾದಂಬರಿ. ಬೆಂಗಳೂರಿನಲ್ಲಿ ಐಬಿಎಂನಲ್ಲಿ ಉದ್ಯೋಗಿ ಆಗಿರುವ ಇವರು, ಈ ಕೃತಿಯನ್ನು ಈ ತಿಂಗಳ ಆರಂಭದಲ್ಲಷ್ಟೇ ಬಿಡುಗಡೆ ಮಾಡಿದ್ದಾರೆ. ಇಲ್ಲಿ ತಾರುಣ್ಯದ ಭಾವಗಳೇ ಪಾತ್ರಗಳು. ಕಾಲೇಜಿನಲ್ಲಿ ಪ್ರೀತಿ- ಪ್ರೇಮ ಎಂದು ತಿರುಗಾಡಿ, ಕೆಲವು ಸಬ್ಜೆಕ್ಟ್‌ಗಳನ್ನು ಬಾಕಿಯಿರಿಸಿಕೊಂಡ ಹಳ್ಳಿಯ ವಿದ್ಯಾರ್ಥಿಗಳು ನಂತರ ಪಾಸು ಮಾಡಿಕೊಂಡರೂ ಜೀವನದಲ್ಲಿ ಹೇಗೆ ಬದುಕುತ್ತಾರೆ. ಅವರ ಕನಸು ನನಸಾಗುತ್ತದೆಯೇ ಎನ್ನುವುದನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಬಾಲ್ಯದ ಮುಗ್ಧತೆ, ತಾರುಣ್ಯದ ಮುಗ್ಧತೆ, ತಾರುಣ್ಯದ ಅನುಭವ ಪ್ರಸ್ತುತ ಕೃತಿಯ ಕಥಾ ವಿಷಯ. ಇಲ್ಲಿ ಪೂರ್ವಿ ಮತ್ತು ಶರತ್ ಕಥಾ ನಾಯಕರು. ಶಾಲಾ ದಿನಗಳಲ್ಲಿ ಪ್ರತಿಭಾನ್ವಿತರಾಗಿ ಅಂಕ ಗಳಿಕೆಯ ಜಿದ್ದಾಜಿದ್ದಿನಲ್ಲಿ ಪರಸ್ಪರ ಎದುರಾಳಿಗಳಾಗಿ, ಕಾಲೇಜು ಸೇರಿದ ಮೇಲೆ ಇಬ್ಬರೂ ಒಂದಾಗುವುದು, ಆಪ್ತರಾಗುವುದು, ಪರಸ್ಪರರ ಕಷ್ಟ -ಸುಖಗಳಲ್ಲಿ ಭಾಗಿಯಾಗುವುದು, ಪ್ರೀತಿಸುವುದು, ಅದು ಪ್ರೇಮಕ್ಕೆ ತಿರುಗುವುದು, ಪೂರ್ವಿ ಬಾಲ್ಯದಲ್ಲೇ ಗೊತ್ತುಪಡಿಸಿದವನ ವಿವಾಹವಾಗುವುದು, ಕಂಪನಿಗಳಲ್ಲಿ ಕೆಲಸ ಸಿಕ್ಕಿದರೂ ಶರತ್ ಕಂಪ್ಯೂಟರ್ ರಿಪೇರಿ ಸೆಂಟರ್ ತೆರೆಯುವುದು, ಪೂರ್ವಿ ಮತ್ತು ಆಕೆಯ ಗಂಡನ ಮಧ್ಯೆ ಕಲಹ, ಗಂಡನ ತುಳಿತದಿಂದ ಅಬಾ...
