ವಿಶಿಷ್ಟ ಚಿಕಿತ್ಸೆಯ  


‘ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ’ 


 

‘ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ’  ಈ ಕೃತಿಯು  ರೇಕಿ ಎಂಬ ವಿಶಿಷ್ಟ ಚಿಕಿತ್ಸಾ ಪದ್ದತಿಯ ಮೇಲೆ ಬೆಳಕು ಚೆಲ್ಲುವಂತದ್ದು.  ಇದರ ಉದ್ದೇಶ ಕೇವಲ ಆರೋಗ್ಯ ಲಾಭವಷ್ಟೇ ಅಲ್ಲ,  ಇದು ತಂತ್ರಶಾಸ್ತ್ರವಾಗಿದೆ. ಆಧ್ಯಾತ್ಮಿಕ ಮತ್ತು ಲೌಕಿಕ  ಪ್ರಗತಿ ಪಡೆಯುವುದು ಇದರ ಗುರಿ. ರೋಗಿಗಳ ಪ್ರಾಣ ಮತ್ತು ಧನಕ್ಕೆ ಸಂಚಕಾರ ತರುತ್ತಿರುವ ಈ ಕಾಲದಲ್ಲಿ  ಹಲವಾರು ಪರೀಕ್ಷೆಗಳನ್ನು ನಡೆಸಿಯೂ ರೋಗ ಪತ್ತೆ ಹಚ್ಚಲಾಗದ ಸಂದರ್ಭದಲ್ಲಿ  ರೇಕಿ ಚಿಕಿತ್ಸೆ ರೋಗಿಗಳ ಪಾಲಿಗೆ ವರದಾನವಾಗಿದೆ ಎನ್ನುವುದು ಕೃತಿಯ ಸಾರಾಂಶ. 

 ಸಾಂಪ್ರದಾಯಿಕ ರೇಕಿ ಮಾಸ್ಟರ್,  ಕರುಣಾ ರೇಕಿ ಮಾಸ್ಟರ್, ಶಮನಿಕ್ ಹೀಲಿಂಗ್ ಮಾಸ್ಟರ್ ಆದ ಶಿವಮೊಗ್ಗದ ಡಾ|| ಸತ್ಯನಾರಾಯಣ  ಈ ಕೃತಿಯ ಲೇಖಕರು.   ತಾವು  ಆಯುರ್ವೇದ ಕೋರ್ಸು ಓದುತ್ತಿದ್ದಾಗ ಎದುರಾದ ಅನಾರೋಗ್ಯದ ಬಗ್ಗೆ  ಒಬ್ಬರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ  ಮೈಸೂರಿನ  ರೇಕಿ ಚಿಕಿತ್ಸೆಯ ಗುರುಗಳ ಮೊರೆ ಹೋಗಿ  ಅಲ್ಲಿ ಗಮನಾರ್ಹ ಬದಲಾವಣೆ ಅನುಭವಿಸಿ, ನಂತರ ಬೆಂಗಳೂರಿನ ವಿಶ್ರಾಂತ ರೇಕಿ ಮಾಸ್ಟರ್ ಡಾ|| ವಿ ವಿ ಚಲಂ ಅವರಲ್ಲಿ ಈ ವಿದ್ಯೆ ಕಲಿತು, ತರಗತಿ ನಡೆಸಿ, ಅವರಿಂದ ‘ರೇಕಿ ಚಿಕಿತ್ಸಾ ದುರಂಧರ’ ಎಂಬ ಬಿರುದು ಪಡೆದಿದ್ದು, ಜೊತೆಗೆ ಅದರಿಂದಾಗುವ ಲಾಭ, ಕಲಿಕೆಯ ವಿಧಾನ, ರೇಕಿ ಪ್ರಾಮುಖ್ಯತೆ, ಇತಿಹಾಸ ಎಲ್ಲವನ್ನೂ ಆಳವಾಗಿ ಅಧ್ಯಯನ ಮಾಡಿ ಈ ಕೃತಿ  ಬರೆದಿದ್ದಾರೆ. 

