ಮತ್ತೆ ಮತ್ತೆ ಕಾಡುವ
‘ಅತೀತಭವ’


ಬಾಲ್ಯದ ಮತ್ತು ಮಂಗಳೂರಿನ  ಸವಿನೆನಪಿನ ಸಂಸ್ಕೃತಿಯನ್ನು ಬಿಂಬಿಸುವ ಕೃತಿ  ‘ಅತೀತಭವ’. ಅಶ್ವಿನಿ ಸುನಿಲ್ ಈ ಕಥಾ ಸಂಕಲನ ಕರ್ತೃ.  ಈ ಪುಸ್ತಕದಲ್ಲಿರುವ ಕೆಲವು ಕಥೆಗಳು ಬ್ಲಾಗ್‌ಗಾಗಿ ಬರೆದವಾಗಿವೆ. ಆದರೆ ಸದಾ ಕಾಡುವ ಲವಲವಿಕೆಯ ವಿಷಯಗಳು ಇವು. ಆದುದರಿಂದ ಓದುಗರನ್ನು ಸೆಳೆಯುತ್ತವೆ. ಕಥೆಗಳೆಲ್ಲ ಚಿಕ್ಕ ಎನಿಸಬಹುದಾದರೂ ಅವುಗಳಿಗೆ ಓದುಗರನ್ನು ಸೆರೆಹಿಡಿಯುವ ಶಕ್ತಿ, ರೋಚಕತೆ ಇದೆ. ದಕ್ಷಿಣ ಕನ್ನಡದ ಭಾಷೆ ಅಲ್ಲಲ್ಲಿ ಬಳಕೆಯಾಗಿದೆ. ತನ್ನ ಊರಿನ ಪರಿಸರ, ಅಲ್ಲಿನ ಬಡತನ, ಗಂಡಹೆಂಡತಿಯ ಜಗಳದ ಬದುಕು, ಹಳ್ಳಿಯ ಕ್ಷುದ್ರತೆ ಮೊದಲಾದವುಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.


ವಿಂಡೋ ಸೀಟ್
  ವಿಂಡೋ ಸೀಟ್ ಬೇಕೆಂದು ಹಠ ಹಿಡಿದು ಕುಳಿತಿದ್ದವಳ ಕಿವಿಯೋಲೆಯನ್ನು ರಾತ್ರಿ ಬಸ್ ಪ್ರಯಾಣದ ವೇಳೆ  ಚಹಾ ಕುಡಿಯಲು ನಿಲ್ಲಿಸಿದಾಗ ಯಾರೋ   ಎಳೆದುಕೊಂಡು ಹೋಗುತ್ತಾರೆ. ಕಿವಿಯೋಲೆಯನ್ನು ಕಳೆದುಕೊಂಡು, ಕಿವಿ ಹರಿದಿದ್ದರಿಂದ  ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಾಗುತ್ತದೆ. ಕಳದೆಹೋದ ಕಿವಿಯೋಲೆಯನ್ನು ಬೇರೆಯವರಿಂದ ಪಡೆದು ಹಾಕಿಕೊಂಡು ಹೋಗಿದ್ದರಿಂದ ಈ ವಿಷಯವನ್ನು ಅವರಿಗೆ ಹೇಳುವುದು ಹೇಗೆ ಎಂಬ ಚಿಂತೆ ಉಂಟಾಗುತ್ತದೆ. ‘ದಯವಿಟ್ಟು ಬೇಸರಿಸಬೇಡಿ’ ಎಂದು ಆ ಮಹಿಳೆಗೆ ಹೇಳುತ್ತಾಳೆ. ಆದರೆ ಧರಿಸಿಕೊಂಡ ಹೆಂಗಸಿಗೆ  ಅದು ನನ್ನ ತಂಗಿ ತಂದು ಕೊಟ್ಟ ರೋಲ್ಡ್ ಗೋಲ್ಡ್ ಓಲೆ.  ಎಂದಗ ಹೋದ ಜೀವ ಬಂತಾದರೂ  ರೋಲ್ಡ್ ಗೋಲ್ಡ್ ಕೊಟ್ಟಳಲ್ಲ ಎಂಬ ನೋವು ಮನಸಲ್ಲಿ ಉಳಿಯಿತು.
 ಪೆಟ್ಟಿಗೆ ಹಿಡಿದ ಕೈ
ಕುಂಜಿರಾಮನಿಗೆ ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುವ ವೇಳೆ ಅದರಲ್ಲಿ ತೇಲಿ ಬರುವ ತೆಂಗಿನಕಾಯಿ ಹಿಡಿಯುವುದು, ಹಸು, ನಾಯಿಯನ್ನು ರಕ್ಷಿಸುವುದು ಕೆಲಸವಾಗಿತ್ತು. ಈತ ಊರಿಗೆ ಉಪಕಾರಿ, ಮನೆಗೆ ಮಾರಿಯಾಗಿದ್ದ. ಒಂದು ದಿನ ಹೀಗೆ ತೆಂಗಿನ ಕಾಯಿಯನ್ನು ಹಿಡಿಯಲು ಹೋದಾಗ ಒಂದು ಕೈ ಪೆಟ್ಟಿಗೆ ಹಿಡಿದು ತೇಲಿ ಬರುವುದು ಕಂಡುಬರುತ್ತದೆ. ಪೆಟ್ಟಿಗೆಯನ್ನು ಹಿಡಿದು ಸೇತುವೆ ಮೇಲೆ ಹಾಕುತ್ತಾನೆ. ಆದರೆ ಕಾಣುತ್ತಿದ್ದ ವ್ಯಕ್ತಿಯ ಕೈ ತಪ್ಪಿ ಕೊಚ್ಚಿಕೊಂಡು ಹೋಗುತ್ತಾನೆ. ಪೆಟ್ಟಿಗೆ ತೆರೆದಾಗ ಒಂದಿಷ್ಟು ಒಡವೆಗಳು ಇರುವುದು ಕಂಡುಬರುತ್ತದೆ ಮನೆಗೆ ಸಂತಸದಿಂದ ಪೆಟ್ಟಿಗೆಯನ್ನು ಒಯ್ದಾಗ ಹೆಂಡತಿ ಗಂಗಿ ತನ್ನ ಎರಡನೇ ಮಗ ಶೇಖರ ನೀರಿನಲ್ಲಿ ತೇಲಿ ಬರುತ್ತಿದ್ದ ಪೆಟ್ಟಿಗೆಯನ್ನು ಹಿಡಿಯಲು ಹೋಗಿ ಕೊಚ್ಚಿ ಹೋಗಿದ್ದಾನೆ ಎನ್ನುವ ವಿಚಾರ ತಿಳಿಯುತ್ತದೆ. ಕುಂಜಿರಾಮನ ಕೈಯಲ್ಲಿದ್ದ ಪೆಟ್ಟಿಗೆ ಈ ವೇಳೆ ಕೈತಪ್ಪಿ ಕೆಳಗೆ ಬೀಳುತ್ತದೆ.
 ಮಣ್ಣಿನ ವಾಸನೆ
ಹಳ್ಳಿಯ ವಾತಾವರಣ, ಮಣ್ಣಿನ ವಾಸನೆ ಎಂದರೆ ಮೂಗು ಮುರಿಯುವ ಮಧುಮಿತಾಳ  ಇಬ್ಬರು ಮಕ್ಕಳು ರಜೆಯಲ್ಲಿ ಗಂಡನ ಮನೆಗೆ ಅಜ್ಜ-ಅಜ್ಜಿಯ ಜೊತೆ ಹೋಗಿದ್ದರು. ಇದು ಆಕೆಗೆ ಇಷ್ಟವಿರಲಿಲ್ಲ. ಈ ಬಾರಿಯಾದರೂ ಮಕ್ಕಳು ಹೋಗಲಿ, ಅಪ್ಪ, ಅಮ್ಮ ಸದಾ ಕರೆಯುತ್ತಾರೆಂದು ಪತಿ ಹೇಳಿದ್ದ. ಇದರಿಂದ ಮಕ್ಕಳನ್ನು ಕಳಿಸಿಕೊಟ್ಟಿದ್ದಳು. ಮಕ್ಕಳಿಗೆ  ಕಂಡಿಶನ್ ಹಾಕಿ ಕಳಿಸುತ್ತಾಳೆ. ತ್ತಾಳೆ. ಮಕ್ಕಳು ಇದನ್ನೆಲ್ಲ ಮೀರಿ ಹಳ್ಳಿಯಲ್ಲಿ ಆಟ ಆಡುತ್ತಾರೆ. ಇದನ್ನು ನೋಡಿ ಸಿಟ್ಟುಗೊಳ್ಳುತ್ತಾಳೆ. ಮಳೆ ಸುರಿದರೆ ಭೂಮಿಯ ಮಣ್ಣು ಕೆಟ್ಟ ವಾಸನೆ ಎಂಬ ಭ್ರಮೆ ತಾಯಿಗೆ ಇರುತ್ತದೆ. ಮಕ್ಕಳು ವಾಪಸ್ ಬರುವ ದಿನ ತರಕಾರಿ ತೆಗೆದುಕೊಂಡು ತಾಯಿ ಬರುವಾಗ ಮಳೆ ಹನಿ ಬೀಳುತ್ತಿರುತ್ತದೆ. ಹನಿಗಳ ಪರಿಮಳ ಆಕೆಯನ್ನು ಸ್ವರ್ಗದಲ್ಲಿ ತೇಲಿಸುತ್ತದೆ. ಕೋಪವನ್ನು ತಣಿಸುತ್ತದೆ.