- Get link
- X
- Other Apps
ಮತ್ತೆ ಮತ್ತೆ ಕಾಡುವ ‘ಅತೀತಭವ’ ಬಾಲ್ಯದ ಮತ್ತು ಮಂಗಳೂರಿನ ಸವಿನೆನಪಿನ ಸಂಸ್ಕೃತಿಯನ್ನು ಬಿಂಬಿಸುವ ಕೃತಿ ‘ಅತೀತಭವ’. ಅಶ್ವಿನಿ ಸುನಿಲ್ ಈ ಕಥಾ ಸಂಕಲನ ಕರ್ತೃ. ಈ ಪುಸ್ತಕದಲ್ಲಿರುವ ಕೆಲವು ಕಥೆಗಳು ಬ್ಲಾಗ್‌ಗಾಗಿ ಬರೆದವಾಗಿವೆ. ಆದರೆ ಸದಾ ಕಾಡುವ ಲವಲವಿಕೆಯ ವಿಷಯಗಳು ಇವು. ಆದುದರಿಂದ ಓದುಗರನ್ನು ಸೆಳೆಯುತ್ತವೆ. ಕಥೆಗಳೆಲ್ಲ ಚಿಕ್ಕ ಎನಿಸಬಹುದಾದರೂ ಅವುಗಳಿಗೆ ಓದುಗರನ್ನು ಸೆರೆಹಿಡಿಯುವ ಶಕ್ತಿ, ರೋಚಕತೆ ಇದೆ. ದಕ್ಷಿಣ ಕನ್ನಡದ ಭಾಷೆ ಅಲ್ಲಲ್ಲಿ ಬಳಕೆಯಾಗಿದೆ. ತನ್ನ ಊರಿನ ಪರಿಸರ, ಅಲ್ಲಿನ ಬಡತನ, ಗಂಡಹೆಂಡತಿಯ ಜಗಳದ ಬದುಕು, ಹಳ್ಳಿಯ ಕ್ಷುದ್ರತೆ ಮೊದಲಾದವುಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ವಿಂಡೋ ಸೀಟ್ ವಿಂಡೋ ಸೀಟ್ ಬೇಕೆಂದು ಹಠ ಹಿಡಿದು ಕುಳಿತಿದ್ದವಳ ಕಿವಿಯೋಲೆಯನ್ನು ರಾತ್ರಿ ಬಸ್ ಪ್ರಯಾಣದ ವೇಳೆ ಚಹಾ ಕುಡಿಯಲು ನಿಲ್ಲಿಸಿದಾಗ ಯಾರೋ ಎಳೆದುಕೊಂಡು ಹೋಗುತ್ತಾರೆ. ಕಿವಿಯೋಲೆಯನ್ನು ಕಳೆದುಕೊಂಡು, ಕಿವಿ ಹರಿದಿದ್ದರಿಂದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಾಗುತ್ತದೆ. ಕಳದೆಹೋದ ಕಿವಿಯೋಲೆಯನ್ನು ಬೇರೆಯವರಿಂದ ಪಡೆದು ಹಾಕಿಕೊಂಡು ಹೋಗಿದ್ದರಿಂದ ಈ ವಿಷಯವನ್ನು ಅವರಿಗೆ ಹೇಳುವುದು ಹೇಗೆ ಎಂಬ ಚಿಂತೆ ಉಂಟಾಗುತ್ತದೆ. ‘ದಯವಿಟ್ಟು ಬೇಸರಿಸಬೇಡಿ’ ಎಂದು ಆ ಮಹಿಳೆಗೆ ಹೇಳುತ್ತಾಳೆ. ಆದರೆ ಧರಿಸಿಕೊಂಡ ಹೆಂಗಸಿಗೆ ಅದು ನನ್ನ ತಂಗಿ ತಂದು ಕೊಟ್ಟ ರೋಲ್ಡ್ ಗೋಲ್ಡ್ ಓಲೆ...
- Get link
- X
- Other Apps
eಲ್ಲರ ಅಮ್ಮನ ಕಥೆ ನೆನೆಪಿಸುವ ‘ನನ್ನವ್ವನ ಬಯೋಗ್ರಫಿ ’ ಬರಹಗಾರರಾಗಿರುವ, ವೃತ್ತಿಯಿಂದ ನಮ್ಮ ಮೆಟ್ರೋದಲ್ಲಿ ಸ್ಟೇಶನ್ ಸೂಪರಿಂಡೆಂಡೆಂಟ್ ಆಗಿರುವ ಜಯರಾಮಾಚಾರಿ ಅವರ ಕೃತಿ ‘ನನ್ನವ್ವನ ಬಯೋಗ್ರಫಿ. ಈಗಾಗಲೇ ಹಲವು ಕೃತಿಗಳನ್ನು ಬರೆದಿರುವ ಇವರು, ಈ ಕೃತಿಯ ಮೂಲಕ ತನ್ನ ಅವ್ವನ ಸಮಗ್ರ ಪರಿಚಯ, ಜೀವನ ಚರಿತ್ರೆ ಕಟ್ಟಿಕೊಟ್ಟಿದ್ದಾರೆ. ಅವ್ವನ ಗುಣಾವಗುಣಗಳು, ಕುಟುಂಬಕ್ಕೆ, ಮಕ್ಕಳಿಗೆ ತೋರುತ್ತಿದ್ದ ಪ್ರೀತಿ, ಕಾಳಜಿ, ಅವರು ಪಟ್ಟ ಕಷ್ಟ, ಗಂಡನಿಲ್ಲದಿದ್ದರೂ ಕುಟುಂಬವನ್ನು ಮಕ್ಕಳೊಂದಿಗೆ ನಿಭಾಯಿಸಿದ ರೀತಿ, ಮಕ್ಕಳು ದೂರವಾದರೂ ಅವರನ್ನು ಕಾಳಜಿಯಿಂದ ಕಂಡಿದ್ದು, ಜಿವನದ ಕೊನೆಯ ಹಂತದಲ್ಲಿ ಕ್ಯಾನ್ಸರ್ ಬಾಧಿಸಿದ್ದು, ಇದರಿಂದ ಸಾಕಷ್ಟು ನೋವುಂಡು ಕೊನೆಗೆ ತಾನು ಕಾಶ್ಮೀರ ಪ್ರವಾಸಕ್ಕೆ ಹೋದಾಗಲೇ ವಿಧಿವಶರಾದ್ದು, ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿದ್ದರವರೆಗೆ ಚಿತ್ರಿಸಿದ್ದಾರೆ. ಕೃತಿಯನ್ನು ಕೈಗೆತ್ತಿಕೊಂಡಾಗ ಪ್ರೀತಿ -ವಾತ್ಸಲ್ಯದಲ್ಲಿ ಮತ್ತು ಬರುವ ಕಷ್ಟಗಳನ್ನೆದುರಿಸುವಲ್ಲಿ ಎಲ್ಲ ತಾಯಂದಿರೂ ಒಂದೇ ಎನ್ನುವುದನ್ನು ನಾವು ಕಾಣುತ್ತೇವೆ. ಮಕ್ಕಳ ಮೇಲೆ ತಾಯಿ ಇಡುವ ಪ್ರೀತಿ, ಶಾಲಾ-ಕಾಲೇಜಿನಿಂದ ಮಕ್ಕಳ ಬರುವಿಕೆಗಾಗಿ ಕಾದು ಕುಳಿತಿರುವುದು, ಅವರು ದೂರದ ಊರಿನಲ್ಲಿದ್ದಾಗ ಪ್ರತಿದಿನ ಫೋನ್ ಕರೆ ಮಾಡಿ ಆರೋಗ್ಯ, ಆಹಾರದ ಬಗ್ಗೆ ವಿಚಾರಿಸುವುದು, ಆಗಾಗ ‘ಹುಷಾರು ಮಗ’ ಎಂದು ಎಚ್ಚರಿಸುವುದು ಮೊದಲಾದವ...
- Get link
- X
- Other Apps
ಬದುಕಿಗೆ ಬೆಳಕು ನೀಡುವ ‘ಮತ್ತೆ ಹಾಡಿತು ಕೋಗಿಲೆ’ ಪತ್ರಕರ್ತರೂ ಆಗಿರುವ ಬರಹಗಾರ ಎ. ಆರ್. ಮಣಿಕಾಂತ್ ಅವರ ಹತ್ತನೆಯ ಕೃತಿ ‘ಮತ್ತೆ ಹಾಡಿತು ಕೋಗಿಲೆ’. ನಿರಂತರ ಪರಿಶ್ರಮ ಮತ್ತು ಹೋರಾಟಕ್ಕೆ ಬಳುವಳಿಯಾಗಿ ಗೆಲುವು ದೊರೆಯುತ್ತದೆ ಎಂಬ ಸಂದೇಶವನ್ನು ಹಲವರ ಮೂಲಕ ಈ ಕೃತಿ ಪ್ರಸ್ತುತಪಡಿಸಿದೆ. ಜೀವನದಲ್ಲಿ ಕಷ್ಟಗಳ ಕುಲುಮೆಯಲ್ಲಿ ಬೇಯುತ್ತಲೇ ಅಮೃತದ ಘಳಿಗೆಗೆ ಹಂಬಲಿಸಿದ ಮತ್ತು ಸೋಲುಗಳ ಸರಪಳಿಯನ್ನು ತುಂಡರಿಸಿ ಗೆಲುವಿನ ಗಾಳಿಪಟವನ್ನು ಮುಗಿಲಿಗೆ ಹಾರಿಬಿಟ್ಟ ಹೃದಯವಂತರ ಕಥೆಗಳು ಇದರಲ್ಲಿದೆ. ೩೧ ಜನರು ತಮ್ಮ ಜೀವನದಲ್ಲಿ ಅಸಾಧಾರಣ ಸಾಧನೆ ಮಾಡಿದ್ದನ್ನು ಇದರಲ್ಲಿ ಲೇಖಕರು ಚಿತ್ರಿಸಿದ್ದಾರೆ. ನಾಡಿನಾದ್ಯಂತ ಅಪಾರ ಜನ ಮೆಚ್ಚುಗೆ ಗಳಿಸಿದ ಕೃತಿ ಇದು. ಇದರಲ್ಲಿರುವ ನತದೃಷ್ಟರು ಅಥವಾ ದುರದೃಷ್ಟವಂತರ ನೋವಿನ ನುಡಿಯನ್ನು ಲೇಖಕರು ಚಿತ್ರಿಸಿದ್ದಲ್ಲದೆ, ಅವರು ಅದನ್ನು ಸಾಧಿಸಿದ ಬಗೆಯನ್ನು ಕೂಡ ವಿವರಿಸಿದ್ದಾರೆ. ನೋವುಂಡವರು, ಅಸಹಾಯಕರು, ಕಲ್ಮಶ ಪ್ರೀತಿಯನ್ನು ಮತ್ತು ಜನಮನವನ್ನು ಗೆದ್ದಿರುವವರನ್ನು ಇಲ್ಲಿನ ಲೇಖನಗಳಲ್ಲಿ ಕಾಣಬಹುದು. ಈ ಕೃತಿಯನ್ನು ಓದುವ ಮೂಲಕ ಬದುಕಿನ ಸಾಧ್ಯತೆಗಳ ಬಗ್ಗೆ ಭರವಸೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ. ಪೆಟ್ಟಿಗೆ ಅಂಗಡಿಯವನ ಮಗಳು ಪ. ಬಂಗಾಳದ ಹೂಗ್ಲಿ ಜಿಲ್ಲೆಯ ಶ್ವೇತಾ ಅಗರವಾಲ್, ಹಣಕಾಸಿನ ಮುಗ್ಗಟ್ಟಿದ್ದರೂ ೯ ಗಂಟೆಗಳ ಕಾಲ ಓದಿ ಯುಪಿಎಸ್ಸಿ ಪಾಸಾದ ವೈಖರಿ ಇದರಲ್ಲಿದೆ. ರೈಲು...
- Get link
- X
- Other Apps
ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪ ನಾಯಕ’ ಇದು ಐತಿಹಾಸಿಕ ಕಾದಂಬರಿ. ಇದನ್ನು ಸಂಗ್ರಹಿಸಿ ಬರೆದವರು ಹೊಸನಗರದ ಅಂಬ್ರಯ್ಯಮಠ. ಕೆಳದಿ ಪರಂಪರೆ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖವಾದದ್ದು. ವೆಂಕಟಪ್ಪ ನಾಯಕ, ಶಿವಪ್ಪ ನಾಯಕರಂತಹ ಪ್ರಸಿದ್ಧ ಮನೆತನ. ಇವರ ಆಡಳಿತ ವೈಖರಿಯೇ ಒಂದು ಶಿಸ್ತಿನದು. ಇವರ ರಾಜಧಾನಿ ಇಕ್ಕೇರಿ. ಕೆಳದಿ ಚೆನ್ನಮ್ಮರಂತಹ ಮಹಿಳೆಯರ ಆಡಳಿತವೇ ಒಂದು ತೂಕದ್ದಾಗಿದೆ. ಪ್ರಸ್ತುತ ‘ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪ ನಾಯಕ ’ಕೃತಿಯಲ್ಲಿ ಅಂದಿನ ಬಹಳಷ್ಟು ರಾಜಕೀಯ, ಸಾಮಾಜಿಕ ವಿಚಾರಗಳ ಜೊತೆಗೆ ಅರಸರ ಆಂತರಂಗಿಕ, ಕೌಟುಂಬಿಕ ಜೀವನ ಮತ್ತು ಅವರ ರಾಜ್ಯ ವೈಶಾಲ್ಯv, ನೆರೆಹೊರೆಯ ರಾಜ್ಯದೊಂದಿಗೆ ಇದ್ದ ಸಂಬಂಧಗಳು, ನಡೆದ ಯುದ್ಧಗಳ ಕುರಿತಾಗಿ ವಿವರಿಸಲಾಗಿದೆ. ಮಲೆನಾಡಿನ ಪ್ರಸಿದ್ಧ ಅರಸು ಮನೆತನವಾದ ಕೆಳದಿ ಅರಸರು ಸುಮಾರು ೬೩ ವರ್ಷಗಳ ಕಾಲ ಆಳ್ವಿಕೆ ಮಾಡುತ್ತಾರೆ. ಇವರ ಸ್ಮಾರಕಗಳು, ಕೆರೆ-ಕಟ್ಟೆಗಳು, ಇಂದಿಗೂ ಅವರನ್ನು ನೆನಪಿಸುತ್ತವೆ. ೪೭ ವರ್ಷಗಳ ಕಾಲ ನಿರಂತರವಾಗಿ ಆಳ್ವಿಕೆ ನಡೆಸಿದವನು