Posts

Image
  ಕೌಟುಂಬಿಕ ಮೌಲ್ಯ ಸಾರುವ  ‘ಮನೆಯೇ ಮಂತ್ರಾಲಯ’ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ಅವಕಾಶವಂಚಿತ ಪ್ರತಿಭೆಗಳಿಗೆ ಏರ್ಪಡಿಸಿದ್ದ ‘ವಾಣಿ ಕೌಟುಂಬಿಕ ಕಥಾ ಸ್ಪರ್ಧೆ- ೨೦೨೪’ರಲ್ಲಿ ಸ್ಪರ್ಧೆಗೆ ಬಂದ ಆಯ್ದ ಕಥೆಗಳ ಸಂಕಲನ  ‘ಮನೆಯೇ ಮಂತ್ರಾಲಯ’. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತು ಕಥೆಗಳಿವೆ. ಶೈಲಜಾ ಸುರೇಶ ಈ ಕೃತಿಯನ್ನು ಸಂಪಾದಿಸಿದವರು. ಈ ಕಥಾ ಸ್ಪರ್ಧೆಗೆ ‘ಮನೆಯೇ ಮಂತ್ರಾಲಯ’ ಎನ್ನುವ ಶೀರ್ಷಿಕೆಯನ್ನು ಕೊಡುವ ಮೂಲಕ ಕೌಟುಂಬಿಕ  ಕಥೆಗಳನ್ನು ಆಹ್ವಾನಿಸಲಾಗಿತ್ತು.  ದಾಂಪತ್ಯದ ಮೌಲ್ಯ, ಕೌಟುಂಬಿಕ ಮೌಲ್ಯ, ತಂದೆ-ತಾಯಿಯ ಮೇಲಿನ ಗೌರವ, ಮಕ್ಕಳನ್ನು ಸಲುಹುವ ರೀತಿ, ಮಕ್ಕಳಿಗೆ ಶಿಕ್ಷಣ, ಮಕ್ಕಳ ಮದುವೆ....  ಮುಂತಾದವುಗ ಬಗ್ಗೆ ಸದಭಿರುಚಿಯ ಕಥೆಗಳು ಇದರಲ್ಲಿವೆ. ಇಲ್ಲಿನ ಕಥೆಗಳು ಕೌಟುಂಬಿಕದ ಸುಗಂಧವನ್ನು ಪಸರಿಸುವಂತಿವೆ. ನಿಜವಾದ ರಸಾನಂದವನ್ನು ಕೊಡುವಂತಿವೆ. ಓದುಗರು ಮೆಚ್ಚುವಂತಹ ಅಪೂರ್ವ ಮೌಲ್ಯವನ್ನು ಹೊಂದಿರುವಂತಹ ಕಥೆಗಳು ಇವು.   ಉದ್ಧರಣ  ರಾಧಿಕಾ ವಿ. ಗುಜ್ಜರ್, ಬೆಂಗಳೂರು ಅವರು ಬರೆದ, ಮೊದಲ ಬಹುಮಾನ ಪಡೆದ ಕಥೆ ಇದು. ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಮಂಕಾಗಿದ್ದ ಗೆಳತಿ ಲತಾಳನ್ನು ಆಕೆಯ ತಂದೆ- ತಾಯಿ ಮನೆಯಲ್ಲಿ ನಾಯಿ ತರ ಕೂಡಿಹಾಕಿರುತ್ತಾರೆ. ಇವರ ಮನೆಯ ಹತ್ತಿರವೇ ನಾಗು ಎನ್ನುವವರು ಇಸ್ತ್ರಿ ಅಂಗಡಿಯನ್ನು ಇಟ್ಟಿರುತ್ತಾರೆ. ನಾಗು ಮತ್ತು ಲತಾ ಶಾಲೆಯಲ್ಲಿ ಒಟ್ಟಿಗೆ ...
