ಇಂದಿನ ಪ್ರೀತಿ, ಪ್ರೇಮ, ಪ್ರಣಯದ 


‘ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ’



‘ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ’ ಇದು ಜಯರಾಮಾಚಾರಿಯವರ ಕಥಾ ಸಂಕಲನ. ಪ್ರೀತಿ, ಪ್ರೇಮ, ಮೋಹ, ಪ್ರಣಯ, ಬೇಲಿ ದಾಟುವ ಆತುರ, ಭಗ್ನತೆ ಇವೇ ಈ ಕಥಾ ಸಂಕಲನದ ಮೂಲ ದ್ರವ್ಯ. ಇದರಲ್ಲಿ ೧೧ ಕಥೆಗಳಿವೆ. 

 ತನಗೆ ತಾನೇ ಬರೆದುಕೊಂಡು ಎಂಜಾಯ್ ಮಾಡಿದ ಕಥೆಗಳು. ಇದರಲ್ಲಿನ ಕತೆಗಳೆಲ್ಲ ಹೀಗೆಯೇ ಇರಬೇಕು, ಹಾಗೆಯೇ ಇರಬೇಕೆಂಬ ಚೌಕಟ್ಟಿನವಲ್ಲ.  ತಮಗೆ ಬೇಕಾದಂತೆ ಬರೆಯಿಸಿಕೊಂಡವು. ಓದಿದಾಗ ಕಿಕ್ ಕೊಡುವಂತವು ಎಂದು ಲೇಖಕರು ಹೇಳಿಕೊಂಡಿದ್ದಾರೆ. ಪ್ರೀತಿಯಲ್ಲಿ ಬಿದ್ದವರು ಮಾಡಿಕೊಳ್ಳುವ ಎಡವಟ್ಟು, ಪ್ರೀತಿಯ ಆಳ, ಧರ್ಮ ಅಡ್ಡಬರುವುದು, ಇಬ್ಬರ ಮಧ್ಯೆ ಇನ್ನೊಬ್ಬ ಪ್ರೇಮಿ ಬರುವುದು, ಡೇಟಿಂಗ್, ಮಾಲ್‌ನಲ್ಲಿ ಪ್ರೀತಿ-ಪ್ರೇಮ, ಪ್ರೇಮಿಗಳ ಮಧ್ಯೆ ಮಾತುಕತೆ,  ಹರಿದಾಡುವ ಮೆಸೇಜುಗಳು, ಇಮೋಜಿಗಳು, ಅಶ್ಲೀಲ ಮಾತುಗಳ ಭರಾಟೆ, ವರ್ಚುಯಲ್ ಇಂಟರ್‌ಕೋರ್ಸ್ ಮೊದಲಾದವುಗಳ ಬಗ್ಗೆ ಇಲ್ಲಿ ಕಥೆಗಳಿವೆ. ಇಂದಿನ ಜಗತ್ತಿನಲ್ಲಿ ಪ್ರೇಮಿಗಳ ಪ್ರೀತಿ, ವ್ಯವಹಾರ ಹೇಗಿದೆ, ದೊಡ್ಡ ನಗರಗಳಲ್ಲಿ ನಡೆಯುವ ಲವ್, ಲವ್ ಫೇಲ್ಯೂರ್, ಅತಿಯಾಗಿ ಮುಂದುವರೆದಿರುವುದನ್ನು ಸುಂದರವಾಗಿ ಚಿತ್ರಿಸಿದ್ದಾರೆ.   

