ಮಕ್ಕಳ ಒಲವನ್ನು ಗಿಟ್ಟಿಸುವ

‘ಒಂದು ನಮಸ್ಕಾರ ಮತ್ತು ಇತರ ಕಥೆಗಳು’


‘ಒಂದು ನಮಸ್ಕಾರ ಮತ್ತು ಇತರ ಕಥೆಗಳು’ ಇದರ ಲೇಖಕರು ಡಾ. ನಾಗ ಎಚ್. ಹುಬ್ಳಿ. ಮಕ್ಕಳ ಸಾಹಿತ್ಯದಲ್ಲೂ ಕೃಷಿ ಮಾಡಿರುವ ಲೇಖಕರು, ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ಬರೆದ ಈ ಕಥೆಗಳು ಇವು. ಮಕ್ಕಳನ್ನು ಹೆಚ್ಚು ಓದಿನತ್ತ ಸೆಳೆಯುವಲ್ಲಿ, ಇಂತಹ ಕಥೆಗಳನ್ನು ಓದುವ ಮೂಲಕ ಮಕ್ಕಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಲ್ಲಿ, ನಂತರ ಗಂಭೀರವಾದ ಓದಿಗೆ ತಮ್ಮನ್ನು ತೆರೆದುಕೊಳ್ಳಲು ಅನುವಾಗುತ್ತದೆ. ಇದರಿಂದ ಅವರ ಭವಿತವ್ಯವು ಉತ್ತಮವಾಗುತ್ತದೆ.

  ಮಕ್ಕಳು ಧೈರ್ಯ, ಸಾಹಸ, ಒಳ್ಳೆಯತನ, ಒಗ್ಗಟ್ಟು, ನೈತಿಕ ಮೌಲ್ಯವನ್ನು, ನೈತಿಕ ಪ್ರಜ್ಞೆಯನ್ನು ಮೊದಲಾದವುಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎನ್ನುವ ಸಂದೇಶವನ್ನು ಇಲ್ಲಿನ ಮಕ್ಕಳ ಕಥೆಗಳು ಕಟ್ಟಿಕೊಡುತ್ತವೆ. ಇಂತಹ ಕಥೆ ಬರೆಯುವ ಲೇಖಕರ ಚಿಂತನಾಶೀಲತೆಯನ್ನು ನಿಜವಾಗಿ ಮೆಚ್ಚಲೇಬೇಕು.  ಮಕ್ಕಳಲ್ಲಿ ಆಸಕ್ತಿ ಮತ್ತು ಕಲ್ಪನಾ ಶಕ್ತಿಯನ್ನು ವೃದ್ಧಿಸುವುದು ಮುಖ್ಯ, ಜೊತೆಗೆ ಕೃತಿಯನ್ನು ಮಕ್ಕಳು ಕೊಂಡು ಓದಿದರೆ ಅವರಲ್ಲಿ ಇನ್ನಷ್ಟು ಉತ್ತಮ ಗುಣಗಳು, ವಿಶೇಷ ಅನುಭವಗಳು ಆಗುವುದು ನಿಶ್ಚಿತ. ಮಕ್ಕಳ ಕಥೆಗಳು  ಮಕ್ಕಳ ಮನಸ್ಸನ್ನು ಅರಳಿಸುವ, ಆಸಕ್ತಿಯನ್ನು ಕೆರಳಿಸುವ, ಪ್ರತಿಭೆಯನ್ನು ಅರಳಿಸುವ ಸಾಧ್ಯತೆಗಳಿರುತ್ತವೆ. ಈ ಗುಣಗಳನ್ನು ಉದ್ದೀಪಿಸಿ ಪೋಷಿಸಲು ಇಲ್ಲಿ ಲೇಖಕರು ಸುಲಭದ ಹರವಿನ ಭಾಷೆಯನ್ನು ಬಳಸಿರುವುದನ್ನು ಕಾಣಬಹುದು.

