ನಗರ ಜೀವನದ ಕಷ್ಟಗಳನ್ನು ವಿವರಿಸುವ
ತೂಫಾನ್ ಮೇಲ್
ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ಅವರ ಕೃತಿ ತೂಫಾನ್. ಈ ಕೃತಿಯಲ್ಲಿ ಒಟ್ಟೂ ೧೧ ಕಥೆಗಳಿವೆ. ಎಲ್ಲಾ ಕಥೆಗಳೂ ಅವರು ಮುಂಬೈನಿಂದ ಬೆಂಗಳೂರಿಗೆ ಬಂದ ನಂತರ ಬರೆದವಾದರೂ ಮುಂಬೈ ಕೇಂದ್ರಿತ ಕಥೆಗಳಾಗಿವೆ. ಎರಡು- ಮೂರು ಕಥೆಗಳಲ್ಲಿ ಮುಂಬೈನಿಂದ ಗೋಕರ್ಣವನ್ನು ತೋರಿಸುತ್ತ್ತಾರೆ. ಈ ಕಥೆಗಳುಲ್ಲಿ ಅವರ ವಿಶಿಷ್ಟ ನೋಟವನ್ನು ಕಾಣಬಹುದು. ನಗರ ಜೀವನ, ಅಲ್ಲಿಗೆ ತೆರಳುವ ಹಳ್ಳಿ ಜನರು, ಅದಕ್ಕೆ ಹೊಂದಿಕೊಳ್ಳಲಾಗದ ಪರಿಸ್ಥಿತಿ, ಕೆಲವರು ಮತ್ತೆ ಊರಿಗೆ ಮರಳುವುದು, ಇದನ್ನೆಲ್ಲ ಅವರದೇ ನೋಟದಲ್ಲಿ ಸುಂದರವಾಗಿ ಇಲ್ಲಿ ಚಿತ್ರಿಸಿದ್ದಾರೆ.
ಅವರ ಕಥೆಗಳಲ್ಲಿನ ಚಲನೆ, ಲಯ, ಹೊಮ್ಮುವ ಚೈತನ್ಯ ಓದುಗರನ್ನು ಸೆಳೆಯುತ್ತದೆ. ಆದ್ದರಿಂದ ಎಲ್ಲ ಕಥೆಗಳೂ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ.
ನೋ ಪ್ರೆಸೆಂಟ್ಸ್ ಪ್ಲೀಸ್
೨೨ರ ಹರಯದ ಪೋಪಟ್ ಬಾಲ್‌ಪೆನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅಸಾವರಿ ಲೋಖಂಡೆ ಜೊತೆಗಿನ ತನ್ನ ತನ್ನ ಮದುವೆಗೆ ಆಮಂತ್ರಣ ಪತ್ರಿಕೆಯನ್ನು ಆಯ್ಕೆ ಮಾಡಲು ಒಂದಷ್ಟು ನಮೂನೆಯನ್ನು ಆಯ್ದು ಅದನ್ನು ಮುದ್ರಣಕ್ಕೆ ಕೊಡಲು ಪುಸ್ತಕದ ಅಂಗಡಿಯ ತ್ರಿಪಾಠಿ ಹತ್ತಿರ ಆಮಂತ್ರಣ ಬರೆಸಿಕೊಳ್ಳುತ್ತಾರೆ. ಆಮಂತ್ರಣದ ಕೊನೆಯಲ್ಲಿ ಹೆಸರು ಹಾಕುವಾಗ ಅಸಾವರಿ ಲೋಖಂಡೆ ಎದುರು ತನ್ನ ಹೆಸರು ಪೋಪಟ್ ಎಂದು ಬರೆಯುವುದು ತೀರಾ ಜುಜುಬಿ ಆಗಿ ಆತನಿಗೆ ಕಾಣುತ್ತದೆ. ಅಂದರೆ ಜಾತಿ ಸಮಸ್ಯೆ ಎದುರಾಗುತ್ತದೆ. ಪ್ರೀತಿಸುವಾಗ ಇಲ್ಲದ ಜಾತಿ ಮದುವೆಯಾಗುವಾಗ ಕಾಡುತ್ತದೆ. ಕೊನೆಗೆ ಅಸಾವರಿ ಪೋಪಟ್‌ಗೆ ಸ್ವಪ್ನಿಲ್ ಎಂಬ ಹೊಸ ಹೆಸರನ್ನು ಇಡುತ್ತಾಳೆ. ಕೊನೆಗೆ ಆಮಂತ್ರಣ ಪತ್ರಿಕೆಯಲ್ಲಿ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಎಂದು ಹಾಕುವ ಬಗ್ಗೆ ಇಬ್ಬರಲ್ಲೂ ಚರ್ಚೆ ಉಂಟಾಗುತ್ತದೆ. ಆಮಂತ್ರಣ ಬರೆದು ಕೊಟ್ಟ ತ್ರಿಪಾಠಿ, ‘ಅದೆಲ್ಲ ಶ್ರೀಮಂತರ ಶೈಲಿಗಳು. ನಮಗೆ ಹೇಳಿದ್ದಲ್ಲ, ಯಾರಾದರೂ ಪ್ರೀತಿಯಿಂದ ಏನಾದರೂ ಕೊಟ್ಟರೆ ತಗೊಳ್ಳಿ. ಹೊಸ ಜೀವನ ನಿಮ್ಮದು. ಬೇಕಾಗುತ್ತದೆ’ ಎಂದು ಸಲಹೆ ಕೊಟ್ಟು ಬರೆದುಕೊಡುತ್ತಾನೆ.
ಕಣ್ಮರೆಯಾದ ಕಾಡು
ಪರುಳೇಕರ್ ಕಾರ್ಖಾನೆಯಲ್ಲಿ ಕೆಲಸ ಮಾಡುವಾತ. ಆತನ ಮಗ ಛೋಟು (ಮಕರಂದ್) ಪಿಯುಸಿ ಫೇಲ್ ಆಗಿ ಮನೆಯಲ್ಲಿದ್ದ. ಅಪ್ಪನ ಕಷ್ಟದ ಪರಿವೇ ಇರದ ಮಗ ಈತ. ಒಂದು ದಿನ ತಂಡವೊಂದು ಧಾವಿಸಿ ಆತನಿಗೆ ಸಿಕ್ಕಾಪಟ್ಟೆ ಥಳಿಸಿ, ಬೆದರಿಕೆ ಹಾಕಿ ಹಣ ವಾಪಸ್ ಕೊಡದಿದ್ದರೆ ಪ್ರತಿವಾರ ಬಂದು ಎಲ್ಲರೆದುರು ಹೊಡೆಯುವುದಾಗಿ ಹೇಳಿ ಹೋಗುತ್ತಾರೆ. ಈತ ಫೈನಾನ್ಸ್ ಬಿಸಿನೆಸ್ ಮಾಡುವುದಾಗಿ ಅವರಿಂದ ೨೦ ಸಾವಿರ ಪಡೆದಿರುತ್ತಾನೆ. ಇದೇ ವೇಳೆ ಅಕ್ಕ ಪೂರ್ವಿಯ ಮದುವೆ ಹತ್ತಿರವಿರುತ್ತದೆ. ಅಪ್ಪ ಈ ಘಟನೆ ನಂತರ ಛೋಟುನನ್ನು ನಡುರಾತ್ರಿ ಮನೆಯಿಂದ ಹೊರಹಾಕುತ್ತಾನೆ. ಆಗ ತಾಯಿ ಕುಸಿದುಬೀಳುತ್ತಾಳೆ. ಪೂರ್ವಿಯನ್ನು ಮದುವೆಯಾಗುವ ಸುಹಾಸ್ ಸಹ ತನ್ನ ಮದುವೆಗೆ ಛೋಟು ಬಂದರೆ ಮದುವೆ ನಿಂತು ಹೋಗುತ್ತದೆ ಎನ್ನುತ್ತಾ ಮನೆಯಲ್ಲೂ ಆತನ ಯಾವುದೇ ಕುರುಹು ಇರಬಾರದೆಂದು ಎಚ್ಚರಿಸುತ್ತಾನೆ. ನಂತರ ಛೋಟು ಅಪ್ಪ ಕೆಲಸಕ್ಕಾಗಿ ದುಬೈಗೆ ಹೋಗುತ್ತಾನೆ. ಛೋಟು ಮುಂಬೈನ ಉಪನಗರದಲ್ಲೇ ಇದ್ದಾನೆಂಬ ಮಾಹಿತಿ ಸಿಗುತ್ತದೆ. ಪೂರ್ವಿ, ಆಕೆಯ ಸಹೋದರಿ ಆತನಿಗಾಗಿ ಹುಡುಕಾಡುತ್ತಾರೆ. ಎಲ್ಲಿಯೂ ಸಿಗುವುದಿಲ್ಲ. ಶಾಶ್ವತವಾಗಿ ಆತನನ್ನು ಕಳೆದುಕೊಂಡ ನೀರವತೆ ಅವರನ್ನಾವರಿಸುತ್ತದೆ.
ಪಾರ್ಟನರ್
ರೂಪಕ್ ಠಾಕೂರ್ ಇನ್ನೊಬ್ಬನ ಜೊತೆ ರೂಮ್‌ನಲ್ಲಿದ್ದರೂ ಆತನ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಆತ ತನ್ನದು ಎಲ್ಲಿ ಕೆಲಸ, ಸಂಬಳ ಎಷ್ಟು, ತಂದೆ-ತಾಯಿ ಯಾರು ಎಂಬ ಯಾವ ಮಾಹಿತಿಯನ್ನೂ ಹೇಳಿರುವುದಿಲ್ಲ. ಆದರೆ ತನ್ನ ಟ್ರಂಕಿಗೆ ಮಾತ್ರ ಬೀಗ ಹಾಕಿರುತ್ತಿದ್ದ. ರಾತ್ರಿ ಎಲ್ಲೋ ತಿಂದು ಬಂದು ಮಲಗುತ್ತಿದ್ದ. ಪಾರ್ಟನರ್‌ನ ಜಗತ್ತು ಬದಲಾಗಿದೆ ಎಂದು ಗೊತ್ತಾಗುತ್ತದೆ ರೂಪಕ್‌ಗೆ. ಬೆಳಗ್ಗೆ ಎದ್ದುಹೋಗುತ್ತಿದ್ದ. ಪ್ರತಿದಿನ ಹೊಸ ಪ್ಯಾಂಟ್, ಶರ್ಟ್, ಶೇವ್ ಮಾಡುವಾಗ ಆಧುನಿಕ ಕ್ರೀಮ್ ಬಳಸುತ್ತಿದ್ದ. ಒಂದು ದಿನ ಪಾರ್ಟನರ್‌ಗೆ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆನೋವು ಎದುರಾಗುತ್ತದೆ. ಅಸಾಧ್ಯ ನೋವಿನಿಂದ ಕೂಗಾಡುತ್ತಾನೆ. ಅಕ್ಕಪಕ್ಕದವರ ನೆರವಿನಿಂದ ಆಸ್ಪತ್ರಗೆ ದಾಖಲಿಸುತ್ತ್ತಾನೆ. ಆಸ್ಪತ್ರೆಯಲ್ಲಿ ಆತನಿಗೆ ಅಪೆಂಡಿಟ್ರಸ್ ಇದೆ ಎನ್ನುವುದು ಗೊತ್ತಾಗುತ್ತದೆ. ಆಪರೇಶನ್ ಮಾಡುತ್ತಾರೆ., ಈ ವೇಳೆ ತನ್ನ ಡ್ರೆಸ್, ಹಣ ಮುಂತಾದವನ್ನು ಠಾಕೂರ್‌ಗೆ ಕೊಡುತ್ತಾನೆ. ಆಗ ಆತನ ಪ್ಯಾಂಟ್‌ನಲ್ಲಿ ವಾಚ್ ಸಿಗುತ್ತದೆ. ಕೆಲವು ದಿನದ ಹಿಂದೆ ವಾಚ್ ಕಾಣೆಯಾಗಿದೆ ಎಂದು ಠಾಕೂರ್ ಬಳಿ ಕೂಗಾಡಿದ್ದ್ದ, ಪಾರ್ಟನರ್‌ನನ್ನು ಅಪರಿಚಿತನಂತೆ ಆಸ್ಪತ್ರೆಯಲ್ಲಿ ಹಲವುದಿನ ನೋಡಿಕೊಳ್ಳುವ ಕೆಲಸ ಆತನದ್ದಾಗುತ್ತದೆ.
