Posts

Image
 ದುಕಿಗೆ ಬೇಕಾದ ಬೆಳಕಿನ ಬೀಜ ‘ಅಪರೂಪದ ಪುರಾಣ ಕಥೆಗಳು’  ಮಹಾಭಾರತ, ರಾಮಾಯಣ, ಭಾಗವತ, ಕಥಾಸರಿತ್ಸಾಗರಗಳ ಕಥಾಕೋಶಗಳಿಂದ ಆಯ್ದ, ಬದುಕಿಗೆ ಅವಶ್ಯವಾದ  ಕಥೆಗಳನ್ನು ಹಿರಿಯರು ಹೇಳಿದ್ದನ್ನು ನೆನಪಿಟ್ಟುಕೊಂಡು  ಸಂಗ್ರಹಿಸಿದ ಕಥೆಗಳ ಸಂಕಲನವೇ ಅಪರೂಪದ ಪುರಾಣ ಕಥೆಗಳು. ಲೇಖಕಿ ಆಶಾ ರಘು ಈ ಕಥೆಗಳನ್ನು ಸರಳ, ಸುಂದರವಾಗಿ, ಜೊತೆಗೆ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ.  ವಿಶೇಷವಾಗಿ ನಮ್ಮ ಮಕ್ಕಳಿಗೆ ಇಂತಹ ಪುರಾಣದ ಕಥೆಗಳ ಅವಶ್ಯಕತೆ ಇಂದು ಅವಶ್ಯವಿದೆ. ಶಾಲಾ ಪಠ್ಯಗಳನ್ನು ಹೊರತುಪಡಿಸಿದರೆ ಮಳೆ, ಬೆಳೆ, ಕಾಡು, ಕೃಷಿ, ಪುರಾಣ -ಇತಿಹಾಸಗಳ ಬಗ್ಗೆ ನಮ್ಮ ಮಕ್ಕಳಿಗೆ ಮಾಹಿತಿ ಇಲ್ಲ. ಗ್ಯಾಜೆಟ್ ಲೋಕದಲ್ಲಿ ಕಳೆದುಹೋಗುತ್ತಿರುವ ಮಕ್ಕಳ ಮನಸ್ಸನ್ನು ತಂದೆ- ತಾಯಿ ಇಂತಹ ಪುರಾಣದ ಕಥೆಗಳ ಮೂಲಕ ಮರು ಕಟ್ಟುವ ಕೆಲಸವನ್ನು ಮಾಡಬೇಕಿದೆ.  ಇಲ್ಲಿನ ಕಥೆಗಳು ಕೇವಲ ಮಕ್ಕಳಿಗೆ ಮಾತ್ರವಲ, ಹಿರಿಯರು ಕೂಡ ಓದಿ ತಿಳಿಯಬೇಕಾದವೇ ಆಗಿವೆ. ಸತ್ಯಕಾಮನಂತಹ ಹುಡುಗನನ್ನು ಶಿಷ್ಯನಾಗಿ ಸ್ವೀಕರಿಸಿದ ಗುರುಗಳ ಗುರುತ್ವ, ದಧೀಚಿ-ಶಿಬಿಯರ ಲೋಕಕಲ್ಯಾಣ ಗುಣ, ಚೂಡಾಮಣಿಯನ್ನು ಕಳುಹಿಸಿಕೊಟ್ಟ ಸೀತೆಯ ಸಂದೇಶದ ಹಿಂದಿನ ಅರ್ಥ, ಅರ್ಧನಾರೀಶ್ವರ ಕಲ್ಪನೆಯೊಳಗಿನ ಸಾಂಕೇತಿಕತೆ..... ಹೀಗೆ ಸುಮಾರು ೪೮ ವಿವಿಧ ಕಥೆಗಳು ಇಲ್ಲಿ ನಿರೂಪಣೆಯಾಗಿದೆ. ಈ ಕಥೆಗಳು ಓದುವ ಮೂಲಕ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕಿದೆ. ಆದ್ದರಿಂದ ಮಕ್ಕಳು ಇಂತಹವುಗಳನ್ನು ಪ...