 ಪ್ರಸ್ತುತ ಕೃತಿಯಲ್ಲಿ ಒಟ್ಟು ಹತ್ತು ಮಕ್ಕಳ ಕಥೆಗಳಿವೆ. ವಾಸ್ತವ ಕಥೆಗಳು, ಪ್ರಾಣಿ ಕಥೆಗಳು, ದೃಷ್ಟಾಂತದ ಕಥೆಗಳು ಮತ್ತು ಜಾನಪದ ಮಾದರಿಯ ಕಥೆಗಳು ಹೀಗೆ ವಿವಿಧ ರೀತಿಯ ಕಥೆಗಳ ಗುಚ್ಛವೇ  ‘ಒಂದು ನಮಸ್ಕಾರ ಮತ್ತು ಇತರ ಕಥೆಗಳು. ಇಲ್ಲಿನ ಕಥೆಗಳು ಮಕ್ಕಳ ಸುತ್ತಲಿನ ಪ್ರಪಂಚದಲ್ಲಿ ಹುಟ್ಟಿಕೊಂಡಿದ್ದರೂ ಬಹುಬೇಗ ಮಕ್ಕಳ ಮನಸೆಳೆಯುವಲ್ಲಿ ಇವು ಯಶಸ್ವಿಯಾಗಿವೆ.  ಇವೆಲ್ಲ ಮಕ್ಕಳನ್ನು ರಂಜಿಸುವುದರ ಜೊತೆಗೆ ಒಂದು ಉತ್ತಮ ನೀತಿಬೋಧೆಯನ್ನು ಕಟ್ಟಿಕೊಡುತ್ತವೆ.

  ಮಕ್ಕಳಲ್ಲಿ ಪ್ರಾಣಿ ಪ್ರೀತಿ ಸಹಜವಾಗಿ ವಿಸ್ತರಿಸಬೇಕು ಎನ್ನುವುದನ್ನು ಮೊದಲ ಕಥೆ ‘ತರಲೆ ಚಿಂಟು’, ಸುಳ್ಳು, ಅಸೂಯೆ, ದ್ವೇಷ ಸಿಟ್ಟು, ಲಾಲಸೆ ಮುಂತಾದ ನಮ್ಮೊಳಗಿರುವ ರಾವಣಾಸುರನ ಗುಣಗಳನ್ನು ದಹನ ಮಾಡುವ ಮೂಲಕ ಮನುಷ್ಯ ಒಳ್ಳೆಯವನಾಗಬೇಕು ಸಂದೇಶವನ್ನು ‘ರಾವಣ ಸಂಹಾರ’, ವಿದ್ಯಾರ್ಥಿಗಳು ಶಿಸ್ತು, ಅಚ್ಚುಕಟ್ಟುತನ, ಹೊಸತನ ರೂಢಿಸಿಕೊಳ್ಳಬೇಕು, ನಮ್ಮ ವಸ್ತುಗಳನ್ನು  ಸದುಪಯೋಗ ಮಾಡಿಕೊಳ್ಳಬೇಕೆನ್ನುವುದನ್ನು ಬೊಂಬೆಗಳ ಮೂಲಕ ಗಮನ ಸೆಳೆಯುವ  ‘ಕಾಣೆಯಾದ ಆಟಿಕೆ’ ಕಥೆ ಇದರಲ್ಲಿದೆ. 

