Posts

Image
 ‘ಹದ್ದುಗಳು’ ‘ಹದ್ದುಗಳು’  ಕಥಾ ಸಂಕಲನ ಇಂದಿನ ದಕ್ಷಿಣ ಕನ್ನಡದ ಗ್ರಾಮೀಣ ಬದುಕಿನ ಸೊಗಸನ್ನು ಚೆಂದವಾಗಿ ನಮಗೆ ನೀಡುತ್ತದೆ. ಗ್ರಾಮೀಣ ಬದುಕಿನ ನಂಬಿಕೆ, ಕೌಟುಂಬಿಕ ಜೀವನ, ನಡೆವಳಿಕೆಗಳು, ಜೀವಪರ ಚಿಂತನೆಗಳು, ಕಾರಣಿಕ ಸ್ಥಳದ ಶ್ರದ್ಧೆ, ಹಿರಿಯರ ಅತಂತ್ರ ಮನಃಸ್ಥಿತಿ, ಹೆಣ್ಣಿನ ನೋವು- ನಲಿವು, ಆತ್ಮಹತ್ಯೆ, ಕೊಲೆ ಮುಂತಾದ ಆಗುಹೋಗುಗಳನ್ನು ಇಲ್ಲಿನ ಕಥೆಗಳು ಮೈತುಂಬಿಕೊಂಡಿವೆ  ಎದುರ್ಕಳ ಸುಬ್ಬಣ್ಣ ಭಟ್ ಇದರ ಲೇಖಕರು. ಕುಶಾಲಿನ ಮಾತು, ಪ್ರೀತಿ -ಪ್ರೇಮದ ನಲ್ನುಡಿ, ವ್ಯಂಗ್ಯದ ಚಾಟಿ ಕತೆಯಲ್ಲಿ ಕಂಡುಬರುತ್ತದೆ. ಮುಖ ತಿರುಗಿಸಿದವರು ಗೆದ್ದು ಬರುವ ಸನ್ನಿವೇಶ, ನಂಬಿಕೆಗೆ ದ್ರೋಹ ಬಗೆದು ಮನದಲ್ಲಿ ಕೊರಗುವವರು, ಪಾಪಪ್ರಜ್ಞೆಯಲ್ಲಿ ನರಳುವವರು, ಬಲಿಪಶುವಾಗುವುದು, ಸಾವಿನಲ್ಲಿ ಅಂತ್ಯ ಕಾಣುವುದು... ಈ ಕೃತಿಯಲ್ಲಿ ಕಂಡುಬರುತ್ತದೆ. ಕಾಡುವ ದುಃಖ ವಿಷಾದವೂ ಇದೆ.  ಬದುಕಿನಲ್ಲಿ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು ಎಂಬ ಮಾತಿದೆ. ಅದನ್ನು ತೋರಿಸುವ ಪ್ರಯತ್ನವನ್ನು ಇಲ್ಲಿನ ಕೆಲವು ಕಥೆಗಳು ಮಾಡಿವೆ. ಈ ಕಥೆಗಳಲ್ಲಿ ಈಗಿನ ಯಾಂತ್ರಿಕ ಜೀವನ, ಮೊಬೈಲ್, ಕಂಪ್ಯೂಟರ್ ಸಂಸ್ಕೃತಿ, ಆಧುನಿಕ ಯುವ ಜನಾಂಗದ ಮನೋಭಾವ, ಮುಗ್ಧ ಜನರ ಜೀವನ, ಸಮಾಜದ ಸಣ್ಣ ಸಣ್ಣ ಸಂಗತಿಗಳನ್ನು ನಿರೂಪಿಸಿದ್ದಾರೆ. ಕಥೆಗಳು ಸರಳವಾಗಿದ್ದು, ಕಷ್ಟವಿಲ್ಲದೆ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಶೈಲಿ ತಂತ್ರಕ್ಕೆ ಮಹತ್ವ ಕೊಡದೆ ಸರಳವಾಗಿ ಕಥೆ ಹ...
Image
 ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬೀಜ ಬಿತ್ತುವ  ‘ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’   ಮಕ್ಕಳು, ಕಥೆ ಮತ್ತು ಅಜ್ಜಿ ಈ ಮೂರರ ನಡುವೆ ಸದಾ ಒಂದು ತ್ರಿಕೋನ ಸಂಬಂಧವಿದೆ. ಮಕ್ಕಳಿಗೆ ಕಥೆ ಕೇಳಬೇಕು ಎಂದೆನಿಸಿದಾಗ ಅವರು ಓಡುವುದು ಅಜ್ಜಿಯ ಬಳಿಗೆ. ಈ ಅಜ್ಜಿ ಬದುಕಿನಲ್ಲಿ ಅನುಭವ ಗಳಿಸಿದವಳು, ದುಡಿದವಳು, ಬದುಕನ್ನು ಸವೆಸಿದವಳು, ಎದುರಿಸಿದಳು. ಇಂತಹ ಒಂದು  ಊರಿನಲ್ಲಿ ಪುಟ್ಟಜ್ಜಿ ಮಕ್ಕಳಿಗೆ ಹುರುಪನ್ನು ತುಂಬುತ್ತಾ ಮಕ್ಕಳಿಗೆ ಪರಿಸರ, ಪ್ರಾಣಿಗಳ ಪರಿಚಯ ಮಾಡಿಕೊಡುತ್ತಾ, ಮಕ್ಕಳನ್ನು ಆ ಕಥೆಗಳ ಮೂಲಕ ರಂಜಿಸುತ್ತಾಳೆ. ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ಇಂತಹ ೧೫ ಕಥೆಗಳ ಒಂದು ಸುಂದರ ಸಂಗ್ರಹ. ಮಕ್ಕಳಿಗಾಗಿ ಬಹಳಷ್ಟು ಬರೆದಿರುವ ಲೇಖಕ ನಾ. ಡಿಸೋಜಾ ಅವರ ಕೃತಿ ಇದು ಕೃತಿ. ಪುಟ್ಟಜ್ಜಿ ಮನೆಗೆ ಮಕ್ಕಳೆಲ್ಲ ಸಂಜೆ ವೇಳೆ ಪ್ರತಿದಿನ ತಪ್ಪದೆ ಬರುತ್ತಾರೆ. ಅವಳೆದುರು ಭಕ್ತಿಯಿಂದ ಕೈಕಟ್ಟಿ ಕೂರುತ್ತಾರೆ. ಅಜ್ಜಿ ದಿನಾಲೂ ಒಂದೊಂದು ಕಥೆಯನ್ನು ಹೇಳಲು ಆರಂಭಿಸುತ್ತಾಳೆ. ಹೀಗೆ ಕಥೆ ಹೇಳುವ ಹವ್ಯಾಸ. ಅವಳೆಂದೂ ಕಥೆಯೊಂದನ್ನೇ ಹೇಳುವುದಿಲ್ಲ. ಅದರ ಜೊತೆ ಹಾಡನ್ನು ರಚಿಸಿ ಸೇರಿಸಿ ಹಾಡುತ್ತಾಳೆ. ಇದರಿಂದ ಮಕ್ಕಳಿಗೆ ಮೋಜು, ಮಜಾ. ಕಥೆ ಕೇಳುತ್ತ, ಅಜ್ಜಿಯ ಮುಖ ನೋಡುತ್ತಾ ಕುಳಿತಿರುತ್ತಾರೆ. ತಮ್ಮ ಸುತ್ತಮುತ್ತಲಿನ ಆಗು-ಹೋಗುಗಳನ್ನೇ ಮರೆತುಬಿಡುತ್ತಾರೆ. ನಾವು ಕಲಿತದ್ದನ್ನು ಪರರಿಗೆ ಹಂಚಬೇಕು, ಪ್ರಕೃತಿ ನಮಗೆ ಕೊಟ್ಟಿದ್ದನ್ನು ನ...
