Posts

Image
    ಮಾನವ ಸಂವೇದನೆಯ ಪ್ರೀತಿಯ   ‘ಕಾಲಚಕ್ರ’ ‘ಕಾಲಚಕ್ರ’ ಇದು  ಕನ್ನಡ ಸಾರಸ್ವತ ಲೋಕದಲ್ಲಿ  ಉದಯೋನ್ಮುಖ, ಸಶಕ್ತ ಬರಹಗಾರರಾಗಿ ಗುರುತಿಸಿಕೊಳ್ಳುತ್ತಿರುವ ಕಲಬುರಗಿಯ ಡಾ. ಶ್ರೀದೇವಿ ರಾಠೋಡ್ ಅವರ ಕಾದಂಬರಿ. ಈಗಾಗಲೇ ಆರೇಳು ಕಾದಂಬರಿಗಳನ್ನು ಬರೆದು ಪ್ರಕಟಿಸಿ ಯಶಸ್ವಿ  ಕಾದಂಬರಿಕಾರ್ತಿಯಾಗಿದ್ದಾರೆ. ಜೊತೆಗೆ  ಜನಪರ, ಸ್ತ್ರೀಪರ ಕಾಳಜಿಯ ಮತ್ತು ಬಂಜಾರ ಸಮಾಜದ ಕುರಿತು ಹಲವು  ಕೃತಿಗಳನ್ನು ರಚಿಸಿದ್ದಾರೆ.  ಕಾಲೇಜಿನಲ್ಲಿ ಆರಂಭವಾಗುವ ಪ್ರೀತಿಯ ಪಯಣ  ದಾಂಪತ್ಯದವರೆಗೆ ಹೋದರೂ ಅದು ಈಡೇರದೆ ಸಿಡಿದು ಹೋಗಿ, ಅಪರಂಜಿಯಾಗಿ ಅರಳುವ ಕಥೆ ಇದು. ಈ ಕಥೆಯನ್ನು ಸಹಜತೆಯಲ್ಲಿ, ಆವೇಗಕ್ಕೆ, ಉದ್ವೇಗಕ್ಕೆ, ಅಹಂಕಾರ, ಅಟ್ಟಹಾಸಕ್ಕೆ ಎರವಾಗದೆ ತೂಕಬದ್ಧವಾಗಿ ಲೇಖಕಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಹೆಣ್ಣು - ಗಂಡು ಪ್ರೀತಿಯು ಬಿತ್ತಿದ ವಿಕಾಸಕ್ಕೆ ಸಮಸ್ಥಿತಿಯನ್ನು ಪಡೆದುಕೊಂಡು, ಇಬ್ಬರೂ ಒಪ್ಪಿ ಗೌರವದ ಬಾಳ್ವೆ ಮಾಡಲು ಹೊರಟರೂ ಅದಕ್ಕೆ ಸಮ್ಮತಿ ಸಿಗದಿದ್ದರೂ ಪ್ರಥಮ ದೃಷ್ಟಿಯಲ್ಲಿ ಬೆರೆತ ಪ್ರೀತಿಯ ದ್ವನಿ ಹಾಗೆಯೇ ಇರುತ್ತದೆ. ಈ ಒಡಲುಗಳು ಬೇರೆ ಬೇರೆ ಕಡೆ ಅರ್ಪಿತವಾದರೂ ಆ ಮಾನಸ ಸರೋವರಗಳ ಒಳಗಿರುವ ಪ್ರೀತಿಯ ಜಲವು ಆರಂಭದಲ್ಲಿದ್ದಂತೆಯೇ ನಿವ್ವಳ, ನಿಚ್ಚಳ, ನಿರ್ಮಲವಾಗಿಯೇ ಇದ್ದು ಉಭಯತರ ಕ್ಷೇಮವನ್ನೇ ಬಯಸುತ್ತದೆ ಎನ್ನುವುದನ್ನು ಸುಂದರವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ....