ವೆಂಕಟಪ್ಪ ನಾಯಕ. ನಂತರ ಶಿವಪ್ಪ ನಾಯಕ, ವೀರಭದ್ರ ನಾಯಕ. ಇವರೊಟ್ಟಿಗೆ ಗೇರುಸೊಪ್ಪೆಯ ಬೈರಾದೇವಿ, ಆಕೆಯ ಮಗಳು ಚೆನ್ನಬೈರಾದೇವಿಯ ಅರಸೊತ್ತಿಗೆಯ ವಿವರ ಇದರಲ್ಲಿದೆ. ಇವರೆಲ್ಲರೂ ಹೋರಾಟದಿಂದಲೇ ಬದುಕು ಆರಂಭಿಸಿ ಅದರಿಂದಲೇ ಬದುಕು ಅಂತ್ಯಗೊಳಿಸಿಕೊಂಡವರು. ದೈವಭಕ್ತ, ಸಮರ ಸೇನಾನಿ, ಮಹಾ ಶಕ್ತಿಶಾಲಿ, ಅದ್...
- Get link
- X
- Other Apps
ಮಾಜದ ವಿವಿಧ ಆಯಾಮ ಪರಿಚಯಿಸು ‘ಪ್ರೀತಿಯಿಂದ ಗೆದ್ದ ಕಥೆಗಳು’ ............................................. ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯವರು ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಪ್ರಥಮ ಪ್ರಜ್ಞಾ ಕಥಾ ಸ್ಪರ್ಧೆ-೨೦೨೫ರಲ್ಲಿ ಆಯ್ಕೆಯಾದ ಮೊದಲ ೧೦ ಕಥೆಗಳ ಸಂಕಲನವನ್ನು ‘ಪ್ರೀತಿಯಿಂದ ಗೆದ್ದ ಕಥೆಗಳು’ ಎಂಬ ಶೀರ್ಷಿಕೆಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿರುವುದನ್ನು ಕಾಣಬಹುದು. ಈ ಬರಹಗಾರಲ್ಲಿರುವ ಸೃಜನಶೀಲತೆಯನ್ನು, ವೈವಿಧ್ಯಮಯ ಚಿಂತನೆಯನ್ನು, ಆಳವಾದ ಅನುಭವಗಳನ್ನು ಮತ್ತು ಸಮಾಜದ ಕುರಿತಾಗಿ ಇರುವ ಸೂಕ್ಷ್ಮ ಅವಲೋಕನಗಳನ್ನು ಇಲ್ಲಿನ ಕಥೆಗಳು ಬಿಂಬಿಸುತ್ತವೆ. ಅತ್ಯುತ್ತಮ ಗುಣಮಟ್ಟದ ಕಥೆಗಳು ಇವಾಗಿವೆ. ಇಲ್ಲಿನ ೧೦ ಕಥೆಗಳನ್ನು ಓದಿದಾಗ ಹೊಸ ಬರಹಗಾರರಿಗೂ ಸ್ಫೂರ್ತಿ ಬರುತ್ತದೆ. ದೇವ (ರ) ದಾಸಿ ಇದು ಕಬ್ಬಾಳಪ್ಪ ಮರೂರು ಅವರ ಬರೆದ ಕಥೆ. ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ದೇವದಾಸಿ (ಗಾಳೆಮ್ಮ)ಯ ಮಗಳು (ರೋಜಾ) ತನ್ನಂತೆಯೇ ತನ್ನ ಮಗಳು ಆಗಬೇಕೆಂದು ಬಯಸುವುದು, ಮಗಳನ್ನು ತಾಯಿಯಂತೆ ಬಳಸಿಕೊಳ್ಳಲು ಊರಿನ ಕೆಲವರು ಯತ್ನಿಸುವುದು, ಇದಕ್ಕೆ ಮಗಳು ವಿರೋಧ ವ್ಯಕ್ತಪಡಿಸುವುದು, ಊರಿನ ಗೌಡರ ಹೆಂಡತಿ ರೋಜಾಳನ್ನು ಪಿಯುವರೆಗೆ ಚೆನ್ನಾಗಿ ಓದಿಸಿ, ನಂತರ ಎಲ್ಲಾದರೂ ಕೆಲಸಕ್ಕ್ಕೆ ಸೇರಿಸು ಎನ್ನುವುದು, ಎಸ್ಸೆಸೆಲ್ಸಿ ಓದಿನ ನಂತರ ಪಟ್ಟಣ ಸೇ...