ಆರೋಗ್ಯದ ಹಿನ್ನೆಲೆಯಲ್ಲಿ ರೇಕಿ ಮೂಲತಃ ಭಾರತೀಯ ವಿದ್ಯೆಯಾಗಿದೆ. ಇದನ್ನು ಉಳಿಸಿ, ಬೆಳೆಸಿದವರು ಟಿಬೇಟಿಯನ್ ಬೌದ್ಧರು. ಅವರಲ್ಲಿ ಈ ಚಿಕಿತ್ಸೆ ಇಂದಿಗೂ ಪ್ರಸಿದ್ಧ. ಇಂದು ಸಾಮಾನ್ಯ ಜನತೆಗೂ ಇದು ತಲುಪುವಂತಾಗಿದೆ. ಕೇವಲ ಗುರುವಿನಿಂದ ಶಿಷ್ಯನಿಗೆ ವರ್ಗಾಯಿಸಲ್ಪಡುವುದರಿಂದ ಇದು ಇಂದಿಗೂ ರಹಸ್ಯ ಮತ್ತು ಪವಿತ್ರವಾಗಿ ಉಳಿದಿದೆ. ಪುಸ್ತಕಗಳನ್ನು ಓದಿ ರೇಖೆ ಕಲಿಯಲು ಸಾಧ್ಯವೇ ಇಲ್ಲ. ರೇಖಿ ಕಲಿಯಬೇಕೆನ್ನುವರು ಯೋಗ್ಯ ರೇಕಿ ಗುರುವನ್ನು ಹುಡುಕಿ ಅವರಿಂದ ದೀಕ್ಷೆ ಮತ್ತು ಮಾರ್ಗದರ್ಶನ ಪಡೆಯಬೇಕಾಗುತ್ತದೆ.

  ರೇಕಿ ಚಿಕಿತ್ಸೆಯನ್ನು ಕಲಿಯುವವರು ಸೂಕ್ತ ಗುರುಗಳಿಂದ ದೀಕ್ಷೆ ಪಡೆಯಬೇಕಾಗುತ್ತದೆ. ಏಕೆಂದರೆ ಇದು ಯಾವಾಗಲೂ ಪರಿಶುದ್ಧವಾಗಿದ್ದು, ಆಯಾ ಪಾತ್ರಕ್ಕೆ ಅನುಗುಣವಾಗಿ ಅದರ ಕುಂಡಲಿನಿ ಶಕ್ತಿಯು ಹರಿಯುತ್ತಿರುತ್ತದೆ.  ಇದೊಂದು ದಿವ್ಯಶಕ್ತಿ. ಪ್ರತಿಯೊಬ್ಬರ ಪೂರ್ವಾಪರ ತಿಳಿದಿರುವುದರಿಂದ ಎಲ್ಲರೂ ರೇಕಿ ಕಲಿಯಲು ಸಾಧ್ಯವಿಲ್ಲ ಎನ್ನುವುದು ಲೇಖಕರ ಮಾತು. 

 ಹಣ ಮಾಡುವ ದಂಧೆಯಾಗಿ ಇದನ್ನು ಬಳಸದೆ ಜನಸೇವೆಯ ಮಾಧ್ಯಮವಾಗಿ ಬಳಸಬೇಕು. ಈ ರೀತಿ ಹೊಂದಿರುವ ರೇಕಿ ಗುರುಗಳಿಗೆ ಆನಂದ, ಆರೋಗ್ಯ, ಸುಖ, ಸಂತೋಷವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ತಾವು ನೀಡಿದ ದೀಕ್ಷೆಗೆ ಮತ್ತು ಚಿಕಿತ್ಸೆಗೆ ಪ್ರತ್ಯೇಕ ಬೆಲೆಯನ್ನು ಗುರುಗಳು  ನಿಗದಿಪಡಿಸುತ್ತಾರೆ. ಆದರೆ ಉಚಿತವಾಗಿ ಚಿಕಿತ್ಸೆ ನೀಡಬಾರದು ಎನ್ನುವುದು ರೇಖೆಯ ನಿಯಮವಾಗಿದೆ. ಸುಮಾರು ೫ ಸಾವಿರ ವರ್ಷಗಳಿಂದ ನಮ್ಮ ದೇಶದಲ್ಲಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಈ ವಿದ್ಯೆ  ರಾಜಾಶ್ರಯದಲ್ಲಿ ಬೆಳೆದಿದೆ. ಈಗ ತನ್ನದೇ ಆದ ಸಿದ್ಧಾಂತ ಮತ್ತು ಚಿಕಿತ್ಸಾ ಪದ್ಧತಿಯಿಂದ ವೈಶಿಷ್ಟ್ಯ ಪೂರ್ಣವಾಗಿ ಬೆಳೆದು ನಿಂತಿದೆ. ಈ ದೇಶದ ಗ್ರಾಮಾಂತರ ಪ್ರದೇಶಗಳಿಂದ ಹಿಡಿದು ನಗರ ಪ್ರದೇಶದವರೆಗೂ ಈ ಪದ್ಧತಿಯ ಅಭಿಮಾನಿಗಳಿದ್ದಾರೆ.

   ನಾಲ್ಕು ವರ್ಷದ ಮಗುವಿನಿಂದ ಹಿಡಿದು ಯಾರು ಬೇಕಾದರೂ ಇದನ್ನು ಕಲಿತು ಜೀವನಪರ್ಯಂತ ಅಳವಡಿಸಿಕೊಳ್ಳಬಹುದು. ಸರಳ, ಸುಲಭ ಮತ್ತು ಕಟ್ಟುಪಾಡುರಹಿತ ರೇಖೆ ಚಿಕಿತ್ಸೆಯನ್ನು ಮನೆಮನೆಗೂ ತಲುಪಿಸುವ ಅವಶ್ಯಕತೆ ಇದೆ.