Image
 ಬೆರಗು ಮೂಡಿಸುವ ಕಥೆಗಳು  ‘ಓಡಿ ಹೋದಾ ಮುಟ್ಟಿ ಬಂದಾ’ ಈ ಕೃತಿ ಯಶವಂತ್ ಚಿತ್ತಾಲರ ಕಥಾ ಸಂಕಲನ.  ಇದರಲ್ಲಿ ದಟ್ಟವಾದ ಅನುಭವಗಳ ಜಗತ್ತಿದೆ.  ಅವೆಲ್ಲವೂ ನಮ್ಮ ಕಣ್ಣ ಮುಂದೆಯೇ ನಡೆದಂತೆ ಕಾಣುತ್ತವೆ.  ಸ್ಪಷ್ಟವಾದ ಆವರಣದಲ್ಲಿ ಸ್ಪಷ್ಟವಾದ ಪಾತ್ರಗಳಿವೆ. ಇವೆಲ್ಲ ಮುಖಾಮುಖಿಯಾಗಿ ಮಾತಿನಲ್ಲಿ ತೊಡಗಿಸಿಕೊಂಡಂತೆ ಕಾಣುತ್ತದೆ. ಇಲ್ಲಿನ ಕಥೆಗಳೆಲ್ಲಾ ಹೊಸ ಆಯಾಮವನ್ನು ಪಡೆದುಕೊಳ್ಳುತ್ತವೆ. ಒಟ್ಟಿನಲ್ಲಿ ಬೆರಗು ಮೂಡಿಸುವಂತಹ ಕಥೆಗಳು ಇದರಲ್ಲಿವೆ. ಒಟ್ಟೂ ೧೦ ಕಥೆಗಳ ಗುಚ್ಛ ಇದು.   ಹೊಸಾ ಗೆಂಡೆ ನಮ್ಮಾಟಾ  ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ನಾಗವೇಣಿಯ ಪ್ರೀತಿಯಲ್ಲಿ ಬಿದ್ದಿದ್ದ ಉಪನ್ಯಾಸಕ ಪ್ರಭಾಕರ ಇದ್ದಕ್ಕಿದ್ದಂತೆ ರಾಜೀನಾಮೆ ಕೊಟ್ಟು ಹೋಗುತ್ತಾನೆ ನಾಗವೇಣಿ ಅಣ್ಣ ನಾಗೇಶ್ ಮತ್ತು ಪ್ರಭಾಕರ್ ಕ್ಲಾಸ್‌ಮೇಟ್‌ಗಳು, ಜೊತೆಗೆ ಆತ್ಮೀಯರು. ಪ್ರಭಾಕರ್ ಬಿಟ್ಟು ಹೋದ ಸುದ್ದಿ ಹರಡಿ ಎಲ್ಲರಿಗೂ ನಾಗವೇಣಿಯ ಮೇಲೆ ಚರ್ಚೆ ನಡೆಯುತ್ತದೆ. ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ನಾಗವೇಣಿ, ನಾನು ಮದುವೆಯಾದರೆ ಆತನನ್ನೇ ಹೊರತು ಬೇರೆಯವನಲ್ಲ. ಆತ ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸುತ್ತಾಳೆ.  ರಾಜೀನಾಮೆ ಕೊಟ್ಟು ಹೋದ ಪ್ರಭಾಕರ ಮತ್ತೆ ಮರಳಿ ಕಾಲೇಜಿನಲ್ಲಿ ಕೆಲಸಕ್ಕೆ ಸೇರುತ್ತಾನೆ. ಪಾಠಮಾಡಲು ತರಗತಿಗೆ ಬಂದಾಗ ಇಬ್ಬರ ಕಣ್ಣುಗಳು ಒಂದಾಗುತ್ತವೆ. ಪ್ರೀತಿ ಬಲಿ...
This summary is not available. Please click here to view the post.
