ಇಂಗ್ಲೀಷ್ ಪತ್ತೆದಾರಿ ಕಥೆಗಳು

..........................................



ಈ ಕೃತಿಯಲ್ಲಿ ಲೇಖಕಿ ಪಾರ್ವತಿ ಜಿ. ಐತಾಳ್ ಅವರು ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದಿಸಿರುವ  ಹತ್ತು ಪ್ರಮುಖ ಪತ್ತೆದಾರಿ ಕಥೆಗಳಿವೆ. ಅಪರಾಧ ಜಗತ್ತಿನೊಳಗೆ ಸಂಚರಿಸುವ ಮತ್ತು ಅಸಾಧಾರಣ ಬುದ್ಧಿವಂತಿಕೆ ಇರುವ ಪತ್ತೆದಾರರು ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಮಾಡುವ ಸಾಹಸ ಕೃತ್ಯವನ್ನು ಕೃತಿ ತೆರೆದಿಟ್ಟಿದೆ. 

ಪತ್ತೆದಾರಿ ಸಾಹಿತ್ಯ ಹುಟ್ಟಿಕೊಂಡಿದ್ದು ಪಾಶ್ಚಾತ್ಯ ದೇಶಗಳಲ್ಲಿ. ಪ್ರಸ್ತುತ ಈ ಕೃತಿಯಲ್ಲಿ ಇಂಗ್ಲೆಂಡಿನ ಆರ್ಥರ್ ಕಾನನ್ ಡಾಯ್ಲ್, ಜಿ ಕೆ ಚೆಸ್ಟರ್‌ಟನ್  ಮತ್ತು ಎಡ್ಗರ್ ಅಲನ್ ಪೋ ಅವರ ಕತೆಗಳಿವೆ. ಇವೆಲ್ಲವೂ  ಓದುಗರನ್ನು ಕುತೂಹಲದತ್ತ ಕರೆದೊಯ್ಯುತ್ತವೆ. ಅಂದಿನ ಕಾಲದ ಇಂಗ್ಲೆಂಡಿನ ಜನಜೀವನದ ಶೈಲಿ, ನಾಗರಿಕತೆ, ಇತಿಹಾಸ ಮತ್ತು ಸಂಸ್ಕೃತಿ, ಕಲೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳನ್ನು ಈ ಕಥೆಗಳಲ್ಲಿ ನಾವು ಕಾಣಬಹುದಾಗಿದೆ. ಡಾಯ್ಲ್ ಸೃಷ್ಟಿಸಿದ ಷರ್ಲಾಕ್ ಹೋಮ್‌ನ ಪತ್ತೆದಾರಿ ಕಥೆಗಳು ಇದರಲ್ಲಿವೆ. ಎಂಥ ಜಿಗುಟಿನ ಪ್ರಕರಣವನ್ನಾದರೂ ತನ್ನ ಅಪ್ರತಿಮ ಕೌಶಲಗಳಿಂದ ಲೀಲಾಜಾಲವಾಗಿ ಬಿಡಿಸುವುದನ್ನು ಇಲ್ಲಿನ ಕಥೆಗಳಲ್ಲಿ ನಾವು ಕಾಣಬಹುದು. ಇಲ್ಲಿನ ಕಥೆಗಳನ್ನು ಓದುತ್ತ ಹೋದಂತೆ ಕುತೂಹಲ ಹೆಚ್ಚಾಗುತ್ತಾ ಹೋಗುತ್ತದೆ. 