ಭಾಮಿನಿ ಸಪ್ತಪದಿ
ಈ ಕಥೆಯಲ್ಲಿ ಗೋಕರ್ಣದಲ್ಲಿ ಹುಟ್ಟಿ ಬೆಳೆದ ಭಾಮಿನಿ ಎಂಟು ವರ್ಷದವಳಿದ್ದಾಗಲೇ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ನಂತರ ಆಕೆಯ ತಂದೆ ಅಹಮದಾಬಾದ್‌ನಲ್ಲಿ ದೇವಸ್ಥಾನದ ಕೆಲಸಕ್ಕೆ ಆಕೆಯೊಂದಿಗೆ ತೆರಳುತ್ತಾನೆ. ಭಾಮಿನಿ ಅಲ್ಲಿಯೇ ಸ್ಟೇಷನರಿ ಅಂಗಡಿಯ ಪರೇಶ್ ಶಹಾ ಎನ್ನುವವರನ್ನು ಮದುವೆಯಾಗುತ್ತಾಳೆ. ನಂತರ ಅಲ್ಲಿನ ಮುನ್ಸಿಪಲ್ ಚುನಾವಣೆಗೆ ನಿಂತು ಗೆದ್ದು ಬರುತ್ತಾಳೆ. ಈ ಸಂದರ್ಭದಲ್ಲಿ ಅಹಮದಾಬಾದಿನ ಮೋರ್ವಿ ಎಂಬಲ್ಲಿ ನಡುರಾತ್ರಿ ಅತಿವೃಷ್ಟಿಯಿಂದ ಅಣೆಕಟ್ಟು ಒಡೆದು ತುಂಬಾ ನಷ್ಟವಾಗುತ್ತದೆ. ಅಲ್ಲಿನ ಚಿಕ್ಕ ಮಗುವನ್ನು ತನ್ನ ಮನೆಗೆ ಎತ್ತಿಕೊಂಡು ಬಂದು ಕಾಪಾಡುತ್ತಾಳೆ. ಆದರೆ ಗಂಡ ಇದಕ್ಕೆ ವಿರೋಧಿಸುತ್ತಾನೆ. ತನ್ನ ಮಗು ಪಿಂಕಿ ಇವಳ ಜೊತೆ ಶಿಬಿರದಿಂದ ತಂದ ಹುಡುಗಿ ಡಿಂಕಿ, ಒಟಟಿಗೆ ಇರುವುದು ಆತನಿಗೆ ಸರಿ ಬರುವುದಿಲ್ಲ. ಸಾಮಾಜಿಕ ಕೆಲಸದ ಹೆಸರಿನಲ್ಲಿ ಪತ್ನಿಯ ಹೆಸರಿನಲ್ಲಿ ಸಾರ್ವಜನಿಕ ಚೆಂದ ಎತ್ತಿ ಪರೇಶ್ ಸಿಕ್ಕಿಬೀಳುತ್ತಾನೆ. ಇದರಿದಂ ಇಬ್ಬರಲ್ಲೂ ಮೈಮನಸ್ಸು ಉಂಟಾಗುತ್ತದೆ. ಒಂದು ದಿನ ಕುದಿಯುವ ಬಿಸಿನೀರು ಡಿಂಕಿಯ ಬಲಗಾಲ ಮೇಲೆ ಬಿದ್ದು ಸುಟ್ಟು ಹೋಗುತ್ತದೆ. ಆಸ್ಪತ್ರ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಾಳೆ. ಡಿಂಕಿಯನ್ನು ತನ್ನ ಸ್ವಂತಮಗಳಂತೆ ಕಾಪಾಡುತ್ತಾಳೆ. ಡಿಂಕಿ ಮನೆಯಲ್ಲಿರುವುದು ಬೇಡ ಎಂದು ಪತಿ ಕೂಗಾಡುತ್ತಾನೆ. ಮಾರನೆಯ ದಿನ ಮನೆಯಿಂದ ಹೊರಟು ಗೋಕರ್ಣಕ್ಕೆ ಬರುತ್ತಾಳೆ. ತನ್ನ ಹಳೆಯ ಮನೆಯನ್ನು ಹುಡುಕಿದಾಗ ಅಮ್ಮನ ಗೆಳತಿ ನಾಗರತ್ನಮ್ಮ ಸಿಕ್ಕಿ ತನ್ನ ಮನೆಗೆ ಕರೆತರಳುತ್ತಾಳೆ. ಡಿಂಕಿಯನ್ನು ಮನೆಯಲ್ಲಿ ಆಡಲು ಬಿಟ್ಟು ಭಾಮಿನಿ ಸಮುದ್ರದ ಅಂಚಿಗೆ ತೆರಳುತ್ತಾರೆ. ಅಲ್ಲಿ ಕೆಲವು ಹೆಂಗಸರು ಮಲ ಹೊರುತ್ತಿರುತ್ತಾರೆ. ‘ಹೀಗೇಕೆ ಮಾಡುತ್ತೀರಿ’ ಎಂದು ಆಕೆ ಕೇಳಿದಾಗ ‘ನಮ್ಮ ಮಕ್ಕಳದ್ದನ್ನು ತೆಗೆಯುವುದಿಲ್ಲವೇ. ಹಾಗೆಯೇ ಇದು’ ಎನ್ನುತ್ತಾರೆ. ಆ ಮಾತಿನಿಂದ ಭಾಮಿನಿ ಮೈ ಜುಮ್ ಎನಿಸುತ್ತದೆ. ತಾನು ಸಾಕಿದ ಮಗುವಿನ ನೆನಪಾಗುತ್ತದೆ ಅದೇ ವೇಳೆ ಡಿಂಕಿ ಬಿಳಿ ಹಕ್ಕಿಯಂತೆ ತಾಯಿಯ ಓಡಿ ಬರುತ್ತಾಳೆ.