Image
 ಜ್ಞಾನದ ಕುತೂಹಲ ಹೆಚ್ಚಿಸುವ  ‘ನಾನೂ ವಿಜ್ಞಾನಿಯಾಗುವೆ’ ನಮ್ಮ ಜೀವನದ ಎಲ್ಲಾ ಸ್ತ್ತರಗಳಲ್ಲಿಯೂ ವಿಜ್ಞಾನ ಅನಿವಾರ್ಯ ಎಂಬಂತಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ವಿಜ್ಞಾನದ ಬಗ್ಗೆ ಬಾಲ್ಯದಿಂದಲೇ ವಿಜ್ಞಾನದ ಬಗ್ಗೆ  ತಿಳಿಯಪಡಿಸಬೇಕಾಗಿದೆ. ಲೇಖಕರಾದ, ನಿವೃತ್ತ ಪ್ರಾಂಶುಪಾಲರಾದ ಮತ್ತೂರು ಸುಬ್ಬಣ್ಣ ‘ನಾನೂ ವಿಜ್ಞಾನಿಯಾಗುವೆ’ ಈ ಕೃತಿಯ ಮೂಲಕ ನೇರವಾಗಿ ವಿಜ್ಞಾನದ ಪ್ರಮೇಯ ನಿಯಮಗಳನ್ನು ತಿಳಿಸದಿದ್ದರೂ ವಿಜ್ಞಾನದ ಸ್ವಾರಸಕರ ಅಂಶಗಳನ್ನು ಕಥೆಗಳಲ್ಲಿ ಮಕ್ಕಳು ಅನುಭವಿಸುವಂತೆ ಮಾಡಿದ್ದಾರೆ. ಎಲ್ಲ ಮಕ್ಕಳಲ್ಲೂ ಇರುವ ಏಕೆ, ಹೇಗೆ, ಏನು ಎಂಬ ಪ್ರಶ್ನೆಗಳಿಗೆ ನಾವು ಸರಿಯಾಗಿ ಸ್ಪಂದಿಸಿದರೆ ಎಷ್ಟೆಲ್ಲ ಪ್ರತಿಭೆಗಳು ಅರಳಬಹುದು. ಇಲ್ಲಿನ ಕಥೆಗಳೆಲ್ಲ ತುಂಬಾ ಕುತೂಹಲಕಾರಿ ಹಾಗೂ ಆಸಕ್ತಿಯುತವಾಗಿದ್ದು ಮಕ್ಕಳು ಪದೇಪದೇ ಓದುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಲಿವೆ. ಪುಟ್ಟದಾದ ೧೦ ಕಥೆಗಳು ಇದರಲ್ಲಿವೆ.  ‘ನಾನೂ ವಿಜ್ಞಾನಿಯಾಗುವೆ’ ವಿಜ್ಞಾನಿಯಾಗಬೇಕೆಂಬ ಹಠ ಹಿಡಿದ ಮಗನಿಗೆ ತಂದೆ ಮನೆಯಲ್ಲಿ ಸಣ್ಣಪುಣ್ಣ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸುತ್ತಾ ಆತ ವಿಜ್ಞಾನಿಯಾಗುವಲ್ಲಿ ಇನ್ನಷ್ಟು ಆಸಕ್ತಿ ತುಂಬಿದ ಕಥೆ ಇದು. ‘ಚಂದ್ರಣ್ಣನ  ಅಂಗಳದಲ್ಲಿ’  ಅಪ್ಪ ಹಿಂದಿನ ದಿನ ರಾತ್ರಿ ಮಕ್ಕಳಿಗೆ ಚಂದ್ರಯಾನದ ಬಗ್ಗೆ ಹೇಳಿದ ಕಥೆಯನ್ನು ರಾತ್ರಿ ಮಕ್ಕಳು ಕನಸಿನಲ್ಲಿ ಕಾಣುವುದು ಈ ಕಥೆಯ ಸಾರಾಂಶ. ಚಂದ್ರನ ಮೇಲ್ಮೈ ಬಗ್ಗೆ, ...