ಮಾರುವೇಷದ ಪ್ರಕರಣ

 ತನ್ನ ಮಲಮಗಳಿಗೆ ಮದುವೆಯಾದರೆ ಅವಳಿಗೆ ಬರುವ ವಾರ್ಷಿಕ ಬಡ್ಡಿ ತನ್ನ ಕೈತಪುತ್ತದೆ ಎಂದು ಅವಳು ಮದುವೆಯಾಗದಂತೆ ಸ್ವತಃ ಮಲತಂದೆಯೇ ಪ್ರೇಮಿಯ ವೇಷ ಹಾಕಿ ಸಿಲುಕಿಕೊಂಡ ಘಟನೆ ಇದು. ಷರ್ಲಾಕ್ ಹೋಮ್ಸ್  ಈ ಪ್ರಕರಣವನ್ನು ಪತ್ತೆ ಹಚ್ಚುತ್ತಾನೆ.  ಮಲತಂದೆ ಮತ್ತು ತಾಯಿಯೊಡನೆ ಮಿಸ್ ಮೇರಿ ಸ್ಯೂದರ್ ಲ್ಯಾಂಡ್ ವಾಸವಾಗಿ ಇರುತ್ತಾಳೆ. ಅವಳ ಹೆಸರಿನಲ್ಲಿ ಚಿಕ್ಕಪ್ಪ ಬ್ಯಾಂಕ್‌ನಲ್ಲಿ ಠೇವಣಿ  ಹಣ ಇಟ್ಟಿದ್ದ. ಇದರಿಂದ ವರ್ಷಕ್ಕೆ ಸಾಕಾಗುವಷ್ಟು ಬಡ್ಡಿ ಹಣಬರುತ್ತಿತ್ತು. ಮಲತಂದೆ ಹೆಂಡತಿ ಮತ್ತು ಮಗಳನ್ನು ಮನೆಯಿಂದ ಹೊರಬಿಡುತ್ತಿರಲಿಲ್ಲ. ಮಲತಂದೆ ವ್ಯವಹಾರ ನಿಮಿತ್ತ ಫ್ರಾನ್ಸಿಗೆ ತೆರಳುವುದಾಗಿ ಹೋದಾಗ ಸ್ಯೂದರ್‌ಲ್ಯಾಂಡ್ ಮಿತ್ರರ ಮನೆಯ ಔತಣಕೂಟದಲ್ಲಿ ಹೊಸ್ಮಾರ್ ಏಂಜೆಲ್ ಎನ್ನುವವನ ಭೇಟಿ ಆಗಿ ಅದು ಮದುವೆಯವರೆಗೆ ಮುಂದುವರೆಯುತ್ತದೆ. ಮದುವೆಗೆಂದು ಇಬ್ಬರೂ ಮನೆಯಿಂದ ಒಟ್ಟಿಗೆ ಬೇರೆ ಬೇರೆ ಟಾಂಗಾದಲ್ಲಿ ಹೋದರೂ ಆತ ಚರ್ಚ್ ತಲುಪುವುದೇ ಇಲ್ಲ. ಎಲ್ಲಿಗೆ ಹೋದ ಎಂದು ಗೊತ್ತಾಗುವುದಿಲ್ಲ. ಆಗ ಹುಡುಕಿಕೊಡುವಂತೆ ಷರ್ಲಾಕ್ ಹೋಮ್‌ನಲ್ಲಿ ಬರುತ್ತಾಳೆ. ಆತನ ನಡವಳಿಕೆ, ಬರೆದ ಪತ್ರ, ಮುಖಚರ್ಯೆ, ಮಲತಂದೆ ಇಲ್ಲದಾಗ ಮಾತ್ರ ಆತ ಭೇಟಿ ಆಗುವುದು ಇದನ್ನೆಲ್ಲ ಗಮನಿಸಿ ಮಲತಂದೆಯೇ ಈ ರೀತಿ ನಾಟಕವಾಡಿದ್ದನ್ನು ಬೆಳಕಿಗೆ ತರುತ್ತಾನೆ. ಆತನನ್ನು ತನ್ನ ಮನೆಗೆ ಕರೆದು ಕೇಳುತ್ತಾನೆ. ಮಗಳಿಗೆ ಹೀಗೆ ಮೋಸ ಮಾಡುವುದರಿಂದ ಲಾಭವೇನು? ಎಂದು ಕೇಳಿದಾಗ ಅವಳು ಮದುವೆಯಾದರೆ ತನಗೆ  ಹಣ ಸಿಗುವುದಿಲ್ಲವಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ.


ನೀಲಿ ಶಿಲುಬೆ 

ಫ್ಲಾಂಬೋ ಯುರೋಪಿನಾದ್ಯಂತ ಎಲ್ಲರನ್ನೂ ನಡುಗಿಸಿದ ಬಹಳ ಚಾಣಾಕ್ಷ ಕಳ್ಳ, ವೇಷ ಮರೆಸಿಕೊಂಡು ಸುತ್ತಾಡುತ್ತಿದ್ದಾಗ ಆತನನ್ನು ವ್ಯಾಲೆಂಟೀನ್ ಎಂಬ ಪತ್ತೆದಾರ ಹಿಡಿದ ಕಥೆ ಇದು. 