ಜಾಹ್ನವಿ
ಮುಂಬೈನಲ್ಲಿರುವ ಜಾಹ್ನವಿಯ ಅತ್ತೆ ಮಗ ಶರತ್ ಅಪರೂಪಕ್ಕೆ ಊರಿಗೆ ಬರುತ್ತಾನೆ. ಬಸ್ಸಿನಿಂದ ಇಳಿದ ಬಳಿಕ ಆತನಿಗೆ ಅಜ್ಜಿಯ ಮನೆಯ ದಾರಿ ಗೊತ್ತಿರುವುದಿಲ್ಲ. ಬಸ್ಟಾಪ್ ಬಳಿ ಇದ್ದ ಅಂಗಡಿಯವನಲ್ಲಿ ವಿಚಾರಿಸುತ್ತಾನೆ. ಆತ ಅದೇ ಬಸ್ಸಿನಿಂದ ಇಳಿದು ಹೋಗುತ್ತಿದ್ದ ಜಾಹ್ನವಿಯನ್ನು ತೋರಿಸಿ ಅವಳ ಹಿಂದೆ ಹೋಗಿ. ಅವಳದೇ ಮನೆ ಎನ್ನುತ್ತಾನೆ. ಶರತ್ ಹಿಂದೆಯೇ ಬರುತ್ತಿರುವುದನ್ನು ಗಮನಿಸಿದ ಜಾಹ್ನವಿ ಹೆದರಿ ತನ್ನನ್ನು ಯಾರೋ ಫಾಲೋ ಮಾಡುತ್ತಿದ್ದಾರೆ ಎಂದು ಬೆವರುತ್ತಾಳೆ. ಹೆದರಿ ಓಡುತ್ತಾ ಮನೆ ಸೇರಿದರೂ ಗದ್ದೆಯಲ್ಲಿ ಆ ವ್ಯಕ್ತಿ ನಡೆದು ಬರುತ್ತಿರುವುದು ಕಂಡುಬರುತ್ತದೆ. ಆಕೆಯ  ತಂದೆ ಇದನ್ನು ನೋಡಿದಾಗ ತನ್ನ ತಂಗಿಯ ಮಗ ಶರತ್ ಎನ್ನುತ್ತಾನೆ. ಏನೇನನ್ನೋ ಕಲ್ಪಿಸಿಕೊಂಡು ಓಡಿ ಬಂದು ಮನೆ ಸೇರಿಕೊಂಡಿದ್ದ ಜಾಹ್ನವಿ ನಾಚಿ ನೀರಾಗುತ್ತಾಳೆ
ಕುಲೇ ಸೊಪ್ಪು
 ಮನೆಯ ಆಕಳು ಗೌರಿ ಕಳೆದು ಹೋದುದನ್ನು ರಾತ್ರಿ ವೇಳೆ ಹುಡುಕಲು ಸೂಟೆಯೊಂದಿಗೆ ಹೋಗಿದ್ದ ಗೋಪಾಲ ರಾತ್ರಿ ಆಕಳು ಸಿಗದಿದ್ದಾಗ ಮನೆಗೆ ಮರಳಲು ಯತ್ನಿಸಿದರೂ ದಾರಿ ಮಾತ್ರ ತಿಳಿಯುವುದಿಲ್ಲ. ಕುಲೇ ಸೊಪ್ಪು  ತಾಗಿದರೆ ಮನೆಗೆ ಹೋಗುವ ದಾರಿ ಸಿಗುವುದಿಲ್ಲ ಎಂಬ ನಂಬಿಕೆ ಇತ್ತು. ಇದರಿಂದ ಕಾಡಿನಲ್ಲಿಯೇ ರಾತ್ರಿ ಮರವನ್ನು ಏರಿ ಕಳೆಯುತ್ತಾನೆ. ಆಗ ರಾತ್ರಿ ದೆವ್ವಗಳು ಮತ್ತು ದೇವತೆಗಳು ಕಾಡಿನಲ್ಲಿ ಓಡಾಡುತ್ತವೆ ಎನ್ನುವ ಭಯ ಕಾಡುತ್ತದೆ. ಇದೇ ವೇಳೆ  ಗೆಜ್ಜೆ ಶಬ್ದ ಕೇಳಿಬರುತ್ತದೆ. ಆದರೆ  ಕೆಳಗೆ ಇಳಿಯದೆ ಮರದಲ್ಲಿ ಕುಳಿತುಕೊಳ್ಳಲು ನಿರ್ಧರಿಸುತ್ತಾನೆ. ಎಚ್ಚರವಾದಾಗ ಕಣ್ಬಿಟ್ಟು ನೋಡಿದರೆ ಮನೆಯಲ್ಲಿ ಕೊಬ್ಬರಿ ಒಣಗಿಸಲೆಂದು ಹಾಕಿದ್ದ ಅಟ್ಟಳಿಗೆ ಮೇಲೆ ಗೋಪಾಲ ಮಲಗಿದ್ದ . ಪಕ್ಕದ ಹಟ್ಟಿಯಲ್ಲಿ ಗೌರಿ ತನ್ನ ಜಾಗದಲ್ಲಿ ಮಲಗಿದ್ದಳು. ರಾತ್ರಿ ತನಗೆ ಕೇಳಿದ್ದು ಗಂಟೆಯ ಶಬ್ದವೇ ಅಥವಾ ಗೆಜ್ಜೆಯ ಶಬ್ದವೇ ಎಂಬ ಯೋಚನೆಗೆ ತೊಡಗುತ್ತಾನೆ.