Image
 ನಮ್ಮ ಇಂದಿನ ಸ್ಥಿತಿಗೆ ರೂಪಕವಾಗುವ  ‘ವಿರಹದ ಸಂಕ್ಷಿಪ್ತ ಪದಕೋಶ’  ವಿರಹ ಗಾಢವಾಗಿದೆ. ವಿರಹದ ಅತ್ಯುನ್ನತ ಸ್ಥಿತಿ ಜೊತೆಗಿದ್ದರೂ ಜೊತೆಗಿರಲಾರದ, ಸಮೀಪದಲ್ಲಿದ್ದರೂ ದೂರವಿದ್ದಂತೆ ಭಾಸವಾಗುವ ಕಾಲದಲ್ಲಿ ಸಾಂಗತ್ಯವೇ ವಿರಹ. ಇಂದಿನ ದಿನಗಳಲ್ಲಿ ಜೊತೆಗಿದ್ದವನು ಜೊತೆಗಿಲ್ಲ ಎನಿಸುವುದು, ಹತ್ತಿರವಿದ್ದವರು ದೂರದಲ್ಲಿದ್ದಾರೆ ಎಂದು ಭಾಸವಾಗುವುದು, ನಮ್ಮವರು ನಮ್ಮವರಲ್ಲ ಎಂದು ತೋರುವುದು ಇವೆಲ್ಲ ವಿರಹದ ಲಕ್ಷಣ. ಅಂತಹ ವಿರಹವೇ “ವಿರಹದ ಸಂಕ್ಷಿಪ್ತ ಪದಕೋಶ ” ಎಂಬ ಈ ಕಾದಂಬರಿಯ ಕಥಾವಸ್ತು. ಲೇಖಕ ಜೋಗಿ ಇದರ ಕರ್ತೃ.    ಇದರಲ್ಲಿ ಕೇವಲ ಮೂರು ಪಾತ್ರಗಳು ಮಾತ್ರ ಇವೆ. ವಿಶ್ವಾಸ್ ಕಾರಂತ್, ವಂದನಾ ಮತ್ತು ರಾಜೀವ್. ವಂದನಾಳನ್ನು ವಿಶ್ವಾಸ್ ಮದುವೆಯಾಗಿರುತ್ತಾನೆ. ರಾಜೀವ್ ಇವರಿಬ್ಬರ ಗೆಳೆಯ.  ವಂದನಾ ಈ ಕಾದಂಬರಿಯ ಶಾಪಗ್ರಸ್ತ ನಾಯಕಿ, ಸದಾ ವಿರಹತಪ್ತ ವಿಶ್ವಾಸ್ ಕಾರಂತ್ ಈ ಕಾದಂಬರಿಯ ನಾಯಕ. ಈತ ವಂದನಾಳ ವಿರಹಕ್ಕೆ ಕಾರಣ ಮತ್ತು ಆಕೆ ವೈರಾಗಿಯಾಗಲು ಕಾರಣ ಪುರುಷ. ರಾಜೀವ್ ಇವರಿಬ್ಬರ ಮಧ್ಯೆ ಬಂದು ಹೋಗುವ ಮಿತ್ರ. ಈ ಮೂರು ಪಾತ್ರಗಳಿಗೆ ಕೊನೆಯೂ ಇಲ್ಲ, ನೆಲೆಯೂ ಇಲ್ಲ. ಮನುಷ್ಯನ ಇಂದಿನ ಸ್ಥಿತಿಗೆ ಈ ಕಾದಂಬರಿ ಒಂದು ಅತ್ಯುತ್ತಮ ನಿದರ್ಶನ ಎಂದು ಹೇಳಬಹುದು.  ವಿಶ್ವಾಸ ಎಂಬ ಅರ್ಥಶಾಸ್ತ್ರಜ್ಞ, ರಾಜೀವ್ ಎಂಬ ಉದ್ಯಮಿ, ನೃತ್ಯ ಹಾಗೂ ಸಂಗೀತ ಪ್ರವೀಣೆಯಾದ ವಂದನಾ. ವಿಶ್ವಾಸ ವಿಲಕ್ಷಣ ಮನೋಭಾವನೆಯವನು, ರಾಜೀ...