 ಪತ್ತೆದಾರ ವ್ಯಾಲಂಟೀನ್ ಫ್ಲಾಂಬೋನನ್ನು ಹಿಡಿಯಲು ಬ್ರಸ್ಸೆಲ್ಸ್‌ನಿಂದ ಬಂದಿದ್ದ. ದೋಣಿಯಲ್ಲಿ ಸಿಕ್ಕ ಕುಳ್ಳನೆಯ ಪಾದ್ರಿಯೊಬ್ಬ ತನ್ನಲ್ಲಿ ಭಾರವಾಗಿದ್ದ ಕಾಗದದ ಕಟ್ಟನ್ನು ಹೊಂದಿದ್ದು, ಅದನ್ನು ಪಕ್ಕದಲ್ಲಿರುವವನ ಬಳಿ ಈ ಕಟ್ಟನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗಿದೆ. ಅದರಲ್ಲಿ  ನೀಲಿ ಹರಳಿರುವ  ಬೆಳ್ಳಿ ಶಿಲುಬೆ ಇದೆ ಎಂದಿದ್ದನ್ನೇ ಲಾಭ ಮಾಡಿಕೊಂಡು ಪಕ್ಕದಲ್ಲಿದ್ದ  ಆತ ಪಾದ್ರಿಯ ವೇಷ ಹಾಕಿಕೊಂಡು ಹರಳನ್ನು ದರೋಡೆ ಮಾಡಲು ಯತ್ನಿಸುವ ಹಂತದಲ್ಲಿ  ಕುಳ್ಳ ಪಾದ್ರಿ ‘ಇಲ್ಲಿ ನಾವಿಬ್ಬರೇ ಅಲ್ಲ, ಪೊಲೀಸರೂ ಇದ್ದಾರೆ. ಪತ್ತೆದಾರ ವ್ಯಾಲೇಂಟೀನ್ ಇದ್ದಾನೆ’ ಎಂದ. ‘ಸುಳ್ಳು’ ಎಂದು ಫ್ಲಾಂಬೋ ಹೇಳಿದಾಗ ‘ಅವರು ಬರುವಂತೆ ಮಾಡಿದ್ದೇನೆ, ನಮ್ಮನ್ನು ಹಿಂಬಾಲಿಸಿ ಬಂದಿದ್ದಾರೆ’ ಎಂದಾಗ ಪೊಲೀಸರು ಮತ್ತು ವ್ಯಾಲೆಂಟೀನ್ ಬರುತ್ತ್ತಾರೆ.   .


ಸ್ಟಾಕ್ ಬ್ರೋಕರ್ ಗುಮಾಸ್ತನ ಪ್ರಕರಣ


ಬೇರೆಯವನ ಹೆಸರಲ್ಲಿ ಕೆಲಸ ಪಡೆದು ಆ ಕಂಪನಿಯಲ್ಲಿ ದರೋಡೆ ಮಾಡಿ ಸಿಕ್ಕಿಬಿದ್ದ ಘಟನೆ ಇದು. 

ಕೆಲಸ ಹುಡುಕುತ್ತಿದ್ದ ಹಾಲ್‌ಕ್ರಾಫ್ಟ್ ಎನ್ನುವವನ ಹೆಸರಲ್ಲಿ ಆರ್ಥರ್ ಪಿನ್ನರ್ ಎಂಬಾತ  ಮೋಸನ್ ಮತ್ತು ವಿಲಿಯಮ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಪೈಕ್ರಾಫ್ಟ್‌ನನ್ನು ತನ್ನ  ಅಣ್ಣನ ಕಂಪನಿ ಎಂದು ಹೇಳಿ ಹಾರ್ಡ್‌ವೇರ್ ಕಂಪನಿಯೊಂದರಲ್ಲಿ  ಕೆಲಸಕ್ಕೆ ಸೇರಿಸುತ್ತಾನೆ. ಪೈಕ್ರಾಫ್ಟ್ ಕಂಪನಿಗೆ ತೆರಳಿದಾಗ ಅಲ್ಲಿ  ಪಿನ್ನರ್ ಬಿಟ್ಟರೆ ಬೇರಾರೂ ಇರಲಿಲ್ಲ. ಅಲ್ಲಿ ಕೆಲಸಕ್ಕೆ ಸೇರಿದ ನಂತರ ತಾನೆಲ್ಲೋ ಮೋಸಕ್ಕೆ ಬಲಿಯಾದೆ ಎನಿಸತೊಡಗುತ್ತದೆ. ಇದರ ಪತ್ತೆಗೆ ಷರ್‍ಲಾಕ್ ಹೋಮ್ಸ್ ನೆರವು ಪಡೆಯುತ್ತಾನೆ. ಈ ಮೊದಲು ಆರ್ಥರ್ ಪಿನ್ನರ್ ಪೈಕ್ರಾಫ್ಟ್ ಹತ್ತಿರ ಕೆಲಸಕ್ಕೆ ಸೇರಲು ಒಪ್ಪಿಗೆ ಇದೆ ಎಂದು ಚೀಟಿ ಬರೆಸಿಕೊಂಡಿರುತ್ತಾನೆ. ಪೈಕ್ರಾಫ್ಟ್‌ನ ಅಕ್ಷರ ಪರಿಚಯ ಕಂಪನಿಗಾಗಲಿ ಎಂದು ಈ ಕೆಲಸ ಮಾಡಿರುತ್ತಾನೆ. ಅಣ್ಣನ ಕಂಪನಿಗೆ ಪೈಕ್ರಾಫ್ಟ್‌ನನ್ನು ಕಳುಹಿಸಿ ಮೋಸನ್ ಮತ್ತು ವಿಲಿಯಮ್ಸ್ ಕೆಲಸಕ್ಕೆ ಪೈಕ್ರಾಫ್ಟ್ ಹೆಸರಲ್ಲಿ ಆರ್ಥರ್ ಕೆಲಸಕ್ಕೆ ಸೇರುತ್ತ್ತಾನೆ. ಶನಿವಾರ ಕಂಪನಿಗೆ ಅರ್ಧ ದಿನ. ಆದರೆ ಆ ಶನಿವಾರ ಆರ್ಥರ್ ಏನೋ ಬಿಟ್ಟು ಬಂದಿದ್ದಕ್ಕೆ ಮತ್ತೆ ಒಳಹೋಗುತ್ತಾನೆ. ಅಲ್ಲಿ ಹಣವಿಡುವ ಜಾಗ ಗಮನಿಸಿ ಕಪಾಟಿನ ಕೀ ತೆಗೆದುಕೊಳ್ಳುವುದು ಆತನ ಉದ್ದೇಶವಾಗಿತ್ತು. ಅವನು ಕಚೇರಿಯಿಂದ ಹೊರಬರುತ್ತಿದ್ದನ್ನು ಪೊಲೀಸನೊಬ್ಬ ನೋಡಿ ಅರೆಸ್ಟ್ ಮಾಡುತ್ತಾನೆ. ಇತ್ತ ಒಳಗೆ ವಾಚ್‌ಮನ್ ಸತ್ತುಬಿದ್ದಿದ್ದ. ವಿಚಾರಣೆಯ ನಂತರ ಅಪರಾಧಿಯನ್ನು ಬೆಂಡಿಂಗ್ಟನ್ ಎಂದು ಗುರುತಿಸಲಾಗುತ್ತದೆ. ಹಲವು ಅಪರಾಧಗಳನ್ನು ಆತ ಮಾಡಿದ್ದ. ಇಲ್ಲಿ ಪೈಕ್ರಾಫ್ಟ್ ಎಂಬ ನಕಲಿ ಹೆಸರಲ್ಲಿ ಕೆಲಸಕ್ಕೆ ಸೇರಿ ಕಂಪನಿ ದರೋಡೆ ಮಾಡಿದ್ದ ಎನ್ನುವುದು ಗೊತ್ತಾಗುತ್ತದೆ.   