Image
‘ಅರ್ಧ ಬಿಸಿಲು ಅರ್ಧ ಮಳೆ’  ‘ಅರ್ಧ ಬಿಸಿಲು ಅರ್ಥ ಮಳೆ’ ಪ್ರಸ್ತುತ ಕೃತಿ ಕಥಾ ಸಂಕಲನವಾಗಿದ್ದು, ಹರಿಹರ ತಾಲೂಕಿನ  ಮಲೆಬೆನ್ನೂರು ಪ್ರೌಢಶಾಲಾ ಶಿಕ್ಷಕ ಸದಾಶಿವ ಸೊರಟೂರು ಇದರ ಲೇಖಕರು. ಪ್ರತಿಭಾನ್ವಿತ ಮತ್ತು ಉದಯೋನ್ಮುಖ ಬರಹಗಾರರು. ಇವರ ಹುಟ್ಟೂರು ಸೊರಟೂರು ಗ್ರಾಮ.  ಸಾವಿರಕ್ಕು ಹೆಚ್ಚು ಲೇಖನ ಬರೆದಿರುವ ಇವರು, ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ  ಬಗ್ಗೆ  ಬೆಳಕನ್ನು ಹೆಚ್ಚು ಚೆಲ್ಲಿದ್ದಾರೆ. ಕವನ ಸಂಕಲವನ್ನೂ ಹೊರತಂದಿರುವ ಇವರಿಗೆ ಕಥೆ ಇಷ್ಟದ ಪ್ರಕಾರ.  ಈ ಕೃತಿಯಲ್ಲಿ ಒಟ್ಟು ಹತ್ತು ಕಥೆಗಳಿವೆ. ಅವುಗಳಲ್ಲಿ ಬಹುತೇಕವು ಶಾಲೆ ಸುತ್ತಮುತ್ತ, ಮತ್ತೆ ಕೆಲವು ಹಳ್ಳಿಯ ಸುತ್ತಮುತ್ತ ತೆರೆದುಕೊಂಡಿವೆ. ತಾವು ಹೈಸ್ಕೂಲ್ ಶಿಕ್ಷಕರಾಗಿದ್ದರಿಂದಲೋ ಏನೋ ಶಾಲೆಯ ಮಕ್ಕಳ, ಶಿಕ್ಷಕರ, ಪಾಲಕರ ಮತ್ತು ಅವರ ಬಡತನದ ಜೀವನದ ಬಗ್ಗೆ ತುಂಬಾ ಆಪ್ತವಾಗಿ ಕಥೆಯಲ್ಲಿ ವಿವರಿಸಿದ್ದಾರೆ.  ಈ ಕಥಾ ಸಂಕಲನದಲ್ಲಿ ಕರುಣೆ, ಪ್ರೀತಿ, ಆರ್ದ್ರತೆಯ ಮನೋಭಾವದ ಕಥೆಗಳೇ ಜಾಸ್ತಿ ಇವೆ. ವಿಶಿಷ್ಟ ಹಾಗೂ ಗಟ್ಟಿ ದ್ವನಿಯಿಂದ ಸಮಾಜದ ವ್ಯವಸ್ಥೆಗಳ ನಡುವೆ ಚಿಕಿತ್ಸಕ ನೋಟವನ್ನು ಮತ್ತು ಮಾನವೀಯ ಸಂಬಂಧಗಳ ಶೋಧನೆಯನ್ನು ತಮ್ಮದೇ ಆದ ವಿಭಿನ್ನ ನೆಲೆಗಳಲ್ಲಿ ಕಥೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಚಂದದ ರೂಪಕಗಳು ಪತ್ರಿ ಕಥೆಯಲ್ಲೂ ಸಾಕಷ್ಟಿವೆ. ದ್ವಿಲಿಂಗಿಗಳ ಕಥೆ, ಹೆಣ್ಣಿನ ಬೇಗುದಿ, ಎಳೆ ಮನದ ತೊಳಲಾಟ, ಮನೋವ...