Image
  ಸಮೃದ್ಧ ಬಾಲ್ಯದ ಅನುಭವಗಳ ‘ಬದುಕಿನ ಕನ್ನಡಿಯಲ್ಲಿ’   ಬದುಕಿನಲ್ಲಿ ಸಮೃದ್ಧವಾದ ಬಾಲ್ಯದ ಅನುಭವಗಳ ಜೊತೆಗೆ ಮಾನವೀಯ ಸಂಬಂಧಗಳ ಸೂಕ್ಷ್ಮಗಳು ಇರುವುದನ್ನು ಲೇಖಕಿ, ಸಹಾಯಕ ಪ್ರಾಧ್ಯಾಪಕಿ,  ಮೇದಿನಿ ಕೆಸವಿನಮನೆ ‘ಬದುಕಿನ ಕನ್ನಡಿಯ’ ಮೂಲಕ ಆಪ್ತವಾಗಿ ಚಿತ್ರಿಸಿದ್ದಾರೆ. ಅವರ ಅಪ್ಪನ ಪ್ರತಿಬಿಂಬ, ಮಲೆನಾಡಿನ ಪ್ರತಿಬಿಂಬ ಮತ್ತು ಬಾಲ್ಯದ ಪ್ರತಿಬಿಂಬ ಇವು ಮೂರು ಈ ಬದುಕಿನ ಕನ್ನಡಿಯಲ್ಲಿ ನಮಗೆ ಕಂಡುಬರುತ್ತವೆ. ಅವು ಮನಸ್ಸಿಗೆ ಮುಟ್ಟಿ, ಹೃದಯಕ್ಕೆ ತಲುಪುತ್ತವೆ.  ಬದುಕಿನ ಪ್ರತಿಕ್ಷಣದಲ್ಲೂ ಅಪ್ಪನ ಬಿಂಬವನ್ನು ಕಾಣುತ್ತಾ, ತಮ್ಮ ಜೀವನ ಅನುಭವದ ಸುಖ, ದುಃಖ, ನೋವು, ನಲಿವುಗಳ ಜೊತೆಗೆ ವ್ಯಕ್ತಿಯ ಬದುಕು, ಸಮಾಜದ ಬದಲಾವಣೆ, ಮೌಲ್ಯಗಳ ಮಹತ್ವ, ಸಂಬಂಧಗಳ ತಂತುವನ್ನು ನವಿರಾಗಿ ಬೆಸೆಯುತ್ತ ಸಾಗುವ ಈ ಕೃತಿ ಮನುಷ್ಯನ ಒಳಜಗತ್ತನ್ನು ಶ್ರೀಮಂತಗೊಳಿಸುವ ನಿಜವಾದ ಬದುಕಿನ ಕನ್ನಡಿ ಆಗಿದೆ. ಈ ಕೃತಿಯಲ್ಲಿ ೩೫ ಬರೆಹಗಳಿವೆ. ಇವು ಒಂದಕ್ಕೊಂದು ಪೂರಕವಾಗಿಲ್ಲ. ಪ್ರತಿ ಲೇಖನದಲ್ಲೂ ಖುಷಿ, ನೋವು, ಬೇಸರ, ಸಮಸ್ಯೆ, ಜಗಳ ಮುಂತಾದ ವಿವಿಧ ಮುಖಗಳಿವೆ. ಈ ಮುಖಗಳನ್ನು ಕನ್ನಡಿಯಲ್ಲಿ ನೋಡಿದಾಗ ಕಾಣುವ ಪ್ರತಿಬಿಂಬ ತನ್ನ ಅಪ್ಪನದು ಎಂದು ಲೇಖಕಿ ಹೇಳುತ್ತಾರೆ.  ಬದುಕಿನ ಪ್ರತಿ ಸನ್ನಿವೇಶದಲ್ಲೂ ಅಪ್ಪನೇ ಎದುರಾಗುವುದು, ನನ್ನ ಬದುಕಿನ ಕನ್ನಡಿಯಲ್ಲಿ ಕಾಣುವುದು ಅಪ್ಪನದೇ ಬಿಂಬ, ಅಪ್ಪನೇ ಹೀರೋ, ಗೆಳೆಯನಾಗಿ ಮಾರ್ಗದರ್ಶಿಯಾಗಿ, ತಾಳ್ಮೆಯ...