Image
 ಎಲ್ಲಾ ಕಾಲಕ್ಕೂ ಪ್ರಸ್ತುತವಾದ  ‘ಸರ್ವಜ್ಞ ವಚನ  ಸಂಪದ’  ‘ಸರ್ವಜ್ಞ  ವಚನ ಸಂಪದ’ ಈ ಕೃತಿಯನ್ನು ಸಂಗ್ರಹಿಸಿದವರು  ಮಾಗಡಿ ರಂಗನರಸಿಂಹಯ್ಯ ಅವರು. ಇದರಲ್ಲಿ ಸುಮಾರು ೮೦೦ ವಚನಗಳನ್ನು ಅರ್ಥ ಸಹಿತ ವಿವರಿಸಲಾಗಿದೆ. ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎನ್ನಲಾಗಿದೆ. ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರು ೧೬ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.  ಈತನ ವಚನಗಳಲ್ಲಿ ಬಾರದ ವಿಷಯಗಳೇ ಇಲ್ಲ.  ಇದರಲ್ಲಿ ಯಾರನ್ನೂ, ಯಾವುದನ್ನೂ ಬಿಟ್ಟಿಲ್ಲ. ತನ್ನ ಹುಟ್ಟಿನಿಂದ ಹಿಡಿದು  ವಿವರಣೆ ಕೊಟ್ಟಿದ್ದಾನೆ. ಜಾತಿ ಪದ್ಧತಿ, ದೌರ್ಜನ್ಯ, ಶೋಷಣೆ ಹಾಗೂ ಮೌಢ್ಯಗಳೆಂಬ ಅನಿಷ್ಠ ಪದ್ಧತಿಗಳು, ಸಂಪ್ರದಾಯವಾದಿಗಳ ನಡೆ ಸಹಿತ ಎಲ್ಲವನ್ನೂ  ಸರ್ವಜ್ಞ ಕವಿ ಕಟುವಾಗಿ ಟೀಕಿಸಿ ತನ್ನ ತ್ರಿಪದಿಗಳಿಂದ ಝಾಡಿಸುತ್ತಾನೆ. ಆತನೇ ಹೇಳುವಂತೆ ‘ಈ ಲೋಕದಲ್ಲಿ ಕಂಡುದನ್ನು ಖಂಡಿತವಾಗಿ ಹೇಳುತ್ತೇನೆ’ ಎನ್ನುವುದನ್ನು ಈಡೇರಿಸಿದ್ದಾನೆ. ಈ ವಚನ ಅಥವಾ ತ್ರಿಪದಿಗಳು ಸರ್ವರಿಗೂ ಮಾರ್ಗದರ್ಶಕ. ಹಾಗೂ ನೆನೆಪಿಡಲು ತುಂಬಾ ಸುಲಭವಾಗಿವೆ.   ಪ್ರಸ್ತುತ ಕೃತಿಯಲ್ಲಿ  ಸುಮಾರು ೨೧ ವಿಷಯಗಳ ಬಗ್ಗೆ ಸರ್ವಜ್ಞ ಹೇಳಿರುವ ವಚನಗಳನ್ನು ...
Image
 ಗೆಳತಿಯ ಕೊಲೆಗಾರರ ವಿರುದ್ಧದ ಸೇಡಿನ  ‘ಸ್ವಪ್ನದ ಬೆನ್ನೇರಿ’ ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ತನ್ನನ್ನು ತೊಡಗಿಸಿಕೊಂಡಿರುವ ಸಕಲೇಶಪುರ ಮೂಲದ ಕೌಶಿಕ್ ಕೂಡುರಸ್ತೆ ಪ್ರಸ್ತುತ ಪತ್ತೆದಾರಿ ಕಾದಂಬರಿ ‘ಸ್ವಪ್ನದ ಬೆನ್ನೇರಿ’ ಇದರ ಲೇಖಕರು. ಇದರಲ್ಲಿನ ಕಥೆಗಳು ಸರಳವಾಗಿ, ಸುಲಲಿತವಾಗಿವೆ. ನಮ್ಮನ್ನು ಒಮ್ಮೆಲೆ ಓದಿಸಿಕೊಂಡು ಹೋಗುವಂತದ್ದು. ಕಾದಂಬರಿ ಓದಿದ್ದೇ ಗೊತ್ತಾಗುವುದಿಲ್ಲ. ಅಷ್ಟೊಂದು ಕುತೂಹಲವನ್ನು ಹುಟ್ಟುಹಾಕುತ್ತದೆ. ಇಲ್ಲಿನ ಪಾತ್ರಗಳೂ ಸಹ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಥೆಯ ನೇಯ್ಗೆ ಸುಂದರವಾಗಿದೆ. ಕಾಲೇಜು ಮತ್ತು ಅಲ್ಲಿನ ವಿದ್ಯಾರ್ಥಿಗಳು, ಉಪನ್ಯಾಸಕಿ, ಆಕೆಯ ಗೆಳತಿ ಮತ್ತು ಗೆಳತಿಯ ತಂದೆ ಇವರ ಸುತ್ತವೇ ತಿರುಗುವ ನಿಗೂಢತೆ. ಇಷ್ಟೆಲ್ಲ ವಿಶೇಷ ಈ ಕೃತಿಯದ್ದಾಗಿದೆ. ಸ್ವಪ್ನದ ಬೆನ್ನೇರಿ ಹೋದಾಗ ಏನೆಲ್ಲ ನಡೆಯಿತು, ಬೆನ್ನೇರುವ ಸಂದರ್ಭ ಏಕೆ ಎದುರಾಯಿತು, ಎಷ್ಟೆಲ್ಲ ಕೊಲೆ ನಡೆಯಿತು, ಅದನ್ನು ಮಾಡಿದವರಾರು, ಮಾಡಿಸಿದವರಾರು, ಏಕೆ ಮಾಡಿದರು? ಇದಕ್ಕೆಲ್ಲ ಉತ್ತರವೇ ಈ ಕಾದಂಬರಿ. ಕಥಾ ಸಾರಾಂಶ:      ಅಮೆರಿಕದಲ್ಲಿ ಹಿಪ್ನೊಥೆರಪಿಸ್ಟ್ ಆಗಿ ಟ್ರೈನಿಂಗ್ ಅಕಾಡೆಮಿಯಲ್ಲಿ ಲಕ್ಷಗಟ್ಟಲೆ ಸಂಬಳ ಎಣಿಸುತ್ತಿದ್ದ ಜೆಸ್ಸಿಕಾ ತನ್ನ ಗೆಳತಿಯ ಕೊಲೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಡಿದ್ದ ಪ್ಲಾನಿಂಗ್‌ನ  ಕಥೆ ಇದು.  ಜೆಸ್ಸಿಕಾಳಿಗೆ ನೇಹಾ ಪರಿಚಯ ಲೆಸ್ಬಿಯನ...
Image
 ಮರಳಿ ಬಾಲ್ಯಕ್ಕೆ ಹೋದ ಅನುಭವದ ‘ಸವಿನೆನಪುಗಳ ಹಂದರ’  ಜೀವನದಲ್ಲಿ ನಡೆಯುವ ಎಷ್ಟೋ ಅನುಭವಗಳನ್ನು ಸರಳವಾದ ಶಬ್ದಗಳಲ್ಲಿ ಸ್ವಾರಸ್ಯಕರ ವರ್ಣನೆಯ ಮೂಲಕ ಲೇಖಕಿ ವಾಣಿ ರಾಜ್ ‘ಸವಿನೆನಪುಗಳ ಹಂದರ’ದಲ್ಲಿ ಕಟ್ಟಿಕೊಟ್ಟಿದ್ದಾರೆ.  ಹೆಸರಿಗೆ ತಕ್ಕಂತೆ ಕೃತಿಯು ಹಲವಾರು ಸವಿನೆನಪುಗಳನ್ನು ಹೊತ್ತಿರುವ ಒಂದು ಕಥಾ ಸಂಕಲನ. ದೊಡ್ಡವರಾಗುತ್ತಿದ್ದಂತೆ ಜವಾಬ್ದಾರಿಗಳ ನಡುವೆ ಬದುಕು ಸಾಗುವಾಗ ನಮ್ಮ ಬಾಲ್ಯ ಎಷ್ಟು ಚೆನ್ನಾಗಿತ್ತು, ಬಾಲ್ಯ ಮರಳಿ ಬಂದರೆ ಎಷ್ಟು ಚೆನ್ನಾಗಿರುತ್ತದೆ ಎಂಬ ಆಸೆ ಪ್ರತಿಯೊಬ್ಬರಿಗೂ ಕಾಡುತ್ತದೆ. ಆದರೆ ಅದು ಅಸಾಧ್ಯವಾಗಿರುತ್ತದೆ. ಆಗ ಸವಿ ನೆನಪುಗಳ ಮರುಕಳಿಸುತ್ತವೆ. ಮರಳಿ ಬಾಲ್ಯಕ್ಕೆ ಹೋದ ಅನುಭವವನ್ನು ಅವು ಕಟ್ಟಿ ಕೊಡುತ್ತವೆ. ಇಂತಹ ಸುಮಾರು ೩೨ ಕಿರುಬರಹಗಳನ್ನು ಲೇಖಕಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಇಲ್ಲಿನ ಬರೆಹಗಳಲ್ಲಿ ಕೆಲವು ಲಘು ಹಾಸ್ಯದ ದಾಟಿಯಲ್ಲಿ ಸಾಗುತ್ತವೆ. ಮತ್ತೆ ಕೆಲವು  ಜೊತೆ ನವಿರಾದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಈಗಿನ ಮತ್ತು ಅಂದಿನ ಜೀವನದಲ್ಲಿ ಆದ ಬದಲಾವಣೆಗಳನ್ನು ಕಣ್ಮುಂದೆ ಕಾಣುವಂತೆ ಚಿತ್ರಿಸಿದ್ದಾರೆ. ಇವೆಲ್ಲ ನಮ್ಮ ನಿಮ್ಮ ಜೀವನದಲ್ಲಿ ನಡೆದಂತಹ ಬಹುತೇಕ ಘಟನೆಗಳೇ ಆಗಿರುವುದರಿಂದ ಕೃತಿಯನ್ನು ಓದುವಾಗ ಮತ್ತೊಮ್ಮೆ ನಮ್ಮ ಕಣ್ಮುಂದೆ ಇವು ಹಾದು ಹೋಗುತ್ತವೆ. ಬದಲಾವಣೆ ಪರ್ವದಲ್ಲಿ ಅಂದಿನ ಮುಗ್ಧiನಗಳ ಆನಂದ ಈಗಿನ ಜನಾಂಗಕ್ಕೆ ಮರೀಚಿಕೆಯಂತೆ ಕಾಣಬಹುದು...
Image
 ಅಭಿವೃದ್ಧಿಯ ಹೆಸರಿನಲ್ಲಿ ಹಳ್ಳಿಗಳ ವಿನಾಶದ ಕಥೆಯ ‘ಶಿವನ ಡಂಗುರ’    “ಶಿವನ ಡಂಗುರ’ ಜ್ಞಾನಪೀಠ ಪುರಸ್ಕೃತ ಪ್ರೊ.  ಚಂದ್ರಶೇಖರ ಕಂಬಾರರ ಕಾದಂಬರಿ. ಸಮಕಾಲೀನ ಬದುಕಿನ ಪಲ್ಲಟಗಳನ್ನು ಮುಖಾಮುಖಿಯಾಗಿಸಿದ ಇದು ವಿಶಿಷ್ಟ ಕೃತಿ ಮಾತ್ರವಲ್ಲ, ಹೊಸ ದರ್ಶನ ನೀಡುವ ಮಹತ್ವದ ಕಾದಂಬರಿಯೂ ಹೌದು.  ಹಳ್ಳಿಯೊಂದರ ಬದುಕನ್ನು ಚಿಂತಿಸುತ್ತ, ಜಾಗತೀಕರಣದ ಅಪಾಯ, ನಗರ ಕೇಂದ್ರಿತ ಪ್ರಗತಿಯ ಪರಿಕಲ್ಪನೆ, ಜನಪದರ ಅತ್ಮನಾಶ, ನಮ್ಮ ಸೃಜನಶೀಲತೆಯನ್ನು ಕೊಲ್ಲುತ್ತಿರುವ ಅನ್ಯಾಕ್ರಮಣದ ದುರಂತ, ಅಭಿವೃದ್ಧಿ ಹೆಸರಿನಲ್ಲಿ ಈ ನೆಲದ ಅಂತ:ಸತವ್ವನ್ನು ಹೀರುತ್ತಿರುವ ವಿವಿಧ ಯೋಜನೆಗಳ ದುಷ್ಪರಿಣಾಮ -ಹೀಗೆ ಅನೇಕ ಸಂಗತಿಗಳನ್ನು ಕೃತಿ ಚಿತ್ರಿಸುತ್ತದೆ.  ಒಂದು ಕಾಲದ ಶಿವಾಪುರ ಎಂಬ ಗ್ರಾಮದ ಬದುಕಿನಲ್ಲಿ ಭೂಮಿ ಜನರ ತಾಯಿಯಾಗಿತ್ತು. ಎಂಥ ಅಪಾಯದ ಸ್ಥಿತಿಯಲ್ಲೂ ಕಾಪಾಡುವ ಜೀವನ ಮೌಲ್ಯಗಳಿದ್ದವು. ಅವನ್ನು ಉಳಿಸಿಕೊಳ್ಳಬಲ್ಲ ಜನರಿದ್ದರು. ಇಂತಹ ಶಿವಾಪುರದ ಬದುಕಿನಲ್ಲಿ ಯಾಕೆ ಹೀಗಾಯಿತು ಎನ್ನುವುದರ ಹುಡುಕಾಟವೇ ಈ ಕಾದಂಬರಿಯ ವಸ್ತು. ಶಿವಪುರದ ಕೇಂದ್ರ ವ್ಯಕ್ತಿ ಬರಮೇಗೌಡ. ಈತನದು ಗೌಡಾಳಿಕೆಯ ಮನೆತನ. ಯಾವುದೇ ಸಂದರ್ಭದಲ್ಲೂ ಜನರು ಆತನನ್ನು ಬಿಟ್ಟು ಯೋಚಿಸಿದವರಲ್ಲ. ಆದರೆ ಹೆಂಗಸರ ವಿಚಾರದಲ್ಲಿ ಬಹಳ ಕೆಟ್ಟವನಾಗಿದ್ದ. ಜೋಗತಿ ತುಂಗವ್ವನನ್ನು ಮದುವೆಯಾಗಿದ್ದ. ಶಿವಾಪುರದಲ್ಲಿ ಇಂಗ್ಲೀಷ್ ಶಾಲೆ, ಆಸ್ಪತ್ರೆಗಳನ್ನು ಆರಂಭಿಸಬೇಕೆಂದು ಬರಮ...