Image
   ಖಗೋಳ ಸಾಹಸಯಾತ್ರೆ ಹಿನ್ನೆಲೆಯ  ‘ಆಕಾಶಕಾಯ’  ‘ಆಕಾಶಕಾಯ’ ಇದು ಒಂದು ಕಾಲ್ಪನಿಕ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಕಾದಂಬರಿ. ಕಲಬುರ್ಗಿಯ ಸಾಹಿತಿ, ಸಂಶೋಧಕಿ ಶ್ರೀದೇವಿ ರಾಠೋಡ್  ಇದರ ರಚನಾಕಾರರು. ಅಂತರಿಕ್ಷಕ್ಕೆ ಹೋಗಿ ಬಂದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಸಾಹಸಯಾತ್ರೆ ಹಿನ್ನೆಲೆಯ ಕಥೆಯನ್ನೇ ಇಟ್ಟುಕೊಂಡು ಕೆಲವು ವೈಜ್ಞಾನಿಕ ಅಂಶಗಳ ಮಾಹಿತಿ ಆಧಾರದ ಮೇಲೆ ಈ ಕಥೆ ನಿರೂಪಿತವಾಗಿದೆ. ಬಾಹ್ಯಾಕಾಶದಲ್ಲಿ ಒಂದು ವಾರದ ಬದಲು  ೯ ತಿಂಗಳು ಸಂಕಷ್ಟದಲ್ಲಿ ಕಳೆದ ಸುನಿತಾ- ವಿಲ್ಮೋರವರ ವಿವರವನ್ನೇ ಇಟ್ಟುಕೊಂಡು ಸಾಹಸ ಮತ್ತು ರೋಚಕದ ಕಥೆಯನ್ನು ಹೆಣೆದಿದ್ದಾರೆ. ಅವರು ಭೂಮಿಗಿಳಿದ ನಂತರ ಈ ಕಥೆ ರಚನೆಯಾಗಿದೆ.  ಈ ಕಾದಂಬರಿ ಬರೆಯುವಾಗ ಲೇಖಕಿ ಖಗೋಳಶಾಸ್ತ್ರದ ಗಹನ ಅಧ್ಯಯನ ಮಾಡಿರುವುದನ್ನು ಅವರ ಕಥೆಯಲ್ಲಿ ಕಾಣಬಹುದು. ಕಾಲ್ಪನಿಕವಾದರೂ ಇದರಲ್ಲಿ ನೈಜತೆಯ ಮೆರುಗಿದೆ. ಭೂಮಿಯಲ್ಲಿ ವಾಸ್ತವಿಕ ಎನ್ನಬಹುದಾದ ಬೀಜಗಳನ್ನು ಬಿತ್ತಿ  ಒಂದು ಕುತೂಹಲಕರವಾದ ಸೃಜನತೆಯ ಫಸಲನ್ನು ಬೆಳೆದಿದ್ದಾರೆ. ಆದ್ದರಿಂದ ಓದುಗ ಕಲ್ಪನೆಯ ಸಾಗರದಲ್ಲಿ ಮುಳುಗುವಂತೆ ಮಾಡುತ್ತದೆ.   ಪ್ರಸ್ತುತ ಕಾದಂಬರಿಯಲ್ಲಿ ಲೇಖಕಿ ಆಯ್ದುಕೊಂಡಿರುವ ಕಾಲ ೨೦೩೫. ಖಗೋಳ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುವ ರಾಮದಾಸ್ ಎಂಬ ವಿಜ್ಞಾನಿ  ತನ್ನ ಮಗಳು ವಿನಿತಾ ಮತ್ತು ತನ್ನ ಮನೆಕೆಲಸದ ಹೆಂಗಸಿನ ಮಗ...
 ಅಜ್ಞಾತದ ಆಕರ್ಷಣೆಯ  ‘ಇಮ್ಮಡಿ ಮಡಿಲು’    ‘ಇಮ್ಮಡಿ ಮಡಿಲು’ ಇದರಲ್ಲಿ ಮೂರು ನೀಳ್ಗ್ಗತೆಗಳಿವೆ. ಮೊದಲನೆಯದು, ೭ನೇ ಶತಮಾನದಲ್ಲಿ ಬಾದಾಮಿಯನ್ನು ಆಳಿದ ಚಾಲುಕ್ಯರ ಮತ್ತು ಅವರ ವಿರುದ್ಧ ಕಾದಾಡಿದ ಪಲ್ಲವರ ಕುರಿತಾದದ್ದು, ಇನ್ನೊಂದು ಅಕ್ಕಮಹಾದೇವಿ ರೀತಿಯಲ್ಲಿ ಬದುಕಿದ ಕಾಶ್ಮೀರದ ಶಿವಭಕ್ತೆ ಲಲ್ಲೇಶ್ವರ ಬಗ್ಗೆ, ಮೂರನೆಯದು ಇಸ್ರೇಲ್‌ನ  ಮಸಾದ ಬೆಟ್ಟದ ಇತಿಹಾಸ. ಈ ಮೂರು ಘಟನೆಗಳ ಬಗ್ಗೆ ಚಾರಿತ್ರಿಕವಾಗಿ ಇದರಲ್ಲಿ ಕಟ್ಟಿಕೊಡಲಾಗಿದೆ. ಈ ಕೃತಿಯ ಲೇಖಕರು ವಿಜ್ಞಾನಿ, ಇತಿಹಾಸಕಾರ ಮತ್ತು ಸಾಹಿತಿ ಆಗಿರುವ ಡಾ| ಕೆ ಎನ್. ಗಣೇಶಯ್ಯ. ಅಜ್ಞಾತದ ಆಕರ್ಷಣೆ ಮತ್ತು ಚರಿತ್ರೆಯಲ್ಲಿನ ಬಿರುಕುಗಳ ಹಿನ್ನೆಲೆಯಲ್ಲಿ ಈ ಕೃತಿ ಬರೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಬಾದಾಮಿ ಚಾಲುಕ್ಯರ ಇತಿಹಾಸದಲ್ಲಿ ನಡೆದ ಯುದ್ಧದಲ್ಲಿ ಅಜ್ಞಾತ ವ್ಯಕ್ತಿಯಾಗಿ ಕಾಡಿದ ಪರಂಜ್ಯೋತಿಯ ಕುರಿತಾಗಿ ಇನ್ನೊಬ್ಬ ಇತಿಹಾಸ ಸಂಶೋಧಕರು ಹಂಪಿಯಲ್ಲಿ ಭೇಟಿಯಾದಾಗ ಹೇಳಿದ ಕುತೂಹಲದ ವಿಷಯದ ಆಧಾರದಲ್ಲಿ  ಮೊದಲ ಕಥೆ ಮೈದಳೆದಿದೆ. ರಾಜರು ತಮ್ಮ ಅರಮನೆಯಲ್ಲಿ ದಂಡನಾಯಕರ ಮತ್ತು ಇತರ ಆಡಳಿತಗಾರರ ಪತ್ನಿಯರನ್ನು ಹೇಗೆ ಬಳಸಿಕೊಳ್ಳುತ್ತಿದ್ದರೆನ್ನುವುದನ್ನು ಇಲ್ಲಿ ಸೂಚ್ಯವಾಗಿ ತೋರಿಸಿದ್ದಾರೆ. ಅಕ್ಕಮಹಾದೇವಿಯಂತೆ ಇದ್ದ ಇನ್ನೊಬ್ಬ ಶಿವಯೋಗಿನಿಯ ಬಗ್ಗೆಯೂ ಶ್ರೀಶೈಲದಲ್ಲಿ ಭೇಟಿಯಾದ ಸಂಶೋಧನಾರ್ಥಿಯೊಬ್ಬರು ನೀಡಿದ ಮಾಹಿತಿಯನ್ನು ಆಧಾರದವಾಗಿಟ್ಟುಕೊಂಡು ‘ಪರ್ಯ...