ಕನ್ನಡಿ ಇಲ್ಲದ ಊರಿನಲ್ಲಿ
ಅವಿವಾಹಿತ ಸತ್ಯಜಿತ್ ದತ್ತಾ ಏಕಾಂಗಿಯಾಗಿ ಬಾಡಿಗೆ ರೂಮಿನಲ್ಲಿದ್ದವನು. ಈತನ ರೂಮಿಗೆ ರೈಲ್ವೆಯಲ್ಲಿ ನಿವೃತ್ತನಾದ ಹಿರಿಯ ವ್ಯಕ್ತಿ ಸಂಜೀವ್ ಸೇನ್ ಬಂದು ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ತನ್ನ ಮಗಳು ಶಾಲಿನಿ ಸೇನ್‌ಳ ಪ್ರಪ್ರೋಸಲ್ ಕೊಡುತ್ತಾನೆ. ಈಕೆಯ ಎಲ್ಲಾ ವಿವರ ನೀಡಿ ವಿಚಾರ ಮಾಡಿ ಫೋನ್ ಮಾಡಿ ಎಂದು ಹೋಗುತ್ತಾನೆ. ಮದುವೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸತ್ಯಜಿತ್‌ಗೆ ತಲೆ ತುಂಬಾ ಶಾಲಿನಿ ತುಂಬುತ್ತಾಳೆ. ಒಂದುದಿನ ಚರ್ಚ್ ಗೇಟ್ ಎದುರು ಹೊಟೆಲಿನಲ್ಲಿ ಭೇಟಿ ಮಾಡೋಣ ಎಂದು ಹೇಳಿಹೋಗುತ್ತಾನೆ. ಅಲ್ಲಿಗೆ ಬಂದ ಸೇನ್ ಕ್ಷಮಿಸಿ, ಮಗಳು ನಿನ್ನೆ ಸಂಜೆಯಿಂದ ಮನೆಗೇ ಬಂದಿಲ್ಲ. ನಾನು ಮಾತ್ರ ಅವಳ ಮದುವೆಗಾಗಿ ಮಳ್ಳನಂತೆ ಅಲೆಯುತ್ತಿದ್ದೇನೆ ಎಂದು ಹೇಳಿ ಹೋಗುತ್ತಾರೆ. ಸತ್ಯಜಿತ್ ಮನೆಯ ದಾರಿ ಹಿಡಿಯುತ್ತಾನೆ. ಪೆಪ್ಸಿಯನ್ನು ಕುಡಿದು ಖಾಲಿ ಬಾಟಲನ್ನು ಎಸೆಯುತ್ತಾ ಜನರು ರೈಲಿ ಹಿಡಿಯಲು ಓಡುತ್ತಿರುತ್ತಾರೆ. ಆ ಬಾಟಲಿ ಹಿಡಿಯಲು ಮಕ್ಕಳು ತೊಟ್ಟಿಯ ಸುತ್ತ ಮುಗಿಬೀಳುತ್ತಿದುದ್ದನ್ನು ಗಮನಿಸುತ್ತಾ ತನಗೂ ಇದೇ ಸ್ಥಿತಿ ಎದುರಾಯಿತಲ್ಲ ಎಂದುಕೊಳ್ಳುತ್ತಾನೆ.