ಅಪ್ಪ
ಅಪ್ಪ ಶಂಕರಪ್ಪ ಪತ್ನಿಯಿಲ್ಲದ ಕಾರಣ, ಅನುಭವಿಸಿದ ನೋವಿನಿಂದ  ಸದಾ ಅಂತರ್ಮುಖಿಯಾಗಿದ್ದ ಅಪ್ಪನ ಆಂತರ್ಯವನ್ನು ಬಾಲ್ಯದಿಂದಲೂ ಅರಿಯದ ಮಗ ಸಂದೇಶ್ ಅಪ್ಪ ತನ್ನ ಬಗ್ಗೆ ಪ್ರೀತಿ ತೋರಿಸುತ್ತಿಲ್ಲ ಎಂದು ಕೋಪದಿಂದ  ಕಂಡು, ವಿದೇಶಕ್ಕೆ ತೆರಳುವಾಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಪ್ಪನನ್ನು ವೃದ್ದಾಶ್ರಮಕ್ಕೆ ಬಿಟ್ಟು ಹೋಗುತ್ತಾನೆ. ಅಲ್ಲಿಂದ ಮನೆಗೆ ಮರಳುವಾಗ ಸ್ನೇಹಿತನ ಮನೆಗೆ ಹೋದಾಗ ಸಂದೇಶನಿಗೆ ತಂದೆ ಶಂಕರಪ್ಪನ ಬಗ್ಗೆ ಹೇಳುತ್ತಾರೆ.  ಇದನ್ನು ಕೇಳಿದ ಸಂದೇಶನಿಗೆ ತನ್ನ ವರ್ತನೆ ಬಗ್ಗೆ ನಾಚಿಕೆಯಾಗುತ್ತದೆ. ವಿದೇಶಕ್ಕೆ ಹೋಗುವ ಕೆಲಸವನ್ನು ಕೈಬಿಡುತ್ತಾನೆ. ಪ್ರೀತಿ ಎಂದರೆ ಏನೆಂದು ತಿಳಿಸಲು ಹೊರಟ ಅಪ್ಪನ ನಿಜವಾದ ಪ್ರೀತಿಯನ್ನು ತಾನು ಅರಿಯದೆ ಹೋದೆ ಎಂದು ಬೇಸರಿಸುತ್ತಾನೆ
ಫೇಕ್(ಸ್)ಬುಕ್
 ಹಳ್ಳಿಯಿಂದ ಬೆಂಗಳೂರಿನಲ್ಲಿರುವ ಮಗನ ಮನೆಗೆ ಬಂದ ತಂದೆಗೆ ಟೈಮ್ ಪಾಸ್ ಕಷ್ಟವಾದಾಗ ಸಮಯ ಕಳೆಯಲು ಮೊಬೈಲನ್ನು ಮಗ ಕೊಡುತ್ತಾನೆ. ಫೇಸ್ಬುಕ್, ಯೂಟ್ಯೂಬ್, ವಾಟ್ಸಾಪ್ ನೋಡುವುದನ್ನು ಮೊಮ್ಮಗ ಕಲಿಸಿಕೊಡುತ್ತಾನೆ. ಅಜ್ಜನಿಗೆ ಫೇಸ್‌ಬುಕ್‌ನಲ್ಲಿ ಪರಿಚಯದವರನ್ನು ಫ್ರೆಂಡ್ಸ್ ಮಾಡಿಕೊಡುತ್ತಾನೆ. ಅಜ್ಜ ಮನೆಯಲ್ಲಿ ತಿಂದಿದ್ದು, ಕೂತಿದನ್ನೆಲ್ಲ ಪೋಸ್ಟ್ ಹಾಕುತ್ತಿದರಿಂದ ಮಗ ಸಿಟ್ಟಿಗೆದ್ದು ಅಪ್ಪನ ಫೇಸ್‌ಬುಕ್ ಅನ್‌ಇನ್ಸ್ಟಾಲ್ ಮಾಡುತ್ತಾನೆ. ಸ್ವಾತಂತ್ರ್ಯವನ್ನು ಕಿತ್ತುಕೊಂಡ ಬಗ್ಗೆ ತಂದೆಗೆ ಬೇಸರವಾಗುತ್ತದೆ. ನಂತರ ಮೊಮ್ಮಗನಿಗೆ ಬಸ್ ನಿಲ್ದಾಣದಲ್ಲಿ ಅಪಘಾತವಾದಾಗ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಫೇಸ್ಬುಕ್ ಮೂಲಕ ತಂದೆ ಈ ವಿಷಯವನ್ನು ಎಲ್ಲರಿಗೂ ತಿಳಿಸುತ್ತಾನೆ. ಆಸ್ಪತ್ರೆಗೆ ಬಂದವರೆಲ್ಲ ಅಜ್ಜನನ್ನು ವಿಚಾರಿಸುತ್ತಿದ್ದರೇ ವಿನಾ ಮೊಮ್ಮಗನನ್ನಲ್ಲ, ಮಗನಿಗೆ ಫೇಸ್ಬುಕ್ನಲ್ಲಿ ಹಾಕಿದ ಪೋಸ್ಟ್ ನೆನಪಿಗೆ ಬಂತು. ಅದು ತನ್ನನ್ನು ಅಣಕಿಸಿದಂತೆ ಭಾಸವಾಗುತ್ತದೆ.  
ಭ್ರಮೆ
ಮನುಷ್ಯನ ತಲೆಯಲ್ಲಿ ಯಾವುದಾದರೂ ಒಂದು ಭ್ರಮೆ ಹೊಕ್ಕಿದರೆ ಅದು ಹೇಗೆ ಅವನನ್ನು ಆಟವಾಡಿಸುತ್ತದೆ. ಅದನ್ನು ತಲೆಯಿಂದ ತೆಗೆದು ಹಾಕುವುದು ಎಷ್ಟು ಕಷ್ಟ ಎನ್ನುವುದನ್ನು ಈ ಕಥೆಯಲ್ಲಿ ವಿವರಿಸಲಾಗಿದೆ.  
 ಅತೀತಭವ  
ಬ್ಯಾಂಕ್ ಮ್ಯಾನೇಜರ್  ತನ್ನ ಹಿಂದಿನ ಜನ್ಮದ ಬಗ್ಗೆ ತಿಳಿಯಲು ಜ್ಯೋತಿಷಿಯ ಬಳಿ ಹೋಗುವುದು, ಆತ ಹೇಳಿದ್ದು, ತನ್ನ ತಾಯಿ ಹಿಂದಿನ ಜನ್ಮದ (ಅತೀತಭವ) ಬಗ್ಗೆ ಹೇಳುತ್ತಿದ್ದ ವಿಚಾರಗಳು ತಲೆಯಲ್ಲಿ ಬರುತ್ತದೆ. ತನ್ನ ಹಿಂದಿನ ಜನ್ಮದ ಬಗ್ಗೆ ತಿಳಿಯಲು ಪ್ರಯತ್ನಿಸಿದರೂ ಮಾಹಿತಿ ಸಿಗುವುದಿಲ್ಲ. ಕೊನೆಗೆ ಒಂದು ದಿನ ತನ್ನ ಅಮ್ಮನಲ್ಲಿ ಕೇಳಿದಾಗ, ‘ಮಕ್ಕಳಾಗಲಿಲ್ಲ ಎಂದು ಮಂತ್ರಾಲಯಕ್ಕೆ ಹೋಗುವಾಗ ನೀನು ಬಸ್ಸಿನಲ್ಲಿ ಸಿಕ್ಕ ಮಗು’ ಎನ್ನುತ್ತಾಳೆ. ಸ್ವತಃ ಮಂತ್ರಾಲಯದ ರಾಯರೇ ಬಂದು ನನ್ನ ಕೈಯಲ್ಲಿ ಮಗುವನ್ನು ಕೊಟ್ಟರು ಎಂಬಂತೆ ಭಾಸವಾಯಿತು. ಆ ಮಗು ನೀನು ಯೋಗೀಂದ್ರ ಎಂದು ಹೇಳಿದಾಗ ಆತ ಮೌನವಾಗುತ್ತಾನೆ.
