ಅಂತರಂಗವನ್ನು ಬೆಚ್ಚಗಾಗಿಸುವ 


‘ಲಂಗರು’ 


ಲೇಖಕ ವಿವೇಕ ಶಾನಭಾಗ  ನವ್ಯೋತ್ತರ ಕನ್ನಡದ  ಕಾದಂಬರಿಗಾರ, ನಾಟಕಕಾರ, ಕಥಾಗಾರ. ಇವರ ಕೃತಿಗಳು ಇಂಗ್ಲೀಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಿತವಾಗಿವೆ. ‘ದೇಶಕಾಲ’ ಎನ್ನುವ ಸಾಹಿತ್ಯಕ್ಕೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿ ಸುಮಾರು ೭ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ೧೯೬೨ರಲ್ಲಿ ಇವರ ಜನನ.  ಬೆಳೆದಿದ್ದು ಅಂಕೋಲಾದಲ್ಲಿ . ವೃತ್ತಿಯಿಂದ ಇಂಜಿನೀಯರ್, ಬರೆಹಗಾರ. ಇವರ ಪ್ರಮುಖ ಕೃತಿಗಳೆಂದರೆ-  ಘಾಚರ್ ಘೋಚರ್, ಊರು ಭಂಗ,  ಒಂದು ಬದಿ ಕಡಲು,  ಇನ್ನೂ ಒಂದು, ಲಂಗರು, ಹುಲಿ ಸವಾರಿ, ನೂಲಿನ ಏಣಿ, ಕಂತು, ಮತ್ತೊಬ್ಬನ ಸಂಸಾರ, ಗುರುತು, ಅಂಕುರ ಮೊದಲಾದವು. ‘ಸಕೀನಾಳ ಕಿಸ್’ ಎಂಬ ಕಾದಂಬರಿಗೆ ೨೦೧೬ರ  ಅಂತರರಾಷ್ಟ್ರೀಯ ಮಟಟ್ದ ‘ಜೇಮ್ಸ್ ಟೈಟ್ ಬ್ಲಾಕ್ ಪ್ರೈಜ್’ ಎಂಬ ಪ್ರಶಸ್ತಿ ದೊರೆತಿದೆ.  

ಕೃತಿಯ ಸಾರಾಂಶ: 

ಲಂಗರು ಅವರ ಎರಡನೆಯ  ಕಥಾ ಸಂಕಲನ. ಇದರಲ್ಲಿ ಸ್ವಾಭಾವಿಕವಾದ ಮತ್ತು ಪ್ರೀತಿಸುವಂತಹ ಕಥೆಗಳಿವೆ. ಇದರಿಂದಾಗಿ ಕಥೆಗಳ ಒಳಗೆ ನಾವು ಪ್ರವೇಶಿಸಿ ಬಿಡುತ್ತೇವೆ. ಅವುಗಳ ಪಾತ್ರಗಳ ಸಂಗಡ ನಾವು ಬದುಕುವಂತೆ ಮಾಡುತ್ತವೆ. ತಾವು ಕಂಡ ಸಂಗತಿಗಳನ್ನೆಲ್ಲಾ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕು ಕೇಂದ್ರಗಳಿಗೆ ಸಂಬಂಧಪಟ್ಟಂತೆ  ಕತೆಯನ್ನು ಹೆಣೆದಿದ್ದಾರೆ. ಇವುಗಳಿಗೆ ಮಾದವತೆಯ ಸ್ಪರ್ಶ ಕೊಡುವ, ಯಾವುದೇ ಕತೆಯನ್ನು  ಬಿಡಿಬಿಡಿಯಾಗಿ ಎಳೆಯದ, ಬದುಕಿನ ನೇಯ್ಗೆಯನ್ನು ಇಡಿಯಾಗಿ ಅಕ್ಕರೆಯಿಂದ, ಆದರದಿಂದ ನೋಡುವ ಕಥೆಗಳಿವು. ಆದ್ದರಿಂದ ವಿಶಿಷ್ಟ ಕಥೆಗಳು ಮತ್ತು ವೈವಿಧ್ಯಪೂರ್ಣ ಕಥೆಗಳು ಎನಿಸುತ್ತವೆ.