ತೂಫಾನ್ ಮೇಲ್
ತೂಫಾನ್ ಮೈಲ್ ಶರವೇಗದಲ್ಲಿ ಬರುವ ಟ್ರೇನ್. ಅದೇ ಮಾದರಿಯಲ್ಲಿ ಮುನ್ನಾ ಎಂಬ ಸ್ಟಂಟ್ ಕಲಾವಿದ ತನ್ನ ಹೆಸರನ್ನು ತೂಫಾನ್ ಎಂದು ಬದಲಿಸಿಕೊಂಡು ಬೈಕ್ ಜಂಪ್ ಮತ್ತು ಗ್ಲ್ಲಾಸ್ ಜಂಪ್ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಈತನಿಗೆ ತನ್ನ ಅಪ್ಪ ಯಾರು ಎನ್ನುವುದು ತಿಳಿದಿರಲಿಲ್ಲ. ಈತನ ಅಪ್ಪ ತೂಫಾನ್ ಮೇಲ್‌ನಲ್ಲಿ ಕತ್ತಲು ಹರಿಯುವ ಮುನ್ನ ಪ್ರತಿದಿನ ಬರುತ್ತಿದ್ದ. ದಾದರ್ ಸ್ಟೇಶನ್‌ನಲ್ಲಿ ಅದರ ನಿಲುಗಡೆ ಇದ್ದರೂ ಅಲ್ಲಿ ಆತ ಇಳಿಯದೆ ಅದರ ಹಿಂದಿನ ದಹಿಸರ್ ನಿಲ್ದಾಣದಲ್ಲಿ ರೈಲಿನಿಂದ ಹಾರಿ ಉರುಳುತ್ತ್ತಿದ್ದ. ಪೆಟ್ಟಾಗದಂತೆ ಎದೆಗೆ ಮತ್ತು ಹೊಟ್ಟ್ಟೆಗೆ ಬಿಗಿದ ಪೊಟ್ಟಣ ಕಟ್ಟಿಕೊಳ್ಳುತ್ತಿದ್ದ. ಮುನ್ನಾ ಆಗಲಿ, ಆತನ ತಾಯಿಯಾಗಲಿ ಆತನನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ರೈಲಿನಿಂದ ಬಿದ್ದೊಡನೆ ಒಂದು ಚೀಲ ಎಸೆದು ಕತ್ತಲಲ್ಲೇ ತೆವಳುತ್ತ ಕಣ್ಮರೆಯಾಗುತ್ತಿದ್ದ. ಆ ಚೀಲದಲ್ಲಿ ಹಣ, ಹಣ್ಣು, ವಸ್ತ್ರ, ಸಾಮಗ್ರಿಗಳಿರುತ್ತಿದ್ದವು. ತನ್ನ ಅಪ್ಪ ಬರುವ ವೇಗದ ತೂಫಾನ್ ಮೇಲ್‌ನ ವೇಗಕ್ಕೆ ಮಾರುಹೋಗಿದ್ದ ಮುನ್ನಾ ತನಗೂ ಅದೇ ಹೆಸರನ್ನಿಟ್ಟುಕೊಂಡು ಅದ ವೇಗದಲ್ಲಿ ಸ್ಟಂಟ್ ಮಾಡುತ್ತಿದ್ದ. ಕೆಂಬಣ್ಣನದ ಸಿಗ್ನಲ್ ಬಂದ ಕೂಡಲೇ ತುಸು ನೀಳವಾಗಿ ಬೈಕ್ ಮೇಲೆ ಜರುಗಿ ಬೈಕಿಗೆ ಕಿಕ್ ಕೊಡುತ್ತಿದ್ದ. ಅದು ಒಮ್ಮೆಗೇ ದೂರದಿಂದ ನೀರವವನ್ನು ನೀಗುತ್ತಾ ತೂಫಾನ್ ಮೇಲ್‌ನ ಸದ್ದಿನಿಂದ ಹೋಗುತ್ತಿತ್ತು.