ಶರ್ಮಿಷ್ಟ
ಬಾಲ್ಯದಿಂದಲೇ ಬಡತನವನ್ನು ದ್ವೇಷಿಸುತ್ತಾ ಬಂದಿದ್ದ ಯುವತಿ ಶ್ರೀಮಂತನಾಗುವ ಕನಸು ಕಾಣುತ್ತಾಳೆ. ಸಂಬಂಧಿಕರು ಎದುರು ಸರಿಸಮಾನವಾಗಿ ನಿಲ್ಲಬೇಕು ಎನ್ನುವ ಹಂಬಲ ಅವಳದು. ಆದರೆ ಅವಳು ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಶ್ರೀಮಂತಿಕೆ ಆಕೆಗೆ ಎದುರಾಗುತ್ತದೆ. ಇದರ ಕಲ್ಪನೆ ಇರದ ಯುವತಿ ಒಂದು ಬೇಕಾದರೆ ಒಂದನ್ನು ಕಳೆದುಕೊಳ್ಳಲೇಬೇಕು ಎನ್ನುವ ಮಾತನ್ನು ಹೇಳುತ್ತಾಳೆ.
 ದ್ರೋಹ
ಸೇಂದಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಸಂಕಪ್ಪನಿಗೆ ಆತನ ಮಗ ರಮೇಶ್ ದ್ರೋಹ ಮಾಡುವ ಕಥೆ ಇದು. ತನ್ನ ಅಪ್ಪ ತೆಗೆಯುತ್ತಿದ್ದ ಶೇಂದಿಯ ಮರವನ್ನೇ ಗುರಿ ಮಾಡಿಕೊಂಡು ಅಪ್ಪನಿಗಿಂತ ಮೊದಲು ಹೋಗಿ ಸೇಂದಿ ಇಳಿಸಿ ತಂದು ಕದ್ದು ಮಾರಾಟ ಮಾಡುತ್ತಿದ್ದ ಈ ವಿಚಾರ ಸೇಂದಿ ಖರೀದಿಸುವನ ಇನ್ನೊಬ್ಬನ ಬಳಿ ಮಾತನಾಡುತ್ತಿರುವಾಗ ಕೇಳಿಸಿಕೊಳ್ಳುತ್ತಾನೆ. ಹೆಚ್ಚಿನ ಲಾಭದ ಆಸೆಗೆ ಸೇಂದಿದಾರನೇ ಅಪ್ಪ ಮತ್ತು ಮಗನ ಮಧ್ಯೆ ಒಡಕನ್ನು ತಂದು ಹಾಕುವ ಕಥೆ.
 ಗೋಲಿ ಸೋಡಾ
 ಶಾಲೆಗೆ ಹೋಗುವಾಗ ಗಣೇಶ್ ಮತ್ತು ಕೃಷ್ಣ ಅವರ ಆಪ್ತತೆಯನ್ನು ಬಿಚ್ಚಿಡುವ ಕಥೆ ಇದು. ಕೃಷ್ಣನಿಗೆ ಸೈಕಲ್ ಕಲಿಸುವ ಕೆಲಸ ಮಾಡಿದ್ದಕ್ಕೆ ಗಣೇಶನಿಗೆ ಗಣಿತ ನೋಟ್ಸ್ ಅನ್ನು ಕೃಷ್ಣ ಮಾಡಿಕೊಡುತ್ತಾನೆ. ಶಾಲೆಯಲ್ಲಿ ನೋಟ್ಸ್ ಪುಸ್ತಕವನ್ನು ಗಣೇಶನಿಗೆ ಕೊಡುವಾಗ ಕಂಡ ಮಾಸ್ಟರ್ ಕೃಷ್ಣನಿಗೆ ಹೊಡೆಯುತ್ತಾರೆ. ಹೋಮ್ ವರ್‍ಕ್  ಮಾಡಿಲ್ಲ ಎಂದು ಗಣೇಶನಿಗೆ ಹೊಡೆಯುತ್ತಾರೆ. ಇದರಿಂದ ಬೇಸತ್ತು  ಮನೆ ಬಿಟ್ಟು ಹೋಗುತ್ತಾನೆ. ಮುಂಬೈಗೆ ಹೋಗಿ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಾನೆ. ನಂತರ ತನ್ನದೇ ಆದ ಹೊಟೆಲ್ ಓಪನ್ ಮಾಡುತ್ತಾನೆ. ಅಲ್ಲಿ ತಿನ್ನಲು ತುಂಬಾ ರುಚಿಯಾದ ಪಾವ್ ವಡಾ ಹೆಸರುಗಳಿಸುತ್ತದೆ. ಕೃಷ್ಣನಿಗೆ ಒಮ್ಮೆ ಭೇಟಿಯಾದ ಗಣೇಶ್, ಗೋಲಿ ಸೋಡಾ ಮತ್ತು ವಡಾ ಪಾವ್ ಕೊಡುತ್ತಾನೆ.