Image
 ಜನಸಾಮಾನ್ಯರ ಕಥೆಯ ‘ಬೆಸ್ತರ ಕರಿಯ ’  ‘ಬೆಸ್ತರ ಕರಿಯ’ ಪ್ರಸ್ತುತ ಕೃತಿ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅವರ ಕಥಾ ಸಂಕಲನ. ಇದರಲ್ಲಿ  ಸಾಮಾನ್ಯ ಜನರನ್ನು ತಮ್ಮ ಕಥೆಯ ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಅವರಲ್ಲಿಯೂ ಉತ್ತಮ ಗುಣವಿರುವುದನ್ನು ಎತ್ತಿ ತೋರಿಸಿದ್ದಾರೆ. ಅಧಿಕಾರಿಗಳ ಕೆಟ್ಟ ಬುದ್ಧಿ, ಜನರನ್ನು ಸುಲಿಯುವುದು, ಕೂಲಿಕಾರ್ಮಿಕರ ಪರದಾಟ, ಅಧಿಕಾರಿಗಳಿಂದ ಅವರಿಗೆ ಕಿರುಕುಳ, ಊರಿನ ಯಜಮಾನ ಕಾಳಸಂತೆಯಲ್ಲ್ಲಿ ಹಣ ಮಾಡುವುದು, ಲೇವಾದೇವಿ ಮೂಲಕ ಗ್ರಾಮಸ್ಥರನ್ನು ದೋಚುವುದು, ಅಧಿಕಾರಿಗಳನ್ನು ಓಲೈಸಿಕೊಳ್ಳುವುದು, ಹಳ್ಳಿಯ ಮುಗ್ಧರಿಗೆ ಅನ್ಯಾಯ, ಮೋಸ ಮಾಡುವುದು, ಜಪ, ತಪ, ಮಡಿ, ಮೈಲಿಗೆ  ಎನ್ನುತ್ತಾ ಅಸ್ಪೃಶ್ಯತೆ ಆಚರಿಸುತ್ತಿರುವುದು ಮುಂತಾದವು ಇಲ್ಲಿನ ಕಥೆಗಲ್ಲಿ ಕಂಡುಬರುತ್ತದೆ. ತುಂಬಾ ಸರಳ ಶೈಲಿಯ ಬರೆಹದಲ್ಲಿ ನಮ್ಮ ಸುತ್ತಮುತ್ತಲೇ ನಡೆಯುವ ಘಟನೆಗಳನ್ನು ತೆಳು ಹಾಸ್ಯದ ಮೂಲಕ ಚಿತ್ರಿಸಿದ್ದಾರೆ. ತಮ್ಮ ಗ್ರಾಮದ ಸುತ್ತಮುತ್ತಲು ನಡೆದ ಘಟನೆಗಳಿಗೂ ಇಲ್ಲಿ ಸ್ಥಾನ ಕಲ್ಪಿಸಿದ್ದಾರೆ. ಅತಿ ಸುಲಭದಲ್ಲಿ ಓದುಗರನ್ನು ಆಕರ್ಷಿಸುವ, ಓದಿಸಿಕೊಂಡು ಹೋಗುವ ಗುಣ ಈ ಕಥಾ ಸಂಕಲನದಲ್ಲಿದೆ. ಒಟ್ಟೂ ೧ ಕಥೆಗಳು ಇದರಲ್ಲಿವೆ.         ಕಥೆಗಳ ಕುರಿತು:   ಬೆಸ್ತರ ಕರಿಯ   ಇದರಲ್ಲಿ ಕರಿಯ ಎನ್ನುವ ಕೂಲಿಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಬೆಸ್ತರ ಕರಿಯನನ್ನು ನಿಜಕ್ಕೂ ...