  ಅಂತರ್ ಧರ್ಮೀಯ ಲವರ್‌ಗಳನ್ನು ಸಹಿಸದೆ ಲವ್ ಜಿಹಾದ್ ಹೆಸರಲ್ಲಿ ಕೊಲೆ ಮಾಡುವುದು ಇಂದಿನ ದಿನಮಾನಗಳಲ್ಲಿ ಸಾಮಾನ್ಯವಾಗಿರುವುದನ್ನು ‘ಕಾರ್ನರ್ ಕಪಲ್ಸ್’ ಬಿಂಬಿಸುತ್ತದೆ.  ಈ ಘಟನೆ ಮನೆಯ ಹತ್ತಿರದ ಕಾರ್ನರ್‌ನಲ್ಲಿ ನಡೆಯುತ್ತದೆ.  ಹಾಳಾದ ಮದ್ವೆ ಆಗಿ ಆಗಾಗ ಕಿತ್ತಾಡೋದೇ ಆಯ್ತು . ‘ಲವ್ ಕಳೆದುಕೊಂಡಿರುವವನಿಗೆ ಲವ್ ಬೆಲೆ ಗೊತ್ತಿರುತ್ತದೆ ಎನ್ನು ಸಂದೇಶ ‘ಕಾಪುಚೀನೋ’ದಲ್ಲ್ಲಿ ಕಂಡುಬರುತ್ತದೆ. ‘ಸಪ್ತಸಾಗರದ ಆಚೆ’ಯಲ್ಲಿ   ಲವರ್‌ನೊಬ್ಬ  ತನ್ನ ಹಳೆಯ ಲವರ್ ಇನ್ನೊಬ್ಬನ ಜೊತೆ ಹೋಗುವುದನ್ನೂ ಸಹಿಸದೆ, ಆತನ ಮುಸುಡಿಯನ್ನು ತಿರುಗಿ ನೋಡಬಾರದೆಂದು ನಿಶ್ಚಯಿಸುವುದು, ಪ್ರೀತಿ ಮತ್ತು  ಗೆಲುವು ಹುಡುಕಾಟವಾಗಬೇಕು. ಆದರೆ  ಪ್ರೀತಿ ತೋಳಲ್ಲಿ ಸಿಕ್ಕಿಕೊಳ್ಳಬಾರದು ಎನ್ನುವ ಈ ಕಥೆಯ ಸಾರಾಂಶವಿದೆ.  ಪ್ರೀತಿ ಕಳೆದುಕೊಂಡ ಲಕ್ಷಾಂತರ ಯುವಕರ ಹೃದಯವನ್ನು ‘ಮಾಂಡವಿ’  ಕಾದಂಬರಿ ಕಲಕಿತ್ತು. ಈಗ ಅದರ ಮುಂದಿನ ಭಾಗವಾದ ‘ಮತ್ತೆ ಮಾಂಡವಿ ಸಿಕ್ಕಳು’ ಎನ್ನುವುದನ್ನು ಬರೆಯುವುವೆ ಎನ್ನುವುದನ್ನು ನಿರೂಪಕ ಹೇಳುವುದನ್ನು ‘ಮತ್ತೆ ಮಾಂಡವಿ’ ವಿವರಿಸುತ್ತದೆ. 

‘ನನಗಿಂತ ದೊಡ್ಡ ಫಿಗರ್ ಬೇಕಾ?’ ಕಥೆಯಲ್ಲಿ ಮೊದಲ ಬಾರಿ ಹುಡುಗಿಗೆ ಪ್ರಪೋಸ್ ಮಾಡಿದ ಹುಡುಗಿಗೆ  ತಾನು ಪ್ರೀತಿಸುವ ವಿಷಯ ಹೇಳದೇ  ಮನಸಲ್ಲಿ ಆಸೆ ಇಟ್ಕೊಂಡಿದ್ದನಿಗೆ  ಮೆಟ್ರೋದಲ್ಲಿ ಇನ್ನೊಂದು ದಿನ ಆಕೆ ಸಿಕ್ಕಾಗ ಆತನನ್ನು ಕೆಣಕಿ ಹೋಗುವಾಗ   ‘ನನಗಿಂತ ದೊಡ್ಡ ಫಿಗರ್ ಬೇಕಾ’ ಎಂದು ಆಕೆಯ ಈ ಹಿಂದೆ ಅವನಿಗೆ ಆಡಿದ  ಮಾತು ನೆನಪಾಗುತ್ತದೆ. ‘ಚಿನ್ನಿ ಬಂದ್ಬುಡು ಚಿನ್ನಿ’ ದಲ್ಲಿ  ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಚಿನ್ನಿ ಬಂದುಬಿಡು ಚಿನ್ನಿ’ ಎಂಬ ಕಾರ್ಯಕ್ರಮಕ್ಕೂ ತನ್ನ ಮತ್ತು ತನ್ನ ಹೆಂಡತಿಯ ಘಟನೆಯನ್ನೂ ಸರಿಹೊಂದುವಂತೆ ಇದರಲ್ಲಿ ವಿವರಿಸಲಾಗಿದೆ. ಇಬ್ಬರೂ ಮಾಡುತ್ತಿರುವುದು ಅನೈತಿಕ ಕೆಲಸ ಎನ್ನುವುದನ್ನು ಚಿತ್ರಿಸುತ್ತದೆ. 