ಹಗಲುಗನಸು
ಗೆಳತಿಯ ಮದುವೆಗೆ ಹೋದಾಗ ಗೆಳತಿ  ಜೊತೆ ಡಾನ್ಸ್ ಮಾಡಬೇಕೆಂದು ಅದಕ್ಕೆ ಕಾಸ್ಟ್ಯೂಮ್ ಖರೀದಿಸುವುದು, ಟ್ರೈನ್‌ಗೆ ಟಿಕೆಟ್ ಬುಕ್‌ಮಾಡುವುದು ಬಗ್ಗೆ ನೀಲಿಮಾ  ಕನಸು ಕಾಣುತ್ತಿದ್ದಳು. ಆದರೆ ಸಂಜೆ ಮನೆಗೆ ಬಂದ ನಂತರ ಪ್ರತೀಕ್ಷಾ ಕಾಲ್ ಮಾಡಿ ಮದುವೆ ಗೆಳತಿ ಸುರಭಿಯದಲ್ಲ.  ಶಾರದಾ ಚಿಕ್ಕಮ್ಮಳ ಮಗಳದು. ತಾನೂ ಕೂಡ ಸುರಭಿಯದ್ದು ಅಂದುಕೊಂಡಿದ್ದೆ. ಇದನ್ನು ತಿಳಿಸಲು ನಿನಗೆ ಫೋನ್ ಮಾಡಿದೆ ಎಂದು ಹೇಳಿದಾಗ ತಾನು ಇಲ್ಲಿಯವರೆಗೆ ಹಗಲುಗನಸು ಕಂಡಿದ್ದನ್ನು ಗಂಡನಿಗೆ ಹೇಗೆ ಹೇಳಲಿ ಎಂದು ಚಿಂತಿಸುತ್ತಾಳೆ.
 ಗೊರಬು
ಗದ್ದೆ ನಾಟಿಯ ಕೆಲಸ ಆರಂಭವಾಗುವ ದಿನ ಬಂದಿತ್ತು. ಅಕ್ಕ ಪಕ್ಕದ ಮನೆಯವರೆಲ್ಲ ಸೇರಿ ಒಟ್ಟಿಗೆ ನಾಟಿ ಮಾಡುವ ಪದ್ಧತಿ ಇತ್ತು. ಆದರೆ ಶಂಕರಪ್ಪನ ಗೊರಬು ಕೆಲವು ದಿನಗಳಿಂದ ಕಳೆದು ಹೋಗಿತ್ತು. ಅದನ್ನು ಹುಡುಕಿಡುವಂತೆ ತನ್ನ ಪತ್ನಿಗೆ ಹೇಳಿ ಹೋಗಿದ. ಯಜಮಾನರ ಮನೆಗೆ ಹೋಗುವಾಗ ಗಂಡನ ಹೊರಬನ್ನು ತೆಗೆದುಕೊಂಡು ಹೋಗಿದ್ದ ಆತನ ಪತ್ನಿ ಮರಳುವಾಗ ಹುಲ್ಲು ಕೊಯ್ದು ತಂದಿದ್ದಳು. ಆದರೆ ಗೊರಬನ್ನು ಯಜಮಾನರ ಮನೆಯಲ್ಲಿ ಬಿಟ್ಟೆನೋ ಅಥವಾ ಹುಲ್ಲು ಕೊಯ್ಯುವಲ್ಲಿ ಬಿಟ್ಟೆನೋ ಎನ್ನುವುದು ಅವಳಿಗೆ ಮರೆತುಹೋಗಿತು. ಮೂಡಿಗೆರೆಗೆ ಶಂಕರಪ್ಪ ಹೋದಾಗ ಅಲ್ಲಿ ಅದೇ ಊರಿನ, ಮದುವೆಯಾಗಿ ಹೋದ ಮೀನಾಕ್ಷಿ ಸಿಗುತ್ತಾಳೆ. ಆಕೆಯದ್ದು ಗೊರಬಿನ ಅಂಗಡಿ ಇರುತ್ತದೆ. ಮೊದಲಿನಿಂದಲೂ ಮೀನಾಕ್ಷಿಯ ಮೇಲೆ ಪ್ರೇಮವಿತ್ತು. ಮೀನಾಕ್ಷಿ ಗೊರಬು ಬೇಕಾದರೆ ತೆಗೆದುಕೊಂಡು ಹೋಗಿ, ನಿಮ್ಮಲ್ಲಿ ಎಷ್ಟು ಹಣವಿದೆಯೋ ಅಷ್ಟು ಕೊಡಿ ಸಾಕು ಎಂದು ಹೇಳುತ್ತಾರೆ, ಶಂಕರಪ್ಪ ಗೊರಬು ತರುತ್ತಾನೆ.  ಒಂದು ದಿನ ಶಂಕರಪ್ಪನ ಮಕ್ಕಳು ಈಶ್ವರಪ್ಪನ ಮನೆಗೆ ಹೋಗಿದ್ದಾಗ ಅಲ್ಲಿ ಆತನ ಗೊರಬು ಇರುವುದನ್ನು ತವರು ಮನೆಗೆ ಬಂದಿದ್ದ ಮೀನಾಕ್ಷಿ ಹೇಳುತ್ತಾಳೆ. ಜೊತೆಗೆ ಮೀನಾಕ್ಷಿಗೆ ಗದ್ದೆ ನಾಟಿಗೆ ಬರುವುದು, ಹೊಸ ಗೊರಬು ಬರುವುದು ಶಂಕರಪ್ಪನಿಗೆ ಖುಷಿ ತರುತ್ತದೆ.