ಈ ಕೃತಿಯಲ್ಲಿ ಒಟ್ಟೂ ೧೦ ಕಥೆಗಳಿವೆ. 

ಸಂಪರ್ಕ:

 ಕ್ಲ್ಲಾಸ್‌ಮೇಟ್, ಗೆಳೆಯರಾಗಿದ್ದ ಯುವಕ ಅಶೋಕ್ - ಯುವತಿ ರಾಧಿಕೆಯ  ತಂದೆ- ತಾಯಿಯ ಅನೈತಿಕ ವ್ಯವಹಾರ, ಮುಂದೆ ನೌಕರಿ ಸೇರಿದ ನಂತರ ಇಬ್ಬರೂ ಆಕಸ್ಮಿಕ ಭೇಟಿಯಾಗುವುದು, ಆತ್ಮೀಯರಾಗುವುದು, ಇದನ್ನರಿತ ಅಶೋಕನ ಅಮ್ಮ ಮಗನನ್ನು ಎಚ್ಚರಿಸುವುದು, ಯುವತಿಗೆ ಇದ್ದ  ಲವರ್ ನಾಗರಾಜನಿಗೆ ವರ್ಗಾಣೆಯಾದಾಗ ರಾಧಿಕೆಯನ್ನು ಮದುವೆಯಾಗು ಎಂದು ಅಶೋಕ್ ಎಚ್ಚರಿಸುವುದು, ಅಶೋಕ್- ನಾಗರಾಜ್ ಮಧ್ಯೆ ಈ ಬಗ್ಗೆ ವಾಗ್ವ್ವಾದವಾದಾಗ ತಾನು ಮಧ್ಯೆ ಪ್ರವೇಶಿಸಿದ್ದು ತಪ್ಪಾಯಿತೆಂದು ಅಶೋಕ್ ನೊಂದುಕೊಳ್ಳುವುದು, ವಿಷಯ ಅರಿತ ಅಶೋಕನ ತಾಯಿ ಮಗನಿದ್ದಲ್ಲಿಗೆ ಬಂದು ನಿನಗೆ ಒಳ್ಳೆಯ ಸಂಬಂಧ ಬಂದಿದೆ, ರಾಧಿಕಾಳಿಂದ ದೂರವಿರುವಂತೆ ಆಣೆ ಹಾಕಿಸುವುದು, ಅಮ್ಮನ ಮಾತಿಗೆ ಮಗ ಒಪ್ಪುವುದು... ಇದು ಕಥೆಯ ಸಾರಾಂಶ. 

 ತನ್ನ ಗಂಡನ ಪ್ರಿಯತಮೆಯ ಮಗಳ ಜೊತೆ ಮಗ ಸಂಬಂದ ಬೆಳೆಸದಂತೆ ಎಚ್ಚರಿಸುವ ಕಥೆ ಇದು.  


 ಲಂಗರು 

ಉತ್ತಮ ಸಂಬಂಧದಲ್ಲಿದ್ದ ಅಣ್ಣ-ತಮ್ಮಂದಿರ ಮಧ್ಯೆ ತಮ್ಮನ ಹೆಂಡತಿ ಆಸ್ತಿಗಾಗಿ ತಗಾದೆ ಮಾಡಿ ಗಂಡ ಖಿನ್ನನಾಗುವಂತೆ ಮಾಡುವ ಕಥೆ ಇದು. 