ಬಾವಿಯಲ್ಲೊಂದು ಬಾಗಿಲು
ಸರ್ಕಸ್‌ನ ಮೃತ್ಯಗೋಲದ ಶರವೇಗದ ಮೊಬೈಕ್ ವೀರ ರಾಕೆಟ್ ತೇಜಬಲಿ. ಕಂಪನಿಯ ಮಾಲಿಕ ರಾಮ್ ಪ್ಯಾರೆ. ಇಬ್ಬರೂ ಅತ್ಯಾಪ್ತರು. ಒಂದು ದಿನ ಕ್ಯಾಂಪಿನಲ್ಲಿ ಬಾವಿಯ ಬಳಿ ಇದ್ದ ಬಲ್ಬ ನ ವೈರ್ ಮುಟ್ಟಿ ಬಾಲಕಿಯೊಬ್ಬಳು ಸಾಯುತ್ತಾಳೆ. ಇದರಿಂದ ಜನರ ಕೋಪಕ್ಕೆ ಕಂಪನಿ ಬಲಿಯಾಗುತ್ತದೆ. ಮಾಲೀಕನಿಗೆ ಜನರು ಥಳಿಸುತ್ತಾರೆ. ತೇಜಬಲಿ ಕುಸಿದುಹೋಗುತ್ತಾನೆ. ಮುಂದಿನ ಕ್ಯಾಂಪ್‌ಗಳಲ್ಲಿ ಹುರುಪಿನಿಂದಿರುವುದಿಲ್ಲ. ಕಂಪನಿಯಿಂದ ಬೇರ್ಪಡಲು ನಿರ್ಧಾರ ಮಾಡುತ್ತಾನೆ. ಕ್ಯಾಂಪ್ ಮುಂದಿನ ಊರಿಗೆ ಹೋಗಲು ಸಿದ್ಧತೆ ನಡೆದಿರುತ್ತದೆ. ಈ ವೇಳೆ ಸಮುದ್ರದ ದಡದಲ್ಲಿ ಮಲಗಿದ್ದ ತೇಜಬಲಿ ಮತ್ತೆ ಮೇಲೇಳಲೇ ಇಲ್ಲ. ತೇಜಬಲಿ ಇನ್ನೂ ಬಂದೇ ಇಲ್ಲ ಎಂದು ಕೆಲಸಗಾರರು ಹೇಳಿದರೂ ಬಂದೇ ಬರುತ್ತಾನೆ ಎನ್ನುತ್ತಾ ರಾಮ್ ಪ್ಯಾರೆ ಕಂಪನಿಯೊಂದಿಗೆ ತೆರಳುತ್ತಾನೆ. ಈ ಮಧ್ಯೆ ಮಾಲೀಕನಿಗೆ ತೇಜಬಲಿ ಮಲಗಿದ್ದವನು ಮೇಲೆಳುತ್ತಿಲ್ಲ ಎಂಬ ಸುದ್ದಿ ಕೇಳಿ ಶಾಕ್‌ಗೆ ಒಳಗಾಗುತ್ತಾನೆ. ಸಮುದ್ರದ ದಡದಲ್ಲಿ ವಿಸರ್ಜನೆ ಮಾರನೆ ದಿನ ದಡಕ್ಕೆ ಬಂದು ಬಿದ್ದ ವಿಗ್ರಹದಂತೆ ತೇಜಬಲಿ ಗೋಚರಿಸುತ್ತಾನೆ.
ಟಿಕ್ ಟಿಕ್ ಗೆಳೆಯ
ಟಿವಿ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಕ್ವಿಜ್ ಸರ್ಧೆಗೆ ಹೋದ ಮಧುಬನಿಗೆ ಅಲ್ಲಿ ಭೋಪಾಲ್ ಗ್ಯಾಸ್ ದುರಂತದ ಬಗ್ಗೆ ಪ್ರಶ್ನೆ ಕೇಳಿದಾಗ ಬವಳಿ ಬರುತ್ತದೆ. ಏಕೆಂದರೆ ಆ ದುರಂತದಲ್ಲಿ ತನ್ನ ಹಲವು ಸಂಬಂಧಿಗನ್ನು ಅವಳು ಕಳೆದುಕೊಂಡಿರುತ್ತಾಳೆ. ಹಾಗಾಗಿ ಆ ಪ್ರಶ್ನೆಗೆ ಉತ್ತರಿಸುವಾಗ ಆಕೆ ಕುಸಿಯುತ್ತಾಳೆ. ಆಕೆ ಫೈನಲ್‌ಗೆ ತಲುಪಲು ಇದೊಂದು ಪಶ್ನೆಗೆ ಉತ್ತರಿಸಬೇಕಾಗಿತ್ತು. ಆ ವೇಳೆ ಈ ಘಟನೆ ಸಂಭವಿಸುತ್ತದೆ. ಆಕೆಯ ತಂದೆ ಸೋಹನ್‌ಲಾಲ್ ಅವಳಿಗೆ ಮತ್ತೆ ಅವಕಾಶ ಕೊಡುವಂತೆ ಕ್ವಿಜ್ ಮಾಸ್ಟರ್‌ನಲ್ಲಿ ಗೋಗರೆಯುತ್ತಾನೆ. ಯಾರಾದರೂ ಬಾರದೆ ಇದ್ದರೆ ಮತ್ತೆ ಕೊಡುವುದಾಗಿ ಹೇಳುತ್ತಾರೆ ಸಂಯೋಜಕರು. ಮತ್ತೆ ಅವಕಾಶ ಸಿಗುತ್ತದೆ. ಹೆಸರು ಕರೆದಾಕ್ಷಣ ಸ್ಥಳಕ್ಕೆ ಬರಲು ಸೂಚಿಸಲಾಗುತ್ತದೆ. ಅದಕ್ಕಾಗಿ ಆಕೆ ಟಿಕ್ ಟಿಕ್ ಎಂಬ ಸಂಜ್ಞೆಯನ್ನು ನೋಡುತ್ತಾ ಇರುತ್ತಾಳೆ.