ರಟ್ಟಿನ ಪೆಟ್ಟಿಗೆ

 ರಟ್ಟಿನ ಬಾಕ್ಸಿನ ಪಾರ್ಸೆಲ್‌ನಲ್ಲಿ ಬಂದ ಎರಡು ಕಿವಿಗಳನ್ನು ಪತ್ತೆ ಹಚ್ಚುವ ಕಥೆ ಇದು. ಆಗಷ್ಟ್ತೆ ತುಂಡರಿಸಿದ ಒಂದು ಗಂಡು ಮತ್ತು ಒಂದು ಹೆಣ್ಣಿನ ಕಿವಿಯನ್ನು ಉಪ್ಪು ತುಂಬಿದ ರಟ್ಟಿನ ಬಾಕ್ಸ್ ಹಾಕಿ ಪಾರ್ಸೆಲ್ ಮಾಡಲಾಗಿತ್ತು. ಇದನ್ನು ಷರ್ಲಾಕ್ ಎಲ್ಲಿಂದ ಬಂತು, ಕಿವಿ ಯಾರದ್ದು ಎನ್ನುವುದನ್ನು ಪತ್ತೆ ಮಾಡುತ್ತಾನೆ.  ಬಾಕ್ಸ್‌ಗೆ ಕಟ್ಟಿದ ಹಗ್ಗ ಮತ್ತು ಅದರ ಗಂಟು, ಅದರಲ್ಲಿದ್ದ ಪೇಪರ್ ಮೊದಲಾದ ಮೂಲಕ ಪತ್ತೆಯಾಗುತ್ತದೆ. ಪ್ರಿಯತಮೆಗಾಗಿ ತನ್ನ ಪತ್ನಿ ಮತ್ತು  ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ಕೊಲೆಯಾದವಳ ತಂಗಿಯ ಮನೆಗೆ ಪಾರ್ಸೆಲ್ ಕಳುಹಿಸಿರುತ್ತಾನೆ. ಆದರೆ ಆ ಮನೆಯಲ್ಲಿ ಪಾರ್ಸೆಲ್‌ಗೆ ಇದ್ದ ಹೆಸರಿನವಳ ಬದಲಿಗೆ ಅವಳ ಅಕ್ಕ ಇರುತ್ತಾಳೆ. ಬಳಸಿದ ಹಗ್ಗ, ಗಂಟಿನ ಆಧಾರದಲ್ಲಿ ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ ಈ ಕೊಲೆ ಮಾಡಿದ್ದನ್ನು ಪತ್ತೆ ಮಾಡುತ್ತಾನೆ. 