Image
    ‘ಭೂತಾರಾಧನೆ’  ‘ಭೂತಾರಾಧನೆ’ ಇದು ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಚಿನ್ನಪ್ಪ ಗೌಡರ ಸಂಶೋಧನಾ ಕೃತಿ. ಇದರಲ್ಲಿ ಭೂತಾರಾಧನೆಯ ಜಾನಪದೀಯ ಅಧ್ಯಯನದ ವಿವರವಿದೆ.  ಭೂತಗಳ ಪರಿಕಲ್ಪನೆಯನ್ನು ಕುರಿತು ಕಾವ್ಯ, ಶಾಸನ, ಪ್ರಾದೇಶಿಕ ಇತಿಹಾಸ ಇವುಗಳ ಮೂಲಕ ಪ್ರಸ್ತುತ ಕೃತಿ ‘ಭೂತಾರಾಧನೆ’ಯಲ್ಲಿ ವಿವರಣೆಯನ್ನು ಕೊಡುವುದರ ಜೊತೆಗೆ ಭೂತಾರಾಧನೆಯ ಎಲ್ಲಾ ಹಂತಗಳನ್ನು, ಬಗೆಗಳನ್ನು, ವಿವರಗಳನ್ನು ಮತ್ತು ಕಾರ್ಯಗಳನ್ನು ಸಂಗ್ರಹಿಸಿ ಅವನ್ನು ವ್ಯವಸ್ಥಿತವಾಗಿ ನಿರೂಪಿಸಿದ್ದಾರೆ. ಸಮಗ್ರ ಚಿತ್ರಣವನ್ನು ಕಟ್ಟಿ ಕೊಟ್ಟಿದ್ದಾರೆ.  ಇಲ್ಲಿ  ಬೇರೆ ಬೇರೆ ಸಾಮಾಜಿಕ ಹಿನ್ನೆಲೆಗಳಿಂದ ಭೂತವನ್ನು ಶೋಧಿಸಿ ಅನಾವರಣ ಮಾಡಲಾಗಿದೆ.  ಸಮಾಜದ ವ್ಯವಸ್ಥೆ, ಶ್ರೇಣಿಕೃತ ರಾಜಕೀಯ ಅಧಿಕಾರ ವ್ಯವಸ್ಥೆ, ವಂಶಪಾರಂಪರ್‍ಯವಾಗಿ ಮುಂದುವರೆಯುವ ಭೂಮಿಯ ಒಡೆತನದ ವ್ಯವಸ್ಥೆ ಹೇಗೆ ಸಂಬಂಧ ಹೊಂದಿದೆ ಎಂಬುದನ್ನು ಪ್ರಸ್ತುತ ಕೃತಿಯಲ್ಲಿ ಲೇಖಕರು ಬಹುಸುಂದರವಾಗಿ ಚಿತ್ರಿಸಿದ್ದಾರೆ. ಆಕರ್ಷಕವೂ, ಬಹುವರ್ಣಗಳ, ಬಹುವಿನ್ಯಾಸಗಳ ಛಾಯಾಚಿತ್ರಗಳನ್ನೂ ಸಹ ಆಯಾಯ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ. ಆಭರಣ ವಸ್ತುಗಳ ವಸ್ತುಗಳಿಗೆ ಸಂಬಂಧಿಸಿದ ಆಕರ್ಷಕ ರೇಖಾ ಚಿತ್ರಗಳಿವೆ. ಭೂತಾರಾಧನೆಯ ಪಾರಿಭಾಷಿಕ ಪದಗಳ ವಿವರಣಾತ್ಮಕ ಟಿಪ್ಪಣಿಗಳನ್ನು ಸಹ ಇಲ್ಲಿ ಕೊಡಲಾಗಿದೆ. ಭೂತ ಕಟ್ಟುವ ಕಲಾವಿದರ ಜೀವನ, ಪೂಜಾರಿಗಳ ವೃತ್ತಿ- ಬದುಕು, ಭೂತ ಕಟ್ಟುವ ಜನಾಂಗಗಳ ಸಾಮಾಜಿ...