Image
     ಕಥಾ ಲೋಕಕ್ಕೆ ಹೊಸ ಬೆಳಕು ಚೆಲ್ಲುವ  ‘ಫಾಸ್ಟ್ ಆಂಡ್ ಫ್ಯೂರಿಯಸ್’ ಇದು ಇಂದಿನ ಪೀಳಿಗೆಯ ೫೦ ಆಸಕ್ತ ಕಥೆಗಾರರಿಂದ ಬರೆಸಿ, ತಿದ್ದಿ, ವಿಸ್ತರಿಸಿದ ಕಥಾ ಸಂಕಲನ ‘ಫಾಸ್ಟ್ ಆಂಡ್ ಫ್ಯೂರಿಯಸ್’. ಅವ್ವ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಕೌಟುಂಬಿಕ, ಪ್ರೀತಿ-ಪ್ರೇಮ, ಸಾಮಾಜಿಕ, ಭಯಾನಕ, ಪ್ರೇರಣಾದಾಯಕ, ಮಕ್ಕಳ, ವೈಜ್ಞಾನಿಕ, ಭಯಾನಕದ ಕಥೆಗಳಿವೆ. ಹತ್ತಾರು ಭಾವನೆಗಳನ್ನು ಹೊತ್ತ ನವಪೀಳಿಗೆಯವರಲ್ಲಿ ಇರುವ ಸೃಜನಶೀಲ ಬರೆವಣಿಗೆ ಇಲ್ಲಿ ಪ್ರಕಟಗೊಂಡಿದೆ. ಬರೆವಣಿಗೆಯನ್ನು ಜಾಗೃತಗೊಳಿಸುವ ಮೂಲಕ ಅವ್ವ ಪ್ರಕಾಶನ ಕಥಾ ಲೋಕದಲ್ಲೊಂದು ಹೊಸ ಬೆಳಕು, ಸಾಧ್ಯತೆ ಮೂಡುವಂತೆ ಮಾಡಿದೆ. ಇಲ್ಲಿರುವ ಕಥೆಗಳೆಲ್ಲ ನಮ್ಮನ್ನು ಓದಿಸಿಕೊಂಡು ಹೋಗುವ ಸರಳ ಭಾಷೆಯಲ್ಲಿವೆ. ಇದು ಈ ಬರಹಗಾರರಿಗೆ ಹೊಸ ಕಿಟಕಿ ತೆರೆದಿದೆ. ಇದು ಬಾಗಿಲಾಗಲಿ ಎಂದು ಪ್ರಕಾಶಕರು ಬೆನ್ನುಡಿಯಲ್ಲಿ ಹೇಳಿದ್ದಾರೆ. ಆ ಬಾಗಿಲಿನಿಂದ ಬರುವ ಹೊಸ ಬೆಳಕು, ಗಾಳಿಯನ್ನು ಯುವ ಕಥಾಕಾರರು  ಸ್ವೀಕರಿಸಿ ಇನ್ನಷ್ಟು ಚಿಗಿತುಕೊಳ್ಳಲು, ಭರವಸೆಯ ಲೇಖಕರಾಗಲು  ಇದು ಸಹಾಯಕವಾಗಬಹುದು.   ಕಥೆಗಳ ಕುರಿತು:  ಇಲ್ಲಿನ ಪ್ರತಿ ಕಥೆಯಲ್ಲೂ ಒಂದು ಸಂದೇಶವಿದೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ಬಾಲ್ಯದ ಸವಿನೆನೆಪುಗಳು, ಪ್ರೀತಿ- ಪ್ರೇಮ, ವಿರಹ, ಸಂಶೋಧನೆ, ಕಾಲೇಜು ದಿನಗಳ ಸ್ಮರಣೆ...ಮೊದಲಾದ ವಿಷಯಗಳ ಬಗ್ಗೆ ಕಥೆಗಳಿವೆ.  ಪ್ರೀತಿ-ಪ್ರೇಮದ ಕಥೆಗ...