‘ ಆಮೆ ಮತ್ತು ಮೊಲ’ ಕಥೆಯಲ್ಲಿ ದೇವರು ಒಂದೊಂದು ಪ್ರಾಣಿಗೆ ಒಂದೊಂದು ವೈಶಿಷ್ಟ್ಯ ನೀಡಿರುವುದು, ಪ್ರತಿಯೊಬ್ಬರಲ್ಲಿ ಒಂದೊಂದು ವಿಶಿಷ್ಟ ಶಕ್ತಿ ಇರುವುದರನ್ನು ಚಿತ್ರಿಸುವುದರ ಜೊತೆಗೆ ಗೆಳೆತನದಲ್ಲಿ ಒಬ್ಬರಿಗೆ ಗಾಯವಾದಾಗ ಉಪಚರಿಸಬೇಕೆಂಬ ನೀತಿಯೂ ಇದೆ. ‘ಹತ್ತಿಯ ಹೂವು’ ಕಥೆಯು, ಪರಿಸ್ಥಿತಿಗೆ ಅನುಗುಣವಾಗಿ ಬಂದ ಹಾಗೆ ಕಷ್ಟಗಳನ್ನು, ನೋವುಗಳನ್ನು ಸಹಿಸಿಕೊಳ್ಳಬೇಕು. ಯಾವ ಹಂತದಲ್ಲಿಯೂ ತನ್ನ ಬಗ್ಗೆ ಬೇಸರಿಸಿಕೊಳ್ಳದೆ, ಕರುಬದೆ, ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸಬೇಕು. ನಮ್ಮ ಜನ್ಮದ ಬಗ್ಗೆ ಅಪಾರ ಗೌರವ ಹೊಂದಬೇಕೆನ್ನುವುದನ್ನು ತಿಳಿಸುತ್ತದೆ.   ‘ತಣ್ಣನೆಯ  ದೋಸೆ’ ಮೂಲಕ ಮನುಷ್ಯ ದುಡಿದು ತಿನ್ನಬೇಕು. ದುಡಿದು ತಿಂದಾಗ ಬಿಸಿಬಿಸಿ ತಿಂಡಿ, ಬಿಸಿಊಟ ದೊರೆಯುತ್ತದೆ. ಸೋಮಾರಿಯಾಗಿ ಕುಳಿತುಕೊಳ್ಳದೆ ತಂದೆ ತಾಯಿಯ ಸಂಪಾದನೆಯಲ್ಲಿ ಜೀವನ ಸಾಗಿಸದೆ, ಮಕ್ಕಳು ದುಡಿಯುವಂತಾಗಬೇಕು ಎನ್ನುವ ಸಂದೇಶ ಸಾರಿದ್ದಾರೆ.

  ‘ಸೋಮುವಿನ ಬೂಟು’ಕಥೆ ಚಿಕ್ಕ ಮಕ್ಕಳ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡುವುದು ಕಷ್ಟ. ಹುಟ್ಟುಹಬ್ಬ ಎಂದರೇನು, ಹಣ ಎಲ್ಲಿ ಸಿಗುತ್ತದೆ?  ಮುಂತಾದ ಪ್ರಶ್ನೆ ಕೇಳುವ ಮೂಲಕ ಮಗು ಬಡತಾಯಿಯ ಪಡಿಪಾಟಲನ್ನು ಬಿಚ್ಚಿಡುವಂತೆ ಮಾಡುತ್ತದೆ. ‘ಬಿಡುಗಡೆಯ ಭಾಗ್ಯ’ ಕಥೆಯು  ಹಕ್ಕಿ, ಪಕ್ಷಿಗಳನ್ನು ಕೂಡಿ ಹಾಕುವುದು, ಒಂಟಿಯಾಗುವಂತೆ ಮಾಡುವುದರಿಂದ ಅವರ ಜೀವನ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ. ಹಾರಾಡುತ್ತ್ತಾ ಅವು ಜೀವನ ಮಾಡಿದರೆ ಸಂತೋಷದಿಂದ ಇರುತ್ತವೆ. ಮನುಷ್ಯನೂ ಹಾಗೆಯೇ.  ಒಂಟಿಯಾಗಿ ಬಳಲಾರ, ಸಹಜೀವಿ ಎನ್ನುವುದನ್ನು ಈ ಕಥೆ ಬಿಂಬಿಸುತ್ತದೆ.