ಅನಂತ ಮತ್ತು ರಘುವೀರ ಅಣ್ಣ ತಮ್ಮರು. ಅನಂತ ಅಡಿಕೆ ಮಂಡಿ ಮಾಡಿಕೊಂಡರೆ, ರಘುವೀರ ಲಘು ಹಡಗಿನ ಮಾಲೀಕನಾಗಿರುತ್ತಾನೆ ಹೊನ್ನಾವರ ಮತ್ತು ಮಂಗಳೂರಿನಿಂದ ಮುಂಬೈಗೆ ಸರಂಜಾಮುಗಳನ್ನು ಸಾಗಿಸುವವನಾಗಿರುತ್ತಾನೆ. ಹೊನ್ನಾವರದಲ್ಲಿ ಶರಾವತಿಗೆ ಸೇತುವೆಯಾದ ನಂತರ ಈತನ ವ್ಯವಹಾರ ಕಡಿಮೆಯಾಗುತ್ತದೆ. ಇದರಿಂದ ಹೆಂಡತಿ ಮಾಲಿನಿಯಿಂದ ಕಿರಿಕಿರಿ, ಕೌಟುಂಬಿಕ ಸಮಸ್ಯೆ ಶುರುವಾಗುತ್ತದೆ.  . ಅನಂತ ತಾಯಿಯ ಆಸ್ತಿ ಪಾಲು ಮಾಡಿಕೊಡುತ್ತಾನೆ. ಪಾಲು ಸರಿಯಾಗಿಲ್ಲ ಎಂದು ಹೆಂಡತಿ ತಗಾದೆ ಆರಂಬಿಸಿದಾಗ ಅಣ್ಣನೊಂದಿಗೆ ಉತ್ತಮ ಸಂಬಂಧದಲ್ಲಿದ್ದ ರಘುವೀರ ಬೇಸರಗೊಂಡು  ಬಂದರ್ ಬಳಿ ಹೋಗಿ ಅಲ್ಲಿ ಲಂಗರ್ ಹಾಕಿ ಕುಳಿತಿದ್ದ ತನ್ನ ಹಳೆಯ ಹಡಗಿನ ಬಳಿ ಹೋಗಿ ಖಿನ್ನನಾಗಿ ಕುಳಿತುಕೊಳ್ಳುತ್ತಾನೆ.

 ನಮ್ಮ ಪಾಡಿಗೆ ನಾವು

 ಕುಮಟಾದ ಹೆರವಟ್ಟಾದ  ಬಾಯಕ್ಕ ಘಟಾನುಘಟಿ ಹೆಂಗಸು. ಮುದುಕಿಯಾದರೂ ಯಾರಿಗೆ ಅನ್ಯಾಯ ಆದರೂ ಸಹಿಸುತ್ತಿರಲಿಲ್ಲ. ತಮ್ಮ ಬಡಾವಣೆಯ ರಸ್ತೆ ದುರಸ್ತಿ ಮಾಡದಿದ್ದಕ್ಕೆ  ನಗರಸಭೆ ಸದಸ್ಯನಿಗೆ ಎಚ್ಚರಿಕೆ ಕೊಟ್ಟಿರುತ್ತಾಳೆ. ಒಂದು ದಿನ ಪಕ್ಕದ ಮನೆಯ ಶಂಕರ ಮತ್ತು ಆತನ ಹೆಂಡತಿ ತನ್ನ ತಾಯಿ ಕಮಲಕ್ಕನನ್ನು ಮನೆಯಲ್ಲಿ ಬಿಟ್ಟು ಎಲ್ಲಿಗೋ ಹೋದಾಗ ಆಕೆಗೆ ಸೊಸೆ ಕೊಟ್ಟ ತಂಗಳು ತಿಂಡಿಯಿಂದ ಏಕಾಏಕಿ ವಾಂತಿ ಶುರುವಾಗುತ್ತದೆ. ಸೊಸೆಗೂ ಅತ್ತೆಗೂ ಸೇರಿಬರುತ್ತಿರಲಿಲ್ಲ. ಇದಕ್ಕಾಗಿಯೇ ಹೀಗೆ ಮಾಡಿದ್ದಾಳೆಂದು ಸಿಟ್ಟುಗೊಂಡು ಕಮಲಕ್ಕನನ್ನು ತನ್ನ ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿರುತ್ತಾಳೆ.  ಮಗ ಮರಳಿದ ನಂತರ ಕರೆದುಕೊಂಡು ಹೋಗಲು ಬಂದಾಗ ಕಳುಹಿಸದೆ ಬೈದು ಕಳುಹಿಸುತ್ತಾಳೆ. ಊರವರು ಬಂದು ಪಂಚಾಯಿತಿಗೆ ಮಾಡಿದಾಗ ಮಗ- ಸೊಸೆಯ ಮರ್ಯಾದೆಯನ್ನು ತೆಗೆಯುತ್ತಾಳೆ. ತಾಯಿ ನೋಡಿಕೊಳ್ಳಲಾಗದವನು ಎಂದು ಊರವರೆದುರು ಬೈಯ್ಯುತ್ತಾಳೆ. ಎಲ್ಲರೂ ಸೇರಿ ಸಮಾಧಾನ ಮಾಡಿದ ಮೇಲೆ ಕೊನೆಗೂ ಕಮಲಕ್ಕಳನ್ನು ಮಗನ ಜೊತೆ ಕಳುಹಿಸಿಕೊಡುತ್ತಾಳೆ. ನಮ್ಮ ಪಾಡಿಗೆ ನಾವಿರುವುದೇ ಒಳ್ಳೆಯದು ಎಂದುಕೊಳ್ಳುತ್ತಾಳೆ. 