Image
  ಸವಾಲೊಡ್ಡುವ, ಸೂಕ್ಷ್ಮತೆಯ  ‘ಸಿಗದವರು’  ‘ಸಿಗದವರು’ ಇದು ರಾಘವೇಂದ್ರ ರಾವ್ ಅವರ ಕಥಾ ಸಂಕಕಲನ. ಅನು ಬೆಳ್ಳೆ ಎಂಬ ಕಾವ್ಯನಾಮದಿಂದ ಹೆಸರಾಗಿರುವ ಲೇಖಕರು, ಈ ಕೃತಿಯಲ್ಲಿ ಮನುಷ್ಯ ಸಂಬಂಧದ ಸಂಕೀರ್ಣ ಮಜಲುಗಳನ್ನು, ಭಾವನಾತ್ಮಕ ತಾಕಲಾಟಗಳನ್ನು, ಬದುಕಿನ ಹೋರಾಟದ ಮತ್ತು ಸಂಘರ್ಷವನ್ನು ಚಿತ್ರಿಸಿದ್ದಾರೆ. ಕೃತಿಯಲ್ಲಿ ಒಟ್ಟೂ ೯ ಕಥೆಗಳಿವೆ. ಇಲ್ಲಿನ ಬಹುತೇಕ ಕಥೆಗಳಲ್ಲಿ  ಅಪೂರ್ಣತೆ ಇರುವುದನ್ನು ಕಾಣಬಹುದು. ಕಥೆಯ ಎಳೆಯನ್ನು ಇಟ್ಟುಕೊಂಡು ನಾವೇ ಅದರ ಅಂತ್ಯ ಗಮನಿಸಬೇಕಿದೆ.   ಇಲ್ಲಿನ ಕಥೆಗಳಲ್ಲಿ ನೊಂದ ಪಾತ್ರಗಳಿವೆ. ಒಳಗೊಂದು, ಹೊರಗೊಂದು ನಡೆವಳಿಕೆಯವರಿದ್ದಾರೆ. ವೈವಾಹಿಕ ಬದುಕಿನಾಚೆಯ ಸಂಬಂಧವಿದೆ. ಸ್ವೇಚ್ಛೆಯ ಜೀವನವಿದೆ. ಮನುಷ್ಯ ಸಂಬಂಧದ ತವಕ-ತಲ್ಲಣಗಳಿವೆ.  ಎಲ್ಲ ಕಥೆಗಳು ಕೌತುಕವಾಗಿದ್ದರೂ ಅಂತ್ಯಗಳೇಕೋ ಅಸ್ಪಷ್ಟತೆಯನ್ನು ನೀಡುವ ಮೂಲಕ ನಮಗೆ ಒಂದು ಬಗೆಯ ಸವಾಲನ್ನು ಒಡ್ಡುತ್ತವೆ. ಪ್ರಯೋಗಶೀಲತೆಯ ಇಲ್ಲಿನ ಕಥೆಗಳು ಆಪ್ತವಾಗುತ್ತವೆ,  ನಮ್ಮನ್ನು ಓದಿಸಿಕೊಂಡು ಹೋಗುತ್ತವೆ.  ಅಬಾಧಿತ  ಶಾಮಣ್ಣ ಮತ್ತು ಸತ್ಯನಾರಾಯಣ ಒಂದೇ ರೀತಿಯ ವ್ಯಕ್ತಿಗಳು. ಇಬ್ಬರೂ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೀರಾ ಆಸಕ್ತಿಯುಳ್ಳವರು. ಇದ್ದಕ್ಕಿದ್ದಂತೆ ಶಾಮಣ್ಣ ಸಾವಿಗೀಡಾಗುತ್ತಾನೆ. ಪತ್ನಿ ಕಾವೇರಿ ತಾನೇ ಅಂತ್ಯಕ್ರಿಯೆ ಮಾಡುವುದಾಗಿ ಹಠ ಹಿಡಿದಾಗ ಪುರೋಹಿತರು ಇದನ್ನು ಒಪ್ಪುವುದಿಲ್ಲ. ಜೊತೆಗ...