Image
      ಬೆರಗುಗೊಳಿಸುವ ಕವನಗಳ   ‘ಇಂದ್ರ ಚಾಪ’  ತೀರ್ಥಹಳ್ಳಿಯ ಶಿಕ್ಷಕಿ ಸಾಹಿರಾಬಾನು ಅವರ  ‘ಇಂದ್ರ ಚಾಪ’ ಕವನ ಸಂಕಲನದಲ್ಲಿ  ಬೆರಗುಗೊಳಿಸುವ ಕವನಗಳಿವೆ. ಆರ್ತ ಮೊರೆಯೂ ಇದೆ. ಆಧ್ಯಾತ್ಮದ ಅಂಚಿನತ್ತ ಕೈ ಚಾಚುವ ಕವನಗಳು ಇವೆ. ನಮ್ಮಲ್ಲಿ ಆಸೆ ಮತ್ತು ನಿರೀಕ್ಷೆ ಹುಟ್ಟಿಸುವ ಕವಿತೆಗಳು ಇದರಲ್ಲಿವೆ. ಆತ್ಮ ಮತ್ತು ಬಹಿರ್ಲೋಕಗಳನ್ನು ಅತ್ಯಂತ ಸೂಕ್ಷ್ಮವಾಗಿ ಕವಯಿತ್ರಿ ಶೋಧಿಸುತ್ತಾ ಹೊಸ ಪಲುಕುಗಳನ್ನು ಹುಟ್ಟಿಸಿದ್ದಾರೆ. ಅವರ ಆದವಾದ ಕವಿತೆಗಳನ್ನು ಓದುವಾಗ ಎಂತವರು ಕೂಡ ತನ್ಮಯರಾಗುತ್ತಾರೆ.  ಧ್ವನಿ ಪೂರ್ಣವಾದ ಚಿತ್ರವತ್ತಾದ ಕಲ್ಪನೆಗಳನ್ನು ಕಡೆದಿದ್ದಾರೆ. ಕಲ್ಪಕತೆ ಮತ್ತು ಭಾಷೆಯ ಆರ್ದ್ರ ಗುಣಗಳನ್ನು ಬಳಸಿಕೊಂಡು ಅಖಂಡವಾದ ಇಡೀ ಕವಿತೆಯನ್ನು ಹೇಗೆ ಕಟ್ಟುವಲ್ಲಿ ಸಾರ್ಥಕ ಪಡೆಯಬಹುದು ಎನ್ನುವುದಕ್ಕೆ ಇಲ್ಲಿನ ಕವಿತೆಗಳು ಸಾಕ್ಷಿಯಾಗಿವೆ. ಒಟ್ಟು ೬೬ ಕವಿತೆಗಳ ಸಂಕಲನ ಇದು. ಇಲ್ಲಿ  ಅಮ್ಮ, ಮುಂಜಾವು, ದೇವರು, ಪ್ರಕೃತಿ, ಬೆಳಕು, ರಾತ್ರಿ, ಕನಸು, ರೋಮಾಂಚನ, ಹೂವು, ನಂಬಿಕೆ, ಬದುಕು, ಭ್ರಮೆ, ಏಕಾಂತ, ತವಕ... ಹೀಗೆ ವಿವಿಧ ವಿಷಯಗಳ ಕುರಿತಾದ ಕವಿತೆಗಳಿವೆ. ಕೆಲವು ಕವಿತೆಗಳ ಕುರಿತು ಗಮನಿಸುವುದಾರೆ-   ಮೊದಲ ಕವನ ‘ನೆಲ ಜಲ ವಾಯು’ ಇದರಲ್ಲಿ, ಶತಮಾನಗಳಿಂದ ಪ್ರಕೃತಿಯ ಅಂಗಗಳಾಗಿ ಭೂಮಿ, ನೀರು, ವಾಯುಗಳಿವೆ. ಯುದ್ಧ, ಕ್ರಾಂತಿಯಂತಹ ಘಟನೆಗಳನ್ನು ಈ ಭೂಮಿ ಕಂಡಿದೆ. ಆದರೂ ನಾವ...