- Get link
- X
- Other Apps
ಹೃದಯ ತಟ್ಟುವ ‘ಕಾನನದ ಕುಸುಮ’ ‘ಕಾನನದ ಕುಸುಮ’ ಇದು ಉಪನ್ಯಾಸಕಿ ಶುಭಲಕ್ಷ್ಮಿ ಆರ್. ನಾಯಕ ಅವರ ರಚನೆಯ ಕವನ ಸಂಕಲನ. ಇದರಲ್ಲಿ ಹೃದಯ ತಟ್ಟುವ ಕವನಗಳಿವೆ. ಸುಂದರ ರಚನೆಯ ಈ ಕವನಗಳು ಸ್ಪಷ್ಟ ಸಂದೇಶವನ್ನು ನೀಡುವಂತಹವು. ಕವನಗಳಲ್ಲಿ ಮಾನವೀಯ ಮೌಲ್ಯಗಳು, ನಾಡ ಪ್ರೇಮ, ದೇಶಪ್ರೇಮವಿದೆ. ಪ್ರಕೃತಿ, ರೈತ, ಬದುಕು, ಪ್ರಜಾಪ್ರಭುತ್ವ, ನದಿ, ಮಳೆ, ಬೇಸಾಯ, ಕನ್ನಡ ನಾಡು, ನೆನಪು, ಭಾವೈಕ್ಯತೆ, ದುಡಿಮೆ, ಗುರು, ನಾರಿ ಶಕ್ತಿ ..ಹೀಗೆ ವೈವಿಧ್ಯಮಯ ವಿಷಯ ವಸ್ತುಗಳನ್ನು ತಮ್ಮ ಅನುಭವದ ಆಧಾರದಲ್ಲಿ ಸುಂದರವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಪ್ರಕೃತಿ ಕುರಿತಾಗಿ ವಿಶೇಷವಾಗಿ ಹೆಚ್ಚಿನ ಕವನಗಳು ಇಲ್ಲಿರುವುದನ್ನು ಗಮನಿಸಿದಾಗ ಅವರ ಕಾಳಜಿಯನ್ನು ಗಮನಿಸಬಹುದು. ಪ್ರತಿ ಕವನದಲ್ಲೂ ಒಂದು ಸಂದೇಶವಿದೆ. ನೀತಿ ಇದೆ. ಕವನವನ್ನು ಓದಿದಾಗ ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳಬೇಕು ಎಂಬ ಸೂಚನೆ ಸಿಗುತ್ತದೆ. ಇದರಿದಮ ಪ್ರಾಮಾಣಿಕ ಬದುಕು ನಮ್ಮದಾಗುತ್ತದೆ. ಕವನಗಳೆಲ್ಲ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿವೆ. ಕವಿತೆಗಳು ಛಂದೋಬದ್ಧ ರಚನೆಗಳಲ್ಲಿ, ಮಾತ್ರೆ, ಗಣಗಳೊಂದಿಗೆ ಇರುವುದನ್ನು ಗಮನಿಸಬಹುದು. ನಾಡಗೀತೆಗಳು ಅಥವಾ ಕನ್ನಡದ ಗೀತೆಗಳು ಇದರಲ್ಲಿದ್ದು, ಇವು ಅತ್ಯಂತ ಸುಂದರ ರಚನೆಯಾಗಿವೆ. ಸಾಮೂಹಿಕ ಗಾಯನಕ್ಕೆ ಯೋಗ್ಯವಾದ ರೀತಿಯಲ್ಲಿ ಇವೆ. ಕನ್ನಡ ಮತ್ತು ಕನ್ನಡ ತಾಯಿಯ ಬಗ್ಗೆ ಇರುವ ಅವರ ಪ್ರೀತಿ, ನೆಲದ ವಾತ್ಯಲ್ಯವನ್ನು ಇಲ್ಲಿ ಕಾಣಬಹುದು. ...