ಅಪ್ರತಿಮ ಸುಂದರಿ ಐರಿನ್ ಆಡ್ಲರ್

ರಾಜವಂಶದ ಹಕ್ಕುದಾರನೊಬ್ಬ ವಾರ್ಸಾ ನಗರದ ಪ್ರಸಿದ್ಧ ಲಾವಣ್ಯವತಿ ಐರಿನ್ ಆಡ್ಲರ್ ಎನ್ನುವ ಜೊತೆ ಸಂಬಂಧ ಹೊಂದಿರುತ್ತಾನೆ ಆದರೆ ಆತನಿಗೆ ಬೇರೆ ಮಹಿಳೆ ಜೊತೆ ವಿವಾಹ ನಿಶ್ಚಯವಾಗಿರುತ್ತದೆ. ಈತನೊಟ್ಟಿಗೆ ತೆಗೆಸಿಕೊಂಡ ಫೋಟೋ ಐರಿನ್‌ಳಲ್ಲಿ  ಇರುತ್ತದೆ. ತನಗೆ ವಿವಾಹವಾಗುವುದು ಆಕೆಗೆ ಇಷ್ಟವಿಲ್ಲದೆ, ವಿವಾಹವನ್ನು ತಪ್ಪಿಸಬಹುದೆಂದು ಯೋಚಿಸಿ ಅವಳಲ್ಲಿರುವ ಫೋಟೋವನ್ನು ತನಗೆ ಕೊಡಿಸುವಂತೆ ಪತ್ತೆದಾರ ಷರ್ಲಾಕ್ ಬಳಿ ಬರುತ್ತಾನೆ. ಷರ್ಲಾಕ್ ಆಕೆಯಿದ್ದ ಹೊಟೆಲಿನ ಕೊಠಡಿಗೆ ಪಾದ್ರಿ ವೇಷದಲ್ಲಿ ಹೋಗುವುದು, ಆಕೆಯ ಚಲನವಲನ ತಿಳಿದುಕೊಂಡು ಆಕೆಯ ಭಟರೆಲ್ಲ ಹೊಡೆದಾಡಿಕೊಳ್ಳುವಂತೆ ಮಾಡುವುದು, ಅಲ್ಲಿ ಈತನಿಗೂ ಪೆಟ್ಟು ಬಿದ್ದಂತೆ ನಟಿಸುವುದು, ಈ ವೇಳೆ ರಾಣಿಯ ರೂಮು ಯಾವುದೆಂದು ಅರಿಯುವುದು, ರೂಮಿಗೆ ಹೊಗೆ ಬರುವ ರಾಕೆಟ್ ಹಾರಿಸಿ ಹೊಟೆಲ್ ತುಂಬಾ ಹೊಗೆ ಬರುವಂತೆ ಮಾಡುತ್ತಾನೆ. ಆ ವೇಳೆ ಆಕೆಯಲ್ಲಿರುವ ಭಾವಚಿತ್ರವನ್ನು ಪತ್ತೆ ಮಾಡುತ್ತಾನೆ. ಈ ವಿಚಾರ ಆಕೆಗೆ ಗೊತ್ತ್ತಾದ ಬಳಿಕ ಆಕೆಯೇ ಷರ್ಲಾಕ್‌ಗೆ ಚೀಟಿ ಕಳುಹಿಸಿ ‘ಈ ಫೋಟೊವನ್ನು ನಾನು ತೊಂದರೆ ಕೊಡಲು ಬಳಸುವುದಿಲ್ಲ, ಅವನಿಗಿಂತ ಉತ್ತಮ ಗಂಡಸು ತನಗೆ ದೊರೆತಿದ್ದಾನೆ’ ಎಂದು ಅದರಲ್ಲಿ ಬರೆದಿರುತ್ತಾಳೆ.  