Image
 ಮೌಢ್ಯಕ್ಕೆ  ಹಿಡಿದ ಕನ್ನಡಿ ‘ಮನೀಷೆ’ ಮನೀಷೆ ಇದು ಕಥೆಗಾರ ವಸುಧೇಂದ್ರ ಅವರ ಕೃತಿ. ಮೌಢ್ಯ ಕುರಿತಾಗಿ ಇರುವ ಬರಹಗಳೇ ಇದರಲ್ಲಿವೆ. ಮಠ, ಜಾತಿಯ ಹೆಸರಲ್ಲಿ ನಡೆಯುತ್ತಿರುವ ಮಡಿ, ಮೈಲಿಗೆಗಳ ಬಗ್ಗೆ ಸುಂದರವಾಗಿ ಕಥೆಗಳನ್ನು ಇಲ್ಲಿ ಹೆಣೆದಿದ್ದಾರೆ. ಅತಿ ಸರಳ ಬಾಷೆಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುವ ಕಥೆಗಳಿವು. ಮೌಢ್ಯದ ಪರಿಣಾಮದಿಂದ ಏನೇನು ಸಂಭವಿಸುತ್ತದೆ, ಇನ್ನೊಬ್ಬರ ಮನಸ್ಸಿಗೆ, ಜೀವನದ ಮೇಲೆ ಹೇಗೆ ಒರಿಣಾಮ ಬೀರುತ್ತದೆ ಎನ್ನುವುದನ್ನೂ ಕೆಲವು ಕಥೆಗಳಲ್ಲಿ ಚಿತ್ರಿಸಿದ್ದಾರೆ. ಇನ್ನೂ ಇಂತಹ ಸ್ಥಿತಿ ಇರುವುದರಿಂದ ಮನಸ್ಸನ್ನು ಕೃತಿ ಕಲಕುತ್ತದೆ. ಒಂದು ಅತ್ಯುತ್ತ್ತಮ ಕೃತಿಯಾಗಿ ಇದು ಹೊರಹೊಮ್ಮಿದೆ.  ‘ನಮ್ಮ ವಾಜೀನ್ನೂ ಆಟಕ್ಕೆ ಸೇರಿಸಿಕೊಳ್ರೋ’  ಈ ಕಥೆಯಲ್ಲಿ ಬಿಳಿ ತೊನ್ನು ಇರುವ ಬಾಲಕನೊಬ್ಬ ಸಂಪ್ರದಾಯವಾದಿಗಳಿಂದ ಅವಮಾನಕ್ಕೀಡಾಗುವುದು, ಮಠದಲ್ಲಿ ರಾಯರ ಆರಾಧನೆ ವೇಳೆ ಆತನಿಗೆ ಊಟಕ್ಕೆ ಬಡಿಸಲು ಬಿಡದೆ ಅವಮಾನಿಸುವುದು, ಹಸಿವಿನಿಂದ ಬಳಲುತ್ತಿದ್ದ ಆತನ ತಾಯಿ ಕಮಲವ್ವ ಕೂಡ ಮೌನದಿಂದ ಮಗನೊಟ್ಟಿಗೆ ಹಾಗೆಯೇ ಮರಳಿ ಊರಿಗೆ ಬರುವುದು ಕಥೆಯ ಈ ತಿರುಳಾಗಿದೆ. ಮನೀಷೆ’  ಈ ಕತೆಯಲ್ಲಿ ಒಬ್ಬ ವ್ಯಕ್ತಿಯನ್ನು ಮನಸ್ಸಿನ ವಿಭಿನ್ನ ಭಾವನೆಗಳು ಹೇಗೆ ಗೊಂದಲಕ್ಕೆ, ಸಿಟ್ಟಿಗೆ, ಉದ್ವೇಗಕ್ಕೆ ತಳ್ಳುತ್ತವೆ ಎನ್ನುವುದನ್ನು ಸುಬ್ರಹ್ಮಣ್ಯ ಎನ್ನುವವನ ಮೂಲಕ ಚಿತ್ರಿಸಿದ್ದಾರೆ. ಸುಬ್ರಹ್ಮಣ್ಯ ಕಾರ್ಖಾನೆಯ ಕೆಲಸಕ್ಕೆ ಹೊರಡುವಾ...