‘ಡರ್ಟಿ ಟಾಕ್’ ಪ್ರೇಮಿಗಳ ಮಧ್ಯೆ ನಡೆಯುವ ಮೆಸೇಜ್, ಚಾಟ್ ಕುರಿತಾದದ್ದು. ಮಾಲ್‌ಗಳನ್ನು ಯುವ ಜೋಡಿಗಳು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ನಿರೂಪಕ ತಾನು ಇದೇ ರೀತಿ ದುರುಪಯೋಗ ಮಾಡಿಕೊಳ್ಳಲು ರೆಡಿಯಾಗಿದ್ದರ ಸಹಿತ ವಿವರಿಸುತ್ತಾನೆ. ನಂತರ  ನಮ್ಮ ಮಾಲ್‌ನಲ್ಲೇ ಆ ಘಟನೆ ನಡೆದೋಯ್ತು, ಎಂದಾಗ ಆಕೆಯ ಜೊತೆ ಈತನೂ ಡರ್ಟಿ ಟಾಕ್‌ನಲ್ಲಿ ತೊಡಗುವುದು ಇದರ ಸಾರಾಂಶ. ‘ಬಿ. ನಾರಾಯಣಮೂರ್ತಿ’ ವಿಶೇಷ ಕಥೆ. ತನ್ನ ಕುತ್ತಿಗೆಗೆ ಬಂದಿದ್ದ ಮಹಿಳೆಯೊಂದಿಗಿನ ಅಕ್ರಮ ವ್ಯವಹಾರದ ಕೇಸನ್ನು ತನಗೆ ಸಂಬಂಧಿಸಿದ್ದಲ್ಲ ಎನ್ನುತ್ತಾ, ಇದೇ ಹೆಸರಿನ ಇನ್ನೊಬ್ಬ ತನ್ನ ಕಚೇರಿಯಲ್ಲಿದ್ದಾರೆ. ಇನಿಶಿಯಲ್ ಮಾತ್ರ ಬೇರೆ ಎನ್ನುತ್ತಾ ತನ್ನ ಕೊರಳಿಗೆ ಬಿದ್ದ ಗಂಟನ್ನು ಇನ್ನೊಬ್ಬ ನಾರಾಯಣಮೂರ್ತಿಗೆ ಹಾಕಿ ಬಚಾವ್ ಆಗುವುದು,  ಹೊಸ ಹುಡುಗಿಗಾಗಿ ಸ್ಕೆಚ್ ಹಾಕುವುದನ್ನು  ಇಲ್ಲಿ ವಿವರಿಸಲಾಗಿದೆ.    

‘ಅವನು ಅವಳು ಅವರು’  ಇದೊಂದು ತ್ರಿಕೋನ ಪ್ರೇಮದ ಕಥೆ. ಸಿನಿಮಾಕ್ಕೆ ಹೋಗುವುದು, ಅವಳು ಇವನ ಕೈಗೆ ಮೊಬೈಲ್ ಕೊಟ್ಟಾಗ ಕದ್ದು ನೋಡಿ ಆಕೆಯ ಪ್ರೇಮದ, ಮೆಸೇಜ್ ವಿಚಾರಗಳನ್ನು ತಿಳಿದುಕೊಂಡು ಜಗಳ ಮಾಡುವುದು, ಮತ್ತೆ ಒಂದಾಗುವುದು, ನಗುವುದು, ಚುಂಬಿಸುವುದು, ಅವರು ಸಿನಿಮಾಕ್ಕೆ ಹೋದಾಗ ಆತನಿಗೆ  ಅವ ಮೆಸೇಜುಗಳು ಬರುವುದು ಈ ಕಥೆಯ ತಿರುಳು.  ‘ಸಿಟಿ ಆಫ್ ಸ್ಟಾರ್’ ಇದರಲ್ಲಿ ಡೆಲಿವರಿ ಬಾಯ್ ಆಗಿದ್ದ ನಾಟಕಕಾರನ ಜೊತೆ ಲವ್, ಇಬ್ಬರೂ  ‘ಸಿಟಿ ಆಫ್ ಸ್ಟಾರ್ ಆರ್ ಯು ಶೈನಿಂಗ್ ಜಸ್ಟ್ ಫಾರ್ ಮಿ’ ಎಂಬ  ಫೇಮಸ್ ಹಾಡನ್ನು ಮೆಚ್ಚುವುದು,  ವಾಗ್ವಾದ, ಬೈಗುಳ ನಡೆದು ಪ್ರೀತಿ ಮುರಿಯುವುದು, ಆಕೆ ಮದುವೆಯಾಗಿ ಆಸ್ಟ್ರೇಲಿಯಾ ಸೇರುವುದು, ಈತ ನಟನಾಗುವುದು, ಬರೆಹಗಾರರೊಬ್ಬರು ನಾಟಕದ ಬಗ್ಗೆ ಏನಾದರೂ ಬರೆ ಎಂದಾಗ ಕಾದಂಬರಿ ಬರೆಯುವ ವಿಚಾರವಿದೆ. ‘ಸಿಟಿ ಆಫ್ ಲೈಟ್ಸ್’ ಅಂತ ಹೆಸರಿಡುವುದು ಕುರಿತಾಗಿದೆ.  

 ‘ಶುಗರ್’  ನಲ್ಲಿ  ಪಾಪಸ್ಕಳ್ಳಿ ತರದ ಲವ್ವರನ್ನು ತುಂಬಾ ದಿನ ಕಾದು ಮೀಟ್ ಮಾಡಲು ಕೆಫೆಗೆ ಹೋದಾಗ ಕಾಫಿ ಕುಡಿಯುತ್ತಿರುವುದು, ನಂತರ ಆಕೆಯ ಮನೆಗೆ ತೆರಳಿ ಅಲ್ಲಿ ರಮಿಸುವುದು, ಅಲ್ಲಿಂದ ಹೊರಡಲು ಅನುವಾದಾಗ ಮತ್ತೆ ಚುಂಬಿಸುವುದು, ಆತ ಬಿಸಿಯಾಗುವುದು, ಸಕ್ಕರೆಯಂತೆ ಕರಗಿ ಹೋದೆ ಎನ್ನುವುದರ ಕುರಿತಾಗಿದೆ. 

..........................


Comments

Popular posts from this blog