ಬಂಗಾರದ ತಿಗಣೆ 

ಈ ಕಥೆಯಲ್ಲಿ ಪ್ರಸಿದ್ಧ ಕಡಲುಗಳ್ಳ ಕ್ಯಾಪ್ಟನ್ ಕಿಡ್ ದೋಚಿ, ಹುದುಗಿಸಿಟ್ಟಿದ್ದ ಚಿನ್ನದ ನಾಣ್ಯಗಳು, ವಜ್ರ, ಹವಳಗಳ ರಾಶಿಗಳನ್ನು ದ್ವೀಪ ಒಂದರಲ್ಲಿ ಪತ್ತೆ ಮಾಡುವ ವಿಚಾರವಿದೆ. ಕಾಡಿನಲ್ಲಿ ದೊರೆತ ಒಂದು ಬಂಗಾರ ಬಣ್ಣದ ತಿಗಣೆಯನ್ನು ಷರ್ಲಾಕ್ ಸಮುದ್ರದಂಚಿನಲ್ಲಿ ಸಿಕ್ಕ ಪೇಪರ್ ತುಂಡಿನಲ್ಲಿ ಕಟ್ಟುತ್ತಾನೆ. ನಂತರ ಆ ತಿಗಣೆಯನ್ನು ಬೇರೆಯವನಿಗೆ ಕೊಡುತ್ತಾನೆ. ಆದರೆ ಪೇಪರ್ ಈತನಲ್ಲಿರುತ್ತದೆ. ಅದು ವಿಶೇಷ ರೀತಿಯ ಪೇಪರ್ ಆಗಿರುತ್ತದೆ. ಅದನ್ನು ಬಿಡಿಸಿ ಓದುವಾಗ ಕಡಲ್ಗಳ್ಳತನದ ಮಾಹಿತಿ, ಕೆಲವು ಸಂಕೇತಗಳು ದೊರೆಯುತ್ತದೆ. ಆ ಮೂಲಕ ಹದುಗಿಸಿಟ್ಟ ಜಾಗ ಮತ್ತು ಬೆಲೆಬಾಳುವ ವಸ್ತುಗಳನ್ನು ಪತ್ತೆ ಮಾಡುತ್ತಾನೆ.


ನೀಲಿ ಹರಳಿನ ಕಥೆ 

 ಸಾಮಂತರಾಣಿಯೊಬ್ಬರಿಂದ ಅಪಹರಿಸಿದ ನೀಲಿ ಹರಳಿನ ವಜ್ರವನ್ನು ಜೇಮ್ಸ್ ರೈಡರ್ ಎನ್ನುವವನು ಅಡಗಿಸಿಡಲು ಅವನ ಸಹೋದರಿಯ ಕೋಳಿಫಾರಂನ ಬಿಳಿಬಣ್ಣದ ಕಪ್ಪುಗೆರೆಯಿದ್ದ ಕೋಳಿಯ ಗಂಟಲಲ್ಲಿ ಹಾಕುತ್ತಾನೆ. ಆ ಕೋಳಿಯನ್ನು ಆತನ ಸಹೋದರಿ ಕ್ರಿಸ್ಮಸ್‌ಗೆ ಗಿಫ್ಟ್ ಕೊಡುವುದಾಗಿ ಹೇಳಿರುತ್ತಾಳೆ. ತನಗೆ ಅದೇ ಕೋಳಿ ಬೇಕೆಂದು ಆಕೆಯಿಂದ ಪಡೆಯುತ್ತಾನೆ. ಆದರೆ ಅದೇ ರೀತಿಯ ಇನ್ನೊಂದು ಕೋಳಿ ಆ ಫಾರಂನಲ್ಲಿ ಇರುತ್ತದೆ. ಇದು ಆತನಿಗೆ ಗೊತ್ತಿರುವುದಿಲ್ಲ. ಇವನು ಪಡೆದ ಕೋಳಿಯಲ್ಲಿ ನೀಲಿ ಹರಳು ಸಿಗುವುದಿಲ್ಲ. ಈ ಕೋಳಿ ಪಡೆಯಲು ಷರ್ಲಾಕ್ ಬಳಿ ಹೋಗುತ್ತಾನೆ.

 ಬೇರೆಯವನೊಬ್ಬ ಖರೀದಿಸಿದ ಕೋಳಿಯಲ್ಲಿರುವುದನ್ನು ಅರಿತು ಆತನ ಮೇಲೆ ಹಲ್ಲೆ ನಡೆಸಿ, ಅವರು ಕೋಳಿ ಬಿಟ್ಟು ಓಡಿಹೋಗುವಂತೆ ಮಾಡುತ್ತಾನೆ. ಇಲ್ಲಿಯೂ  ಸಹ ಆತನಿಗೆ ಕೋಳಿ ಆತನಿಗೆ ಸಿಗುವುದಿಲ್ಲ. ಹಲ್ಲೆ ನಡೆಸುವ ವೇಳೆ ಕಮಿಷನರ್ ಬರುತ್ತಿರುವುದನ್ನು ಕಂಡು ಓಡಿಹೋಗುತ್ತಾನೆ. ದಾರಿಹೋಕನೊಬ್ಬ  ಆ ಕೋಳಿ ಮತ್ತು ಒಂದು ಹ್ಯಾಟನ್ನು ಷರ್ಲಾಕ್ ಬಳಿ  ಕೊಟ್ಟು,  ಇದನ್ನು ಸಂಬಂಧಿತರಿಗೆ ತಲುಪಿಸಿ ಎನ್ನುತ್ತಾನೆ. ಆದರೆ ಷರ್ಲಾಕ್ ಕೋಳಿ ಸತ್ತುಹೋಗಿದ್ದರಿಂದ ನೀವೇ ಅದನ್ನು ಬಳಸಿ ಎನ್ನುತ್ತಾನೆ. ಆತ ಮನೆಗೆ ಒಯ್ದು ಕೋಳಿ ಕೊಯ್ದಾಗ ನೀಲಿ ಹರಳು ಪತ್ತೆಯಾಗುತ್ತದೆ. ವಾಪಸ್ ಷರ್ಲಾಕ್ ಬಳಿ ಅದನ್ನು ತಂದುಕೊಡುತ್ತಾನೆ.