 ಆಧ್ಯಾತ್ಮಿಕ ಚಿಕಿತೆ:

 ಆಧ್ಯಾತ್ಮಿಕ ಚಿಕಿತ್ಸೆಗೆ ಯಾರಿಂದಲೂ ದೀಕ್ಷೆ ಪಡೆಯಬೇಕಾದ ಅವಶ್ಯಕತೆ ಇಲ್ಲ. ನಾಲ್ಕು ವರ್ಷದ ಮಕ್ಕಳಿಂದ ಹಿಡಿದು ಯಾರು ಬೇಕಾದರೂ ಇದನ್ನು ಕಲಿತು ಅಭ್ಯಾಸ ಮಾಡಬಹುದು. ಬಹಳಷ್ಟು ಕಾಯಿಲೆಗಳನ್ನು ಔಷಧಿವಿಲ್ಲದೆ ಗುಣಪಡಿಸಬಹುದು. ಆದರೆ ಈ ಚಿಕಿತ್ಸೆ ಕುರಿತು ಆಳವಾದ ಅಧ್ಯಯನವನ್ನು ಮಾಡಿರಬೇಕಾಗುತ್ತದೆ.  ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಎಂಬ ನಾಲ್ಕು ವಿಧಗಳಲ್ಲಿ ವ್ಯಕ್ತಿಯು ಕಾಯಿಲೆಯಿಂದ ಬಳಲುತ್ತಾನೆ. ಇದನ್ನು ಈ ಚಿಕಿತ್ಸಕರು ಮೊದಲು ಇದನ್ನರಿತು ರೋಗಿ ಬಳಲುತ್ತಿರುವ ಬಗೆಯನ್ನು ನಿರ್ಧರಿಸಿ ಚಿಕಿತ್ಸೆ ಕೊಡಬೇಕಾಗುತ್ತದೆ. ಆಧ್ಯಾತ್ಮಿಕ ಚಿಕಿತ್ಸೆಯನ್ನು ಮಾಡುವವನು ಸುತ್ತಮುತ್ತಲಿನ ವಾತಾವರಣದಲ್ಲಿ ಸಮೃದ್ಧವಾಗಿ ಲಭ್ಯವಿರುವ ವಿಶ್ವ ಚೈತನ್ಯ ಶಕ್ತಿಯ ಮೇಲೆ ಅದಮ್ಯ ವಿಶ್ವಾಸ, ಭಕ್ತಿ, ಶ್ರದ್ಧೆ ಇಟ್ಟಿರಬೇಕು.

 ಯಶಸ್ವಿ ಆಧ್ಯಾತ್ಮಿಕ ಚಿಕಿತ್ಸಕನು ಯಾವುದೇ ರೋಗವನ್ನು ಬೇರುಸಹಿತ ಕಿತ್ತು ಹಾಕುಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾನೆ. ಋಣಾತ್ಮಕ ಶಕ್ತಿಗಳಿಂದಾಗಿ ರೋಗಗಳ ಉಪಸ್ಥಿತಿ ನಮ್ಮ ದೇಹದಲ್ಲಿ ಕಂಡುಬರುತ್ತದೆ. ಆಧ್ಯಾತ್ಮಿಕ ಚಿಕಿತ್ಸೆಯಲ್ಲಿ ಆ ಋಣಾತ್ಮಕ ಶಕ್ತಿಯನ್ನು ಹೊರತೆಗೆದು ಧನಾತ್ಮಕ ಶಕ್ತಿಯ ಮರುಪೂರ್ಣವನ್ನು ಮಾಡುವುದರ ಮೂಲಕ ನಿಜವಾದ ಆರೋಗ್ಯವನ್ನು ಅನುಭವಿಸುವಂತೆ ಮರಣ ಆಗುತ್ತದೆ. 