Image
 ಬದುಕಿಗೆ ಹತ್ತಿರವಾಗುವ ‘ಮುಷ್ಟಿ ಗ್ರಾಹ್ಯ’   ‘ಮುಷ್ಟಿ ಗ್ರಾಹ್ಯ’ ಪ್ರತಿಯೊಂದು ಮನದ ಭಾವನೆ, ಕಲ್ಪನೆಗಳ ಜೊತೆಗೆ ಸಮಷ್ಟಿ ಬದುಕಿನ ಹಲವಾರು ಮಜಲುಗಳನ್ನು ಕೆಲವೇ ಪಾತ್ರಗಳ ಮೂಲಕ ಮತ್ತು ಸನ್ನಿವೇಶಗಳ ಮೂಲಕ ಓದುಗರೆದುರು ತೆರೆದಿಡುವ ಕಥಾಹಂದರವಾಗಿದೆ. ಅತ್ಯಂತ ಸಲೀಸಾಗಿ ಕಥೆಗಳನ್ನು ಸುಂದರವಾಗಿ ಲೇಖಕ ವಿದ್ಯಾಧರ ಮುತಾಲಿಕ್ ದೇಸಾಯಿ ಇಲ್ಲಿ ನೇಯ್ದಿದ್ದನ್ನು ಕಾಣಬಹುದು.  ಇಲ್ಲಿನ ಕಥೆಗಳೆಲ್ಲವೂ ನಮ್ಮ ಸುತ್ತಮುತ್ತ ನಡೆಯುವ ವಿಚಾರಕ್ಕೆ ಸಂಬಂಧಪಟ್ಟವು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನಜೀವನದ ಮೇಲೆ ಬೆಳಕು ಚೆಲ್ಲುವಂತಹ ವಿಷಯವನ್ನು ಹೊಂದಿವೆ. ಇದರಿಂದ ಇದು ನಮ್ಮನ್ನು ಆಕರ್ಷಿಸುತ್ತದೆ. ಒಟ್ಟು ೧೨ ಕತೆಗಳ ಗುಚ್ಛ ಇದಾಗಿದ್ದು,  ಸೃಜನಶೀಲವಾಗಿ ಕಥೆಗಳು ತೆರೆದುಕೊಂಡಿವೆ. ಬದುಕಿಗೆ ಹತ್ತಿರವಾಗುವಂತಹ ಇಲ್ಲಿನ ಕಥೆಗಳು ಓದುಗರಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ  ಕಥೆ ಹೇಳುವೆ    ಮದುವೆಯ ವಯಸ್ಸು ಹೆಚ್ಚುತ್ತಿದ್ದರೂ ಅವಿವಾಹಿತೆಯಾಗಿದ್ದ ವಸು ಹೊಸ ಕನಸು ಕಾಣುವ ಕಥೆ ಇದು. ಕಿಟ್ಟಿ ಎನ್ನುವವ ವಸುಗಿಂತ ಮೂರು ವರ್ಷ ದೊಡ್ಡವ. ತಮ್ಮ ಮಗನಂತೆ ವಸು ಪಾಲಕರು ಬೆಳೆಸಿದ್ದರು. ಬಾಲ್ಯ ಸಹಜ ಸಲುಗೆ ಇಬ್ಬರಲ್ಲಿಯೂ ಇತ್ತು. ವಸುನನ್ನು ಸೋದರ ಮಾವನ ಮಗ ರಾಮನ ಜೊತೆ ಮದುವೆ ನಡೆಸುವ ಪ್ರಸ್ತಾಪ ನಡೆದಿತ್ತು. ಕಿಟ್ಟಿ ಈ ಮಧ್ಯೆ ಹೈಸ್ಕೂಲ್ ಶಿಕ್ಷಕನಾಗುವುದು, ಆತನಿಗೆ ವಸು ಆಗಾಗ ಪತ್ರ ಬರೆಯುತ್ತಾ...