  

ಹಳದಿ ಮುಖದ ಪ್ರಕರಣ 

ಅಟ್ಲಾಂಟಾದಲ್ಲಿ ಹುಟ್ಟಿ ಬೆಳೆದ ಎಫಿ ಎನ್ನುವವಳು ನಿಗ್ರೊ ಒಬ್ಬನನ್ನು ಮದುವೆಯಾಗುತ್ತಾಳೆ. ಆತ ಮಗುವನ್ನು ಕರುಣಿಸಿ ಸತ್ತುಹೋಗುತ್ತಾನೆ. ನಂತರ ಅಮೆರಿಕಾಕ್ಕೆ ಬಂದು ವಾಸಿಸಲಾರಂಭಿಸುತ್ತಾಳೆ. ಅಲ್ಲಿ ಮುನ್ರೋ ಎನ್ನುವನನ್ನು ಮದುವೆಯಾಗುತ್ತಾಳೆ. ಆದರೆ ತನಗೆ ಮಗುವಿರುವುದನ್ನು ಹೇಳಿರುವುದಿಲ್ಲ. ಏಕೆಂದರೆ ಆತ ನಿಗ್ರೊ ಜನಾಂಗದ ತರಹವಿರುತ್ತಾನೆ. ಹಳದಿ ಮುಖವಾಡದೊಂದಿಗೆ ತನ್ನ ಮನೆಯಿಂದ ಅನತಿ ದೂರದ ಕಾಟೇಜ್ ಒಂದರಲ್ಲಿ ಪತ್ಯೇಕವಾಗಿ ಮಗುವನ್ನಿಡುತ್ತಾಳೆ. ಮಧರಾತ್ರಿ ಕ್ಯಾಂಡಲ್ ಹಿಡಿದು ಮನೆಯಿಂದ ಅಲ್ಲಿಗೆ ಹೋಗುತ್ತಾಳೆ. ಆಕ ಎಲ್ಲಿಗೆ ಹೋಗುತ್ತಾಳೆ ಎನ್ನುವುದನ್ನು ಪತ್ತೆಹಚ್ಚಲು ಆತ ಹೋದಾಗ ಹಳದಿಮುಖ ಮಾತ್ರ ಕಾಣಿಸುತ್ತದೆ. ಅಲ್ಲಿದ್ದ ಹೆಂಗಸೊಬ್ಬಳು ಹೊರಹೋಗುವಂತೆ ಸೂಚಿಸುತ್ತಾಳೆ. ಈ ರಹಸ್ಯ ಪತ್ತೆ ಹಚ್ಚಲು ಷರ್ಲಾಕ್‌ನೊಂದಿಗೆ ಮುನ್ರೊ ಬರುತ್ತಾನೆ. ಕಾಟೇಜ್ ಒಳಹೋದಾಗ ಎಪಿ ಅಲ್ಲಿರುತ್ತಾಳೆ. ನಂತರ ಅದು ತನ್ನ ಮಗು. ನಿಗ್ರೋ ತರಹ ಇದೆ. ಅಮೆರಿಕದಲ್ಲಿ ಇದಕ್ಕೆ ಅಪಾಯವಿದೆ ಎಂದರಿತು ಹಳದಿ ಮುಖವಾಡ ಹಾಕಿಟ್ಟಿರುವುದಾಗಿ ಹೇಳುತ್ತಾಳೆ.