ಬಣ್ಣದ ಡಸ್ಟರ್
ಶಾಲೆಗೆ ನನ್ನ ತಾಯಿ ರತ್ನಾಳಿಂದ ಪುರುಷೋತ್ತಮ ಬಣ್ಣಬಣ್ಣದ ಬಟ್ಟೆಯುಳ್ಳ ದಸ್ಟರನ್ನು ಹೊಲಿಸಿಕೊಂಡು ಹೋಗಿ ಕೊಡುತ್ತಾನೆ. ಒಂದು ದಿನ ರತ್ನಾಳ ಮನೆಗೆ ಬಂದಿದ್ದ ವೆಂಕಜ್ಜಿ ತನ್ನ ಮೊಮ್ಮಗಳಿಗೆ ಮದುವೆ ಗೊತ್ತಾಗಿದೆ. ರವಿಕೆಯನ್ನು ಹೊಲಿದುಕೊಡಬೇಕೆಂದು ಕೇಳುತ್ತಾಳೆ. ಈ ವೇಳೆ ಆಕೆ ಎಲೆ ಅಡಿಕೆ ಹಾಕುವಾಗ ಸಂಚಿಯಲ್ಲಿದ್ದ ದುಡ್ಡಿನ ಕುಡಿಕೆಯನ್ನು ತೆಗೆದಿಟ್ಟಿದ್ದು ಮರೆತು ಹೋಗುತ್ತದೆ. ಎಷ್ಟು ಹುಡುಕಿದರೂ ರತ್ನಾಳ ಮನೆಯಲ್ಲಿ ಅದು ಸಿಗುವುದಿಲ್ಲ. ವೆಂಕಜ್ಜಿ ತನಗೆ ಅದನ್ನು ಕೊಡುವಂತೆ ಹಠ ಹಿಡಿಯುತ್ತಾಳೆ. ಇದರಿಂದ ತಾಯಿ ಮತ್ತು ಮಗನಿಗೆ ಚಿಂತೆ ಹೆಚ್ಚಾಗುತ್ತದೆ. ಶಾಲೆಯಿಂದ ಬಂದ ಪುರುಷೋತ್ತಮ ನಿನ್ನೆ ಹೊಲಿದ ಡಸ್ಟರ್ ಬಿಚ್ಚಿಹೋಗಿದೆ. ಅದನ್ನು ಸರಿ ಮಾಡಿಕೊಡು ಎಂದು ತಾಯಿ ಬಳಿ ಹೇಳುತ್ತಾನೆ. ದುಡ್ಡಿನ ಕುಡಿಕೆಯನ್ನು ಹುಡುಕುವ ಸಲುವಾಗಿ ಆತ ಅದನ್ನು ಬಿಚ್ಚಿರುತ್ತಾನೆ. ಇದನ್ನು ಅರಿಯದ ರತ್ನಾ ಆತನಿಗೆ ಮನಬಂದಂತೆ ಥಳಿಸುತ್ತಾಳೆ. ಆನಂತರ ದುಡ್ಡಿನ ಕುಡಿಕೆ ಡಸ್ಟರ್ ಪಕ್ಕದಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಡಸ್ಟರ್ ಒಳಗಡೆ ಬಟ್ಟೆ ಚೂರುಗಳನ್ನು ತುರುಕುವಾಗ ವೆಂಕಜ್ಜಿಯ ಕುಡಿಕೆ ಕೂಡ ಡಸ್ಟರ್ ಒಳಗೆ ಸೇರಿರುತ್ತದೆ. ಮಗ ಯಾಕೆ ಡಸ್ಟರ್ ಬಿಚ್ಚಿದ ಎನ್ನುವುದು ತಾಯಿಗೆ ಅರಿವಾಗಿ ಹೊಡೆದಿದ್ದರ ಬಗ್ಗೆ ಬೇಸರವಾಗುತ್ತದೆ.  ವ
............................   

 

Comments

Popular posts from this blog