ಅಂತಃಪಟ

ಹೊಲಿಗೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ ಮಹಾದೇವ ಬಟ್ಟೆ ಕತ್ತರಿಸುವ ಕೆಲಸಕ್ಕೆ ಸೇರಿದ ರಾಗಿಣಿ ಬಟ್ಟೆ ಹೊಲಿಯಲು ಕೊಡಲು ಬರುತ್ತಾಳೆ. ಆಕೆಯ ದೇಹದ ಎಲ್ಲಾ ಕಡೆ ಕೈತಾಗಿಸುತ್ತಾನೆ. ಮುಗುಳ್ನಗೆ ಕೊಟ್ಟು ಆಕೆ ತೆರಳಿದ ನಂತರ ಈತನಿಗೆ ಪುಳಕ ಉಂಟಾಗುತ್ತದೆ. ಅವಳ ಆಕೃತಿ ಈತನಿಗೆ ಕಾಡಲಾರಂಭಿಸುತ್ತದೆ. ಹಲವು ದಿನವಾದರೂ ಆಕೆ ಬಟ್ಟೆ ಒಯ್ಯಲು ಬರುವುದಿಲ್ಲ. ಒಂದು ದಿನ ಬಂದಾಗ ಹೊಲಿದಿದ್ದು ಸರಿ ಇಲ್ಲ ಎಂದು ಮತ್ತೆ ಅತ್ತೆ ಅಂಗಡಿಗೆ ಬರಲಾರಂಭಿಸುತ್ತಾಳೆ. ಅಳತೆಯನ್ನು ಪಡೆಯುತ್ತಾನೆ. ಮಾರನೇ ದಿನ ಬಂದ ಆಕೆ ಆತನನ್ನು  ಎಲ್ಲಿಗೋ ಕರೆದುಕೊಂಡು ಹೋಗುತ್ತಾಳೆ. ಮೊದಲ ರಾತ್ರಿ ತರ ಇಬ್ಬರು ಕಳೆಯುತ್ತಾರೆ. ಆತ ಒಪ್ಪುವುದಿಲ್ಲ.  ಎದ್ದು ತನ್ನ ಮನೆಗೆ ಬಂದಾಗ ಹೆಂಡತಿ ಎಲ್ಲಿಗೆ ಹೋಗಿದ್ದೆ ಎನ್ನುತ್ತಾ ಏಕಾಏಕಿ ಆತನನ್ನು ತಬ್ಬಿ ರಮಿಸತೊಡಗುತ್ತಾಳೆ.  