Image
  ಗಾಲಿಬ್‌ನ ತವಕ, ತಲ್ಲಣ, ದುರಂತದ   ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’  ‘ಮಿರ್ಜಾ ಗಾಲಿಬ್’  ಉರ್ದು ಮತ್ತು ಪರ್ಶಿಯನ್ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರು. ಕನ್ನಡ ಸಾಹಿತ್ಯದ ಓದುಗರಿಗೆಲ್ಲ ಆತನ  ಗಜಲ್ ಕವನಗಳೆಂದರೆ  ಇಷ್ಟ. ಗಾಲಿಬ್  ಕೇವಲ ವ್ಯಕ್ತಿಯೊಬ್ಬನ ಹೆಸರು ಮಾತ್ರವಲ್ಲ, ಅದು ಒಂದು ಅಚ್ಚಳಿಯದ ಹೆಸರು. ಆತ ನಮ್ಮನ್ನು ಅಗಲಿ ಒಂದೂವರೆ ಶತಮಾನ ಕಳೆದರೂ ಅವನ ಗಜಲ್‌ಗಳು ಮತ್ತು ಕಸಿದಾ ಎಂಬ ಉರ್ದು ಕಾವ್ಯ ಪ್ರಕಾರಗಳು ಇಂದಿಗೂ ಸಾಹಿತ್ಯಪ್ರಿಯರ, ವಿದ್ವಾಂಸರ ನಾಲಿಗೆ ಮೇಲೆ ನಲಿದಾಡುತ್ತಿವೆ. ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಈ ಕೃತಿಯನ್ನು  ಬರೆದವರು ಎನ್. ಜಗದೀಶ್ ಕೊಪ್ಪ. ತಾನು ಗಾಢವಾಗಿ ಪ್ರೀತಿಸಿದ, ತನ್ನನ್ನು ತೀವ್ರವಾಗಿ ಪ್ರಭಾವಿಸಿದ ಕವಿ ಗಾಲಿಬ್ ಎಂದು ಅವರು ಹೇಳಿಕೊಂಡಿದ್ದಾರೆ.  ಕಾವ್ಯದ ರಸಾನುಭವದ ಸೊಗಡನ್ನು ತನ್ನ ಕವಿತೆಯ ಮೂಲಕ ಕಟ್ಟಿಕೊಟ್ಟ ಅಪ್ರತಿಮ ಕವಿ ಮಿರ್ಜಾ ಗಾಲಿಬ್ ಬಣ್ಣನೆಗೆ ನಿಲುಕದ ವ್ಯಕ್ತಿತ್ವದ ಗಾಲಿಬ್ ಒಬ್ಬ ತುಂಬು ರಸಜ್ಞ ಗಾಲಿಬ್ ಉರ್ದು, ಪರ್ಶಿಯನ್ ಭಾಷೆಯ ಪಂಡಿತ. ಬದುಕಿನ ರಂಜನೆಯೊಡನೆ  ಅಸಹಾಯಕತನ, ತಲ್ಲಣ ಅನುಭವಿಸಿದವನು. ತನ್ನ ಕಾವ್ಯದಲ್ಲಿ ಇವೆರಡನ್ನೂ ಹದವಾಗಿ ಬೆರೆಸಿ ಕಟ್ಟಿದ ಕಾವ್ಯದ ಗಂಭೀರತೆ ಮತ್ತು ಸಾಹಿತ್ಯಕ್ಕೆ ಧಕ್ಕೆ ಬರದಂತೆ ಸಹಜವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.  ಈ ಕಥನ  ಓದಿದಾಗ  ಇತ...