ಉದಾಹರಣೆಗೆ -ಋಣಾತ್ಮಕ ಶಕ್ತಿಯು ಶೇಖರಣೆಗೊಂಡಾಗ ಶಕ್ತಿಯ ಪ್ರವಾಹಕ್ಕೆ ತಡೆಯಾಗಿ ಶಕ್ತಿಯ ಕೊರತೆ ಉಂಟಾಗಿ ಮೈಗ್ರೇನ್ (ತಲೆನೋವು) ಎದುರಾಗುತ್ತದೆ. ಇನ್ನೊಮ್ಮೆ ಬಾರದಿರುವ ಖಾತ್ರಿ ನೀಡುವುದು ಕಷ. ಇಂತಹ ಸಂದರ್ಭದಲ್ಲಿ ಆಧ್ಯಾತ್ಮಿಕ ಚಿಕಿತ್ಸೆಯಿಂದ ಋಣಾತ್ಮಕ ಶಕ್ತಿಯನ್ನು ತೆರೆದು ಧನಾತ್ಮಕ ಶಕ್ತಿಯನ್ನು ತುಂಬುವುದರಿಂದ ಕೆಲವೇ ನಿಮಿಷಗಳಲ್ಲಿ ತಲೆನೋವಿನಿಂದ ಮುಕ್ತಿಯನ್ನು ಪಡೆಯಬಹುದು. ಕೆಲವು ದಿನಗಳವರೆಗೆ ಈ ಚಿಕಿತ್ಸೆಯನ್ನು ಮುಂದುವರೆಸಿದಲ್ಲಿ ಶಾಶ್ವತವಾಗಿ ಕಾಯಿಲೆಯಿಂದ ಬಿಡುಗಡೆ ಹೊಂದಬಹುದು. 

ಆಧ್ಯಾತ್ಮಿಕ ಚಿಕಿತ್ಸಕನು ಇಲ್ಲಿ ಕೇವಲ ಮಾಧ್ಯಮವಾಗಿರುತ್ತಾನೆ. ದೈವಿಶಕ್ತಿಯೇ ಇಲ್ಲಿ ಎಲ್ಲವನ್ನೂ ಮಾಡಿಸುತ್ತದೆ ಎನ್ನುವುದು ಲೇಖಕರ ಅಭಿಪ್ರಾಯ. ಕೃತಿಯಲ್ಲಿ  ಹಲವರು ಈ ಚಿಕಿತ್ಸೆಯಿಂದ ತಾವು ವಿವಿಧ ಕಾಯ್ದೆಗಳಿಂದ ಮುಕ್ತರಾದುದನ್ನು ಹೇಳಿಕೊಂಡಿದ್ದಾರೆ. ಆಧ್ಯಾತ್ಮಿಕ ಜೀವನದಲ್ಲಿ ಅದ್ಭುತ ಪರಿಣಾಮ ಮತ್ತು ಬದಲಾವಣೆಗಳನ್ನು ಕೊಂಡುಕೊಂಡಿದ್ದಾಗಿಯೂ ಮೈಗ್ರೇನಿಂದ ಬಳಲುತ್ತಿದ್ದ ತಾನು ಬಹಳಷ್ಟು ವೈದ್ಯರಲ್ಲಿ ತೋರಿಸಿದರೂ ಕಡಿಮೆಯಾಗದಾದಾಗ ರೇಖಿ ಮೂಲಕ ತಾನು ಅದರಿಂದ ಪಾರಾಗಿರುವುದನ್ನು ವಿವರಿಸಿದ್ದಾರೆ.

  ವೈದ್ಯರಿಂದ ಗುಣಪಡಿಸಲಾಗದ ಎಷ್ಟೋ ರೋಗಗಳನ್ನು ರೇಕಿಯಿಂದ ಗುಣಪಡಿಸುವುದಾದರೂ ಅದು ಯಾವುದೇ ವೈದ್ಯಕೀಯಕ್ಕೆ ಪರ್ಯಾಯವಲ್ಲ. ರೇಕಿಯು ಕುರಿತಾದ ಸಾರ್ವಜನಿಕ ಮನ್ನಣೆಯನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಪರ್ಯಾಯ ಚಿಕಿತ್ಸೆಗಳೆಲ್ಲೊಂದಾಗಿ ಗುರುತಿಸಿದೆ. ವಿಶ್ವದಾದ್ಯಂತ ರೇಕಿ ಕುರಿತು ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಹಲವಾರು ಪ್ರತಿಷ್ಠಿತ ಆಸ್ಪತ್ರೆಗಳು ರೇಕಿ ಮಾಸ್ಟರ್‌ಗಳನ್ನು ಚಿಕಿತ್ಸೆಗೆ ನೇಮಿಸಿಕೊಂಡಿದ್ದಾರೆ.

ಹೀಗೆ ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಬಗ್ಗೆ ಅತ್ಯತ್ತಮ ಎನ್ನಬಹುದಾದ ಎಲ್ಲ ವಿವರಣೆಗಳು ಈ ಕೃತಿಯಲ್ಲಿವೆ. ಲೇಖಕರು ರೇಕಿಯಲ್ಲಿ ತಾನು ಕಂಡುಕೊಂಡ ೧೦ ವಷಗಳ ಅನುಭವವನ್ನು, ಕಲಿಕೆಯ ಕಾಲದ ಅನುಭವವನ್ನು ಈ ಕೃತಿಯಲ್ಲಿ ಸವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ.

............................... 


Comments

Popular posts from this blog