ಗೇಟ್ ವೇ
ನಿವೃತ್ತಿ ಹತ್ತಿರವಿದ್ದ, ಕೆಲಸಕಳೆದುಕೊಂಡಿದ್ದ ಸುಧಾಂಶುಗೆ ಆತನ ಹೆಂಡತಿ ಪಾಲಿ ಬೇರೆ ಕಡೆ ಕೆಲಸ ಹುಡುಕಾಡುವಂತೆ ಸೂಚಿಸುತ್ತಾಳೆ. ಕಂಪನಿ ಒಂದರಲ್ಲಿ ಸಂದರ್ಶನಕ್ಕೆ ಹೋದಾಗ ಅವರ ಇಲ್ಲಸಲ್ಲದ ಪ್ರಶ್ನೆಗಳಿಗೆ ಬೇಸತ್ತು ಅಲ್ಲಿಂದ ಎದ್ದುಬರುತ್ತಾನೆ. ಮನೆಗೆ ಮರಳುವಾಗ ರಸ್ತೆ ದಾಟುವ ವೇಳೆ ಪತ್ನಿ ಡಾಲಿಯು ಗೇಟ್ ವೇ ಯತ ಸಾಗುತ್ತಿದ್ದಳು. ಆಕೆಯ ಹಿಂದೆಯೇ ಆತನೂ ಸಾಗಿದ. ಆಕೆ ಗೇಟ್ ವೇ ಒಳಹೊಕ್ಕು ಟೋಲ್‌ನಲ್ಲಿ ಟಿಕೆಟ್ ಪಡೆದು ಲಾಂಚ್ ಒಳಗೆ ಒಬ್ಬಂಟಿಯಾಗಿ ಕುಳಿತು ಸಾಗುತ್ತಾಳೆ. ಆಕೆ ಮರಳುವುದನ್ನೇ ಗೇಟ್‌ವೇ ಬಾಗಿಲಲ್ಲಿ ಸುಧಾಂಶು ಕಾಯುತ್ತಾ ಕುಳಿತಿರುತ್ತಾನೆ.
‘ಒಪೆರಾ ಹೌಸ್’
ಮುಂಬೈನ ಸಿನಿಮಾ ಟಾಕೀಸ್‌ಗಳೆಲ್ಲ ಕಣ್ಮರೆಯಾಗಿ ಬೃಹತ್ ಕಟ್ಟಡಗಳು ತಲೆಎತ್ತಿದಾಗ ಅಲ್ಲಿನ ಕೆಲಸಗಾರರು ಅನುಭವಿಸಿದ ಸಂಕಷ್ಟಗಳನ್ನು ವಿವರಿಸುತ್ತದೆ. ‘ಬಕುಲ ಗಂಧ’ದಲ್ಲಿ ೩೦ ವರ್ಷದ ಹಿಂದೆ ಕಾಲೇಜು ಕ್ಲಾಸ್‌ಮೇಟ್ ಆಗಿದ್ದ ಶಶಾಂಕ್ ಮತ್ತು ಸರೋಜಿನಿ ಒಂದೇ ಆಸ್ಪತ್ರೆಯಲ್ಲಿ ಭೇಟಿ ಆಗುವುದು, ಹಳೆಯ ನೆನಪುಗಳೆಲ್ಲಾ ಮತ್ತೆ ಮರುಕಳಿಸುತ್ತವೆ. ಇಬ್ಬರೂ ಅನುಭವಿಸಿದ್ದೆಲ್ಲಾ ನೆನಪಾಗಿ ಹೋಗುತ್ತಿದೆ. ನಾವಾಗಿಯೇ ಹಿಡಿಯಹೋದದ್ದು ಬಾಡುತ್ತದೆ. ನಮ್ಮನ್ನು ಮೊಟಕುಗೊಳಿಸುತ್ತದೆ. ತಾನಾಗಿಯೇ ಬಂದಿದ್ದು ನಮ್ಮೊಡನೆ ಬೆಳೆಯುತ್ತದೆ, ನಮ್ಮನ್ನು ಉಳಿಸುತ್ತ್ತದೆ ಎನ್ನುವುದನ್ನು ಇಬ್ಬರ ಮೂಲಕ ವಿವರಿಸಿದ್ದಾರೆ.
...........................
Comments
Post a Comment