ಗುರುತು

 ಹೆರವಟ್ಟಾದ ಮುಕುಂದ ಮಾಸ್ತರ್ ಅರಮನೆಯಲ್ಲಿ ಆನಂದ ಇದ್ದು ಓದಿದವನು. ಮಾಸ್ತರರ ಮಗ ಮಂಜುನಾಥ್ ಮತ್ತು ಈತ ಇಬ್ಬರೂ ಕ್ಲಾಸ್ಮೇಟ್.  ಇದರ ನೆನಪಿಗಾಗಿ ತಮ್ಮ ಆಸ್ತಿಯಲ್ಲಿ ಪಾಲನ್ನು ಕೊಡಲು ಮುಂದಾಗುವ ಕಥೆ ಇದು. ಮಾಸ್ತರರ ಮಗ ಮಂಜುನಾಥ್ ತಂದೆಯಲ್ಲಿ ಆಸ್ತಿಗಾಗಿ ಕಾಡುತ್ತಾನೆ. ಆಗ ಪ್ರೀತಿಯ ಶಿಷ್ಯನಾದ ಆನಂದನಿಗೆ ಪತ್ರ ಬರೆದು ಮಾತನಾಡಬೇಕು, ಕೂಡಲೇ ಒಮ್ಮೆ ಬಂದು ಹೋಗು ಎಂದು ಕರೆಯುತ್ತಾರೆ. ಅವರ ಮನೆಗೆ ಆನಂದ ಬಂದಾಗ ತನ್ನ ಆಸ್ತಿಯ ಒಂದು ಪಾಲನ್ನು ನಿನಗೆ ಕೊಡುವೆ ಎನ್ನುತ್ತಾರೆ. ಆನಂದನು ಮಾಸ್ತರರ ಜೊತೆ ಕಾಡು ಮೇಡು ಅಲೆದು ಜ್ಞಾನ ಪಡೆದವನು, ಶಿಕಾರಿಗೆ ಹೋದವನು, ಪ್ರಾಣಿಗಳ ಚಲನವನ್ನು ಅರಿತವನು. ಮಾಸ್ತರರು ‘ತನ್ನಲ್ಲಿಯೇ ಇದ್ದು ಬಿಡು’ ಎಂದು ಹೇಳಿದಾಗ, ಆತ ‘ತನ್ನ ಜೊತೆ ಬಂದು ಇರಿ. ನಿಮ್ಮ ಆಸ್ತಿಯ ಪಾಲನ್ನು ನನಗೇಕೆ ಕೊಡುವಿರಿ?’ ಎಂದು ಕೇಳಿದಾಗ ಅವರು ಯಾವುದಕ್ಕೂ ಉತ್ತರಿಸುವುದಿಲ್ಲ.  ಆಸ್ತಿಯಲ್ಲಿನ ಪಾಲನ್ನು ಪಡೆದನೇ ಎನ್ನುವುದಕ್ಕೆ ಉತ್ತರ ಇದರಲ್ಲಿದೆ. 

 ನಿಲುಕು 

  ಅಗೋಚರ ಎಂದು ಕಥೆ ಬರೆದವನಿಗೆ ಸರಸ್ವತಿ ಎಂಬ ಹೆಸರಿನ ಮಹಿಳೆ ಅಗೋಚರವಾಗಿ ಕಾಡುವ ಕಥೆ ಇದು. ಮನೋಜನ ಮನೆಯಲ್ಲಿ ಪುಸ್ತಕದ ರಾಶಿಯನ್ನು ತಡೆಕಾಡುವಾಗ  ಶ್ರೀರಾಮನಿಗೆ ಸಿಕ್ಕ ಎರಡು ಡೈರಿಗಳ ಪೈಕಿ ಒಂದರಲ್ಲಿ ‘ಅಗೋಚರ’ ಎಂಬ ಕಥೆ ಕಾಣುತ್ತದೆ. ಶ್ರೀರಾಮ ಮತ್ತು ಅರ್ಜುನ ಆಪ್ತರು. ಈ ಮಧ್ಯೆ ಶ್ರೀರಾಮನು ‘ಅಗೋಚರ’ ಎಂಬ ಕಥೆಯನ್ನು ಬರೆದಿದ್ದನು. ಶ್ರೀರಾಮನಿಗೆ ಸರಸ್ವತಿ ಎಂಬ ಹೆಸರಿನಲ್ಲಿ ಪತ್ರಗಳು ಬರಲಾರಂಭಿಸುತ್ತವೆ. ಒಂದು ದಿನ ಯುವತಿಯೊಬ್ಬಳು ತಾನು ಸರಸ್ವತಿ ಎನ್ನುತ್ತಾ  ಸೂಟ್ಕೇಸ್‌ನೊಂದಿಗೆ ಆತನ ಮನೆಗೆ ಹಾಜರಾಗುತ್ತಾರೆ. ‘ನಾನು ಕಳಿಸಿದ ಪತ್ರ ಸಿಕ್ಕಿತೇ’ ಎಂದು ಕೇಳಿದಾಗ ಆತ ‘ಇಲ್ಲ’ ಎನ್ನುತ್ತಾನೆ. ‘ನಿನ್ನ ಮದುವೆಯಾಗಬೇಕು ಎಂದು ಕೇಳಿ ಪತ್ರ ಬರೆದಿದ್ದೆ’ ಎನ್ನುತ್ತಾಳೆ. ಅದಕ್ಕೆ ಆತ ಕೊಟ್ಟ ಉತ್ತರ ಏನು, ಮತ್ತೆ ಮತ್ತೆ ಕಾಡುವ ಆPಯಿಂದ ಬಿಡಿಸಿಕೊಂಡನೇ................?

