ಕಥಾ ಲೋಕಕ್ಕೆ ಹೊಸ ಬೆಳಕು ಚೆಲ್ಲುವ ‘ಫಾಸ್ಟ್ ಆಂಡ್ ಫ್ಯೂರಿಯಸ್’ ಇದು ಇಂದಿನ ಪೀಳಿಗೆಯ ೫೦ ಆಸಕ್ತ ಕಥೆಗಾರರಿಂದ ಬರೆಸಿ, ತಿದ್ದಿ, ವಿಸ್ತರಿಸಿದ ಕಥಾ ಸಂಕಲನ ‘ಫಾಸ್ಟ್ ಆಂಡ್ ಫ್ಯೂರಿಯಸ್’. ಅವ್ವ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಕೌಟುಂಬಿಕ, ಪ್ರೀತಿ-ಪ್ರೇಮ, ಸಾಮಾಜಿಕ, ಭಯಾನಕ, ಪ್ರೇರಣಾದಾಯಕ, ಮಕ್ಕಳ, ವೈಜ್ಞಾನಿಕ, ಭಯಾನಕದ ಕಥೆಗಳಿವೆ. ಹತ್ತಾರು ಭಾವನೆಗಳನ್ನು ಹೊತ್ತ ನವಪೀಳಿಗೆಯವರಲ್ಲಿ ಇರುವ ಸೃಜನಶೀಲ ಬರೆವಣಿಗೆ ಇಲ್ಲಿ ಪ್ರಕಟಗೊಂಡಿದೆ. ಬರೆವಣಿಗೆಯನ್ನು ಜಾಗೃತಗೊಳಿಸುವ ಮೂಲಕ ಅವ್ವ ಪ್ರಕಾಶನ ಕಥಾ ಲೋಕದಲ್ಲೊಂದು ಹೊಸ ಬೆಳಕು, ಸಾಧ್ಯತೆ ಮೂಡುವಂತೆ ಮಾಡಿದೆ. ಇಲ್ಲಿರುವ ಕಥೆಗಳೆಲ್ಲ ನಮ್ಮನ್ನು ಓದಿಸಿಕೊಂಡು ಹೋಗುವ ಸರಳ ಭಾಷೆಯಲ್ಲಿವೆ. ಇದು ಈ ಬರಹಗಾರರಿಗೆ ಹೊಸ ಕಿಟಕಿ ತೆರೆದಿದೆ. ಇದು ಬಾಗಿಲಾಗಲಿ ಎಂದು ಪ್ರಕಾಶಕರು ಬೆನ್ನುಡಿಯಲ್ಲಿ ಹೇಳಿದ್ದಾರೆ. ಆ ಬಾಗಿಲಿನಿಂದ ಬರುವ ಹೊಸ ಬೆಳಕು, ಗಾಳಿಯನ್ನು ಯುವ ಕಥಾಕಾರರು ಸ್ವೀಕರಿಸಿ ಇನ್ನಷ್ಟು ಚಿಗಿತುಕೊಳ್ಳಲು, ಭರವಸೆಯ ಲೇಖಕರಾಗಲು ಇದು ಸಹಾಯಕವಾಗಬಹುದು. ಕಥೆಗಳ ಕುರಿತು: ಇಲ್ಲಿನ ಪ್ರತಿ ಕಥೆಯಲ್ಲೂ ಒಂದು ಸಂದೇಶವಿದೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ಬಾಲ್ಯದ ಸವಿನೆನೆಪುಗಳು, ಪ್ರೀತಿ- ಪ್ರೇಮ, ವಿರಹ, ಸಂಶೋಧನೆ, ಕಾಲೇಜು ದಿನಗಳ ಸ್ಮರಣೆ...ಮೊದಲಾದ ವಿಷಯಗಳ ಬಗ್ಗೆ ಕಥೆಗಳಿವೆ. ಪ್ರೀತಿ-ಪ್ರೇಮದ ಕಥೆಗ...