 

ರ್‍ಯೂ ಮೋರ್ಗ್‌ನಲ್ಲಿ ಕೊಲೆಗಳು

 ಈ ಕಥೆಯಲ್ಲಿ ಮುದುಕಿ ಮತ್ತು ಮಗಳು ತಮ್ಮ ಪ್ಲಾಟ್‌ನಲ್ಲಿ ಇರುವಾಗ ಕೊಲೆಯಾಗುತ್ತಾರೆ. ಈ ಕೊಲೆಯನ್ನು ಪತ್ತೆ ಮಾಡಲು ಪತ್ತೆದಾರ ಹೋಗುತ್ತಾ. ಕೊಠಡಿಯ ಬಾಗಿಲು ಮುಚ್ಚಿರುತ್ತದೆ. ಕಿಟಕಿಗಳು ಮೊದಲಿನಂತೆಯೇ ಇರುತ್ತದೆ. ಕೊಲೆ ಮಾಡಲು ಬಂದವನು ಹೇಗೆ ಹೊರಗೆ ಹೋದ ಎನ್ನುವುದನ್ನು ಹುಡುಕುವಾಗ ಕಿಟಕಿಯ ಸ್ಪ್ರಿಂಗ್‌ನ ಮೊಳೆ ಸ್ವಲ್ಪ ಮೇಲೆದ್ದ್ದಿರುವುದು ಆದರೆ ಅದು ಯಾರಿಗೂ ಗೊತ್ತಾಗದಂತಿರುವುದನ್ನು ಕಂಡುಹಿಡಿಯುತ್ತಾನೆ. 

ಮುದುಕಿಯ ಮುಷ್ಟಿಯಲ್ಲಿ ಕಿತ್ತು ಬಂದ ಕೂದಲ ಮುದ್ದೆ ಇರುತ್ತದೆ. ಮಗಳ ಕುತ್ತಿಗೆಯನ್ನು ಬೆರಳಿನಿಂದ ಅಮುಕಿದ್ದು ಕಂಡುಬರುತ್ತದೆ. ಆದರೆ ಆ ಬೆರಳು ಮನುಷ್ಯರದ್ದಾಗಿರುವುದಿಲ್ಲ. ಆಗ ಆತನಿಗೆ ಈಸ್ಟ್ ಇಂಡೀಸ್‌ನಲ್ಲಿರುವ ಓರಂಗ್- ಔತಂಗ್ ಎಂಬ ಕಾಡುಮನುಷ್ಯರ ನೆನಪಾಗುತ್ತದೆ. ಈ ಕಾಡು ಮನುಷ್ಯ ಎಲ್ಲಿದ್ದಾನೆ ಎಂಬ ಬಗ್ಗೆ ಪತ್ತೆಹಚ್ಚಲು ಜಾಹೀರಾತು ಕೊಡುತ್ತಾನೆ. ಅವುಗಳ ಮಾಲೀಕ ಕೆಲವು ದಿನದ ಬಳಿಕ  ಷರ್ಲಾಕ್ ಬಳಿ ಬಂದು ತನ್ನಿಂದ ತಪ್ಪಿಸಿಕೊಂಡಿದ್ದು, ತಾನು ಹಿಡಿಯಲೆತ್ನಿದ್ದು, ಅವು ಕಟ್ಟಡವನ್ನೇರಿದ್ದು. ಅಲ್ಲಿ ಕೊಲೆ ಮಾಡಿದ್ದನ್ನು, ನಂತರ ಅವುಗಳನ್ನು ಮಾರಿದ್ದಾಗಿ ಹೇಳುತ್ತಾನೆ. 

 

ರಹಸ್ಯ ಉದ್ಯಾನ

ಇದರಲ್ಲಿ ಫ್ರೆಂಚ್ ಪೊಲೀಸ್ ಪಡೆಯ ಮುಖ್ಯಸ್ಥ ವ್ಯಾಲೆಂಟೀನ್ (ಧರ್ಮ-ದೇವರನ್ನು ನಂಬದ, ವೈಚಾರಿಕತೆಯನ್ನೇ ಸಿದ್ಧಾಂತವನ್ನಾಗಿಸಿಕೊಂಡವನು) ತನ್ನ ಮನೆಯ ಉದ್ಯಾನದಲ್ಲಿ ಗಣ್ಯರಿಗಾಗಿ ಪಾರ್ಟಿ ಏರ್ಪಡಿಸುತ್ತಾನೆ. ಅಲ್ಲಿಗೆ ಬಂದ ಜೂಲಿಯಸ್ ಬ್ರೇನ್ (ಧರ್ಮಗಳಿಗಾಗಿ ಬಹಳಷ್ಟು ದತ್ತಿ- ದೇಣಿಗೆ ಕೊಡುತ್ತಿದವನು) ಎನ್ನುವವನನ್ನು ಕೊಲೆ ಮಾಡುತ್ತಾನೆ. ನಂತರ ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಕೊಲೆ ನಡೆದ ರೀತಿ, ಕಾರಣವನ್ನು ಷರ್ಲಾಕ್ ಹೋಮ್ಸ್ ಪತ್ತೆ ಹಚ್ಚುವುದು ಈ ಕಥೆಯಲ್ಲಿದೆ.  

,,,,,,,,,,,,,,,

 


Comments

Popular posts from this blog