ತನ್ನ ಕರ್ತವ್ಯದ ಬಗ್ಗೆ  ನಿಜವಾದ ನಿಷ್ಠೆಯನ್ನು ಯಾರು ಹೊಂದಿರುತ್ತಾರೋ ಅಂತವರಿಗೆ ದೇವರು ಸಹಾಯ ಮಾಡುತ್ತಾನೆ. ಯಾವುದೇ ಅಪಾಯ ಕೂಡ ಯಾವುದೇ ಸಂದರ್ಭದಲ್ಲಿಯೂ ಅವರಿಗೆ ಎದುರಾಗದು. ಅವರು ಧೈರ್ಯ ಕಳೆದುಕೊಳ್ಳುವುದಿಲ್ಲ ಎನ್ನುವುದು ‘ಶಿವಾಜಿಯ ಅಗ್ನಿಪರೀಕ್ಷೆ’ಯ ಸಾರಾಂಶ.  ಈ ಕೃತಿಯ ಶೀರ್ಷಿಕೆಯ ಕಥೆ ‘ಒಂದು ನಮಸ್ಕಾರ’. ಯಾವಾಗಲೂ ಪ್ರೀತಿಯಿಂದ ವರ್ತಿಸಿದರೆ ಈ ಜಗತ್ತೇ ಸುಂದರವಾಗಿರುತ್ತದೆ. ನಮ್ಮ ಒಂದು ಸಣ್ಣ ಮುಗುಳ್ನಗೆ ಇತರರಿಗೆ ಸಂತೋಷ ನೀಡಬಲ್ಲದು. ಇದರಿಂದ ನಾವು ಕಳೆದುಕೊಳ್ಳುವುದೇನೂ ಇಲ್ಲ ಎನ್ನುವುದನ್ನು ತೋರಿಸಿದರೆ, ‘ಮನೆ ಕಟ್ಟುವ ಮೇಸ್ತ್ರಿ ಇದರಲ್ಲಿ  ಜೀವನದಲ್ಲಿ ಪ್ರತಿಯೊಂದು ಕೆಲಸವನ್ನು ಮನಸ್ಸಿಟ್ಟು ಮಾಡಬೇಕು ಎನ್ನುವುದನ್ನು ವಿವರಿಸುವುದರ ಜೊತೆಗೆ ಕೆಲಸಗಾರರನ್ನು ಕೇವಲ ಕೆಲಸಗಾರ ಎಂದು ಕಾಣದೆ ಆತನಿಗೆ ಮಾಲೀಕ ಸ್ವಂತ ಮನೆಯನ್ನು ಕೊಡುವ ಮೂಲಕ ಗೌರವಿಸುವ ಗುಣವನ್ನು ವಿವರಿಸಲಾಗಿದೆ. 

ವ್ಯಂಗ್ಯದ ಮಾತುಗಳನ್ನು ಆಡುತ್ತ ಯಾವುದೇ ವೃತ್ತಿಯವರನ್ನು ಟೀಕಿಸಬಾರದು. ಪ್ರತಿ ವೃತ್ತಿಯೂ ಪವಿತ್ರವಾದದ್ದು ಎನ್ನುವುದನ್ನು ‘ರಮೇಶನ ಅಪ್ಪ’ ಸಾರಿದರೆ, ‘ಕಾಗದ ದೋಣಿ’ಯಲ್ಲಿ ಜ್ಞಾನವು ಎಲ್ಲಿಯೇ ಸಿಕ್ಕಿದರೂ ಅದನ್ನು ಸ್ವೀಕರಿಸಬೇಕು. ಒಳ್ಳೆಯದನ್ನು ಕಲಿಯುವಾಗ ಕಲಿಸುವವರ ವಯಸ್ಸನ್ನು ನೋಡಬಾರದು. ಮೇಲು-ಕೀಳು ಮುಂತಾದ ಭಾವನೆಗಳನ್ನು ನಮ್ಮ ಮನಸ್ಸಿನಿಂದ ತೊಡೆದು ಹಾಕಬೇಕು ಎನ್ನುವುದನ್ನು ಬಿತ್ತರಿಸುತ್ತದೆ.

ಸಾರುತ್ತದೆ. ‘ನೀರಿನ ಬೆಲೆ’ಯಲ್ಲಿ ನೀರು ಅಮೂಲ್ಯವಾದದ್ದು. ವ್ಯ

Comments

Popular posts from this blog