Image
    ಬದುಕಿನ ಸಂಗತಿಗಳನ್ನು ಕಾಡುವ ‘ಬದುಕು ಜಟಕಾ ಬಂಡಿ’ ‘ಬದುಕು ಜಟಕಾ ಬಂಡಿ’ ಇದು ಜೀವನ್ಮುಖಿ ವೈವಿಧ್ಯಮಯ ಕಥೆಗಳ ಸಂಕಲನ. ಅನಂತ ಕುಣಿಗಲ್ ಇದರ ಕರ್ತೃ. ಇಲ್ಲಿನ ಕಥೆಗಳು ಮತ್ತು ಪಾತ್ರಗಳು ಮಾತನಾಡುತ್ತವೆ. ಪಾತ್ರಗಳು ಕಣ್ಣಿಗೆ ಕಟ್ಟಿದಂತೆ ನಮ್ಮೆದುರು ನಿಲ್ಲುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆಗಳಿವು. ಈ ಸಂಕಲನ ಸಮಾಜದ, ಜನರ ಬದುಕಿನ ಬಗ್ಗೆ ಇರುವ ಲೇಖಕರ ಕಾಳಜಿಯನ್ನು ಎತ್ತಿಹಿಡಿಯುತ್ತದೆ. ಕೃತಿಯಲ್ಲಿ ಎರಡು ರೀತಿಯ ಕಥೆಗಳಿವೆ. ಒಂದು ಸಣ್ಕಥೆ ಮತ್ತೊಂದು ಪುಟ್ಕಥೆ. ಎರಡರಲ್ಲೂ ತಲಾ ೧೦ ಕಥೆಗಳಿವೆ. ಪುಟ್ಕಥೆಗಳು ಹೆಸರಿಗೆ ತಕ್ಕಂತೆ ಇದ್ದು, ಕೊನೆಯಲ್ಲಿ ಒಂದು ಸಂದೇಶವನ್ನು ಸಾರುತ್ತವೆ. ಸುಲಭದಲ್ಲಿ ಓದುಗರನ್ನು ಆಕರ್ಷಿಸುತ್ತಿವೆ. ಒಂದು ಹೋರಾಟದ ಕಥೆ ಕರ್ನಾಟಕದ ಬಯಲುಸೀಮೆ ಪ್ರಾಂತ್ಯದ ಬ್ಯಾಟರಾಯನಪುರ ಎಂಬ ಹಳ್ಳಿಗೆ ಬ್ರಿಟಿಷರಿಂದ ಬೋರಪ್ಪ ಎನ್ನುವನು ಮುಕ್ತಿ ದೊರೆಯಲು  ನಡೆಸಿದ ಹೋರಾಟದ ಕಥನ ಇದು. ಗಿರಿಜನ ಜಾತಿಗೆ ಸೇರಿದ ಬೋರಪ್ಪ ಊರ ಹೊರಗೆ ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡಿದ್ದರೂ, ಊರ ಹೋರಾಟಗಳಲ್ಲಿ, ಚರ್ಚೆಗಳಲ್ಲಿ, ಸಂಧಾನ ಕಾರ್ಯಕ್ರಮಗಳಲ್ಲಿ ಹಾಜರಿರುತ್ತಿದ್ದನು. ಬ್ರಿಟಿಷರ ವಿರುದ್ಧ ಕೆಂಡ ಕಾರುತ್ತಿದ್ದ ಈತ ಬ್ರಿಟಿಷ ಅಧಿಕಾರಿಗಳು ಊರಿಗೆ ಬಂದಾಗ ನಮಸ್ಕಾರ ಮಾಡಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಕೆನ್ನೆ ಮೇಲೆ ಹೊಡೆದಿದ್ದರು. ಆತ ಅವರ ಮುಖಕ್ಕೆ ಉಗಿದ್ದಿದ್ದನು. ಇದರಿಂದ ಸಿಟ್ಟಿಗೆದ್ದ ಬ್ರಿಟಿಷ್ ಅಧ...