 ಮೋಹನ ಮುರಳಿ 

 ರಾಮರಾವ್ ಮೆಟ್ರಿಕ್ ನಂತರ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ಕೆಲಸ ಸಿಗುವ ಅವಕಾಶವಿದ್ದರೂ ಅದನ್ನು ಬಿಟ್ಟು ಮೇಳಗಳಲ್ಲಿ ತಿರುಗಾಡುತ್ತಾನೆ. ಅಮ್ಮ ಎಷ್ಟೇ ಹೇಳಿದರೂ ಯಕ್ಷಗಾನದ ಹುಚ್ಚನ್ನು ಬಿಡುವುದಿಲ್ಲ.  ಸುಶೀಲೆ  ಎನ್ನುವವಳನ್ನು ಮದುವೆಯಾಗುತ್ತಾನೆ. ವರ್ಷಗಳಲ್ಲಿ ಆತನಿಗೆ ಹೆಣ್ಣು ಮಗುವಾಗುತ್ತದೆ. ಯಕ್ಷಗಾನದ ಹುಚ್ಚಿನಲ್ಲಿ ಊರೂರು ಸುತ್ತುತ್ತಿರುತ್ತಾನೆ. ಮಗಳಿಗೆ ಭೇದಿ ಆರಂಭವಾಗಿ  ಆಕೆ ಮೂರನೇ ದಿನವೇ ಸತ್ತು ಹೋಗುತ್ತಾಳೆ. ಇದರಿಂದ ಆಕೆ ಹುಚ್ಚಿಯಂತಾಗಿ ಒಂಟಿಯಾಗುತ್ತಾಳೆ. ನಂತರ ದಿನಕರ ಆಟದ ಹುಚ್ಚನ್ನು  ಕಡಿಮೆ ಮಾಡಿದನೇ?,  ಹೆಂಡತಿಯನ್ನು ನೋಡಿಕೊಳ್ಳಲಾರಂಭಿಸಿದನೇ?  ಮುಂದೆ ಆತ ಹೇಗೆ ಸರಿದಾರಿಗೆ ಬಂದ,  ತನ್ನ ತಾಯಿ ಸುಶೀಲಯನ್ನು ಕರೆದುಕೊಂಡು ತನ್ನೊಟ್ಟಿಗೆ ಹೋಗಲು ಏಕೆ ನಿರ್ಧರಿಸಿದ, ಆತನ ತಂದೆಯ ಮನಸಿನಲ್ಲಿ ಬಂದ ವಿಚಾರವೇನು? ಎನ್ನುವುದನ್ನೆಲ್ಲ ಕಥೆ ವಿವರಿಸುತ್ತದೆ. 

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೭. ೧೧. ೨೦೧೬

...........................


Comments

Popular posts from this blog