Image
 ಮಜ ಕೊಡುವ  ಸಾಲದ ಜೋಕುಗಳು   ಹಿರಯ ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರು  ತಮ್ಮ ಪತ್ರಿಕೆಗಳಲ್ಲಿ ಜನರಿಂದ ಪಡೆದು ಪ್ರಕಟಿಸಿದ ಜೋಕುಗಳು ಇದರಲ್ಲಿವೆ.  ಈ ಜೋಕ್‌ಗಳೆಲ್ಲ ‘ಸಾಲದ ಜೋಕುಗಳು’ ಎಂಬ ತಲೆ ಬರಹದಲ್ಲಿ ಪ್ರಕಟವಾಗಿದೆ.  ಬಹಳ ಖರ್ಚಿಲ್ಲದೆ ನಮ್ಮನ್ನು ನಗಿಸುವ ಏಕೈಕ ಅಸ್ತ್ರವೆಂದರೆ ಜೋಕುಗಳು ಅಥವಾ ನಗೆ ಬರಹಗಳು. ಈ ಜೋಕುಗಳು ಸಮಯೋಚಿತವಾಗಿದ್ದು ಬದುಕಿಗೆ ಅಳವಡಿಕೆಯಾಗುವಂತಿದ್ದರಂತೂ ಅದರಿಂದ ಸಿಗುವ ಮಜವೇ ಬೇರೆ. ಇಂತಹವು ಎಷ್ಟಿದ್ದರೂ ಇನ್ನೂ ಬೇಕು ಎನ್ನುವಂತಿರುತ್ತವೆ.  ಈ ಕೃತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಓದುಗರು ಕಳಿಸುತ್ತಿದ್ದ, ಕಿರುನಗೆ ಮೂಡಿಸುವ ಜೋಕುಗಳನ್ನು ವಿಶ್ವೇಶ್ವರ ಭಟ್ ಕಟ್ಟಿಕೊಟ್ಟಿದ್ದಾರೆ. ಈ ಜೋಕುಗಳಲ್ಲಿಯೇ ಹೊಸ ಜೋಕು ಹುಟ್ಟಿಕೊಳ್ಳುತ್ತವೆ. ಜೋಕುಗಳನ್ನು ಹಾರಾಡಲು ಬಿಟ್ಟರೆ ಅದು ಚಂದ. ಇಲ್ಲಿ ಮುಖ್ಯವಾಗಿ ನಗುವಿದೆ, ಕಚಗುಳಿ ಇದೆ. ಸುಲಭದ ಭಾಷೆ, ಅರ್ಥವಾಗುವ ಸರಳ ಶೈಲಿ ಇದೆ. ನವಿರಾದ ಮನಸ್ಸಿಗೆ ನಗಿಸುವ ಶ್ರಮವಿಲ್ಲ.  ಇಲ್ಲಿನ ಜೋಕುಗಳು ಸುಖಪ್ರಸವವಾದ ಸಲೀಸು ಪ್ರಹಸನಗಳು ಎಂದು ಲೇಖಕ ಹೇಳುತ್ತಾರೆ. ಗಂಭೀರವಾದ ಸಭೆಯಲ್ಲಿ ಉಪನ್ಯಾಸಕನೊಬ್ಬ ಭಾಷಣ ಮುಂದುವರೆಸಿದಾಗ ಸಭೆ ಗಂಭೀರವಾಗಿಯೇ ಕೇಳುತ್ತಿರುತ್ತದೆ. ಭಾಷಣಕಾರ ತನ್ನ ಭಾಷಾ ಪ್ರಯೋಗದೊಳಗೆ ಏನೋ ತಪ್ಪು ಮಾಡಿದಾಗ ಇಡೀ ಸಭೆಯೇ ಗೊಳ್ ಎಂದು ನಗುತ್ತದೆ. ಇದು ಎಲ್ಲರನ್ನೂ ರಿಲೀಫ್‌ಗೆ ತರುತ್ತದೆ. ಆ ರಿಲೀಫ್...