Image
 ಅನುಭವದ ಅಮೃತ ಬಿಂದುಗಳು ‘ಜ್ಞಾನದೀಪ’  ಇದು  ೧೦೮ ಸೂಕ್ತಿಗಳ ಚಿಂತನ ಮಂಥನ. ಕನ್ನಡ ಪಂಡಿತರೂ, ಹಿಂದಿ ಪ್ರವೀಣರೂ, ಸಂಸ್ಕೃತ  ವಿದ್ವಾಂಸರೂ, ಪ್ರಾಧ್ಯಾಪಕರೂ ಆಗಿದ್ದ ದಿ.  ವಿ ಎನ್ ಭಟ್ ಬೆತ್ತಗೇರಿ ಇವರು ರಚಿಸಿದ  ಕೃತಿ ಇದು. ಹೆಸರೇ ಹೇಳುವಂತೆ ‘ಜ್ಞಾನದೀಪ’ ಇದು ಅಪೂರ್ವ ಸುಭಾಷಿತಗಳಿಂದ ಒಡಗೂಡಿ ಅವುಗಳ  ಕನ್ನಡ ಅರ್ಥವನ್ನು ಸಹಿತ ಕಟ್ಟಿಕೊಟ್ಟಿದೆ.  ಕೃತಿಯಲ್ಲಿರುವ ಜ್ಞಾನದೀಪಗಳೆಲ್ಲವೂ  ಜೀವನಾನುಭವದಿಂದ ಕೂಡಿದ ಮತ್ತು ಜೀವನಾನುಭವವನ್ನು ಕಟ್ಟಿಕೊಡುವಂತವು. ಹಿತವಾದ  ಸುಭಾಷಿತಗಳನ್ನು ಆಯ್ದು ಬದುಕಿನ ಅನುಭವಗಳನ್ನು ಮಿತವಾದ ಬರಹಗಳಿಂದ ಓದುಗರಿಗೆ  ನಿವೇದಿಸಿದ ಲೇಖಕರ ಕೆಲಸವನ್ನು ಇಲಿ ಮೆಚ್ಚಲೇಬೇಕು. ವಿದ್ವಾನ್ ವಿ. ಎನ್. ಭಟ್ಟರು  ಜ್ಞಾನದೀಪದ ಮೂಲಕ ಅಸಂಖ್ಯಾತ ಓದುಗರಲ್ಲಿದ್ದ ಕತ್ತಲೆಯನ್ನು ದೂರ ಮಾಡಿದ್ದಲ್ಲದೆ ಕತ್ತಲೆ  ಭಯವನ್ನೂ ಕಳೆದಿದ್ದಾರೆ. ಬೆಳಕಿನ ಭರವಸೆಯನ್ನು ನೀಡಿದ್ದಾರೆ. ಇಂದಿನ ನಮ್ಮ ಭಾರತೀಯ  ಸಂದರ್ಭದಲ್ಲಿ ಇವೆರಡೂ ಅಗತ್ಯವಾಗಿದೆ.  ‘ಜ್ಞಾನದೀಪ’ ಅತ್ಯಂತ ಜನಪ್ರಿಯ ಕೃತಿ.  ಇದಕ್ಕೆ ಕಾರಣವೇನೆಂದರೆ ವಿ ಎನ್ ಭಟ್ಟರಲ್ಲಿದ್ದ ವಿದ್ವತ್ತು ಮತ್ತು ಕಾವ್ಯದೃಷ್ಟಿ  ಇದರಲ್ಲಿ ಮಿಳಿತಗೊಂಂಡಿದೆ. ಸುಮಾರು ಐದಕ್ಕೂ ಹೆಚ್ಚು ಮರುಮುದ್ರಣವನ್ನು ಕಂಡಿರುವ ಈ  ಕೃತಿಯಲ್ಲಿ ಭಟ್ಟರ ವಿಸ್ತಾರವಾದ ಓದು, ಮಾನವೀಯ ಅನುಕಂಪ ...